Tag: music lords

  • ಗದಗದಲ್ಲಿ ಇಂದಿನಿಂದ ಸಂಗೀತ ಜಾತ್ರೆ ಆರಂಭ

    ಗದಗದಲ್ಲಿ ಇಂದಿನಿಂದ ಸಂಗೀತ ಜಾತ್ರೆ ಆರಂಭ

    ಗದಗ: ಸಂಗೀತ ದಿಗ್ಗಜರ ನಾಡು, ಕವಿ ಪುಟ್ಟರಾಜ ಗವಾಯಿಗಳವರ ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಇಂದಿನಿಂದ `ಸಂಗೀತ ಜಾತ್ರೆ’ ಕಾರ್ಯಕ್ರಮವು ಅದ್ಧೂರಿಯಾಗಿ ಪ್ರಾರಂಭಗೊಂಡಿದೆ.

    ಸಂಗೀತ ಕ್ಷೇತ್ರಕ್ಕೆ ಹೆಸರಾದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಜಾತ್ರೆ ನಾಲ್ಕು ದಿನಗಳ ಕಾಲ ಈ ಕಾರ್ಯಕ್ರಮ ನಡೆಯುತ್ತದೆ.

    ಈ ಆಶ್ರಮದ ಗರಡಿಯಲ್ಲಿ ಪಳಗಿದ ಕಲಾವಿದರ ಕೀರ್ತಿ ಜಗತ್ತಿನುದ್ದಕ್ಕೂ ವ್ಯಾಪಿಸಿದೆ. ಹೀಗಾಗಿ ಗವಾಯಿಗಳು ಸ್ಥಾಪಿಸಿದ ಪುಣ್ಯಾಶ್ರಮದ ಜಾತ್ರೆ ವಿಭಿನ್ನತೆ ಪಡೆದುಕೊಂಡಿದೆ. ಅಂಧ ಅನಾಥ ಮಕ್ಕಳ ಕೈಯಲ್ಲಿನ ಭಿಕ್ಷಾ ಪಾತ್ರೆ ಬಿಡಿಸಿ, ಸಂಗೀತ ಹಾಗೂ ಅಕ್ಷರ ಜ್ಞಾನದ ಪಾತ್ರೆ ನೀಡಿದ ಕೀರ್ತಿ ಪುಟ್ಟರಾಜ ಗವಾಯಿಗಳದ್ದು. ಈ ಕಾರಣಕ್ಕೆ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಅಂದ್ರೆ ದೇಶದ ತುಂಬೆಲ್ಲ ವ್ಯಾಪಿಸಿದ ಸಂಗೀತ ಹಾಗೂ ನಾಟಕ ಕಲಾವಿದರು ಓಡೋಡಿ ಬರುತ್ತಾರೆ.

    ಜಾತ್ರೆಯ ಬಗ್ಗೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪಂಡಿತ ಕಲ್ಲಯ್ಯಜ್ಜರು ಮಾತನಾಡಿ, ಅಂಧ ಅನಾಥರ ಬಾಳಿಗೆ ಬೆಳಕಾಗುವ ವೀರೇಶ್ವರ ಪುಣ್ಯಾಶ್ರಮವಿರುವುದು ಗದಗ ಜಿಲ್ಲೆಗೆ ಹೆಮ್ಮೆಯಾಗಿದೆ. ಈ ಜಾತ್ರೆಯಲ್ಲಿ ವಿಭಿನ್ನತೆ ಮೆರೆಯುವ ಮೂಲಕ ಗದುಗಿನ ಕೀರ್ತಿಯನ್ನು ದೇಶದ ತುಂಬೆಲ್ಲ ಫಸರಿಸಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

    ಜಾತ್ರೆಯ ಕುರಿತು ಸರಿಗಮಪ ಕಲಾವಿದ ಹರೀಶರವರು ಮಾತನಾಡಿ, ಗದುಗಿನ ಈ ಸಂಗೀತ ಜಾತ್ರೆಗೆ ಕರ್ನಾಟಕ ಸೇರಿ, ಮಹಾರಾಷ್ಟ್ರ, ಗೋವಾ, ಆಂಧ್ರ, ತಮಿಳುನಾಡು, ದೆಹಲಿ, ಸೇರಿ ಹಲವು ರಾಜ್ಯಗಳಿಂದ ಆಶ್ರಮದ ಭಕ್ತರು ಹಾಗೂ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಸಾಮಾನ್ಯವಾಗಿ ದೇವರ ಹೆಸರಲ್ಲಿ ವಿವಿಧ ಸಾಂಪ್ರದಾಯಿಕ ಆಚರಣೆ ಮೂಲಕ ಜಾತ್ರೆ ಆಚರಿಸೋದು ಸಾಮಾನ್ಯ. ಆದರೆ ಈ ಸಂಗೀತ ಜಾತ್ರೆಯಲ್ಲಿ ತುಂಬಾ ಸಂಗೀತವೇ ಸದ್ದು ಮಾಡುತ್ತೆ. ಸಂಗೀತವನ್ನೆ ಕೇಂದ್ರೀಕರಿಸಿ ನಡೆಯುವ ಈ ಜಾತ್ರೆಗೆ ನೂರಾರು ವರ್ಷದ ಇತಿಹಾಸವಿದೆ ಎಂದು ಹೇಳಿದರು.