Tag: mushroom manchurian

  • ವೀಕೆಂಡ್‍ನಲ್ಲಿ ಮಾಡಿ ಸವಿಯಿರಿ ಮಶ್ರೂಮ್ ಮಂಚೂರಿ

    ವೀಕೆಂಡ್‍ನಲ್ಲಿ ಮಾಡಿ ಸವಿಯಿರಿ ಮಶ್ರೂಮ್ ಮಂಚೂರಿ

    ವೀಕೆಂಡ್‍ನಲ್ಲಿ ಪ್ರತಿವಾರ ಮಾಂಸಹಾರವನ್ನು ತಿಂದು ನಿಮಗೆ ಬೇಸರವಾಗಿರಬಹುದು. ಇಂದು ಮನೆಯಲ್ಲಿ ಮಧ್ಯಾಹ್ನ ಅಥವಾ ಸಂಜೆಯ ತಿಂಡಿಗೆ ಏನಾದ್ರೂ ವಿಶೇಷವಾದ ಅಡುಗೆಯನ್ನು ಫಟಾ ಫಟ್ ಎಂದು ತಯಾರಿಸಬೇಕು ಎಂದು ಕೊಂಡಿದ್ದೀರ. ಹಾಗಿದ್ದರೆ ಇಂದು ನೀವು ಮನೆಯಲ್ಲಿ ಕುಟುಂಬ ಸಮೇತರಾಗಿ ಕುಳಿತು ತಿನ್ನಲು ಮಶ್ರೂಮ್ ಮಂಚೂರಿಯಂತಹ ವಿಶೇಷ ರೆಸಿಪಿಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ. ನಿಮ್ಮ ಮನೆ ಮಂದಿ ನಾಲಿಗೆ ಚಪ್ಪರಿಸಿ ತಿನ್ನಬಹುದಾಗಿದೆ.

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಈ ವೀಕೆಂಡ್‍ನಲ್ಲಿ ಮಶ್ರೂಮ್ ಮಂಚೂರಿ ಮಾಡಿ. ಇದನ್ನೂ ಓದಿ:  ಬಾಯಲ್ಲಿ ನಿರೂರಿಸುವಂತಹ ಬಾದಾಮ್ ಪುರಿಯನ್ನು ನೀವೂ ಟ್ರೈ ಮಾಡಿ

    ಬೇಕಾಗುವ ಸಾಮಗ್ರಿಗಳು:
    *ಮಶ್ರೂಮ್- 2ಕಪ್
    * ಕಾನ್ ಫ್ಲವರ್- ಅರ್ಧ ಕಪ್
    * ಖಾರದ ಪುಡಿ- 1 ಟೀ ಸ್ಪೂನ್
    * ಹಸಿ ಮೆಣಸಿನಕಾಯಿ – 2
    * ಈರುಳ್ಳಿ- 2
    * ಮೈದಾ ಹಿಟ್ಟು- ಅರ್ಧ ಕಪ್
    * ಕ್ಯಾಪ್ಸಿಕಮ್-1
    * ಟೊಮೆಟೋ ಸಾಸ್- 2 ಟೀ ಸ್ಪೂನ್
    * ಸೋಯಾ ಸಾಸ್- 1 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಅಡುಗೆ ಸೋಡಾ- ಚಿಟಿಕೆ
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್

    ಮಾಡುವ ವಿಧಾನ:
    * ಮೊದಲು ಒಂದು ಬೌಲ್‍ಗೆ ಮಶ್ರೂಮ್, ಕಾನ್ ಫ್ಲವರ್, ಮೈದಾ ಹಿಟ್ಟು, ಉಪ್ಪು, ಸೋಡಾ ಪುಡಿ ನೀರು ಹಾಕಿ ಕಲಸಿಕೊಳ್ಳಿ.

    * ಬಳಿಕ ಒಂದು ಬಣಾಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಕಲಸಿಟ್ಟ ಮಶ್ರೂಮ್ ಕರಿದುಕೊಳ್ಳಿ.

    * ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಕ್ಯಾಪ್ಸಿಕಮ್, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ, ಖಾರದ ಪುಡಿ, ಸೋಯಾ ಸಾಸ್, ಟೊಮೆಟೋ ಸಾಸ್, ಕರಿದ ಮಶ್ರೂಮ್, ಕೊತ್ತಂಬರಿಸೊಪ್ಪು ಹಾಕಿದರೆ ಬಿಸಿ ಬಿಸಿ ಮಶ್ರೂಮ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.