Tag: Mushroom

  • ಅಸ್ಸಾಂನಲ್ಲಿ ಅಣಬೆ ತಿಂದು 13 ಜನ ಸಾವು

    ಅಸ್ಸಾಂನಲ್ಲಿ ಅಣಬೆ ತಿಂದು 13 ಜನ ಸಾವು

    ಗುವಾಹಟಿ: ವಿಷಪೂರಿತ ಕಾಡು ಅಣಬೆಯನ್ನು ತಿಂದು ಕಳೆದ 2 ದಿನಗಳಲ್ಲಿ 13 ಜನ ಸಾವನ್ನಪ್ಪಿದ ಘಟನೆ ಅಸ್ಸಾಂ ರಾಜ್ಯದ 4 ಜಿಲ್ಲೆಗಳಲ್ಲಿ ನಡೆದಿದೆ.

    ಅಸ್ಸಾಂನ 4 ಜಿಲ್ಲೆಗಳಲ್ಲಿ ಈ ಘಟನೆ ನಡೆದಿದೆ. ವಿಷಕಾರಿ ಅಣಬೆಯನ್ನು ಸೇವಿಸಿದ್ದವರು ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ 39 ಜನರು ಅಸ್ವಸ್ಥರಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ 13 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೇಲ್ವಿಚಾರಕ ಡಾ. ಪ್ರಶಾಂತ್ ದಿಹಿಂಗಿಯಾ ತಿಳಿಸಿದರು.

    ಕಳೆದ ಐದು ದಿನಗಳಲ್ಲಿ ಅಸ್ಸಾಂನ ಚರೈಡಿಯೊ, ದಿಬ್ರುಗಢ, ಶಿವಸಾಗರ್ ಮತ್ತು ತಿನ್ಸುಕಿಯಾ ಜಿಲ್ಲೆಗಳಲ್ಲಿ ವಿಷಕಾರಿ ಅಣಬೆಯನ್ನು ತಿಂದಿದ್ದ 40ಕ್ಕೂ ಅಧಿಕ ಜನರು ದಾಖಲಾಗಿದ್ದು, ಈ ಪೈಕಿ ಕಳೆದ ಎರಡು ದಿನಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ

    ಇವರೆಲ್ಲರೂ ತಮ್ಮ ಮನೆಯ ಹತ್ತಿರ ಇರುವ ಕಾಡಿನಲ್ಲಿ ಬೆಳೆಯುವ ವಿಷಕಾರಿ ಅಣಬೆಗಳನ್ನು ತಿಂದಿದ್ದರು. ಇದನ್ನು ತಿಂದ ನಂತರ ಅವರು ತೀವ್ರವಾಗಿ ಅಸ್ವಸ್ತರಾದರು. ಸಾವನ್ನಪ್ಪಿದ್ದವರಲ್ಲಿ ಒಂದು ಮಗು ಸೇರಿದಂತೆ ಏಳು ಮಂದಿ ಚರೈಡಿಯೊ ಜಿಲ್ಲೆಯ ಸೊನಾರಿ ಪ್ರದೇಶದಿಂದ, ಐದು ಮಂದಿ ದಿಬ್ರುಗಢ್ ಜಿಲ್ಲೆಯ ಬಾರ್ಬರುವಾ ಪ್ರದೇಶದಿಂದ ಮತ್ತು ಶಿವಸಾಗರ್ ಜಿಲ್ಲೆಯ ಒಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ವಿರೋಧದ ನಡುವೆಯೂ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅಂತ್ಯಕ್ರಿಯೆ

  • ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಣಬೆ ಬಾಯಿಗೆ ರುಚಿ ಮಾತ್ರವಲ್ಲ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ. ಅಣಬೆಯಲ್ಲಿನ ಪ್ರೊಟೀನ್ ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕವಾಗಿದೆ. ಈ ಎಲ್ಲಾ ಅಂಶಗಳನ್ನು ಅಣಬೆ ಒಳಗೊಂಡಿದೆ.

    ಮಶ್ರೂಮ್ ನಿತ್ಯದ ಆಹಾರವಾಗಿ ಬಳಸಿದರೆ ಅದ್ಭುತ ಆರೋಗ್ಯ ಹೊಂದುವುದರಲ್ಲಿ ಸಂಶಯವೇ ಇಲ್ಲ. ಡಯಟ್‍ನಲ್ಲಿ ಅಣಬೆಗೆ ಮೊದಲ ಆದ್ಯತೆ ನೀಡಿದರೆ ಎಷ್ಟೋ ರೋಗಗಳನ್ನು ತಡೆಯಬಹುದಾಗಿದೆ. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    * ದೇಹದ ಆರೋಗ್ಯ ಸುಧಾರಣೆಗೆ ಸಹಾಯ ಮಾಡು ಅಂಶಗಳನ್ನು ಅಣಬೆ ಒಳಗೊಂಡಿದೆ. ಆರೋಗ್ಯ ಪ್ರಜ್ಞೆ ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಅಣಬೆಯನ್ನು ತಪ್ಪದೆ ಸೇವಿಸಬೇಕು. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    * ಅಣಬೆಯಲ್ಲಿ ವಿಟಮಿನ್ ಡಿ ಅಧಿಕವಾಗಿರುತ್ತದೆ. ಇದು ಮೊಡವೆಯನ್ನು ಕಡಿಮೆ ಮಾಡಲು ಸಹಾಯವನ್ನು ಮಾಡುತ್ತದೆ.

    * ಅಣಬೆಗಳು ಕರುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಒಳ್ಳೆಯ ಬ್ಯಾಕ್ಟೀರಿಯಾಗಖನ್ನು ಒಳಗೊಂಡಿದ್ದು, ಅವುಗಳ ಸೇವನೆಯಿಂದ ನಮ್ಮ ದೇಹದಲ್ಲಿಯೂ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುತ್ತದೆ.

    * ಕಬ್ಬಿಣಾಂಶದ ಪರಿಣಾಮ ಹೇರವಾಗಿದ್ದು, ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ವರದಾನ ಎನ್ನ ಬಹುದಾಗಿದೆ. ಕೆಂಪು ರಕ್ತಕಣಗಳ ಉತ್ಪಾದನೆ ಪ್ರಮಾಣ ಹೆಚ್ಚಿಸುತ್ತದೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಸಂದು ನೋವಿಗೆ ಶಮನಕಾರಿಯಾಗಿದೆ.

    * ಕ್ಯಾನ್ಸರ್ ನಿರೋಧಕ ಅಂಶಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಸ್ತನ   ಕ್ಯಾನ್ಸರ್‌ ಬಾರದಂತೆ ತಡೆಯುತ್ತದೆ.

  • ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ- ಅದಕ್ಕಾಗೇ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಖರ್ಚು!

    ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ- ಅದಕ್ಕಾಗೇ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಖರ್ಚು!

    ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಸಮಾವೇಶವೊಂದರಲ್ಲಿ, ನನ್ನ ಹಾಗೆ ಕಪ್ಪಗಿದ್ದ ಪ್ರಧಾನಿ ನರೇಂದ್ರ ಮೋದಿ ತೈವಾನ್ ನಿಂದ ಆಮದಾಗುವ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಅಲ್ಪೇಶ್ ಠಾಕೂರ್ ವ್ಯಂಗ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತೈವಾನ್ ದೇಶದ ಒಂದು ಅಣಬೆ 80 ಸಾವಿರ ರೂ. ಬೆಲೆಯನ್ನು ಹೊಂದಿದೆ. ಪ್ರಧಾನಿ ಮೋದಿ ಒಂದು ದಿನಕ್ಕೆ 5 ಅಣಬೆಗಳನ್ನು ತಿನ್ನುತ್ತಾರೆ. ಮೋದಿ ಅವರು ಸೇವಿಸುವಂತಹ ಆಹಾರ ನಮ್ಮಿಂದ ಸೇವನೆ ಮಾಡಲಾಗುವುದಿಲ್ಲ. ಕಾರಣ ನಾವು ಬಡವರು ನಮ್ಮಲ್ಲಿ ಅಷ್ಟು ಹಣವಿಲ್ಲ ಅಂತಾ ಪರೋಕ್ಷವಾಗಿ ಮೋದಿ ಅವರನ್ನು ಟೀಕಿಸಿದ್ದಾರೆ.

    ಪಿಎಂ ಅಣಬೆಗಾಗಿ ಒಂದು ತಿಂಗಳಿಗೆ 1 ಕೋಟಿ 20 ಲಕ್ಷ ರೂ. ಹಣವನ್ನು ಖರ್ಚು ಮಾಡುತ್ತಾರೆ. ಅವರು ನಮ್ಮ ಹಾಗೆ ರೋಟಿ, ಅನ್ನ ತಿನ್ನುವುದಿಲ್ಲ. ಕೇವಲ ನಾನು ಸಾಮನ್ಯ ವ್ಯಕ್ತಿಯೆಂದು ನಾಟಕ ಮಾಡುತ್ತಾರೆ. ಹಾಗಾದ್ರೆ ಮೋದಿ ಹಿಂಬಾಲಕರು ಎಷ್ಟು ಕೋಟಿ ಮೌಲ್ಯದ ಅಣಬೆಗಳನ್ನು ತಿನ್ನುತ್ತಾರೆ ಎಂದು ಮೂದಲಿಸಿದ್ದಾರೆ.

    ಗುಜರಾತ್ ಸಿಎಂ ಆದ ನಂತರ ಮೋದಿ ತೈವಾನ್ ಅಣಬೆಗಳನ್ನು ತಿನ್ನಲು ಆರಂಭಿಸಿದ್ದಾರೆ ಎಂದು ಅಲ್ಪೇಶ್ ಹೇಳಿದ್ದಾರೆ.