Tag: murugha shri

  • ಮುರುಘಾ ಶ್ರೀಗೆ ಮೇ 27ರವರೆಗೆ ನ್ಯಾಯಾಂಗ ಬಂಧನ

    ಮುರುಘಾ ಶ್ರೀಗೆ ಮೇ 27ರವರೆಗೆ ನ್ಯಾಯಾಂಗ ಬಂಧನ

    ಚಿತ್ರದುರ್ಗ: ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಇಂದು ಒಂದನೇ ಅಪರ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಮುಂದೆ ಶರಣಾಗಿದ್ದ ಮುರುಘಾ ಶ್ರೀಗೆ (Murugha Shri) ಮೇ 27ರವರೆಗೆ ಕೋರ್ಟ್ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ.

    ಪೋಕ್ಸೊ ಕೇಸಲ್ಲಿ (POCSO Case) ಸತತ ಒಂದು ವರ್ಷ ಜೈಲು ಸೇರಿದ್ದ ಮುರುಘಾ ಶ್ರೀಗೆ 7 ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಅದನ್ನು ಪ್ರಶ್ನಿಸಿ ಮಠದ ಭಕ್ತ ಹಾಗೂ ಮಾಜಿ ಸಚಿವ ಹೆಚ್ ಏಕಾಂತಯ್ಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಗುಂಡೇಟು

    ಇನ್ನು ಈ ಕೇಸ್‌ನ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುರುಘಾ ಶ್ರೀಗೆ ಮಂಜೂರಾಗಿದ್ದ ಜಾಮೀನನ್ನು ರದ್ದುಗೊಳಿಸಿ ಆದೇಶಿಸಿದ್ದು, ಒಂದು ವಾರದೊಳಗೆ ಕೋರ್ಟ್ ಮುಂದೆ ಹಾಜಾರಾಗುವಂತೆ ಸೂಚಿಸಿತ್ತು. ಹೀಗಾಗಿ ಇಂದು ದಾವಣಗೆರೆಯಿಂದ ನೇರವಾಗಿ ಚಿತ್ರದುರ್ಗದ ಒಂದನೇ ಅಪರ ನ್ಯಾಯಾಲಯಕ್ಕೆ ಮುರುಘಾ ಶ್ರೀ ಹಾಜರಾಗಿದ್ದು, ಸತತ ಒಂದು ಗಂಟೆ ಕಾಲ ಕೋರ್ಟ್ ಆವರಣದಲ್ಲೇ ಕಾದು ಕುಳಿತಿದ್ದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರಾದ ಮುರುಘಾ ಶ್ರೀ ಕೇಸ್‌ನ ವಿಚಾರಣೆಯನ್ನು ಮೇ 27ಕ್ಕೆ ನಿಗದಿಪಡಿಸಿರುವ ಒಂದನೇ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅಲ್ಲಿಯವರೆಗೆ ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಇದನ್ನೂ ಓದಿ: ಅಮಿತ್‌ ಶಾ ಫೇಕ್‌ ವಿಡಿಯೋ ಕೇಸ್‌ – ರೇವಂತ್‌ ರೆಡ್ಡಿಗೆ ಸಮನ್ಸ್‌, ಓರ್ವ ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

    ಈ ವೇಳೆ ಕೋರ್ಟ್ ಆವರಣದಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿದ್ದ ಪೊಲೀಸರು ಮುರುಘಾ ಶ್ರೀಯನ್ನು ವಶಕ್ಕೆ ಪಡೆದು, ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಿದರು. ಇಸಿಜಿ ಹಾಗು ಬಿಪಿ ಪರೀಕ್ಷೆ ನಡೆಸಿ ವೈದ್ಯರ ವರದಿ ಬಳಿಕ, ಮುರುಘಾ ಶ್ರೀಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ವೇಳೆ ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಶ್ರೀ, ಹಾವೇರಿಯ ಶಾಂತಲಿಂಗ ಶ್ರೀ, ಮುರುಘಾಶ್ರೀ ಆಪ್ತ ಜಿತೇಂದ್ರ, ವಕೀಲ ಪ್ರತಾಪ್ ಜೋಗಿ ಹಾಜರಿದ್ದರು. ಇದನ್ನೂ ಓದಿ: ಯಾದಗಿರಿಯಲ್ಲಿ ವಿಪರೀತ ಬಿಸಿಲಿಗೆ ವೃದ್ಧೆ ಸಾವು

  • ಮುರುಘಾ ಶ್ರೀಗೆ ಮತ್ತೆ ಸಂಕಷ್ಟ – ಮೈಸೂರಿನಲ್ಲಿ ಮತ್ತೊಂದು FIR ದಾಖಲು

    ಮುರುಘಾ ಶ್ರೀಗೆ ಮತ್ತೆ ಸಂಕಷ್ಟ – ಮೈಸೂರಿನಲ್ಲಿ ಮತ್ತೊಂದು FIR ದಾಖಲು

    ಮೈಸೂರು: ಚಿತ್ರದುರ್ಗ ಮುರುಘಾ ಮಠದ (Murugha Mutt) ಮುರುಘಾ ಶ್ರೀಗಳಿಗೆ (Murugha Shri) ಮತ್ತೊಂದು ಸಂಕಷ್ಟ ಎದುರಾಗಿದೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನಗರದ ನಜರಾಬಾದ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

    ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಶ್ರೀಗಳ ವಿರುದ್ಧ ತಡರಾತ್ರಿ ಎಫ್‌ಐಆರ್‌ (FIR) ದಾಖಲಾಗಿದೆ. ಒಡನಾಡಿ ಸಂಸ್ಥೆಯ ನೆರವಿನಿಂದ ದೂರು ದಾಖಲಿಸಲಾಗಿದೆ. ಈ ಪ್ರಕರಣ ಕೂಡ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಪ್ರಹ್ಲಾದ್‌ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ, ರಾಜಸ್ಥಾನ ಸಿಎಂ ಗೆಹ್ಲೋಟ್

    ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಸದ್ಯ ಶ್ರೀಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜೈಲಿನಲ್ಲಿದ್ದಾರೆ.

    ಶ್ರೀಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಚಿತ್ರದುರ್ಗ ನ್ಯಾಯಾಲಯ ವಜಾಗೊಳಿಸಿತ್ತು. ಬಳಿಕ ಮಠದ ಹಣಕಾಸು ವಿಚಾರ ಹಾಗೂ ಸಿಬ್ಬಂದಿಗೆ ಸಂಬಳ ನೀಡಲು ಜೈಲಿನಲ್ಲೇ ಸಹಿ ಹಾಕುವುದಕ್ಕೆ ಅವಕಾಶ ನೀಡುವಂತೆಯೂ ಮನವಿ ಮಾಡಲಾಗಿತ್ತು. ಆದರೆ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದರು. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 5 ದಿನ ಭಾರೀ ಮಳೆ – ಕರಾವಳಿಗೆ ಯೆಲ್ಲೋ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಹಾಕಲು ಅವಕಾಶ ಕೊಡಿ – ಹೈಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿ

    ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಹಾಕಲು ಅವಕಾಶ ಕೊಡಿ – ಹೈಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿ

    ಬೆಂಗಳೂರು: ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಮಾಡಲು ಅವಕಾಶ ಕೋರಿ ಮುರುಘಾ ಶ್ರೀಗಳು (Murugha Shri) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

    ಮಠದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದೆ. ಉದ್ಯೋಗಿಗಳಿಗೆ ತಿಂಗಳ ಸಂಬಳವನ್ನು ನೀಡಲು ಆಗುತ್ತಿಲ್ಲ. ಹೀಗಾಗಿ ಜೈಲಿನಲ್ಲೇ ಇದ್ದುಕೊಂಡು ಹಣಕಾಸಿನ ವ್ಯವಹಾರಕ್ಕೆ ಸಹಿ ಹಾಕಲು ಅವಕಾಶ ಕಲ್ಪಿಸುವಂತೆ ಕೋರ್ಟ್‌ಗೆ (Karnataka High Court) ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೃದಯದ ಸಮಸ್ಯೆ- ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್

    karnataka highcourt

    ಈ ಹಿಂದೆ ಜೈಲಧಿಕಾರಿಗಳು ಮನವಿ ತಿರಸ್ಕಾರ ಮಾಡಿದ್ದರು. ಅಲ್ಲದೇ ಚಿತ್ರದುರ್ಗದ (Chitradurga) ನ್ಯಾಯಾಲಯ ಕೂಡ ಅರ್ಜಿ ವಜಾ ಮಾಡಿತ್ತು. ಹೀಗಾಗಿ ಮುರುಘಾ ಶ್ರೀಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

    ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ವರೆಗೆ ವಿಸ್ತರಿಸಿ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮಠದ ಹಣಕಾಸಿನ ವ್ಯವಹಾರದ ವಿಚಾರವಾಗಿ ಶ್ರೀಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ

    ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ

    ಚಿತ್ರದುರ್ಗ: ಲೈಂಗಿಕ ಕಿರುಕುಳದ ಆರೋಪದ ಮೇಲೆ ಕಾನೂನು ಹೋರಾಟ ನಡೆಸುತ್ತಿರುವ ಮುರುಘಾ ಶ್ರೀಗಳಿಗೆ (Murugha Shri) ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾ ಮಠದಿಂದ (Murugha Mutt) ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ.

    ಕಲಬುರಗಿಯ 11 ವರ್ಷದ ಹಾಗೂ ಕೊಪ್ಪಳದ 13 ವರ್ಷದ ಬಾಲಕ ಸೆ.8ರಂದು ನಾಪತ್ತೆಯಾಗಿದ್ದಾರೆ. ಇವರು ಮಠದ SJM ಶಾಲೆಯ ವಿದ್ಯಾರ್ಥಿಗಳು. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

    ಜಯದೇವ ಹಾಸ್ಟೆಲ್‌ನಲ್ಲಿ ಇದ್ದರು. ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ಸಂಜೆ ಹಾಸ್ಟೆಲ್‌ಗೆ ಬಂದಿಲ್ಲ. ಈ ಬಗ್ಗೆ ಹಾಸ್ಟೆಲ್‌ ಸಿಬ್ಬಂದಿ ವಿಚಾರಿಸಿದ್ದಾರೆ. ವಿದ್ಯಾರ್ಥಿಗಳು ಶಾಲೆಗೂ ಹೋಗದೇ, ಹಾಸ್ಟೆಲ್‌ಗೂ ಬಾರದೇ ನಾಪತ್ತೆಯಾಗಿರುವುದು ಗೊತ್ತಾಗಿದೆ.

    ಈ ಕುರಿತು ಹಾಸ್ಟೆಲ್‌ ಸಿಬ್ಬಂದಿ, ಪೋಷಕರ ಗಮನಕ್ಕೆ ತಂದಿದ್ದಾರೆ. ಮಕ್ಕಳು ಮನೆಗೂ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಪೋಷಕರ ಸೂಚನೆ ಮೇರೆಗೆ ಹಾಸ್ಟೆಲ್‌ ಸಿಬ್ಬಂದಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ (Chitradurga) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

    ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುರುಘಾ ಮಠದ ಶ್ರೀಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

    ಮುರುಘಾ ಶ್ರೀಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

    ಚಿತ್ರದುರ್ಗ: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೊ (POCSO) ಕಾಯ್ದೆಯಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ (Murugha Shri) ಸದ್ಯಕ್ಕೆ ರಿಲೀಫ್‌ ಸಿಕ್ಕಿಲ್ಲ. ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳಿಗೆ ವಿಸ್ತರಿಸಲಾಗಿದೆ.

    ಸೆ.27ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಚಿತ್ರದುರ್ಗ (Chitradurga) ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶ ಬುಧವಾರ ಹೊರಡಿಸಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಪ್ರಕರಣದಲ್ಲಿ ಮುರುಘಾ ಶ್ರೀಗಳಿಗೆ ವಿಧಿಸಿದ್ದ ನ್ಯಾಯಾಂಗ ಬಂಧನ ಇಂದಿಗೆ ಕೊನೆಯಾಗಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ, ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಿಸಿ ಆದೇಶಿಸಿದೆ. ಕೋರ್ಟ್‌ನಿಂದ ಶ್ರೀಗಳನ್ನು ಮತ್ತೆ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದರು.

    ಈಚೆಗೆ ಮುರುಘಾ ಶ್ರೀಗಳ ವಿರುದ್ಧ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದರು. ಇದನ್ನೂ ಓದಿ: ಪೋಕ್ಸೋ ಕೇಸ್‌ – ಮುರುಘಾ ಶ್ರೀ ಜೈಲಿಗೆ

    Live Tv
    [brid partner=56869869 player=32851 video=960834 autoplay=true]

  • ಪೋಕ್ಸೊ ಪ್ರಕರಣ – ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಪೋಕ್ಸೊ ಪ್ರಕರಣ – ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಚಿತ್ರದುರ್ಗ: ಪೋಕ್ಸೊ ಪ್ರಕರಣದಡಿ (POCSO) ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ (murugha shri) ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

    ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದ್ದು, ನಾಳೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ. ಈ ವೇಳೆ ಸಂತ್ರಸ್ತೆಯರು ಕೋರ್ಟ್‌ ಹಾಜರಾಗಲಿದ್ದು, ಅವರ ಸಮ್ಮುಖದಲ್ಲೇ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ

    ಮುರುಘಾ ಶ್ರೀ ಜಾಮೀನಿಗೆ ನಾಳೆ ಸಂತ್ರಸ್ತೆಯರ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. 3ನೇ ಆರೋಪಿ ಮಠದ ಉತ್ತರಾಧಿಕಾರಿ (ಬಸವಾದಿತ್ಯ), 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

    ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನೂ ಮುಂದೂಡಲಾಗಿದೆ. ನಾಳೆ ಆಕ್ಷೇಪಣೆ ಸಲ್ಲಿಕೆಗೆ ಕೋರ್ಟ್ ಸೂಚಿಸಿದೆ ಎಂದು ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್‌ – ಮುರುಘಾ ಶ್ರೀ ಜೈಲಿಗೆ

    Live Tv
    [brid partner=56869869 player=32851 video=960834 autoplay=true]

  • 2 ದಿನಗಳಿಂದ ದೇವರ ದರ್ಶನ ಇಲ್ಲ – ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮಾತು

    2 ದಿನಗಳಿಂದ ದೇವರ ದರ್ಶನ ಇಲ್ಲ – ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮಾತು

    ಚಿತ್ರದುರ್ಗ: ಲೈಂಗಿಕ ಕಿರುಕುಳ ಆರೋಪದ ಮೇಲೆ ಮುರುಘಾ ಮಠದ ಶ್ರೀಗಳು ಜೈಲುಪಾಲಾಗಿದ್ದು, ಮಠದಲ್ಲಿ ನೀರವ ಮೌನ ಆವರಿಸಿದೆ. ಕಳೆದ ಎರಡು ದಿನಗಳಿಂದ ಶ್ರೀಗಳನ್ನು ಕಂಡಿಲ್ಲ ಎಂದು ಮಠದ ಮಕ್ಕಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

    ಶ್ರೀಗಳನ್ನು‌ ನೋಡದೇ ಎರಡು ದಿನ ಕಳೆದಿದೆ. ಎರಡು ದಿನಗಳಿಂದ ನಮಗೆ ದೇವರ ದರ್ಶನ ಇಲ್ಲ. ಶ್ರೀಗಳು ಆರೋಪ ಮುಕ್ತರಾಗಿ ಬರುತ್ತಾರೆ ಎಂದು ಮಠದ ವಿದ್ಯಾರ್ಥಿಗಳು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌ – ಮಕ್ಕಳ ಆಯೋಗದಿಂದ ಮಾಹಿತಿ

    ಶ್ರೀಗಳು ನೂರಾರು ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟಿದ್ದಾರೆ. ತಂದೆ-ತಾಯಿ ಕಳೆದುಕೊಂಡವರಿಗೆ ಶ್ರೀಗಳೇ ತಂದೆ-ತಾಯಿ ಆಗಿದ್ದರು. ಮಠದ ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ತೋರಿಸುತ್ತಿದ್ದರು. ಶ್ರೀಗಳ ಪ್ರೀತಿಯನ್ನು ನಾವು ಎರಡು ದಿನಗಳಿಂದ ಕಳೆದುಕೊಂಡಿದ್ದೇವೆ ಎಂದು ದುಃಖದಿಂದ ಮಕ್ಕಳು ನುಡಿದಿದ್ದಾರೆ.

    ಲೈಂಗಿಕ ಕಿರುಕುಳ ಆರೋಪದಡಿ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಬಳಿಕ ಶ್ರೀಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಮತ್ತೆ ಈಗ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಮುರುಘಾ ಶ್ರೀಗಳ ಪ್ರಕರಣದಲ್ಲಿ ರಾಜಕೀಯ ಪಕ್ಷಗಳ ಎಚ್ಚರಿಕೆಯ ಹೆಜ್ಜೆ

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀ ಪ್ರಕರಣ- ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ: ಸಿಎಂ

    ಮುರುಘಾ ಶ್ರೀ ಪ್ರಕರಣ- ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ: ಸಿಎಂ

    ಮಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಎಸದುರಿಸುತ್ತಿರುವ ಮುರುಘಾ ಮಠಧ ಶರಣರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಪೊಲಿಸರಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಶ್ರೀಗಳ ಬಂಧನ ವಿಳಂಬವಾಯಿತು ಅನ್ನೋ ಜನಸಾಮಾನ್ಯರ ಆಕ್ರೋಶಕ್ಕೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಮಾತಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಎಲ್ಲಾ ಕಾನೂನು ಪ್ರಕಾರವೇ ನಡೆಯುತ್ತಿದೆ. ಈಗ ನಾನು ಮಾತನಾಡುವುದು ಸರಿಯಲ್ಲ. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಅವರು ಸರಿಯಾದ ರೀತಿಯಲ್ಲಿ ಅವರ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ವ್ಯಾಖ್ಯಾನ ಸರಿಯಲ್ಲ ಎಂದು ಗರಂ ಆದರು. ಇದನ್ನೂ ಓದಿ: ಜೈಲಿನಲ್ಲಿ ಮೊದಲ ರಾತ್ರಿ ಕಳೆದ ಮುರುಘಾ ಶ್ರೀಗಳು

    ಇತ್ತ ಬೆಂಗಳೂರಿನಲ್ಲಿ ಆರ್. ಅಶೋಕ್ ಮಾತನಾಡಿ, ಮಠಗಳ ಬಗ್ಗೆ ಗೌರವ ಇರುತ್ತೆ. ಮಠಗಳಲ್ಲಿ ಈ ರೀತಿ ಆಗಬಾರದು. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡುತ್ತಾರೆ. ಕಾನೂನಿನಿಂದ ಏನು ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತೆ. ಇದರಲ್ಲಿ ಸರ್ಕಾರ ಎಂಟ್ರಿ ಕೊಡುವುದಿಲ್ಲ. ಕಾನೂನು ತನ್ನದೇ ಆದ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದೆ. ಈ ನೆಲದ ಕಾನೂನು ಏನಿದೆಯೋ ಅದನ್ನ ಸರ್ಕಾರ ಪಾಲನೆ ಮಾಡಲಿದೆ. ಪೊಲೀಸರು ಕಾನೂನಿನ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ- ಸಂತ್ರಸ್ತೆಯರ ಹೇಳಿಕೆ ಪಡೆದ ತನಿಖಾ ತಂಡ

    ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ- ಸಂತ್ರಸ್ತೆಯರ ಹೇಳಿಕೆ ಪಡೆದ ತನಿಖಾ ತಂಡ

    ಚಿತ್ರದುರ್ಗ: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ.

    ಸದ್ಯ ತನಿಖಾಧಿಕಾರಿಗಳ ತಂಡ ಸಂತ್ರಸ್ತೆಯರ ಹೇಳಿಕೆ ಪಡೆದುಕೊಂಡಿದೆ. ಅಲ್ಲದೆ ಸಂತ್ರಸ್ತೆಯರ ಪೋಷಕರನ್ನು ಕೂಡ ಬಾಲಮಂದಿರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಈ ಮೂಲಕ ಟೀಂ ಪೋಷಕರ ಬಳಿಯೂ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಳ್ಳುತ್ತಿದೆ.

    ಸತತ ನಾಲ್ಕು ಗಂಟೆಯಿಂದ ತನಿಖೆ ಮುಂದುವರಿದಿದೆ. ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತಿದೆ. ಮಹಿಳಾ ಪಿಎಸ್‍ಐಗಳು ಬಾಲಕಿಯರಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಸದ್ಯ ಬಾಲಕಿಯರ ಹೇಳಿಕೆಗಳು ಸ್ವಾಮೀಜಿಗೆ ಮುಳುವಾಗುತ್ತೋ ಇಲ್ಲ ಬಚಾವ್ ಮಾಡುತ್ತೋ ಎಂಬ ಕುತೂಹಲ ಹುಟ್ಟಿದೆ. ಇದನ್ನೂ ಓದಿ: ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ: ಬಿಎಸ್‍ವೈ

    ಇತ್ತ ಮುರುಘಾ ಮಠದ ಆವರಣದಲ್ಲಿ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಸ್ವಾಮೀಜಿ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ಪ್ರಕರಣ ಕುರಿತು ಸೂಕ್ತ ತನಿಖೆಗೆ ಭಕ್ತರು ಒತ್ತಾಯ ಮಾಡುತ್ತಿದ್ದು, ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ಆಕ್ರೋಶ ಹೆಚ್ಚಿದೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ: ಬಿಎಸ್‍ವೈ

    ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ: ಬಿಎಸ್‍ವೈ

    ಬೆಂಗಳೂರು: ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಮುರುಘಾ ಶ್ರೀಗಳ ವಿರುದ್ದ ಲೈಂಗಿಕ ಕಿರುಕುಳ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಶ್ರೀಗಳ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ತನಿಖೆ ಆದ ಮೆಲೆ ಸತ್ಯಾಂಶ ಹೊರಬರುತ್ತೆ. ಶ್ರೀಗಳು ಆರೋಪ ಮುಕ್ತರಾಗಿ ಬರ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದ್ದು, ತನಿಖೆ ನಡೀತಿದೆ: ಬೊಮ್ಮಾಯಿ

    ಇತ್ತ ಸಿಎಂ ಮಾತನಾಡಿ, ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ದೃಷ್ಟಿಯಿಂದ ಈ ಹಂತದಲ್ಲಿ ಮಾತಾಡೋದು ಸೂಕ್ತ ಅಲ್ಲ. ಪೊಲೀಸರು ತನಿಖೆ ಮಾಡ್ತಿದ್ದಾರೆ, ಸತ್ಯ ಹೊರಗೆ ಬರುತ್ತದೆ. ಶ್ರೀಗಳ ವಿರುದ್ಧ ಪೋಕ್ಸೋ ಅಡಿ ಒಂದು ಕೇಸ್ ದಾಖಲಾಗಿದೆ. ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದೆ. ಎರಡೂ ಕೇಸ್ ಗಳ ಕುರಿತು ಸಂಬಂಧಪಟ್ಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

    ಇತ್ತ ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆಯೇ ನಿನ್ನೆಯಿಂದ ಮುರುಘಾ ಶ್ರೀಗಳು ಹೊರಗೆ ಬಾರದೇ ಮಠದ ಒಳಗಡೆಯೇ ಕೂತಿದ್ದರು. ಇಂದು ಮಠದ ಆವರಣದಲ್ಲಿರುವ ಶಾಂತವೀರ ಮುರುಗಿ ಶ್ರೀಗಳ ಗದ್ದಿಗೆಗೆ ತೆರಳಿ ದರ್ಶನ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]