ಚಿತ್ರದುರ್ಗ: ಮುರುಘಾಶ್ರೀ ವಿರುದ್ಧದ ಪೋಕ್ಸೋ ಕೇಸ್‍ನ (POCSO Case) ಎಲ್ಲಾ ದಾಖಲಾತಿಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಹೈಕೋರ್ಟ್ (High Court) ಆದೇಶಿಸಿದೆ.
ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಏಕಸದಸ್ಯ ಪೀಠ, ಕೆಳ ನ್ಯಾಯಾಲಯದ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನವೆಂಬರ್ 8 ರಂದು ಹೈಕೋರ್ಟ್ ಜಾಮೀನು ನೀಡಿದ್ದರೂ ನವೆಂಬರ್ 16ಕ್ಕೆ ರಿಲೀಸ್ ಆದೇಶ ನೀಡಿದ್ದು ಯಾಕೆ…? ಕೆಳಹಂತದ ನ್ಯಾಯಾಲಯದ ನಡೆ ಹೈಕೋರ್ಟ್ ಆದೇಶದ ನಿಯಮ ಉಲ್ಲಂಘನೆಯಾಗಿದೆ.
ಕೋರ್ಟ್ ಜಾಮೀನು ಆದೇಶ ನೀಡಿದ ನಂತರ ಬಾಡಿ ವಾರಂಟ್ ತಾನಾಗಿಯೇ ರದ್ದಾಗುತ್ತದೆ. ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಷರತ್ತು ಇದ್ದರೂ ವಾರಂಟ್ ಹೊರಡಿಸಿರೋದು ಸಮಂಜಸ ಅಲ್ಲ, ಟ್ರಯಲ್ ಕೋರ್ಟ್ ಇರುವ ದಾಖಲೆಗಳನ್ನ ರಿಜಿಸ್ಟ್ರಾರ್ ತರಿಸಿ ಇಟ್ಟುಕೊಳ್ಳಬೇಕು. ತಕ್ಷಣ ಫೋನ್ ಮಾಡಿ ಕೋರ್ಟ್ ಮುಂದೆ ಇರುವ ಎಲ್ಲಾ ದಾಖಲೆ ಸೀಜ್ ಮಾಡಬೇಕು. ಎಸ್‍ಪಿಪಿ ವಿರುದ್ಧ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ದಾವಣಗೆರೆ: ಮುರುಘಾ ಶ್ರೀಗಳು (Murugha Shree) ಆರೋಪಿ ಅಷ್ಟೇ, ಅಪರಾಧಿ ಅಲ್ಲ. ಇದು ಅನಿರೀಕ್ಷಿತ ಆದೇಶ ಎಂದು ಶ್ರೀಗಳ ಆಪ್ತ ಶಿವಶಂಕರ್ ಹೇಳಿದ್ದಾರೆ.
ಶ್ರೀಗಳ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ವಿರಕ್ತ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ತಲೆ ಬಾಗುವುದಾಗಿ ಶ್ರೀಗಳು ಹೇಳಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ಶ್ರೀಗಳು ಆರೋಪಿ ಅಷ್ಟೇ, ಅಪರಾಧಿ ಅಲ್ಲ ಎಂದು ಹೇಳಿದರು.
ನಮ್ಮ ವಕೀಲರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಾರೆ. ಸಂಕಷ್ಟ ಎಸುರಿದಲು ಶ್ರೀಗಳು ಸಿದ್ಧರಿದ್ದಾರೆ. ಕೋರ್ಟ್ ಆದೇಶದಿಂದ ಖುಷಿ, ದುಃಖ ಅಂತೇನಿಲ್ಲ. ಇದೊಂದು ಅನಿರೀಕ್ಷಿತ ಆದೇಶವಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ ಅರೆಸ್ಟ್ ವಾರೆಂಟ್ ಜಾರಿ
ಪೋಕ್ಸೋ ಕೇಸಿನಲ್ಲಿ ಶ್ರೀಗಳಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಶ್ರೀಗಳು ಮೊದಲನೇ ಕೇಸಿನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಇದೀಗ 2ನೇ ಕೇಸಿನಲ್ಲಿ ಬಂಧಿಸುವಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಮಾಡಿದೆ. ಈ ಮೂಲಕ ಕೇವಲ ನಾಲ್ಕೇ ದಿನಕ್ಕೆ ಶ್ರೀಗಳಿಗೆ ಮತ್ತೆ ಬಂಧನದ ಭೀತಿ ಶುರುವಾಗಿದೆ.
ಚಿತ್ರದುರ್ಗ: ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಮುರುಘಾಶ್ರೀಗಳಿಗೆ (Murugha Shree) ಮತ್ತೆ ಬಂಧನದ ಭೀತಿ ಎದುರಾಗಿದೆ.
ಪೋಕ್ಸೋ ಕೇಸಿನಲ್ಲಿ ಶ್ರೀಗಳಿಗೆ ಅರೆಸ್ಟ್ ವಾರೆಂಟ್ (Arrest Warrant) ಜಾರಿಯಾಗಿದೆ. ಶ್ರೀಗಳು ಮೊದಲನೇ ಕೇಸಿನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಇದೀಗ 2ನೇ ಕೇಸಿನಲ್ಲಿ ಬಂಧಿಸುವಂತೆ ಚಿತ್ರದುರ್ಗ (Chitradurga) ಜಿಲ್ಲಾ ನ್ಯಾಯಾಲಯ ಆದೇಶ ಮಾಡಿದೆ. ಈ ಮೂಲಕ ಕೇವಲ ನಾಲ್ಕೇ ದಿನಕ್ಕೆ ಶ್ರೀಗಳಿಗೆ ಮತ್ತೆ ಬಂಧನದ ಭೀತಿ ಶುರುವಾಗಿದೆ. ಇದನ್ನೂ ಓದಿ: ಪೋಕ್ಸೋ ಕೇಸ್ – ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ
ಇತ್ತೀಚೆಗೆ ಪ್ರಕರಣವೊಂದಕ್ಕೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ಜೈಲಿನಿಂದ ಹೊರಬಂದಿದ್ದರು. ಆದರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಬಂಧನ ವಾರೆಂಟ್ ಕೋರಿ ಸರ್ಕಾರಿ ವಕೀಲ ಜಗದೀಶ್ ಕೋರ್ಟ್ ಗೆ ಮನವಿ ಮಾಡಿದ್ದರು. ಇದಕ್ಕೆ ಮುರುಘಾ ಶ್ರೀ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ; ಭಕ್ತರಿಗೆ ಮೌನವೇ ದೊಡ್ಡ ಸಂದೇಶ: ಜೈಲಿಂದ ಬಂದ ಮುರುಘಾ ಶ್ರೀ
1ನೇ ಪೊಕ್ಸೋ ಕೇಸಲ್ಲಿ ಹೈಕೋರ್ಟ್ ನಿಂದ (HighCourt) ಷರತ್ತುಬದ್ಧ ಜಾಮೀನು ಹಿನ್ನೆಲೆಯಲ್ಲಿ ಮುರುಘಾಶ್ರೀ ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. ಮುರುಘಾಶ್ರೀ ಮತ್ತೆ ಬಂಧನದ ಅಗತ್ಯವಿಲ್ಲ. ಬಂಧನ ವಾರೆಂಟ್ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆಂದು ಮುರುಘಾಶ್ರೀ ಪರ ವಕೀಲ ಉಮೇಶ್ ವಾದಿಸಿದ್ದಾರೆ. ಸದ್ಯ ಎರಡೂ ಕಡೆಯ ವಾದ ಆಲಿಸಿರುವ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಇಂದು ಆದೇಶ ನೀಡಿದೆ. ಈ ಮೂಲಕ 2ನೇ ಪ್ರಕರಣದಲ್ಲಿ ನಿರ್ಧಾರ ಪ್ರಕಟಿಸಿದೆ.
ಕೇರಳದ ಪ್ರಕರಣವೊಂದರ ಉಲ್ಲೇಖದನ್ವಯ ಅರೆಸ್ಟ್ ವಾರೆಂಟ್ ಜಾರಿ ಮಾಡುವಂತೆ ಕೋರ್ಟ್ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದೆ.
ಚಿತ್ರದುರ್ಗ: ಮೊದಲ ಪೋಕ್ಸೋ ಕೇಸಲ್ಲಿ ಮುರುಘಾಶ್ರೀ ಜೈಲಿನಿಂದ ಬಿಡುಗಡೆಯಾದರು ಸಹ ಅವರ ವಿರುದ್ಧ ದೂರುಗಳು ಮಾತ್ರ ಇನ್ನೂ ನಿಂತಿಲ್ಲ. ಮುರುಘಾಶ್ರೀ ವಿರುದ್ಧ ಚಿತ್ರದುರ್ಗದ ಎಸ್‍ಪಿ ಕಚೇರಿಗೆ ವಕೀಲರಾದ ಮಧುಕುಮಾರ್ ಮತ್ತೊಂದು ದೂರು ಸಲ್ಲಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಚಿತ್ರದುರ್ಗ ನಗರದ ವಕೀಲ ಮಧುಕುಮಾರ್ ಅವರು, ಮೊದಲ ಕೇಸಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮುರುಘಾಶ್ರೀ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿರುವುದು ಸಹ ಅಪರಾಧವಾಗಿದೆ. ಅವರು ವಿಕ್ಟಿಮ್ಸ್ ಗಳ ಮೇಲೆ ತಮ್ಮ ಪ್ರಭಾವ ಬೀರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುರುಘಾಶ್ರೀಗೆ ಮಠದಲ್ಲಿರದಂತೆ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಹೈಕೋರ್ಟಿಗೆ ಮನವಿ ಮಾಡಿದ್ದಾರೆ.
ಮುರುಘಾಮಠದಲ್ಲಿ (Murugha Mutt) 2001ರ ಜನವರಿ 5ರಂದು ಸಿಕ್ಕ ಮಗು, 2022ರ ಆಗಸ್ಟ್ 13 ರಂದು ಸಿಕ್ಕ ಹಸುಗೂಸು ಹಾಗೂ 2003ರ ಮೇ 21ರಂದು ಮೂರನೇ ಮಗು ಸೇರಿದಂತೆ ಮತ್ತೆ ಮೂವರು ಮಕ್ಕಳು ಮಠಕ್ಕೆ ಅನಧಿಕೃತವಾಗಿ ಧಾವಿಸಿದ್ದಾರೆಂದು ಆರೋಪಿಸಿದ್ದು, ಅವರಲ್ಲಿ ಕೆಲ ಹೆಣ್ಮಕ್ಕಳನ್ನು ಮುರುಘಾಶ್ರೀ ಆಪ್ತ ವಲಯಕ್ಕೆ ಅಕ್ರಮವಾಗಿ ದತ್ತು ನೀಡಿರುವ ವಿವರ ಹಾಗೂ ಎಲ್ಲಾ ಪ್ರಕ್ರಿಯೆ ಬಗ್ಗೆ ಮುರುಘಾಶ್ರೀ ಬರೆದಿರುವ ಅಗ್ನಿಗಾನ ಜೀವನಕಥನದಲ್ಲಿ ಉಲ್ಲೇಖವಾಗಿರುವ ದಾಖಲೆಯನ್ನು ಮಧುಕುಮಾರ್ ಬಿಡುಗಡೆ ಮಾಡಿದ್ದಾರೆ.
ಹೀಗಾಗಿ ಈ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಕಳೆದ 14 ತಿಂಗಳ ಹಿಂದೆಯೂ ಚಿತ್ರದುರ್ಗ ಗ್ರಾಮಾಂತರ ಠಾಣೆ, ಜಿಲ್ಲಾಧಿಕಾರಿ, ಸಿಡಬ್ಲುಸಿ ಸಮಿತಿಗೂ ಮಧುಕುಮಾರ್ ದೂರು ಸಲ್ಲಿಸಿದ್ದರು. ಆದರೆ ಈವರೆಗೆ ಕ್ರಮವಾಗದ ಹಿನ್ನೆಲೆಯಲ್ಲಿ ಮತ್ತೆ ಚಿತ್ರದುರ್ಗ ಎಸ್ಪಿ ಧಮೇರ್ಂದರ್ ಕುಮಾರ್ ಮೀನಾಗೆ ವಕೀಲ ಮಧುಕುಮಾರ್ (Lawyer Madhu Kumar) ದೂರು ಸಲ್ಲಿಸಿದ್ದಾರೆ.
ದಾವಣಗೆರೆ: ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ. ಭಕ್ತರಿಗೆ ಮೌನವೇ ದೊಡ್ಡ ಸಂದೇಶ ಎಂದು ದಾವಣಗೆರೆಯಲ್ಲಿ ಮುರುಘಾ ಶ್ರೀಗಳು (Murugha Shree) ಭಕ್ತರಿಗೆ ಸಂದೇಶ ರವಾನಿಸಿದರು.
ಫೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠಕ್ಕೆ ಭೇಟಿ ನೀಡುವ ಮುನ್ನ ಮಾತನಾಡಿದರು. ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ. ಭಕ್ತರಿಗೆ ಮೌನವೇ ದೊಡ್ಡ ಸಂದೇಶ. ಇದು ಏನೂ ಹೇಳುವ ಸಂದರ್ಭವಲ್ಲ. ಯಾವುದನ್ನೂ ಹೇಳಲ್ಲ, ನಿಮ್ಮನ್ನೂ ಮತ್ತೊಮ್ಮೆ ಕರೆಯಿಸಿ ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ ಜಾಮೀನು: ಒಡನಾಡಿ ಸ್ಟ್ಯಾನ್ಲಿ ಪರಶು
ಚಿಂತೆ ಬೇಡ, ಈಗ ಸಂದೇಶ ಕೊಡುವ ಕಾಲವಲ್ಲ. ಎರಡನೇ ಕೇಸ್ ಕಾನೂನು ತೊಡಕು ಹಿನ್ನಲೆಯಲ್ಲಿ ವಿಚಾರಣೆ ನಡೀತಾ ಇದೆ. ಏನೂ ಹೇಳಲ್ಲ, ಭಕ್ತರು ಎಲ್ಲಿ ವ್ಯವಸ್ಥೆ ಮಾಡುತ್ತಾರೋ ಅಲ್ಲಿ ಇರುತ್ತೇನೆ ಎಂದು ತಿಳಿಸಿದರು.
ದಾವವಣಗೆರೆ ವಿರಕ್ತ ಮಠದಲ್ಲಿ ನೆಲೆಸಿರುವ ಮುರುಘಾ ಶರಣರು ಅಪ್ತಕೋಣೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಾರೆ. ಕೆಲ ಅತ್ಯಾಪ್ತ ಭಕ್ತರು, ಮುಖಂಡರು ವಿರಕ್ತ ಮಠಕ್ಕೆ ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. 14 ತಿಂಗಳ ಸೆರೆವಾಸದಿಂದ ಜೈಲಿನಿಂದ ಬಿಡುಗಡೆಯಾದ ಶಿವಮೂರ್ತಿ ಮುರುಘಾ ಶರಣರು ಸದ್ಯ ದಾವಣಗೆರೆ ವಿರಕ್ತ ಮಠದಲ್ಲಿ ನೆಲೆಸಿದ್ದರಿಂದ ಮುರುಘಾ ಶ್ರೀಗಳನ್ನು ಭೇಟಿಯಾಗಲು ವಿವಿಧ ಮಠಾಧೀಶರು ವಿರಕ್ತ ಮಠದತ್ತ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್ – ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ
ದಾವಣಗೆರೆಯ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ಚಿತ್ರದುರ್ಗದ ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಶ್ರೀಗಳು, ಮಡಿವಾಳ ಮಾಚಿದೇವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಆಗಮಿಸಿ ಯೋಗಕ್ಷೇಮ ವಿಚಾರಿಸಿದರು. ಪೋಕ್ಸೊ ಪ್ರಕರಣದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾ ಶ್ರೀಗಳನ್ನು ಭೇಟಿಯಾಗಿ ಕೆಲ ಕಾಲ ಮಾತನಾಡಿಸಿ ಕೆಲ ವಿಚಾರಗಳನ್ನು ಚರ್ಚಿಸಿದರು.
ಮೈಸೂರು: ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ (Murugha shree) ಜಾಮೀನು ಸಿಕ್ಕಿದೆ ಎಂದು ಒಡನಾಡಿ (Odanadi) ಸಂಸ್ಥೆಯ ಮುಖ್ಯಸ್ಥ ಪರಶು ಅವರು ಆರೋಪಿಸಿದ್ದಾರೆ.
ಮೈಸೂರಿನಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ಆಗಿದ್ದರೆ ಇಷ್ಟು ಬೇಗ ಜಾಮೀನು ಸಿಗುತ್ತಿರಲಿಲ್ಲ. ಇವತ್ತು ಸ್ವಾಮೀಜಿ ಪರ ಅವರ ಭಕ್ತರು ಜಯ ಘೋಷ ಮೊಳಗಿಸಿರುವುದು ಸಂತ್ರಸ್ತ ಮಕ್ಕಳಲ್ಲಿ ಭಯ ಹುಟ್ಟಿಸುವಂತಿದೆ ಎಂದಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್ – ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ
ಸಂಸ್ಥೆಯ ಸ್ಟ್ಯಾನ್ಲಿಯವರು ಮಾತನಾಡಿ, ಮುರುಘಾ ಶ್ರೀ ಜಾಮೀನು ರದ್ದಿಗೆ ಕಾನೂನು ಹೋರಾಟ ಮಾಡುತ್ತೇವೆ. ಸ್ವಾಮೀಜಿ ಬಿಡುಗಡೆ ವಿಚಾರ ಕೇಳಿ ಸಂತ್ರಸ್ತ ಮಕ್ಕಳು ಭಯಕ್ಕೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ಪೋಕ್ಸೋ (Pocso Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಹೋಟೆಲಿನಲ್ಲಿ ಸ್ಕ್ರೂಡ್ರೈವರ್‌ನಿಂದ 41 ಬಾರಿ ಇರಿದು ಪತ್ನಿಯ ಹತ್ಯೆಗೈದ ಪತಿ
ಚಿತ್ರದುರ್ಗ: ಮುರುಘಾಶ್ರೀ (Murugha Shree) ವಿರುದ್ಧದ 2ನೇ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದೂಡಿದೆ.
2ನೇ ಪೋಕ್ಸೋ ಪ್ರಕರಣದಲ್ಲಿನ ಬಾಡಿ ವಾರೆಂಟ್ (Body Warrant) ಅನ್ನು ನ್ಯಾಯಾಂಗ ಬಂಧನವಾಗಿ ವಿಸ್ತರಿಸಲು ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದರು. ಈ ಪ್ರಕರಣದ ಆರೋಪಿಯು ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದ್ದು, ನ್ಯಾಯಾಂಗ ಬಂಧನವನ್ನು ಸಹ ವಿಸ್ತರಿಸುವಂತೆ ಕೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್, ಮೊದಲ ಪ್ರಕರಣಕ್ಕೆ ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್ 7 ಷರತ್ತು ವಿಧಿಸಿತ್ತು. ಈ ಷರತ್ತಿನ ಅನ್ವಯ ಚಿತ್ರದುರ್ಗ ಕೋರ್ಟಿಗೆ ದಾಖಲೆ ಸಲ್ಲಿಸಿದ್ದೇವೆ. 2 ಲಕ್ಷ ಬಾಂಡ್ ಹಾಗೂ ಇಬ್ಬರು ವ್ಯಕ್ತಿಗಳಿಂದ ಜಾಮೀನು ಶ್ಯೂರಿಟಿ ನೀಡಿದ್ದು, ಮುರುಘಾಶ್ರೀ ಪಾಸ್ ಪೆÇೀರ್ಟನ್ನು ಕೋರ್ಟಿಗೆ ಸಲ್ಲಿಸಿದ್ದೇವೆ. ಈ ಬಗ್ಗೆ ಕೋರ್ಟ್ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಅಲ್ಲದೇ ಸತತ 3 ದಿನ ಕೋರ್ಟಿಗೆ ರಜೆ ಹಿನ್ನೆಲೆಯಲ್ಲಿ ನವೆಂಬರ್ 15ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಎರಡನೇ ಕೇಸಿನಲ್ಲಿ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಬದಲಿಸಲು ಮನವಿ ಮಾಡಿದ್ದಾರೆ. ಆದರೆ ಹೈಕೋರ್ಟ್‍ನಲ್ಲಿ 2ನೇ ಪೋಕ್ಸೋ ಕೇಸ್ ರದ್ಧತಿಗೆ ನಾವು ಮನವಿ ಸಲ್ಲಿಸಿದ್ದು, ಹೈಕೋರ್ಟ್ 2ನೇ ಪೋಕ್ಸೋ ಕೇಸ್ ವಿಚಾರಣೆಗೆ ತಡೆ ನೀಡಿದೆ. ಹೀಗಾಗಿ ಈ ವೇಳೆ ಜಿಲ್ಲಾ ಕೋರ್ಟಿಗೆ ಮನವಿ ಸಲ್ಲಿಸಲಾಗದು. ಆದರೆ ಸರ್ಕಾರಿ ವಕೀಲ ಮನವಿ ಸಲ್ಲಿಸಿದ್ದಾರೆ. ಅದನ್ನು ಕೋರ್ಟ್ ಸ್ವೀಕರಿಸಿದೆ. ಇಂತಹ ವೇಳೆ ನಾವು ಆಕ್ಷೇಪಣೆ ಸಲ್ಲಿಸುವುದು ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ.
ಒಂದನೇ ಕೇಸಲ್ಲಿ ಹೈಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ನಾವು ಬಿಡುಗಡೆಗೆ ಕೋರಿದ್ದೇವೆ. ಆದರೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನವೆಂಬರ್ 15ಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ನವೆಂಬರ್ 15ಕ್ಕೆ ಮುರುಘಾಶ್ರೀ ಬಿಡುಗಡೆಯಾಗುವ ಭರವಸೆಯಿದೆ ಎಂದು ವಕೀಲ ಸಂದೀಪ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಪ್ರಕರಣದ ಬಗ್ಗೆ ಸರ್ಕಾರಿ ವಕೀಲ ಜಗದೀಶ್ ಸಹ ಮಾಧ್ಯಮಗಳಿಗೆ ಪೃತಿಕ್ರಿಯಿಸಿದರು. 2ನೇ ಪೋಕ್ಸೋ ಪ್ರಕರಣದಲ್ಲಿನ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ವಿಸ್ತರಿಸಲು ನಾವು ಮನವಿ ಮಾಡಿದ್ದೇವೆ. ಆದರೆ ಮೊದಲ ಪ್ರಕರಣದಲ್ಲಿ ಹೈಕೋರ್ಟ್ ಆದೇಶದಂತೆ, ಪ್ರತಿವಾದಿಗಳು ಇಂದು ಚಿತ್ರದುರ್ಗ ಕೋರ್ಟಿಗೆ ಎಲ್ಲಾ ದಾಖಲೆ ಸಲ್ಲಿಸಿದ್ದಾರೆ. ಇಬ್ಬರು ವ್ಯಕ್ತಿಗಳಿಂದ ಜಾಮೀನು ಶ್ಯೂರಿಟಿ ಸಹ ನೀಡಿದ್ದಾರೆ. ಅದರ ಪರಿಶೀಲನೆಗಾಗಿ ನವೆಂಬರ್ 15ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಅಲ್ಲದೇ ಮೊದಲ ಕೇಸಲ್ಲಿ ಜಾಮೀನು ಸಿಕ್ಕರೂ ಎರಡನೇ ಕೇಸಲ್ಲಿ ಬಾಡಿ ವಾರೆಂಟ್‍ನ್ನು ನ್ಯಾಯಾಂಗ ಬಂಧನವಾಗಿ ಬದಲಿಸಲು ನಾವು ಮನವಿ ಸಲ್ಲಿಸಲು ನಮಗೆ ಅವಕಾಶವಿದೆ. ಹೀಗಾಗಿ ಸಲ್ಲಿಸಿದ್ದು, ಕೋರ್ಟ್ ಪುರಸ್ಕರಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಚಿತ್ರದುರ್ಗದ ಮುರುಘಾ ಶ್ರೀ (Murugha Shree) ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಎರಡನೇ ದೂರಿನ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿರೋ ಚಿತ್ರದುರ್ಗ ಪೊಲೀಸರು (Chitradurga Police), ಸುಧೀರ್ಘ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ. ಮೊದಲನೇ ಪ್ರಕರಣದ ಬಳಿಕ ಇಬ್ಬರು ಬಾಲಕಿಯರು ಆರೋಪದ ಹಿನ್ನೆಲೆ ಅತ್ಯಾಚಾರ ಪ್ರಕರಣ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ಕುರ್ಚಿ ತರಲು ವಿಳಂಬ – ಕಾರ್ಯಕರ್ತರಿಗೆ ಕಲ್ಲು ಎಸೆದ ತಮಿಳುನಾಡಿನ ಸಚಿವ
ಮುರುಘಾ ಶ್ರೀ ಸೇರಿದಂತೆ ಐವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ಸ್ನಾನ ಗೃಹಕ್ಕೆ ಕರೆದು ಅತ್ಯಾಚಾರ ಮಾಡುತ್ತಾ ಇದ್ದರು. ಖಾಸಗಿ ಕೊಠಡಿಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಲಾಗ್ತಾ ಇತ್ತು ಎಂದು ಆರೋಪಿಸಿದ್ದ ಸಂತ್ರಸ್ತೆಯರು ಪ್ರಕರಣಕ್ಕೆ ಪೂರಕ ಸಾಕ್ಷ್ಯ ಒದಗಿಸಿದ್ರು.
ಈ ಪ್ರಕರಣದ ತನಿಖೆ ನಡೆಸಿದ್ದ ಚಿತ್ರದುರ್ಗ ಪೊಲೀಸರು ಈಗ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನು ಚಿತ್ರದುರ್ಗದ 2 ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮುರುಘಾಶ್ರೀ (Murugha shree) ವಿರುದ್ಧ ಪಿತೂರಿ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. 2ನೇ ಪೋಕ್ಸೋ ಕೇಸ್ ದೂರು ನೀಡಿದ್ದ ಮಹಿಳೆಯನ್ನೇ ಇದೀಗ ಬಂಧಿಸಲಾಗಿದೆ.
ಮುರುಘಾಶ್ರೀ ವಿರುದ್ಧ ದೂರು ನೀಡಿದ್ದ ಮಠದ ಅಡುಗೆ ಸಹಾಯಕಿಯನ್ನ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಮುರುಘಾಶ್ರೀ ವಿರುದ್ಧ ಮೊದಲ ಕೇಸ್‍ನ ತನಿಖೆ ಮುಗಿಸಿರುವ ಪೊಲೀಸರು ಕೋರ್ಟ್‍ಗೆ ಚಾರ್ಜ್‍ಶೀಟ್ (Charge sheet) ಸಲ್ಲಿಸಿದ್ರು. ಇದರ ಬೆನ್ನಲ್ಲೇ ಜೈಲಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು.
ಇತ್ತೀಚೆಗೆ ವೈರಲ್ ಆಗಿದ್ದ ಮಠದ ಶಿಕ್ಷಕ ಬಸವರಾಜೆಂದ್ರ (Basavarajendra) ಹಾಗೂ ಬಾಲಕಿಯೊಬ್ಬಳು ಮುರುಘಾ ಶ್ರೀ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಪ್ರಚೋದಿಸಿದ್ದ ಆಡಿಯೋ ಎಲ್ಲೆಡೆ ಭಾರೀ ಕೋಲಾಹಲ ಸೃಷ್ಟಿಸಿತ್ತು. ಹೀಗಾಗಿ ಆ ಆಡಿಯೋ (Audio) ಕೇಳಿದ್ದ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದರು.
ಈ ಆಡಿಯೋದಲ್ಲಿ ಮುರುಘಾ ಶ್ರೀಯನ್ನು ಖೆಡ್ಡಾಗೆ ಬೀಳಿಸಲು ಷಡ್ಯಂತ್ರ ನಡೆದಿದೆ. ಹೀಗಾಗಿ ಆಡಿಯೋ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದಿದ್ರು. ಇದೀಗ ಎರಡನೇ ಕೇಸ್ ವಿಚಾರಣೆಗೆಂದು ಮೈಸೂರಿನ ಒಡನಾಡಿ ಸಂಸ್ಥೆಯಿಂದ ಕರೆತಂದಿದ್ದ ಮಠದ ಅಡುಗೆ ಸಹಾಯಕಿಯನ್ನು ವಿಚಾರಣೆ ಬಳಿಕ ಮುರುಘಾಶ್ರೀ ವಿರುದ್ಧದ ಪಿತೂರಿ ಕೇಸ್‍ನಲ್ಲಿ ದಿಢೀರ್ ಅಂತ ಬಂಧಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಚಿತ್ರದುರ್ಗ (Chitradurga) ದ ಮುರುಘಾ ಮಠ (Murugha Mutt) ದಲ್ಲಿ ಕೇವಲ ಮುರುಘಾ ಶರಣರು ಮಾತ್ರವಲ್ಲ ಅವರ ಕೆಳ ಹಂತದವರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಪರಶು ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.
ಶರಣರು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಮೇಲೆ ಅವರ ಕೆಳ ಹಂತದಲ್ಲಿ ಗುರು ಸ್ಥಾನದಲ್ಲಿರೋ ವ್ಯಕ್ತಿಯೂ ಮಕ್ಕಳನ್ನು ತಮ್ಮ ಕಾಮಕ್ಕೆ ಬಳಸಿದ್ದಾರೆ. ಆ ವ್ಯಕ್ತಿಯನ್ನು ಬುದ್ದಿ ಎಂದು ಕರೆಯಲಾಗುತ್ತೆ. ಅವರ ನಂತರ, ಮಠದ ಕೆಲವು ನೌಕರರು, ಅಧಿಕಾರಿಗಳು ಕೂಡ ಮಕ್ಕಳನ್ನು ಲೈಂಗಿಕವಾಗಿ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರೂಂಗೆ ಹೋದ ನಂತ್ರ ಬಟ್ಟೆ ಬಿಚ್ಚಲು ಶ್ರೀಗಳು ಹೇಳ್ತಿದ್ದರು: ಹಳೆ ವಿದ್ಯಾರ್ಥಿನಿ ಸ್ಫೋಟಕ ಹೇಳಿಕೆ
ಕಾಡುಮೃಗ ಬೇಟೆಯಾಡಿ ಬಿಟ್ಟು ಹೋದ ಮಾಂಸವನ್ನು ಬೇರೆ ಪ್ರಾಣಿಗಳು ತಿನ್ನುವ ರೀತಿ ಈ ಪ್ರಕ್ರಿಯೆ ನಡೆದಿದೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. ಹೀಗಾಗಿ ಪ್ರಕರಣವನ್ನು ಸಿಬಿಐ ಗೆ ವಹಿಸಿ ಎಂದು ಆಗ್ರಹಿಸಿದ್ದಾರೆ. ನಿನ್ನೆ ಬಿಡುಗಡೆ ಆಗಿರೋ ಆಡಿಯೋ ಆರು ತಿಂಗಳ ಹಿಂದಿನದೂ ಅದಕ್ಕೂ ನಮಗೂ ಸಂಬಂಧವಿಲ್ಲ. ಈ ಬಗ್ಗೆ ನಾವು ಯಾವ ತನಿಖೆಗೆ ಬೇಕಾದರೂ ಸಿದ್ಧ ಎಂದ ಅವರು, ಮುರುಘಾ ಶರಣರಿಗೆ ಮದ್ಯ ತಂದು ಕೊಡುತ್ತಿದ್ದವರು ಯಾರು? ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಯಾರು ಎಂಬುದು ಪತ್ತೆ ಆಗಬೇಕು ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]