Tag: mushroom biryani

  • ನೀವೂ ಮಾಡಿ ಮಶ್ರೂಮ್ ಬಿರಿಯಾನಿ

    ನೀವೂ ಮಾಡಿ ಮಶ್ರೂಮ್ ಬಿರಿಯಾನಿ

    ಭೋಜನ ಪ್ರೀಯರಿಗೆ ಹೊಸ ಅಡುಗೆ ಮಾಡುವುದು, ತಿನ್ನುವುದು ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಎಂದು ನೀವು ತಿಂದಿರಬಹುದು . ಆದರೆ ಇಂದು ಮಶ್ರೂಮ್ ಬಿರಿಯಾನಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ – 2 ಕಪ್
    * ಮಶ್ರೂಮ್- 2 ಕಪ್
    * ಬಟಾಣಿ ಅರ್ಧ ಕಪ್
    * ಪುದೀನಾ ಸೊಪ್ಪು
    * ಕೊತ್ತಂಬರಿ ಸೊಪ್ಪು
    * ಈರುಳ್ಳಿ- 1
    * ಟೊಮೆಟೋ- 2
    * ಅಡುಗೆ ಎಣ್ಣೆ- 4 ಟೀ ಸ್ಪೂನ್
    * ತುಪ್ಪ- 4 ಟೀ ಸ್ಪೂನ್
    * ನಿಂಬೆ ಹಣ್ಣು- 1 ಟೀ ಸ್ಪೂನ್
    * ಮೊಸರು- ಅರ್ಧ ಕಪ್
    * ಹಸಿ ಮೆಣಸಿನಕಾಯಿ- 4
    * ಚಕ್ಕೆ, ಲವಂಗ, ಏಲಕ್ಕಿ,
    * ಕಸೂರಿ ಮೇಥಿ
    * ಖಾರದ ಪುಡಿ- 1 ಟೀ ಸ್ಪೂನ್
    * ಗರಂ ಮಸಾಲೆ- ಅರ್ಧ ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್
    * ದನಿಯಾ ಪುಡಿ- 2 ಟೀ ಸ್ಪೂನ್

    ಮಾಡುವ ವಿಧಾನ:

    * ಮೊದಲು ಒಂದು ಕುಕ್ಕರ್‍ಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಬೇಕು. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಇರಲಿ ಚಿಕನ್ ಫ್ರೈಡ್ ರೈಸ್

    * ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೊಪ್ಪು, ಟೊಮೆಟೋ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ, ದನಿಯಾ ಪುಡಿ, ಮಶ್ರೂಮ್, ಬಟಾಣಿ ಹಾಕಿ ಫ್ರೈ ಮಾಡಿ ಚೆನ್ನಾಗಿ ಬೇಯಿಸಿ.

    * ನಂತರ ಉಪ್ಪು, ಮೊಸರು, ನೆನೆಸಿದ ಅಕ್ಕಿ, ನೀರು, ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

    * ಕುಕ್ಕರ್ ಮುಚ್ಚಳ ಮುಚ್ಚಿ 1 ವಿಜಿಲ್ ಬರಬೇಕು. ಈಗ ರುಚಿಕರವಾದ ಮಶ್ರೂಮ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.