Tag: muslim girl

  • ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ – ಅಪ್ರಾಪ್ತ ಸೇರಿ ಐವರ ಬಂಧನ

    ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ – ಅಪ್ರಾಪ್ತ ಸೇರಿ ಐವರ ಬಂಧನ

    ಬೆಂಗಳೂರು: ಇತ್ತೀಚೆಗೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ (Muslim Girl) ಮೇಲೆ ನೈತಿಕ ಪೊಲೀಸ್‌ಗಿರಿ ಎಸಗಿದ್ದ ವೀಡಿಯೋ ಒಂದು ವೈರಲ್ ಆಗಿತ್ತು. ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಮಾತನಾಡುತ್ತ ಕುಳಿತಿದ್ದ ಯುವತಿಯನ್ನ ನಿಂದಿಸಿ ಹಲ್ಲೆಗೆ ಯತ್ನಿಸಿದ್ದ ಅಪ್ರಾಪ್ತ ಯುವಕ ಸೇರಿ ಐವರನ್ನ ಚಂದ್ರಾಲೇಔಟ್ ಪೊಲೀಸರು (Chandra Layout Police) ಬಂಧಿಸಿದ್ದಾರೆ.

    ಮಹೀಮ್, ಅಫ್ರೀದಿ, ವಾಸೀಮ್, ಅಂಜುಮ್ ಬಂಧಿತರು. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತನ ಜೊತೆ ಬುರ್ಖಾ ಧರಿಸಿ ಬೈಕ್‌ನಲ್ಲಿ ಯುವತಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಐವರು ಮುಸ್ಲಿಂ ಯುವಕರ ಗುಂಪು, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಯಾಕೆ ಕೂತಿದ್ಯಾ? ನಿನಗೆ ಮಾನ ಮರ್ಯಾದೆ ಇಲ್ವಾ? ನಿಮ್ಮ ಮನೆಯವರ ಫೋನ್ ನಂಬರ್ ಕೊಡು ಎಂದು ಕ್ಯಾತೆ ತೆಗೆದಿದ್ದರು. ಇದನ್ನೂ ಓದಿ: ಅನ್ಯಕೋಮಿನ ಯುವತಿ ತನ್ನ ಗೆಳೆಯನ ಜೊತೆ ಕುಳಿತಿದ್ದಕ್ಕೆ ಕಿರಿಕ್!

    ಆ ಸಂದರ್ಭದಲ್ಲಿ ಯುವತಿ, ನನ್ನ ಕ್ಲಾಸ್‌ಮೇಟ್ ಜೊತೆ ನಾನು ಮಾತನಾಡುತ್ತಿದ್ದೇನೆ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಪ್ರತ್ಯುತ್ತರ ನೀಡಿದ್ದಳು. ಯುವತಿ ಜೊತೆಗಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ, ಆರೋಪಿಗಳು ಯುವಕ ಹಾಗೂ ಯುವತಿಯು ಬೈಕ್‌ನಲ್ಲಿ ಕೂತು ಮಾತನಾಡುತ್ತಿದ್ದ ವೀಡಿಯೋ ವೈರಲ್ ಮಾಡಿದ್ದರು. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    ಸದ್ಯ ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಐವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಕಾಶದಲ್ಲೇ ತುಂಡಾದ ಹೆಲಿಕಾಪ್ಟರ್‌ನ ಫ್ಯಾನ್‌ – ಐವರು ದುರ್ಮರಣ

  • ಅನ್ಯಕೋಮಿನ ಯುವತಿ ತನ್ನ ಗೆಳೆಯನ ಜೊತೆ ಕುಳಿತಿದ್ದಕ್ಕೆ ಕಿರಿಕ್!

    ಅನ್ಯಕೋಮಿನ ಯುವತಿ ತನ್ನ ಗೆಳೆಯನ ಜೊತೆ ಕುಳಿತಿದ್ದಕ್ಕೆ ಕಿರಿಕ್!

    ಬೆಂಗಳೂರು: ಮುಸ್ಲಿಂ ಯುವತಿ (Muslim Girl) ತನ್ನ ಗೆಳೆಯನ ಜೊತೆ ಬೈಕ್‌ ಮೇಲೆ ಕುಳಿತಿದ್ದಕ್ಕೆ ಪುಂಡರ ಗ್ಯಾಂಗ್‌ವೊಂದು ಕಿರಿಕ್‌ ಮಾಡಿ, ಯುವಕನ ಮೇಲೂ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಕಾಲೇಜು ಯುವತಿ (College Girl) ಬೈಕ್‌ ಮೇಲೆ ತನ್ನ ಗೆಳೆಯನ ಬಳಿ ಕುಳಿತಿದ್ದಳು. ಈ ವೇಳೆ ಅಲ್ಲಿಗೆ ಬಂದ ಪುಂಡರ ಗ್ಯಾಂಗ್‌ ಕಿರಿಕ್‌ ಮಾಡಿದೆ. ಕಾಲೇಜಿಗೆ ಹೋಗೋದು ಬಿಟ್ಟು ಇಲ್ಲಿ ಕೂತಿದ್ಯಾ..? ನಿಮ್ಮ ಅಪ್ಪ ಅಮ್ಮನ ನಂಬರ್ ಕೊಡು.. ಮುಸ್ಲಿಂ ಆಗಿ ಈ ರೀತಿ ಮಾಡ್ತಿದ್ಯಾ..? ಇದೇನಾ ನಿಮ್ಮ ಮನೆಯಲ್ಲಿ ಹೇಳಿಕೊಟ್ಟಿದ್ದು ಅಂತ ಪುಂಡರು ಕಿರಿಕ್‌ ಮಾಡಿದ್ದಾರೆ.

    ಅಲ್ಲದೇ ಆ ಯುತಿಯ ಗೆಳೆಯನಿಗೂ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ʻನಮ್ಮ ಮೋದಿʼ ಎನ್ನುವ ಪೇಜ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಇದು ನೈತಿಕ ಪೊಲೀಸ್ ಗಿರಿ ಅಲ್ವಾ ಸಿಎಂ ಸಿದ್ದರಾಮಯ್ಯನವರೇ? ರಾಜ್ಯದಲ್ಲಿ ಷರಿಯಾ ಕಾನೂನಿ ಜಾರಿ ಮಾಡಲಾಗಿದೆಯೇ? ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಸದ್ಯ ಪೊಲೀಸರು ವಿಡಿಯೋ ಮೂಲದ ಬೆನ್ನುಹತ್ತಿದ್ದು, ಕಿರಿಕ್‌ ಮಾಡಿದ ಪುಂಡರಿಗಾಗಿ ಶೋಧ ನಡೆಸಿದ್ದಾರೆ.

  • ಪ್ರೀತಿ ನಿರಾಕರಿಸಿದ ಯುವತಿ – ನಡು ರಸ್ತೆಯಲ್ಲೇ ಕೊಂದ ಪಾಗಲ್ ಪ್ರೇಮಿ

    ಪ್ರೀತಿ ನಿರಾಕರಿಸಿದ ಯುವತಿ – ನಡು ರಸ್ತೆಯಲ್ಲೇ ಕೊಂದ ಪಾಗಲ್ ಪ್ರೇಮಿ

    ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ  (Davanagere) ಹಾಡಹಗಲೇ ಭೀಕರ ಕೊಲೆಗಳಾಗುತ್ತಿವೆ. ಇಂತಹ ದೃಶ್ಯಗಳನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನ (Girl) ನಡು ರಸ್ತೆಯಲ್ಲಿ ತಡೆದು ನಿಲ್ಲಿಸಿ, ಮನಬಂದಂತೆ ಚುಚ್ಚಿ-ಚುಚ್ಚಿ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

    ದಾವಣಗೆರೆ ನಗರದ ಬಿ.ಜೆ ಬಡಾವಣೆಯ ಚರ್ಚ್ ಮುಂಭಾಗ ಯುವತಿಯನ್ನ ಕೊಂದಿರುವ ಪಾಗಲ್ ಪ್ರೇಮಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

    ಇಲ್ಲಿನ ವಿನೋಭ ನಗರದ ನಿವಾಸಿ ಚಾಂದ್ ಸುಲ್ತಾನಾ ದಾವಣಗೆರೆ ವಿವಿಯಲ್ಲಿ ಎಂಕಾಂ ಪದವಿ ಮುಗಿಸಿ ತೆರಿಗೆ ಸಲಹೆಗಾರರಾದ ಕೆ.ಮಹ್ಮದ್ ಭಾಷಾ ಅವರ ಬಳಿ ಸಿ.ಎ.ಗಾಗಿ ತೆರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಳು. ಇದನ್ನೂ ಓದಿ: ‘ಪಠಾಣ್’ ಮತ್ತೊಂದು ಸಾಂಗ್ ರಿಲೀಸ್ : ಡ್ಯಾನ್ಸ್ ಮೆಚ್ಚಿಕೊಂಡ ಡಿಪ್ಪಿ-ಶಾರುಖ್ ಫ್ಯಾನ್ಸ್

    ಅಷ್ಟರಲ್ಲೇ ದುಷ್ಟ ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬವನು, ಚಾಂದ್ ಸುಲ್ತಾನಾಳನ್ನ ಮದುವೆಯಾಗಲು (Marriage) ಬಯಸಿದ್ದ. ಆದ್ರೆ ಕುಟುಂಬದ ಸದಸ್ಯರು ಹಾಗೂ ಸುಲ್ತಾನಾ ನಿರಾಕರಿಸಿ ಮತ್ತೊಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಸಾದತ್ ಕೋಪಗೊಂಡಿದ್ದಾನೆ. ಮರುದಿನ ಸುಲ್ತಾನ ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಮಾತನಾಡಬೇಕು ಎಂದು ನಿಲ್ಲಿಸಿ, ನಟ್ಟ ನಡು ರಸ್ತೆಯಲ್ಲೇ ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಂದಿದ್ದಾನೆ.

    ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಚಾಂದ್ ಸುಲ್ತಾನ ಮನೆಗೆ ಒಬ್ಬಳೇ ಮಗಳು. ಹೇಗೋ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕುಟುಂಬದವರಿಗೆ ಕೊಲೆಯ ವಿಚಾರ ತಿಳಿದು, ಕೊಲೆಗಾರನನ್ನ ಹುಡುಕಾಡುವಷ್ಟರಲ್ಲೇ ಸಾದತ್ ವಿಷ ಸೇವಿಸಿ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬಾಲಕಿ ವಯಸ್ಕಳಾದ್ರೂ ಪೋಕ್ಸೋ ಅನ್ವಯ: ಹೈಕೋರ್ಟ್

    ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬಾಲಕಿ ವಯಸ್ಕಳಾದ್ರೂ ಪೋಕ್ಸೋ ಅನ್ವಯ: ಹೈಕೋರ್ಟ್

    ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಬಾಲಕಿ ವಯಸ್ಕಳಾದರೂ ಆಕೆಯ ಮೇಲಿನ ದೌರ್ಜನ್ಯ ತಡೆಯಲು ಪೋಕ್ಸೋ ಅನ್ವಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

    ತಾನು ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಆರೋಪಿಸಲಾಗಿರುವ ಬಾಲಕಿಯು ಮೈನೆರೆದಿದ್ದು, ಆಕೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಯಸ್ಕಳಾಗಿದ್ದಾಳೆ. ಹೀಗಾಗಿ ಪೋಕ್ಸೊ ಕಾಯ್ದೆ ತನಗೆ ಅನ್ವಯಿಸದು ಎಂದು ವಾದಿಸಿದ್ದ ಆರೋಪಿಯ ವಾದವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. ಇದನ್ನೂ ಓದಿ: `ಪವಿತ್ರ’ಪ್ರೇಮ ವಿಫಲ – ಯುವಕ ಕೈಕೊಟ್ಟನೆಂದು ಕಾಲೇಜಿನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು

    ಪೋಕ್ಸೊ ಕಾಯ್ದೆಗೆ ಸಂಪ್ರದಾಯದ ಕಾನೂನು ಅನ್ವಯಿಸುವುದಿಲ್ಲ. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಮಕ್ಕಳ ಎಳೆಯ ಪ್ರಾಯ ರಕ್ಷಿಸಿ, ಅವರ ಮೇಲಿನ ದೌರ್ಜನ್ಯ ಹಾಗೂ ದುರ್ಬಳಕೆ ತಪ್ಪಿಸಲು ಮತ್ತು ಅವರ ಯೌವ್ವನವನ್ನು ಶೋಷಣೆಯಿಂದ ಪಾರು ಮಾಡುವುದು ಕಾನೂನಿನ ಉದ್ದೇಶ. ಹೀಗಾಗಿ ಸಂತ್ರಸ್ತೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಯಸ್ಕಳಾಗಿದ್ದು ಕಠಿಣವಾದ ಪೋಕ್ಸೊ ಕಾಯ್ದೆ ಅನ್ವಯಿಸದು ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಪೀಠ ಹೇಳಿದೆ.

    ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧ), 506 (ಕ್ರಿಮಿನಲ್ ಬೆದರಿಕೆ), 406 (ನಂಬಿಕೆ ದ್ರೋಹ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿ ಎಫ್‌ಐಆರ್ ದಾಖಲಿಸಿರುವುದನ್ನು ವಜಾ ಮಾಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ನ್ಯಾಯಾಲಯ ಈಚೆಗೆ ನಡೆಸಿತು. ಇದನ್ನೂ ಓದಿ: ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್

    ಏನಿದು ಘಟನೆ?
    ಈಚೆಗೆ ಬಾಲಕಿಯ ಮನೆಗೆ ತೆರೆಳಿದ್ದ ಆರೋಪಿಯು ಆಕೆಯನ್ನು ವಿವಾಹ ಮಾಡಿಕೊಡುವಂತೆ ಬಾಲಕಿಯ ಪೋಷಕರನ್ನು ಕೋರಿದ್ದ. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಆಕೆಯನ್ನು ವಿವಾಹ ಮಾಡಿಕೊಡುವ ಷರತ್ತಿನೊಂದಿಗೆ ಪೋಷಕರು ಒಪ್ಪಿಕೊಂಡಿದ್ದರು. ಅದಕ್ಕಾಗಿ ಬಾಲಕಿ ಕುಟುಂಬಸ್ಥರು ಹಲವು ಉಡುಗೊರೆಯ ಜೊತೆಗೆ 10 ಲಕ್ಷ ರೂಪಾಯಿಯನ್ನೂ ವರದಕ್ಷಿಣೆಗೆಂದು ನೀಡಿದ್ದರು. ಈನಡುವೆ ಆರೋಪಿಯು 16 ವರ್ಷದ ಬಾಲಕಿಯ ಜೊತೆ ಲೈಂಗಿಕ ಸಂಪರ್ಕ ಸಾಧಿಸಿದ್ದ ನಂತರ ಆಕೆಯನ್ನು ವಿವಾಹವಾಗಲು ನಿರಾಕರಿಸಿದ್ದ. ಇದರಿಂದಾಗಿ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ಲಕ್ನೋ: ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬಳು ಲಕ್ನೋ ವಿಶ್ವವಿದ್ಯಾನಿಲಯದ (ಎಲ್‍ಸಿ) ಸ್ನಾತಕೋತ್ತರ ಪದವಿಯ (ಎಂಎ) ಸಂಸ್ಕೃತ ವಿಷಯದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

    ಲಕ್ನೋ ವಿಶ್ವವಿದ್ಯಾನಿಲಯದ (ಎಲ್‍ಸಿ) ವಿದ್ಯಾರ್ಥಿನಿ ಗಜಲ ಅವರಿಗೆ ಪ್ರೋ. ಶಶಿ ಶುಕ್ಲಾ ಪದಕಗಳನ್ನು ಪ್ರದಾನ ಮಾಡಿದರು. ಕಳೆದ ವರ್ಷ ನವೆಂಬರ್‍ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳಿಗೆ ಪದಕ ನೀಡಲು ಸಾಧ್ಯವಾಗಿರಲಿಲ್ಲ.

    ದಿನಗೂಲಿ ಕಾರ್ಮಿಕನ ಮಗಳಾಗಿರುವ ಗಜಲ, 5 ಭಾಷೆಯನ್ನು (ಇಂಗ್ಲಿಷ್, ಹಿಂದಿ, ಉರ್ದು, ಅರೆಬೀಕ್, ಸಂಸ್ಕೃತ) ಬಲ್ಲವಳಾಗಿದ್ದಾಳೆ. 10ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ನಿಧನರಾದರು. ಬಳಿಕ ಶಿಕ್ಷಣ ಮುಂದುವರಿಸಲು ತೊಂದರೆ ಎದುರಾಗಿತ್ತು. ಆದರೆ ಇಬ್ಬರು ಸಹೋದರರ ಬೆಂಬಲದಿಂದ ಶಿಕ್ಷಣ ಮುಂದುವರಿಸಲು ಗಜಲಳಿಗೆ ಸಾಧ್ಯವಾಯಿತು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಸಂಸ್ಕೃತ ವಿಷಯವನ್ನು ಏಕೆ ಆರಿಸಿದ್ದೀರಿ ಎಂದು ಕೇಳಿದಾಗ, ದೇವರ ಸ್ವಂತ ಭಾಷೆಯಾಗಿರುವ ಸಂಸ್ಕೃತ ಎಲ್ಲ ಭಾಷೆಗಳಿಗೆ ತಾಯಿ. ಇದು ದೈವಿಕವಾಗಿದ್ದು, ಸಾಹಿತ್ಯವಾಗಿದೆ. ಸಂಸ್ಕೃತ ಕಾವ್ಯವು ಹೆಚ್ಚು ಮಧುರವಾಗಿದೆ. ಈ ಪದಕಗಳನ್ನು ನನ್ನಿಂದಾಗಿ ಅಲ್ಲ, ನನ್ನ ಸಹೋದರಾದ ಶದಾಬ್ ಹಾಗೂ ನಬಾವ್ ಅವರ ಸಹಾಯದಿಂದ ಗಳಿಸಲು ಸಾಧ್ಯವಾಗಿದೆ. ಅವರಿಬ್ಬರು ಸಣ್ಣ ವಯಸ್ಸಿನಲ್ಲಿಯೇ ಗ್ಯಾರೇಜ್‍ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ನನಗೆ ಅಧ್ಯಯನ ಮುಂದುವರಿಸಲು ಸಾಧ್ಯವಾಯಿತು. ಗಜಲಗೆ ತಾಯಿ ನಸ್ರೀನ್ ಬಾನು ಹಾಗೂ ಸಹೋದರಿ ಯಾಸ್ಮೀನ್ ಕೂಡಾ ಇದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಸಂಸ್ಕೃತ ಪ್ರಾಧ್ಯಾಪಕಿಯಾಗುವ ಗುರಿ ಎಂದಿದ್ದಾರೆ.

  • ಪೊಲೀಸರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಯುವತಿ

    ಪೊಲೀಸರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಯುವತಿ

    – ಯುವತಿಯ ಆಸೆ ಈಡೇರಿಸಿದ ಪೊಲೀಸರು

    ಕಾರವಾರ: ಕೊರೊನಾ ವಾರಿಯರ್ಸ್ ಎಂದೇ ಗುರುತಿಸಿಕೊಂಡಿರುವ ಪೊಲೀಸರು ಕೂಡಾ ಈ ಮಹಾಮಾರಿ ಹಬ್ಬದಂತೆ ತಡೆಗಟ್ಟುವಲ್ಲಿ ವೈದ್ಯರ ಜೊತೆ ಅವಿರತ ಶ್ರಮ ನಡೆಸುತ್ತಿದ್ದಾರೆ.

    ತನ್ನ ಕುಟುಂಬದಿಂದ ದೂರ ಉಳಿದು ಸಮಾಜದ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರ ಈ ಶ್ಲಾಘನೀಯ ಕಾರ್ಯಕ್ಕೆ ಮೆಚ್ಚಿ ಯುವತಿಯೋರ್ವಳು ತನ್ನ ಹುಟ್ಟುಹಬ್ಬವನ್ನು ತುಂಬಾ ಸಿಂಪಲ್ಲಾಗಿ ಪೊಲೀಸರ ಜೊತೆಯಲ್ಲೇ ಆಚರಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದಳು. ಇದಕ್ಕೆ ಆಕೆಯ ಕುಟುಂಬ ಸಹ ಒಪ್ಪಿತ್ತು. ಆದರೇ ಲಾಕ್‍ಡೌನ್ ಸಂದರ್ಭದಲ್ಲಿ ಇದು ಸಾಧ್ಯನಾ ಎಂದು ಕಾರವಾರದ ಪೊಲೀಸರಲ್ಲಿ ವಿನಂತಿ ಮಾಡಿದ್ದ ಕುಟುಂಬಕ್ಕೆ ಕಾರವಾರದ ಪೊಲೀಸರು ಸ್ಪಂದಿಸಿದ್ದಾರೆ.

    ಹೌದು ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಕಾಜುಬಾಗ್‍ನಲ್ಲಿರುವ ಜಮೀರ್ ಶಾಪಿಂಗ್ ಮಾಲ್ ಕಾಂಪ್ಲೆಕ್ಸ್ ನ ಆಯಿಶಾ ಮೊಹಮ್ಮದ್ ಅವರು ಕಾರವಾರ ನಗರ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜೊತೆ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡಿದ್ದಾರೆ.

    ತಮ್ಮ ಕರ್ತವ್ಯ ಪ್ರಜ್ಞೆಯ ಮೂಲಕ ಜನರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿರುವುದಲ್ಲದೇ, ದಿನದ 24 ಗಂಟೆಯೂ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರ ಸೇವೆಯನ್ನು ಯುವತಿ ಶ್ಲಾಘಿಸಿದ್ದಾರೆ. ಇದರ ಜೊತೆಗೆ ಪೊಲೀಸರ ಜೊತೆಯೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಈಕೆಯ ಆಸೆಯನ್ನು ನಿರಾಸೆಗೊಳಿಸದೇ ಕಾರವಾರ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಯುವತಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ತಮ್ಮ ಠಾಣೆಯಲ್ಲಿ ಅವಕಾಶ ನೀಡಿದ್ದಾರೆ.

    ಈ ಮೂಲಕ ಠಾಣೆಯ ಸಿಬ್ಬಂದಿ ಮತ್ತು ಪೊಲೀಸರು ಸೇರಿ ಯುವತಿಯ ಹುಟ್ಟುಹಬ್ಬ ಮಾಡಿದ್ದಾರೆ. ಪೊಲೀಸರು ಕೂಡ ಎಂತಹ ಕ್ಲಿಷ್ಟಕರ ದಿನದಲ್ಲಿಯೂ ಜನರೊಂದಿಗೆ ಪ್ರೀತಿಯಿಂದ ಸ್ಪಂದಿಸುತ್ತಾರೆ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಯುವತಿ ತಮ್ಮ ತಂದೆ ಜೊತೆ ಬಂದು ಕೇಕ್ ಕಟ್ ಮಾಡಿ ವಾಪಸ್ ಹೋಗಿದ್ದಾರೆ.

  • ಯಕ್ಷಗಾನ ವೇಷದಲ್ಲಿ ಅಬ್ಬರಿಸಿದ ಮುಸ್ಲಿಂ ಯುವತಿ

    ಯಕ್ಷಗಾನ ವೇಷದಲ್ಲಿ ಅಬ್ಬರಿಸಿದ ಮುಸ್ಲಿಂ ಯುವತಿ

    ಮಂಗಳೂರು: ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಆದರೆ ಮುಸ್ಲಿಂ ಯುವತಿಯೊಬ್ಬರು ಯಕ್ಷಗಾನ ವೇಷ ಹಾಕಿ ರಕ್ಕಸನ ವೇಷದಲ್ಲಿ ಅಬ್ಬರಿಸಿದ್ದು ಎಲ್ಲರನ್ನು ನಿಬ್ಬೆರೆಗಾಗಿಸಿದ್ದಾರೆ.

    ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಯಕ್ಷಗಾನದಲ್ಲಿ ವೇಷ ಹಾಕಿಕೊಂಡು ಕುಣಿಯುವುದು ಮಾಮೂಲಿ ವಿಚಾರವಲ್ಲ. ಆದರೆ ದಕ್ಷಿಣ ಕನ್ನಡದ ಬಂಟ್ವಾಳದ ವಿಟ್ಲ ನಿವಾಸಿ ಮುಸ್ಲಿಂ ಹುಡುಗಿ ಅರ್ಷಿಯಾ ಅವರು ಇತ್ತೀಚೆಗೆ ಯಕ್ಷಗಾನಕ್ಕೆ ಸೇರಿ ಸಾಕಷ್ಟು ಪ್ರದರ್ಶನಗಳನ್ನು ನೀಡಿದ್ದು, ಜನಪ್ರಿಯ ಕಲಾವಿದರು ಎಂದೇ ಹೆಸರುವಾಸಿಯಾಗಿದ್ದಾರೆ.

    ಪ್ರಸ್ತುತ ಇವರು ಆಟೋಮೊಬೈಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅರ್ಷಿಯಾ ಅವರು ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನೂರಿನಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರದಿಂದ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದ್ದಾರೆ. ಅಂದಿನಿಂದ ಅರ್ಷಿಯಾ ಅವರು ಯಕ್ಷಗಾನ ಕಲಾ ಪ್ರಕಾರ, ಪಾತ್ರ, ಚೆಂಡೆ ಧ್ವನಿಯಿಂದ ಆಕರ್ಷಿತರಾಗಿದ್ದು, ಈ ಮೂಲಕ ಕಲಾಪ್ರಕಾರವನ್ನು ಕಲಿಯಲು ಇಚ್ಚಿಸಿದ್ದರು.

    10ನೇ ವಯಸ್ಸಿನಲ್ಲಿ ತನ್ನೂರಾದ ವಿಟ್ಲದಲ್ಲಿ ಯಕ್ಷಗಾನವನ್ನು ಪ್ರಾರಂಭಿಸಿದ್ದು, ಶಾಲೆಯ ವಾರ್ಷಿಕೋತ್ಸವದ ಸಂದರ್ಭ ಶಾಲಾ ಶಿಕ್ಷಕಿಯೊಬ್ಬರು ತನಗೆ ಯಕ್ಷಗಾನವನ್ನು ಕಲಿಸಿದ್ದರು ಎಂದು ಅರ್ಷಿಯಾ ನೆನಪಿಸಿಕೊಳ್ಳುತ್ತಾರೆ. ಅರ್ಷಿಯಾ ಶ್ರೀದೇವಿ ಮಹಾತ್ಮೆ ಪ್ರಸಂಗ, ನಿಶಂಭಾಸುರ, ರಕ್ತಬೀಜಾಸುರ ಹಾಗೂ ಮಹಿಷಾಸುರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಸ್ಲಿಂ ಸಮುದಾಯದ ಯುವತಿ ಹಿಂದೂ ಧಾರ್ಮಿಕ ಪುರಾಣಗಳನ್ನು ಕರಗತ ಮಾಡಿಕೊಂಡು ಯಕ್ಷಗಾನ ಪಾತ್ರ ಮಾಡಿದ್ದು ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 16ರ ಮುಸ್ಲಿಂ ಬಾಲಕಿ

    ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 16ರ ಮುಸ್ಲಿಂ ಬಾಲಕಿ

    ಬಾಗಲಕೋಟೆ: ದೈಹಿಕ ಸಮಸ್ಯೆ ನೀಗಿಸಿಕೊಳ್ಳಲು ಆರಂಭಿಸಿದ ಯೋಗವೇ ಈಗ ಹದಿನಾರರ ಹರೆಯದ ಮುಸ್ಲಿಂ ಬಾಲಕಿಯನ್ನು ಇಡೀ ಊರೇ ಪ್ರಶಂಸಿಸುವಂತೆ ಮಾಡಿದೆ. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆದು ಕೊಂಡಿದ್ದಾಳೆ.

    ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ್ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಖುಷ್ಬು ಮುರ್ತಿಸಾಬ್ ಹವಾಲ್ದಾರ್ ಯೋಗ ಸಾಧಕಿ. ಗ್ರಾಮೀಣ ಭಾಗದ ಬಾಲಕಿ ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಾದರೂ ಯೋಗದಲ್ಲಿ ಸಾಧನೆ ಮಾಡಿದ್ದಾಳೆ.

    ಬೆಳಗಾವಿ ವಿಭಾಗದಿಂದ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಹದಿನಾರರ ಬಾಲಕಿಯ ಸಾಧನೆಗೆ ತಂದೆ ತಾಯಿ ಹಾಗೂ ಇಡೀ ಶಾಲಾ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಖುಷ್ಬು ರುಶ್ಚಿಕಾಸನ, ಲಿಖಿರಾಸನ, ತ್ರಿಪುರಾಸನ, ಹೀಗೆ ಸಾಕಷ್ಟು ಯೋಗ ಪ್ರಕಾರದ ಆಸನಗಳನ್ನು ಕಲಿತಿದ್ದಾಳೆ.

    ಖುಷ್ಬುಗೆ ಯೋಗ ಅಂದರೆ ತುಂಬಾ ಇಷ್ಟ. ಅಷ್ಟೇ ಅಲ್ಲದೇ ಆರೋಗ್ಯ ಸಮಸ್ಯೆ ಇದುದ್ದರಿಂದ ಯೋಗ ಮಾಡೋಕೆ ಆರಂಭಿಸಿದ್ದಳು. ಈಗ ರಾಷ್ಟ್ರ ಮಟ್ಟದ ಸಾಧನೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾಳೆ. ಖುಷ್ಬು ಯೋಗ ಸಾಧನೆಗೆ ಪ್ರೇರಕವಾಗಿದ್ದು ವಿಜಯ ಮಹಾಂತೇಶ್ ಪ್ರೌಢಶಾಲೆಯ ದೈಹಿಕ ತರಬೇತಿ ಶಿಕ್ಷಕರಾದ ಎಂಎಸ್ ಮಾವಿನಕಾಯಿ. ಇವರು ಯೋಗದಲ್ಲಿ ಎಂ.ಫಿಲ್ ಮಾಡಿರುವ ಶಿಕ್ಷಕರಾಗಿದ್ದು, ಅವರು ಖುಷ್ಬು ಯೋಗಶ್ರದ್ಧೆ ನೋಡಿ ಸೂಕ್ತ ಕಲಿಕೆ ನೀಡಿದ್ದಾರೆ. ಇದರಿಂದ ತಮ್ಮ ಶಿಷ್ಯೆ ಖುಷ್ಬು ಯೋಗದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ ಎಂದು ಶಾಲಾ ಮುಖ್ಯ ಶಿಕ್ಷಕ ದಯಾನಂದ್ ಪಾಟೀಲ್ ಹೇಳಿದ್ದಾರೆ.


    ಖುಷ್ಬು ಚಿನ್ನದ ಪದಕ ಪಡೆದಿರುವುದು ತಮಗೆ ಖುಷಿ ತಂದಿದೆ. ಖುಷ್ಬು ಯೋಗ ಸಾಧನೆಯಿಂದ ರಾಜ್ಯ ಹಾಗೂ ಶಾಲೆಗೂ ಸಹ ಹೆಮ್ಮೆ ತರುವಂತೆ ಮಾಡಿದ್ದಾಳೆ. ಕೇವಲ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖುಷ್ಬು ಸಾಧನೆ ಮಾಡಲಿ ಎಂದು ದೈಹಿಕ ತರಬೇತಿ ಶಿಕ್ಷಕ ಎಂ.ಎಸ್ ಮಾವಿನಕಾಯಿ ತಮ್ಮ ಆಶಯವನ್ನ ವ್ಯಕ್ತಪಡಿಸಿದ್ದಾರೆ.

    ಖುಷ್ಟು ಹವಾಲ್ದಾರ್ ಎಂಬ ಪ್ರತಿಭಾವಂತ ವಿದ್ಯಾರ್ಥಿನಿ ಯೋಗಾಭ್ಯಾಸದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಜಿಲ್ಲೆ ಹಾಗೂ ರಾಜ್ಯದ ಹೆಸರನ್ನ ಬೆಳಗುವಂತೆ ಮಾಡಲಿ ಅನ್ನೋದೆ ಎಲ್ಲರ ಆಶಯವಾಗಿದೆ.

    ಚಿನ್ನದ ಪದಕ