Tag: Museum

  • ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಮೇಲ್

    ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಮೇಲ್

    ಬೆಂಗಳೂರು: ಹುಸಿ ಬಾಂಬ್ ಮೇಲ್ ನ (Threat Mail) ಗುಮ್ಮ ಮತ್ತೆ ಸದ್ದು ಮಾಡಿದೆ. ಇಷ್ಟು ದಿನ ಸ್ಕೂಲ್ ಗಳನ್ನ ಟಾರ್ಗೆಟ್ ಮಾಡಿಕೊಂಡಿದ್ದ ದುಷ್ಕರ್ಮಿಗಳು ಇಂದು ಮ್ಯೂಸಿಯಂಗಳನ್ನ ಟಾರ್ಗೆಟ್ ಮಾಡಿ ಬಾಂಬ್ ಮೇಲ್ ಕಳಿಸಿದ್ದಾರೆ.

    ಕಸ್ತೂರಬಾ ರಸ್ತೆಯಲ್ಲಿರೊ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ (M. Visvesvaraya Museum) ಪ್ರತಿ ದಿನ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನ ಭೇಟಿ ಕೊಡ್ತಾರೆ. ಆದರೆ ಇವತ್ತು ಮ್ಯೂಸಿಯಂ ಓಪನ್ ಮಾಡಿದಾಗ ಭಯದ ವಾತಾವರಣ ಸೃಷ್ಟಿಯಾಗಿಬಿಟ್ಟಿತ್ತು. ಬೆಳಗ್ಗೆ 9 ಗಂಟೆಗೆ ಅಧಿಕಾರಿಗಳು ಎಂದಿನಂತೆ ಇ-ಮೇಲ್ ಪರಿಶೀಲಿಸಿದ್ದಾರೆ. ಅದ್ರಲ್ಲಿನ ಒಂದು ಇ-ಮೇಲ್ ದಿಗಿಲು ಹುಟ್ಟಿಸಿತ್ತು. Morgue999lol ಎಂಬ ಇ-ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂ ಗೆ ಬಾಂಬ್ ಇಟ್ಟಿರೋದಾಗಿ ಉಲ್ಲೇಖವಾಗಿತ್ತು.

    ಮ್ಯೂಸಿಯಂ ಒಳಗೆ ವಿವಿಧ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದೇವೆ. ಅದನ್ನು ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ಬೆಳಗ್ಗೆ ಸ್ಫೋಟಗೊಳ್ಳಲಿದೆ. ಮ್ಯೂಸಿಯಂ ನಲ್ಲಿರುವ ಅಷ್ಟು ಜನ ಸಾವನ್ನಪ್ಪಲ್ಲಿದ್ದಾರೆ. ನಾವು ಟೆರರಿಸರ್ಸ್ 111 ಎಂಬ ಸಂಘಟನೆಗೆ ಸೇರಿದವರು. ನಮ್ಮ ಗ್ರೂಪ್ ಹೆಸರನ್ನ ಮಾಧ್ಯಮದವರಿಗೆ ನೀಡಿ ಅಂತಾ ಮೇಲ್ ಕಳಿಸಲಾಗಿತ್ತು. ಇದನ್ನೂ ಓದಿ: ತುಂಡಾದ ಭಾರತದಲ್ಲೂ ಹಿಂದೂಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಕಾಂಗ್ರೆಸ್: ಸಿ.ಟಿ.ರವಿ ಕಿಡಿ

    ಮೇಲ್ ನೋಡಿದ್ದೇ ತಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಶ್ವಾನ ದಳ, ಬಾಂಬ್ ನಿಶ್ಕ್ರಿಯ ದಳದ ತಂಡ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತು ಕಂಡು ಬಂದಿರೋದಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಖಾತ್ರಿ ಆಗ್ತಿದ್ದಂತೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮೇಲ್ ಸಿಸಿ ಅಪ್ಲೈ ಮಾಡಿ ಹತ್ತಾರು ಮ್ಯೂಸಿಯಂ ಗಳಿಗೆ ಇದೇ ರೀತಿಯಾದಂತಹ ಬೆದರಿಕೆ ಮೇಲ್ ಗಳನ್ನ ಕಳಿಸಲಾಗಿದೆ.

    ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿ ಅಡ್ರಸ್ ಹುಡುಕಾಟ ನಡೆಸ್ತಿದ್ದಾರೆ. ಶಾಲೆಗಳಿಗೆ ಬಾಂಬ್ ಮೇಲ್ ಕಳಿಸಿದ್ದವರೇ ಇನ್ನೂ ಪತ್ತೆಯಾಗಿಲ್ಲ. ಇನ್ನು ಮ್ಯೂಸಿಯಂ ಗಳಿಗೆ ಬಾಂಬ್ ಬೆದರಿಕೆ ಕಳಿಸಿದವರನ್ನ ನಮ್ಮ ಪೊಲೋಸ್ರು ಪತ್ತೆ ಹಚ್ತಾರಾ ಕಾದು ನೋಡಬೇಕಿದೆ.

     

  • ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ವಿಶೇಷ ಗೌರವ – ಟ್ರಸ್ಟ್ ಚಿಂತನೆ ಏನು?

    ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ವಿಶೇಷ ಗೌರವ – ಟ್ರಸ್ಟ್ ಚಿಂತನೆ ಏನು?

    ಲಕ್ನೋ: ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿಯಲ್ಲಿ ದೇವಸ್ಥಾನದ ಉದ್ಘಾಟನೆಯಾಗಲಿದೆ. ರಾಮ ಮಂದಿರದ ಉದ್ಘಾಟನೆ ಜೊತೆಗೆ ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಚಿಂತಿಸಿದೆ.

    ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಸಭೆಯಲ್ಲಿ ಹುತಾತ್ಮ ಹೋರಾಟಗಾರರ ಪ್ರತಿಮೆಗಳು, ಸ್ಮಾರಕಗಳ ಸ್ಥಾಪನೆ, ರಸ್ತೆ, ಬೀದಿಗಳು ಮತ್ತು ಕಟ್ಟಡಗಳಿಗೆ ಅವರ ಹೆಸರಿಸಿಡುವುದು ಅಂತಿಮವಾಗಿ, ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಉದ್ದೇಶಿತ ರಾಮ್ ಮ್ಯೂಸಿಯಂನಲ್ಲಿ (Museum) ಸ್ಥಾನ ನೀಡುವ ಮೂಲಕ ಅಂತಹ ಎಲ್ಲ ಹುತಾತ್ಮರನ್ನು ಗೌರವಿಸುವ ಬಗ್ಗೆ ಸಮಾಲೋಚನೆ ನಡೆದಿದೆ. ರಾಮಮಂದಿರ ಆಂದೋಲನದಲ್ಲಿ ಪ್ರಾಣ ತ್ಯಾಗ ಮಾಡಿದ ರಾಮನ ಭಕ್ತರಿಗೆ ಗೌರವಧನ ನೀಡಬೇಕು ಎನ್ನುವ ಮನವಿಯನ್ನು ಟ್ರಸ್ಟ್ ಸಭೆಯಲ್ಲಿ ಗಂಭೀರವಾಗಿ ಪರಿಗಣಿಸಿದೆ.

    ಹುತಾತ್ಮ ರಾಮಭಕ್ತರ ಪ್ರತಿಮೆ ಸ್ಥಾಪನೆ ಒಮ್ಮತ ಮೂಡಿ ಬಂದಿಲ್ಲ ಎಂದು ಮೂಲಗಳು ಹೇಳಿವೆ. ದೇವಾಲಯದ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ರಾಮಭಕ್ತರ ನಿಖರ ಸಂಖ್ಯೆ ತಿಳಿದಿಲ್ಲ. ಸುಮಾರು 500 ವರ್ಷಗಳ ಕಾಲ ನಡೆದ ರಾಮಮಂದಿರ ಆಂದೋಲನದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. 1990ರ ದಶಕದ ಚಳುವಳಿಗೂ ಮುಂಚಿನ ಚಳುವಳಿಗಳಲ್ಲಿ ಪ್ರಾಣ ಕಳೆದುಕೊಂಡ ರಾಮಭಕ್ತರ ಬಗ್ಗೆ ನಿಖರವಾದ ಮಾಹಿತಿಯನ್ನು ಕಂಡುಹಿಡಿಯುವುದು ಕಷ್ಟಕರವಾಗಿರುತ್ತದೆ. ಹುತಾತ್ಮರ ಸಂಖ್ಯೆಯು ತುಂಬಾ ಹೆಚ್ಚಿರುವ ಕಾರಣ ಎಲ್ಲರ ವಿಗ್ರಹಗಳನ್ನು ಮಾಡಲು ಸಾಧ್ಯವಾಗದಿರಬಹುದು. ಈ ಕಾರಣದಿಂದಲೇ ಪ್ರಾಣ ಕಳೆದುಕೊಂಡ ರಾಮಭಕ್ತರಿಗೆ ಪ್ರತ್ಯೇಕ ಮೂರ್ತಿಗಳನ್ನು ನಿರ್ಮಿಸುವ ಆಲೋಚನೆ ಸೂಕ್ತವಾಗಿಲ್ಲ ಎಂದು ನಿರ್ಧರಿಸಲಾಗಿದೆ. ಇದನ್ನೂ ಓದಿ: Himachal Pradesh Rain: ರಣಭೀಕರ ಮಳೆಗೆ 74 ಮಂದಿ ಸಾವು – 10 ಸಾವಿರ ಕೋಟಿ ನಷ್ಟ!

    ಚಳವಳಿಯಲ್ಲಿ ಕೊಲ್ಲಲ್ಪಟ್ಟವರ ಬಗ್ಗೆ ಸಂಪೂರ್ಣವಾಗಿ ನಿಖರವಾದ ಮಾಹಿತಿ ಇರುವ ಕಾರಣ ಅವರಿಗೆ ರಾಮ ಮಂದಿರ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ನೀಡಬಹುದು. ಬೆಳಕು ಮತ್ತು ಧ್ವನಿ ಪ್ರದರ್ಶನ ಮತ್ತು ಚಲನಚಿತ್ರ ಪ್ರದರ್ಶನದ ಮೂಲಕ ಹುತಾತ್ಮ ರಾಮಭಕ್ತರ ಪಾತ್ರವನ್ನು ನೆನಪಿಸಿಕೊಳ್ಳಬಹುದು ಮತ್ತು ಗೌರವಿಸಬಹುದು ಎನ್ನುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತವಾಗಿದೆ. ಇದನ್ನೂ ಓದಿ: `ಕೈ’ ಹಿಡಿಯಲು ಮುಂದಾದ್ರಾ BJP ಶಾಸಕ – ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್‌ ಹೆಬ್ಬಾರ್ ಹೇಳಿದ್ದೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ (Karnataka Budget 2023) ಮಂಡನೆ ಮಾಡಿದ್ದು, ಹಲವು ವರ್ಷಗಳ ಒಂದು ಬೇಡಿಕೆಯನ್ನು ಈಡೇರಿಸಿದ್ದಾರೆ. ಚಿತ್ರಂಗದ ಇತಿಹಾಸವನ್ನು ಸಾರುವಂತಹ ವಸ್ತು ಸಂಗ್ರಹಾಲಯ (Museum) ಬೇಕು ಎನ್ನುವುದು ಸಿನಿ ಇತಿಹಾಸಕಾರರ ಆಗ್ರಹವಾಗಿತ್ತು. ಅದನ್ನು ಈ ಬಾರಿಯ ಬಜೆಟ್ ನಲ್ಲಿ ಈಡೇರಿಸಿದ್ದಾರೆ.

    ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕದ (Dr. Raj Kumar) ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವುದಾಗಿ ಈ ಬಾರಿಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಮೂಲಕ ಚಿತ್ರರಂಗದ ಬೆಳವಣಿಗೆ ಇತಿಹಾಸ ಪರಿಚಯಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್ ಭೇಟಿಗಾಗಿ ಮಲೇಷ್ಯಾಗೆ ಹೊರಟು ನಿಂತ ರಾಕಿಭಾಯ್ ಯಶ್

     

    ಡಾ.ರಾಜ್ ಕುಮಾರ್ ಸ್ಮಾರಕದ ಬಳಿ ವಸ್ತು ಸಂಗ್ರಹಾಲಯದ ಜೊತೆಗೆ ಸುಸಜ್ಜಿತದ ಥಿಯೇಟರ್ ನಿರ್ಮಾಣವಾಗಬೇಕು ಎನ್ನುವುದು ಹಲವರ ಕೋರಿಕೆಯಾಗಿತ್ತು. ಜೊತೆಗೆ ಡಾ.ರಾಜ್ ಕುಮಾರ್ ಅವರ ಕುರಿತಾಗಿಯೇ ವಸ್ತು ಸಂಗ್ರಹಾಲಯ ಇರಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಸಮಗ್ರ ಚಿತ್ರರಂಗವನ್ನು ಒಳಗೊಳ್ಳುವಂತಹ ಸಂಗ್ರಹಾಲಯಕ್ಕೆ ಸಿದ್ದರಾಮಯ್ಯ ಸರಕಾರ ಅಸ್ತು ಎಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 4,000 ವರ್ಷಗಳ ಹಿಂದಿನ ಪುರಾತನ ಸಮಾಧಿ ಪತ್ತೆ – ಸಮಾಧಿಯಲ್ಲಿತ್ತು ಬೆಲೆ ಬಾಳುವ ವಸ್ತು

    4,000 ವರ್ಷಗಳ ಹಿಂದಿನ ಪುರಾತನ ಸಮಾಧಿ ಪತ್ತೆ – ಸಮಾಧಿಯಲ್ಲಿತ್ತು ಬೆಲೆ ಬಾಳುವ ವಸ್ತು

    ಆಂಸ್ಟರ್ಡ್ಯಾಮ್: ನೆದರ್ಲೆಂಡ್‌ನ ಸ್ಟೋನ್‌ಹೆಂಜ್ (Netherland Stonehenge) ಎಂದು ಕರೆಯಲ್ಪಟುವ 4,000 ವರ್ಷಗಳಷ್ಟು ಪುರಾತನವಾದ ರುದ್ರಭೂಮಿಯೊಂದನ್ನು ಡಚ್ ಪುರಾತತ್ವಶಾಸ್ತ್ರಜ್ಞರು (Archaeologists) ಪತ್ತೆ ಹಚ್ಚಿದ್ದಾರೆ.

    ಸಮಾಧಿಯ ದಿಬ್ಬಗಳನ್ನು (Burial Ground) ಒಳಗೊಂಡಿರುವ ಈ ಸ್ಥಳವು 65 ಅಡಿ ವಿಸ್ತೀರ್ಣವಿದೆ. 60 ಪುರುಷರು ಹಾಗೂ ಮಹಿಳೆಯರು ಮತ್ತು ಮಕ್ಕಳ ಅವಶೇಷಗಳನ್ನ ಒಳಗೊಂಡಿದೆ ಎಂದು ಡಚ್ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

    ಈ ಸಮಾಧಿಯ ಸ್ಥಳದಲ್ಲಿ ಪ್ರಾಣಿಗಳ ಅಸ್ಥಿಪಂಜರಗಳು, ಮಾನವನ ತಲೆಬುರುಡೆಗಳು, ಕಂಚಿನ ಈಟಿಯಂತಹ ಬೆಲೆಬಾಳುವ ವಸ್ತುಗಳನ್ನು ಕಂಡುಹಿಡಿದಿದ್ದಾರೆ. ಟೈಲ್ ನಗರಪಾಲಿಕೆಗೆ 70 ಕಿಮೀ ದೂರದಲ್ಲಿರುವ ರೂಟರ್‌ಡ್ಯಾಮ್‌ನ ಪೂರ್ವದಲ್ಲಿ ಈ ಸ್ಥಳವನ್ನ ಉತ್ಖನನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ಇಂಗ್ಲೆಂಡ್‌ನ ಸ್ಟೋನ್‌ಹೆಂಜ್‌ನ (England Stonehenge) ಪ್ರಸಿದ್ಧ ಕಲ್ಲುಗಳಂತೆಯೇ ಅತಿದೊಡ್ಡ ದಿಬ್ಬವು ಸೂರ್ಯನ ಕ್ಯಾಲೆಂಡರ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಈ ಅಭಯಾರಣ್ಯದಲ್ಲಿ ಜನರು ವರ್ಷದ ವಿಶೇಷ ದಿನಗಳನ್ನ ಆಚರಿಸುತ್ತಾರೆ, ಧಾರ್ಮಿಕ ಕ್ರಿಯೆಗಳನ್ನ ನೆರವೇರಿಸುತ್ತಾರೆ. ಜೊತೆಗೆ ಅಂತ್ಯಸಂಸ್ಕಾರ ನೆರವೇರಿಸುವ ಮಹತ್ವದ ಸ್ಥಳವಾಗಿರಬೇಕು ಎಂದು ಹೇಳಲಾಗಿದೆ. ಏಕೆಂದರೆ ಮೆರವಣಿಗೆಗಾಗಿ ಬಳಸುವ ಮಾರ್ಗಗಳ ಉದ್ದಕ್ಕೂ ಸಾಲುಗಂಬಗಳಿರುವುದು ಕಂಡುಬಂದಿದೆ.

    2017ರಲ್ಲಿ ಡಚ್ ಸಂಶೋಧಕರು ಉತ್ಖನನ ಮಾಡುವಾಗ ಅನೇಕ ಸಮಾಧಿಗಳನ್ನೂ ಸಹ ಕಂಡುಹಿಡಿದಿದ್ದಾರೆ. ಅದರಲ್ಲಿ ಇಂದಿನ ಇರಾಕ್‌ನ ಮೆಸಪಟೋಮಿಯಾದ ಮಹಿಳೆಯದ್ದಾಗಿತ್ತು. ಇದೀಗ ಮತ್ತೆ ನೆದರ್‌ಲ್ಯಾಂಡ್‌ನಲ್ಲಿ 4 ಸಾವಿರ ವರ್ಷಗಳ ಹಿಂದಿನ ಸಮಾಧಿಯನ್ನ ಪತ್ತೆಹಚ್ಚಿದ್ದು, ಇಲ್ಲಿನ ಪ್ರದೇಶದ ಜನರು ಸುಮಾರು 5,000 ಕಿಮೀ ವರೆಗಿನ ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅಂದಾಜಿಸಿದ್ದಾರೆ.

    ಈ ಸಮಾಧಿಯನ್ನ ಪತ್ತೆಹಚ್ಚಿದ ಸಂಶೋಧಕರು, ಕಳೆದ 6 ವರ್ಷಗಳಲ್ಲಿ ಶಿಲಾಯುಗ, ಕಂಚಿನ ಯುಗ, ಕಬ್ಬಿಣಯುಗ, ರೋಮನ್ ಸಾಮ್ರಾಜ್ಯ ಮತ್ತು ಮಧ್ಯಯುಗಗಳಿಂದ ಉತ್ಖನನಗೊಂಡ ಮಿಲಿಯನ್‌ಗಿಂತಲೂ ಹೆಚ್ಚು ವಸ್ತುಗಳನ್ನ ಸಂಶೋಧಿಸಿದ್ದಾರೆ ಎಂದು ವರದಿಯಾಗಿದೆ.

  • ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ

    ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ

    ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದಲ್ಲಿ ಈಶ್ವರಿ ವಿಶ್ವವಿದ್ಯಾಲಯ ನಿರ್ಮಿಸಿರುವ ಏಷ್ಯಾದದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯುಸಿಯಂ ಮೇ 15 ರಂದು ಲೋಕಾರ್ಪಣೆಗೊಳ್ಳಲಿದೆ.

    ಐದೂವರೆ ಎಕರೆಯಲ್ಲಿ ನಿರ್ಮಿಸಿರುವ ಜ್ಞಾನಲೋಕ ಮ್ಯೂಸಿಯಂನಲ್ಲಿ 36/13 ಅಳತೆ 114 ಕೋಣೆಗಳಿವೆ. ಇದರಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಭಗವದ್ಗೀತೆಯ ಶ್ಲೋಕಗಳ ಸಾರಾಂಶವನ್ನು ತಿಳಿಸಲಾಗಿದೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನಲೆಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ ಟ್ವೀಟ್ 

    BASAVARAJ BOMMAI

    ಈಶ್ವರಿ ವಿವಿ ಸಂಚಾಲಕಿ ಬ್ರಹ್ಮಕುಮಾರಿ ನಿರ್ಮಲಾದೇವಿಯವರು ಈ ಬಗ್ಗೆ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ್ದು, 1,500 ಜನರ ಸಾಮರ್ಥ್ಯದ ಆಧ್ಯಾತ್ಮಿಕ ತರಬೇತಿ ಸಭಾಂಗಣ ಹಾಗೂ ಆಧ್ಯಾತ್ಮಿಕ, ಯೋಗ ತರಬೇತಿ ಶಿಕ್ಷಣ ನೀಡಲಾಗುತ್ತದೆ. 200 ಜನರಿಗೆ ಅನುಕೂಲವಾಗುವಂತೆ ವಸತಿ ವ್ಯವಸ್ಥೆ ನಿರ್ಮಿಸಲಾಗಿದೆ.

    15 ರಂದು ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸೇರಿ ವಿವಿಧ ಸಚಿವರು ಹಾಗೂ ಈಶ್ವರಿ ವಿವಿಯ ರಾಜ ಋಷಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಇದನ್ನೂ ಓದಿ:  ಯಾವಾಗ ಸಿಎಂ ಸ್ಥಾನಕ್ಕೆ ಕೂರ್ತೀವಿ ಎಂದು ಕನಸು ಕಾಣ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ 

  • ಐತಿಹಾಸಿಕ ಮ್ಯೂಸಿಯಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

    ಐತಿಹಾಸಿಕ ಮ್ಯೂಸಿಯಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

    ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿರುವ ಐತಿಹಾಸಿಕ ಮ್ಯೂಸಿಯಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿದ್ದಾರೆ.

    ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿರುವ ರಾಜ್ಯಪಾಲರು ಇಂದು ಮುಂಜಾನೆ ಸಂಗನಕಲ್ಲು ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಮ್ಯೂಸಿಯಂನಲ್ಲಿನ 5 ಸಾವಿರ ವರ್ಷಗಳ ಹಿಂದಿನ ಪಳೆಯುಳಿಕೆಗಳ ವೀಕ್ಷಣೆ ಮಾಡಿದ್ದಾರೆ. ಮಮ್ಮಿ ಮಾದರಿಯ ಶವಪೆಟ್ಟಿಗೆ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ ರಾಜ್ಯಪಾಲರು, ಐದು ಸಾವಿರ ವರ್ಷದ ಹಿಂದಿನ ಟೆಕ್ನಾಲಜಿ ಕುರಿತು ಮಾಹಿತಿ ಪಡೆದಿದ್ದಾರೆ. ರಾಜ್ಯಪಾಲರಿಗೆ ಬಳ್ಳಾರಿ ನಗರ  ಶಾಸಕ ಸೋಮಶೇಖರರೆಡ್ಡಿ,  ಹಾಗೂ ಅಪರ್ ಜಿಲ್ಲಾಧಿಕಾರಿ ಮಂಜುನಾಥ ಸಾಥ್ ಅವರು ಸಾತ್ ನೀಡಿದ್ದರು. ಇನ್ನು ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

  • ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಸಿಹಿ ಸುದ್ದಿಕೊಟ್ಟ ಪ್ರಧಾನಿ: ಒಂದು ಕ್ಲಿಕ್‌ನಲ್ಲಿದೆ ಮಾಹಿತಿ

    ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಸಿಹಿ ಸುದ್ದಿಕೊಟ್ಟ ಪ್ರಧಾನಿ: ಒಂದು ಕ್ಲಿಕ್‌ನಲ್ಲಿದೆ ಮಾಹಿತಿ

    ನವದೆಹಲಿ: ಇದೇ ಏಪ್ರಿಲ್ 6ರಂದು ನಡೆಯಲಿರುವ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸಾಮರಸ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು – ಹಲವು ಮಹತ್ವದ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

    ನವದೆಹಲಿಯ ಅಂಬೇಡ್ಕರ್ ಕೇಂದ್ರದಲ್ಲಿ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿರುವ ಅವರು, ಏಪ್ರಿಲ್ 6 ರಿಂದ ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದ ದಿನವಾದ ಏಪ್ರಿಲ್ 14ರ ವರೆಗೆ ಬಿಜೆಪಿಯಿಂದ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಕ್ತದಾನ ಶಿಬಿರಗಳು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    NARENDRA MODI

    14 ಮಾಜಿ ಪ್ರಧಾನಿಗಳ ಕೊಡುಗೆ ಗುರುತಿಸಲು ಎನ್‌ಡಿಎ ಸರ್ಕಾರ ಕ್ರಮ ಕೈಗೊಂಡಿದೆ. ಅದಕ್ಕಾಗಿ ಪ್ರತಿಷ್ಠಿತ ವಸ್ತು ಸಂಗ್ರಹಾಲಯಗಳನ್ನೂ ನಿರ್ಮಿಸಲಾಗಿದ್ದು, ಏಪ್ರಿಲ್ 14ರಂದು ಸಂಗ್ರಹಾಲಯವನ್ನು ಉದ್ಘಾಟಿಸಾಗುವುದು. ನೆಹರೂ ಮ್ಯೂಸಿಯಂನಲ್ಲಿರುವ ಪ್ರಧಾನ ಮಂತ್ರಿ ಸಂಗ್ರಹಾಲಯವು ಎಲ್ಲ ಮಾಜಿ ಪ್ರಧಾನಿಗಳ ಕಾರ್ಯ ವೈಖರಿ, ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಿದೆ. ಈ ಮೂಲಕ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆ ಗುರುತಿಸುವುದನ್ನು ತಮ್ಮ ಸರ್ಕಾರ ಖಚಿತಪಡಿಸಿದೆ ಎಂದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.  ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ

    ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವಸ್ತು ಸಂಗ್ರಹಾಲಯವೂ ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14ರಂದೇ ಲೋಕಾರ್ಪಣೆಗೊಳ್ಳಲಿದೆ ಎಂದಿದ್ದಾರೆ.

    Narendra Modi

    ಇದೇ ವೇಳೆ ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿರುವ ಸಂಸದರು, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ಯೋಜನೆಯನ್ನು ಇನ್ನೂ 6 ತಿಂಗಳವರೆಗೆ ವಿಸ್ತರಿಸಿದೆ. ಇದರಿಂದ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಪ್ರತಿ ಫಲಾನುಭವಿಯೂ ಮುಂದಿನ ಸೆಪ್ಟೆಂಬರ್ 22ರ ವರೆಗೆ ಆಹಾರ ಧಾನ್ಯಗಳ ಸಾಮಾನ್ಯ ಕೋಟಾದ ಜೊತೆಗೆ ತಿಂಗಳಿಗೆ ಹೆಚ್ಚುವರಿ 5 ಕೆ.ಜಿ. ಉಚಿತ ಪಡಿತರ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.

  • ಅಪ್ಪು ಕನಸು ನನಸು – ರಾಜ್ ಮನೆ ಇದೀಗ ಮ್ಯೂಸಿಯಂ

    ಅಪ್ಪು ಕನಸು ನನಸು – ರಾಜ್ ಮನೆ ಇದೀಗ ಮ್ಯೂಸಿಯಂ

    ಚಾಮರಾಜನಗರ: ಪುನೀತ್ ರಾಜ್‍ಕುಮಾರ್ ಅವರ ಆಸೆ ಈಡೇರಿಕೆಯಾಗಿದೆ. ರಾಜ್ ಕುಟುಂಬಸ್ಥರು ಆಡಿ ಬೆಳೆದ ಮನೆಯನ್ನು ಮ್ಯೂಸಿಯಂನ್ನಾಗಿ ನಿರ್ಮಾಣ ಮಾಡಲು ರಾಜ್‍ಕುಟುಂಬ ಮುಂದಾಗಿದೆ.

    ರಾಜ್‍ಕುಮಾರ್, ಪುನೀತ್ ನೆನಪು ಶಾಶ್ವತವಾಗಿ ಉಳಿಸಲು ಮ್ಯೂಸಿಯಂ ಮಾಡಲು ನಿರ್ಧಾರ ಮಾಡಲಾಗಿದೆ. ಅಭಿಮಾನಿಗಳಿಗೆ ಮನೆ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತೆ. ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಡಾ.ರಾಜ್ ಸಹೋದರಿ ನಾಗಮ್ಮ ಪುತ್ರ ಗೋಪಾಲ್ ಮಾತನಾಡಿದ್ದಾರೆ. ಇದನ್ನೂ ಓದಿ:  ದೆಹಲಿಯಿಂದ ಮನೆಗಳತ್ತ ಮುಖಮಾಡಿದ ರೈತರು- ಪೊಲೀಸರಿಂದ ಬ್ಯಾರಿಕೇಡ್ ತೆರವು

    ಚಾಮರಾಜನಗರ ಗಡಿಯ ತಮಿಳುನಾಡಿನ ತಾಳವಾಡಿ ಸಮೀಪದ ಗಾಜನೂರು ಡಾ. ರಾಜ್‍ಕುಮಾರ್ ಅವರ ಊರು. ಇಲ್ಲಿ ಈವರ ನಿವಾಸ ಇದೆ. ಈ ಮನೆ ಕುಸಿಯುವ ಸ್ಥಿತಿಯಲ್ಲಿದ್ದು, ಇತ್ತೀಚೆಗೆ ಬಿದ್ದ ಮಳೆಯಿಂದ ಮನೆಗೆ ಹಾನಿಯಾಗಿತ್ತು. ಸುಮಾರು 250 ವರ್ಷ ಇತಿಹಾಸವಿರುವ ಮನೆಯಾಗಿದೆ. ಕಳೆದ ಮೂರುವರೆ ತಿಂಗಳ ಹಿಂದೆ ಗಾಜನೂರಿನ ಹಳೆ ಮನೆಗೆ ಭೇಟಿ ಕೊಟ್ಟಿದ್ದ ಅಪ್ಪು, ಈ ವೇಳೆ ಹಳೆಯ ಮನೆ ಉಳಿವಿಗೆ ದುರಸ್ತಿ ಮಾಡಲೂ ನಿರ್ಧರಿಸಿದ್ದರು.  ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

    ಅಪ್ಪು ಆಸೆ ಈಡೇರಿಸಲು ರಾಜ್ ಕುಟುಂಬ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ದುರಸ್ತಿ ಕಾರ್ಯ ಮುಗಿದ ನಂತರ ಮನೆ ವೀಕ್ಷಣೆಗೆ ಶಿವಣ್ಣ, ರಾಘಣ್ಣ ಭೇಟಿ ಕೊಡಲಿದ್ದಾರೆ. ಮನೆಯಲ್ಲಿ ಡಾ ರಾಜ್, ಪುನೀತ್‍ಗೆ ಸಂಬಂಧಿಸಿದ ಫೋಟೋ ಇಟ್ಟು ಮ್ಯೂಸಿಯಂ ಮಾಡಲು ನಿರ್ಧಾರ ಮಾಡಲಾಗಿದೆ.

  • ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

    ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರ ಪುತ್ರಿ, ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ ಅವರು ಪ್ರತಿಷ್ಠಿತ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಗೆ ಟ್ರಸ್ಟಿಯಾಗಿ ನೇಮಕವಾಗಿದ್ದಾರೆ. ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯು ಅಮೆರಿಕ ಮೂಲದ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಮುಖ ಭಾಗವಾಗಿದೆ.

    ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತ ಮಂಡಳಿಯು ಸೆಪ್ಟೆಂಬರ್ 23 ರಂದು ಇಶಾ ಅಂಬಾನಿ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.

    ನಾಲ್ಕು ವರ್ಷಗಳವರೆಗೆ ಇಶಾ ಅಂಬಾನಿ ಅವರು ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಡಾ. ವಿಜಯ್ ಆನಂದ್ ಅವರನ್ನು ಮಂಡಳಿಯ ಉಪಾಧ್ಯಕ್ಷರನ್ನಾಗಿ, ರಾಯಭಾರಿ ಪಮೇಲಾ ಎಚ್. ಸ್ಮಿತ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

    ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಸ್ಮಿತ್ಸೋನಿಯನ್‌ನ ವಿಶೇಷ ಕಲಾ ವಸ್ತುಸಂಗ್ರಹಾಲಯವಾಗಿದ್ದು, ನ್ಯಾಷನಲ್ ಮಾಲ್‌ನಲ್ಲಿರುವ ಪ್ರಪ್ರಥಮ ಕಲಾ ವಸ್ತುಸಂಗ್ರಹಾಲಯವಾಗಿದೆ. ಇದನ್ನೂ ಓದಿ: ಜಿಯೋ-ಬಿಪಿ ಮೊದಲ ಮೊಬಿಲಿಟಿ ಸ್ಟೇಷನ್ ಆರಂಭ- ಇವಿ ಚಾರ್ಜಿಂಗ್‌, ಬ್ಯಾಟರಿ ಸ್ವಾಪ್

     

    1923 ರಲ್ಲಿ ಫ್ರೀರ್ ಗ್ಯಾಲರಿ ಆಫ್ ಆರ್ಟ್ ಆಗಿ ಪ್ರಾರಂಭವಾದಾಗಿನಿಂದ ತನ್ನ ಅತ್ಯಪರೂಪದ ಸಂಗ್ರಹ ಮತ್ತು ಅದರ ಶತಮಾನದಷ್ಟು ಹಿಂದಿನ ವಿಶೇಷ ಸಂಗ್ರಹಗಳು, ಪ್ರದರ್ಶನಗಳು, ಸಂಶೋಧನಾ ಕಲೆಗಳ ಸಂರಕ್ಷಣೆ ಮತ್ತು ಸಂರಕ್ಷಣಾ ವಿಜ್ಞಾನದ ದೀರ್ಘ ಸಂಪ್ರದಾಯ ಶ್ರೇಷ್ಠತೆಗಾಗಿ ಅಂತರಾಷ್ಟ್ರೀಯ ಪ್ರಖ್ಯಾತಿ ಹೊಂದಿದೆ.  ಇದನ್ನೂ ಓದಿ: ಜಿಯೋ ಫೋನ್‌ ನೆಕ್ಸ್ಟ್ ಹೇಗೆ ತಯಾರಾಗುತ್ತಿದೆ? – ತಿರುಪತಿ ಫ್ಯಾಕ್ಟರಿಯ ವಿಡಿಯೋ ರಿಲೀಸ್‌

    2023ರಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಇಶಾ ಅಂಬಾನಿ ಅವರನ್ನು ಟ್ರಸ್ಟಿಯಾಗಿ ನೇಮಕ ಮಾಡಿರುವುದು ವಿಶೇಷ. ಶಮಾನೋತ್ಸವ ಸಂಭ್ರಮವು ವಸ್ತುಸಂಗ್ರಹಾಲಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಮುಂದಿನ ಪೀಳಿಗೆಗೆ ವಸ್ತುಸಂಗ್ರಹಾಲಯವನ್ನು ಕಾಪಾಡುವ, ಸಂರಕ್ಷಿಸುವ ಮತ್ತು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

    ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನ ಅಂಗಸಂಸ್ಥೆಯ ನಿರ್ದೇಶಕಿಯಾಗಿರುವ ಇಶಾ ಅಂಬಾನಿ, ಭಾರತದಲ್ಲಿ ತ್ವರಿತಗತಿ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2016ರಲ್ಲಿ 4ಜಿ ಸೇವೆಯು ಅತ್ಯಂತ ಕಡಮೆ ದರದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. 44 ಕೋಟಿ ಚಂದಾದಾರನ್ನು ಹೊಂದಿರುವ ರಿಲಯನ್ಸ್ ಜಿಯೋ 20 ಬಿಲಿಯನ್ ಡಾಲರ್ ಬಂಡವಾಳ ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾಗಿದೆ. ಹೊಸತಲೆಮಾರಿನ ತಾಂತ್ರಜ್ಞಾನ ಆಧರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖಪಾತ್ರ ವಹಿಸಿರುವ ಇಶಾ ಅಂಬಾನಿ, ಅಜಿಯೋಡಾಟ್ಕಾಮ್ ನ ಶಕ್ತಿಯೂ ಆಗಿದ್ದಾರೆ. ಜಿಯೋಮಾರ್ಟ್ ಮೂಲಕ ಇಕಾಮರ್ಸ್ ವಿಸ್ತರಿಸುವ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಇಶಾ ಅಂಬಾನಿ ಸಾಮಾಜಿಕ ಸೇವೆಗಾಗಿ ತೊಡಗಿಸಿಕೊಂಡಿರುವ ದೇಶದ ಅತಿದೊಡ್ಡ ಸೇವಾಸಂಸ್ಥೆ ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯ ಪ್ರಕಟಣೆ ತಿಳಿಸಿದೆ.

    ಇಶಾ ಅವರ ದೃಷ್ಟಿ ಮತ್ತು ಕಲೆಗಳ ಮೇಲಿನ ಉತ್ಸಾಹವು ಸ್ಮಿತ್ಸೋನಿಯನ್ ಅವರ ಸಂಗ್ರಹಣೆಗಳು ಮತ್ತು ಪರಿಣತಿಯನ್ನು ಹೆಚ್ಚು ಸುಲಭವಾಗಿ ಮತ್ತು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಹಾಗೂ ಭಾರತೀಯ ಮತ್ತು ಏಷ್ಯಾ ಭಾಗದ ಕಲೆಗಳು ಮತ್ತು ಸಂಸ್ಕೃತಿಗಳ ಉತ್ತಮ ತಿಳುವಳಿಕೆ ಮತ್ತು ಆಚರಣೆಯನ್ನು ಸಕ್ರಿಯಗೊಳಿಸುವ ಪ್ರಯತ್ನಗಳನ್ನು ಉದ್ದೀಪಿಸುತ್ತದೆ ಎಂದು ನಿರೀಕ್ಷಿಸಿದ್ದೇವೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ಶ್ಲಾಘಿಸಿದೆ.

  • ರಾಷ್ಟ್ರಪತಿ ಉದ್ಘಾಟಿಸಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಏನಿದೆ?

    ರಾಷ್ಟ್ರಪತಿ ಉದ್ಘಾಟಿಸಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಏನಿದೆ?

    ಮಡಿಕೇರಿ: ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್‍ರವರು ಫೆಬ್ರವರಿ 7 ರಂದು ಕೊಡಗಿನ ಕೆ.ಎಸ್ ತಿಮ್ಮಯ್ಯ ಅವರ ಸನ್ನಿಸೈಡ್ ಮ್ಯೂಸಿಯಂನನ್ನು ಉದ್ಘಾಟಿಸುತ್ತಿದ್ದಾರೆ. ಈ ಮ್ಯೂಸಿಯಂನಲ್ಲಿ ಯುದ್ಧದ ಟ್ಯಾಂಕರ್, ಸೂಪರ್ ಸಾನಿಕ್, ಯುದ್ಧ ವಿಮಾನ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ.

    ಮಡಿಕೇರಿ-ಕೊಡಗು ಎಂದಾಗ ನೆನಪಿಗೆ ಬರುವುದು ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ. ಜೊತೆಗೆ ಅಲ್ಲಿನ ಸೇನೆ, ಕ್ರೀಡೆ ಜೊತೆಗೆ ಕಾಫಿ, ಏಲಕ್ಕಿ, ಕರಿಮೆಣಸು, ಕಿತ್ತಳೆ ಹಾಗೆಯೇ ಸಾಂಪ್ರದಾಯಿಕ ಉಡುಗೆ ಎಲ್ಲರ ಗಮನ ಸೆಳೆಯುತ್ತವೆ. ಜೊತೆಗೆ ಪ್ರವಾಸಿ ತಾಣಗಳು, ಜಲಪಾತಗಳು ಕಣ್ಮುಂದೆ ಬರುತ್ತದೆ. ಅದರೊಟ್ಟಿಗೆ ಇದೀಗ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಕೂಡ ಸೇರ್ಪಡೆಯಾಗುತ್ತಿದೆ.

    ಭಾರತೀಯ ಸೇನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೊಡಗು ಜಿಲ್ಲೆ ರಾಷ್ಟ್ರದ ಭೂಸೇನೆ, ವಾಯುಸೇನೆ, ನೌಕಸೇನೆಗಳ ಪ್ರಥಮ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರನ್ನು ಒಳಗೊಂಡಂತೆ ಸೇನಾ ಕ್ಷೇತ್ರದಲ್ಲಿ ಹಲವರು ದುಡಿದಿದ್ದಾರೆ. ಅವರಲ್ಲಿ ಪ್ರಮುಖವಾಗಿ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರು ಪ್ರಮುಖರಾಗಿದ್ದಾರೆ. ಜನರಲ್ ತಿಮ್ಮಯ್ಯ ಅವರು 1906 ಮಾರ್ಚ್, 31 ರಂದು ಸನ್ನಿಸೈಡ್ ಎಂಬ ಬಂಗಲೆಯಲ್ಲಿ ಹುಟ್ಟಿ ಬೆಳೆದ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಿದೆ.

    ವಸ್ತು ಸಂಗ್ರಹಾಲಯ ಆವರಣಕ್ಕೆ ಭೇಟಿ ನೀಡುತ್ತಿದ್ದಂತೆ ಯುದ್ಧ ಟ್ಯಾಂಕ್, ಯುದ್ಧ ವಿಮಾನ ಕಣ್ಮಣ ಸೆಳೆಯುತ್ತವೆ. ಹಾಗೆಯೇ ಯುದ್ಧ ಸ್ಮಾರಕ ಗಮನ ಸೆಳೆಯುತ್ತದೆ. ನಂತರ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಿದ್ದಂತೆ ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿನ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ. ಜನರಲ್ ತಿಮ್ಮಯ್ಯ ಅವರ ವ್ಯಕ್ತಿ ಚರಿತ್ರೆ, ಭಾರತೀಯ ಸೇನೆಯ ಇತಿಹಾಸವನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ. ವಸ್ತು ಸಂಗ್ರಹಾಲಯದ ಪ್ರತಿ ಕೊಠಡಿಯು ಸೈನಿಕರ ಕತೆ ಹೇಳುವಂತಿದೆ.

    ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಜನರಲ್ ತಿಮ್ಮಯ್ಯ ಅವರ ಸ್ಮಾರಕ ಭವನ ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದ್ದು, ಭಾರತೀಯ ಸೇನಾಧಿಕಾರಿಯಾಗಿ ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜೊತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತು ಸಂಗ್ರಹಾಲಯದಲ್ಲಿದೆ. ವಸ್ತು ಸಂಗ್ರಹಾಲಯದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ಗಮನ ಸೆಳೆಯುತ್ತವೆ. ಕೊಡಗಿನ ಸೇನಾ ಪರಂಪರೆ ಹಾಗೂ ಸಂಸ್ಕøತಿಯನ್ನು ಬಿಂಭಿಸುವ ಜನರಲ್ ಕೆ.ತಿಮ್ಮಯ್ಯ ಮ್ಯೂಸಿಯಂನ್ನು ಗೌರವಾನ್ವಿತ ರಾಷ್ಟ್ರಪತಿ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ.

    ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗಿದ್ದಯ, ತಿಮ್ಮಯ್ಯ ಅವರ ಬಾಲ್ಯ ಕುರಿತು ಕಲಾಕೃತಿಗಳು, ತಿಮ್ಮಯ್ಯನವರು ಸೇನಾಧಿಕಾರಿಯಾಗಿ ಸಲ್ಲಿಸಿದ ಸೇವೆಯ ಛಾಯಾ ಚಿತ್ರಗಳು ಗಮನ ಸೆಳೆಯುತ್ತವೆ.