Tag: muslims

  • ಬಾಂಗ್ಲಾದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ಧ್ವಂಸ

    ಬಾಂಗ್ಲಾದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ಧ್ವಂಸ

    ಢಾಕಾ: ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಬಾಂಗ್ಲಾದೇಶದ ಕ್ಯುಮಿಲ್ಲಾ ನಗರದಲ್ಲಿ ಘಟನೆ ನಡೆದಿದ್ದು, ಮುಸ್ಲಿಂ ಧರ್ಮ ನಿಂಧಿಸಿ ಫೇಸ್ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಕುರಿತು ವದಂತಿ ಹಿನ್ನೆಲೆ ಕೃತ್ಯ ಎಸಗಿರುವುದಾಗಿ ವರದಿಯಾಗಿದೆ. ಪ್ಯಾರಿಸ್‍ನಲ್ಲಿ ಶಿಕ್ಷಕನ ಶಿರಚ್ಛೇದನ ಮಾಡಿ, ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರನ್ನು ಫ್ರಾನ್ಸ್ ನಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಶ್ಲಾಘಿಸಿದ್ದು, ಇದಾದ ಬಳಿಕ ಬಾಂಗ್ಲಾದೇಶಿ ಮುಸ್ಲಿಮರು ಹಿಂದೂಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

    ಭಾನುವಾರ ಕ್ಯುಮಿಲ್ಲಾದ ಮುರಾದ್‍ನಗರದ ಬಳಿ ಘಟನೆ ನಡೆದಿದೆ. ಬಾಂಗ್ರಾ ಬಜಾರ್ ಪೊಲೀಸ್ ಠಾಣೆಯ ಒಸಿ ಕಮ್ರುಜ್ಮಾನ್ ತಾಲೂಕ್‍ದಾರ್ ಈ ಕುರಿತು ಮಾಹಿತಿ ನೀಡಿದ್ದು, ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಶಿಶುವಿಹಾರ ಶಾಲೆಯ ಮುಖ್ಯ ಶಿಕ್ಷಕ ಪ್ಯುರ್ಬು ಧೌರ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮ್ಯಾಕ್ರಾನ್‍ನ ಕ್ರಮವನ್ನು ಮುಖ್ಯ ಶಿಕ್ಷಕ ಸ್ವಾಗತಿಸಿದ್ದಕ್ಕೆ ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ. ಕ್ಯುಮಿಲ್ಲಾ ಡಿಸಿ ಎಂಡಿ ಅಬುಲ್ ಫಜಲ್ ಮಿರ್ ಹಾಗೂ ಎಸ್‍ಪಿ ಸೈಯದ್ ನೂರುಲ್ ಇಸ್ಲಾಂ ಸ್ಥಳಕ್ಕೆ ಭೇಟಿ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಿರ್ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಎಂಡಿ ಅಬುಲ್ ಫಜಲ್ ಮಿರ್, ಸ್ಥಳೀಯರು ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಬಂಧನವಾದ ಇಬ್ಬರು ಸಹ ಈ ಕೃತ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದ್ದಾರೆ.

    ದಾಳಿಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಘಟನೆಯ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರನ್ನು ಗುರುತಿಸಲಾಗುವುದು. ಪರಿಸ್ಥಿತಿಯನ್ನು ತಿಳಿಗೊಳಿಸಲಾಗುತ್ತಿದ್ದು, ಕರ್ಬನ್‍ಪುರ ಹಾಗೂ ಆಂಡಿಕೋಟ್ ಗ್ರಾಮಗಳಲ್ಲಿ ನಾಲ್ಕು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಡಿಜಿಟಲ್ ಸೆಕ್ಯೂರಿಟಿ ಕಾಯ್ದೆಯಡಿ ಮುಖ್ಯ ಶಿಕ್ಷಕ ಹಾಗೂ ಇತರರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಘಟನೆಗೆ ಕಾರಣವೇನು?
    ಫ್ರಾನ್ಸ್‍ನಲ್ಲಿ ವಿಡಂಬನಾತ್ಮಕ ಪತ್ರಿಕೆ ಚಾರ್ಲಿ ಹೆಬ್ಡೊ ತನ್ನ ವ್ಯಂಗ್ಯಚಿತ್ರಗಳಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಚಿತ್ರ ಪ್ರಕಟಿಸಿದ್ದಕ್ಕೆ ಮುಸ್ಲಿಮರು ಸಿಟ್ಟಿಗೆದ್ದು ಕೃತ್ಯ ಎಸಗಿದ್ದಾರೆ. ವಾಕ್‍ಚಾತುರ್ಯದ ಕುರಿತು ತರಗತಿಯ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದ ಸ್ಯಾಮ್ಯುಯೆಲ್ ಪ್ಯಾಟಿ ಅವರನ್ನು 18 ವರ್ಷದ ಚೆಚೆನ್ ಅಕ್ಟೋಬರ್ 16 ರಂದು ಶಿರಚ್ಛೇದ ಮಾಡಿದ್ದ.

    ಈ ಭೀಕರ ಘಟನೆ ಬಳಿಕ ಫ್ರಾನ್ಸ್‍ನಲ್ಲಿ ಅಭಿವ್ಯಕ್ತಿ ಸ್ವಾಂತತ್ರ್ಯದ ಅಡಿಯಲ್ಲಿ ರಕ್ಷಿಸುವುದಾಗಿ ಮ್ಯಾಕ್ರನ್ ಪ್ರತಿಜ್ಞೆ ಮಾಡಿದ್ದರು. ಇದಾದ ಬಳಿಕ ಅಕ್ಟೋಬರ್ 29ರಂದು ಟುನೀಷಿಯಾದ ವ್ಯಕ್ತಿಯೊಬ್ಬ ಚಾಕು ಹಿಡಿದು ಶಸ್ತ್ರಸಜ್ಜಿತನಾಗಿ, ಕುರಾನ್ ಪ್ರತಿಯನ್ನು ಹೊತ್ತೊಯ್ಯುತ್ತಿದ್ದ. ಈ ವೇಳೆ ಸಹ ಚರ್ಚ್‍ನಲ್ಲಿದ್ದ ಆರಾಧಕರ ಮೇಲೆ ಹಲ್ಲೆ ನಡೆಸಿ, ಮೂವರನ್ನು ಕೊಲೆ ಮಾಡಲಾಗಿತ್ತು.

  • ಭಾರತದ ಮೇಲೆ ಅಣು ಬಾಂಬ್‌ ಹಾಕ್ತೇವೆ, ಅಸ್ಸಾಂವರೆಗೂ ದಾಳಿ – ಪಾಕ್‌

    ಭಾರತದ ಮೇಲೆ ಅಣು ಬಾಂಬ್‌ ಹಾಕ್ತೇವೆ, ಅಸ್ಸಾಂವರೆಗೂ ದಾಳಿ – ಪಾಕ್‌

    ಇಸ್ಲಾಮಾಬಾದ್‌: 4 ಬಾರಿ ಭಾರತದ ಜೊತೆಗಿನ ಯುದ್ಧದಲ್ಲಿ ಸೋತಿರುವ ಪಾಕಿಸ್ತಾನದ ಯುದ್ಧ ದಾಹ ಇನ್ನೂ ಕಡಿಮೆಯಾಗಿಲ್ಲ. ಈಗ ಭಾರತದ ವಿರುದ್ಧ ಅಣುಬಾಂಬ್‌ ದಾಳಿ ಮಾಡುವ ಗೊಡ್ಡು ಬೆದರಿಕೆಯನ್ನು ಹಾಕಿದೆ.

    ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ಸಾಂಪ್ರದಾಯಿಕ ಯುದ್ಧ ಮಾಡುವುದಿಲ್ಲ. ಇನ್ನುಮುಂದೆ ರಕ್ತಸಿಕ್ತ ಮತ್ತು ಅಣು ಯುದ್ಧವೇ ಆಗಲಿದೆ ಎಂದು ಪಾಕ್‌ ರೈಲ್ವೇ ಸಚಿವ ಶೇಖ್‌ ರಶೀದ್‌ ಹೇಳಿದ್ದಾರೆ. ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ನಮ್ಮಲ್ಲಿ ಸಣ್ಣ ಮತ್ತು ನಿಖರವಾದ ಲೆಕ್ಕಾಚಾರದ ಅಸ್ತ್ರಗಳಿವೆ. ಇವು ಮುಸ್ಲಿಮರನ್ನು ಉಳಿಸಲಿದೆ ಎಂದು ಹೇಳಿದ್ದಾರೆ.

    ನಮ್ಮಲ್ಲಿರುವ ಅಸ್ತ್ರಗಳು ಅಸ್ಸಾಂವರೆಗೂ ದಾಳಿ ಮಾಡಬಹುದು. ಹೀಗೆ ಏನಾದರೆ ಸಂಭವಿಸಿದರೆ ಅದು ಅಂತ್ಯವಾಗುತ್ತದೆ ಎಂಬ ವಿಚಾರ ಭಾರತಕ್ಕೂ ತಿಳಿದಿದೆ ಎಂಬ ಬಿಲ್ಡಪ್‌ ಡೈಲಾಗ್‌ ಹೊಡೆದಿದ್ದಾರೆ.

    ಪಾಕಿಸ್ತಾನ ಅಣುಬಾಂಬ್‌ ವಿಚಾರವನ್ನು ಪ್ರಸ್ತಾಪ ಮಾಡುವುದು ಇದೇ ಮೊದಲೆನಲ್ಲ. ಈ ಹಿಂದೆ 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಏನಾದರೆ ಆದರೆ ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ. ಎರಡು ಅಣ್ವಸ್ತ್ರ ಹೊಂದಿರುವ ದೇಶಗಳು ಕಾದಾಡಿದರೆ ಇಡೀ ವಿಶ್ವಕ್ಕೆ ಹಾನಿಯಾಗಲಿದೆ ಎಂದು ಎಂದಿದ್ದರು.

    ಕಾರ್ಗಿಲ್‌ ಯುದ್ಧದ ಬಳಿಕ ಪಾಕಿಸ್ತಾನ 2001ರಲ್ಲಿ ಭಾರತದ ಮೇಲೆ ಅಣ್ವಸ್ತ್ರ ದಾಳಿಗೆ ಯೋಚಿಸಿತ್ತು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ, 2001ರಲ್ಲಿ ಭಾರತ ತನ್ನ ಸೇನೆಯನ್ನು ಪಾಕ್ ಗಡಿಯಲ್ಲಿ ನಿಯೋಜಿಸಿತ್ತು. ನಾವು ಯುದ್ಧಕ್ಕೆ ಸಿದ್ಧವಾಗಿದ್ದೆವು. ಒಂದು ಹಂತದಲ್ಲಿ ಭಾರತದ ಮೇಲೆ ಅಣುಬಾಂಬ್ ಪ್ರಯೋಗಿಸುವ ತೀರ್ಮಾನ ಮಾಡಿದ್ದೆವು. ಆದರೆ ಭಾರತದ ಬಳಿಯೂ ಅಣುಬಾಂಬ್‌ ಇರುವ ಕಾರಣ ಈ ನಿರ್ಧಾರವನ್ನು ಕೈಬಿಡಲಾಯಿತು ಎಂದು ಈ ಹಿಂದೆ ತಿಳಿಸಿದ್ದರು.

    ಒಂದು ವೇಳೆ ಅಣುಬಾಂಬ್‌ ದಾಳಿ ಮಾಡಿದರೂ ಭಾರತ ಕೂಡಲೇ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿರುವುದು ಪಾಕಿಸ್ತಾನಕ್ಕೆ ಗೊತ್ತಿತ್ತು. ಈ ಕಾರಣಕ್ಕೆ ಅಣು ಬಾಂಬ್‌ ದಾಳಿಯ ನಿರ್ಧಾರದಿಂದ ಹಿಂದೆ ಸರಿದಿತ್ತು.

  • ಅಲ್ಲಾ ಎಲ್ಲವನ್ನು ಕೊಡ್ತಾನೆ, ಚಿಂತೆ ಮಾಡ್ಬೇಡಿ – ಅಖಂಡಗೆ ಧೈರ್ಯ ತುಂಬಿದ ಮೌಲ್ವಿಗಳು

    ಅಲ್ಲಾ ಎಲ್ಲವನ್ನು ಕೊಡ್ತಾನೆ, ಚಿಂತೆ ಮಾಡ್ಬೇಡಿ – ಅಖಂಡಗೆ ಧೈರ್ಯ ತುಂಬಿದ ಮೌಲ್ವಿಗಳು

    ಬೆಂಗಳೂರು: ಅಲ್ಲಾ ಎಲ್ಲವನ್ನೂ ಕೊಡ್ತಾನೆ ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಮೌಲ್ವಿಗಳು ಧೈರ್ಯ ತುಂಬಿದ್ದಾರೆ.

    ಗಲಭೆಯಿಂದ ಹೊತ್ತಿ ಉರಿದ ಶಾಸಕರ ಕಾವಲ್‌ ಭೈರಸಂದ್ರದಲ್ಲಿರುವ ಶಾಸಕರ ನಿವಾಸಕ್ಕೆ ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ನೇತೃತ್ವದಲ್ಲಿ ಮೌಲ್ವಿಗಳು ಭೇಟಿ ನೀಡಿ ವೀಕ್ಷಿಸಿದರು.

    ಹೊತ್ತಿ ಉರಿದ ಮನೆಯನ್ನು ಅಖಂಡ ತೋರಿಸುವ ಸಂದರ್ಭದಲ್ಲಿ ಮೌಲ್ವಿ ಇರ್ಷಾದ್ ಅಹಮ್ಮದ್, ಅಖಂಡ ಶ್ರೀನಿವಾಸ್ ನಮಗೆ ಮನೆ ಮಗ ಇದ್ದಂತೆ. ಎಲ್ಲಾ ಮಸೀದಿಗಳು ನಿಮ್ಮ ಜೊತೆ ಇರುತ್ತದೆ. ಅಲ್ಲಾ ಎಲ್ಲವನ್ನೂ ಕೊಡುತ್ತಾನೆ. ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಹೇಳಿ ಧೈರ್ಯ ತುಂಬಿದರು. ಇದನ್ನೂ ಓದಿ: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?

    ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್‌, ಮನೆ ಕಟ್ಟಿಸಿಕೊಡುವುದಾಗಿ ಧರ್ಮಗುರುಗಳು ಹೇಳಿದ್ದಾರೆ. ಶಾಸಕರು ಒಪ್ಪಿದರೆ ನಾವು ಸ್ವಂತ ಹಣ ದಿಂದ ಮನೆ ಕಟ್ಟಿಸಿಕೊಡೊದಾಗಿ ಹೇಳಿದ್ದಾರೆ. ಯಾರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ಅಖಂಡ, ಮನೆಯನ್ನು ನಾನೇ ನಿರ್ಮಿಸುತ್ತೇನೆ. ಗುರುಗಳ ಆಶೀರ್ವಾದ ಸದಾ ಇರಲಿ. ನಾವೇ ಹೋಗಿ ಮಾತನಾಡಿಕೊಂಡು ಬರಬೇಕಾಗಿತ್ತು. ಗುರುಗಳೇ ಬಂದು ಆಶೀರ್ವಾದ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

    ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ದೂರಿನಲ್ಲಿ ಯಾರ ಹೆಸರನ್ನು ಹೇಳಿಲ್ಲ. ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದು ತಿಳಿಸಿದ್ದರು.

  • ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

    ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

    ಲಕ್ನೋ: ಮುಖ್ಯಮಂತ್ರಿಯಾಗಿ ನಾನು ತಾರತಮ್ಯ ಮಾಡುವುದಿಲ್ಲ. ಆದರೆ ಹಿಂದೂವಾಗಿ ಅಯೋಧ್ಯೆಯ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

    ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮ ಯಶಸ್ವಿಯಾಗಲು ಯೋಗಿ ಆದಿತ್ಯನಾಥ್‌ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದು ಯೋಗಿ ಆದಿತ್ಯನಾಥ್‌ ಅವರನ್ನು ಸಂದರ್ಶನ ಮಾಡಿದೆ.

    ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ನೀವು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಅದೇ ರೀತಿಯಾಗಿ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸಿದರೆ ನೀವು ಭಾಗವಹಿಸುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದನ್ನೂ ಓದಿ: ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

    ಈ ಪ್ರಶ್ನೆಗೆ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡುತ್ತಾರೆ ಎಂದು ನಿಮಗೆ ಅನಿಸುತ್ತೆಯೇ ಎಂದು ಮರು ಪ್ರಶ್ನೆ ಹಾಕಿದ ಯೋಗಿ, ನನ್ನನ್ನು ಆಹ್ವಾನಿಸುವ ಬಗ್ಗೆ ನನಗೆ ಆಗುವ ಸಮಸ್ಯೆಗಿಂತ ಅವರಿಗೆ ಜಾಸ್ತಿ ಸಮಸ್ಯೆಯಾಗಬಹುದು. ಈ ವಿಚಾರದಲ್ಲಿ ನನಗೆ ಯಾವುದೇ ಗೊಂದಲವಿಲ್ಲ ಎಂದು ಉತ್ತರಿಸಿದರು.

    ಮುಂದುವರಿಸಿದ ಅವರು ಮುಖ್ಯಮಂತ್ರಿಯಾಗಿ ನಾನು ಯಾವುದೇ ಜಾತಿ, ಧರ್ಮದ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಆದರೆ ಒಬ್ಬ ಯೋಗಿ ಮತ್ತು ಹಿಂದೂವಾಗಿ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಯಾಕೆಂದರೆ ನನ್ನ ಧರ್ಮವನ್ನು ಪಾಲಿಸುವ ಹಕ್ಕು ನನಗಿದೆ ಎಂದು ಹೇಳಿದರು.

    ನಮ್ಮ ದೇಶದಲ್ಲಿ ಗಲಭೆಗಳು, ನಕ್ಸಲಿಸಂ, ಭಯೋತ್ಪಾದನೆಗೆ ಮೂಲ ಕಾರಣ ಹುಸಿ ಜಾತ್ಯಾತೀತತೆ. ಹುಸಿ ಜಾತ್ಯಾತೀತರೆಲ್ಲ ಹಿಂದೂಗಳನ್ನು ವಿರೋಧಿಸುತ್ತಿದ್ದಾರೆ. ಆದರೆ ರಾಮ ಮಂದಿರ ದೇವಾಲಯದ ಆಂದೋಲನ ಹುಸಿ ಜಾತ್ಯಾತೀತ ವ್ಯಕ್ತಿಗಳ ಮುಖವಾಡವನ್ನು ಕಳಚಿದೆ ಎಂದರು.

    ಈ ವೇಳೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಬಗ್ಗೆ ಮಾತನಾಡಿ, ಪ್ರತಿ ವರ್ಷ ನಡೆಯುವ ದೀಪೋತ್ಸವನ್ನು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಬಗ್ಗೆ ನಾನು ಅವರಲ್ಲಿ ಪ್ರಶ್ನಿಸಿದಾಗ ಯಾವುದೇ ಧರ್ಮದ ಆಚರಣೆಯನ್ನು ಆಚರಿಸುವ ಹಕ್ಕು ನಮಗಿದೆ. ಯಾರೂ ಪೂರ್ವಜರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಉತ್ತರಿಸಿದರು ಎಂದು ಯೋಗಿ ಹೇಳಿದರು.

    ಮುಸ್ಲಿಂ ಸಮುದಾಯದಿಂದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಇಕ್ಬಾಲ್‌ ಅನ್ಸಾರಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಸುಪ್ರೀಂ ತೀರ್ಪನ್ನು ಅವರು ಸ್ವಾಗತಿಸಿದ್ದು ಸಂತೋಷ ತಂದಿದೆ. ಇವರನ್ನು ನೋಡಿ ಇತರರು ಕಲಿಯುವ ವಿಚಾರ ಬಹಳಷ್ಟಿದೆ. ರಾಮ ಜನ್ಮಭೂಮಿ ಪ್ರಕರಣದ ಸಂಬಂಧ ಕೋರ್ಟ್‌ನಲ್ಲಿ ಅವರು ಹೋರಾಟ ಮಾಡಿದ್ದರೂ ಅವರಿಗೆ ಅಯೋಧ್ಯೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಉತ್ತರಿಸಿದರು.

    ಹಿಂದೂ ವ್ಯಕ್ತಿಯೊಬ್ಬ ಪಾಕಿಸ್ತಾನ ಅಥವಾ ಅಘ್ಫಾನಿಸ್ಥಾನದಲ್ಲಿ ದೇವಾಲಯ ಸಂಬಂಧ ಹೋರಾಟ ನಡೆಸಿದ್ದರೆ ಆತ ಸುರಕ್ಷಿತವಾಗಿರುತ್ತಿದ್ದನೇ ಎಂದು ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದರು.

  • ಟಿವಿಯಲ್ಲಿ ನಮಾಜ್, ಕುರಾನ್ ಪಠಣ, ಮನೆಯಲ್ಲೇ ಹಬ್ಬ ಆಚರಿಸಿದ ಉಡುಪಿಯ ಮುಸ್ಲಿಮರು

    ಟಿವಿಯಲ್ಲಿ ನಮಾಜ್, ಕುರಾನ್ ಪಠಣ, ಮನೆಯಲ್ಲೇ ಹಬ್ಬ ಆಚರಿಸಿದ ಉಡುಪಿಯ ಮುಸ್ಲಿಮರು

    ಉಡುಪಿ: ಅರಬ್ಬಿ ಸಮುದ್ರ ತೀರದಲ್ಲಿ ವಾಸಿಸುವ ಮುಸಲ್ಮಾನರಿಗೆ ಇಂದು ಈದುಲ್ ಫಿತರ್ ಹಬ್ಬ. ಒಂದು ತಿಂಗಳ ರಂಜಾನ್ ಉಪವಾಸವನ್ನು ಮುಗಿಸಿದ ಮುಸ್ಲಿಮರು, ಇಂದು ಉಪವಾಸ ತೊರೆದು ಟಿವಿಯಲ್ಲಿ ನಮಾಜ್ ನೋಡುತ್ತಾ ಹಬ್ಬ ಆಚರಿಸುತ್ತಿದ್ದಾರೆ.

    ಈದುಲ್ ಫಿತರ್ ಹಬ್ಬಕ್ಕೆ ಭಾನುವಾರದ ಕೊರೊನಾ ಕರ್ಫ್ಯೂ ಅಡ್ಡಿಯಾಗಿದೆ. ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡದಂತೆ ಉಡುಪಿ ಜಿಲ್ಲಾಡಳಿತ ಸೂಚನೆ ನೀಡಿದೆ. ಮನೆಯಲ್ಲೇ ಹೇಗೆ ಹಬ್ಬ ಆಚರಿಸೋದು ಎಂದು ಆಲೋಚನೆ ಮಾಡಿದ ಉಡುಪಿಯ ಜಾಮಿಯಾ ಮಸೀದಿ, ಒಂದು ಪ್ಲಾನ್ ಮಾಡಿದೆ. ಉಡುಪಿಯಲ್ಲಿ ಕಾರ್ಯಾಚರಿಸುವ ಸಿ4ಯು ಖಾಸಗಿ ನೇರ ಪ್ರಸಾರ ಚಾನೆಲ್ ಮೂಲಕ ಹಬ್ಬದ ನಮಾಜ್, ಕುರಾನ್ ಪಠಣ ಮತ್ತು ಧಾರ್ಮಿಕ ವಿಧಿಯನ್ನು ನೇರ ಪ್ರಸಾರ ಮಾಡಲು ಮುಂದಾಗಿದೆ.

    ಬೆಳಗ್ಗೆ ಎಂಟು ಗಂಟೆಯಿಂದ ಚಾನಲ್‍ನಲ್ಲಿ ಜಾಮಿಯಾ ಮಸೀದಿಯ ಧರ್ಮಗುರುಗಳು ಈದುಲ್ ಫಿತರ್ ಸಂದರ್ಭ ಅನುಸರಿಸುವ ಧಾರ್ಮಿಕ ವಿಧಿವಿಧಾನಗಳ ಬೋಧನೆಯನ್ನು ಮಾಡುತ್ತಾರೆ. ಮನೆಯಲ್ಲಿರುವ ಮುಸ್ಲಿಮರು ಟಿವಿ ನೋಡುತ್ತಾ ಅದನ್ನು ಫಾಲೋ ಮಾಡಬೇಕು. ಈ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಧಾರ್ಮಿಕ ವಿಧಿ ವಿಧಾನಕ್ಕೆ ಚ್ಯುತಿ ಬಾರದ ಹಾಗೆ ಉಡುಪಿಯ ಮುಸಲ್ಮಾನರು ಹಬ್ಬ ಆಚರಿಸಿದ್ದಾರೆ.

    ಮನೆಯಲ್ಲೇ ನಮಾಜ್ ಮಾಡಿದ ಅನ್ಸಾರ್ ಅಹಮ್ಮದ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೊರೊನಾ ಜನರ ನೆಮ್ಮದಿ ಹಾಳು ಮಾಡಿದೆ. ಈ ಬಾರಿ ನಮ್ಮ ಹಬ್ಬವನ್ನೂ ಹಾಳು ಮಾಡಿದೆ. ಆದರೆ ಕುಟುಂಬದವರು ಮನೆಯಲ್ಲೇ ನಮಾಜ್ ಮಾಡಿ ಹಬ್ಬ ಆಚರಣೆ ಮಾಡಿದ್ದೇವೆ. ಹೊರಗಿನ ಯಾರನ್ನೂ ನಮಾಜ್ ಸಂದರ್ಭದಲ್ಲಿ ಸೇರಿಸಿಲ್ಲ ಎಂದು ಹೇಳಿದರು.

  • ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಂತೆ ಶ್ರೀರಾಮ ಸೇನಾ ಮನವಿ

    ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಂತೆ ಶ್ರೀರಾಮ ಸೇನಾ ಮನವಿ

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನಲೆ ಮುಸ್ಲಿಂ ಬಾಂಧವರ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನಾ ಮುಖಂಡರು ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

    ರಾಜ್ಯದಲ್ಲಿ ಹಾಗೂ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಚಿಂತಾಜನಕ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ಸಾಮೂಹಿಕ ಪ್ರಾರ್ಥನೆ, ಸಭೆ ಸಮಾರಂಭ ನಡೆಸದಂತೆ ದೇವಸ್ಥಾನ, ಚರ್ಚ್, ಮಸೀದಿ ಬಂದ್ ಮಾಡಿಸಿದೆ. ಈ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಹ ಯಾವುದೇ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸದೇ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಮುಸ್ಲಿಂ ಸಮುದಾಯದವರು ರಂಜಾನ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು. ಇದೀಗ ಶ್ರೀರಾಮ ಸೇನಾದಿಂದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಬಾರದು ಎಂದು ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರಾಜು ಗಾಡಗೋಳಿ, ಅಣ್ಣಪ್ಪ ದಿವಟಿಗಿ, ಮಂಜು ಕಾಟಕರ, ಸಿದ್ದು ರಾಯನಾಳ, ಅಭಿಷೇಕ ಕಾಂಬಳೆ ಸೇರಿದಂತೆ ಇತರರು ಇದ್ದರು.

  • ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಿದ್ದ 10 ಜನರ ಬಂಧನ

    ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಿದ್ದ 10 ಜನರ ಬಂಧನ

    ಹುಬ್ಬಳ್ಳಿ: ಲಾಕ್‍ಡೌನ್ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಹಾಗೂ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಹತ್ತು ಜನ ಆರೋಪಿಗಳನ್ನು ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಹುಬ್ಬಳ್ಳಿಯ ಖಾಜಾ ಅಬ್ದುಲ್ ಕರೀಂ ಬೇಪಾರಿ, ರಾಜಾ ಹಸನ್‍ಸಾಬ್ ನದಾಫ್, ಅಲಾಬಕ್ಷ್ ಹಸನ್‍ಸಾಬ್ ನದಾಫ್, ಜಾವೀದ್ ಅಬ್ದುಲ್ ರಜಾಕ್ ಬಿಜಾಪುರ, ಅಫ್ಜಲ್ ಮೋದಿನಸಾಬ್ ರೋಣ, ಮಹ್ಮದ್ ಗೌಸ್ ಮೆಹಬೂಬ್‍ಸಾಬ್ ಹಾವನೂರ, ಇರ್ಪಾನ್ ಖಾಜಾ ಭೇಪಾರಿ, ಗೂಡುಸಾಬ್ ರೇಹಮಾನಸಾಬ್ ಬೆಣ್ಣೆ, ಮಹ್ಮದ್ ಇಕ್ಬಾಲ್ ಗೂಡುಸಾಬ್ ಬೆಣ್ಣೆ, ಪಾತೀಮ್ ದಾವಲಸಾಬ್ ನದಾಫ್ ಬಂಧಿತ ಆರೋಪಿಗಳು. ಅರಳಿಕಟ್ಟಿ ಕಾಲೋನಿಯ ಶಭಾನಾ ರೋಣ, ಶಹನಜಾ ರೋಣ, ರೇಷ್ಮಾ ಗದಗ, ಮೆಹಬೂಬಿ ಮಾಂಡಲಿ,ಸಬೀರಾ ಬೆಣ್ಣಿ ಎಂಬವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದರು.

    ಏನಿದು ಪ್ರಕರಣ?:
    ಲಾಕ್‍ಡೌನ್ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಮಾಜ್ ಮಾಡುವುದನ್ನು ನಿಲ್ಲಿಸಲಾಗಿದೆ. ಕೆಲ ಮೌಲ್ವಿಗಳೇ ನಮಾಜ್ ಮಾಡಲು ಮಸೀದಿಗೆ ಬರಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ. ಆದರೆ ಈ ಮಧ್ಯೆಯೂ ಹುಬ್ಬಳ್ಳಿ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟಿ ಕಾಲೋನಿ ಬಳಿ ಶುಕ್ರವಾರ ನಮಾಜ್ ನಡೆಸಲಾಗಿತ್ತು. ಈ ವಿಚಾರವಾಗಿ ಮುಸ್ಲಿಮರು ಮತ್ತು ಪೊಲೀಸರ ನಡುವೆ ಜಗಳವಾಗಿ, ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.

    ಈ ಘಟನೆಯಲ್ಲಿ ಮೂರು ಜನ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಹರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ನಮಾಜ್‍ಗೆ ತಡೆ- ಪೊಲೀಸರ ಮೇಲೆ ಕಲ್ಲು ತೂರಾಟ

    ನಮಾಜ್‍ಗೆ ತಡೆ- ಪೊಲೀಸರ ಮೇಲೆ ಕಲ್ಲು ತೂರಾಟ

    ಹುಬ್ಬಳ್ಳಿ: ನಮಾಜ್ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಮರು ಮತ್ತು ಪೊಲೀಸ್ ಸಿಬ್ಬಂದಿಯ ಮಧ್ಯೆ ಗಲಾಟೆ ನಡೆದಿರುವ ಘಟನೆ ಹುಬ್ಬಳ್ಳಿ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟಿ ಕಾಲೋನಿ ಬಳಿ ನಡೆದಿದೆ.

    ಲಾಕ್‍ಡೌನ್ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಮಾಜ್ ಮಾಡುವುದನ್ನು ನಿಲ್ಲಿಸಲಾಗಿದೆ. ಕೆಲ ಮೌಲ್ವಿಗಳೇ ನಮಾಜ್ ಮಾಡಲು ಮಸೀದಿಗೆ ಬರಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ. ಆದರೆ ಈ ಮಧ್ಯೆಯೂ ಕೂಡ ನಮಾಜ್ ಮಾಡುವ ವಿಚಾರಕ್ಕೆ ಮುಸ್ಲಿಮರು ಮತ್ತು ಪೊಲೀಸರ ನಡುವೆ ಜಗಳವಾಗಿ, ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.

    ನಮಾಜ್ ವಿಷಯಕ್ಕೆ ಸಂಬಂಧಿಸಿದಂತೆ ಮೊದಲು ಪೊಲೀಸರ ಹಾಗೂ ಮುಸ್ಲಿಮರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಸ್ಥಳೀಯ ಕೆಲ ಯುವಕರು ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆಯಲ್ಲಿ ಮೂರು ಜನ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಹಳನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಸಂಬಂಧ ಟೌನ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

  • ಹಿಂದೂವಿನ ಮೃತದೇಹವನ್ನ ಹೊತ್ತೊಯ್ದು ಮುಸ್ಲಿಮರಿಂದ ಅಂತ್ಯಕ್ರಿಯೆ

    ಹಿಂದೂವಿನ ಮೃತದೇಹವನ್ನ ಹೊತ್ತೊಯ್ದು ಮುಸ್ಲಿಮರಿಂದ ಅಂತ್ಯಕ್ರಿಯೆ

    – ‘ರಾಮ ನಾಮ ಸತ್ಯ ಹೇ’ ಎಂದು ಕೂಗಿದ ಮುಸ್ಲಿಮರು
    – ಹಿಂದೂ ವ್ಯಕ್ತಿಯ ಕುಟುಂಬದ ಸಹಾಯಕ್ಕೆ ಧಾವಿಸಿದ್ರು

    ಲಕ್ನೋ: ಕೊರೊನಾ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ಲಾಕ್‍ಡೌನ್ ಮಧ್ಯೆ ಅಕಾಲಿಕವಾಗಿ ಯಾರಾದರೂ ಮೃತಪಟ್ಟರೇ ಅವರ ಅಂತ್ಯಕ್ರಿಯೆ ಮಾಡುವುದು ತುಂಬಾ ಕಷ್ಟವಾಗಿದೆ. ಅದರಂತೆಯೇ ಉತ್ತರ ಪ್ರದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಮುಸ್ಲಿಮರು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದ್ದು, ಹಿಂದೂ ವ್ಯಕ್ತಿಯ ಮೃತದೇಹವನ್ನು ಮುಸ್ಲಿಮರು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುತ್ತಾ ‘ರಾಮ ನಾಮ ಸತ್ಯ ಹೇ’ ಎಂದು ಕೂಗುತ್ತಾ ಸಾಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬುಲಂದ್‌ಶಹರ್‌ನ ಆನಂದ ವಿಹಾರ ಪ್ರದೇಶದ ನಿವಾಸಿ ರವಿ ಶಂಕರ್ (40) ಕ್ಯಾನ್ಸರ್‌ನಿಂದ ಶನಿವಾರ ಮಧ್ಯಾಹ್ನ ತನ್ನ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಇವರು ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಇತ್ತ ಲಾಕ್‍ಡೌನ್ ಆದ ಕಾರಣ ಸಂಬಂಧಿಕರು ಅಂತ್ಯಕ್ತಿಯೆಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಪತ್ನಿ ಅಂತ್ಯಸಂಸ್ಕಾರ ಹೇಗೆ ಮಾಡುವುದು ಎಂದು ಆತಂಕಗೊಂಡು ದುಃಖಿತರಾಗಿದ್ದರು.

    ಈ ವೇಳೆ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೆರೆಹೊರೆಯ ಮುಸ್ಲಿಮರು ಧಾವಿಸಿದ್ದಾರೆ. ಅಲ್ಲದೇ ಮುಸ್ಲಿಮರು ಹಿಂದೂ ಘೋಷವಾಕ್ಯಗಳನ್ನು ಪಠಿಸುತ್ತ ವ್ಯಕ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ.

    https://twitter.com/Benarasiyaa/status/1244136136651313153

    ಇದೀಗ ಈ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮುಸ್ಲಿಮರಿಗೆ ಅನೇಕರು ಧನ್ಯವಾದ ತಿಳಿಸುತ್ತಿದ್ದಾರೆ. “ಸ್ಥಳೀಯ ಜನರೆಲ್ಲರೂ ರವಿ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು. ಎರಡು ಸಮುದಾಯ ಮೊದಲಿನಿಂದಲೂ ಪರಸ್ಪರರಿಗೆ ನೆರವಾಗುತ್ತ ಉತ್ತಮ ಸಂಬಂಧ ಹೊಂದಿದ್ದೇವೆ” ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಜುಬೈದ್ ತಿಳಿಸಿದ್ದಾರೆ.

  • ಅನಾಥ ಹಿಂದೂ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಬಾಂಧವರು

    ಅನಾಥ ಹಿಂದೂ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಬಾಂಧವರು

    ಮಂಗಳೂರು: ಅನಾಥ ಹಿಂದೂ ವೃದ್ಧ ಮಹಿಳೆಯ ಶವ ಸಂಸ್ಕಾರ ಮಾಡಿ ಸ್ಥಳೀಯ ಮುಸ್ಲಿಂ ಸಮುದಾಯದವರು ಮಾನವೀಯತೆ ಮೆರೆದಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆಯ ನಾಗರಿಕರು ಈ ಕಾರ್ಯ ಮಾಡಿದ್ದಾರೆ. ಕೊಡಾಜೆ ಮಸೀದಿಯ ಹತ್ತಿರದ ಒಂದು ಮನೆಯಲ್ಲಿ ಬಡ ವೃದ್ಧ ಮಹಿಳೆಯು ಅಸುನೀಗಿದ್ದರು. ವೃದ್ಧೆಯು ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದು ಇವರಿಗೆ ಇನ್ನೊಬ್ಬ ಅನಾರೋಗ್ಯ ಪೀಡಿತ ವೃದ್ಧೆ ಅಕ್ಕ ಮಾತ್ರ ಇದ್ದರು. ಹೀಗಾಗಿ ಕುಟುಂಬಸ್ಥರು ಯಾರೂ ಇಲ್ಲ ಎಂದರಿತ ಊರಿನವರು ತಕ್ಷಣ ಕಾರ್ಯ ಪ್ರವೃತ್ತರಾದರು.

    ಕೊಡಾಜೆ ಜುಮ್ಮಾ ಮಸೀದಿಯ ಅಧ್ಯಕ್ಷರು ಸೇರಿದಂತೆ ಊರಿನ ನಾಗರೀಕರು ವೃದ್ಧ ಮಹಿಳೆಯ ಶವ ಸಂಸ್ಕಾರಕ್ಕೆ ಹಣ ಒಟ್ಟುಗೂಡಿಸಿದ್ದಾರೆ. ಸುಮಾರು ಐದು ಸಾವಿರ ರೂಪಾಯಿಯನ್ನು ಸೇರಿಸಿ ಅಂತ್ಯಸಂಸ್ಕಾರಕ್ಕೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಿದ್ದಾರೆ.

    ಅಂಬುಲೆನ್ಸ್ ಕರೆಸಿ ಪುತ್ತೂರಿನ ವೃದ್ಧೆಯ ಶವವನ್ನು ಶವಾಗಾರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಆ ಬಳಿಕ ಶವ ಸಂಸ್ಕಾರ ಮಾಡಲಾಗಿದೆ. ಈ ಕಾರ್ಯ ಮಾಡುವ ಮೂಲಕ ಧರ್ಮದ ಭೇದಭಾವ ಇಲ್ಲದೆ ಮಾನವೀಯತೆಯ ಕೊಂಡಿ ಈಗಲೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದ್ದಾರೆ.