Tag: Muslim Law

  • ಮುಸ್ಲಿಂ ಕಾನೂನಿನಲ್ಲಿ ಪೋಷಕರ ಅನುಮತಿಯಿಲ್ಲದೇ ಅಪ್ರಾಪ್ತೆ ವಿವಾಹವಾಗಬಹುದು: ಕೋರ್ಟ್‌

    ಮುಸ್ಲಿಂ ಕಾನೂನಿನಲ್ಲಿ ಪೋಷಕರ ಅನುಮತಿಯಿಲ್ಲದೇ ಅಪ್ರಾಪ್ತೆ ವಿವಾಹವಾಗಬಹುದು: ಕೋರ್ಟ್‌

    ನವದೆಹಲಿ: ಮುಸ್ಲಿಂ ಕಾನೂನು ಪ್ರಕಾರ, ಪೋಷಕರ ಅನುಮತಿಯಿಲ್ಲದೇ ಪ್ರೌಢಾವಸ್ಥೆಗೆ ಬಂದ ಅಪ್ರಾಪ್ತೆ ಮದುವೆಯಾಗಬಹುದು. ಅಲ್ಲದೇ ತನ್ನ ಪತಿಯೊಂದಿಗೆ ವಾಸಿಸುವ ಹಕ್ಕನ್ನು ಹೊಂದಿದ್ದಾಳೆ ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ.

    ರಕ್ಷಣೆ ಕೋರಿ ಮುಸ್ಲಿಂ ದಂಪತಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ. ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ಬಿಹಾರದ ಔರಿಯಾ ಜಿಲ್ಲೆಯಲ್ಲಿ ಮೊಹಮ್ಮದೀಯ ವಿಧಿಗಳ ಪ್ರಕಾರ ಈ ವರ್ಷದ ಆರಂಭದಲ್ಲಿ ವಿವಾಹವಾದ ಮುಸ್ಲಿಂ ದಂಪತಿಗಳಿಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಬಿಲ್ಕಿಸ್‌ ಬಾನು ಕೇಸ್‌ – ಅಪರಾಧಿಗಳ ಬಿಡುಗಡೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

    ಅಂತಹ ಪ್ರಕರಣಗಳಲ್ಲಿ ಮದುವೆಯ ನಂತರವೇ ದೈಹಿಕ ಸಂಪರ್ಕ ಹೊಂದಿದಾಗ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಅಪರಾಧ ಎನ್ನಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.

    ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪುರುಷನ ವಿರುದ್ಧ ಹುಡುಗಿಯ ಕುಟುಂಬದವರು ಎಫ್‌ಐಆರ್‌ ದಾಖಲಿಸಿ, ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು. ಇದೇ ವೇಳೆ ತಮಗೆ ರಕ್ಷಣೆ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಸ್ಲಿಂ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು.

    ಮದುವೆಯ ಸಮಯದಲ್ಲಿ ಹುಡುಗಿಗೆ 15 ವರ್ಷ 5 ತಿಂಗಳು ವಯಸ್ಸಾಗಿತ್ತು. ವಿವಾಹದ ಬಳಿಕ ಆಕೆ ಗರ್ಭಿಣಿಯಾಗಿದ್ದಳು. ಇದನ್ನೂ ಓದಿ: ಎಸಿಬಿ ರದ್ದು – ಹೈ ಆದೇಶಕ್ಕೆ ತಡೆ ಕೋರಿ ಸುಪ್ರೀಂನಲ್ಲಿ ಅರ್ಜಿ

    ಅರ್ಜಿದಾರರು ಒಬ್ಬರಿಗೊಬ್ಬರು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ವಿವಾಹದ ನಂತರ ದೈಹಿಕ ಸಂಬಂಧ ಹೊಂದಿರುವುದರಿಂದ, ಇದು ಲೈಂಗಿಕ ಶೋಷಣೆಯ ಪ್ರಕರಣವಲ್ಲ. ಇಬ್ಬರೂ ಪ್ರೀತಿಸಿ ವಿವಾಹವಾಗಿ ನಂತರ ದೈಹಿಕ ಸಂಬಂಧ ಹೊಂದಿದ್ದರಿಂದ ಈ ಪ್ರಕರಣಕ್ಕೆ ಪೋಕ್ಸೊ ಕಾಯ್ದೆಯನ್ನು ಅನ್ವಯಿಸಲಾಗುವುದಿಲ್ಲ ಎಂದು ಕೋರ್ಟ್‌ ಅಭಿಪ್ರಾಯಟ್ಟಿದೆ.

    ಅರ್ಜಿದಾರರು ಬೇರ್ಪಟ್ಟರೆ ತಾಯಿ ಮತ್ತು ಆಕೆಗೆ ಹುಟ್ಟಲಿರುವ ಮಗುವಿಗೆ ಹೆಚ್ಚಿನ ಆಘಾತವನ್ನು ಉಂಟುಮಾಡುತ್ತದೆ. ಈ ಪ್ರಕರಣದಲ್ಲಿ ಅರ್ಜಿದಾರರ ಹಿತಕಾಪಾಡುವುದು ಮುಖ್ಯ. ಪರಸ್ಪರ ಒಪ್ಪಿ ಮದುವೆಯಾಗಿ ಸಂತೋಷವಾಗಿದ್ದರೆ, ಅವರನ್ನು ಬೇರ್ಪಡಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಸಿಂಗ್‌ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ಕಾನೂನುಗಳು ಕುರಾನ್‌ಗೆ ವಿರುದ್ಧವಾಗಿವೆ – ರಶ್ದಿ ಮೇಲಿನ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದಿಷ್ಟು

    ಮುಸ್ಲಿಂ ಕಾನೂನುಗಳು ಕುರಾನ್‌ಗೆ ವಿರುದ್ಧವಾಗಿವೆ – ರಶ್ದಿ ಮೇಲಿನ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದಿಷ್ಟು

    ತಿರುವನಂತಪುರಂ: ಲೇಖಕ, ಖ್ಯಾತ ಕಾದಂಬರಿಕಾರರೂ ಆಗಿರುವ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಈ ಕೃತ್ಯಗಳಿಗೆ ಇಸ್ಲಾಮಿಕ್ ಹಣೆಪಟ್ಟಿ ಕಟ್ಟುವುದು ಸೂಕ್ತವಲ್ಲ. ಏಕೆಂದರೆ ಮುಸ್ಲಿಂ ಬಹುತೇಕ ಕಾನೂನುಗಳು ಕುರಾನ್ ಆಧರಿತವಾಗಿಲ್ಲ, ವಿರುದ್ಧವಾಗಿಯೇ ಇವೆ ಎಂದು ಹೇಳಿದ್ದಾರೆ.

    ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲಿನ ಮಾರಣಾಂತಿಕ ದಾಳಿ ಕುರಾನ್‌ನ ಬೋಧನೆಗಳಿಗೆ ವಿರುದ್ಧವಾಗಿದೆ. ಆದರೆ ಇಂತಹ ದಾಳಿಗಳಿಗೆ ಅವಕಾಶ ನೀಡುವ ಕಾನೂನುಗಳಿಗೆ ಮುಸ್ಲಿಂ ಕಾನೂನಿನ ಹಣೆಪಟ್ಟಿ ಕಟ್ಟಲಾಗಿದೆ. ದಿಯೋಬಂದ್ ಹಾಗೂ ನದ್ವಾತುಲ್ ಉಲೇಮಾದಂತಹ ಪ್ರಮುಖ ಮದರಸಾಗಳಲ್ಲಿನ ಪಠ್ಯ ಕ್ರಮದ ಭಾಗವಾಗಿವೆ ಎಂದು ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್‌ನಿಂದ ಬಿಡುಗಡೆ

    ಇಸ್ಲಾಂ ಹೆಸರಿನಲ್ಲಿ ಏನೇ ನಡೆದರೂ ಅದಕ್ಕೆ ಪುಸ್ತಕದ ಅನುಮೋದನೆ ಇರಬೇಕು. ಆದ್ರೆ ಈಗ ಮುಸ್ಲಿಂ ಸಾಮ್ರಾಜ್ಯದ ಅವಧಿಯಲ್ಲಿ ಬಂದಂತಹ ಕಾನೂನಿಗೆ ಅನುಗುಣವಾಗಿ ನಡೆಯುತ್ತಿದೆ. ಇವೆಲ್ಲಾ ದೇವ ವಿಶ್ವಾಸಿಗಳಿಗೆ ವ್ಯರ್ಥ ಹಾಗೂ ನೋಯಿಸುವ ಅಂಶಗಳಿಂದ ದೂರ ಇರುವಂತೆ ಹೇಳುವ ಕುರಾನ್ ಬೋಧನೆಗಳಿಗೆ ವಿರುದ್ಧವಾಗಿಯೇ ಇದೆ. ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ಎಂದು ಹೇಳುವುದು ಸೂಕ್ತವಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು

    ರಶ್ದಿ ಮೇಲಿನ ದಾಳಿಯಂತಹ ಕೃತ್ಯಗಳಿಗೆ ಅನುಮೋದನೆ ನೀಡುವ ಕಾನೂನನ್ನು ಮುಸ್ಲಿಂ ಕಾನೂನು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಸಮಸ್ಯೆ ಏನಾಗಿದೆ ಎಂದರೆ ಮುಸ್ಲಿಂ ಕಾನೂನು ಎಂದು ಹೇಳುತ್ತಿರುವುದು ಬಹುತೇಕ ಕುರಾನ್ ಆಧರಿತವಾಗಿಲ್ಲ. ಅಂದಿನ ಸರ್ಕಾರಗಳಲ್ಲಿದ್ದ ವ್ಯಕ್ತಿಗಳು ನಿರ್ಮಿಸಿರುವಂತಹ ನಿಬಂಧನೆಗಳಾಗಿವೆ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]