Tag: muslim youths

  • ನಿಂತಿದ್ದ ಮುಸ್ಲಿಂ ಯುವಕರ ಮೇಲೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ – ಲವ್‌ ಜಿಹಾದ್‌ ಆರೋಪ

    ನಿಂತಿದ್ದ ಮುಸ್ಲಿಂ ಯುವಕರ ಮೇಲೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ – ಲವ್‌ ಜಿಹಾದ್‌ ಆರೋಪ

    ಗಾಂಧೀನಗರ: ಅಹಮದಾಬಾದ್‌ನ (Ahmedabad) ಸಿಂಧು ಭವನ ರಸ್ತೆಯ ಗರ್ಬಾ ಸ್ಥಳದಲ್ಲಿ ನಾಲ್ವರು ಮುಸ್ಲಿಂ ಯುವಕರ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ನವರಾತ್ರಿಯಲ್ಲಿ ಇತರ ಧರ್ಮದ ಜನರು ಭಾಗವಹಿಸದಂತೆ ತಡೆಯಲು ಭಜರಂಗದಳದ (Bajarang Dal) ಸ್ವಯಂಸೇವಕರು ಎರಡು ಸ್ಥಳಗಳಲ್ಲಿ ತಪಾಸಣೆ ನಡೆಸಿದರು. ಎಚ್ಚರಿಕೆಯ ಹೊರತಾಗಿಯೂ ಇತರ ಧರ್ಮದ ನಾಲ್ವರು ಯುವಕರು ಒಂದು ಸ್ಥಳದಲ್ಲಿ ಕಾಣಿಸಿಕೊಂಡರು. ಲವ್‌ ಜಿಹಾದ್‌ (Love Jihad) ತಡೆಯಲು ನಮ್ಮ ಸ್ವಯಂಸೇವಕರು ಅವರನ್ನು ಹಿಡಿದು ಥಳಿಸಿದ್ದಾರೆ ಎಂದು ಗುಜರಾತ್‌ ವಿಹೆಚ್‌ಪಿ ವಕ್ತಾರ ಹಿತೇಂದ್ರ ಸಿನ್ಹಾ ರಜಪೂತ್‌ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ – ವಿವಾದಿತ ಹೇಳಿಕೆಗೆ ಕ್ಷಮೆಯಾಚಿಸಿದ ಐಎಎಸ್ ಅಧಿಕಾರಿ

    https://twitter.com/Mr_ManmohanSing/status/1575123183820120064

    ಸ್ಕೈ ಯುನಿವರ್ಸಲ್ ಗಾರ್ಬಾ ಸ್ಥಳದ ಹೊರಗೆ ಭಜರಂಗದಳದವರು, “ಲವ್ ಜಿಹಾದ್” ವಿರುದ್ಧದ ಸಂದೇಶಗಳನ್ನು ಪ್ರದರ್ಶಿಸುವ ಫಲಕಗಳನ್ನು ಹಿಡಿದಿದ್ದಾರೆ. ಅಲ್ಲದೇ ಯುವಕರು, ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿ ನಿಂತಿದ್ದ ಮುಸ್ಲಿಂ ಯುವಕರ ಹಣೆಗೆ ಬಲವಂತವಾಗಿ ತಿಲಕ ಇಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

    ಮತ್ತೊಂದು ವೀಡಿಯೊದಲ್ಲಿ ತಲೆಯಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ಸುಮಾರು 30 ಮಂದಿ ಭಜರಂಗದಳದವರು ನಿಂದಿಸಿ ಥಳಿಸಿದ್ದಾರೆ. ಬಟ್ಟೆ ಹರಿದಿರುವ ವ್ಯಕ್ತಿ ತನ್ನನ್ನು ಸಲ್ಮಾನ್ ಶೇಖ್ ಎಂದು ಗುರುತಿಸಿಕೊಂಡಿದ್ದು, ತನ್ನನ್ನು ರಕ್ಷಿಸುವಂತೆ ಮನವಿ ಮಾಡಿದ್ದಾನೆ. ಇದನ್ನೂ ಓದಿ: ಪಿಎಫ್‍ಐ ಬ್ಯಾನ್ ವಿರೋಧಿಸಿದರೆ ಜನ ಒದೆಯುತ್ತಾರೆ – ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

    ಹಲ್ಲೆ ನಡೆಸಿರುವ ಜವಾಬ್ದಾರಿಯನ್ನು ಬಲಪಂಥೀಯ ಸಂಘಟನೆ ವಹಿಸಿಕೊಂಡರೂ ನಗರ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಡಿಸಿಪಿ ಬಿ.ಯು.ಜಡೇಜಾ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಯಾವುದೇ ದೂರುದಾರರು ಮುಂದೆ ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಪಾಟ್ನಾ: ಭಾರತೀಯ ಸಶಸ್ತ್ರ ಪಡೆಗಳಿಗೆ ಮುಸ್ಲಿಂ ಯುವಕರು ಸೇರುವಂತೆ ಉತ್ತೇಜಿಸಲು ಮುಸ್ಲಿಂ ಸಂಘಟನೆಗಳಿಂದ ಶುಕ್ರವಾರದಿಂದ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ.

    ಪ್ರಮುಖ ಮುಸ್ಲಿಂ ಸಂಘಟನೆಗಳು, ವೃತ್ತಿಪರರು ಹಾಗೂ ಇಮಾಮ್‌ಗಳ ಸಂಘಗಳು ಅಗ್ನಿಪಥ್ ಯೋಜನೆ ಮೂಲಕ ಮುಸ್ಲಿಂ ಯುವಕರೂ ಭಾರತೀಯ ಸೇನೆ ಸೇರುವಂತೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ವ್ಯಾಪಕ ಪ್ರತಿಭಟನೆಗಳ ನಡುವೆ ಕಾನ್ಪುರದಲ್ಲಿ ಬದಲಾವಣೆ ತರಲಾಗುತ್ತಿದ್ದು, ಶುಕ್ರವಾರ ಜೂನ್ (24) ಕಾನ್ಪುರದ ಧರ್ಮಗುರುಗಳು ಅಗ್ನಿಪಥ್ ಯೋಜನೆಯ ನೇಮಕಾತಿಗೆ ಅರ್ಜಿ ಸಲ್ಲಿಸಲು ಯುವಕರನ್ನು ಒತ್ತಾಯಿಸಲಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ಶುಕ್ರವಾರ ಕಾನ್ಪುರದಲ್ಲಿ ಮುಸ್ಲಿಮರು ಪ್ರಾರ್ಥಗೂ ಮುನ್ನ ಎಲ್ಲ ಮಸೀದಿಗಳಲ್ಲಿ ಮನವಿ ಮಾಡಲಿದ್ದಾರೆ. ಮುಸ್ಲಿಮರಲ್ಲಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿರುವ ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ (AMP) ಸಂಸ್ಥೆಯು ಈ ಅಭಿಯಾನವನ್ನು ಮುನ್ನಡೆಸಲಿದೆ. ಜೊತೆಗೆ ಉಪಕ್ರಮಕ್ಕಾಗಿ ಮುಸ್ಲಿಂ ಧರ್ಮಗುರುಗಳನ್ನೂ ತೊಡಗಿಸಿಕೊಳ್ಳಲಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮುಸ್ಲಿಂ ಮುಖಂಡ ಶಾಹಿದ್ ಕಮ್ರಾನ್ ಖಾನ್ ಹೇಳಿದ್ದಾರೆ.

    10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು ಎಂದು ಧರ್ಮಗುರುಗಳು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    Live Tv

  • ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್‌ ನಾಯಕ್‌ ಸಂಸ್ಥೆ ಬ್ಯಾನ್‌

    ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್‌ ನಾಯಕ್‌ ಸಂಸ್ಥೆ ಬ್ಯಾನ್‌

    ನವದೆಹಲಿ: ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (IRF) ಕಾನೂನು ಬಾಹಿರ ಸಂಘಟನೆ. ಹೀಗಾಗಿ ಅದನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ತಿಳಿಸಿದೆ.

    ಈ ಸಂಬಂಧ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಐಆರ್‌ಎಫ್‌ನ ಸಂಸ್ಥಾಪಕ ಜಾಕಿರ್ ನಾಯ್ಕ್ ಅವರ ಭಾಷಣಗಳು ಆಕ್ಷೇಪಾರ್ಹವಾಗಿವೆ. ಏಕೆಂದರೆ ಅವರು ಭಯೋತ್ಪಾದಕರನ್ನು ಹೊಗಳುತ್ತಿದ್ದಾರೆ. ಪ್ರತಿಯೊಬ್ಬ ಮುಸ್ಲಿಮರೂ ಭಯೋತ್ಪಾದಕರಾಗಬೇಕು ಎಂದು ಘೋಷಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮತ್ತೊಂದು ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದ ಉತ್ಸವದಲ್ಲಿ ನಿರ್ಬಂಧ

    ಐಆರ್‌ಎಫ್ ಸಂಸ್ಥಾಪಕರು ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸುವುದನ್ನು ಉತ್ತೇಜಿಸುತ್ತಿದ್ದಾರೆ. ಆತ್ಮಾಹುತಿ ಬಾಂಬ್ ದಾಳಿಯನ್ನು ಸಮರ್ಥಿಸುತ್ತಾರೆ. ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅದು ಇತರ ಧರ್ಮಗಳಿಗೆ ಅವಮಾನಕರವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಳ್ಳಲು ವಿಶ್ವ ಹಾಗೂ ಭಾರತದ ಮುಸ್ಲಿಂ ಯುವಜನತೆ ಮತ್ತು ಉಗ್ರಗಾಮಿಗಳಿಗೆ ನಾಯಕ್‌ ಪ್ರೇರಣೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ: ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್‌

    ಗುಜರಾತ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಐಆರ್‌ಎಫ್, ಅದರ ಸದಸ್ಯರು ಮತ್ತು ಸಹಾನುಭೂತಿ ಹೊಂದಿರುವವರ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.