Tag: music record

  • ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ ಹೊಸ ದಾಖಲೆ

    ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ ಹೊಸ ದಾಖಲೆ

    ಬೆಂಗಳೂರು: ಸಂಗೀತಲೋಕದ ಮಾಂತ್ರಿಕ ಅರ್ಜುನ್ ಜನ್ಯಾ ಹೊಸ ದಾಖಲೆ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ರೇಕಾರ್ಡ್ ಒಂದನ್ನು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜಿಸಿರುವ ಮೂರು ಹಾಡುಗಳು ಈಗ ಬರೋಬ್ಬರಿ ನೂರು ಮಿಲಿಯನ್ ವಿವ್ಸ್ ಪಡೆಯುವ ಮೂಲಕವಾಗಿ ರೆಕಾರ್ಡ್ ಮಾಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಶರಣ್, ಆಶಿಕಾ ರಂಗನಾಥ್ ನಟನೆಯ ಚುಟು ಚುಟು ಅಂತೈತೆ, ನೀನಾಸಂ ಸತೀಶ್, ರಚಿತಾರಾಮ್ ನಟನೆಯ ಅಯೋಗ್ಯ ಸಿನಿಮಾದ ಎನಮ್ಮಿ ಎನಮ್ಮಿ , ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡು ನೂರು ಮಿಲಿಯನ್ ವೀಕ್ಷಣೆ ಪಡೆದುಕೊಂಡಿವೆ. ಈ ವಿಚಾರವನ್ನು ಅರ್ಜುನ್ ಜನ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    2006ರಲ್ಲಿ ಆಟೋಗ್ರಾಫ್ ಪ್ಲಿಸ್ ಸಿನಿಮಾದ ಮೂಲಕವಾಗಿ ಸ್ಯಾಂಡಲ್‍ವುಡ್ ಸಂಗೀತ ಲೋಕಕ್ಕೆ ಎಂಟ್ರಿಕೊಟ್ಟ ಅರ್ಜುನ್ ಜನ್ಯ ಅವರು ಅದ್ಭುತ ಹಾಡುಗಳನ್ನು ಕೊಟ್ಟಿದ್ದಾರೆ. ಇಲ್ಲಿಯ ವರೆಗೆ ಬರೋಬ್ಬರಿ ನೂರು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಉತ್ತಮ ಹಾಡುಗಳನ್ನು ಕೊಡುವ ಮೂಲಕವಾಗಿ ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೆ ಆಗಿರುವ ಛಾಪನ್ನು ಮೂಡಿಸಿದ್ದಾರೆ.