ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡವಾಗಿದ್ದು, ಬೆಂಕಿ ತಗುಲಿದ್ದ 3 ಕಾರ್ಮಿಕರಲ್ಲಿ ಓರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಗರದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ಕಾರ್ಖಾನೆಯಲ್ಲಿ ನಡೆದಿದೆ.
ಅಶೋಕ ಚೌಹಾಣ್ (37) ಮೃತ ಕಾರ್ಮಿಕ. ಕಾರ್ಮಿಕರು ಬುಧವಾರ ಬೆಳಗ್ಗೆ ಅತಿಯಾದ ಚಳಿ ಹಿನ್ನೆಲೆ ಬ್ಯಾರಲ್‍ನಲ್ಲಿ ಬೆಂಕಿ ಹಾಕಿ ಕಾಯಿಸಿಕೊಳ್ಳುತ್ತಿದ್ದರು. ಬೆಂಕಿಯೂ ಹೆಚ್ಚು ಉರಿಯ ಬೇಕು ಅಂತ ಥಿನ್ನರ್ ಹಾಕಿದಾಗ ಒಮ್ಮೆಲೆ 3 ಕಾರ್ಮಿಕರಿಗೆ ಬೆಂಕಿ ತಗುಲಿದೆ. ನಂತರ ಓಡೋಡಿ ಬಂದು ನೀರಿನ ಪೈಪ್ ಕೆಳಗೆ ಕೂತು ಬೆಂಕಿ ನಂದಿಸಿಕೊಂಡಿದ್ದರು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
ಅದರಲ್ಲಿ ಅಶೋಕ ಎಂಬುವರಿಗೆ ಶೇ.80 ರಷ್ಟು ಬೆಂಕಿ ತಗುಲಿ ಗಾಯವಾಗಿತ್ತು. ಈ ಹಿನ್ನೆಲೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ನಂತರ ಅಲ್ಲಿಂದ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ನಿವಾಸಿಯಾದ ಮೃತ ಕಾರ್ಮಿಕನಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್ ಸೂಚನೆ
ಇನ್ನುಳಿದ ಇಬ್ಬರು ಕಾರ್ಮಿಕರಾದ ಪ್ರಮೋದ ಹಾಗೂ ಮೆಹಬೂಬ್ ಎಂಬುವವರಿಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ: ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ಅಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ಸಚಿವ ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟಾಂಗ್ ನೀಡಿದ್ದಾರೆ.
ಈಶ್ವರಪ್ಪ, ಯತ್ನಾಳ್, ನಿರಾಣಿ ಸಂಧಾನ ಸಭೆ ವಿಚಾರವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಖಾಸಗಿ ಹೋಟೆಲ್‍ನಲ್ಲಿದ್ದಾರೆ. ಸಿಎಂ ಆಗುತ್ತೇನೆ ಎಂದು ಯಾರ್‍ಯಾರೋ ಹಗಲುಗನಸು ಕಾಣುತ್ತಿದ್ದಾರೆ. ಸೂಟು ಹೊಲಿಸಿಕೊಂಡವರೂ ಇದ್ದಾರೆ. ದೊಡ್ಡವರಿಗೆ ಹಣ ಕೊಡುತ್ತಾರೆ. ನಾನು ರಿಸರ್ವ್ ಮಾಡಿದ್ದೇನೆ, ಬುಕ್ ಮಾಡಿದ್ದೇನೆ ಅಂತಿದ್ದಾರೆ. ಜನವರಿ 2ನೇ ವಾರದಲ್ಲಿ ಸಿಎಂ ಆಗುತ್ತೇನೆಂದು ಕನಸು ಕಾಣುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಅವರ ಆಸೆಗಳು ಈಡೇರುವುದಿಲ್ಲ. ಸದ್ಯ ಸಿಎಂ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಇಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯುತ್ತೆ: ವಿ. ಸೋಮಣ್ಣ
ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ದೊಡ್ಡ, ದೊಡ್ಡ ಸಂಧಾನ ಮಾಡುತ್ತಿರುವುದು ನಿಜ. ಮಂತ್ರಿ ಮಾಡುತ್ತೇನೆ, ಡಿಸಿಎಂ ಮಾಡುತ್ತೇನೆ ಎಂದು ನನಗೆ ಆಮಿಷ ಒಡ್ಡುತ್ತಿದ್ದಾರೆ. ಆದರೆ ಇಂತವರನ್ನು ಒಪ್ಪಿಕೊಳ್ಳುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್
ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ನುಗ್ಗಿ ಯಂತ್ರವನ್ನು ಸಾಗಣೆ ಮಾಡಲು ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿ ಪ್ರಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಸದ್ಯ ಮೈಶುಗರ್ ಕಾರ್ಖಾನೆ ಆರಂಭವಾಗದ ಕಾರಣ ಖಾಸಗಿಯವರ ಕಣ್ಣು ಈ ಕಾರ್ಖಾನೆಯ ಮೇಲೆ ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಮುರುಗೇಶ್ ನಿರಾಣಿಯ ಸಿಬ್ಬಂದಿ ನಡೆದುಕೊಂಡಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಟರ್ಬೈನ್ ಗವರ್ನರ್ ಎಂಬ ಯಂತ್ರ ಕೆಟ್ಟು ಹೋಗಿತ್ತು. ಇದರಿಂದಾಗಿ ಅಲ್ಲಿನ ಸಿಬ್ಬಂದಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ಯಾರಿಗೂ ಹೇಳದೆ ನುಗ್ಗಿ ಆ ಯಂತ್ರವನ್ನು ತೆಗೆದುಕೊಂಡು ಹೋಗುವ ಕೆಲಸಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್
ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಟರ್ಬೈನ್ ಗವರ್ನರ್ ಎಂಬ ಯಂತ್ರಕ್ಕೆ ಸುಮಾರು 25 ಲಕ್ಷ ರೂ.ಗಳಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಯಿಂದ ಈ ಯಂತ್ರವನ್ನು ತೆಗೆದುಕೊಂಡು ಹೋಗಲು ಪಿಎಸ್‌ಎಸ್‌ಕೆ ಸಿಬ್ಬಂದಿ ಬಂದಿದ್ದಾರೆ. ಈ ಹಿಂದೆ ಇವರು ಮೈಶುಗರ್ ಕಾರ್ಖಾನೆಯ ಸಿಬ್ಬಂದಿ ಆಗಿದ್ದರು. ಇದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ
ನಿನ್ನೆ ಕಾರ್ಖಾನೆಯ ಬಳಿ ಬಂದ ಇವರು ಯಾರಿಗೂ ತಿಳಿಸದೆ ಮೈಶುಗರ್ ಒಳಭಾಗಕ್ಕೆ ನುಗ್ಗಿದ್ದಾರೆ. ನಂತರ ಅಲ್ಲಿ ಟರ್ಬೈನ್ ಯಂತ್ರವನ್ನು ಹುಡುಕಿ ಸಾಗಣೆ ಮಾಡಲು ಯತ್ನಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕರವೇ ಜಿಲ್ಲಾಧ್ಯಕ್ಷ ಜಯರಾಂ ಅವರನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ನಂತರ ಅಲ್ಲಿಂದ ಪಿಎಸ್‌ಎಸ್‌ಕೆ ಸಿಬ್ಬಂದಿ ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾವೇರಿ: ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸೋದು ಮಾತ್ರವಲ್ಲ ಅವರ ತಂದೆಯಂತೆಯೇ ಬೊಮ್ಮಾಯಿ ಅವರು ಸಹ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾರತಿ ಮಾಡಿದಂತೆ ಹರಿಹರದಲ್ಲೂ ತುಂಗಾರತಿ ಆಗಬೇಕು ಅನ್ನುವ ನಿಟ್ಟಿನಲ್ಲಿ ಹಣಕಾಸಿನ ಸಹಾಯ ಮಾಡೋದಾಗಿ ಸಿಎಂ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕೆಲಸಗಳು ಹರಿಹರದಲ್ಲಿ ಪ್ರಾರಂಭವಾಗಿವೆ. ಸಮಾಜದ ಮೇಲಿನ ಅಭಿಮಾನದಿಂದ ಎರಡು ಎಕರೆ ಜಮೀನು ನೀಡಿ, ಸಮುದಾಯ ಭವನಕ್ಕೆ ಸಿಎಂ ಎರಡು ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ
ಈ ಭಾಗಕ್ಕೆ ಕಿತ್ತೂರು ಕರ್ನಾಟಕ ಅಂತಾ ಸಿಎಂ ಘೋಷಣೆ ಮಾಡಿದರು. ಕಿತ್ತೂರಿನಲ್ಲಿ ಮೊದಲಿನ ಅರಮನೆ ಮಾದರಿಯಲ್ಲಿ ಅರಮನೆ ನಿರ್ಮಾಣಕ್ಕೆ ಸಿಎಂ ಹಣ ನೀಡಿ, ಈಗಾಗಲೇ ೫೦ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ೨೦೧೮ರಲ್ಲಿ ಶಿಗ್ಗಾಂವಿಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದೆ. ಆಗಲೇ ನಾನು ನೀವು ವೋಟು ಹಾಕ್ತಿರೋದು ಬರಿ ಶಾಸಕ ಆಗೋರಿಗೆ ಅಲ್ಲ. ಅದು ಸಿಎಂ ಆಗೋರಿಗೆ ಅಂತಾ ಹೇಳಿದ್ದೆ ಅದು ನಿಜವಾಗಿದೆ ಎಂದರು. ಇದನ್ನೂ ಓದಿ:ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?
ಕೆಲವರು ಕರಿ ಬಾಯಿಯವರು ಏನೇನೋ ಹೇಳ್ತಾರೆ. ಬಸವರಾಜ ಅವರು ಪೂರ್ಣ ಅವಧಿಯವರೆಗೆ ಸಿಎಂ ಆಗಿರ್ತಾರೆ. ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸೋದು ಮಾತ್ರವಲ್ಲ ಅವರ ತಂದೆಯಂತೆಯೇ ಬಸವರಾಜ ಬೊಮ್ಮಾಯಿ ಕೇಂದ್ರದಲ್ಲಿ ಮಂತ್ರಿ ಆಗ್ತಾರೆ. ನಿರಾಣಿ ಏಕಾಏಕಿ ಉದ್ಯಮಿದಾರ ಆಗಿಲ್ಲ. ನಿಮ್ಮ ರೀತಿ ಕೃಷಿ ಕೆಲಸ ಮಾಡಿಕೊಂಡು ಮೇಲೆ ಬಂದವನು ಎಂದು ತಿಳಿಸಿದರು.
-ಸ್ವಾಧೀನ ಪಡಿಸಿಕೊಂಡ ಜಮೀನಿನ ಮಾಲೀಕರಿಗೆ ನೇರ ಪರಿಹಾರ -ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ
ಬೆಳಗಾವಿ: ವರ್ಷಗಳು ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದ 500ಕ್ಕೂ ಹೆಚ್ಚು ಕೈಗಾರಿಕೆಗಳ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಶುಕ್ರವಾರ ವಿಧಾನಸಭೆಗೆ ತಿಳಿಸಿದರು.
ಕಾಂಗ್ರೆಸ್ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂಮಿ ಹಂಚಿಕೆಯಾಗಿ 5ರಿಂದ 20 ವರ್ಷ ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಈಗಾಗಲೇ ಅಂಥವುಗಳನ್ನು ಗುರುತಿಸಲಾಗಿದೆ. ಕಾರ್ಖಾನೆ ಪೂರ್ಣವಾಗಿ ಪ್ರಾರಂಭಿಸದಿದ್ದರೆ ಸೇಲ್ ಡೀಡ್ ಮಾಡಿಕೊಡುವುದಿಲ್ಲ. ಸೇಲ್ ಡೀಡ್ ಆಗದೆ ಅವರು ಕೈಗಾರಿಕಾ ಭೂಮಿಯನ್ನು ರಿಯಲ್ ಎಸ್ಟೇಟ್‍ಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಕೈಗಾರಿಕೆಗೆ ಹಂಚಿಕೆಯಾದ ಜಮೀನಿನಲ್ಲಿ ಶೇ.15ರಷ್ಟು ವಸತಿಗೆ ಮೀಸಲಿಡಬೇಕು ಎಂದು ಹೇಳಿದರು. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದಲೇ ಟೀಕೆ
ಸ್ಥಳೀಯರಿಗೆ ಉದ್ಯೋಗ:
ಡಾ.ಸರೋಜಿನಿ ಮಹಿಷಿ ವರದಿಯಂತೆ ನಮ್ಮ ಸರ್ಕಾರ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಲು ಬದ್ದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿಧಾನಸಭೆಯ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್
ಶಾಸಕ ಅಮೃತ್ ದೇಸಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಡಾ.ಸರೋಜಿನಿ ಮಹಿಷಿ ವರದಿಯಂತೆ ಕೈಗಾರಿಕಾ ಪ್ರದೇಶಗಳಿಗಾಗಿ ಜಮೀನು ನೀಡಿದ ರೈತರಿಗೆ ಪರಿಹಾರ ನೀಡುವುದರ ಜೊತೆಗೆ ಅವರ ಕುಟುಂಬದ ಸದಸ್ಯರಿಗೆ ಜಮೀನು ನೀಡಿದ್ದೇವೆ. ಯಾವುದೇ ಕಾರಣಕ್ಕೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಧಾರವಾಡ ಜಿಲ್ಲೆ ಬೇಲೂರು ಕೈಗಾರಿಕಾ ಪ್ರದೇಶಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿಗಾಗಿ ಒಟ್ಟು 1992.19 ಎಕರೆ ಜಮೀನುನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಬೇಲೂರಿನಲ್ಲಿ ಒಂದು ಎಕರೆಗೆ 12 ಸಾವಿರ ರೂ. ಮಮಿಘಟ್ಟಿಯಲ್ಲಿ 15 ಸಾವಿರ, ಗುಗ್ಗರಕಟ್ಟೆಯಲ್ಲಿ 18 ಸಾವಿರ ಪ್ರತಿ ಎಕರೆಗೆ ಪರಿಹಾರ ಕೊಡತ್ತಿದ್ದೇವೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 1,414 ಉದ್ಯೋಗಗಳನ್ನು ನೀಡಲಾಗಿದೆ. 1,538 ಸ್ಥಳೀಯರಿಗೆ ಹಾಗೂ ಭೂಮಿ ಕಳೆದುಕೊಂಡ 76 ಜನರಿಗೆ ಉದ್ಯೋಗ ನೀಡಲಾಗಿದೆ. ಒಂದು ವೇಳೆ ಯಾವುದಾದರೂ ಕೈಗಾರಿಕಾ ಪ್ರದೇಶಗಳಿಗೆ ಉದ್ಯೋಗ ನೀಡದೆ ಇರುವುದನ್ನು ಗಮನಕ್ಕೆ ತಂದರೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಮೊಟ್ಟೆ ಹಂಚಿಕೆ ವಿಚಾರದಲ್ಲಿ ನನ್ನ ಹೇಳಿಕೆ ತಿರುಚಲಾಗಿದೆ: ಪೇಜಾವರ ಶ್ರೀ ಅಸಮಾಧಾನ
– ಜಾಗವನ್ನು ಸಂರಕ್ಷಿಸಲು ಬೆಂಗಳೂರು ಅನುಭವ ಯೋಜನೆ ಆರಂಭ
– ಮುಖ್ಯ ಕಾರ್ಯದರ್ಶಿ ಟ್ರಸ್ಟ್ನ ಮುಖ್ಯಸ್ಥರನ್ನಾಗಿ ಮಾಡಲು ತಿದ್ದುಪಡಿ
ಬೆಳಗಾವಿ: ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಗೆ ಸೇರಿದ ಯಾವುದೇ ಭೂಮಿಯನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸುವುದಿಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಧಾನಪರಿಷತ್ ನಲ್ಲಿ ಸ್ಪಷ್ಟಪಡಿಸಿದರು.
ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕಾಂತರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ನಗರದ ಹೃದಯ ಭಾಗದಲ್ಲಿರುವ ಜಾಗವನ್ನು ಸಂರಕ್ಷಿಸಲು ಬೆಂಗಳೂರು ಅನುಭವ ಎಂಬ ಯೋಜನೆಯನ್ನು ಜಾರಿಗೆ ತರಲಿದ್ದಾರೆ ಎಂದು ತಿಳಿಸಿದರು.
ನಗರದ ಮಲ್ಲೇಶ್ವರಂನ ಹೃದಯಭಾಗದಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ತಳ್ಳಿ ಹಾಕಿದರು. ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಗೆ ಸೇರಿದ ಭೂಮಿಯಲ್ಲಿ ಬೆಂಗಳೂರು ಎಕ್ಸ್ಪೀರಿಯನ್ಸ್ ಪ್ರಾಜೆಕ್ಟ್ ಅನುಷ್ಠಾನಕ್ಕೆ ಅನುಮೋದನೆ ನೀಡಲು 2020ರ ಡಿ.1ರಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.
ಬೆಂಗಳೂರು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಲಭ್ಯವಿರುವ ಜಾಗವನ್ನು ಬಳಸುವುದು. ನಗರದ ಹೃದಯ ಭಾಗದಲ್ಲಿರುವ ಜಾಗವನ್ನು ಸಂರಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಖಾನೆ ಭೂಮಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ನಿರಾಣಿ, ಭೂಮಿಯನ್ನು ಟ್ರಸ್ಟ್ ಗೆ ಬಾಡಿಗೆಗೆ ನೀಡುವುದಿಲ್ಲ. ಬೆಂಗಳೂರು ಪರಂಪರೆ ಮತ್ತು ಪರಿಸರ ಟ್ರಸ್ಟ್ ಹೆಸರಿನಲ್ಲಿ ಸಾರ್ವಜನಿಕ ದತ್ತಿ ಟ್ರಸ್ಟ್ ಅನ್ನು ಜೂನ್ ತಿಂಗಳಿನಲ್ಲೆ ನೋಂದಾಯಿಸಲಾಗಿದೆ ಎಂದರು. ಇದನ್ನೂ ಓದಿ: ಅಂಬೇಡ್ಕರ್ ಫೋಟೋ ಅಳವಡಿಕೆ – ಶಾಸಕ ಅನ್ನದಾನಿ ಮೇಲೆ ಸ್ಪೀಕರ್ ಗರಂ
ಇದಕ್ಕಾಗಿ ಐವರು ನಾಗರಿಕರನ್ನು ಟ್ರಸ್ಟಿಗಳಾಗಿ ನೇಮಿಸಲಾಗುತ್ತದೆ. ಅವರ ಅನುಭವ ಮತ್ತು ಸೇವೆಯನ್ನು ಬೆಂಗಳೂರು ನಗರದಲ್ಲಿ ಮರಗಳನ್ನು ಸಂರಕ್ಷಿಸುವ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ಪ್ರದರ್ಶಿಸಲು ಬಳಸಲಾಗುತ್ತದೆ ಮತ್ತು ಇಬ್ಬರು ಟ್ರಸ್ಟಿಗಳನ್ನು ಈಗಾಗಲೇ ಹೆಸರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟ್ರಸ್ಟ್ ಸರ್ಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರು ಪರಂಪರೆ ಮತ್ತು ಪರಿಸರ ಟ್ರಸ್ಟ್ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ. ಮುಖ್ಯ ಕಾರ್ಯದರ್ಶಿ ಟ್ರಸ್ಟ್ನ ಮುಖ್ಯಸ್ಥರನ್ನಾಗಿ ಮಾಡಲು ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ
ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಒಡೆತನದ 21 ಎಕರೆ ಭೂಮಿಯನ್ನು 1996ರಲ್ಲಿ ರೋಗಗ್ರಸ್ತ ಉದ್ಯಮವೆಂದು ಘೋಷಿಸಲಾಯಿತು. ಕಾರ್ಮಿಕ ಇಲಾಖೆಯು ಕಂಪನಿಯನ್ನು 2002 ರಲ್ಲಿ ಮುಚ್ಚಲು ಅನುಮತಿ ನೀಡಿತ್ತು. ನಂತರ ಅದನ್ನು 2003ರಲ್ಲಿ ಮುಚ್ಚಲಾಯಿತು. ಸರ್ಕಾರವು 25 ಕೋಟಿ ರೂ. ಬೆಂಗಳೂರು ಹೆರಿಟೇಜ್ ಮತ್ತು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಮೇ 2021 ರಲ್ಲಿ ಟ್ರಸ್ಟ್ ಗೆ 10 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಅಂಕಿ ಅಂಶಗಳ ವಿವರ ನೀಡಿದರು.
ಬಾಗಲಕೋಟೆ: ಸಿದ್ದರಾಮಯ್ಯ ಅವರು ಪಕ್ಷದ ಹಿರಿಯರು. ಅವರ ವಿರುದ್ಧ ಬಿ.ಬಿ.ಚಿಮ್ಮನಕಟ್ಟಿ ಹೀಗೆ ಬಹಿರಂಗವಾಗಿ ಮಾತನಾಡಬಾರದಿತ್ತು ಎಂದು ಸಿದ್ದರಾಮಯ್ಯ ಮೇಲೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮೃದು ಧೋರಣೆ ತೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಬಿ.ಚಿಮ್ಮನಕಟ್ಟಿ ಅವರು ಪಕ್ಷದ ಚೌಕಟ್ಟಿನಲ್ಲೆ ಮಾತನಾಡಬೇಕಿತ್ತು. ಸಿದ್ದರಾಮಯ್ಯ ಹಿರಿಯರು, ಮುಖ್ಯಮಂತ್ರಿ ಆದವರು, ವಿಪಕ್ಷ ನಾಯಕರು. ಅವರ ವಯಸ್ಸಿಗಾದರೂ ಬೆಲೆ ಕೊಡಬೇಕಿತ್ತು. ಬಾದಾಮಿಯಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಹೊರಗಡೆ ಹೇಳಬಾರದಿತ್ತು ಎಂದರು.
ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಸಮಕಾಲೀನರು. ವಯಸ್ಸಿನಲ್ಲಿ ಅವರಷ್ಟೇ ಪ್ರಬಲ ಆಗಿರುವವರಾಗಿದ್ದಾರೆ. ಆದರೆ ಅವರು ಸಿದ್ದರಾಮಯ್ಯ ವಿರುದ್ಧ ಹೊರಗಡೆ ಹೀಗೆ ಮಾತನಾಡಬಾರದಿತ್ತು. ಇದು ಅವರ ಪಕ್ಷದ ವಿಚಾರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ
ಯಾವುದೇ ರಾಜಕೀಯ ಪಕ್ಷ ಇರಲಿ ಸ್ವಪಕ್ಷದ ವ್ಯಕ್ತಿಯ ಮೇಲೆ ಅಸಮಾಧಾನವಿದ್ದರೆ ಕೂತು ಬಗೆ ಹರಿಸಿಕೊಳ್ಳಬೇಕು. ಬಿಜೆಪಿ, ಕಾಂಗ್ರೆಸ್, ಇತರೆ ಯಾವುದೇ ಪಕ್ಷ ಇದ್ದರೂ ಆಂತರಿಕ ಸಮಸ್ಯೆಯನ್ನು ಬಹಿರಂಗವಾಗಿ ಹೇಳಬಾರದು. ಇಂಥ ಘಟನೆ ಬಂದಾಗ ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಇದನ್ನೂ ಓದಿ:ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ: ಸಿದ್ದರಾಮಯ್ಯ
ಕಲಬುರಗಿ: ಬಸವರಾಜ್ ಬೊಮ್ಮಾಯಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ತಂದೆಯವರು ಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದ ಅವರು ನಾನು ಸಿಎಂ ಆಗುವ ಮಾತೆ ಬರೋದಿಲ್ಲ. ನಾನು ಸಿಎಂ ಆಕಾಂಕ್ಷಿಯಲ್ಲ ಎಂದರು.
2023ರಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ನಾವು ಚುನಾವಣೆಗೆ ಹೊಗುತ್ತೇವೆ. ಅಷ್ಟೇ ಅಲ್ಲದೇ 2023ರಲ್ಲಿ ನಡೆಯುವ ಚುನಾವಣೆಯಲ್ಲಿ 125ಕ್ಕಿಂತ ಹೆಚ್ಚು ಸೀಟುಗಳು ಗೆಲ್ಲುವ ವಿಶ್ವಾಸ ಇದೆ ಎಂದ ಅವರು, 125ಕ್ಕಿಂತ ಹೆಚ್ಚು ಸೀಟು ಬಂದ ಮೇಲೆ ಸಂಘ ಪರಿವಾರ, ಹೈಕಮಾಂಡ್ ಯಾರು ಸಿಎಂ ಆಗಬೇಕು ಅಂತಾ ತಿರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ನಾನಂತು ಸಿಎಂ ಆಗುವ ಆಸೆಯು ಇಟ್ಟುಕೊಂಡಿಲ್ಲ. ಆ ಕನಸನ್ನು ಕಂಡಿಲ್ಲ. ಮುಂದೆ ನನಗೆ ಪಕ್ಷ ಏನಾದರೂ ಶಾಸಕ ಸ್ಥಾನಕ್ಕೆ ನಿಲ್ಲಬೇಡ. ಪಕ್ಷದ ಕೆಲಸ ಮಾಡಿಕೊಂಡು ಇರೋದಕ್ಕೆ ಹೇಳಿದರೂ, ಅದಕ್ಕೂ ಸಿದ್ಧ ಎಂದರು.ಇದನ್ನೂ ಓದಿ: ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ
ಕೊಪ್ಪಳ: ಭವಿಷ್ಯದಲ್ಲಿ ಮುರುಗೇಶ ನಿರಾಣಿ ಸಿಎಂ ಆಗಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪಆಚಾರ್ ಭವಿಷ್ಯ ನುಡಿದಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಸಚಿವ ಈಶ್ವರಪ್ಪ ಅವರೊಂದಿಗೆ ನಾನು ಮಾತನಾಡಿದ್ದೇನೆ. ಭವಿಷ್ಯದಲ್ಲಿ ಮುರುಗೇಶ ನಿರಾಣಿ ಸಿಎಂ ಆಗಬಹುದು ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಈಗಲೇ ಸಿಎಂ ಬದಲಾವಣೆ ಅಂತಾ ಅಲ್ಲ. ನಿರಾಣಿ ಅವರಿಗೆ ಸಣ್ಣ ವಯಸ್ಸು. ಮುಂದೆ ಯಾವಾಗಲೋ ಆಗಬಹುದು ಅಂತಾ ಹೇಳಿರಬಹುದು. ಅದಕ್ಕೆ ನಾವು ಇವತ್ತೇ ಬದಲಾವಣೆ ಅಂತಾ ಅರ್ಥ ಮಾಡಿಕೊಳ್ಳಬೇಡಿ. ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ
ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ಕೊಪ್ಪಳ – ರಾಯಚೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ. ಎಲ್ಲ ಸ್ಥಳೀಯ ಸಂಸ್ಥೆ ಸದಸ್ಯರು ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಒಟ್ಟು 6,249 ಮತಗಳಿವೆ ಈ ಪೈಕಿ.ಶೇ 70ರಷ್ಟು ಮತ ಪಡೆಯುತ್ತೇವೆ. ಕೇಂದ್ರ, ರಾಜ್ಯ ಸರ್ಕಾರ ಮಾಡಿದ ಕೆಲಸ ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ಓಮಿಕ್ರಾನ್ ಹರಡುವ ಆತಂಕದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ, ಈಗಿರುವ ಕೋವಿಡ್ ಮಾರ್ಗಸೂಚಿ ಕಟ್ಟು ನಿಟ್ಟಾಗಿ ಜಾರಿಗೆ ಮಾಡುತ್ತೇವೆ. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೊರೊನಾ ಬಗ್ಗೆ ಇಂದೇ ವಿಶೇಷ ಸಭೆ ಕರೆದು ಚರ್ಚೆ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಓಮಿಕ್ರಾನ್ ಪತ್ತೆ ಆಗಿರುವ ಮಾಹಿತಿ ಇಲ್ಲ ಎಂದರು.
– ಈಶ್ವರಪ್ಪನವರ ಅಭಿಮಾನಕ್ಕೆ ನಾನು ಋಣಿ
– ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದೇ ಗುರಿ
– ಕನಿಷ್ಟ 120 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಹೆಗ್ಗುರಿ
– ನೀಡಿರುವ ಇಲಾಖೆಯಲ್ಲೇ ನಾನು ಸಂತೃಪ್ತಿ
ಬಾಗಲಕೋಟೆ: ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿರಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನನ್ನ ತವರು ಕ್ಷೇತ್ರವಾದ ಬೀಳಗಿಯಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯನ್ನು ಆಯೋಜಿಸಲಾಗಿತ್ತು. ಆ ವೇಳೆ ಮಾತನಾಡುವಾಗ ಈಶ್ವರಪ್ಪನವರು ನಾನು ಮುಂದಿನ ಸಿಎಂ ಎಂದು ಹೇಳಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಕಳೆದ ಹಲವು ವರ್ಷಗಳಿಂದ ನಾವು ಮಾಡಿಕೊಂಡು ಬಂದಿರುವ ಸಾರ್ವಜನಿಕ ಸೇವೆ, ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಅವರು ಅಭಿಮಾನದಿಂದ ಹೇಳಿರಬಹುದೆಂದು ಅಭಿಪ್ರಾಯಪಟ್ಟರು. ಕಳೆದ 5 ದಶಕಗಳಿಂದ ರಾಜ್ಯದಲ್ಲಿ ಮಾಜಿ ಸಿಎಂ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪ, ಕೇಂದ್ರ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಜೊತೆ ಈಶ್ವರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರೊಬ್ಬ ಹಿರಿಯ ನಾಯಕರು. ನನ್ನ ಮೇಲಿನ ಅಭಿಮಾನಕ್ಕೆ ನಾನು ಚಿರಋಣಿ ಎಂದು ನಿರಾಣಿ ಅವರು ಭಾವುಕರಾಗಿ ಹೇಳಿದರು.
ನನಗೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಣಿ ಖಾತೆಯನ್ನು ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ. ಯಾವುದೇ ಖಾತೆ ನೀಡಿದರೂ ನಾನು ತೃಪ್ತಿಯಿಂದ ಕೆಲಸ ಮಾಡುತ್ತೇನೆ. ಈಗಲೂ ಅತ್ಯಂತ ಸಂತೋಷದಿಂದ ಇಲಾಖೆಯನ್ನು ನಿರ್ವಹಣೆ ಮಾಡುತ್ತಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಗುರಿ. ಬೊಮ್ಮಾಯಿ ನಾಯಕತ್ವಕ್ಕೆ ನಾವೆಲ್ಲರೂ ಸಾಥ್ ನೀಡಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 120 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಸವಾಲು ಎಂದು ತಿಳಿಸಿದರು. ಇದನ್ನೂ ಓದಿ: ಭಾರತಕ್ಕೆ ಓಮಿಕ್ರಾನ್ ವಕ್ಕರಿಸುವ ಭೀತಿ – ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು
2024ರ ಲೋಕಸಭೆ ಚುನಾವಣೆಯಲ್ಲಿ ಪುನಃ 25 ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿದ್ದೇವೆ. ಮತ್ತೆ ಅದಕ್ಕಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲ್ಲು ಕಾರ್ಯತಂತ್ರವನ್ನು ರೂಪಿಸಿದ್ದೇವೆ. ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಕೋವಿಡ್‍ನಿಂದ ಹಿಡಿದು ರಾಜ್ಯದಲ್ಲಿ ಪ್ರವಾಹ ಉಂಟಾದ ವೇಳೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ಕಡೆ ಕೋವಿಡ್ ನಿರ್ವಹಣೆ ಮತ್ತೊಂದು ಕಡೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನತೆಯನ್ನು ರಕ್ಷಣೆ ಮಾಡಿ ಅವರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಜೊತೆಗೆ ಜೊತೆಗೆ ರಾಜ್ಯದ ಅಭಿವೃದ್ಧಿ ಕಡೆಯೂ ವಿಶೇಷ ನಿಗಾ ವಹಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಯೂ ಹಿನ್ನಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.