ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ಮತ್ತಷ್ಟು ಕಾಮಕೇಳಿ ಪ್ರಕರಣ ಒಂದೊಂದು ಬಯಲಾಗುತ್ತಿದೆ. ಮುರುಘಾ ಶ್ರೀ ಕಪಿಮುಷ್ಠಿಯಲ್ಲಿ ಒದ್ದಾಡಿದವರು ಒಬ್ಬರಾ, ಇಬ್ಬರಾ..?. ಹಾಸ್ಟೆಲ್‍ನಲ್ಲಿ ಹಿಂಸೆ ಅನುಭವಿಸಿದ ಹಳೆ ವಿದ್ಯಾರ್ಥಿನಿ ಕೂಡ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾಳೆ.
2012ರಲ್ಲಿ ನಾನು ಮಠದಲ್ಲಿ ಓದುತ್ತಿದ್ದೆ. 2012ರಲ್ಲಿ ನಾನು 8ನೇ ತರಗತಿ ಓದುತ್ತಿದ್ದೆ. ಆಗ ಹಾಸ್ಟೆಲ್ ವಾರ್ಡನ್ ಆಗಿ ರಶ್ಮಿ ನೇಮಕಗೊಂಡರು. ರಶ್ಮಿ ಬಂದ ಮೇಲೆ ಹಾಸ್ಟೆಲ್ ಚಿತ್ರಣ ಬದಲಾಯಿತು. ನನ್ನನ್ನು ಬಲವಂತವಾಗಿ ಸ್ವಾಮೀಜಿ ಹತ್ತಿರ ಕಳುಹಿಸುತ್ತಿದ್ದರು. ಹಣ್ಣು ಕೊಡುತ್ತಾರೆ ಹೋಗು ಅಂತ ಹೇಳುತ್ತಿದ್ದರು. ನಾನು ಹಾಗೂ ನನ್ನ ಸ್ನೇಹಿತೆ ಹೋಗುತ್ತಿದ್ದೆವು ಎಂದಿದ್ದಾಳೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಪೋಕ್ಸೋ ಸಂಕಷ್ಟ- ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ
ಎಲ್ಲರೂ ಮಲಗಿದ ಮೇಲೆ ಹಿಂಬಾಗಿಲಿನಿಂದ ಹೋಗುತ್ತಿದ್ದೆವು. ಶ್ರೀಗಳು ನನಗೆ ಡ್ರೈಫ್ರೂಟ್ಸ್, ಚಾಕ್ಲೇಟ್ ಕೊಡುತ್ತಿದ್ದರು. ನನ್ನ ವಸ್ತ್ರ ಕಳಚಲು ಹೇಳುತ್ತಿದ್ದರು. ನಾನು ಶ್ರೀಗಳು ಹೇಳಿದಂತೆ ನಡೆದುಕೊಳ್ಳುತ್ತಿದ್ದೆ. ನನ್ನನ್ನು ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಅಲ್ಲದೆ ಅಂಗಾಂಗ ಮುಟ್ಟುತ್ತಿದ್ದರು. ಬಳಿಕ ನನ್ನೊಂದಿಗೆ ಗಂಡ-ಹೆಂಡತಿಯಂತೆ ಸೇರುತ್ತಿದ್ದರು ಎಂದು ತಿಳಿಸಿದ್ದಾಳೆ.
ಬೆಳಗ್ಗಿನ ಜಾವ 4.30ಕ್ಕೆ ಅಲಾರಂ ಇಟ್ಟುಕೊಂಡು ನನ್ನನ್ನು ಎಚ್ಚರಿಸುತ್ತಿದ್ದರು. ನಾನು ಬೆಳಗ್ಗಿನ ಜಾವ ಹಾಸ್ಟೆಲ್‍ಗೆ ಸೇರಿಕೊಳ್ಳುತ್ತಿದ್ದೆ. ಈ ವಿಷಯ ಹಾಸ್ಟೆಲ್‍ನಲ್ಲಿದ್ದ ಕೆಲವರಿಗೆ ಗೊತ್ತಾಯಿತು. ಬಳಿಕ ನನ್ನನ್ನು ಮಲ್ಲಾಡಿಹಳ್ಳಿ ಹಾಸ್ಟೆಲ್‍ಗೆ ಕಳುಹಿಸಿದರು ಎಂದು ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾಶ್ರೀ (MurughaShree) ವಿರುದ್ಧ ದಾಖಲಾಗಿರುವ ಪೋಕ್ಸೊ ಕೇಸ್ ತನಿಖೆ ನಡೆಸಿರುವ ಚಿತ್ರದುರ್ಗ (Chitradurga) ಪೊಲೀಸರು 694 ಪುಟಗಳ ಚಾರ್ಜ್ ಶೀಟನ್ನು ಕೋರ್ಟ್ (Court) ಗೆ ಸಲ್ಲಿಸಿದ್ದಾರೆ. ಆದರೆ ಈ ಆರೋಪವನ್ನು ಮುರುಘಾಶ್ರೀ ತನಿಖೆ ವೇಳೆ ತಳ್ಳಿಹಾಕಿದ್ದಾರೆ.
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಸಂತ್ರಸ್ತೆಯ ಹೇಳಿಕೆ ಆಧರಿಸಿ ಶ್ರೀಗಳ ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗ ಡಿವೈಎಸ್‍ಪಿ ಅನಿಲ್ ಕುಮಾರ್ (DYSP Anil Kumar) ನೇತೃತ್ವದಲ್ಲಿ ಪ್ರಕರಣವನ್ನು ತನಿಖೆ ನಡೆಸಲಾಗಿದೆ. ಆರೋಪಿಗಳು ಹಾಗೂ ಸಂತ್ರಸ್ತೆಯರ ವಿಚಾರಣೆ, ಸ್ಥಳ ಮಹಜರನ್ನು ಪ್ರತ್ಯೇಕವಾಗಿ ನಡೆಸಿದ್ದಾರೆ.
ಮುರುಘಾ ಶ್ರೀ ಹೇಳಿದ್ದೇನು..?: 4-5 ವರ್ಷಗಳಿಂದ ವಾರ್ಡನ್ ಆಗಿ ರಶ್ಮಿ (Warden Rashmi) ನೇಮಕ ಆಗಿದೆ. ರಶ್ಮಿ ಯಾವಾಗಿನಿಂದ ಮಠದಲ್ಲಿದ್ದರು ಎಂಬುದು ಗೊತ್ತಿಲ್ಲ. ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರೀತಿಯಿಂದ ಅಪ್ಪಾಜಿ ಎನ್ನುತ್ತಾರೆ. ನಮ್ಮ ಖಾಸಗಿ ಕೊಠಡಿಗೆ ಯಾರಿಗೂ ಪ್ರವೇಶ ಇರಲಿಲ್ಲ. ಸ್ವಚ್ಚತೆಯ ಕೆಲಸಕ್ಕೆ ನಾವು ಮಕ್ಕಳನ್ನು ಬಳಸಲ್ಲ. ಸಂತ್ರಸ್ತ ವಿದ್ಯಾರ್ಥಿನಿಯರ ಬಗ್ಗೆ ವೈಯಕ್ತಿಕ ಪರಿಚಯ ಇಲ್ಲ. ಗುಂಪಿನಲ್ಲಿ ಬಂದು ವಿದ್ಯಾರ್ಥಿಗಳು ಭೇಟಿ ಆಗುತ್ತಿದ್ದರು ಎಂದಿದ್ದಾರೆ.
ಹಣ್ಣು, ಡ್ರೈಫ್ರೂಟ್ಸ್, ಚಾಕ್ಲೇಟ್ ಪ್ರಸಾದ ರೂಪದಲ್ಲಿ ನೀಡುತ್ತಿದ್ದೆವು. ಮತ್ತು ಬರುವ ಪದಾರ್ಥ ಬೆರೆಸಿ ಮಕ್ಕಳಿಗೆ ನೀಡಿಲ್ಲ. ಮದ್ಯಪಾನ ಮಾಡುವ ಅಭ್ಯಾಸ ನಮಗೆ ಇಲ್ಲ. ಬಸವರಾಜನ್ ಮಠದ ಹಣ ದುರುಪಯೋಗ ಮಾಡಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕ ವಾಗಿ ಬಳಸಿಕೊಂಡಿಲ್ಲ. ನನ್ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳು ಸುಳ್ಳು. ಇದು ಷಡ್ಯಂತ್ರ, ಪ್ರಚೋದಿತವಾಗಿದ್ದು ಸತ್ಯಕ್ಕೆ ದೂರಾಗಿವೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ಮಠದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ನಾವು ಬಳಸಿಕೊಂಡಿಲ್ಲವೆಂದು ಮುರುಘಾಶ್ರೀ ಪೊಲೀಸರ ತನಿಖೆ ವೇಳೆ ಹೇಳಿದ್ದಾರೆ. ಈ ದೇಶದ ಕಾನೂನು ಗೌರವಿಸುವ ದೃಷ್ಠಿಯಿಂದ ನಾನು ಸ್ವ-ಇಚ್ಛೆಯಿಂದ ನಿಮ್ಮೆದುರು ಹಾಜರಾಗಿದ್ದೇನೆಂದು ಪೊಲೀಸರ ಮುಂದೆ ಶ್ರೀಗಳು ಉತ್ತರಿಸಿರುವ ಮಾಹಿತಿ ಚಾರ್ಜ್‍ಶೀಟಲ್ಲಿ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಸ್ವಾಮೀಜಿಯೊಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಿಂದಾಗಿ ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿದರು.
ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ತಾಲೂಕಿನ ತರಳಬಾಳು ಮಠದಿಂದ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಷಣದ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಪೋಕ್ಸೊ (POSCO) ಕೇಸ್‍ನಲ್ಲಿ ಮುರುಘಾಶ್ರೀ ಜೈಲುಪಾಲಾಗಿದ್ದಾರೆ. ಹೀಗಾಗಿ ಈ ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಅನೇಕರು ಪರೋಕ್ಷವಾಗಿ ಮುರುಘಾಶ್ರೀ (Murugha Shree) ವಿರುದ್ಧ ಮುಗಿಬಿದ್ದರು. ಅಲ್ಲದೇ ಚಾರ್ಜ್ ಶೀಟ್ ನಲ್ಲಿನ ಅಂಶಗಳು ಬಯಲಾದ ಬಳಿಕ ಮುಖಂಡರು ಗರಂ ಆಗಿದ್ದು, ಇವತ್ತು ದಿನಪೂರ್ತಿ ಟಿವಿಗಳಲ್ಲಿ ನೋಡುತ್ತಿದ್ದೇವೆ. ಹೆಣ್ಣು ಮಕ್ಕಳು ಸ್ವಾಮಿಗಳ ಬಳಿ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿ ಬರಬಾರದು ಎಂದು ಮುರುಘಾಶ್ರೀ ಮೇಲೆ ಶಿವಶಂಕರಪ್ಪ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಸರ್ಕಾರದಿಂದ ಸಹಾಯ ಬೇಕೆಂದು ಕೇಳುವುದು ನಾಚಿಕೆಗೇಡು. ನಮ್ಮ ಹೆಣ್ಣು ಮಕ್ಕಳು ಸಹ ಎಚ್ಚರವಾಗಿರಬೇಕು. ನಮ್ಮೆಲ್ಲರ ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂಬುದು ವೀರಶೈವರು ಅರಿಯಬೇಕು. ಒಳಪಂಗಡ ಬೇಧ ಮರೆತು ವೀರಶೈವರು ಒಂದಾಗಬೇಕು. ಇವತ್ತಿನ ಸಮಾರಂಭದಲ್ಲಿ ಎಲ್ಲರೂ ಸರ್ಕಾರದ ಸಹಾಯ ಕೇಳುತ್ತಿದ್ದಾರೆ. ಸರ್ಕಾರದಿಂದ ಸಹಾಯ ಬೇಕೆಂದು ಕೇಳುವುದು ನಾಚಿಕೆಗೇಡು. ಸ್ವಾಭಿಮಾನದಿಂದ ನಾವು ಇರಬೇಕು ಎಂದರು.
ಮೈಸೂರು: ಮುರುಘಾ ಮಠ (Murugha Mutt) ದ ಶರಣರು ಬಳಸುತ್ತಿದ್ದ ಶೌಚಾಗೃಹ ಮತ್ತು ಸ್ನಾನಗೃಹದ ಫಿಟ್ ಗಳನ್ನು ತೆಗೆದು ಪರಿಶೀಲನೆ ನಡೆಸಿದರೆ ಮಾದಕ ದ್ರವ್ಯ ಬಳಸಿರುವುದರು ಕುರುಹು ಸಿಗಬಹುದು ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ (Stanley) ಹೇಳಿದ್ದಾರೆ.
ಮುರುಘಾ ಶರಣರ ವಿರುದ್ದ ಚಾರ್ಜ್ ಶೀಟ್ (ChargeSheet) ಸಲ್ಲಿಕೆ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 15 ವರ್ಷದ ಹಿಂದೆ ಸ್ವಾಮೀಜಿಗಳೇ ಮುಂದೆ ನಿಂತು ಫಿಟ್ ಕ್ಲೀನ್ ಮಾಡಿಸಿದ್ದರು. ಸ್ವಾಮೀಜಿಯೆ ಮುಂದೆ ನಿಂತು ಫಿಟ್ ಕ್ಲೀನ್ ಮಾಡಿಸಿದ್ದೇಕೆ?. ಫಿಟ್ ನಲ್ಲಿ ಸಿಕ್ಕ ವಸ್ತಗಳು ಪದಾರ್ಥಗಳನ್ನು ಯಾರಿಗೂ ಕಾಣದಂತೆ ಬಹು ದೂರಕ್ಕೆ ಎಸೆಯುವಂತೆ ಸೂಚಿಸಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಕೆಲ ಮಕ್ಕಳ ಕಳೆ ಬರಹ ಸಿಗಬಹುದು. ಸ್ವಾಮೀಜಿ ಮಾದಕ ದ್ರವ್ಯ ಬಳಸುತ್ತಿದ್ದ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಯಬೇಕು. ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸಲು ಸ್ವಾಮೀಜಿ ಮಾದಕ ದ್ರವ್ಯ ಬಳಸುತ್ತಾರೆ. ಮಾದಕ ದ್ರವ್ಯ ಬಳಸದೆ ಇಷ್ಟು ನಿರಂತರ ಲೈಂಗಿಕ ಕ್ರಿಯೆ ಕಷ್ಟ. ಮಾದಕ ದ್ರವ್ಯದ ಕೇಸ್ ಕೂಡ ದಾಖಲಾಗಬೇಕು ಎಂದು ಅವರು ಆಗ್ರಹಿಸಿದರು.
ಮಠದಲ್ಲಿ ಸಿಕ್ಕ ಕೆಲ ಅನಾಥ ಮಕ್ಕಳ ಡಿಎನ್ ಎ (DNA Test) ಟೆಸ್ಟ್ ನಡೆಯಬೇಕು. ಹಲವು ಮಕ್ಕಳ ಅತ್ಯಾಚಾರ ಕೊಲೆಯಾಗಿವೆ. ಇನ್ನಷ್ಟು ಮಕ್ಕಳ ಪ್ರಕರಣಗಳು ಶ್ರೀಗಳ ವಿರುದ್ಧ ದಾಖಲಾಗುತ್ತವೆ ಎಂದು ಸ್ಟ್ಯಾನ್ಲಿ ತಿಳಿಸಿದರು.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾಶ್ರೀ (Murugha Shree) ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಮಠದ ಆವರಣದ ಹಾಸ್ಟೆಲ್ ನಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ (Chitradurga Police Station) ಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಾಲ್ಕೂವರೆ ವರ್ಷದ ಓರ್ವ ಬಾಲಕಿ, 16 ವರ್ಷದ ಮತ್ತೋರ್ವ ಹುಡುಗಿ ಪತ್ತೆಯಾಗಿದೆ. ಇಬ್ಬರು ಬಾಲಕಿಯರ ಬಗ್ಗೆ ಮಡಿಲು ಯೋಜನೆಗೆ ಮಾಹಿತಿ ದಾಖಲಿಸದೆ ಅಕ್ರಮವಾಗಿ ಸೇರಿಸಿಕೊಳ್ಳಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡದೆ ಅಕ್ರಮ ಹಾಗೂ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬರುತ್ತಿದೆ.
ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀ (Murugha Shree) ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. 2ನೇ ಪೋಕ್ಸೋ ಕೇಸ್ (POCSO Case) ಸಂಬಂಧ ಸಿಆರ್‍ಪಿಸಿ 161 ಅಡಿ ನಿನ್ನೆ ಮೈಸೂರಿನಲ್ಲಿ ಇಬ್ಬರು ಸಂತ್ರಸ್ತ ಬಾಲಕಿಯರು ಹಾಗೂ ತಾಯಿಯ ಹೇಳಿಕೆಯನ್ನು ಚಿತ್ರದುರ್ಗ ಪೊಲೀಸರು (Chitradurga Police) ದಾಖಲಿಸಿದ್ದರು. ಆದರೆ ಸಂತ್ರಸ್ತ ಬಾಲಕಿ & ತಾಯಿ ನೀಡಿದ ಹೇಳಿಕೆಯಲ್ಲಿ ಕೆಲ ವ್ಯತ್ಯಾಸ, ಗೊಂದಲಗಳಿದೆ ಎನ್ನಲಾಗಿದೆ. ಅಲ್ಲದೇ ಚಿತ್ರದುರ್ಗ ಜಡ್ಜ್ ಮುಂದೆ ಹಾಜರುಪಡಿಸಿ, ಮತ್ತೋರ್ವ ಬಾಲಕಿಯ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.
ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪ ಕೇಳಿಬಂದಿರುವ ಹಿನ್ನೆಲೆ ಓರ್ವ ಸಂತ್ರಸ್ತೆಯ ಆಪ್ತ ಸಮಾಲೋಚನೆಯನ್ನು ಚಿತ್ರದುರ್ಗ ಸಿಡಬ್ಲೂಸಿ ಸಮಿತಿ ನಡೆಸಿದೆ. ಸಿಆರ್‍ಪಿಸಿ 164 ಅಡಿ ಬಾಲಕಿಯ ಹೇಳಿಕೆಯನ್ನೂ ಜಡ್ಜ್ ಮುಂದೆ ದಾಖಲಿಸಿದ್ದಾರೆ. ಮತ್ತೋರ್ವ ಬಾಲಕಿಯ ಹೇಳಿಕೆ ದಾಖಲಿಸಲು ಸಿಡಬ್ಲುಸಿ ಸಮಿತಿಗೆ ಪೊಲೀಸರು ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: 2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ- ಮೈಸೂರಲ್ಲಿ ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
ಮುರುಘಾ ಶ್ರೀಗಳ ವಿರುದ್ಧ 2ನೇ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ, ಹೊಸ ಪೀಠಾಧ್ಯಕ್ಷರ ಆಯ್ಕೆ, ಆಡಳಿತಾಧಿಕಾರಿಗಳ ನೇಮಕಕ್ಕೆ ವಿರೋಧಿಗಳು ಬಿಗಿಪಟ್ಟು ಹಿಡಿದಿದ್ದರು. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪರನ್ನೂ ಕೂಡ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ನಿನ್ನೆ ಶ್ರೀಗಳ ವಿರೋಧಿ ಹಾಗೂ ಮಾಜಿ ಸಚಿವ ಏಕಾಂತಯ್ಯ ಶ್ರೀಗಳನ್ನು ಭೇಟಿಯಾಗಿ ಮನವೊಲಿಕೆಗೆ ಮುಂದಾಗಿದ್ದಾರೆ ಅನ್ನೋ ಮಾತು ಕೂಡ ಕೇಳಿಬಂದಿದೆ.
ಒಟ್ಟಿನಲ್ಲಿ ಮುರುಘಾ ಶ್ರೀ ವಿರುದ್ಧದ 2ನೇ ಪೋಕ್ಸೋ ಕೇಸ್‍ನ ತನಿಖೆ ಚುರುಕುಗೊಂಡಿದೆ. ಈ ಮಧ್ಯೆ ಮುರುಘಾ ಶ್ರೀ ಪೀಠತ್ಯಾಗಕ್ಕೆ ಕೂಗು ಹೆಚ್ಚಾಗಿದೆ. ಸರ್ಕಾರ ಏನಾದ್ರೂ ಮಧ್ಯೆ ಪ್ರವೇಶಿಸಿ ಹೊಸ ಪೀಠಾಧಿಪತಿಯ ಹೆಸರನ್ನು ಘೋಷಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾ ಶ್ರೀ (Murugha Shree) ವಿರುದ್ಧ ಮತ್ತೊಂದು ಕೇಸ್ ದಾಖಲಾದಾಗಿನಿಂದ ಪೀಠಾಧಿಪತಿ ಬದಲಾವಣೆ ಕೂಗು ತಾರಕಕ್ಕೇರಿದೆ. ಹೀಗಾಗಿ ಅದಕ್ಕೆ ಬ್ರೇಕ್ ಹಾಕಲು ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಮುರುಘಾ ಶ್ರೀ ಆಪ್ತ ಶಿಷ್ಯ ಬಸವಪ್ರಭು ಶ್ರೀಗಳನ್ನು (Basavaprabhu Shree) ನೇಮಿಸಲಾಗಿದೆ. ಆದರೆ ಇದರಿಂದಾಗಿ ಮುರುಘಾ ಮಠದಲ್ಲಿ (Murugha Mutt) ಮತ್ತಷ್ಟು ಅಸಮಾಧಾನ ಭುಗಿಲೆದ್ದಿದೆ.
ಕೋಟೆ ನಾಡು ಚಿತ್ರದುರ್ಗದ ಮುರುಘಾ ಮಠಕ್ಕೆ ತನ್ನದೇ ಆದ ಐತಿಹ್ಯವಿದೆ. ಶೂನ್ಯ ಪೀಠ ಪರಂಪರೆಯ ಮಠಕ್ಕೆ ಪೀಠಾಧಿಪತಿಯೇ ಸುಪ್ರಿಂ. ಆದರೆ ಪೋಕ್ಸೋ ಕೇಸ್‌ನಡಿ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಮಠದ ಆಡಳಿತ ಹಾಗೂ ಪೂಜಾ ಕೈಂಕರ್ಯಕ್ಕೆ ಅಡ್ಡಿಯಾಗಬಾರದೆಂಬ ನಿಟ್ಟಿನಲ್ಲಿ ಯೋಚಿಸಿದ್ದ ಮುರುಘಾ ಶ್ರೀ, ಮಠದ ಧಾರ್ಮಿಕ ಆಚರಣೆ ಹಾಗೂ ಶರಣ ಸಂಸ್ಕ್ರತಿ ಉತ್ಸವದ ಪ್ರಭಾರ ಉಸ್ತುವಾರಿಯಾಗಿರುವಂತೆ ಹೆಬ್ಬಾಳದ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರನ್ನು ಮೌಖಿಕವಾಗಿಯಷ್ಟೇ ನೇಮಿಸಿದ್ದರು.
ಮುರುಘಾ ಶ್ರೀ ವಿರುದ್ಧ ಮತ್ತೊದು ಕೇಸ್ ದಾಖಲಾದ ಬಳಿಕ ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಹೆಚ್. ಏಕಾಂತಯ್ಯ ನೇತೃತ್ವದ ಲಿಂಗಾಯತ ಸಮುದಾಯದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರ್ಕಾರದ ಗಮನ ಸೆಳೆದಿದ್ದರು. ಇದನ್ನೂ ಓದಿ: ಭಾರತ್ ಜೋಡೋ ವೇಳೆ ಕಾಂಗ್ರೆಸ್ ಹಾಕಿದ್ದ ಕಸ ಗುಡಿಸಿ ಸ್ವಚ್ಛಗೊಳಿಸಿದ ಶ್ರೀರಾಮುಲು
ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತ ಮುರುಘಾ ಶ್ರೀ ಹಾಗೂ ಮಠದ ಆಡಳಿತ ಸಮಿತಿಯು, ಹೈಕೋರ್ಟ್‌ನಿಂದ ಅನುಮತಿ ಪಡೆದು, ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿಯನ್ನು ಅಧಿಕೃತವಾಗಿ ನೇಮಿಸಿದ್ದಾರೆ.
ಹೊಸ ಜವಾಬ್ದಾರಿ ವಹಿಸಿಕೊಂಡ ಬಸವಪ್ರಭು ಶ್ರೀ, ಮಠದಲ್ಲಿನ ಕರ್ತೃ ಗದ್ದುಗೆ ದರ್ಶನ ಪಡೆದು, ಮುರುಘಾ ಶ್ರೀ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ. ಈ ಸೇವೆಯನ್ನು ನಿಷ್ಠೆಯಿಂದ, ಭಕ್ತಿಯಿಂದ ಸಲ್ಲಿಸುತ್ತೇನೆ. ಈ ಜವಬ್ದಾರಿಯನ್ನು ಮುರುಘೇಶ, ಗುರು ಬಸವೇಶನ ಸೇವೆ ಎಂದು ಭಾವಿಸುತ್ತೇನೆ. ಮುರುಘಾ ಶ್ರೀ ಮಾರ್ಗದರ್ಶನದಲ್ಲಿ ಮಠದ ಸೇವೆ ಸಲ್ಲಿಸುತ್ತೇನೆ. ಹೀಗಾಗಿ ಭಕ್ತರು ಎಂದಿನಂತೆ ನಮಗೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನರನ್ನು ಸೇರಿಸಲು ಬಿಜೆಪಿ ನಿರ್ಧಾರ
ಮುರುಘಾ ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಬಸವಪ್ರಭು ಶ್ರೀಗಳನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುರುಘಾ ಮಠದಲ್ಲಿ ಬಿನ್ನಮತ ಭುಗಿಲೆದ್ದಿದೆ. ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೊಳಗಾದಾಗಿನಿಂದ ಎಲ್ಲಾ ಪೂಜಾ ಕೈಂಕರ್ಯದ ಜವಾಬ್ದಾರಿ ಹೊತ್ತಿದ್ದ ಹೆಬ್ಬಾಳದ ಮಹಂತ ರುದ್ರೇಶ್ವರ ಶ್ರೀ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಲಿಖಿತವಾಗಿ ಬಸವಪ್ರಭು ಶ್ರೀ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವ ಹಿನ್ನೆಲೆ ಬೇಸರಗೊಂಡಿರುವ ರುದ್ರೇಶ್ವರ ಸ್ವಾಮೀಜಿ ಶನಿವಾರ ಸಂಜೆ ಮುರುಘಾ ಮಠದಿಂದ ಹೆಬ್ಬಾಳಕ್ಕೆ ತೆರಳಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.
ಮುರುಘಾ ಮಠದಲ್ಲಿ ಒಂದು ಸಮಸ್ಯೆ ಬಗೆಹರಿಯುತ್ತಿದ್ದಂತೆ ಮತ್ತೊಂದು ಸಮಸ್ಯೆ ತಲೆದೋರುತ್ತಿದೆ. ಪೀಠಾಧಿಪತಿ ಬದಲಾವಣೆ ಕೂಗಿಗೆ ಬ್ರೇಕ್ ಹಾಕಲು ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಬಸವಪ್ರಭು ಶ್ರೀಗಳನ್ನು ನೇಮಿಸಲಾಗಿದೆ. ಮುರುಘಾ ಶ್ರೀಗೆ ಬಸವಪ್ರಭು ಶ್ರೀಗಳು ಆಪ್ತ ಶಿಷ್ಯರೆಂಬ ಹಿನ್ನಲೆ ಈ ಉಸ್ತುವಾರಿ ಆಯ್ಕೆಗೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಪೋಕ್ಸೋ (POCSO) ಪ್ರಕರಣ ಸಂಬಂಧ ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಮುರುಘಾಶ್ರೀ (Murugha Shree) ಗೆ ಹೃದಯ ಸಮಸ್ಯೆ ಹಿನ್ನೆಲೆ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಕರೋನರಿ ಆಂಜಿಯೋಗ್ರಾಮ್ (Coronary angiogram) ನಿಂದ ಬಳಲುತ್ತಿದ್ದಾರೆ ಎಂದು ಮುರುಘಾಶ್ರೀ ಪರ ವಕೀಲ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ನ್ಯಾಯಾಧೀಶರ ಸೂಚನೆ ಮೇರೆಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ (McGann Hospital) ಗೆ ಕರೆದೊಯ್ಯಲು ಕೋರ್ಟ್ ಸೂಚನೆ ನೀಡಿದಂತೆ ಅವರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಮಡು ಹೋಗಲಾಗಿದೆ. ಬಿಗಿ ಭದ್ರತೆಯಲ್ಲಿಯೇ ಪೊಲೀಸ್ ವ್ಯಾನ್ ನಲ್ಲಿ ಮುರುಘಾಶ್ರೀಯನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಮುರುಘಾಮಠದ ಮುಂಭಾಗದಿಂದಲೇ ಶಿವಮೊಗ್ಗಕ್ಕೆ ಪೊಲೀಸ್ ವ್ಯಾನ್ ತೆರಳಿದೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ಶುಕ್ರವಾರದಿಂದ ಪೊಲಿಸ್ ಕಸ್ಟಡಿಯಲ್ಲಿ ಇರುವ ಮುರುಘಾ ಶ್ರೀಗಳನ್ನು ಇಂದು ತನಿಖಾ ತಂಡ ವಿಚಾರಣೆಗೆ ಒಳಪಡಿಸಿದೆ. ಆದರೆ ಶ್ರೀಗಳು ವಿಚಾರಣೆಗೆ ಸಹಕರಿಸ್ತಿಲ್ಲ ಎನ್ನಲಾಗಿದೆ.
ಎಲ್ಲಾ ರೀತಿಯ ಆರೋಪಗಳನ್ನು ಸ್ವಾಮೀಜಿ ತಳ್ಳಿ ಹಾಕಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ್ಯ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ವಿಚಾರಣೆ ಮಧ್ಯೆ ಶ್ರೀಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದ ಪೊಲೀಸರು ಇಸಿಜಿ, ಎಕೋ ಸೇರಿ ಹಲವು ಟೆಸ್ಟ್ ಮಾಡಿಸಿದ್ರು. ಜೊತೆಗೆ ಸ್ವಾಮೀಜಿಗಳ ಉಗುರು, ಕೂದಲು ಸಂಗ್ರಹಿಸಿದರು. ಈ ನಡುವೆ ಶ್ರೀಗಳ ಪುರುಷತ್ವ ಪರೀಕ್ಷೆ ಫಲಿತಾಂಶ, ಪಾಸಿಟೀವ್ ಎಂದು ಬಂದಿದೆ.
ಶ್ರೀಗಳ ಜಾಮೀನು ಪ್ರಯತ್ನಕ್ಕೆ ಕೋರ್ಟ್‍ನಲ್ಲಿ ಹಿನ್ನಡೆ ಆಗಿದೆ. ಪೊಲೀಸ್ ಕಸ್ಟಡಿ ಅವಧಿ ಮುಗಿಯೋವರೆಗೂ ಜಾಮೀನು ಅರ್ಜಿ ಸಲ್ಲಿಸದಂತೆ ಕೋರ್ಟ್ ಸೂಚಿಸಿದೆ. ಪ್ರಕರಣದ ಎ3, ಎ4, ಎ5 ಆರೋಪಿಗಳು ನಾಪತ್ತೆಯಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ನಿರೀಕ್ಷಣಾ ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರು ಸೋಮವಾರದವರೆಗೆ ಸಮಯ ಪಡೆದಿದ್ದಾರೆ.
ಇತ್ತ ಮಠದಲ್ಲಿ ನೀರವ ಮೌನ ಆವರಿಸಿದೆ. ಮುರುಘಾ ಶ್ರೀಗಳ ಭಕ್ತೆಯೊಬ್ಬರು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಾರೆ. ಮಠದ ಸಿಬ್ಬಂದಿ ಬಿಟ್ಟು ಯಾರೂ ಮಠದ ಕಡೆ ಸುಳಿದಿಲ್ಲ. ಭಾನುವಾರ ಬಂತೆಂದ್ರೆ ಗಿಜಿಗುಡುತ್ತಿದ್ದ ಮಠ ಮತ್ತು ಉದ್ಯಾನವನದ ಕಡೆ ಇಂದು ಜನ ಸುಳಿದಿಲ್ಲ. ಶ್ರೀಗಳ ಬಂಧನದ ಪರಿಣಾಮ ಮುರುಘಾ ಮಠದಲ್ಲಿ ಪ್ರತಿತಿಂಗಳು ನಡೆಯುತ್ತಿದ್ದ ಕಲ್ಯಾಣೋತ್ಸವದ ಮೇಲೆಯೂ ಆಗಿದೆ. ನೋಂದಣಿ ಮಾಡಿಕೊಂಡಿದ್ದ 9 ಜೋಡಿಗಳ ಪೈಕಿ, 2 ಜೋಡಿ ಇಲ್ಲಿ ಮದ್ವೆ ರದ್ದು ಮಾಡಿಕೊಂಡಿವೆ. ಆದರೆ ಕಲ್ಯಾಣೋತ್ಸವ ಎಂದಿನಂತೆ ನಡೆಯುತ್ತೆ ಎಂದು ಮುರುಘಾ ಮಠ ಪ್ರಕಟಣೆಯಲ್ಲಿ ತಿಳಿಸಿದೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾ ಶರಣರಿಗೆ 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದೆ. ಹೀಗಾಗಿ ಈ ರೀತಿಯ ಪ್ರಾಬ್ಲಂ ಬರೋದು ಸಹಜ ಎಂದು ಚಿತ್ರದುರ್ಗ ಡಿಹೆಚ್ ಓ ಡಾ,ರಂಗನಾಥ್ ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಆದೇಶದ ಮೇರೆಗೆ ದಾವಣಗೆರೆಯ ಕಾರ್ಡಿಯಾಲಾಜಿಸ್ಟ್ ಡಾ.ಮಲ್ಲೇಶ್, ಡಾ.ಶ್ರೀನಿವಾಸ ತಂಡ ಜಿಲ್ಲಾಸ್ಪತ್ರೆಗೆ ಆಗಮಿಸಲಿದೆ. ಅವರು ಧಾವಿಸಿ ಮುರುಘಾ ಶ್ರೀಗಳನ್ನು ಗಮನಿಸಿ, ಸೆಕೆಂಡ್ ಒಪೀನಿಯನ್ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಐಸಿಯುಗೆ ಶಿಫ್ಟ್
ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಇಬ್ಬರು ಹೃದಯ ತಜ್ಞರನ್ನ ಕರೆಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದಾರೆ. 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಇಂತಹ ಸಮಸ್ಯೆಗಳು ಬರುತ್ತವೆ. ಕಾರ್ಡಿಯಾಲಜಿಸ್ಟ್ ಗಳು ಏನು ಸಜೆಸ್ಟ್ ಮಾಡ್ತಾರೆ ನೋಡಬೇಕು ಎಂದು ಅವರು ತಿಳಿಸಿದರು.
ಇತ್ತ ಜಿಲ್ಲಾಸ್ಪತ್ರೆಯಿಂದ ಶ್ರೀಗಳನ್ನ ನೇರವಾಗಿ ಮಠಕ್ಕೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. ನಂತರ ಮಠದ ಬಳಿಯಿರುವ ಹೆಲಿಪ್ಯಾಡ್ ನಿಂದ ವಿಮಾನದಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಶ್ರೀಗಳಿಗೆ ಹೃದಯ ಸಮಸ್ಯೆ ಬಗ್ಗೆ ಎಸ್ ಎಸ್ ಆಸ್ಪತ್ರೆ ವೈದ್ಯರು ದೃಢೀಕರಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Live Tv
[brid partner=56869869 player=32851 video=960834 autoplay=true]