ಚಿತ್ರದುರ್ಗ: ಪೋಕ್ಸೊ ಪ್ರಕರಣದಡಿ ಬಂಧಿತರಾಗಿರುವ ಮುರುಘಾ ಮಠದ ಶರಣರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಇದೀಗ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ.
ಎದೆನೋವು ಕಾಣಿಸಿಕೊಂಡ ಹಿನ್ನೆಲೆಯ್ಲಲಿ ಸತತ 2 ಗಂಟೆಗಳ ಕಾಲ ಶ್ರೀಗಳ ತಪಾಸಣೆ ನಡೆಸಲಾಗಿದೆ. ಚೆಸ್ಟ್ ಸ್ಕ್ಯಾನ್, ಇಸಿಜಿ, ಎಕೊ, ಎಂ ಆರ್ ಐ ಸ್ಕ್ಯಾನ್ ಹೀಗೆ ಪರೀಕ್ಷೆ ನಡೆಸಲಾಗಿದೆ.
ಎದೆನೋವು ಹಾಗೂ ರಕ್ತದೊತ್ತಡದಿಂದ ಶ್ರೀಗಳು ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಮತ್ತೆ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಯ ಐಸಿಯುಗೆ ರವಾನಿಸಲಾಗಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಎದೆ ನೋವು – ಆಸ್ಪತ್ರೆಗೆ ದಾಖಲು
ಇತ್ತ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನೀರವ ಮೌನ ಆವರಿಸಿದೆ. ಎಸ್ ಜೆಎಂ ವಿದ್ಯಾಪೀಠದ ಉದ್ಯೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ವೀರಶೈವ ಸಮಾಜದ ಮುಖಂಡರು ಹಾಗೂ ರಾಜ್ಯದ ನಾನಾಕಡೆಯ ಭಕ್ತರು ಆಗಮಿಸಿದ್ದು, ಮುರುಘಾ ಶ್ರೀ ದರ್ಶನಕ್ಕಾಗಿ ಕಾದು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕ್ಷಣಕ್ಷಣಕ್ಕೂ ಆಸ್ಪತ್ರೆ ಆವರಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮುರುಘಾ ಶರಣರ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಎಂಟ್ರಿ ಕೊಡುವುದಿಲ್ಲ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮುರುಘಾ ಶ್ರೀಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಗಳ ಬಗ್ಗೆ ಗೌರವ ಇರುತ್ತೆ. ಮಠಗಳಲ್ಲಿ ಈ ರೀತಿ ಆಗಬಾರದು. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡುತ್ತಾರೆ. ಕಾನೂನಿನಿಂದ ಏನು ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತೆ. ಇದರಲ್ಲಿ ಸರ್ಕಾರ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಕಾನೂನು ತನ್ನದೇ ಆದ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದೆ. ಈ ನೆಲದ ಕಾನೂನು ಏನಿದೆಯೋ ಅದನ್ನ ಸರ್ಕಾರ ಪಾಲನೆ ಮಾಡಲಿದೆ. ಪೊಲೀಸರು ಕಾನೂನಿನ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಠದಲ್ಲೇ ಮುರುಘಾಶ್ರೀ ಬಂಧನ
ಇದೇ ವೇಳೆ ಪ್ರಧಾನಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಾರೆ. ಸರ್ಕಾರಿ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ನಾನೂ, ಸಿಎಂ, ಯಡಿಯೂರಪ್ಪ ಅವರು ಸ್ಪೆಷಲ್ ಫ್ಲೈಟ್ ನಲ್ಲಿ ಹೋಗುತ್ತಿದ್ದೇವೆ. ಕರ್ನಾಟಕದಲ್ಲಿ ಹೊಸ ಹೊಸ ಯೋಜನೆಗಳು ಬರುತ್ತಿವೆ. ಪ್ರಧಾನ ಮಂತ್ರಿಗಳು ಬರ್ತಿರೋದು ಖುಷಿ ವಿಚಾರ. ಅವರ ಜೊತೆ ಕರ್ನಾಟಕ ರಾಜಕೀಯ ಬೆಳವಣಿಗೆ, ಮುಂದಿನ ಪ್ಲಾನ್ ಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಯು.ಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಬಂದಿದ್ದಾರೆ. ಎಲೆಕ್ಷನ್ ಟೈಮ್ ನಲ್ಲಿ ಅವರು ಬಂದಿರೋದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಎಂದರು.
ಸಿದ್ದರಾಮಯ್ಯರಿಂದ ವ್ಯಂಗ್ಯವಾಗಿ ಟ್ವೀಟ್ ಮಾಡಿ ಮೋದಿಗೆ ಸ್ವಾಗತ ವಿಚಾರ ಸಂಬಂಧ ಮಾತನಾಡಿ, ಈಗಾಗಲೇ ಕಾಂಗ್ರೆಸ್ ನಲ್ಲಿ ಸೋಲಿನ ಭೀತಿ ಶುರುವಾಗಿದೆ. ದೊಡ್ಡ ದೊಡ್ಡ ನಾಯಕರು ಪಕ್ಷದಿಂದ ಪಲಾಯನ ಮಾಡುತ್ತಿದ್ದಾರೆ. ಈಗಾಗಲೇ ಗುಲಾಬ್ ನಬಿ ಅಜಾದ್ ಬಿಟ್ಟೋಗಿದ್ದಾರೆ. ರಾಮನಗರ, ಕೋಲಾರದಲ್ಲಿ ಈಗಾಗಲೇ ಸೋಲಿನ ಭೀತಿ ಅವರಿಗೆ ಗೊತ್ತಾಗುತ್ತಿದೆ. ಅವರಿಗೆ ಇನ್ಮೇಲೆ ತಾವೂ ಗೆಲ್ಲೋದೇ ಇಲ್ಲಾ ಅನ್ನೋದು ಗೊತ್ತಾಗಿದೆ. ಇನ್ಮೇಲೆ ಅವರು ಕಾಂಗ್ರೆಸ್ ಬಿಟ್ಟೋಗೋರನ್ನ ಹಿಡಿದಿಟ್ಟುಕೊಳ್ಳಬೇಕು ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ಸಂಬಂಧ ಮಂಗಳವಾರ ಸಂತ್ರಸ್ತೆಯರು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಇತ್ತ ಶ್ರೀಗಳ ವಿರುದ್ಧ ಕೇಸ್ ದಾಖಲಾದಾಗಿನಿಂದ ಪರ ಹಾಗೂ ವಿರೋಧದ ಚರ್ಚೆಗಳು ಶುರುವಾಗಿವೆ.
ಮಂಗಳವಾರ ಸಂಜೆ ವೇಳೆ ಕೋರ್ಟ್ ನಲ್ಲಿ ಸಂತ್ರಸ್ತೆಯರು ಹೇಳಿಕೆ ದಾಖಲು ಮಾಡಿದ್ದಾರೆ. ಸಿಆರ್ ಪಿಸಿ164 ಅಡಿ ಜಡ್ಜ್ ಎದುರು ಹೇಳಿಕೆ ದಾಖಲಿಸಿದ್ದಾರೆ. ಹೇಳಿಕೆ ದಾಖಲಿಸಿದ ಸೀಲ್ಡ್ ಕವರ್ ನಾಳೆ ತನಿಖಾಧಿಕಾರಿ ಕೈಸೇರಲಿದೆ. ಈ ಮೂಲಕ ನಾಳೆ ಪೊಲೀಸರು ಮುರುಘಾ ಶ್ರೀಗೆ ನೋಟೀಸ್ ನೀಡುವ ಸಾಧ್ಯತೆಗಳಿವೆ. ನಾಳೆ ಮುರುಘಾಶ್ರೀ ವಶಕ್ಕೆ ಪಡೆದು ವಿಚಾರಣೆ ಹಾಗೂ ಮೆಡಿಕಲ್ ಟೆಸ್ಟ್ ನಡೆಯುವ ಸಾಧ್ಯತೆಗಳಿದೆ.
ಇತ್ತ ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದು ರಾಜ್ಯಾದ್ಯಂತ ಪರ ಹಾಗೂ ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ ಫೋಕ್ಸೊ ಕೇಸ್‍ನಲ್ಲಿ ಸಿಲುಕಿರುವ ಮುರುಘಾ ಶರಣರು, ಆರೋಪದಿಂದ ಮುಕ್ತರಾಗುವವರೆಗೆ ಪೀಠ ತ್ಯಾಗ ಮಾಡುವಂತೆ ಮಾಜಿ ಸಚಿವ ಹಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಈ ಸಂಬಂಧ ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಈ ವಿಚಾರವನ್ನು ಕೇಳಿ ಆಕ್ರೋಶಗೊಂಡಿರುವ ಮುರುಘಾ ಮಠದ ಶಾಖಾಮಠಗಳ ಪೀಠಾಧಿಪತಿಗಳು ದಿಢೀರ್ ಸುದ್ದಿಗೋಷ್ಠಿ ನಡೆಸಿ ಮುರುಘಾ ಶರಣರ ಬೆನ್ನಿಗೆ ನಿಂತರು. ಶ್ರೀಗಳು ಪ್ರಕರಣದಿಂದ ಮುಕ್ತರಾಗಿ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಎಂದರು. ಒಟ್ಟಿನಲ್ಲಿ ಆರೋಪ ಮುಕ್ತರಾಗಿ ಮುರುಘಾ ಶರಣರು ಬರ್ತಾರೆಂಬ ಭರವಸೆ ಒಂದೆಡೆಯಾದ್ರೆ, ಕಾನೂನು ಮುರುಘಾ ಶರಣರನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುತ್ತಾ ಅಥವಾ ತ್ಯಾಗ ಮಾಡಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಸದ್ಯ ಮಠದಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ಮುರುಘಾ ಶ್ರೀ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಮುರುಘಾ ಮಠದ ನಾಲ್ಕು ಗೇಟ್ ಗಳಲ್ಲೂ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ಪೀಠ ತ್ಯಾಗ ಮಾಡಲಿ: ಎಚ್. ವಿಶ್ವನಾಥ್ ಆಗ್ರಹ
Live Tv
[brid partner=56869869 player=32851 video=960834 autoplay=true]
ಮೈಸೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳನ್ನು ಬಂಧಿಸಿ. ಮುರುಘಾ ಶ್ರೀಗಳು ಪೀಠ ತ್ಯಾಗ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.
ಶ್ರೀಗಳ ಮೇಲಿನ ಪ್ರಕರಣ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೋಕ್ಸೋ ಕಾಯ್ದೆ ಮಾಡಿ ಮುರುಘಾ ಶ್ರೀಗಳ ಮೇಲೆ ಕೇಸ್ ಆಗಿರೋ ಕಾರಣ ಅವರನ್ನು ಬಂಧಿಸಬೇಕು. ಅವರು ಆರೋಪಿ ಅಲ್ಲ. ಅಪರಾಧಿ. ಮುರುಘಾ ಶ್ರೀಗಳು ತಮ್ಮ ಮೇಲಿನ ಕೇಸ್ ನಿಂದ ಮುಕ್ತವಾಗುವವರೆಗೂ ತಾತ್ಕಾಲಿಕವಾಗಿ ಪೀಠ ತ್ಯಾಗ ಮಾಡಲಿ. ಈ ಕೇಸ್ ನಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಚಿತ್ರದುರ್ಗದ ಎಸ್‍ಪಿಯನ್ನು ಮೊದಲು ಅಮಾನತು ಮಾಡಿ ಎಂದು ಆಗ್ರಹಿಸಿದರು.
ನೆಲದ ಕಾನೂನಿನ ಪ್ರಕಾರ ಬಲವಾದ ಕೇಸ್ ಶ್ರೀಗಳ ವಿರುದ್ಧ ದಾಖಲಾಗಿದೆ. ಇದರಲ್ಲಿ ಬೇರೆ ಯಾರೂ ತಲೆ ಹಾಕಬಾರದು. ಮಾಜಿ ಸಿಎಂ, ಗೃಹ ಸಚಿವರು ಯಾರು ಈ ಕೇಸ್ ಬಗ್ಗೆ ಏನೇನೋ ಹೇಳಬಾರದು. ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾದ ಕೂಡಲೇ ಆತ ಆರೋಪಿ ಆಗಲ್ಲ. ಅಪರಾಧಿ ಆಗುತ್ತಾನೆ. ಕೇಸ್ ದಾಖಲಾದ 24 ಗಂಟೆಯೊಳಗೆ ಅಪರಾಧಿ ಬಂಧನವಾಗಬೇಕಿತ್ತು. ಸಂಧಾನ – ಅನು ಸಂಧಾನದ ಪ್ರಶ್ನೆ ಇಲ್ಲಿ ಬರಲ್ಲ ಎಂದರು.
ಜಾತಿ, ಧರ್ಮ ಯಾವುದು ಇಲ್ಲಿ ಮಧ್ಯ ಪ್ರವೇಶಿಸಬಾರದು. ಸ್ವಾಮೀಜಿ ಎಲ್ಲೋ ಹೋಗ್ತಿದ್ದರೆ ಅವರನ್ನು ಪೊಲೀಸರು ಗೌರವದಿಂದ ವಾಪಾಸ್ ಕರೆದುಕೊಂಡು ಬಂದಿದ್ದು ಸರಿನಾ? ನಾವು ಸ್ವಾಮೀಜಿ ಗಳ ಪರ ಇದ್ದೇವೆ ಎಂದು ಅವರ ಅಭಿಮಾನಿಗಳು ಮಠದಲ್ಲಿ ಘೋಷಣೆ ಕೂಗುತ್ತಾರೆ? ಹಾಗಾದರೆ ತಪ್ಪು ಮಾಡಿದವರ ಪರ ನೀವು ಇದ್ದೀರಾ? ಎಸ್‍ಪಿ ಏನ್ಮಾಡ್ತಿದ್ದಾರೆ? ಎಸ್‍ಪಿಯನ್ನು ಮೊದಲು ಅಮಾನತು ಮಾಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್
ಆ ಬಾಲಕಿಯರಿಗೆ ನ್ಯಾಯ ಸಿಗಬೇಕು. ಇದು ಅಪ್ರಾಪ್ತ ಬಾಲಕಿಯರು ವಿಚಾರ ಇದು. ಅವರು ಅಮಾಯಕ ಬಾಲಕಿಯರು. ಕರ್ನಾಟಕದಲ್ಲಿ ಬಹಳ ದೊಡ್ಡ ಗುರು ಪರಂಪರೆ ಇದೆ. ತಾತ್ಕಾಲಿಕವಾಗಿ ಮುರುಘಾ ಶ್ರೀಗಳು ಪೀಠ ತ್ಯಜಿಸಬೇಕು. ನಿಮ್ಮ ಮೇಲೆ ಬಂದ ಅಪವಾದ ಸುಳ್ಳಾದ ಮೇಲೆ ಮತ್ತೆ ಪೀಠ ಅಲಂಕರಿಸಿ. ಪೀಠ ತ್ಯಜಿಸಿ ಮುರುಘಾ ಮಠದ ಪೀಠದ ಗೌರವ ಉಳಿಸಿ. ಸಿಎಂ ಯಾವ ಮುಲಾಜಿಗೆ ಒಳಗಾಗ ಬಾರದು. ಸರಕಾರ ಈ ವಿಚಾರದಲ್ಲಿ ಲೋಪ ಮಾಡಿದ್ರೆ ಕ್ಷಮಿಸಲ್ಲ ನಿಮ್ಮನ್ನು ಕ್ಷಮಿಸಲ್ಲ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಯಾಕೆ ಮಾತಾಡ್ತಿಲ್ಲ. ಈ ನಾಡಿನ ಮಕ್ಕಳ ಪ್ರಶ್ನೆ ಇದು. ಪ್ರಧಾನ ಮಂತ್ರಿಗಳಿಗೆ ನಾನು ಈ ಬಗ್ಗೆ ವಿಸ್ತೃತವಾಗಿ ಪತ್ರ ಬರೆಯುತ್ತಿದ್ದೇನೆ. ಪತ್ರ ಯಾರ ವಿರುದ್ಧವೂ ಅಲ್ಲ. ಬದಲಾಗಿ ನಡೆದಿರುವ ಎಲ್ಲಾ ವಿಚಾರಗಳನ್ನು ಪತ್ರದಲ್ಲಿ ವಿವರಿಸುತ್ತೇನೆ ಎಂದು ವಿಶ್ವನಾಥ್ ಎಚ್ಚರಿಕೆ ನೀಡಿದರು.
Live Tv
[brid partner=56869869 player=32851 video=960834 autoplay=true]
ತನಿಖೆ ಹಂತದಲ್ಲಿ ಇರೋವಾಗ ಮಾತನಾಡಿದ್ರೆ ತಪ್ಪಾಗುತ್ತೆ. ಯಡಿಯೂರಪ್ಪ ಸ್ವಾಮೀಜಿ ಪರ ಸಮರ್ಥನೆ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಏನಾದ್ರು ಹೇಳಿದ್ರೆ ಬೇರೆ ಬೇರೆ ರೀತಿ ಅರ್ಥೈಸುವಂತ ಸಾಧ್ಯತೆಗಳೇ ಜಾಸ್ತಿ ಇದೆ. ಇದನ್ನ ಕಾನೂನು ವ್ಯಾಪ್ತಿಗೆ ಬಿಟ್ಟು ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎಂದು ಹೇಳಿದರು.
ಯಾವುದೇ ರೀತಿ ಹೇಳಿಕೆಯನ್ನ ಕೊಟ್ಟರೆ ತಪ್ಪು ಅರ್ಥ ಬರಲಿದೆ. ಹೀಗಾಗಿ ಈ ಬಗ್ಗೆ ಹೆಚ್ಚೇನು ಹೇಳೋದಿಲ್ಲ. ಒಂದು ಗಾದೆ ಮಾತಿದೆ, ನದಿ ಮೂಲ, ಖುಷಿ ಮೂಲ, ಡ್ಯಾಶ್ ಮೂಲ ಕೆದಕೋಕೆ ಹೋಗಬಾರದಂತೆ. ಹೀಗಾಗಿ ಇದರ ಬಗ್ಗೆ ಕೆದಕೋದಕ್ಕೆ ಹೋಗುವುದಿಲ್ಲ. ತನಿಖೆ ಹಂತದಲ್ಲಿ ನಾನು ಹೇಳಿದ್ರೆ ಅದೇನೋ ಅರ್ಥ ಆಗುತ್ತೆ. ಹೀಗಾಗಿ ನಾನು ಹೆಚ್ಚು ಮಾತಾಡೋದಿಲ್ಲ ಎಂದರು.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು ಇದೀಗ ಮಠಕ್ಕೆ ಆಗಮಿಸಿದ್ದಾರೆ.
ಶ್ರೀಗಳು ಮಠದ ಆವರಣದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿ, ಬಂದಿರುವ ಸಂದರ್ಭವನ್ನು ಧೈರ್ಯವಾಗಿ ಎದುರಿಸುತ್ತೇನೆ. ಸಮಸ್ಯೆ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಇದು ಸಂಕಷ್ಟದ ಸಮಯವಾಗಿದೆ. ಯಾರಿಗೂ ಆತಂಕ ಬೇಡ. ಎಲ್ಲರೂ ಧೈರ್ಯ ಸಹನೆಯಿಂದ ಇರಿ ಎಂದು ಮನವಿ ಮಾಡಿಕೊಂಡರು.
ಬುದ್ಧಿವಂತಿಕೆಯಿಂದ ಸಮಸ್ಯೆ ಎದುರಿಸಬೇಕು. ಮಠದ ಭಕ್ತರು ಸಹಕರಿಸಬೇಕು. ಈ ವಿಚಾರದಲ್ಲಿ ಯಾವುದೇ ಪಲಾಯನವಾದವಿಲ್ಲ. ಮಠದ ಒಳಗೆ ನಡೆಯುತ್ತಿದ್ದ ಪಿತೂರಿ ಈಗ ಹೊರಗೆ ಬಂದಿದೆ. ಈ ನೆಲದ ಕಾನೂನನ್ನು ಗೌರವಿಸಬೇಕು. ಇಂತಹ ಸಂದರ್ಭಗಳು ಇದೇ ಮೊದಲೇನು ಅಲ್ಲ. ಹೀಗಾಗಿ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಶ್ರೀಗಳು ತಿಳಿಸಿದರು.
ಅಜ್ಞಾತ ಸ್ಥಳದಿಂದ ಶ್ರೀಗಳು ಮಠಕ್ಕೆ ಆಗಮಿಸುತ್ತಿದ್ದಂತೆಯೇ ಭಕ್ತರು ಶ್ರೀಗಳ ಪರ ಘೋಷಣೆ ಕೂಗಿದ್ದಾರೆ. ಇನ್ನು ಯಾವುದೇ ಅಹಿತರ ಘಟನೆ ನಡೆಯದಂತೆ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಪೊಲೀಸರ ಬೆಂಗಾವಲಿನಲ್ಲಿ ಮಠಕ್ಕೆ ವಾಪಸ್ಸಾಗುತ್ತಿದ್ದೇನೆ ಎಂದು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಬಂಧನ ಆಗಿಲ್ಲ. ಚಿತ್ರದುರ್ಗ ಮಠಕ್ಕೆ ವಾಪಸ್ ಆಗುತ್ತಿದ್ದೇನೆ. ಪೊಲಿಸರ ಬೆಂಗಾವಲಿನಲ್ಲಿಯೇ ಮಠದತ್ತ ಹೋಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತ ಶ್ರೀಗಳು ಮಠಕ್ಕೆ ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿದ್ದ ಶ್ರೀಗಳು ಬಳಿಕ ಮಠದಲ್ಲಿಯೇ ಏಕಾಂತದಲ್ಲಿದ್ದರು. ತದನಂತರ ಅವರು ಮಠದಿಂದ ತೆರಳಿದ್ದು, ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಇತ್ತ ಮಠದಲ್ಲಿ ಭಕ್ತರು ಮೌನಕ್ಕೆ ಜಾರಿದ್ದರು.
Live Tv
[brid partner=56869869 player=32851 video=960834 autoplay=true]
ವಿಜಯಪುರ: ಮಠದಲ್ಲಿ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳ ಪರ ಸಚಿವ ಉಮೇಶ್ ಕತ್ತಿ ಬ್ಯಾಟ್ ಬೀಸಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀಗಳ ಮೇಲೆ ಎಫ್‍ಐಆರ್ ಆಗಲ್ಲ. ಆದರೆ ನೋಡೋಣ, ಇದು ಬಸವರಾಜ್ ಹಾಗೂ ಮುರುಘಾ ಶ್ರೀಗಳ ಒಳಜಗಳ ಎಂದರು. ಇದನ್ನೂ ಓದಿ: ಮಠದಲ್ಲಿಲ್ಲ ಮುರುಘಾ ಶ್ರೀಗಳು- ಮೌನಕ್ಕೆ ಜಾರಿದ ಭಕ್ತರು
ಇದರ ಮೇಲೆ ರಾಡಿ ಹಚ್ಚಿ ಎಲ್ಲೆಲ್ಲೂ ಹೋಗ್ತಾ ಇದೆ. ಮುರುಘಾ ಶ್ರೀಗಳ ಮೇಲೆ ಆರೋಪ ಮಾಡಿದ್ದು ತಪ್ಪು. ಇರುವ 2-3 ಶ್ರೀಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇಂತಹ ಶ್ರೀಗಳ ಮೇಲೆ ಇಲ್ಲಸಲ್ಲದ ಆರೋಪ ಸಲ್ಲದು ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜವನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗಬಾರದು. ಜನರನ್ನು ತೊಂದರೆಗೆ ಸಿಲುಕಿಸಬಾರದು. ಕೋರ್ಟ್ ಏನು ಕ್ರಮ ತೆಗೆದುಕೊಳ್ಳುತ್ತದೇ ನೋಡೋಣ ಎಂದು ಕತ್ತಿ ತಿಳಿಸಿದರು.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾಶ್ರೀ ಗಳ ವಿರುದ್ಧ ಪೋಕ್ಸೊ ಕೇಸ್ ಹಿನ್ನೆಲೆಯಲ್ಲಿ ಇದೀಗ ಶ್ರೀಗಳು ಮಠದಲ್ಲಿ ಕಾಣಿಸದೇ ಇರುವುದು ಭಕ್ತರು ಮೌನಕ್ಕೆ ಜಾರಿದ್ದಾರೆ.
ಶ್ರೀಗಳು ಮಠದಿಂದ ಹೊರಗೆ ತೆರಳಿದ್ದಾರೆ. ಆಡಳಿತಾಧಿಕಾರಿ ಜೊತೆ ರಾಜಿ ಸಂಧಾನ ವಿಫಲವಾಗಿದ್ದರಿಂದ ತಡರಾತ್ರಿ ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿರುವ ಸಾಧ್ಯಗಳಿವೆ. ಈ ಹಿನ್ನೆಲೆಯಲ್ಲಿ ಮಠದ ಭಕ್ತರಲ್ಲಿ ಆತಂಕ ಮೂಡಿದೆ. ಅಲ್ಲದೆ ಭಕ್ತರು ಮೌನಕ್ಕೆ ಜಾರಿದ್ದಾರೆ. ಇದನ್ನೂ ಓದಿ: ಸಂತ್ರಸ್ತೆಯರ ಹೇಳಿಕೆ ಮೇಲೆ ನಿಂತಿದೆ ಮುರುಘಾ ಶ್ರೀಗಳ ಭವಿಷ್ಯ..?
ಇತ್ತ ಪ್ರಕರಣ ಸಂಬಂಧ ಇಂದು ಸಂತ್ರಸ್ತ ಬಾಲಕಿಯರು ಇಂದು ಬೆಳಗ್ಗೆ 10 ಗಂಟೆಗೆ ಜಡ್ಜ್ ಮುಂದೆ ಹಾಜರಾಗಲಿದ್ದಾರೆ. ನಿನ್ನೆ ಸಿಡಬ್ಲೂಸಿ ಕಮಿಟಿ ಎದುರು ಹೇಳಿಕೆ ದಾಖಲು ಮಾಡಲಾಗಿತ್ತು. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆದಿತ್ತು. ಸಂತ್ರಸ್ತ ಬಾಲಕಿಯರು ಮೈಸೂರಿನಲ್ಲಿ ಹೇಳಿದಂತೆ ಚಿತ್ರದುರ್ಗದ ಸಿಡಬ್ಲೂಸಿಮುಂದೆಯೂ ಅದೇ ಹೇಳಿಕೆ ನೀಡಿದ್ದಾರೆ.
ಇಂದು ಜಡ್ಜ್ ಮುಂದೆಯೂ ಸಂತ್ರಸ್ತೆಯರು ಯಥಾವತ್ತು ಹೇಳಿಕೆ ದಾಖಲಿಸಿದರೆ ಮುರುಘಾಶ್ರೀಗೆ ತೀವ್ರ ಸಂಕಷ್ಟ ಎದುರಾಗಲಿದೆ. ಪೊಲೀಸರು ಮುರುಘಾಶ್ರೀಗೆ ನೋಟೀಸ್ ನೀಡುವ ಸಾಧ್ಯತೆಗಳಿವೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾ ಶರಣರ ಮೇಲೆ ಪೋಕ್ಸೊ ಕೇಸ್ ದಾಖಲಾದ ಹಿನ್ನೆಲೆ ಕೋಟೆನಾಡು ಚಿತ್ರದುರ್ಗ ಸದ್ಯ ಭಾರೀ ಸುದ್ದಿಯಲ್ಲಿದೆ. ಪ್ರಕರಣದ ಸಂತ್ರಸ್ತೆಯರ ಹೇಳಿಕೆಯ ಆಧಾರದ ಮೇಲೆ ಶ್ರೀಗಳ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.
ಕೋಟೆನಾಡು ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ. ಮೈಸೂರಿನಲ್ಲಿ ಹೇಳಿದ್ದ ಹೇಳಿಕೆಯನ್ನೇ ಚಿತ್ರದುರ್ಗದಲ್ಲೂ ನ್ಯಾಯಾಧೀಶರ ಮುಂದೆ ಸಂತ್ರಸ್ತರೆಯರು ಹೇಳಿದ್ರೆ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಕಂಟಕ ಫಿಕ್ಸ್ ಆಗುವ ಸಾಧ್ಯತೆ ಇದೆ. ದಲಿತ ಮುಖಂಡರು ಸಹ ಶರಣರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಹ ಆಗ್ರಹಿಸಿದ್ದಾರೆ.
ಈ ವಿಚಾರ ತಿಳಿದ ಭಕ್ತರು ಹಾಗೂ ವಿವಿಧ ಮಠಗಳ ಮಠಾಧೀಶರು ಮುರುಘಾ ಮಠಕ್ಕೆ ಆಗಮಿಸ್ತಿದ್ದಾರೆ. ಅಲ್ಲದೇ ಶರಣರಿಗೆ ಸಾಂತ್ವನ ಹೇಳುವುದರ ಜೊತೆಗೆ ಕಂಟಕದಿಂದ ಪಾರಾಗಲು ಪ್ಲಾನ್ ಮಾಡ್ತಿದ್ದಾರೆ. ಮಾತುಕತೆ ಹಾಗೂ ರಾಜಿ ಸಂಧಾನದೊಂದಿಗೆ ಪ್ರಕರಣದಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಸಂತ್ರಸ್ತೆಯರ ಹೇಳಿಕೆ ಮೇಲೆ ಶ್ರೀಗಳ ಭವಿಷ್ಯ ನಿಂತಿದ್ದು, ಶ್ರೀಗಳು ಹಾಗೂ ಇತರೆ ಆರೋಪಿಗಳಿಗೆ ಪೊಲೀಸರಿಂದ ನೋಟಿಸ್ ಜಾರಿ ಸಾಧ್ಯತೆ ಇದೆ.
ಮುರುಘಾ ಶ್ರೀಗಳ ವಿರುದ್ಧದ ಫೋಕ್ಸೊ ಕೇಸ್ ವಿಚಾರದಲ್ಲಿ ಎಲ್ಲರ ಚಿತ್ತ ಸಂತ್ರಸ್ತೆಯರ ಹೇಳಿಕೆಯತ್ತ ಎಂಬಂತಾಗಿದೆ. ಒಂದು ವೇಳೆ ಸಂತ್ರಸ್ತೆಯರು ಮೈಸೂರಿನಲ್ಲಿ ನೀಡಿದ ಹೇಳಿಕೆಯನ್ನೇ ಚಿತ್ರದುರ್ಗದಲ್ಲೂ ಪುನರುಚ್ಚರಿಸಿದ್ರೆ ಶ್ರೀಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ಮುರುಘಾ ಶ್ರೀಗಳ ವಿರುದ್ಧ ಆರೋಪ- ಇಂದು ಜಡ್ಜ್ ಮುಂದೆ ಸಂತ್ರಸ್ತೆಯರ ಹೇಳಿಕೆ ದಾಖಲು
Live Tv
[brid partner=56869869 player=32851 video=960834 autoplay=true]