Tag: muslim community

  • ಮುಸ್ಲಿಂ ಮಹಿಳೆಯರು ಖುಲಾ ಮೂಲಕ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆ ಅಗತ್ಯವಿಲ್ಲ – ತೆಲಂಗಾಣ ಹೈಕೋರ್ಟ್

    ಮುಸ್ಲಿಂ ಮಹಿಳೆಯರು ಖುಲಾ ಮೂಲಕ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆ ಅಗತ್ಯವಿಲ್ಲ – ತೆಲಂಗಾಣ ಹೈಕೋರ್ಟ್

    ಹೈದರಾಬಾದ್: ಮುಸ್ಲಿಂ ಮಹಿಳೆಯರು ಖುಲಾ (Khula) ಮೂಲಕ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆಯ ಅಗತ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ (Telagana High Court) ತೀರ್ಪು ನೀಡಿದೆ.

    ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಖುಲಾವನ್ನು ಒಂದು ನಿರ್ಧಾರವಾಗಿ ಪರಿಗಣಿಸಿದ ನ್ಯಾಯಲಯ, ಇದರಡಿ ಮಹಿಳೆಯರು ತಮ್ಮ ವಿವಾಹವನ್ನು ಕೊನೆಗೊಳಿಸಲು ಸ್ವತಂತ್ರವಾಗಿ ನಿರ್ಧರಿಸಬಹುದು ಎಂದು ಹೇಳಿದೆ.

    ನ್ಯಾಯಮೂರ್ತಿಗಳಾದ ಎ.ರಾಜಶೇಖರ್ ರೆಡ್ಡಿ ಮತ್ತು ಎಂ.ಲಕ್ಷ್ಮಣ್ ಅವರ ದ್ವಿಸದಸ್ಯ ಪೀಠವು ಈ ಆದೇಶ ನೀಡಿದೆ. ಹೆಂಡತಿಯು ಖುಲಾ ಮೂಲಕ ಏಕಪಕ್ಷೀಯವಾಗಿ ತನ್ನ ಸಂಬಂಧವನ್ನು ಕೊನೆಗೊಳಿಸಬಹುದು ಮತ್ತು ಪತಿಯ ಅನುಮೋದನೆಯಾಗಲಿ ಅಥವಾ ಮುಫ್ತಿ ಅಥವಾ ದಾರ್-ಉಲ್-ಖಾಜಾ ಅವರಿಂದ ಖುಲಾನಾಮಾ ನೀಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ.ಇದನ್ನೂ ಓದಿ: ನಾನು ಎಲ್ಲಾ ಶಾಸಕರ ಕೈಗೆ ಸಿಕ್ತೇನೆ, ಬೇರೆ ಸಚಿವರ ಬಗ್ಗೆ ಹೇಳಲ್ಲ: ಪರಮೇಶ್ವರ್‌

    ತನ್ನ ವೈವಾಹಿಕ ಜೀವನದಿಂದ ಮಹಿಳೆಯ ಸ್ವತಂತ್ರ ಹಕ್ಕನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಒತ್ತಿಹೇಳಿದೆ. ವೈವಾಹಿಕ ಜೀವನವನ್ನು ಕೊನೆಗೊಳಿಸಲು ನ್ಯಾಯಾಂಗ ಮುದ್ರೆ ಹಾಕುವುದು ನ್ಯಾಯಾಲಯದ ಏಕೈಕ ಪಾತ್ರವಾಗಿದೆ. ಅದಾದ ನಂತರ ಎರಡೂ ಕಡೆಯ ಅರ್ಜಿದಾರರ ಮೇಲೆ ಬದ್ಧವಾಗುತ್ತದೆ ಎಂದು ಪೀಠ ತಿಳಿಸಿದೆ.

    ಕುಟುಂಬ ನ್ಯಾಯಾಲಯದ ಪಾತ್ರವು ಕೇವಲ ಮಹಿಳೆಯ ಖುಲಾ ಕೋರಿಕೆಯನ್ನು ಪರಿಶೀಲಿಸುವುದು, ರಾಜಿ ಪ್ರಯತ್ನವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅನ್ವಯಿಸಿದರೆ ಪತ್ನಿಯ ವರದಕ್ಷಿಣೆ (ಮೆಹರ್) ಹಿಂದಿರುಗಿಸಲು ಸಿದ್ಧರಿದ್ದಾರೆಯೇ ಎಂದು ದೃಢೀಕರಿಸುವುದಕ್ಕೆ ಸೀಮಿತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

    ವೈವಾಹಿಕ ವಿವಾದಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಸದಾ-ಇ-ಹಕ್ ಶರೈ ಕೌನ್ಸಿಲ್ ಎಂಬ ಸರ್ಕಾರೇತರ ಸಂಸ್ಥೆಗೆ ಪತ್ನಿ ಸಂಪರ್ಕಿಸಿದ್ದರು. ಆಕೆಯ ಖುಲಾ ಪ್ರಕರಣವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ಈ ತೀರ್ಪು ಬಂದಿದೆ. ಅಂತ್ಯದಲ್ಲಿ ಪತಿ ಖುಲಾ ಸ್ವೀಕರಿಸಲು ನಿರಾಕರಿಸಿದರೆ ಅನುಸರಿಸಬೇಕಾದ ಯಾವುದೇ ಕಾರ್ಯವಿಧಾನವನ್ನು ಧಾರ್ಮಿಕ ಗ್ರಂಥಗಳು ವಿವರಿಸುವುದಿಲ್ಲ. ಇದು ಸಂಬಂಧವನ್ನು ಕೊನೆಗೊಳಿಸುವ ಮಹಿಳೆಯ ಸ್ವಾಯತ್ತ ಹಕ್ಕನ್ನು ಬಲಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.ಇದನ್ನೂ ಓದಿ: ಹಾಸನ | 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ

  • Belagavi | ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ 2 ಗುಂಪುಗಳ ನಡುವೆ ಘರ್ಷಣೆ – ಸೋಡಾ, ನೀರಿನ ಬಾಟಲಿಯಿಂದ ಹೊಡೆದಾಟ

    Belagavi | ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ 2 ಗುಂಪುಗಳ ನಡುವೆ ಘರ್ಷಣೆ – ಸೋಡಾ, ನೀರಿನ ಬಾಟಲಿಯಿಂದ ಹೊಡೆದಾಟ

    ಬೆಳಗಾವಿ: ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್‌ಗೆ (Hotel) ಬಂದಾಗ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಸೋಡಾ ಬಾಟಲಿ ಹಾಗೂ ನೀರಿನ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಳಗಾವಿ (Belagavi) ನಗರದಲ್ಲಿ ನಡೆದಿದೆ.

    ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಿಂದ ಕೆಲಕಾಲ ತ್ವೇಷಮಯ ವಾತಾವರಣ ಉಂಟಾಗಿತ್ತು. ಏಕಾಏಕಿ ಘರ್ಷಣೆ ಉಂಟಾದ ಹಿನ್ನೆಲೆ ಸಿಬ್ಬಂದಿ ಹೋಟೆಲ್‌ನ ಬಾಗಿಲು ಮುಚ್ಚಿದ್ದಾರೆ. ಇದನ್ನೂ ಓದಿ: ರಾಜ್ಯದ ಮೊಟ್ಟ ಮೊದಲ ಮೇಕೆ ಹಾಲು ಉತ್ಪಾದನಾ ಘಟಕ ಕಾಡುಪಾಲು

    ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ಬಳಿಯಿರುವ ಸಾಯಿ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೊದಲ ಮಗುವಿಗೆ 45 ವರ್ಷ – ಈಗ 66ನೇ ವಯಸ್ಸಿನಲ್ಲಿ 10ನೇ ಮಗು!

  • ಆ ಸಮುದಾಯಕ್ಕೆ ನಮ್ಮ ಅವಶ್ಯಕತೆ ಇಲ್ಲ: ಮತ್ತೆ ಅಲ್ಪಸಂಖ್ಯಾತರತ್ತ ಬೊಟ್ಟು ಮಾಡಿದ ನಿಖಿಲ್

    ಆ ಸಮುದಾಯಕ್ಕೆ ನಮ್ಮ ಅವಶ್ಯಕತೆ ಇಲ್ಲ: ಮತ್ತೆ ಅಲ್ಪಸಂಖ್ಯಾತರತ್ತ ಬೊಟ್ಟು ಮಾಡಿದ ನಿಖಿಲ್

    – ಅಧಿಕಾರ ದಾಹಕ್ಕೆ ಗೌಡರು ರಾಜಕಾರಣ ಮಾಡ್ತಿಲ್ಲ; ಸಿಪಿವೈಗೆ ತಿರುಗೇಟು

    ಬೆಂಗಳೂರು/ಮಂಡ್ಯ: ಈ ಚುನಾವಣೆಯಲ್ಲಿ (Election) ಆ ಒಂದು ಸಮುದಾಯವನ್ನ ಕಡೆಗಣಿಸಬಾರದು, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ವಿ, ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ, ಅಂತ ಆ ಸಮುದಾಯ ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದೆ ಎಂದು ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಬೇಸರ ಹೊರಹಾಕಿದರು.

    ಮಾಧ್ಯಮಗಳೊಂದಿಗೆ ಮಾನನಾಡಿದ ಅವರು, ಯಾವುದೇ ಕಾರ್ಯಕರ್ತ ನಿಂತರೂ ಬರುತ್ತಿದ್ದ ನಮ್ಮ ಸಾಂಪ್ರದಾಯಿಕ ಕನಿಷ್ಠ 60 ಸಾವಿರ ಮತಗಳು ಈಗ 87 ಸಾವಿರಕ್ಕೆ ಹೋಗಿ ಮುಟ್ಟಿದೆ. ಪಕ್ಷದ ಅಭಿಮಾನಿಗಳಾಗಿರುವ ಜನ ಯಾರೂ ನಮ್ಮ ಕೈಬಿಟ್ಟಿಲ್ಲ. ಆದ್ರೆ 1 ಸಮುದಾಯದ ಪರವಾಗಿ ದೇವೇಗೌಡರು ಹಿಂದೆ ನಿರ್ಣಯ ಕೈಗೊಂಡಿದ್ದರು, ಮೀಸಲಾತಿ ವಿಚಾರದ ಬಗ್ಗೆಯೂ ತೀರ್ಮಾನ ಮಾಡಿದ್ರು. ಈ ಚುನಾವಣೆಯಲ್ಲೂ ಆ ಸಮುದಾಯವನ್ನ ಕಡೆಗಣಿಸಬಾರದು, ಅವರನ್ನೂ ವಿಶ್ವಾಸಕ್ಕೆ ತಗೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ವಿ. ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅಂತ ಆ ಸಮುದಾಯ (Muslim community) ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕೋ ಅದನ್ನು ಮಾಡ್ತೇವೆ ಎಂದು ನುಡಿದರು. ಇದನ್ನೂ ಓದಿ: ನಿಖಿಲ್‌ ಸೋಲಿನಿಂದ ಬೇಸರ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

    ಅಧಿಕಾರದ ದಾಹಕ್ಕೆ ಗೌಡರು ರಾಜಕಾರಣ ಮಾಡ್ತಿಲ್ಲ:
    ಇನ್ನೂ ದೇವೇಗೌಡ್ರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್‌, ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ. ಅವರ ವಯಸ್ಸು 92, ದೇಶ, ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಅಂತ ಅನೇಕ ವೇಳೆ ಪ್ರಧಾನಿಯವರೇ ಹೇಳಿದ್ದಾರೆ. ಇಲ್ಲಿ ಅಧಿಕಾರದ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡ್ತಿಲ್ಲ. ಕಳೆದ 62 ವರ್ಷಗಳ ಅವರ ಪ್ರಾಮಾಣಿಕ ರಾಜಕೀಯ ಬದುಕಿನಲ್ಲಿ ಏನನ್ನೂ ಅಪೇಕ್ಷೆ ಇಟ್ಟುಕೊಂಡವರಲ್ಲ. ಅವರು ನಿವೃತ್ತಿ ಹೊಂದಬೇಕಾ? ಮುಂದುವರಿಬೇಕಾ ಅಂತ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಇನ್ನೂ ನನ್ನನ್ನ ಪ್ರಚಾರಕ್ಕೇ ಕರೆದಿಲ್ಲ ಎಂಬ ಜಿ.ಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಜಿಟಿಡಿ ಅವರು ಹಿರಿಯರು, ರಾಜಕೀಯದಲ್ಲಿ ಅವರಿಗೆ ಬಹಳ ಅನುಭವ ಇದೆ. ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷದ ಕೋರ್ ಕಮಿಟಿ ನಾಯಕರು, ಅವರಿಗೆ ಯಾವ ಗೌರವ ಕೊಡಬೇಕೋ ಅದನ್ನು ನಾವು ಕೊಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ

  • ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    – ನೋಟಿಸ್‌ ರದ್ದು ಪಡಿಸದೇ ಇದ್ದರೆ ಅಹೋರಾತ್ರಿ ಧರಣಿಯ ಎಚ್ಚರಿಕೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಅನಂತಪುರ ಗ್ರಾಮದಲ್ಲಿ ವಕ್ಫ್ ಬೋರ್ಡ್ (Waqf Board) ವಿರುದ್ಧ ಈಗ ಮುಸ್ಲಿಂ ಸಮುದಾಯವೇ (Muslim Community) ತಿರುಗಿಬಿದ್ದಿದೆ.

    ಅನಂತಪುರ ಗ್ರಾಮದ ದರ್ಗಾದಲ್ಲಿ ಸಭೆ ಮಾಡಿದ ರೈತರು, ಕಾಗವಾಡ ಹಾಗೂ ಅಥಣಿ ಶಾಸಕರಿಗೆ ಬರುವ ನವೆಂಬರ್‌ 25ರ ಒಳಗಾಗಿ ಅನಂತಪುರ, ಬಳ್ಳಿಗೇರಿ ಗ್ರಾಮದ 60 ಕ್ಕೂ ಅಧಿಕ ಜನ ರೈತರ ಜಮೀನಿನ (Farmers Land) ಪಹಣಿಯಲ್ಲಿ ನೊಂದಣಿಯಾದ ವಕ್ಫ್‌ ಹೆಸರು ತೆರವುಗೊಳಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿ ಹೋರಾಟ ಮಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬಳ್ಳಾರಿಯಲ್ಲೂ ವಕ್ಫ್ ವಿವಾದ – ರೈತರ ಪಿತ್ರಾರ್ಜಿತ ಆಸ್ತಿಗೆ ನೋಟಿಸ್‌

     

    60ಕ್ಕೂ ಹೆಚ್ಚು ಮುಸ್ಲಿಂ ಹಾಗೂ ಇನ್ನುಳಿದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. 2018 ರಲ್ಲಿ ರೈತರ ಜಾಗದ ಪಹಣಿಯಲ್ಲಿ ಇದ್ದಕ್ಕಿದ್ದಂತೆ ವಕ್ಫ್ ಎಂದು ಸೇರ್ಪಡೆಯಾಗಿದೆ ಎಂದು ದೂರಿದ್ದಾರೆ. ವಕ್ಫ್ ಹೆಸರು ಸೇರ್ಪಡೆಯಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರ ಯೋಜನೆಯಿಂದ ನಾವು ವಂಚಿತರಾಗಿದ್ದೇವೆ. ಆದಷ್ಟು ಬೇಗನೆ ಪಹಣಿಯಲ್ಲಿ ವಕ್ಫ್ ಹೆಸರು ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಇಲ್ಲಿಯವರೆಗೆ ತಹಶೀಲ್ದಾರ್ ಕಚೇರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅವಧಿಯಲ್ಲಿ ನೀಡಲಾದ ನೋಟಿಸ್ ಮರಳಿ ಪಡೆಯಲು ತಿಳಿಸಿದ್ದಾರೆ. ಆದರೆ ಈ ಹಿಂದೆ ನೋಟಿಸ್‌ ಬಂದಿರುವ ನಮ್ಮ ಪಾಡೇನು? ನಾವು ಯಾರನ್ನು ಕೇಳಬೇಕು? ನಮಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು.

    ಸಭೆಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಅನೇಕ ಗ್ರಾಮಗಳ 60 ಕ್ಕೂ ಅಧಿಕ ಜನ ರೈತರು ಸಭೆ ಮಾಡಿ ನ. 25 ರವರೆಗೆ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರಿಗೆ ಗಡುವು ನೀಡಿದ್ದಾರೆ. ಇಬ್ಬರು ಶಾಸಕರು ಸ್ಪಂದಿಸದೇ ಇದ್ದರೆ ಅಹೋರಾತ್ರಿ ಧರಣಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

     

  • ನಾನು ರಾಜ್ಯಕ್ಕೆ ಸೇವೆ ಮಾಡ್ಬೇಕು ಅಂತ ದೊಡ್ಡ ಹೋರಾಟ ಆಗ್ತಿದೆ; ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ

    ನಾನು ರಾಜ್ಯಕ್ಕೆ ಸೇವೆ ಮಾಡ್ಬೇಕು ಅಂತ ದೊಡ್ಡ ಹೋರಾಟ ಆಗ್ತಿದೆ; ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ

    ರಾಮನಗರ: ತಿಂಗಳಾಂತ್ಯದ ಶನಿವಾರದಲ್ಲಿ ಕ್ಷೇತ್ರ ಪ್ರವಾಸ ಹಮ್ಮಿಕೊಂಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರು ಕಾರ್ಯಕ್ರಮದ ಭಾಷಣವೊಂದರಲ್ಲಿ ಮಾತನಾಡುತ್ತಾ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

    ಸ್ವಕ್ಷೇತ್ರದಲ್ಲಿಂದು ಪ್ರವಾಸ ಕೈಗೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌, ಕನಕಪುರ ಟೌನ್ (Kanakapura Town) ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ, ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಬಳಿಕ ಸಂತೆಕೋಡಿಹಳ್ಳಿ ಬಳಿ ಮುಸ್ಲಿಂ ಸಮುದಾಯದ (Muslim Community) ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಸಾತನೂರು ಬಳಿ ಜನಸ್ಪಂದನಾ ಸಭೆ ನಡೆಸಿ, ಕ್ಷೇತ್ರದ ಜನರ ಕುಂದುಕೊರತೆಗಳನ್ನು ಆಲಿಸಿದರು. ಇದೇ ವೇಳೆ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಅಧಿಕಾರಿಗಳು ಮತ್ತು ಮುಖಂಡರು ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ: ಡಿಕೆಶಿ

    ಬಳಿಕ ಮಾತನಾಡಿದ ಅವರು, ಕನಕಪುರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ, ಹೋರಾಟ ಆಗ್ತಿದೆ. ಈಗ ಮಾತಾಡಿದ್ರೆ ಮಾಧ್ಯಮಗಳು ವಿವಿಧ ರೀತಿಯಲ್ಲಿ ಬಿಂಬಿಸ್ತವೆ. ಸದ್ಯ ನಾನು ಇಲ್ಲಿ ಡಿಸಿಎಂ (DCM) ಆಗಿ ಬಂದಿಲ್ಲ, ನಿಮ್ಮ ಶಾಸಕನಾಗಿ ಬಂದಿದ್ದೇನೆ. ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ ಇಲ್ಲಿ ನೀವೆಲ್ಲ ನಮ್ಮ ಮನೆ ಮಕ್ಕಳು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಆಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

    ತಿಂಗಳ ಕೊನೆಯ ಶನಿವಾರ ಕ್ಷೇತ್ರದ ಪ್ರವಾಸ ಮಾಡ್ತಿದ್ದೀನಿ. ಇಂದು ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಮಾಡಿದ್ದೀನಿ. ಈ ಕಾಲೇಜು ಹಿಂದೆ ಮುನ್ಸಿಪಲ್ ಗ್ರೌಂಡ್ ಅತ್ರ ಇತ್ತು. ಅಲ್ಲಿ ಜಾಗದ ಸಮಸ್ಯೆ ಇದ್ದಿದ್ದರಿಂದ ಇಲ್ಲಿ ಒಳ್ಳೆಯ ವಾತಾವರಣದಲ್ಲಿ ಕಾಲೇಜು ನಿರ್ಮಾಣ ಆಗಿದೆ. ನಾನು ಒಂದು ಚಿತ್ರಗಳನ್ನ ತಯಾರಿಸಲು ಹೇಳಿದ್ದೇನೆ. ಈ ಹಿಂದೆ ಕನಕಪುರ ಹೇಗಿತ್ತು, ಈಗ ಕನಕಪುರ ಹೇಗಿದೆ? ನಾನು ಶಾಸಕನಾದ ಬಳಿಕ ಎಷ್ಟೆಲ್ಲಾ ಅಭಿವೃದ್ಧಿ ಆಗಿದೆ ಎಂಬುದನ್ನ ತಿಳಿಸಬೇಕು. ಕನಕಪುರ ಒಂದು ರೀತಿಯ ಎಜುಕೇಶನ್ ಕಾರಿಡಾರ್ ಆಗಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಯಾದಗಿರಿ | ವಿಷಕಾರಿ ನೀರು ಸೇವಿಸುತ್ತಿರುವ ತಾಂಡಾ ಗ್ರಾಮಸ್ಥರು – ಇಲ್ಲಿನ ಜನಕ್ಕಿಲ್ಲ ಶುದ್ಧ ಕುಡಿಯುವ ನೀರು

    ಈಗಾಗಲೇ ಉತ್ತಮ ರಸ್ತೆಗಳು ನಗರಕ್ಕೆ ಇದೆ. ನಾನು ಡಿಸಿಎಂ ಆಗಿ ಇಲ್ಲಿ ಬಂದಿಲ್ಲ, ನಿಮ್ಮ ಶಾಸಕನಾಗಿ ಕೆಲಸ ಮಾಡ್ತಿದ್ದೆನೆ. ನೀವು ಕನಕಪುರದ ವಿದ್ಯಾರ್ಥಿಗಳಲ್ಲ. ನೀವು ಬೆಂಗಳೂರು ಜಿಲ್ಲೆಯ ಮಕ್ಕಳು. ನಿಮ್ಮ ಇತಿಹಾಸ ತೆಗೆದು ನೋಡಿ, ಸಂಗಮ, ಮೇಕೆದಾಟು ವರೆಗೂ ಬೆಂಗಳೂರು ಜಿಲ್ಲೆ. ಚನ್ನಪಟ್ಟಣ, ಮಾಗಡಿ ಎಲ್ಲವೂ ಬೆಂಗಳೂರಿಗೆ ಸೇರುತ್ತೆ. ಯಾವುದೊ ಕಾರಣಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಆಗಿತ್ತು ಆಷ್ಟೇ. ನಿಮ್ಮ ಕಾಂಪಿಟೇಷನ್ ಗ್ಲೋಬಲ್ ಮಟ್ಟದಲ್ಲಿ ಇರಬೇಕು. ಕನಕಪುರವನ್ನ ಏನು ಮಾಡಬೇಕು ಎಂಬುದನ್ನು ನಾನು ಬಾಯಿಬಿಟ್ಟು ಹೇಳಲ್ಲ. ಅದನ್ನ ಮಾಡಿ ತೋರಿಸುವ ಕೆಲಸ ಮಾಡ್ತೇನೆ ಎಂದು ಹೇಳಿದರು.

    ನನಗೆ ಈಗಲೂ ಕಂಪ್ಯೂಟರ್ ಆಪರೇಟ್ ಮಾಡಲು ಬರಲ್ಲ. ನನಗೆ ಮೊಬೈಲ್ ನಲ್ಲಿ ಮೆಸೇಜ್ ಮಾಡಲು ಅಷ್ಟೇ ಬರುತ್ತೆ. ಆದ್ರೆ ನೀವು ಎಲ್ಲವನ್ನೂ ತಿಳಿದಿರುವ ಜನರೇಷನ್. ಎಲ್ಲರಿಗೂ ಮೊಬೈಲ್, ಕಂಪ್ಯೂಟರ್ ಬಳಸುವ ಬುದ್ಧಿ ಇದೆ. ದೇಶದಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯೋದು ನಾವೆ. ಕನಕಪುರದಲ್ಲಿ ಇರುವ ಡೇರಿ ಇಡೀ ದೇಶದಲ್ಲೇ ಇಲ್ಲ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಓದಬೇಕು. ನೀವು ಕೆವಲ ನೌಕರರಾಗಬಾರದು, 4 ಜನಕ್ಕೆ ನೌಕರಿ ಕೊಡುವವರಾಗಬೇಕು. ಸಮಾಜದಲ್ಲಿ ಯಾರು ಬೇಕಾದರೂ ಡಿ.ಕೆ.ಶಿವಕುಮಾರ್ ಆಗಬಹುದು. ಅದಕ್ಕೆ ನಿಮ್ಮ ತಳಹದಿ ಗಟ್ಟಿಯಾಗಿರಬೇಕು. ನೀವೆ ನಮ್ಮ ಆಸ್ತಿ ನಿಮ್ಮ ಬದುಕಿಗೆ ಒಳ್ಳೆಯದಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

    ಜಾಗ ಖರೀದಿ ಮಾಡಿ ಸೈಟು ಕೊಡ್ತಿನಿ:
    ಬಳಿಕ ಕನಕಪುರದ ಸಾತನೂರಿನಲ್ಲಿ ಜನಸ್ಪಂದನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಬೇಕು. ಅರ್ಧ ಅಭಿವೃದ್ಧಿ ಆಗಿದೆ, ಇನ್ನಷ್ಟು ಕೆಲಸ ಆಗಬೇಕು. ಜನ ನಿವೇಶನ ಕೇಳ್ತಿದ್ದಾರೆ, ಜಾಗ ಖರೀದಿ ಮಾಡಿ ನಿವೇಶನ ಕೊಡ್ತಿನಿ. ನನ್ನ ತಾಲೂಕಿನ ಸಂಪೂರ್ಣ ಡಾಕ್ಯುಮೆಂಟ್ ನನ್ನ ಹತ್ತಿರ ಇದೆ. ಈ ಹಿಂದೆ ಸಾತನೂರು ಹೇಗಿತ್ತು, ಈಗ ಹೇಗಿದೆ ನೋಡಿ. ಕನಕಪುರ, ದೊಡ್ಡಾಲಹಳ್ಳಿ, ಕೋಡಿಹಳ್ಳಿಗಳ ಚಿತ್ರಣ ಹೇಗಿತ್ತು ನೋಡಿ, ತಾಲೂಕು ಕಚೇರಿ, ರಸ್ತೆ ಎಲ್ಲವೂ ಅಭಿವೃದ್ಧಿ ಆಗಿದೆ. ಇದೆಲ್ಲವನ್ನೂ ಜನರಿಗೆ ತಿಳಿಸಬೇಕು. ಅದರಿಂದ ಈ ಬಗ್ಗೆ ಚಿತ್ರಗಳ ಮೂಲಕ ತಿಳಿಸುವ ಕೆಲಸ ಆಗುತ್ತೆ ಎಂದು ಭರವಸೆ ನೀಡಿದರು.

    ಸಿಎಂ ಇಂಗಿತ ವಿಚಾರಕ್ಕೆ ಡಿಕೆಶಿ ಸ್ಪಷ್ಟನೆ:
    ರಾಜ್ಯಕ್ಕೆ ಸೇವೆ ಮಾಡಲು ದೊಡ್ಡ ಪ್ರಯತ್ನ, ಹೋರಾಟ ಮಾಡ್ತಿದ್ದೀನಿ. ನಾನು ಆ ರೀತಿಯಲ್ಲಿ ಹೇಳಿಲ್ಲ. ನೀವೆಲ್ಲ ಸೇವೆ ಮಾಡೋಕೆ ಅವಕಾಶ ಕೊಡಿ ಎಂದಿದ್ದೇನೆ ಅಷ್ಟೇ. ನೀವು ಆ ರೀತಿ ಕಲ್ಪನೆ, ಸೃಷ್ಠಿ ಮಾಡೋದು ಬೇಡ. ನಾನು ಡಿಸಿಎಂ ಆಗಿ ರಾಜ್ಯದ ಸೇವೆ ಮಾಡ್ತಿದ್ದೀನಿ. ಇದನ್ನ ಮಕ್ಕಳಿಗೆ ತಿಳಿಸಬೇಕಲ್ಲ ಹಾಗಾಗಿ ಹೇಳಿದೆ ಎಂದು ಸಿಎಂ ಇಂಗಿತ ವಿಚಾರಕ್ಕೆ ಡಿಕೆಶಿ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹೆಚ್ಚು ರೈತರ ಸಾವು: ಪ್ರಧಾನಿ ಮೋದಿ ಆರೋಪ 

  • ಮುಸ್ಲಿಮರ ಓಲೈಕೆಗೆ ರಾಮನಗರ ಹೆಸರು ಬದಲಾವಣೆ: ಈಶ್ವರಪ್ಪ

    ಮುಸ್ಲಿಮರ ಓಲೈಕೆಗೆ ರಾಮನಗರ ಹೆಸರು ಬದಲಾವಣೆ: ಈಶ್ವರಪ್ಪ

    ಶಿವಮೊಗ್ಗ: ರಾಜ್ಯದಲ್ಲಿ ಮೂರು ಉಪಚುನಾವಣೆ ಎದುರಾಗುತ್ತಿದೆ. ಚುನಾವಣೆಯಲ್ಲಿ ಮುಸ್ಲಿಮರನ್ನು (Muslim Community) ಸಂತೃಪ್ತಿಪಡಿಸಲು, ಮುಸ್ಲಿಮರ ಓಲೈಕೆಗಾಗಿ ಸರ್ಕಾರ ರಾಮನಗರ (Ramanagara) ಹೆಸರು ಬದಲಾವಣೆ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಮ ಎನ್ನುವ ಹೆಸರಿದ್ದರೆ ನಿಮಗೆ ಏನಾದರೂ ಸಮಸ್ಯೆ ಇದೆಯಾ? ಹಿಂದುತ್ವದ ಹೆಸರು ಬಂದರೆ ಸಿದ್ದರಾಮಯ್ಯ, ಡಿಕೆಶಿ ಅವರಿಗೆ ದೆವ್ವ ಬಂದಹಾಗೆ ಆಗುತ್ತದೆ. ರಾಮನಗರದ ಹೆಸರು ರಾಮನಗರ ಅಂತಾನೇ ಇರಬೇಕು ಎಂದರು. ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಮೌನ ಪ್ರತಿಭಟನೆ

    ಇಡೀ ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ರೈತರು ಸಂಪೂರ್ಣ ಸಂಕಷ್ಟದಲ್ಲಿ ಇದ್ದಾರೆ. ಕಾಂಗ್ರೆಸ್‌ನವರು ಬಿಜೆಪಿ ಮೇಲೆ ಆರೋಪ ಮಾಡುವುದರಲ್ಲೇ ಬ್ಯುಸಿ ಆಗಿದ್ದಾರೆ. ರಾಜ್ಯ ಸರ್ಕಾರ ವಾಲ್ಮೀಕಿ ಹಗರಣದಲ್ಲಿ ಸಿಲುಕಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕುಡಿಯುವ ನೀರಿಗಾಗಿ ಜನ ಮತ ಹಾಕಿದ್ದಾರೆ; ಬೆಂಗಳೂರಿಗೆ ನೀರು ಕೊಡಿ – ರಾಜ್ಯಸಭೆಯಲ್ಲಿ ಹೆಚ್‌ಡಿಡಿ ಮನವಿ

    14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಆಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ಅಪೆಕ್ಸ್ ಬ್ಯಾಂಕ್ ಹಗರಣ ಹಾಗು ಬೋವಿ ನಿಗಮದ ಹಗರಣದ ಬಗ್ಗೆ ಮಾಧ್ಯಮದಲ್ಲಿ ಪ್ರತಿನಿತ್ಯ ಬರುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯ ಸದನದಲ್ಲಿ ಉತ್ತರ ಕೊಡಲೇ ಇಲ್ಲ. ಯಾಕೆಂದರೆ ಎಲ್ಲರೂ ಹಗರಣದ ಬಗ್ಗೆ ದಾಖಲಾತಿ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದರು. ನಿಮ್ಮ ಬಳಿ ದಾಖಲೆ ಇದ್ದರೆ ಬಿಜೆಪಿ, ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣವನ್ನು ಸಿಬಿಐಗೆ ವಹಿಸಿ. ಯಾರೇ ಹಗರಣ ಮಾಡಿದರೂ ಬಹಿರಂಗ ಆಗುತ್ತದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ – ಸಿದ್ದರಾಮಯ್ಯ ಪರ ಸಚಿವ ಜಮೀರ್ ಬ್ಯಾಟಿಂಗ್‌

  • ಐಸಿಸ್‌ ಜೊತೆ ನಂಟು ಸಾಬೀತು ಪಡಿಸಿದ್ರೆ ದೇಶ ತೊರೆಯುತ್ತೇನೆ: ಯತ್ನಾಳ್‌ಗೆ ತನ್ವೀರ್‌ ಪೀರಾ ಸವಾಲ್‌

    ಐಸಿಸ್‌ ಜೊತೆ ನಂಟು ಸಾಬೀತು ಪಡಿಸಿದ್ರೆ ದೇಶ ತೊರೆಯುತ್ತೇನೆ: ಯತ್ನಾಳ್‌ಗೆ ತನ್ವೀರ್‌ ಪೀರಾ ಸವಾಲ್‌

    ವಿಜಯಪುರ: ಐಸಿಸ್‌ (ISIS) ಜೊತೆ ನನಗೆ ನಂಟು ಇರುವುದನ್ನು ಸಾಬೀತು ಪಡಿಸಿದರೆ ನಾನು ದೇಶ ತೊರೆಯುತ್ತೇನೆ ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ಗೆ (Basanagouda Patil Yatnal) ತನ್ವೀರ್‌ ಪೀರಾ (Tanveer Peera) ಸವಾಲ್‌ ಎಸೆದಿದ್ದಾರೆ.

    ತನಗೆ ಐಸಿಸ್‌ ಸಂಬಂಧ ಇದೆ ಎಂದು ಯತ್ನಾಳ್‌ ಆರೋಪಿಸಿದ್ದಕ್ಕೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಜಮತೆ-ಎ- ಅಲೆ- ಸನ್ನತ್‌ ಕರ್ನಾಟಕದ ಅಧ್ಯಕ್ಷ ಸೈಯದ್‌ ಮೊಹಮ್ಮದ್‌ ತನ್ವೀರ್‌ ಪೀರಾ ಸ್ಪಷ್ಟನೆ ನೀಡಿದ್ದಾರೆ.

     

    ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
    ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್‌ ಇವರ ಹೇಳಿಕೆಯನ್ನು ಗಮನಿಸಿದಾಗ ಅವರು ನನ್ನ ವಿರುದ್ಧ ಹೇಳಿಕೆ ನೀಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಶಾಸಕರ ಈ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ ಮತ್ತು ಅವರು ಮುಸ್ಲಿಂ ಸಮಾಜದ (Muslim Community) ಬಗ್ಗೆ ಅವಹೇಳನಕಾರಿ ಹೇಳಿಕೆನ್ನು ಕೊಟ್ಟಿದ್ದಾರೆ. ತಮ್ಮ ರಾಜಕೀಯ ಬೇಳೆಯನ್ನು ಬೇಯಿಸುವುದಕ್ಕೆ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಜಯಪುರ ಶೂಟೌಟ್‌ ಕೇಸ್‌ನಲ್ಲಿ 3ನೇ ಆರೋಪಿ – ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್‌ ಪೀರಾ ಯಾರು?

    ನನ್ನ ಮೇಲೆ ಮಾಧ್ಯಮದ ಮೂಲಕ ಐಸಿಸ್‌ ಭಯೋತ್ಪಾದಕ ಸಂಘಟನೆ ಜೊತೆ ನಂಟಿದೆ ಎಂಬುದರ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ನಾನು ಅವರಿಗೆ ಮಾಧ್ಯಮದ ಮುಖಾಂತರ ನೇರ ಸವಾಲು ಹಾಕುತ್ತೇನೆ. ಒಂದು ವೇಳೆ ಯತ್ನಾಳ್‌ ಒಂದು ವಾರದೊಳಗೆ ಐಸಿಸ್‌ ಜೊತೆಗೆ ನಂಟಿದ್ದ ದಾಖಲೆ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಶಾಸಕರ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಾಕಿಸ್ತಾನಕ್ಕೆ (Pakistan) ಪಲಾಯನ ಮಾಡಬೇಕು. ನನಗೆ ಐಸಿಸ್‌ ಜೊತೆ ನಂಟಿದೆ ಎಂದು ಸಾಬೀತು ಪಡಿಸಿದರೆ ನಾನು ದೇಶವನ್ನು ತ್ಯಾಗ ಮಾಡುತ್ತೇನೆ.

     

    ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತೇನೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಸಮ್ಮೇಳನದಲ್ಲಿ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡುತ್ತೇನೆ.  ರಾಷ್ಟ್ರ ಮತ್ತು ರಾಜ್ಯಮಟ್ಟದ ಕೋಮು ಸೌಹಾರ್ದ ಸಮ್ಮೇಳನದಲ್ಲಿ ವಿವಿಧ ಧರ್ಮದ ಗುರುಗಳು, ಪೀಠಾಧಿಪತಿಗಳು, ಮಠಾಧೀಶರ ಜೊತೆಯಲ್ಲಿ ಪಾಲ್ಗೊಳ್ಳುತ್ತೇನೆ.  ಇದನ್ನೂ ಓದಿ: ಸಿಎಂ ಐಸಿಸ್‌ ಉಗ್ರನ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ: ಯತ್ನಾಳ್‌

    ಈಗಾಗಲೇ ಮಾಧ್ಯಮದಲ್ಲಿ ಬಿಂಬಿಸುವ ಫೋಟೋಗಳು ಹಾಕಿ ಉಗ್ರರ ಜೊತೆ ನಂಟಿದೆಯಂದು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಮಾಧ್ಯಮದಲ್ಲಿ ಬಿಂಬಿಸುವ ಫೋಟೋಗಳು ನನ್ನ ಅಧಿಕೃತ ಫೇಸ್‌ಬುಕ್‌ ಖಾತೆ ಖಾದರಿ ಹೀಲಿಂಗ್‌ನಲ್ಲಿ ಸುಮಾರು ಹತ್ತು, ಹನ್ನೆರಡು ವರ್ಷ ಹಿಂದೆ ನಾನು ಇರಾಕ್‌ ದೇಶದ ಬಾಗ್ದಾದ್‌ಗೆ ನಗರದ ಅಂತರಾಷ್ಟ್ರೀಯ ಪ್ರಸಿದ್ಧ ಮಹಾನ್‌ ಸೂಫಿ ಮೆಹಬೂಬ ಎ ಸುಭಾನಿ ಗೌಸ ಎ ಆಜಮ ಇವರ ದರ್ಶನಕ್ಕೆ ಹೋದಾಗ ಅಲ್ಲಿನ ದರ್ಗಾದ ಪೀಠಾಧಿಪತಿಯಾದ ಖಾಲೀದ್‌ ಜಿಲಾನಿ ಅವರ ಆರ್ಶೀವಚನ ಪಡೆಯುವ ಸಂದರ್ಭದಲ್ಲಿ ತೆಗೆದಂತಹ ಫೋಟೋಗಳು. ಮತ್ತೊಂದು ಫೋಟೋದಲ್ಲಿ ಅವರ ಅಂಗ ರಕ್ಷಕ ನನ್ನನ್ನು ಅವರ ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಫೋಟೋ ಎಂದು ಸ್ಪಷ್ಟನೆ ನೀಡಿದ್ದಾರೆ.

     

  • ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ, ಓಲೈಕೆ ಮಾಡ್ತಿರೋದು ಸರಿಯಲ್ಲ: ಬಿಎಸ್‌ವೈ

    ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ, ಓಲೈಕೆ ಮಾಡ್ತಿರೋದು ಸರಿಯಲ್ಲ: ಬಿಎಸ್‌ವೈ

    ಶಿವಮೊಗ್ಗ: ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ. 10 ಸಾವಿರ ಕೋಟಿ ಕೊಡುತ್ತೇನೆ ಎಂದು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತಿಳಿಸಿದರು.

    ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಲ್ಪಸಂಖ್ಯಾತರ ಪರ ಹೇಳಿಕೆ ಹಿಂದೂಗಳ ಆಕ್ರೋಶಕ್ಕೆ ಅವಕಾಶ ಆಗುತ್ತದೆ. ಈ ರೀತಿಯ ಮಾತುಗಳನ್ನು ಮುಖ್ಯಮಂತ್ರಿ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಈಗಾಗಲೇ ಅವರ ಹೇಳಿಕೆಯನ್ನು ಮಠಾಧಿಪತಿಗಳು ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ಏನಾದರೂ ಮಾತನಾಡಬೇಕಾದರೆ ಎಚ್ಚರಿಕೆ ವಹಿಸಿ ಮಾತನಾಡಬೇಕು ಎಂಬುದು ನನ್ನ ಸಲಹೆ ಎಂದರು. ಇದನ್ನೂ ಓದಿ: ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತಾಗಿದೆ: ಸೋಮಣ್ಣ

    ಲೋಕಸಭೆ ಚುನಾವಣೆಯಲ್ಲಿ (Lok Sabha Election) ಮೋದಿ ಹೆಸರಿನಲ್ಲಿ ನೂರಕ್ಕೆ ನೂರು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ. ಓಲೈಕೆ ರಾಜಕಾರಣದಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದರೆ ಅದು ಸಾಧ್ಯವಿಲ್ಲ. ಬಿಜೆಪಿ (BJP) ಪರವಾದ, ಮೋದಿ ಪರವಾದ ವಾತಾವರಣದಿಂದ ನಾವು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಲ್ಲು ಪ್ರಯತ್ನಿಸುತ್ತಿದ್ದೇವೆ. ಇದರಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ

    ಭ್ರೂಣ ಹತ್ಯೆ (Foeticide) ಪ್ರಕರಣ ಜಾಸ್ತಿ ಆಗುತ್ತಿದೆ. ಬಹಳ ಜನ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇದು ನಿಲ್ಲಬೇಕು. ಈ ಬಗ್ಗೆ ಏನೇನು ಕಾನೂನು ಕ್ರಮ ಕೈಗೊಳ್ಳಬಹುದೋ ಆ ರೀತಿ ಕ್ರಮ ಕೈಗೊಳ್ಳಬೇಕು ಎಂದರು. ಇನ್ನು ಮಾಜಿ ಸಚಿವ ವಿ.ಸೋಮಣ್ಣ (V Somanna) ಅವರು ಯಾವುದೇ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಅವರು ನಮ್ಮ ಜೊತೆಯಲ್ಲೇ ಇರುತ್ತಾರೆ. ನಾನು ಅವರ ಜೊತೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿರುವ ಬಗ್ಗೆ ಈಗಾಗಲೇ ನಮ್ಮ ಮುಖಂಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ಮಾಡಿ ತೋರಿಸದೇ, ರಾಜ್ಯ ಸರ್ಕಾರದಿಂದ ಯಾವ ಯಾವ ರೀತಿ ಪರಿಹಾರ ಕೊಡಬಹುದೋ ಅದನ್ನು ಮೊದಲು ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ 2,000 ರೂ. ಪರಿಹಾರ ನೀಡಲಾಗಿದೆ: ಕೃಷ್ಣಭೈರೇಗೌಡ

  • ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಬೆಳಗಾವಿ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಒಂದೇ ಆಡಳಿತ ಕೊಡಬೇಕು. ಅವರು ಎಲ್ಲಾ ಸಮುದಾಯವನ್ನೂ ಸಮನಾಗಿ ನೋಡಿಕೊಳ್ಳಬೇಕು. ಆದರೆ ರಾಜಕೀಯ ಪ್ರೇರಿತವಾಗಿ ಮುಸ್ಲಿಂ ಸಮುದಾಯಕ್ಕೆ (Muslim  Community) ತುಷ್ಟೀಕರಣ ಮಾಡುತ್ತಾರೆ. ಕಾಂಗ್ರೆಸ್ (Congress) ಪಕ್ಷದವರು ಕೋಮುವಾದಿಗಳು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (CN Ashwath Narayan) ಹೇಳಿದ್ದಾರೆ.

    ಮುಸ್ಲಿಂ ಸಮುದಾಯಕ್ಕೆ 10,000 ಕೋಟಿ ರೂ. ಖರ್ಚು ಮಾಡಲು ಸಿದ್ಧ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಸಿಎಂ ಸಮಾನವಾಗಿ ಎಲ್ಲರನ್ನೂ ನೋಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಕೋಮುವಾದಿಗಳಿಂದ ರಾಜ್ಯದಲ್ಲಿ ಅಸ್ವಾಸ್ತ್ಯ ಇದೆ. ಬರಗಾಲ, ರೈತರ ಆತ್ಮಹತ್ಯೆಗೆ ಪರಿಹಾರ ಕೊಡಲು ಆಗುತ್ತಿಲ್ಲ. ಆದರೆ ಈ ರೀತಿಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲರಿಗೂ ಕಿವಿಗೆ ಹೂ ಇಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮುಸ್ಲಿಮರನ್ನಷ್ಟೇ ಓಲೈಕೆ ಮಾಡುವುದು ಸರಿಯಲ್ಲ: ಆರ್‌.ಅಶೋಕ್‌

    ಇನ್ನೂ ಆರ್ ಅಶೋಕ್‌ಗಿಂತ (R Ashok) ಬಸನಗೌಡ ಪಾಟೀಲ್‌ಗೆ (Basanagouda Patil Yatnal) ಶಾಸಕರು ಸಾಥ್ ವಿಚಾರವಾಗಿ ಮಾತನಾಡಿದ ಅವರು, ಸಮಸ್ಯೆ ಹೇಳಿಕೊಂಡರೆ ಏನು ತಪ್ಪು? ಅಶೋಕ್‌ಗಿಂತ ಬಸನಗೌಡ ಪಾಟೀಲ್‌ಗೆ ಶಾಸಕರ ಬೆಂಬಲ ಹೆಚ್ಚಿದೆ. ಆದರೆ ಯತ್ನಾಳ್ ಯತ್ನಾಳನೇ, ಆರ್ ಅಶೋಕ್ ಆರ್ ಅಶೋಕನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಿಗರಿಗೆ ಫ್ರಂಟ್ ಡೆಸ್ಕ್ ಉದ್ಯೋಗ ಕೊಡಿ: ಜಗ್ಗೇಶ್ ಒತ್ತಾಯ

  • ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಲವ್ ಅಟ್ ಬ್ಯಾಕ್ ಸೈಟ್: ಆರ್.ಅಶೋಕ್

    ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಲವ್ ಅಟ್ ಬ್ಯಾಕ್ ಸೈಟ್: ಆರ್.ಅಶೋಕ್

    – ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ ಎಂದ ಮಾಜಿ ಸಚಿವ

    ಚಿಕ್ಕಮಗಳೂರು: ಲವ್ ಜಿಹಾದ್ (Love Jihad) ಅಂದ್ರೆ, ಪ್ರೀತಿಸಿ ಅವರಿಗೆ ಇಷ್ಟವಾದವರನ್ನ ಮದುವೆ ಆಗ್ತಾರೆ ಎಂಬ ಲವ್ ಅಟ್ ಫಸ್ಟ್ ಸೈಟ್ ಅಲ್ಲ. ನಾನು ಹಾಗೇ ತಿಳಿದುಕೊಂಡಿದ್ದೆ. ಆದ್ರೆ, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಮತಾಂತರ ಮಾಡುವ ಲವ್ ಅಟ್ ಬ್ಯಾಕ್ ಸೈಟ್ ಎಂದು ಮಾಜಿ ಸಚಿವ ಆರ್. ಅಶೋಕ್ (R Ashoka) ಲೇವಡಿ ಮಾಡಿದ್ದಾರೆ.

    ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ, ಲವ್ ಅಟ್ ಬ್ಯಾಕ್ ಸೈಟ್ ಎಂದು ಅರ್ಥ. ಅಲ್ಲಿ ಲವ್ ಗೆ ಟ್ರೈನಿಂಗ್ ಕೊಡುತ್ತಾರೆ. ಅವರು ಹಾಗೇ ಹೋಗಿ ಲವ್ ಮಾಡಲ್ಲ. ಮೊದಲೇ ಪ್ರಿಪೇರ್ ಮಾಡಿಕೊಂಡಿರುತ್ತಾರೆ. ಒಳ್ಳೆಯ ಬೈಕ್ ಕೊಡಿಸುತ್ತಾರೆ, ಬಾಡಿ ಬಿಲ್ಡ್ ಮಾಡಲು ಜಿಮ್‌ಗೆ ಕಳಿಸುತ್ತಾರೆ. ಒಳ್ಳೆ ಬಟ್ಟೆ ಕೊಟ್ಟು ಖರ್ಚಿಗೆ ಹಣವನ್ನೂ ಕೊಡ್ತಾರೆ. ಎಲ್ಲಾ ಮಾಡಿ, ಹಿಂದೂ ಹುಡುಗಿಯರನ್ನ ಲವ್ ಮಾಡಿ ಅಂತಾ ಕಳಿಸುತ್ತಾರೆ. ಇದು ನಿಜವಾದ ಲವ್ ಜಿಹಾದ್ ಎಂದು ಹೇಳಿದ್ದಾರೆ.

    ಹೀಗೆ ಮತಾಂತರ ಮಾಡಿ ದೇಶವನ್ನ ಕಪಿಮುಷ್ಠಿಯಲ್ಲಿ ಹಿಡಿಯಲು ಯತ್ನಿಸಿದ್ದರು. ಆದರೆ, ಬಿಜೆಪಿ ಸರ್ಕಾರ (BJP Government) ಎಲ್ಲದಕ್ಕೂ ಕಡಿವಾಣ ಹಾಕಿತ್ತು. ಈಗ ಕಾಂಗ್ರೆಸ್ ಸರ್ಕಾರ ಗೇಟ್ ಓಪನ್ ಮಾಡಿ ಮುಕ್ತ ಅವಕಾಶ ನೀಡಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೇ ಮತಾಂತರಕ್ಕೆ ಸಿದ್ದರಾಮಯ್ಯನವರೇ (Siddaramaiah) ರಾಯಭಾರಿ ಎಂದು ಮುಖ್ಯಮಂತ್ರಿಗಳನ್ನ ಟೀಕಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದ ಐವರು MBBS ವಿದ್ಯಾರ್ಥಿಗಳು ಅರೆಸ್ಟ್

    ಮತಾಂತರವಾದರೆ ಕಾಂಗ್ರೆಸ್ಸಿಗೆ ಮತ ಬೀಳುತ್ತೆ. ಹಾಗಾಗಿ, ಮತಾಂತರಕ್ಕೆ ಸಿದ್ದರಾಮಯ್ಯ ಅವರು ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹಾಗಾದ್ರೆ, ನಮ್ಮ ಪಕ್ಕ ಹಾಗೂ ಎದುರಿನ ಮನೆಯ ಅಮರನಾಥ್, ಅಬ್ದುಲ್ ಘನಿ ಆಗ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗಿಲ್ಲ ಕೇಂದ್ರದ ಅಕ್ಕಿ – ಆಶಾಭಾವನೆಯಿಂದ ಬಂದ ನಮಗೆ ಎರಡನೇ ಬಾರಿ ನಿರಾಸೆ: ಮುನಿಯಪ್ಪ

    ಬ್ರಿಟಿಷರು ಕೂಡ ಈ ದೇಶ ನಮ್ಮ ಕೈಯಲ್ಲಿ ಉಳಿಯಬೇಕು ಅಂದ್ರೆ ಮತಾಂತರ ಆಗಬೇಕು ಎಂದಿದ್ದರು. ಬಾಬರ್, ಔರಂಗಜೇಬ್ ಕೂಡ ಈ ದೇಶ ನಮ್ಮ ಕೈಗೆ ಬರಬೇಕಾದ್ರೆ ಎಲ್ಲರೂ ಮುಸ್ಲಿಂ ಆಗಬೇಕು ಎಂದಿದ್ದರು. ಅದಕ್ಕೆ ಸಾಕ್ಷಿ ಇಲ್ಲೇ ಇದ್ದಾರೆ ನೋಡಿ, ಕೆ.ಜಿ.ಬೋಪಯ್ಯನವರು ಎಂದರು. ಬೋಪಯ್ಯ ಅಂದ್ರೆ ಬೋಪಯ್ಯನವರನ್ನ ನೋಡಬೇಡಿ. ಅವರಲ್ಲ ಮಾಡಿದ್ದು. ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಮತಾಂತರ ಮಾಡಿದ್ದ. ಈಗ ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.