Tag: Muslim student

  • ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಕಪಾಳಮೋಕ್ಷ – ಎಲ್ಲವನ್ನೂ ವೀಡಿಯೋ ಮಾಡಿದ್ರೆ ಶಿಕ್ಷಕರು ಪಾಠ ಕಲಿಸೋದು ಹೇಗೆ: ಶಿಕ್ಷಕಿ ಪ್ರಶ್ನೆ

    ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಕಪಾಳಮೋಕ್ಷ – ಎಲ್ಲವನ್ನೂ ವೀಡಿಯೋ ಮಾಡಿದ್ರೆ ಶಿಕ್ಷಕರು ಪಾಠ ಕಲಿಸೋದು ಹೇಗೆ: ಶಿಕ್ಷಕಿ ಪ್ರಶ್ನೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ (Muslim Student) ಕಪಾಳಮೋಕ್ಷ ಮಾಡುವಂತೆ ಶಿಕ್ಷಕಿಯೊಬ್ಬರು ಶಾಲಾ ಮಕ್ಕಳಿಗೆ ಹೇಳುತ್ತಿರುವ ದೃಶ್ಯದ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಶಿಕ್ಷಕಿ ನಡೆಗೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶಿಕ್ಷಕಿ ತೃಪ್ತಿ ತ್ಯಾಗಿ ವೀಡಿಯೋ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿಕ್ಷಕಿ, ಇದೊಂದು ಸಣ್ಣ ಸಮಸ್ಯೆ, ಆದ್ರೆ ಘಟನೆಗೆ ಕೋಮು ದೃಷ್ಟಿಕೋನ (Communal Angle) ನೀಡಲಾಗುತ್ತಿದೆ. ಆ ಹುಡುಗ ಹೋಮ್‌ವರ್ಕ್‌ ಮಾಡಿರಲಿಲ್ಲ. ನಾನು ಅಂಗವಿಕಲೆಯಾದ್ದರಿಂದ ಎದ್ದೇಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಮತ್ತೊಬ್ಬ ವಿದ್ಯಾರ್ಥಿಗೆ ಅವನ ಕೆನ್ನೆಗೆ ಒಂದು ಬಾರಿಸು ಅಂತಾ ಹೇಳಿದೆ. ಈ ವೇಳೆ ತರಗತಿಯಲ್ಲಿ ಕುಳಿತಿದ್ದ ಮಗುವಿನ ಸೋದರ ಸಂಬಂಧಿ ವೀಡಿಯೋ ರೆಕಾರ್ಡ್‌ ಮಾಡಿದ್ದಾನೆ. ಆದ್ರೆ ವೀಡಿಯೋವನ್ನ ಎಡಿಟ್‌ ಮಾಡಿದ್ದು, ಕೋಮು ಬಣ್ಣ ಹಚ್ಚಲಾಗಿದೆ ಎಂದು ಹೇಳಿದ್ದಾರೆ.  

    ಇದೊಂದು ಸಣ್ಣ ಸಮಸ್ಯೆ, ನನ್ನ ತಪ್ಪಿದ್ದರೆ ನಾನು ಒಪ್ಪಿಕೊಳ್ಳುತ್ತೇನೆ. ನಾನು ಇದನ್ನ ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಕೆಲವರು ಅನಗತ್ಯವಾಗಿ ದೊಡ್ಡದು ಮಾಡಿದ್ದಾರೆ. ರಾಹುಲ್‌ ಗಾಂಧಿ ಸೇರಿದಂತೆ ಇತರ ರಾಜಕೀಯ ನಾಯಕರಿಗೂ ನಾನು ಹೇಳಬಯಸುತ್ತೇನೆ. ಇದು ಟ್ವೀಟ್‌ ಮಾಡುವಷ್ಟು ದೊಡ್ಡ ವಿಷಯವೇನಲ್ಲ. ದಿನನಿತ್ಯದ ವಿಷಯಗಳನ್ನೂ ಈ ರೀತಿ ವೀಡಿಯೋ ಮಾಡಿ ವೈರಲ್‌ ಮಾಡಿದ್ರೇ ಶಿಕ್ಷಕರು ಪಾಠ ಕಲಿಸೋದಾದ್ರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಏನಿದು ಘಟನೆ?
    ಉತ್ತರ ಪ್ರದೇಶದ ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕಿಯೊಬ್ಬರು ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸುವುದಾಗಿ ಪೊಲೀಸರು ತಿಳಿಸಿದ್ದರು. ಹುಡುಗ ಮುಸ್ಲಿಂ ಸಮುದಾಯದವನು. ಶಿಕ್ಷಕಿ ಕ್ರಮವು ಕೋಮುವಾದಿ ಸ್ವರೂಪದ್ದಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೋದಲ್ಲಿ ಶಿಕ್ಷಕಿ ಕೋಮುವಾದಿ ಪದಗಳನ್ನೂ ಬಳಸಿದ್ದು, ಪೊಲೀಸರೂ ಇದನ್ನು ಖಚಿತಪಡಿಸಿದ್ದಾರೆ.

    ಗಣಿತ ಕೋಷ್ಟಕಗಳನ್ನು ಕಲಿಯದ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಮಹಿಳಾ ಶಿಕ್ಷಕಿ ಹೊಡೆಸಿರುವ ದೃಶ್ಯದ ವೀಡಿಯೋ ಗಮನಿಸಿದ್ದೇವೆ. ವೀಡಿಯೋದಲ್ಲಿನ ಆಕ್ಷೇಪಾರ್ಹ ಕಾಮೆಂಟ್ ಬಗ್ಗೆ ನಾವು ಶಾಲೆಯ ಪ್ರಾಂಶುಪಾಲರೊಂದಿಗೆ ಮಾತನಾಡಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಹೊತ್ತಿ ಉರಿದ ಬೆಂಕಿ – 10 ಮಂದಿ ಸಾವು

    ಮುಸ್ಲಿಂ ಮಹಿಳೆಯರೇ ತಮ್ಮ ಮಕ್ಕಳ ಶೈಕ್ಷಣಿಕ ಕುಸಿತಕ್ಕೆ ಕಾರಣ ಎಂದು ವೀಡಿಯೋದಲ್ಲಿ ಶಿಕ್ಷಕಿ ಹೇಳಿಕೆ ನೀಡಿದ್ದಾರೆ. ನಾವು ಮೂಲ ಶಿಕ್ಷಣ ಅಧಿಕಾರಿಗೆ ತಿಳಿಸಿದ್ದೇವೆ. ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮಕ್ಕಳ ಹಕ್ಕುಗಳ ಸಂಸ್ಥೆಯು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದೆ. ಶಾಲೆಯ ಅಧಿಕಾರಿಗಳೊಂದಿಗೆ ರಾಜಿ ಮಾಡಿಕೊಂಡಿರುವುದರಿಂದ ಶಾಲೆಯ ವಿರುದ್ಧ ಆರೋಪ ಹೊರಿಸುವುದಿಲ್ಲ. ನನ್ನ ಮಗನನ್ನು ಈ ಶಾಲೆಗೆ ಕಳುಹಿಸುವುದಿಲ್ಲ. ಶಾಲೆ ನಮ್ಮ ಶುಲ್ಕವನ್ನು ಹಿಂದಿರುಗಿಸಿದೆ. ಈ ವಿಷಯವನ್ನು ಮುಂದುವರಿಸುವುದು ಬಯಸುವುದಿಲ್ಲ ಎಂದು ಬಾಲಕನ ತಂದೆ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತರಗತಿಯಲ್ಲೇ ಮಕ್ಕಳಿಂದ ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಹೊಡೆಸಿದ ಶಿಕ್ಷಕಿ

    ತರಗತಿಯಲ್ಲೇ ಮಕ್ಕಳಿಂದ ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಹೊಡೆಸಿದ ಶಿಕ್ಷಕಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕಿಯೊಬ್ಬರು ಶಾಲಾ ಮಕ್ಕಳಿಗೆ ಹೇಳುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಶಿಕ್ಷಕಿ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಈ ವಿಡಿಯೋ ವೈರಲ್ ಆಗಿದೆ. ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹುಡುಗ ಮುಸ್ಲಿಂ ಸಮುದಾಯದವನು. ಶಿಕ್ಷಕಿ ಕ್ರಮವು ಕೋಮುವಾದಿ ಸ್ವರೂಪದ್ದಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೋದಲ್ಲಿ ಶಿಕ್ಷಕಿ ಕೋಮುವಾದಿ ಪದಗಳನ್ನು ಬಳಸಿದ್ದು, ಪೊಲೀಸರೂ ಇದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಗಣಿತ ಕೋಷ್ಟಕಗಳನ್ನು ಕಲಿಯದ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಮಹಿಳಾ ಶಿಕ್ಷಕಿ ಹೊಡೆಸಿರುವ ದೃಶ್ಯದ ವೀಡಿಯೋ ಗಮನಿಸಿದ್ದೇವೆ. ವೀಡಿಯೋದಲ್ಲಿನ ಆಕ್ಷೇಪಾರ್ಹ ಕಾಮೆಂಟ್ ಬಗ್ಗೆ ನಾವು ಶಾಲೆಯ ಪ್ರಾಂಶುಪಾಲರೊಂದಿಗೆ ಮಾತನಾಡಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ.

    ಮುಸ್ಲಿಂ ಮಹಿಳೆಯರೇ ತಮ್ಮ ಮಕ್ಕಳ ಶೈಕ್ಷಣಿಕ ಕುಸಿತಕ್ಕೆ ಕಾರಣ ಎಂದು ವೀಡಿಯೋದಲ್ಲಿ ಶಿಕ್ಷಕಿ ಹೇಳಿಕೆ ನೀಡಿದ್ದಾರೆ. ನಾವು ಮೂಲ ಶಿಕ್ಷಣ ಅಧಿಕಾರಿಗೆ ತಿಳಿಸಿದ್ದೇವೆ. ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಹೊತ್ತಿ ಉರಿದ ಬೆಂಕಿ – 10 ಮಂದಿ ಸಾವು

    ಮಕ್ಕಳ ಹಕ್ಕುಗಳ ಸಂಸ್ಥೆಯು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದೆ. ಶಾಲೆಯ ಅಧಿಕಾರಿಗಳೊಂದಿಗೆ ರಾಜಿ ಮಾಡಿಕೊಂಡಿರುವುದರಿಂದ ಶಾಲೆಯ ವಿರುದ್ಧ ಆರೋಪ ಹೊರಿಸುವುದಿಲ್ಲ. ನನ್ನ ಮಗನನ್ನು ಈ ಶಾಲೆಗೆ ಕಳುಹಿಸುವುದಿಲ್ಲ. ಶಾಲೆ ನಮ್ಮ ಶುಲ್ಕವನ್ನು ಹಿಂದಿರುಗಿಸಿದೆ. ಈ ವಿಷಯವನ್ನು ಮುಂದುವರಿಸುವುದು ಬಯಸುವುದಿಲ್ಲ ಎಂದು ಬಾಲಕನ ತಂದೆ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ ಹಾಡಿದ ವಿದ್ಯಾರ್ಥಿನಿ – ಗೀತೆಗೆ ಶಿಳ್ಳೆ, ಚಪ್ಪಾಳೆ

    ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ ಹಾಡಿದ ವಿದ್ಯಾರ್ಥಿನಿ – ಗೀತೆಗೆ ಶಿಳ್ಳೆ, ಚಪ್ಪಾಳೆ

    ಚಾಮರಾಜನಗರ: ಇಲ್ಲಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು (Muslim Student) ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ (Mahadeshwara Devotional Song) ಹಾಡುವ ಮೂಲಕ ಸಾಮರಸ್ಯ ಬೆಸೆಯುವ ಕೆಲಸ ಮಾಡಿದ್ದಾರೆ.

    ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಭಾರತೀಯ ಪರಿವರ್ತನ ಸಂಘದಿಂದ ಆಯೋಜನೆ ಮಾಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿ ಪ್ರಾರ್ಥನಾ ಗೀತೆ ಹಾಡಿ ಸಭಿಕರ ಮನಗೆದ್ದಿದ್ದಾರೆ. ಇದನ್ನೂ ಓದಿ: ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ

    ಚಾಮರಾಜನಗರ (Chamarajanagar) ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಮ್ಮೆ ಬಸೀರಾ, `ಸೋಜುಗಾದ ಸೂಜು ಮಲ್ಲಿಗೆ.. ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ’ ಭಕ್ತಿ ಗೀತೆ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿ ಹಾಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಮನಸೋತು ಶಿಳ್ಳೆ-ಚಪ್ಪಾಳೆಯ ಮಳೆಗರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ – 33 ಲಕ್ಷ ಚಂದಾದಾರರಿದ್ದ 3 ಯೂಟ್ಯೂಬ್ ಚಾನೆಲ್ ಪತ್ತೆ

    ಈ ಹಿಂದೆ ಸರಿಗಮಪ ಆಡಿಷನ್‌ನಲ್ಲಿ ಮುಸ್ಲಿಂ ಮಹಿಳಾ ಗಾಯಕಿ ಸುಹಾನಾ ಸೈಯದ್ (Suhana Syed) ಅವರು, `ಮುಕುಂದ ಮುರಾರಿ’ ಸಿನಿಮಾದ `ನೀನೆ ರಾಮ, ನೀನೆ ಶಾಮ, ನೀನೆ ಅಲ್ಲಾ, ನೀನೆ ಏಸು’ ಗೀತೆ ಹಾಡುವ ಮೂಲಕ ರಾಜ್ಯಾದ್ಯಂತ ಜನರ ಮನ ಗೆದ್ದಿದ್ದರು.

    Live Tv
    [brid partner=56869869 player=32851 video=960834 autoplay=true]

  • ತರಗತಿಯಲ್ಲಿ ವಿದ್ಯಾರ್ಥಿಯನ್ನ `ಟೆರರಿಸ್ಟ್’ ಎಂದ ಪ್ರೊಫೆಸರ್ ಅಮಾನತು

    ತರಗತಿಯಲ್ಲಿ ವಿದ್ಯಾರ್ಥಿಯನ್ನ `ಟೆರರಿಸ್ಟ್’ ಎಂದ ಪ್ರೊಫೆಸರ್ ಅಮಾನತು

    ಉಡುಪಿ: ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ (MIT College) ಪ್ರಾಧ್ಯಾಪಕರೊಬ್ಬರು (Professor)  ತರಗತಿ ಸಮಯದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ `ಟೆರರಿಸ್ಟ್’ (Terrorist) ಎಂದು ನಿಂದನೆ ಮಾಡಿದ ಘಟನೆ ನಡೆದಿದೆ.

    ಈ ವಾಗ್ವಾದದ ವಿಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ. ಇದೇ ತಿಂಗಳ ನವೆಂಬರ್ 26ರಂದು ಘಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ (Students) ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್ಗಳು ಎಂಬ ಅರ್ಥದಲ್ಲಿ ಪ್ರೊಫೆಸರ್ (Professor) ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಫುಲ್ ಆಕ್ಟೀವ್

    ಪ್ರೊಫೆಸರ್ ಮಾತಿಗೆ ತರಗತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ, ಮುಸ್ಲಿಂ ಕಮ್ಯೂನಿಟಿಯನ್ನು (Muslim Community) ಟೆರರಿಸ್ಟ್ ಎಂದು ಕರೆಯಬೇಡಿ, ಅನಗತ್ಯವಾಗಿ ಈ ರೀತಿ ಮಾತನಾಡಬೇಡಿ ಎಂದಿದ್ದಾನೆ.

    ಬಳಿಕ ಪ್ರಾಧ್ಯಾಕರು ವಿದ್ಯಾರ್ಥಿ ತನ್ನ ಮಗನಂತೆ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ `ನೀವು ನಿಮ್ಮ ಮಗನಿಗೆ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ? ನೀವು ಎಷ್ಟು ಜನರ ಮುಂದೆ ನನ್ನನ್ನು ಹಾಗೆ ಕರೆಯುತ್ತೀರಿ? ಇದು ತರಗತಿ, ನೀವು ವೃತ್ತಿಪರರಾಗಿ ಕಲಿಸುತ್ತಿದ್ದೀರಿ, ಮುಸ್ಲಿಮನಾಗಿ ದಿನನಿತ್ಯ ಇದನ್ನು ಎದುರಿಸುವುದು ತಮಾಷೆಯಲ್ಲ. ನೀವು ನನ್ನನ್ನು ಹಾಗೆ ಕರೆಯಬೇಡಿ” ಎಂದು ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದಾನೆ. ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ವಿಷಾದ ವ್ಯಕ್ತಪಡಿಸಿ, ಸ್ಥಳದಲ್ಲೇ ಕ್ಷಮೆ ಕೋರಿದ್ದಾರೆ.

    ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಮಾಹೆ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿದೆ. ವಿವಿಯ ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದೆ. ಇದನ್ನೂ ಓದಿ: ಅದಾನಿ ಬಂದರು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ – 3 ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

    ಈ ಕುರಿತಾಗಿ ಮಾತನಾಡಿರುವ ವಿವಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಎಸ್.ಪಿ. ಕರ್, ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಕೊಡುತ್ತೇವೆ. ವಸುದೈವ ಕುಟುಂಬ ಎನ್ನುವ ನಾವು ಇಂತಹ ಘಟನೆಯನ್ನು ಖಂಡಿಸುತ್ತೇವೆ. ನಾವು ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡಿದ್ದೇವೆ. ಘಟನೆ ಬಳಿಕ ವಿದ್ಯಾರ್ಥಿಯೂ ಆತಂಕಕ್ಕೊಳಗಾಗಿದ್ದಾನೆ. ಈ ವೀಡಿಯೋವನ್ನು ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆಯಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

    ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

    ಉಡುಪಿ: ಹಿಜಬ್ ಹೋರಾಟಗಾರ್ತಿಯರಿಗೆ ಈಗಲೂ ಸಲಹೆ ನೀಡುತ್ತೇನೆ. ಒಂದು ಬಟ್ಟೆಯಿಂದ ಶಿಕ್ಷಣ ಅವಕಾಶದಿಂದ ವಂಚಿತರಾಗಬೇಡಿ. ನೀವು ಮತ್ತೆ ಹೋರಾಟ ಎಂದು ಬಾಯಿ ತೆಗೆದರೆ ಜನ ನಿಮಗೆ ಉಗೀತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿದ್ಯಾರ್ಥಿಗಳಿಗೆ ಎಚ್ಚರಿಸಿದ್ದಾರೆ.

    pramod mutalik

    ಉಡುಪಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಾಯಿಮುಚ್ಚಿ ಸುಮ್ಮನಿದ್ದರೆ ಉತ್ತಮ. ಹಿಜಬ್ ಹೋರಾಟಗಾರ್ತಿಯರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ರಾಜ್ಯದ ಎಲ್ಲ ಬೆಳವಣಿಗೆಗಳಿಗೆ ಈ ವಿದ್ಯಾರ್ಥಿನಿಯರೇ ಕಾರಣ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಂವಿಧಾನ, ನ್ಯಾಯಾಲಯ ಅಂತಿಮವೇ ಹೊರತು ಕುರಾನ್, ಶರಿಯತ್, ಬೈಬಲ್, ಭಗವದ್ಗೀತೆ ಅಂತಿಮವಲ್ಲ ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ? ಪ್ರಮೋದ್‌ ಮುತಾಲಿಕ್‌

    pramod mutalik

    ಸಂಘಟನೆಗಳು ನಿಮ್ಮನ್ನು ಬಲಿ ಕೊಡಲಿವೆ
    ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ನಿಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳಬೇಡಿ, ನಿಮ್ಮ ಹಿಂದೆ ಇರುವಂತಹ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ನಿಮ್ಮನ್ನು ಭಯಾನಕವಾಗಿ ಬಲಿಕೊಡಲಿವೆ. ನಿಮ್ಮ ಶಿಕ್ಷಣಕ್ಕೆ ಕಲ್ಲು ಹಾಕಲಿವೆ. ಎಲ್ಲವನ್ನೂ ಬಿಟ್ಟು ಪರೀಕ್ಷೆಗೆ ಹಾಜರಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    ಬಾಯಿಮುಚ್ಚಿ ಸುಮ್ಮನಿರುವುದು ಒಳ್ಳೆಯದು
    ಸಿಎಫ್‌ಐ, ಪಿಎಫ್‌ಐ ಕುಮ್ಮಕ್ಕು ಮುಸಲ್ಮಾನರಿಗೆ ಗೊತ್ತಾಗಿದೆ. ಮುಸಲ್ಮಾನರು, ಹಿಂದೂಗಳು ಚೀ.. ಥೂ.. ಅನ್ನುತ್ತಿದ್ದಾರೆ. ನ್ಯಾಯಾಲಯ ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಛೀಮಾರಿ ಹಾಕಿದೆ. ಈ ವಿದ್ಯಾರ್ಥಿಗಳು ಬಾಯಿ ಮುಚ್ಚಿ ಸುಮ್ಮನಿರುವುದು ಒಳ್ಳೆಯದು. ನೀವು ಮೌನವಾಗಿದ್ದಷ್ಟು ನಿಮ್ಮ ಮೇಲೆ ಸಮಾಜಕ್ಕೆ ಉತ್ತಮ ಭಾವನೆ ಬರುತ್ತದೆ. ನೀವು ಮತ್ತೆ ಬಾಯಿ ತೆರೆದರೆ ಜನ ನಿಮಗೇ ಉಗೀತಾರೆ ಎಂದು ಹೇಳಿದ್ದಾರೆ.

    pramod mutalik

    ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಹಿಂದೂ ಸಮಾಜದಿಂದ ಬರುತ್ತಿದೆ. ಮುಸಲ್ಮಾನರ ಅಹಂಕಾರಕ್ಕೆ ಹಿಂದೂ ಸಮಾಜದಿಂದ ಉತ್ತರಗಳು ಸಿಗುತ್ತಿವೆ. ಮುಸಲ್ಮಾನರ ಸೊಕ್ಕನ್ನು ಸಹನೆ ಮಾಡುವ ಹಿಂದೂ ಸಮಾಜ ಈಗ ಇಲ್ಲ. ಹಿಜಬ್ ಕೇಳಿದವರು ಬುರ್ಖಾ ಕೇಳ್ತಾರೆ, ನಾಳೆ ನಮಾಜಿಗೆ ಅವಕಾಶ ಕೊಡಿ ಅಂತಾರೆ, ನೀವು ಈ ದೇಶದ ಇಸ್ಲಾಮಿಕ್ ಭಾಗಗಳು. ನೀವು ಮಾತನಾಡಲು ಶುರು ಮಾಡಿದರೆ ಈ ಹೋರಾಟ ಮುಂದೆಯೂ ಬೆಳೆಯುತ್ತದೆ ಎಂದು ತಿಳಿಸಿದ್ದಾರೆ.

  • ಸಂಪ್ರದಾಯದಷ್ಟೇ ಪ್ರಾಂಶುಪಾಲರು, ಕಾಲೇಜು ನಮಗೆ ಮುಖ್ಯ- ಹಿಜಬ್ ತೆಗೆದು ಕ್ಲಾಸಿಗೆ ತೆರಳಿದ ವಿದ್ಯಾರ್ಥಿನಿ

    ಸಂಪ್ರದಾಯದಷ್ಟೇ ಪ್ರಾಂಶುಪಾಲರು, ಕಾಲೇಜು ನಮಗೆ ಮುಖ್ಯ- ಹಿಜಬ್ ತೆಗೆದು ಕ್ಲಾಸಿಗೆ ತೆರಳಿದ ವಿದ್ಯಾರ್ಥಿನಿ

    ಉಡುಪಿ: ಪ್ರಾಂಶುಪಾಲರು ನಮ್ಮನ್ನು ಸ್ವಂತ ಮಗಳಂತೆ ನೋಡಿಕೊಂಡಿದ್ದಾರೆ. ಪುಟ್ಟಿಪುಟ್ಟಿ ಎಂದು ನಮಗೆ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ನಾವು ನಮ್ಮ ಕಾಲೇಜಿನ ಜೊತೆ ನಿಲ್ಲುತ್ತೇವೆ. ನಮಗೆ ಶಿಕ್ಷಣ ಮುಖ್ಯ. ನಾವು ಹಿಜಬ್ ತೆಗೆದು ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಉಡುಪಿಯ ಜಿ. ಶಂಕರ್ ಡಿಗ್ರಿ ಕಾಲೇಜಿನ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ನಿರ್ಧಾರ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುನೈನಾ ರುಬಾ, ನಾನು ಸಂಪ್ರದಾಯಸ್ಥ ಮನೆಯ ಹುಡುಗಿ. ಸಂಪ್ರದಾಯ ಮನೆಯಲ್ಲಿ ಪಾಲಿಸುತ್ತೇನೆ. ನಮ್ಮ ಮತದಲ್ಲಿ ಹಿಜಬ್ ಧರಿಸದೇ ಇರಲು ಅವಕಾಶ ಇಲ್ಲ. ಕಾಲೇಜಿನ ನಿಯಮ ಕೂಡಾ ನಿಯಮವೇ ಅಲ್ವಾ? ಹಾಗಾಗಿ ಕ್ಲಾಸಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

    ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯ ಮಾಡಿದ್ದೇ ತಡ ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಗಾಗಿ ಹೋರಾಟ ಶುರು ಮಾಡಿದ್ದಾರೆ. ಆದರೆ ಉಡುಪಿಯ ಸರ್ಕಾರಿ ಡಿಗ್ರಿ ಕಾಲೇಜಿನ 40 ಮುಸ್ಲಿಂ ವಿದ್ಯಾರ್ಥಿನಿಯರ ನಿಲುವೇ ಬೇರೆ. ಪ್ರಾಂಶುಪಾಲರು ಸರ್ಕಾರ ಮತ್ತು ಹೈಕೋರ್ಟ್ ಮಧ್ಯಂತರ ಆದೇಶದ ವಿರುದ್ಧ ಮಾತನಾಡದೆ ಕಾಲೇಜಿನ ಲೈಬ್ರೇರಿ ಕ್ಯಾಂಟೀನಲ್ಲಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

    ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಲೇಜಿನಲ್ಲಿ ಹಿಜಾಬ್ ಧರಿಸದೇ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ನಮಗೆ ಆನ್ ಲೈನ್ ಕ್ಲಾಸ್ ಮಾಡಿ ಎಂದು 50 ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಭಾಸ್ಕರ್ ಶೆಟ್ಟಿಗೆ ವಿನಂತಿ ಮಾಡಿದರು. ಕಾಲೇಜಿನಲ್ಲಿ ಒಟ್ಟು 2376 ವಿದ್ಯಾರ್ಥಿನಿಯರು, ಅವರಲ್ಲಿ 196 ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಅವರಲ್ಲಿ ಕೇವಲ 40 ಮಂದಿ ನಿತ್ಯ ಹಿಜಬ್ ಧರಿಸುತ್ತಿದ್ದರು. ಬುಧವಾರ ಅರ್ಧದಷ್ಟು ಮಂದಿ ಮಾತ್ರ ಕಾಲೇಜಿಗೆ ಬಂದಿದ್ದಾರೆ. ಪ್ರಾಂಶುಪಾಲರು ವಿದ್ಯಾರ್ಥಿನಿಯರ ಜೊತೆ ಮಾತುಕತೆಯ ನಡೆಸಿದ ನಂತರ 20ಕ್ಕೂ ಹೆಚ್ಚು ಮಂದಿ ಹಿಜಬ್ ತೆಗೆದು ತರಗತಿಗೆ ತೆರಳಿದರು. ಇದನ್ನೂ ಓದಿ: ರಾಷ್ಟ್ರ ದ್ರೋಹಿ: ನಾನಲ್ಲ ರಾಷ್ಟ್ರದ್ರೋಹಿ ನೀನು – ವಿಧಾನಸಭೆಯಲ್ಲಿ ಡಿಕೆಶಿ vs ಈಶ್ವರಪ್ಪ

    ಕಾಲೇಜ್ ಕ್ಯಾಂಪಸ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಮಗೆ ಕ್ಯಾಂಪಸ್ ನ ಒಳಗೆ, ಕಾರಿಡಾರ್ ನಲ್ಲಿ ಹಿಜಬ್ ಧರಿಸಲು ಅವಕಾಶ ನೀಡಿದ್ದಾರೆ. ತರಗತಿಯಲ್ಲಿ ಮಾತ್ರ ಅವಕಾಶ ಇಲ್ಲ. ತರಗತಿ ಕೋಣೆಯಲ್ಲಿ ಹಿಜಬ್ ಧರಿಸದೇ ಕೂರಲು ನಮಗೆ ಸಾಧ್ಯವಿಲ್ಲ. ಆನ್ ಲೈನ್ ತರಗತಿ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ನಾವು ಒಪ್ಪಿ ಮನೆಗೆ ಹೋಗುತ್ತಿರುವುದಾಗಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ

  • ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಚೆಕ್ ನೀಡಿದ ಇಮ್ರಾನ್ ಪಾಷಾ

    ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಚೆಕ್ ನೀಡಿದ ಇಮ್ರಾನ್ ಪಾಷಾ

    ಮಂಡ್ಯ: ಕಾಲೇಜು ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಮನೆಗೆ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಭೇಟಿ ನೀಡಿ ಅವರಿಗೆ ಧೈರ್ಯ ಹೇಳಿ 1 ಲಕ್ಷ ರೂ. ಚೆಕ್ ನೀಡಿದ್ದಾರೆ.

    ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಹಿಂದು ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದರು. ಇಂದು ಇಮ್ರಾನ್ ಪಾಷಾ ಆಕೆಯ ಮನೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

    ನಿನ್ನೆ ನಡೆದ ಘಟನೆ ಬಗ್ಗೆ ಬೇಸರವಾಗಿದೆ. ಹೀಗಾಗಿ ಇಂದು ಮುಸ್ಕಾನ್ ಮನೆಗೆ ಭೇಟಿ ನೀಡಿ ಮಾತನಾಡಿದ್ದೇನೆ. ಅವರಿಗೆ ಧೈರ್ಯ ಹೇಳಿ 1 ಲಕ್ಷ ರೂ. ಚೆಕ್ ನೀಡಿದ್ದೇನೆ. ಘಟನೆ ಬಗ್ಗೆ ಅವರು ಕಾನೂನಾತ್ಮಕವಾಗಿ ಯಾವುದೇ ಕ್ರಮ ತೆಗೆದುಕೊಂಡರೂ ಅವರೊಂದಿಗೆ ನಾನು ಇರುತ್ತೇನೆ ಎಂದು ಇಮ್ರಾನ್ ಪಾಷಾ ತಿಳಿಸಿದ್ದಾರೆ.

    ಮುಸ್ಕಾನ್ ಕುಟುಂಬಕ್ಕೆ ಯಾರಾದರೂ ಹಲ್ಲೆ ಅಥವಾ ತೊಂದರೆ ಕೊಡಲು ಬಂದರೆ ಪೊಲೀಸ್ ಠಾಣೆಗೆ ದೂರು ಕೊಡಲು ಹೇಳಿದ್ದೇನೆ. ಸರ್ಕಾರದ ಜೊತೆ ಮಾತನಾಡಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಇರುತ್ತೇನೆ. ಜೈ ಶ್ರೀರಾಮ್ ಎಂದು ಕೂಗುವುದರಲ್ಲಿ ತಪ್ಪೇನಿಲ್ಲ. ಆದರೆ ಆ ವಿದ್ಯಾರ್ಥಿಗಳನ್ನು ಯಾರೋ ಪ್ರಚೋದನೆಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರು – ‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿ

    ಇದೇ ವೇಳೆ ಮುಸ್ಕಾನ್‍ಗೆ ಯೂತ್ ಐಕಾನ್ ಬಿರುದು ಹಾಗೂ ಕ್ಯಾಶ್ ಪ್ರೈಸ್ ಘೋಷಣೆ ವಿಚಾರವಾಗಿ ಮಾತನಾಡಿದ ಪಾಷಾ, ಒಳ್ಳೆಯ ಭಾವನೆ ಇಟ್ಟುಕೊಂಡು ಕೊಟ್ಟರೆ ಸರಿ. ಕೆಟ್ಟ ಉದ್ದೇಶದಿಂದ ಆ ರೀತಿ ಹಣ ನೀಡುವುದು ತಪ್ಪು. ಯಾರೂ ಮುಸ್ಕಾನ್‍ಗೆ ಹಣ ನೀಡಿಲ್ಲ. ಯಾರೋ ಬಂದು ಏನೋ ಕೊಟ್ಟರೆ ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳಬಾರದು. ಬಂದ ದುಡ್ಡನ್ನು ಬಡವರಿಗೆ ಕೊಡುತ್ತೇವೆ ಎಂದು ಮುಸ್ಕಾನ್ ಕುಟುಂಬ ಹೇಳಿದೆ ಎಂದು ಇಮ್ರಾನ್ ಪಾಷಾ ತಿಳಿಸಿದ್ದಾರೆ.

  • ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬಾರದು – AIMPLB ವಿರೋಧ

    ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬಾರದು – AIMPLB ವಿರೋಧ

    ನವದೆಹಲಿ: ಮಕ್ಕಳು ಸೂರ್ಯ ನಮಸ್ಕಾರ ಮಾಡಬೇಕೆಂಬ ಸರ್ಕಾರದ ಆದೇಶಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ವಿರೋಧಿಸಿದೆ. ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

    ಡಿಸೆಂಬರ್ 29 ರಂದುವಿಶ್ವವಿದ್ಯಾಲಯ ಅನುದಾನ ಆಯೋಗ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಪ್ರಯುಕ್ತ ದೇಶಾದ್ಯಂತ 30,000 ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳು ತ್ರಿವರ್ಣ ಧ್ವಜದ ಮುಂದೆ ಸೂರ್ಯ ನಮಸ್ಕಾರ ಮಾಡುವಂತೆ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ.4-5ರಂದು ರಾಜ್ಯ ಮಟ್ಟದ ಯುವಜನೋತ್ಸವ: ನಾರಾಯಣಗೌಡ

    ಈ ಬಾರಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ ಜನವರಿ 1 ರಿಂದ ಫೆಬ್ರವರಿ 7 ರವರೆಗೆ 30 ರಾಜ್ಯಗಳಿಂದ 30,000 ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳು  75 ಕೋಟಿ  ಸೂರ್ಯ ನಮಸ್ಕಾರ ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ.

    ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಲಿದ್ ಸೈಫುಲ್ಲಾ ರಹಮಾನಿ ಅವರು, ಸರ್ಕಾರ ಬಹುಸಂಖ್ಯಾತರ ಚಿಂತನೆ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಇದು ಅಸಂವಿಧಾನಿಕ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!

    ಇಸ್ಲಾಂ ಮತ್ತು ದೇಶದ ಇತರ ಅಲ್ಪಸಂಖ್ಯಾತರು ಸೂರ್ಯನನ್ನು ದೇವರೆಂದು ಪರಿಗಣಿಸುವುದಿಲ್ಲ ಮತ್ತು ಸೂರ್ಯನನ್ನು ಪೂಜಿಸುವುದಿಲ್ಲ. ಆದ್ದರಿಂದ ಅಂತಹ ಸೂಚನೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ದೇಶದ ಜಾತ್ಯತೀತ ಮೌಲ್ಯಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಪಾದಿಸಿದೆ.