Tag: Murulidhar Halappa

  • ರೇಪ್ ಕ್ಯಾಪಿಟಲ್ ಎಂದ ರಾಹುಲ್ ಗಾಂಧಿ ವ್ಯಾಖ್ಯಾನಕ್ಕೆ ಮುದ್ರೆ ಒತ್ತಿದ ಕಾಂಗ್ರೆಸ್ ಮುಖಂಡ

    ರೇಪ್ ಕ್ಯಾಪಿಟಲ್ ಎಂದ ರಾಹುಲ್ ಗಾಂಧಿ ವ್ಯಾಖ್ಯಾನಕ್ಕೆ ಮುದ್ರೆ ಒತ್ತಿದ ಕಾಂಗ್ರೆಸ್ ಮುಖಂಡ

    ತುಮಕೂರು: ಈಗಾಗಲೇ ದೆಹಲಿ ರೇಪ್ ಕ್ಯಾಪಿಟಲ್ ಎಂದಾಗಿದೆ ಎನ್ನುವ ಮೂಲಕ ಕಾಂಗ್ರೆಸ್ ಮುಖಂಡ ಮುರುಳಿಧರ್ ಹಾಲಪ್ಪ ರಾಹುಲ್ ಗಾಂಧಿಯವರ ಹೇಳಿಕೆಗೆ ಮುದ್ರೆ ಒತ್ತಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ಅತ್ಯಾಚಾರ ನಡೆಯುತ್ತಿದೆ. ಈ ಮೂಲಕ ದೆಹಲಿ ರೇಪ್ ಕ್ಯಾಪಿಟಲ್ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಕೂಡ ಈ ಹಿಂದೆ ದೆಹಲಿ ರೇಪ್ ಕ್ಯಾಪಿಟಲ್ ಅಂದಿದ್ದರು. ಆಗ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಈಗ ರಾಹುಲ್ ಗಾಂಧಿ ಹೇಳಿದಾಗ ಟೀಕೆ ಮಾಡುತಿದ್ದಾರೆ ಎಂದು ರಾಹುಲ್ ಹೇಳಿಕೆಯನ್ನ ಸಮರ್ಥಿಸಿಕೊಂಡರು.

    ಸೋಮವಾರ ಬಿಜೆಪಿ ಶಾಸಕ ಅತ್ಯಾಚಾರ ಮಾಡಿರೋದು ಕೋರ್ಟ್ ಮುಂದೆ ಸಾಬೀತಾಗಿದೆ. ಅಲ್ಲದೆ ರೇಪ್ ಕ್ಯಾಪಿಟಲ್ ಎನ್ನುವುದಕ್ಕೆ ಉನ್ನಾವೋ ಹಾಗೂ ಇತರೆ ಘಟನೆಗಳು ಉತ್ತಮ ಉದಾಹರಣೆಗಳಾಗಿವೆ. ಇವೆಲ್ಲಾ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಹೊಸ ಹೊಸ ವಿವಾದವನ್ನು ಹುಟ್ಟುಹಾಕುತ್ತಿವೆ ಎಂದು ಮುರುಳಿಧರ್ ಹಾಲಪ್ಪ ಕೇಂದ್ರದ ವಿರುದ್ಧ ಹರಿಹಾಯ್ದರು.

    ಎನ್‍ಸಿಆರ್(ರಾಷ್ಟ್ರೀಯ ನಾಗರಿಕತ್ವ ನೊಂದಣಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಒಂದು ಧರ್ಮದ ಜನರ ಮೇಲೆ ದಬ್ಬಾಳಿಕೆ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ನೋಟ್ ಬ್ಯಾನ್, ಜಿಎಸ್‍ಟಿ, 370ನೇ ವಿಧಿ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಒತ್ತಾಯ ಪೂರ್ವಕವಾಗಿ ಹೇರಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.