Tag: muskan

  • ಹಿಜಬ್‌ ನಮ್ಮ ಹಕ್ಕು, ಇನ್ಮುಂದೆ ಅಣ್ಣ-ತಮ್ಮಂದಿರಂತೆ ಬದುಕೋಣ – ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಮುಸ್ಕಾನ್‌

    ಹಿಜಬ್‌ ನಮ್ಮ ಹಕ್ಕು, ಇನ್ಮುಂದೆ ಅಣ್ಣ-ತಮ್ಮಂದಿರಂತೆ ಬದುಕೋಣ – ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಮುಸ್ಕಾನ್‌

    ಮಂಡ್ಯ: ಹಿಜಬ್ (Hijab) ನಮ್ಮ ಸಂಸ್ಕೃತಿ, ನಮ್ಮ ಹಕ್ಕು, ಅದು ವಾಪಸ್ ಬರುತ್ತೆ ಎಂಬ ನಂಬಿಕೆಯಿದೆ. ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡ. ಇನ್ಮುಂದೆ ಅಣ್ಣ-ತಮ್ಮಂದಿರ ರೀತಿ ಬದುಕೋಣ ಎಂದು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ (Muskan) ಕರೆ ನೀಡಿದ್ದಾರೆ.

    ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ʻಜೈ ಶ್ರೀರಾಮ್‌ʼ ಘೋಷಣೆಗೆ ಕೂಗುತ್ತಿದ್ದ ಯುವರ ಗುಂಪಿಗೆ ವಿರುದ್ಧವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್‌, ಹಿಜಬ್‌ ನಿಷೇಧ ಆದೇಶ ವಾಪಸ್‌ ಪಡೆಯಬೇಕೆಂಬ ಸಿಎಂ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಸಿದ್ದರಾಮಯ್ಯ ತೆಗೆದುಕೊಂಡಿರೋ ನಿರ್ಧಾರ ಖಂಡಿಸ್ತೇನೆ: ಯಡಿಯೂರಪ್ಪ

    ಸಿಎಂ ಸಿದ್ದರಾಮಯ್ಯ (Siddaramaiah), ಸಚಿವರಾದ ಜಮ್ಮೀರ್ ಅಹ್ಮದ್‌ ಖಾನ್‌, ಯು.ಟಿ ಖಾದರ್, ಡಿ.ಕೆ ಶಿವಕುಮಾರ್ ಎಲ್ಲರಿಗೂ ಧನ್ಯವಾದಗಳು. ನಮ್ಮ ಹಕ್ಕನ್ನು ವಾಪಸ್‌ ಕೊಟಿರುವುದಕ್ಕೆ ಧನ್ಯವಾದಗಳು. ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ. ನಾವು ಅಣ್ಣ-ತಮ್ಮಂದಿರ ರೀತಿ ಕಾಲೇಜಿಗೆ ಹೋಗಿ ಓದುತ್ತಾ ಇದ್ದೆವು. ಅದೇ ರೀತಿ ಮುಂದೆಯೂ ಹೋಗಬೇಕು ಎಂದು ಮುಸ್ಕಾನ್‌ ಕೇಳಿಕೊಂಡಿದ್ದಾರೆ.

    ಹಿಜಬ್ ನಮ್ಮ ಸಂಸ್ಕೃತಿ, ನಮ್ಮ ಹಕ್ಕು. ಹಕ್ಕು ವಾಪಸ್ ಬರುತ್ತೆ ಎಂಬ ನಂಬಿಕೆ ಇದೆ. ಹಿಜಬ್ ಅನ್ನೋದು ನಮ್ಮ ಧರ್ಮ. ಅದನ್ನು ನಾವು ಪಾಲನೆ ಮಾಡಬೇಕಾಗಿದೆ. ಹಿಜಬ್‌ ವಿವಾದದಿಂದ ಅನೇಕ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಸಹ ನಾನು ಸಹ ಒಂದು ವರ್ಷ ಕಾಲೇಜಿಗೇ ಹೋಗಿಲ್ಲ. ಈಗ ನಾನು ಪಿಇಎಸ್ ಕಾಲೇಜಿಗೆ ಹೋಗ್ತೀನಿ. ಎಲ್ಲರೂ ಈಗ ಬಂದು ಪರೀಕ್ಷೆ ಬರೆಯಿರಿ ಎಂದು ಸಹ ವಿದ್ಯಾರ್ಥಿನಿಯರಿಗೂ ಕರೆ ನೀಡಿದ್ದಾರೆ.

    ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡ. ಅಣ್ಣ-ತಮ್ಮಂದಿರ ರೀತಿ ಇದ್ದೀವಿ. ಮುಂದೆಯೂ ಸಹ ಹಾಗೇಯೇ ಇರೋಣ. ನಾವು ಮೊದಲಿನಿಂದಲೂ ಹಿಜಬ್‌ ಧರಿಸುತ್ತಿದ್ದೆವು. ಎಲ್ಲಾ ಧರ್ಮ ಒಂದೇ, ಮನುಷ್ಯರ ರೀತಿ ಬದುಕೋಣ. ಧರ್ಮಗಳ ನಡುವೆ ಸಂಘರ್ಷ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಯಾರೋ ಸಭೆಯಲ್ಲಿ ಕೇಳಿದ್ರಂತೆ ಇವರು ಹೇಳಿಬಿಟ್ರಂತೆ- ಹಿಜಬ್ ನಿಷೇಧ ವಾಪಸ್ಸಿಗೆ ವಿಜಯೇಂದ್ರ ಕಿಡಿ

    ಅಂದು ಏನಾಗಿತ್ತು?
    ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಹುಡುಗರ ಗುಂಪೊಂದು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾಗ ಮುಸ್ಕಾನ್‌ ‘ಅಲ್ಲಾಹು ಅಕ್ಬರ್’ ಎಂದು ಕೂಗಿದ್ದರು. ಈ ಕುರಿತ ವೀಡಿಯೋ ತುಣುಕು ದೇಶಾದ್ಯಂತ ಸದ್ದು ಮಾಡಿತ್ತು.

    ಅಂದು ಮುಸ್ಕಾನ್‌ ಹೇಳಿಕೊಂಡಿದ್ದೇನು?
    ನಾನು ಎಂದಿನಂತೆ ಬುರ್ಕಾ ಧರಿಸಿ ಕಾಲೇಜು ಪ್ರವೇಶಿಸಿದೆ. ಈ ವೇಳೆ ಗುಂಪೊಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿತು. ನಾನು ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಆ ಗುಂಪಿನಲ್ಲಿದ್ದವರಲ್ಲಿ ಕೇವಲ ಶೇ.10ರಷ್ಟು ಮಂದಿ ಮಾತ್ರ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿದ್ದರು. ಉಳಿದ 90 ಪ್ರತಿಶತ ಯುವಕರು ಹೊರಗಿನಿಂದ ಬಂದವರಾಗಿದ್ದರು. ಇದನ್ನೂ ಓದಿ: ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಶಿಕ್ಷಣವೇ ನಮ್ಮ ಆದ್ಯತೆ. ಆದರೆ ಅವರು ಅದನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದು ತುಂಡು ಬಟ್ಟೆ ವಿಚಾರಕ್ಕೆ ನಮ್ಮ ಶಿಕ್ಷಣ ಹಾಳುಮಾಡಲು ಯತ್ನಿಸುತ್ತಿದ್ದಾರೆ. ನಾವು ಯಾವಾಗಲೂ ಬುರ್ಕಾ ಮತ್ತು ಹಿಜಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದೆವು. ಕಾಲೇಜಿಗೆ ಬಂದಾಗ ಬುರ್ಕಾ ತೆಗೆದು, ಹಿಜಬ್ ಮಾತ್ರ ಹಾಕಿಕೊಂಡು ತರಗತಿಯಲ್ಲಿ ಕೂರುತ್ತಿದ್ದೆವು. ಯಾವಾಗಲೂ ಇದಕ್ಕೆ ವಿರೋಧ ಇರಲಿಲ್ಲ. ಆದರೆ ಒಂದು ವಾರದಿಂದ ಹಿಜಬ್‌ಗೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದರು.

  • ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಮಂಡ್ಯ: ‘ಅಲ್ಲಾಹು ಅಕ್ಬರ್’ ಎಂದು ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಹಾರಿದ್ದಾರೆ.

    ವಿದ್ಯಾರ್ಥಿನಿ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸೌದಿ ಪ್ರವಾಸಕ್ಕೆ ಹೊರಟಿದೆ. ಈ ಪ್ರವಾಸದ ಹಿಂದೆ ಏನಾದರೂ ಇದ್ಯಾ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಹಿಂದೆ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿ ಭಾರೀ ಸುದ್ದಿಯಾಗಿದ್ದರು. ಈ ಹೇಳಿಕೆ ಹಿನ್ನೆಲೆ ಉಗ್ರ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಈ ವೇಳೆ ಮುಸ್ಕಾನ್ ವಿದೇಶಿ ಪ್ರವಾಸ ಕೈಗೊಂಡಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.

    ಅಲ್ ಖೈದಾ ಸಂಘಟನೆ ಮುಸ್ಕಾನ್ ಹೊಗಳಿ ಗುಣಗಾನ ಮಾಡಿತ್ತು. ಇದರಿಂದ ಮುಸ್ಕಾನ್ ಬಗ್ಗೆ ಹೆಚ್ಚು ತನಿಖೆ ಮಾಡುವಂತೆ ಆಗ್ರಹ ಮಾಡಲಾಗಿತ್ತು. ಪರಿಣಾಮ ಪೊಲೀಸ್ ಇಲಾಖೆ ಮುಸ್ಕಾನ್ ಮತ್ತು ಕುಟುಂಬದವರನ್ನು ವಿಚಾರಣೆ ನಡೆಸಿತ್ತು. ಈ ನಡುವೆ ಮುಸ್ಕಾನ್ ಮನೆಗೆ ಬಂದೋಗುವವರ ಮೇಲೆ ಪೊಲೀಸ್ ಇಲಾಖೆ ಒಂದು ಕಣ್ಣು ಇಟ್ಟಿತ್ತು. ಆದರೆ ಈ ಕುಟುಂಬ ಖಾಕಿಗೆ ಮಾಹಿತಿ ನೀಡದೆ ಕಳೆದ ಏಪ್ರಿಲ್ 25 ರಂದೇ ಸೌದಿಗೆ ತೆರಳಿದೆ. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ಮುಸ್ಕಾನ್ ಕುಟುಂಬ ಧಾರ್ಮಿಕ ಪ್ರವಾಸಕ್ಕಾಗಿ ಸೌದಿ ಪ್ರವಾಸ ಎಂದು ಮಾಹಿತಿ ಸಿಕ್ಕಿದೆ. ಆದರೆ ಈ ಪ್ರವಾಸದ ಹಿಂದೆ ಇರುವ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಗೆ ಒತ್ತಾಯ ಪ್ರಾರಂಭವಾಗಿದೆ.

  • ಮುಸ್ಕಾನ್‌ರನ್ನು ತನಿಖೆ ಮಾಡಿದರೆ ತಪ್ಪೇನೂ ಇಲ್ಲ: ಸುಮಲತಾ

    ಮುಸ್ಕಾನ್‌ರನ್ನು ತನಿಖೆ ಮಾಡಿದರೆ ತಪ್ಪೇನೂ ಇಲ್ಲ: ಸುಮಲತಾ

    ಬೆಂಗಳೂರು: ಮಂಡ್ಯದ ಮುಸ್ಕಾನ್‌ ಅವರನ್ನು ತನಿಖೆ ನಡೆಸಿದರೆ ತಪ್ಪೇನೂ ಇಲ್ಲ. ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಮುಸ್ಕಾನ್‍ಗೆ ಸಂಘಟನೆ ಸಂಪರ್ಕ ಬಗ್ಗೆ ತನಿಖೆಗೆ ಆಗ್ರಹಿಸಿ ಸಿಎಂಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದರು. ಸಂಘಟನೆಗಳು, ಸಮುದಾಯದ ಮುಖಂಡರ ಹೇಳಿಕೆಗಳಿಗೆ ಬಡವರು ಬಲಿಯಾಗುತ್ತಿದ್ದಾರೆ. ಎಲ್ಲರೂ ಶಾಂತಿಯಿಂದ ಇರಬೇಕಾಗುತ್ತದೆ. ಸರ್ಕಾರ ಸುಮ್ಮನೆ ಇಲ್ಲ. ಪ್ರಚೋದನೆ ಯಾರು ಮಾಡ್ತಾರೆ ಎಂದು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದರು.

    ತನಿಖೆ ಆಗಬೇಕು, ವೀಡಿಯೋದಲ್ಲಿ ಹೇಳಿರೋದು ನಿಜವಾ ಇಲ್ವಾ ಅಂತ ಗೊತ್ತಾಗುತ್ತದೆ. ಇನ್ನೊಬ್ರು ಆ ವೀಡಿಯೋ ನಕಲಿ ಅಂದರು. ತನಿಖೆ ಆದರೆ ಸಂಚು ಇದೆಯಾ ಇಲ್ವಾ ಎಂದು ತಿಳಿಯುತ್ತದೆ. ಮಂಡ್ಯದಲ್ಲಿ, ರಾಜ್ಯದಲ್ಲಿ ವಾತಾವರಣ ಶಾಂತಿಯಿಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

    ಸಮುದಾಯದ ನಾಯಕರು, ರಾಜಕೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರೂ ಶಾಂತಿ ವಾತಾವರಣ ಕೆಡಿಸುವ ಹೇಳಿಕೆ ಕೊಡಬಾರದು. ರಾಜಕೀಯ ಲಾಭಕ್ಕೆ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ಇದೇ ವೇಳೆ ಬಿಜೆಪಿಗೆ ಸೇರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಎಲೆಕ್ಷನ್‍ಗೆ ನಿಂತಾಗಿನಿಂದ ಈ ಮಾತು ಕೇಳಿಬರ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಈಗ ಯಾವುದೇ ಪಕ್ಷ ಸೇರಲು ತಾಂತ್ರಿಕ ಸಮಸ್ಯೆ ಇದೆ. ಜಿಲ್ಲೆಯ ಜನ ಹೇಗೆ ಹೇಳ್ತಾರೆ ಹಾಗೆ ಮಾಡುತ್ತೇನೆ. ಒಂದು ಪಕ್ಷ ಸೇರೋದಿಕ್ಕೆ ಮಂಡ್ಯದ ಜನ ಹೇಳ್ಬೇಕೇ ಹೊರತು ನಾನಾಗಿ ನಾನು ನಿರ್ಧಾರ ತಗೊಳ್ಳಕ್ಕಾಗಲ್ಲ. ಜನ ಹೇಳಿದ್ದಕ್ಕೆ ಪಕ್ಷೇತರ ಆಗಿ ಸ್ಪರ್ಧಿಸಿದ್ದೆ. ಈಗ ಜನ ಅಭಿಷೇಕ್ ಅವರನ್ನೂ ಚುನಾವಣೆಗೆ ನಿಲ್ಸಿ ಅಂತಿದಾರೆ. ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್‍ಗೆ ಬಿಟ್ಟಿದ್ದು ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

  • ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ಕಾರವಾರ: ಮಂಡ್ಯದ ಮುಸ್ಕಾನ್‍ರನ್ನು ತನಿಖೆಗೆ ಒಳಪಡಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗ್ಡೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ತಾವು ಬರೆದ ಪತ್ರದಲ್ಲಿ ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಕುರಿತು ಪ್ರಸ್ತಾಪಿಸಿರುವ ಅವರು, ಈ ಹಿಂದೆ ಹಿಜಬ್ ವಿವಾದ ತಾರಕ್ಕೇರಿದ್ದ ಸಂದರ್ಭದಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕುತ್ತರವಾಗಿ ಬೀಬಿ ಮುಸ್ಕಾನ್ ಎಂಬ ಬುರ್ಖಾಧಾರಿ ವಿದ್ಯಾರ್ಥಿನಿಯು ‘ಅಲ್ಲಾ ಹೋ ಅಕ್ಬರ್’ ಎಂದು ಕೂಗಿದ್ದ ವೀಡಿಯೋ ಜಗತ್ತಿನೆಲ್ಲಡೆ ಪ್ರಮುಖ ನ್ಯೂಸ್ ಚಾನೆಲ್‍ಗಳಲ್ಲಿ ಪ್ರಸಾರವಾಗಿ, ಸದರಿ ವಿದ್ಯಾರ್ಥಿನಿಯು ದಿಢೀರ್ ಪ್ರಸಿದ್ಧಿಯನ್ನು ಪಡೆದಿದ್ದ ಘಟನೆ ನಡೆದಿತ್ತು. ಇದನ್ನೂ ಓದಿ: ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

    ಈ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಸಂಘಟನೆಗಳಿಂದ ಪ್ರಶಂಸೆಯ ನುಡಿಗಳು ಹಾಗೂ ಬಹುಮಾನಗಳ ಘೋಷಣೆ ಮಾಡಲಾಗಿತ್ತು. ಹೀಗಿರುವಾಗ ನಿಷೇಧಿತ ಮುಸ್ಲಿಂ ಭಯೋತ್ಪಾದಕ ಸಂಘಟನೆಯಾದ ಅಲ್-ಖೈದಾದ ಮುಖ್ಯಸ್ಥನಾದ ಆಯಮನ್-ಅಲ್-ಜವಾಹರಿ ಇತ್ತೀಚೆಗೆ ಈ ವಿದ್ಯಾರ್ಥಿನಿಯ ಕುರಿತು ‘ಭಾರತದ ಸರ್ವಶ್ರೇಷ್ಟ ಮಹಿಳೆ’ ಎಂದು ಹೊಗಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ಧರಿಸುವುದನ್ನು ನಿಷೇಧಿಸಿ ತೀರ್ಪು ನೀಡಿದ್ದರೂ ಸಹಿತ ಹಲವಾರು ರಾಜಕಾರಣಿಗಳು, ಮೂಲಭೂತವಾದಿ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿರುತ್ತಾರೆ. ಹಿಜಾಬ್ ಪ್ರತಿಭಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಉಚ್ಚ ನ್ಯಾಯಲಯ ಪೀಠವು ಅಭಿಪ್ರಾಯ ವ್ಯಕ್ತಪಡಿಸಿರುವುದು ಇಲ್ಲಿ ಉಲ್ಲೇಖನೀಯವಾಗಿದೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    ಕಾರಣ ಬೀಬಿ ಮುಸ್ಕಾನ್ ವಿದ್ಯಾರ್ಥಿನಿಗೆ ಹಿಜಾಬ್ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಇರುವ ಸಂಬಂಧದ ಕುರಿತಂತೆ ಕೂಲಂಕುಷವಾದ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.

  • ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಕುಟುಂಬದ ವಿರುದ್ಧ ದೂರು

    ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಕುಟುಂಬದ ವಿರುದ್ಧ ದೂರು

    ಮಂಡ್ಯ: ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಮತ್ತು ಕುಟುಂಬದ ವಿರುದ್ಧ NIA  (ಕೇಂದ್ರೀಯ ತನಿಖಾ ದಳ) ತನಿಖೆ ನಡೆಸುವಂತೆ ಒತ್ತಾಯಿಸಿ ಅನಂತ ಕುಮಾರ್ ಅಭಿಮಾನಿಗಳ ಸಂಘವು ಒತ್ತಾಯಿಸಿದೆ.

    ಭಾರತದ ಆತಂರಿಕ ಭದ್ರತೆಗೆ ಅಪಾಯವಿದ್ದು, ಮುಸ್ಕಾನ್ ಕುಟುಂಬದ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸಂಘದ ಅನಿಲ್ ಮಂಡ್ಯ ಜಿಲ್ಲೆಯ ಎಸ್‌ಪಿಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ

    ALKHAIDA

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಮುಖಂಡರು ಹಣ, ಹುಡುಗೊರೆ ನೀಡಿ ವಿದ್ಯಾರ್ಥಿನಿಯನ್ನು ಬೆಂಬಲಿಸಿದ್ದಾರೆ. ಹೊರ ರಾಜ್ಯದವರೂ ಶಹಬ್ಬಾಸ್ ಗಿರಿ ನೀಡಿದ್ದಾರೆ. ಈ ನಡುವೆ ಆಲ್‌ಖೈದಾ ಸಹ ಬೆಂಬಲ ವ್ಯಕ್ತಪಡಿಸಿದ್ದು, ಇದರ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿದೆ ಎನ್ನುವ ಆತಂಕ ಶುರುವಾಗಿದೆ. ಇದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ACಯ ವಿಷಾನಿಲ ಸೋರಿಕೆ- ಒಂದೇ ಕುಟುಂಬದ ನಾಲ್ವರು ಸಾವು

    ಈಚೆಗಷ್ಟೇ ಹೈಕೋರ್ಟ್ ನ್ಯಾಯಾಧೀಶರು ಸಹ ಆಲ್‌ಖೈದಾ ಪ್ರಸಂಶೆಯ ಹಿಂದೆ ದೊಡ್ಡ ಷಡ್ಯಂತರ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದು ದೇಶದ ಆಂತರಿಕ ಭದ್ರತೆಯ ವಿಚಾರ ಆಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು. ಮುಸ್ಕಾನ್ ಕುಟುಂಬದವರ ಪಾಸ್‌ ಪೋರ್ಟ್‌ ಇದ್ದಲ್ಲಿ ವಶಪಡಿಸಿಕೊಂಡು ಅವರು ದೇಶದಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕು. ಜೊತೆಗೆ ಅವರನ್ನು ಪ್ರಸಂಶಿಸಿದ ಮುಖಂಡರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

  • ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಬೆಳಗಾವಿ: ಅಲ್‌ಖೈದಾ ಜವಹರಿಗೆ ಭಾರತದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಮ್ಮ ದೇಶ ತಾಲಿಬಾನ್ ಅಲ್ಲ. ಕುರಾನ್ ಮೇಲೆ ನಮ್ಮ ದೇಶ ನಡೆಯಲ್ಲ. ಮುಸ್ಕಾನ್ ಹೊಗಳುವ ಅವಶ್ಯಕತೆ ಇಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಮುಸ್ಕಾನ್ ಹೊಗಳಿ ಅಲ್‌ಖೈದಾ ಮುಖ್ಯಸ್ಥ ವೀಡಿಯೋ ಬಿಡುಗಡೆ ಮಾಡಿದ ವಿಚಾರವಾಗಿ, ಸಿದ್ದರಾಮಯ್ಯ ಆರ್‌ಎಸ್‌ಎಸ್ ಮಾಡಿಸಿದ ವೀಡಿಯೋ ಎಂಬ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, ಅಲ್‌ಖೈದಾ ಜವಹರಿ ಮುಸ್ಕಾನ್ ಹೊಗಳಿದ್ದು ಅತ್ಯಂತ ಖಂಡನೀಯವಾದದ್ದು. ಇದು ಅಷ್ಟು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗೋಮಾಂಸ ತಿನ್ನುವವರ ಜೊತೆ ಬೇಡ, ಹಿಂದೂಗಳು ಹಿಂದೂ ಡ್ರೈವರ್ ಜೊತೆ ದೇವಾಲಯಕ್ಕೆ ಹೋಗಲಿ: ಭಾರತ್ ರಕ್ಷಣ್ ವೇದಿಕೆ

    ಅಲ್‌ಖೈದಾ ಸಂಘಟನೆಯನ್ನು ನಿಷೇಧ ಮಾಡಲಾಗಿದೆ. ಬ್ಯಾನ್ ಆದ ನಂತರ ಈ ವೀಡಿಯೋ ಎಲ್ಲಿಂದ ಬಂತು? ಹೇಗೆ ಬಂತು? ಕರ್ನಾಟಕದ ಮಂಡ್ಯ ಮೂಲದ ಮುಸ್ಕಾನ್‌ವರೆಗೂ ಹೇಗೆ ಬಂತು ಎನ್ನುವುದನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸಬೇಕು. ಮುಸ್ಕಾನ್ ಹಾಗೂ ಆಕೆಯ ತಂದೆಯನ್ನು ಬಂಧಿಸಬೇಕು. ಅವರ ಮನೆಗೆ ಯಾರೆಲ್ಲಾ ಭೇಟಿ ಕೊಟ್ಟಿದ್ದಾರೆ ಎಂಬ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ಮಹಾರಾಷ್ಟ್ರದ ಮುಸ್ಲಿಂ ಎಂಎಲ್‌ಎ ಬಂದು ಅವರಿಗೆ ಮೊಬೈಲ್ ಕೊಟ್ಟು ಹೋಗಿದ್ದಾರೆ. ಆ ಮೊಬೈಲ್ ಎಲ್ಲಿಂದ ಬಂತು ಎಂಬುದನ್ನು ತಿಳಿಯಬೇಕು. ತಕ್ಷಣ ಅದನ್ನು ಸೀಜ್ ಮಾಡಬೇಕು ಎಂದು ಹೇಳಿದರು.

  • ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ ಸುಧಾಕರ್

    ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ ಸುಧಾಕರ್

    – ನಾನೊಬ್ಬ ಸೆಕ್ಯುಲರ್ ರಾಜಕಾರಣಿ, ರಾಜ್ಯ ಸರ್ಕಾರಕ್ಕೆ ಎಲ್ಲರೂ ಸಮಾನರು
    – ವಿದ್ಯಾರ್ಥಿನಿ ಮುಸ್ಕಾನ್ ಮುಗ್ಧಳು

    ಬೆಂಗಳೂರು: ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ. ಅಂತಹ ಯಾವುದೇ ಆಲೋಚನೆಯನ್ನು ಸರ್ಕಾರ ಮಾಡಿಲ್ಲ. ಇದು ಯಾವುದೇ ಒಂದು ಧರ್ಮದ ಸರ್ಕಾರ ಅಲ್ಲ, ಇದು ಎಲ್ಲರ ಸರ್ಕಾರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಪ್ರತಿ ಧರ್ಮವನ್ನು ಸಮಾನವಾಗಿ ಕಾಣುತ್ತದೆ. ಇಲ್ಲಿ ಯಾರೂ ಮೇಲು, ಕೀಳು ಅಲ್ಲ. ಪ್ರತಿಯೊಬ್ಬರಿಗೂ ಅವರ ಧರ್ಮದ ಅನುಸಾರ ಆಚರಣೆಗಳನ್ನು ಮಾಡಲು ಕಾನೂನಿನಲ್ಲಿ ಸಮಾನ ಅವಕಾಶವಿದೆ. ಹಾಗೆಯೇ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು – ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ

    ಹಿಜಬ್, ಹಲಾಲ್ ಮೊದಲಾದ ಧಾರ್ಮಿಕ ವಿವಾದಗಳಲ್ಲಿ ಸರ್ಕಾರ ಯಾವುದೇ ಪಾತ್ರ ನಿರ್ವಹಿಸಿಲ್ಲ. ಆದರೆ ಕೆಲವರು ಇದು ಸರ್ಕಾರದ ಪ್ರಾಯೋಜಿತ ಎಂದು ಹೇಳುತ್ತಿದ್ದಾರೆ. ಈ ಸರ್ಕಾರ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ನಾವೆಲ್ಲರೂ ಎಲ್ಲ ಧರ್ಮಗಳನ್ನೂ ಗೌರವದಿಂದ ಕಾಣುತ್ತೇವೆ. ಪ್ರತಿ ಧರ್ಮಕ್ಕೂ ಸಹ ನಾವು ಗೌರವ ಕೊಡುತ್ತಿದ್ದೇವೆ. ನಮ್ಮ ಜಾತ್ಯಾತೀತ ನಿಲುವಿನಲ್ಲಿ ಬದಲಾವಣೆಯೇನೂ ಆಗಿಲ್ಲ. ಹಲಾಲ್ ನಿಷೇಧದ ಹಿಂದೆ ಯಾರಿದ್ದಾರೆಂದು ನನಗೂ ತಿಳಿದಿಲ್ಲ. ಆದರೆ ಇದರಲ್ಲಿ ಸರ್ಕಾರದ ಪಾತ್ರ ಎಳ್ಳಷ್ಟೂ ಇಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದರು.

    ಭಯೋತ್ಪಾದಕರು ಭಯ ಹುಟ್ಟಿಸಲಷ್ಟೇ ಸಾಧ್ಯ: ಭಯೋತ್ಪಾದಕರಿಗೆ ಜನರಲ್ಲಿ ಭಯ ಹುಟ್ಟಿಸಲು ಮಾತ್ರ ಸಾಧ್ಯವಾಗುತ್ತದೆ. ಭಯ ಹುಟ್ಟಿಸಲು ಅವರು ಜನರ ಮುಗ್ಧತೆಯನ್ನು ಮುಖ್ಯ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ವಿದ್ಯಾರ್ಥಿನಿ ಮುಸ್ಕಾನ್ ಮುಗ್ಧಳಾಗಿದ್ದಾಳೆ. ಆದರೆ ನಾವೆಲ್ಲರೂ ಕಾನೂನು ಪಾಲನೆ ಮಾಡಬೇಕು. ನೆಲದ ಕಾನೂನನ್ನು ಗೌರವಿಸಬೇಕು. ಜೀವನದಲ್ಲಿ ಶಿಸ್ತು ಮುಖ್ಯವಾಗಿದ್ದು, ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗೆ ಗೌರವ ಕೊಡಬೇಕು. ಶಾಲೆಯಲ್ಲಿ ಧರ್ಮವನ್ನು ಬದಿಗಿಟ್ಟು ಶಿಕ್ಷಣಕ್ಕೆ ಗೌರವ ಕೊಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲದರಲ್ಲೂ ಒಗ್ಗಟ್ಟಿರಬೇಕು ಎಂದರು. ಇದನ್ನೂ ಓದಿ: ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಮನೆಗೆ ಭೇಟಿ ಕೊಟ್ಟ ನವಜೋತ್ ಸಿಂಗ್ ಸಿಧು

    ಧರ್ಮ, ಭಾಷೆ ಮೊದಲಾದ ಭಿನ್ನತೆಗಳ ನಡುವೆಯೂ ಏಕತೆ ಇರುವುದು ಅಗತ್ಯ. ನನಗೆ ಯಾವ ಧರ್ಮವನ್ನೂ ಗುರಿಯಾಗಿಸಲು ಇಷ್ಟವಿಲ್ಲ. ನಾನೊಬ್ಬ ಸೆಕ್ಯುಲರ್ ರಾಜಕಾರಣಿ. ಪ್ರತಿಯೊಬ್ಬರಿಗೂ ಅವರ ನಂಬಿಕೆಯನ್ನು ಆಚರಿಸಲು ಸಂವಿಧಾನದಲ್ಲಿ ಅವಕಾಶವಿದೆ. ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ಎಲ್ಲಾ ನಾಗರಿಕರು ಕಾನೂನು ಪಾಲಿಸಬೇಕು. ಯಾವುದೇ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಕೆಲ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ ಎಂದು ಸಚಿವರು ಹೇಳಿದರು.

    ಅಲ್ ಕೈದಾ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನಾ ಸಂಘಟನೆ. ಈ ಸಂಘಟನೆಯ ಹೇಳಿಕೆಯನ್ನು ಭಾರತೀಯರು ಒಕ್ಕೊರಲಿನಿಂದ ಖಂಡಿಸುತ್ತದೆ. ಅವರ್ಯಾರೋ ಹೇಳಿಕೆ ನೀಡಿದರೆ ನಮಗೆ ಅದು ಮುಖ್ಯವಾಗುವುದಿಲ್ಲ. ಆ ಸಂಘಟನೆಯನ್ನು ಭಾರತ ಎಲ್ಲ ರೀತಿಯಿಂದಲೂ ಬಹಿಷ್ಕಾರ ಹಾಕಿದೆ. ಅವರ ಹೇಳಿಕೆ ಬಗ್ಗೆ ಮಾತನಾಡುವುದೇ ಒಂದು ಅಪರಾಧ. ಅಮಾಯಕ ಜನರನ್ನು ಬಲಿ ಪಡೆಯುವ, ಅತ್ಯಂತ ಕೌರ್ಯ ಮೆರೆಯುವ ಸಂಘಟನೆಯದು. ಅವರ ಹೇಳಿಕೆ ಬಗ್ಗೆ ಏಕೆ ಮಾತನಾಡಬೇಕು ಎಂದು ಸಚಿವರು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಎಲ್ಲ PIL ಗಳನ್ನು ನಾವೇ ವಿಚಾರಣೆ ನಡೆಸುವುದಾದರೆ ಜನ ಸರ್ಕಾರವನ್ನು ಆಯ್ಕೆ ಮಾಡಿರುವುದ್ಯಾಕೆ? – ಸುಪ್ರೀಂಕೋರ್ಟ್ ಗರಂ

    ಆರ್‍ಎಸ್‍ಎಸ್ ಜೊತೆ ಒಂದು ದಿನ ಕಳೆಯಿರಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದ ಅಭಿವೃದ್ಧಿಗೆ, ದೇಶದ ಜನರಿಗಾಗಿ ಮೀಸಲಾಗಿದೆ. ಸ್ವಯಂಸೇವಕರ ಬದುಕು ದೇಶಸೇವೆಗೆ ಮುಡಿಪಾಗಿದೆ. ಸಂಘದ ಬಗ್ಗೆ ಅನುಮಾನ ಇರುವವರು ಸ್ವಯಂಸೇವಕರೊಂದಿಗೆ ಒಂದು ದಿನ ಕಳೆಯಬೇಕು. ಆಗ ಅವರಿಗೆ ಜ್ಞಾನೋದಯವಾಗುತ್ತದೆ. ಆರ್ ಎಸ್‍ಎಸ್ ನ ಚರಿತ್ರೆ ಗೊತ್ತಿಲ್ಲದವರು ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಬಗ್ಗೆ ಓದಿದರೆ ಸಂಘದ ಬಗ್ಗೆ ತಿಳಿದುಬರುತ್ತದೆ. ದೇಶದಲ್ಲಿ ಆರ್ ಎಸ್‍ಎಸ್ ಇದೆ ಎಂದರೆ ಅದಕ್ಕಾಗಿ ಹೆಮ್ಮೆ ಪಡಬೇಕು ಎಂದರು.

    ಕೋವಿಡ್ ಬಂದಾಗ ಆರ್ ಎಸ್‍ಎಸ್ ಸ್ವಯಂಸೇವಕರು ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಜನರ ಮನೆಮನೆಗೆ ತೆರಳಿ ಆಹಾರ ಸಾಮಗ್ರಿಗಳನ್ನು ಕೊಟ್ಟಿದ್ದಾರೆ. ನಾವು ಇದನ್ನು ಮಾಡಿದ್ದೇವೆ ಎಂದೂ ಸ್ವಯಂಸೇವಕರು ಹೇಳಿಲ್ಲ. ಇಂತಹ ಸಂಘವನ್ನು ಹಾಸ್ಯ, ಟೀಕೆ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರ ಯಾವುದೇ ಧರ್ಮದವರನ್ನು ತಲೆ ಮೇಲೆ ಇಟ್ಟುಕೊಳ್ಳುವುದಿಲ್ಲ. ಈ ರಾಜ್ಯದ ಪ್ರತಿ ಪ್ರಜೆಗೂ ಸರ್ಕಾರಕ್ಕೆ ಸಮಾನ. ಇದೇ ಬಿಜೆಪಿಯ ವೈಶಿಷ್ಟ್ಯ ಎಂದರು.

  • ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

    ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

    ಮಂಡ್ಯ: ಅನೇಕರು ಬಂದು ನನ್ನ ಮಗಳಿಗೆ ಹಣ, ಉಡುಗೊರೆ ಕೊಟ್ಟಿದ್ದಾರೆ. ಅದನ್ನು ನಾನು ಜನರ ಸೇವೆಗಾಗಿ ನೀಡುತ್ತೇನೆಂದು ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್‌ ತಂದೆ ಮಹಮ್ಮದ್‌ ಹುಸೇನ್‌ ಖಾನ್‌ ತಿಳಿಸಿದ್ದಾರೆ.

    ಹಣ, ಉಡುಗೊರೆ ಕೊಡಲು ಬಂದವರಿಗೆ ಬೇಡ ಎಂದಿದ್ದೆವು. ಆದರೂ ಅವರು ನೀಡಿದ್ದಾರೆ. ಆ ಹಣದಲ್ಲಿ ಜನರ ಸೇವೆಗಾಗಿ ಆಂಬುಲೆನ್ಸ್‌ ಕೊಡುತ್ತೇನೆ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ. ಅವರು ಕೊಟ್ಟ ದುಡ್ಡನ್ನು ಜನಸೇವೆಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    muskhan

    ಅಲ್‌‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಿಂದ ಮುಸ್ಕಾನ್ ಹೊಗಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರ ಈ ವಿಚಾರ ತಿಳಿಯಿತು. ಅರಬ್ಬಿ ಭಾಷೆಯಲ್ಲಿ ಮಗಳನ್ನು ಹೊಗಳಿದ್ದಾರೆ. ಆದರೆ ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಇದೆಲ್ಲಾ ತಪ್ಪು, ಗೊಂದಲ ಮಾಡಿ ನಮ್ಮ ನಮ್ಮಲ್ಲಿ ಜಗಳ ತಂದಿಡಲು ಮಾಡ್ತಿದ್ದಾರೆ. ಈ ರೀತಿಯ ಹೊಗಳಿಗೆ ಬೇಕಾಗಿಲ್ಲ. ಅವರ ಬಗ್ಗೆ ಏನು ಗೊತ್ತಿಲ್ಲದೇ ಇದ್ದಾಗ ನಾನೇನು ಹೇಳಲು ಸಾಧ್ಯ? ಹಿಜಾಬ್ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರುವುದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

    ಯಾರ‍್ಯಾರು ಏನೇನು ಮಾಡ್ತಿದ್ದಾರೋ ಗೊತ್ತಿಲ್ಲ‌. ನಾವು ಇಲ್ಲಿ ಬದುಕಿ ಜೀವನ ಮಾಡ್ತಿದ್ದೇವೆ. ಅಣ್ಣ ತಮ್ಮಂದಿರ ಹಾಗೆ ಪ್ರೀತಿ ಹಂಚಿ ಜೀವನ ಮಾಡ್ತಿದ್ದೇವೆ. ಬೇರೆ ದೇಶದವರು ಏನು ಮಾಡ್ತಿದ್ದಾರೋ ಗೊತ್ತಿಲ್ಲ. ನಮ್ಮ ದೇಶದಲ್ಲಿ ನಾವು ನೆಮ್ಮದಿಯಿಂದ ಇದ್ದೇವೆ. ಅವರ ದೇಶಗಳಲ್ಲಿ ಅವರು ನೋಡಿಕೊಳ್ಳಲಿ. ಅವರ ಮಾತುಗಳಿಗೆ ತಲೆಕೆಡಿಸಿಕೊಳ್ಳಲು ಆಗಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್

    ಮಗಳ ಪರೀಕ್ಷೆ ವಿಚಾರವಾಗಿ ಮಾತನಾಡಿ, ಪರೀಕ್ಷೆ ವೇಳೆ ಪ್ರತ್ಯೇಕ ಕೊಠಡಿ ನೀಡುವಂತೆ ಕಾಲೇಜು ಪ್ರಾಂಶುಪಾಲರನ್ನ ಕೇಳಿಕೊಂಡಿದ್ದೆವು. ಹಿಜಬ್ ಬೇಡ ವೇಲು ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದಿದ್ದೆವು. ಕಾಲೇಜು ಆಡಳಿತ ಮಂಡಳಿ ಅದಕ್ಕೆ ಅವಕಾಶ ನೀಡಲಿಲ್ಲ. ನನ್ನ ಮಗಳ ಪ್ರಾಣಕ್ಕೆ ಅಪಾಯ ಇದೆ. ನಾಳೆ ಮಗಳಿಗೆ ತೊಂದರೆ ಆದರೆ ಯಾರು ಜವಾಬ್ದಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಹಿಜಬ್‌ಗೆ ಅನುಮತಿ ಇರುವ ಕಾಲೇಜಿಗೆ ಮಗಳನ್ನು ಸೇರಿಸುತ್ತೇನೆ. ಹಿಜಬ್ ಕಾರಣಕ್ಕಾಗಿಯೇ ನಾನು ಮಗಳ ಕಾಲೇಜನ್ನು ಬದಲಾಯಿಸುತ್ತಿದ್ದೇನೆ. ಹಿಜಬ್ ಅಥವಾ ವೇಲು ಹಾಕಿಕೊಳ್ಳಲು ಅವಕಾಶ ನೀಡಿದರೆ ಮಂಡ್ಯದಲ್ಲೇ ದಾಖಲಿಸುತ್ತೇವೆ. ಇಲ್ಲ ಅಂದ್ರೆ, ಮೈಸೂರಿನಲ್ಲಿ ಹಿಜಬ್ ಅನುಮತಿ ನೀಡುವ ಕಾಲೇಜುಗಳಿವೆ. ಅಲ್ಲಿಯೇ ಸೇರಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

    ನನ್ನ ಮಗಳಿಗೆ ಜೀವ ಭಯ ಇದೆ. ಮಗಳ ಜವಾಬ್ದಾರಿ ತೆಗೆದುಕೊಳ್ತೀರಾ ಅಂತ ಕಾಲೇಜಿನವರನ್ನ ಕೇಳಿದೆ. ಅವರು ಆಗಲ್ಲ ಅಂದ್ರು. ಅದಕ್ಕಾಗಿ ಬೇರೆ ಕಾಲೇಜಿಗೆ ದಾಖಲಿಸುತ್ತೇನೆ. ಸಮವಸ್ತ್ರಕ್ಕೆ ನಾವೇ ಶುಲ್ಕ ಕಟ್ಟೋದು. ಕಾಲೇಜಿನವರು ನಮ್ಮ ಕರೆಸಿ ಸಮವಸ್ತ್ರ ನೀಡುತ್ತಿದ್ದೇವೆ ಎಂದು ಹೇಳಿದ್ದಾರಾ? ಈ ಘಟನೆ ಬಳಿಕ ಅಲ್ಲಿನ ಸ್ಥಿತಿ ಅರ್ಥ ಆಗಿದೆ‌. ಯಾರ ಹೊಗಳಿಕೆ, ಉಡುಗೊರೆ ನಮಗೆ ಬೇಡ. ನಾವು ಎಲ್ಲರ ಜೊತೆ ಅಣ್ಣ, ತಮ್ಮಂದಿರ ಹಾಗೇ ಇದ್ದೇವೆ. ಕರ್ನಾಟಕದ ಜನ ಯಾರ ಮಾತನ್ನು ನಂಬಬೇಡಿ. ಉಗ್ರ ಸಂಘಟನೆ ಮುಖ್ಯಸ್ಥನ ಹೊಗಳಿಗೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    ಮಂಡ್ಯ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಭೇಟಿ ಗಿಫ್ಟ್ ನೀಡಿದ್ದಾರೆ.

    ಜಿಶಾನ್ ಸಿದ್ದಿಕ್ ಇಂದು ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ಮನೆಗೆ ಭೇಟಿ ನೀಡಿ ಐಫೋನ್ ಮತ್ತು ಸ್ಮಾರ್ಟ್‍ವಾಚ್ ಉಡುಗೊರೆ ನೀಡಿ ಸನ್ಮಾನಿಸಿದ್ದಾರೆ.

    ಮುಸ್ಕಾನ್ ಘೋಷಣೆ ಕೂಗಿರುವುದು ನನಗೆ ಗರ್ವ ಅನ್ನಿಸಿದೆ. ಅಷ್ಟು ಜನರ ಎದುರು ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾರೆ. ಅದು ನಮಗೆ ಹೆಮ್ಮೆ ಎನ್ನಿಸುತ್ತಿದೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತಿದೆ. ಹಿಜಬ್ ಹಾಕಿಕೊಳ್ಳುವುದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ. ಮುಸ್ಕಾನ್ ಭೇಟಿ ವೇಳೆ ಜೀಶನ್ ಸಿದ್ಧಿಕಿ ಹೇಳಿದ್ದಾರೆ.  ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

    ಪಿಇಎಸ್ ಕಾಲೇಜಿನ ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಮುಸ್ಕಾನ್  ಅಲ್ಲಾಹು ಅಕ್ಬರ್ ಎಂದು ಕೂಗಿದ್ದಕ್ಕೆ ಅನೇಕ ಮುಸ್ಲಿಂ ಮುಖಂಡರು, ಕಾಂಗ್ರೆಸ್ ನಾಯಕರು ಶ್ಲಾಘಿಸಿದ್ದರು. ಆ ವಿದ್ಯಾರ್ಥಿನಿಗೆ ದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲಾಮಾ-ಇ-ಹಿಂದ್ ವತಿಯಿಂದ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಬಳಿಕ ಮುಸ್ಕಾನ್‍ಗೆ ಮುಸ್ಲಿಂ ನಾಯಕರಿಂದ ಹಣ, ಉಡುಗೊರೆ ನೀಡಿ ಸನ್ಮಾನ ಮಾಡುತ್ತಿದ್ದಾರೆ. ಇದೀಗ ಮಹಾರಾಷ್ಟ್ರದ ಕಾಂಗ್ರೆಸ್‍ನ ಮುಸ್ಲಿಂ ಶಾಸಕನಿಂದ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ:  ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ತಮಿಳುನಾಡಿನಿಂದ ಪ್ರಶಸ್ತಿ ಪ್ರಕಟ

    ಹಿಜಬ್ ಧರಿಸಿದ್ದ ವಿದ್ಯಾರ್ಥಿನಿ ಮುಸ್ಕಾನ್ ಕೇಸರಿ ಶಾಲು ಹಾಕಿದ್ದ ಹುಡುಗರ ವಿರುದ್ಧ ಸೆಟೆದು ನಿಂತಿದ್ದಳು. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಜಬ್ ಧರಿಸಿದ್ದಕ್ಕಾಗಿ ಮುಸ್ಕಾನ್ ಎದುರು ನಿಂತ ಯುವಕರ ಗುಂಪೊಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿತ್ತು. ಇದರಿಂದ ಕೋಪಗೊಂಡ ಮುಸ್ಕಾನ್ ಆ ಯುವಕರ ಎದುರು ಕೈ ಎತ್ತಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವೀಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಚೆಕ್ ನೀಡಿದ ಇಮ್ರಾನ್ ಪಾಷಾ