Tag: Murugesh nirani

  • ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ: ಯತ್ನಾಳ್‌ಗೆ ನಿರಾಣಿ ಟಾಂಗ್‌

    ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ: ಯತ್ನಾಳ್‌ಗೆ ನಿರಾಣಿ ಟಾಂಗ್‌

    ನವದೆಹಲಿ: ಯತ್ನಾಳ್‌ (Basanagouda Patil Yatnal) ಎಲ್ಲೆಲ್ಲಿ ಭಾಷಣ ಮಾಡಿದ್ದಾರೆ ಅಲ್ಲಿ ಯಾರು ಗೆದ್ದಿಲ್ಲ. ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ (Murugesh Nirani) ಹೇಳಿದ್ದಾರೆ.

    ಬಿಜಾಪುರದಲ್ಲಿ ಎಷ್ಟು ಜನರನ್ನು ಯತ್ನಾಳ್‌ ಗೆಲ್ಲಿಸಿದ್ದಾರೆ? ಶಕ್ತಿ ಇದ್ದರೇ ಬಿಜಾಪುರದಲ್ಲಿ 2-3 ಸ್ಥಾನ ಗೆಲ್ಲಿಸಬೇಕಿತ್ತು. ಇವರ ನಾಯಕತ್ವ ಎಂತದ್ದು ಎನ್ನುವುದು ಗೊತ್ತಿದೆ. ಅವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: 1 ಕೆ.ಜಿ ತುಪ್ಪವನ್ನು 5,000 ರೂ.ಗೆ ಮಾರುತ್ತಿದ್ದೇನೆ: ಯತ್ನಾಳ್

    ರಾವಣ ಶಿವಭಕ್ತ. ಸೀತೆಯನ್ನು ಅಪಹರಣ ಮಾಡಿದ ಮೇಲೆ ಅನವತಿ ಆಯ್ತು. ಪಾಪದ ಕೊಡ ತುಂಬಿದ ಮೇಲೆ ಎಲ್ಲವೂ ಮುಗಿಯಿತು. ಇವರದ್ದು ಪಾಪದ ಕೊಡ ತುಂಬಲು ಬಂದಿದೆ. ಇನ್ನು ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದರು.

    ರಾವಣ ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದ. ಆದರೆ ಆತನ ಕಥೆ ಏನಾಯಿತು? ನಾನೇ ಎಲ್ಲ ಅಂದವರಿಗೆ ಏನಾಗಿದೆ? ಇವರ ಕಥೆಯೂ ಹಾಗೇ ಆಗುತ್ತದೆ. ನಾಲ್ಕು ಜನರು ಚಪ್ಪಾಳೆ ಹೊಡೆದರೆ ನಾಯಕ ಅಲ್ಲ. ಲಕ್ಷಾಂತರ ಜನರನ್ನು ಸೇರಿಸಿ ಎಂದಾದರೂ ಕಾರ್ಯಕ್ರಮ ಮಾಡಿದ್ದಾರಾ?. ಸಮಾಜಕ್ಕೆ ಅವರ ಕೊಡುಗೆ ಏನು? ಖರ್ಚು ಮಾಡದೇ ಬೇರೆಯವರು ಆಯೋಜನೆ ಮಾಡಿದ ಕಾರ್ಯಕ್ರದಲ್ಲಿ ಬಂದು ಮಾತನಾಡುತ್ತಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ.

    ವಿಜಯೇಂದ್ರ (BY vijayendra) ಅವರನ್ನು ಹೈಕಮಾಂಡ್ ರಾಜ್ಯಧ್ಯಕ್ಷರನ್ನಾಗಿ ಮಾಡಿದೆಯೇ ಹೊರತು ಯಡಿಯೂರಪ್ಪ ಅಲ್ಲ. ವಿಜಯೇಂದ್ರ ಪ್ರತಿಭೆ ನೋಡಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಗೆ ನೀಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಎಲ್ಲಾ ಕೆಲಸ ಗುರುತಿಸಿ ಜವಾಬ್ದಾರಿ ನೀಡಿದ್ದಾರೆ. ಅಶೋಕ್ (R Ashok) ಎಂಟು ಬಾರಿ ಶಾಸಕರು, ಸಚಿವರು ಡಿಸಿಎಂ ಆಗಿದ್ದರು. ಸಂಘಟನೆ ಎಲ್ಲವೂ ನೋಡಿ ಹುದ್ದೆ ನೀಡಿದ್ದಾರೆ. ಇದನ್ನು ಯತ್ನಾಳ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ನಿರಾಣಿ ಕಿಡಿಕಾರಿದರು.

  • ಕೇಸ್ ವಿಥ್‌ಡ್ರಾ ಮಾಡಿದ್ದು ನೋಡಿದ್ರೆ ಗೊತ್ತಾಗುತ್ತೆ ಸರ್ಕಾರ ನಡೆಸುತ್ತಿರೋದು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಂತ: ನಿರಾಣಿ

    ಕೇಸ್ ವಿಥ್‌ಡ್ರಾ ಮಾಡಿದ್ದು ನೋಡಿದ್ರೆ ಗೊತ್ತಾಗುತ್ತೆ ಸರ್ಕಾರ ನಡೆಸುತ್ತಿರೋದು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಂತ: ನಿರಾಣಿ

    ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕ್ಯಾಬಿನೆಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕೇಸ್ ವಿಥ್‌ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆ ಶಿವಕುಮಾರ್ ಅಂತ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ‌ (Murugesh Nirani) ಹೇಳಿಕೆ ನೀಡಿದ್ದಾರೆ.

    ಡಿಸಿಎಂ ಡಿಕೆಶಿ ಮೇಲೆ ಸಿಬಿಐ ಕೇಸ್ (CBI Case) ಪ್ರಸ್ತಾವನೆ ವಾಪಸ್ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ನಿರಾಣಿ, ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ಹಿರಿಯರು. ಸಾಕಷ್ಟು ಏಳು ಬೀಳು ನೋಡಿದಂತವರು. ಈಗಾಗಲೇ ಈ ಕೇಸ್ ಕೋರ್ಟ್‌ನಲ್ಲಿ ತನಿಖೆ ಹಂತದಲ್ಲಿರುವಾಗ ಅದನ್ನು ಏಕಾಏಕಿಯಾಗಿ ಹೆದರಿಕೆಯಿಂದ ಸೋಲಾಗುತ್ತದೆ ಎಂಬ ಭಾವನೆಯಿಂದ ಕ್ಯಾಬಿನೆಟ್‌ನಲ್ಲಿ ವಿಥ್ ಡ್ರಾ ಮಾಡಿದ್ದಾರೆ. ಇದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.

    ಸಿದ್ದರಾಮಯ್ಯ ಅವರ ಬಗ್ಗೆ ಕರ್ನಾಟಕದಲ್ಲಿ ಅವರದ್ದೇ ಆದ ಘನತೆ ಗೌರವವಿತ್ತು. ಅವರು ಕಾನೂನಿಗೆ ತಲೆ ಬಾಗುತ್ತಾರೆ. ಕಾನೂನಿಗೆ ಹೆಚ್ಚು ಗೌರವ ಕೊಡುತ್ತಾರೆ ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ನಲ್ಲಿ ಡಿಕೆ ಶಿವಕುಮಾರ್ ಕೇಸ್ ವಿಥ್‌ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆಶಿ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಕಾನೂನು ನೆರವಿಗೆ ಶೀಘ್ರವೇ ಕಾಲ್ ಸೆಂಟರ್ ಪ್ರಾರಂಭ: ವಿಜಯೇಂದ್ರ

    ಈ ಕೇಸಲ್ಲಿ ನಿರಪರಾಧಿ ಎಂಬ ಆತ್ಮವಿಶ್ವಾಸ ಅವರಲ್ಲಿದ್ದರೆ ಅದನ್ನು ವಿಥ್‌ಡ್ರಾ ಮಾಡಲು ಹೋಗುವಂತಹ ಅವಶ್ಯಕತೆ ಇರಲಿಲ್ಲ. ಅವರು ಮಾಡಿರೋದು ತಪ್ಪಿದೆ. ಮುಂದೆ ನಾವು ಬಿಜೆಪಿಯಿಂದ ಬೇರೆ ಬೇರೆ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದೆ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

    ಡಿಕೆಶಿ ಮೇಲೆ ಸಿಬಿಐ ಕೇಸ್ ಪ್ರಸ್ತಾವನೆ ದುರುದ್ದೇಶಪೂರಿತವಾಗಿತ್ತು ಎಂಬ ಸಚಿವ ತಿಮ್ಮಾಪುರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಕ್ಲೀನ್ ಆಗಿದ್ದರೆ ತನಿಖೆ ಮಾಡೋಕೆ ಬಿಡಲಿ. ಅವರದ್ದೇ ಸರ್ಕಾರ ಇದೆ, ತನಿಖಾಧಿಕಾರಿಗಳು ಯಾವುದೇ ಸರ್ಕಾರಕ್ಕೆ ಸೀಮಿತವಾಗಿರುವುದಿಲ್ಲ. ರಾಜ್ಯದ ಅಧಿಕಾರಿಗಳು ಅವರು. ಅವರ ಮೇಲೆ ವಿಶ್ವಾಸವಿದ್ದರೆ, ತನಿಖೆ ಮಾಡೋಕೆ ಬಿಟ್ಟು, ಅಲ್ಲಿ ಕ್ಲೀನ್ ಚಿಟ್ ಆಗಿ ಬಂದಿದ್ದರೆ ಗೌರವ ಇರುತ್ತಿತ್ತು. ಆದರೆ ತನಿಖೆ ಮಾಡೋದಕ್ಕೇನೇ ಬಿಡ್ತಿಲ್ಲ ಎಂದು ನಿರಾಣಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್- ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್

  • 50 ಶಾಸಕರು BJP ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ – ಕಾಂಗ್ರೆಸ್‌ ಸರ್ಕಾರದ ಪತನ ಗ್ಯಾರಂಟಿ: ನಿರಾಣಿ ಬಾಂಬ್‌

    50 ಶಾಸಕರು BJP ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ – ಕಾಂಗ್ರೆಸ್‌ ಸರ್ಕಾರದ ಪತನ ಗ್ಯಾರಂಟಿ: ನಿರಾಣಿ ಬಾಂಬ್‌

    ವಿಜಯಪುರ: ಕಾಂಗ್ರೆಸ್‌ (Congress) ಹೇಳುವುದು ಒಂದು ಮಾಡುವುದು ಇನ್ನೊಂದು, ಈ ಸರ್ಕಾರ 5 ವರ್ಷ ಉಳಿಯಲ್ಲ. ಈಗಾಗಲೇ 50 ಕಾಂಗ್ರೆಸ್‌ ಶಾಸಕರು ಬಿಜೆಪಿ ಹೈಕಮಾಂಡ್‌ (BJP HighCommand) ಸಂಪರ್ಕದಲ್ಲಿದ್ದು, ಪತನ ಆಗೋದು ಗ್ಯಾರಂಟಿ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ (Murugesh Nirani) ಹೊಸ ಬಾಂಬ್‌ ಸಿಡಿಸಿದ್ದಾರೆ.

    ವಿಜಯಪುರದ ಜುಮನಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು‌, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗರೀಬ್ ಕಲ್ಯಾಣ್ ಅನ್ನ ಯೋಜನೆ ಮುಂದಿನ ಐದು ವರ್ಷಕ್ಕೆ ವಿಸ್ತರಣೆ: ಮೋದಿ ಘೋಷಣೆ

    ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಎರಡು ಬಣವಿದ್ದರೂ, ಒಳಗೆ ನಾಲ್ಕು ಬಣ ಸೃಷ್ಟಿಯಾಗಿದೆ. 4 ಡಿಸಿಎಂ ಹುದ್ದೆ ಕೇಳುತ್ತಿದ್ದಾರೆ. ಸಿಎಂ ವಿಚಾರದಲ್ಲೂ ಗೊಂದಲ ಸೃಷ್ಟಿಯಾಗಿದೆ, ರಾಜ್ಯ ಸರ್ಕಾರವೇ (Government Of Karnataka) ಗೊಂದಲದಲ್ಲಿದೆ. ಈ ಸರ್ಕಾರ ಖಂಡಿತವಾಗಿಯೂ 5 ವರ್ಷ ಮುಂದುವರಿಯಲ್ಲ. 50 ಶಾಸಕರು ಬಿಜೆಪಿ ಹೈಕಮಾಂಡ್‌ ಸಂಪರ್ಕದಲ್ಲಿದ್ದಾರೆ. ಡಿಸಿಎಂ ಆಕಾಂಕ್ಷಿ ಸಚಿವರು, ಸಚಿವ ಸ್ಥಾನ ವಂಚಿತ ಶಾಸಕರು, ಅಸಮಾಧಾನಿತ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರೇ ಬಂದು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ನಾವು ಸರ್ಕಾರ ಕೆಡವಲ್ಲ, ತಾನಾಗಿಯೇ ಪತನವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

    ಮುಂದುವರಿದು, ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಇದೆಯಾ ಅನ್ನೋದು ಗೊತ್ತಿಲ್ಲ. ಗ್ಯಾರಂಟಿಗಳ ಮೋಸದಿಂದ ಅಧಿಕಾರಕ್ಕೆ ಬಂದಿದ್ದಾರೆ. ಫ್ರೀ ಕರೆಂಟ್‌ ಕೊಡ್ತೀವಿ ಅಂತ ಈಗ ಪವರ್‌ ಕಟ್‌ ಮಾಡ್ತಿದ್ದಾರೆ. ಮಹಿಳೆಯರಿಗೆ ಫ್ರಿ ಬಸ್‌ ಅಂತ ಹೇಳಿ ಬಸ್‌ ಕಡಿಮೆ ಮಾಡಿದ್ದಾರೆ. ಹಿಂದಿನ ಸರ್ಕಾರದ ಕಾಮಗಾರಿಗಳೂ ನಡೆಯುತ್ತಿಲ್ಲ. ಹಣ ಕೊಟ್ಟರೆ ಮಾತ್ರ ಕೆಲಸ ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ರಾಜ್ಯದ ಜನರಿಗೆ ಕಾಂಗ್ರೆಸ್‌ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ರಾಜ್ಯಾಧ್ಯಕ್ಷನಾಗುವ ಆಸೆಯಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಅರ್ಹತೆಗೆ ಅನುಗುಣವಾಗಿ ಕೊಟ್ಟ ಕೆಲಸ ಮಾಡ್ತೇನೆ. ಟಿಕೆಟ್‌ ಕೊಡದೆ ಕಾರ್ಯಕರ್ತನಾಗಿ ಕೆಲಸ ಮಾಡು ಅಂದರೂ ಮಾಡ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: World Cup 2023: ಶತಕ ಸಿಡಿಸಿ ಮೆರೆದಾಡಿದ ರಚಿನ್‌ – ಪಾಕಿಸ್ತಾನಕ್ಕೆ 402 ರನ್‌ಗಳ ಗುರಿ

  • ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್

    ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್

    ಬಾಗಲಕೋಟೆ: ರಾಜ್ಯ ಬಿಜೆಪಿಯಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣದ ಕದನ ತೀವ್ರಗೊಂಡಿದೆ. ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಿನ್ನೆ ಆಡಿದ್ದ ಮಾತುಗಳು ಮುರುಗೇಶ್ ನಿರಾಣಿ (Murugesh Nirani) ಕೋಪಕ್ಕೆ ಕಾರಣವಾಗಿದೆ.

    ಬಾಗಲಕೋಟೆ (Bagalkote) ಯಲ್ಲಿ ಮಾತಾಡಿದ ಅವರು, ಯಾರಾದ್ರೂ ಬಾಯಿಗೆ ಬಂದಂತೆ ಮಾತಾಡಿದ್ರೆ, ಅದಕ್ಕಿಂತ ಅಪ್ಪನಂತೆ ಮಾತಾಡಲು ನನಗೂ ಬರುತ್ತೆ. ಬೇರೆಯವರ ಬಗ್ಗೆ ಮಾತಾಡುವ ಮೊದಲು ತಾವೇನು ಮಾಡಿದ್ದೇವೆ ಎಂಬ ಬಗ್ಗೆ ಮೊದಲು ಮಾತಾಡ್ಬೇಕು. ಯಾರ್ಯಾರು ಯಾರ್ಯಾರಿಂದ ಸೋತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಷ್ಟುದಿನ ನಾನು ಸುಮ್ಮನಿರೋದು ನನ್ನ ದೌರ್ಬಲ್ಯ ಅಲ್ಲ. ಇಲಿ ಹೊಡೆಯಲು ಹೋಗಿ, ಗಣಪತಿಗೆ ಪೆಟ್ಟು ಬೀಳಬಾರದು ಎಂದು ಸುಮ್ಮನಿದ್ದೇನೆ.. ಯಾರಾದ್ರೂ ನನ್ನ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಲಿ ಎಂದು ಗುಡುಗಿದ್ರು.

    ಈ ಮೂಲಕ ತಮ್ಮ ಸೋಲಿಗೆ ಯತ್ನಾಳ್ ಕಾರಣ ಎಂದು ಪರೋಕ್ಷವಾಗಿ ದೂಷಿಸಿದ್ರು. ಇದಕ್ಕೆ ಯತ್ನಾಳ್ ವೇದಿಕೆಯಲ್ಲೇ ತಿರುಗೇಟು ಕೊಟ್ರು. ನನ್ನ ಸೋಲಿಸಲು ಎಲ್ಲೆಲ್ಲಿಂದಲೋ ದುಡ್ಡು ಕಳಿಸಿದ್ರು. ನಾನು ನೋಡ್ತೀನಿ, ನಮ್ಮ ಕಡೆನೂ ತಾಕತ್ತಿದೆ ಎನ್ನುವ ಮೂಲಕ ನಿರಾಣಿಗೆ ಎಚ್ಚರಿಕೆ ಕೊಟ್ರು. ಇದಕ್ಕೆ ಮತ್ತೆ ನಿರಾಣಿ ಪ್ರತ್ಯುತ್ತರ ನೀಡಿದ್ರು. ನಾನು ಹಣ ಕೊಟ್ಟಿದ್ದು ಬಿಜೆಪಿಗರಿಗೆ, ಕಾಂಗ್ರೆಸ್ಸಿಗರಿಗಲ್ಲ. ಈ ಅವಮಾನಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಕೊಡ್ತೀನಿ ಅಂತಾ ವಾರ್ನಿಂಗ್ ನೀಡಿದ್ರು.

    ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಈಶ್ವರಪ್ಪ, ರವಿಕುಮಾರ್ ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ, ಶೀಘ್ರವೇ ಎಲ್ಲಾ ಸರಿ ಹೋಗುವ ಭರವಸೆ ವ್ಯಕ್ತಪಡಿಸ್ತಿದ್ದಾರೆ. ಇದನ್ನೂ ಓದಿ: ಕೇಂದ್ರದ ಅಕ್ಕಿ ಬೇಕಿದ್ದರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು: ಪ್ರಲ್ಹಾದ್ ಜೋಶಿ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬೀಳಗಿಯಲ್ಲಿ ನಿರಾಣಿಗೆ ಹೀನಾಯ ಸೋಲು

    ಬೀಳಗಿಯಲ್ಲಿ ನಿರಾಣಿಗೆ ಹೀನಾಯ ಸೋಲು

    ಬಾಗಲಕೋಟೆ: ಬೀಳಗಿ (Bilgi) ಕ್ಷೇತ್ರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಮುರಗೇಶ್ ನಿರಾಣಿ (Murugesh Nirani) ಸೋಲು ಕಂಡಿದ್ದಾರೆ. ಕೈಗಾರಿಕಾ ಸಚಿವರಾಗಿರುವ ನಿರಾಣಿಯವರು ಸೋಲು ಕಂಡಿದ್ದು ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

    ಕಾಂಗ್ರೆಸ್ (Congress) ಅಭ್ಯರ್ಥಿ ಜೆ.ಟಿ. ಪಾಟೀಲ್ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಮೂರು ಬಾರಿ ಕಾಂಗ್ರೆಸ್‍ನಿಂದ ಬಿಳಗಿಯ ಶಾಸಕರಾಗಿದ್ದರು. ಅವರು ಪ್ರಸ್ತುತ ಯಾವುದೇ ಕ್ರಿಮಿನಲ್ ಕೇಸ್ ಹೊಂದಿರಲಿಲ್ಲ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

    ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 62, ಕಾಂಗ್ರೆಸ್ 137, ಜೆಡಿಎಸ್ 21, ಇತರರು 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯದ ಚುನಾವಣಾ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಅಲ್ಲ: ಬಿಎಸ್‍ವೈ

  • ವಿಧಾನ ಪರಿಷತ್ ಕಲಾಪದಲ್ಲಿ ಏಕವಚನದಲ್ಲೇ ಬೈದಾಡಿಕೊಂಡ ಸಚಿವ ಮುರುಗೇಶ್ ನಿರಾಣಿ – ಮರಿತಿಬ್ಬೇಗೌಡ

    ವಿಧಾನ ಪರಿಷತ್ ಕಲಾಪದಲ್ಲಿ ಏಕವಚನದಲ್ಲೇ ಬೈದಾಡಿಕೊಂಡ ಸಚಿವ ಮುರುಗೇಶ್ ನಿರಾಣಿ – ಮರಿತಿಬ್ಬೇಗೌಡ

    ಬೆಂಗಳೂರು: ವಿಧಾನ ಪರಿಷತ್ (Vidhan Parishad) ಕಲಾಪದಲ್ಲಿ ಮಂಗಳವಾರ ಸಚಿವ ಮುರುಗೇಶ್ ನಿರಾಣಿ (Murugesh Nirani), ಜೆಡಿಎಸ್ (JDS) ಸದಸ್ಯ ಮರಿತಿಬ್ಬೇಗೌಡ (Maritibbe Gowda) ನಡುವೆ ಏಕವಚನ ಬೈಗಳ ಗಲಾಟೆ ನಡೆಯಿತು. ಒಬ್ಬರಿಗೊಬ್ಬರು ಬಾಯಿಗೆ ಬಂದಂತೆ ಬೈದುಕೊಂಡು ಗಲಾಟೆ ಮಾಡಿದರು.

    ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ವೇಳೆ ಮರಿತಿಬ್ಬೇಗೌಡ ಪ್ರಶ್ನೆ ಕೇಳಿದರು. ಈ ವೇಳೆ‌ ಭೂಸ್ವಾಧೀನ ಪರಿಹಾರ ಅಕ್ರಮ ವಿಚಾರದ ಕುರಿತು ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ಎಂದು ಮರಿತಿಬ್ಬೇಗೌಡ ಮಾತನಾಡಿದರು. ಈ ಹೇಳಿಕೆಗೆ ಸಚಿವ ನಿರಾಣಿ ತಿರುಗೇಟು ನೀಡುತ್ತಾ, ಸರಿಯಾಗಿ ಮಾತನಾಡು.. ಅರಚಾಡಬೇಡ. ನಾನು ಉತ್ತರ ಕರ್ನಾಟಕದವನು ನಿನ್ನ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಈ ವೇಳೆ ಸದನದಲ್ಲಿ ಗದ್ದಲ ನಡೆಯಿತು. ಇದನ್ನೂ ಓದಿ: ಮುಸ್ಲಿಂ ಮತಗಳ ಓಲೈಕೆಗೆ ಮುಂದಾದ ಹೈಕಮಾಂಡ್ – ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಸವಾಲು

    ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬಿಎಂಆರ್‌ಸಿಎಲ್‌ಗೆ ಹಂಚಿಕೆ ಮಾಡಿ 22 ಕೋಟಿ ಪರಿಹಾರ ಕೊಡಲಾಗಿದೆ. 12 ಗುಂಟೆ ಬಿಡಿಎ ಆಸ್ತಿಗೆ ಖಾಸಗಿ ವ್ಯಕ್ತಿಗೆ 22 ಕೋಟಿ ಪರಿಹಾರ ನೀಡಲಾಗಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದರು.

    ಇದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಹೋಬಳಿಯಲ್ಲಿ 32 ಗುಂಟೆ ಸ್ವಾಧೀನ ಕಟ್ಟಡಗಳಿದ್ದ ಕಾರಣ 12 ಗುಂಟೆಯನ್ನು ಸ್ವಾಧೀನದಿಂದ ಕೈಬಿಡಲಾಗಿತ್ತು. 15 ವರ್ಷವಾದರೂ ಭೂಮಿ ಕಳೆದುಕೊಂಡ ವ್ಯಕ್ತಿಗೆ ಪರಿಹಾರ ಸಿಕ್ಕಿಲ್ಲ. ಸ್ವಾಧೀನಪಡಿಸಿಕೊಂಡ ಜಮೀನು ಸ್ವಾಧೀನವಾಗದೇ ಇದ್ದಲ್ಲಿ ಸ್ವಾಧೀನ ಪ್ರಕ್ರಿಯೆ ರದ್ದಾಗಲಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡೇ ಪರಿಹಾರ ನೀಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.

    ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ನಿಮಗೆ ಎಂದರು. ಈ ಮಾತಿಗೆ ತಿರುಗೇಟು ನೀಡಿದ ಸಚಿವ ನಿರಾಣಿ,‌ ಸರಿಯಾಗಿ ಮಾತನಾಡು.. ಅರಚಾಡಬೇಡ. ನಾನು ಉತ್ತರ ಕರ್ನಾಟಕದವನು. ನಿನ್ನ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಭಿವೃದ್ಧಿ ಮಾಡಿದ್ದು ಯಾರು? – ವೇದಿಕೆಯಲ್ಲೇ ಅಶ್ವಥ್ ನಾರಾಯಣ್ Vs ಅನಿತಾ ಕುಮಾರಸ್ವಾಮಿ ವಾಗ್ವಾದ

    ಅಲ್ಲಿಗೆ ಚರ್ಚೆ ಸ್ಥಗಿತಗೊಳಿಸಿ ಸಭಾಪತಿಗಳು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು. ಉತ್ತರ ಖಂಡಿಸಿ ಮರಿತಿಬ್ಬೇಗೌಡ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಧ್ಯಪ್ರವೇಶ ಮಾಡಿ, ಸಚಿವರು ಉತ್ತರ ಕೊಡುತ್ತಿದ್ದಾರೆ ಮಾತನಾಡಲು ಬಿಡಿ ಎಂದರು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಾನು ಅನುಮತಿ ನೀಡಲ್ಲ. ಬಾಯಿ ಇದೆ ಎಂದು ಮನಸ್ಸಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಸದನ ನಡೆಸಬೇಕೋ ಬೇಡವೋ? ಬೇರೆ ಸದಸ್ಯರಿಲ್ಲವೆ? ನೀವೇಳಿದಂತೆ ಸದನ ನಡೆಸಲು ಸಾಧ್ಯವಿಲ್ಲ ಎಂದರು.

    ಈ ವೇಳೆ ಸರ್ಕಾರದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಅವಕಾಶ ಕೊಡಬೇಡಿ ಎಂದರು. ಇದಕ್ಕೆ ಕಿಡಿಕಾರಿದ ಹರಿಪ್ರಸಾದ್, ನೀವು ಅಧ್ಯಕ್ಷರಾ? ಬೇಡ ಎನ್ನಲು ನೀವು ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ನಿರ್ಧಾರ ಪ್ರಕಟಿಸಿದ್ದೇನೆ ಎಂದು ಸಭಾಪತಿಗಳು ಸ್ಪಷ್ಟಪಡಿಸಿದರು. ನನ್ನ ನಿರ್ಧಾರದಲ್ಲಿ ಬದಲಿಲ್ಲ. ಬೇರೆ ರೂಪದಲ್ಲಿ ಕೊಡಿ ಪರಿಗಣಿಸಲಾಗುತ್ತದೆ. ನಾಳೆ ನಾಡಿದ್ದರಲ್ಲಿ ಪರಿಗಣನೆ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿರಾಣಿ ಬೆಂಬಲಿಗರಿಂದ ಮುಂದುವರಿದ ಗಿಫ್ಟ್ ಪಾಲಿಟಿಕ್ಸ್- ಸಕ್ಕರೆ ತಿರಸ್ಕರಿಸಿದ ಮತ್ತೊಬ್ಬ ವ್ಯಕ್ತಿ!

    ನಿರಾಣಿ ಬೆಂಬಲಿಗರಿಂದ ಮುಂದುವರಿದ ಗಿಫ್ಟ್ ಪಾಲಿಟಿಕ್ಸ್- ಸಕ್ಕರೆ ತಿರಸ್ಕರಿಸಿದ ಮತ್ತೊಬ್ಬ ವ್ಯಕ್ತಿ!

    ಬಾಗಲಕೋಟೆ: ಸಚಿವ ಮುರಗೇಶ್ ನಿರಾಣಿ (Murugesh Nirani) ಬೆಂಬಲಿಗರಿಂದ ಗಿಫ್ಟ್ ಪಾಲಿಟಿಕ್ಸ್ ಮುಂದುವರಿದಿದೆ. ಮಹಿಳೆ ಸಕ್ಕರೆ ವಾಪಸ್ ಮಾಡಿದ ಸುದ್ದಿಯ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವೀಡಿಯೋ ವೈರಲ್ ಆಗಿದೆ.

    ಹೌದು. ಬೀಳಗಿ ವಿಧಾನಾಸಭಾ ಕ್ಷೇತ್ರದ ಉದಗಟ್ಟಿ ಗ್ರಾಮದಲ್ಲಿ ರಾತ್ರಿ ಹೊತ್ತು ಸಕ್ಕರೆ ಪ್ಯಾಕೆಟ್ ಹಂಚುತ್ತಿರುವ ವೀಡಿಯೋ ವೈರಲ್ ಆಗಿದೆ. ಸಚಿವರ ಬೆಂಬಲಿಗರು ಮನೆಮನೆಗಳಿಗೆ ತೆರಳಿ ಸಕ್ಕರೆ ಪ್ಯಾಕೆಟ್ (Sugar Packet) ವಿತರಿಸುತ್ತಿರುವುದು ಬಯಲಾಗಿದೆ. ಸದ್ಯ ಗಿಫ್ಟ್ ಪಾಲಿಟಿಕ್ಸ್ ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆಗೆ ಭಾರೀ ಬೆಂಬಲ

    ಏನಿದು ಘಟನೆ..?: ಕೆಲ ದಿನಗಳ ಹಿಂದೆ ಗಲಗಲಿ ಗ್ರಾಮದಲ್ಲಿ ಸಕ್ಕರೆ ಪ್ಯಾಕೆಟ್ ಹಂಚಿಕೆ ವೇಳೆ ಮಹಿಳೆಯೊಬ್ಬರು ಸಕ್ಕರೆಯನ್ನ ತಿರಸ್ಕರಿಸಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೆ ಸಕ್ಕರೆ ಹಂಚಿಕೆ ಮುಂದುವರಿದಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಮತ್ತೊಬ್ಬರು ಸಕ್ಕರೆ ಪ್ಯಾಕೆಟ್ ತಿರಸ್ಕರಿಸಿದ್ದಾರೆ. ಶುಕ್ರವಾರ ರಾತ್ರಿ ನಾರಾಯಣ ಉಪ್ಪಾರ ಮನೆ ಹೊರಗಡೆ ನಿರಾಣಿ ಬೆಂಬಲಿಗರು ಸಕ್ಕರೆ ಪ್ಯಾಕೆಟ್ ಇಟ್ಟು ಹೋಗಿದ್ದಾರೆ.

    ಉಪ್ಪಾರ ಅವರು ತಡರಾತ್ರಿ ಎದ್ದು ಬಂದು ಹೊರಗಡೆ ನೋಡಿದಾಗ ಸಕ್ಕರೆ ಪ್ಯಾಕೆಟ್ ಇರುವುದು ಬೆಳಕಿಗೆ ಬಂದಿದೆ. ನಾವು ಮನೆಯಲ್ಲಿ ಇಲ್ಲದ ವೇಳೆ ಯಾರೋ ಬಂದು ಇಟ್ಟಿದ್ದಾರೆ ನಮಗೆ ಸಕ್ಕರೆ ಬೇಕಾಗಿಲ್ಲ. ಪ್ರತಿ ತಿಂಗಳು ಕೊಡಬೇಕಾಗಿತ್ತಲ್ಲ. ಈಗ ಬಂದ ಯಾಕೆ ಸಕ್ಕರೆ ಕೊಡುತ್ತಿದ್ದಾರೆ. ನಮಗೆ ನಿರಾಣಿಯವರ ಐದು ಕೆಜಿ ಸಕ್ಕರೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆಗೆ ಭಾರೀ ಬೆಂಬಲ

    ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆಗೆ ಭಾರೀ ಬೆಂಬಲ

    ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ (Murugesh Nirani) ಹಂಚಿದ ಸಕ್ಕರೆಯನ್ನು ಮಹಿಳೆಯೊಬ್ಬರು ತಿರಸ್ಕರಿಸಿದ ಪ್ರಸಂಗವೊಂದು ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ಸಕ್ಕರೆ ಚೀಲ (Sugar Packet) ತಿರಸ್ಕರಿಸಿದ ಮಹಿಳೆ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ.

    ಏಮಿದು ಘಟನೆ..? ಸಚಿವ ನಿರಾಣಿ ಬೆಂಬಲಿಗರು ಮನೆ ಮನೆಗೂ ಸಕ್ಕರೆ ಹಂಚುತ್ತಿದ್ದರು. ಅಂತೆಯೇ ಗಲಿಗಲಿಯ ಮನೆಯೊಂದಕ್ಕೆ ಸಕ್ಕರೆ ಚೀಲ ಹಂಚಿದ ವೇಳೆ ಮಹಿಳೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಕೊನೆಗೆ ಬೆಂಬಲಿಗರು ಒತ್ತಾಯವಾಗಿ ಸಕ್ಕರೆ ಚೀಲ ಮನೆಯೊಳಗೆ ಹೋಗಿ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್

    ಒತ್ತಾಯಪೂರ್ವಕವಾಗಿ ನೀಡಿದ ಸಕ್ಕರೆ ಚೀಲವನ್ನು ಮಹಿಳೆ ಬಾಗಿಲು ಹೊರಗೆ ಇಟ್ಟರು. ಈ ದೃಶ್ಯವೆಲ್ಲಾ ವೀಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯರ ವರ್ತನೆ ಬೆಂಬಲಿಸಿ ವೀಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಮಹಿಳೆಯರ ವರ್ತನೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

    ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ ಧನ್ಯವಾದಗಳು. ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಬುದ್ಧತೆ ತೋರುವ ಇಂತಹ ಜನರಿಂದ ಮಾತ್ರ. ಪ್ರಜಾಪ್ರಭುತ್ವ ಉಳಿಯಲು ಸಾಧ್ಯ, ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ವೀಡಿಯೋ ಜೊತೆಗೆ ಪೋಸ್ಟ್ ಕೂಡ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

    ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್‍ (Basangouda Patil Yatnal) ಗೆ ಮತ್ತೆ ಮತ್ತೆ ನಸೀಬು ಕೈಹಿಡಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಪಕ್ಷ ಮತ್ತು ಸರ್ಕಾರದ ನಾಯಕರ ಬಗ್ಗೆ ಅಷ್ಟೆಲ್ಲ, ಮುಜುಗರದ, ಕೀಳು ಮಟ್ಟದ ಹೇಳಿಕೆಗಳನ್ನು ಕೊಡ್ತಾ ಬರುತ್ತಿದ್ದರೂ ಹೈಕಮಾಂಡ್ ಮತ್ತೆ ಮತ್ತೆ ಮಾಫಿ ಮಾಡುತ್ತಾನೇ ಇದೆ. ಇತ್ತೀಚೆಗೆ ಸಚಿವ ನಿರಾಣಿ ವಿರುದ್ಧ ಯತ್ನಾಳ್ ಅವರು ‘ಪಿಂಪ್’ ಪದ ಬಳಸಿ ವಾಗ್ದಾಳಿ ನಡೆಸಿದ ಮೇಲಂತೂ ಪಕ್ಷದ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಸಿತ್ತು. ಮೀಸಲಾತಿ ಘೋಷಣೆ ಮಾಡ್ತಿಲ್ಲ ಅಂತ ಸಿಎಂ ಬೊಮ್ಮಾಯಿ (Basavaraj Bommai) ಮೇಲೂ ಯತ್ನಾಳ್ ಟೀಕಾ ಪ್ರಹಾರ ನಡೆಸಿದ್ದರು. ಪಕ್ಷಕ್ಕೂ, ಸರ್ಕಾರಕ್ಕೂ ಯತ್ನಾಳ್ ಹೇಳಿಕೆಗಳಿಂದ ಮತ್ತೊಮ್ಮೆ ಭಾರೀ ಮುಜುಗರ ಆಗಿತ್ತು. ಆದರೆ ಇಷ್ಟೆಲ್ಲ ಆದರೂ, ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮ ಇಲ್ಲ.

    ಸಚಿವ ನಿರಾಣಿ (Murugesh Nirani) ವಿರುದ್ಧ ಬಳಸಿದ ಕೀಳು ಪದಗಳ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯು ಕೇಂದ್ರ ಬಿಜೆಪಿ ಶಿಸ್ತು ಸಮಿತಿಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇತ್ತಿಚೆಗೆ ಯತ್ನಾಳ್‍ಗೆ ಕೇಂದ್ರ ಬಿಜೆಪಿ (BJP) ಶಿಸ್ತು ಸಮಿತಿಯಿಂದ ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ತಾಕೀತು ಮಾಡಿ ಶೋಕಾಸ್ ನೊಟೀಸ್ ಕೊಡಲಾಗಿತ್ತು. ಇದರ ಭಾಗವಾಗಿ ಯತ್ನಾಳ್ ಅವರು ಮೂರು ದಿನಗಳ ಹಿಂದೆಯಷ್ಟೇ ರಹಸ್ಯವಾಗಿ ದೆಹಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಬಿಜೆಪಿ ಹೈಕಮಾಂಡ್ (BJP HighCommand) ಮತ್ತೊಮ್ಮೆ ಖಡಕ್ ವಾರ್ನಿಂಗ್ ಮಾತ್ರ ಕೊಟ್ಟು ಕಳಿಸಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ

    ಸೀಕ್ರೆಟ್ ಆಗಿ ದೆಹಲಿಗೆ ಹೋಗಿ ಬಂದಿರೋ ಶಾಸಕ ಯತ್ನಾಳ್ ಗೆ ಬರೇ ವಾರ್ನಿಂಗ್ ಕೊಟ್ಟು ಕಳಿಸಲಾಗಿದೆಯಂತೆ. ಚುನಾವಣೆ ಹೊತ್ತಲ್ಲಿ ಯಾರ ವಿರುದ್ಧವೂ ಮಾತಾಡದಂತೆ ತಾಕೀತು ಮಾಡಿದ್ದಾರೆನ್ನಲಾಗಿದೆ. ಪಕ್ಷದ ಶಿಸ್ತು ಮೀರದೇ ಹದ್ದು ಬಸ್ತಿನಲ್ಲಿರುವಂತೆ ಕಟ್ಟೆಚ್ಚರ ನೀಡಿ ಕಳಿಸಲಾಗಿದೆಯಂತೆ. ಚುನಾವಣೆ ಸಮೀಪ ಯತ್ನಾಳ್ ಬಾಯಿಗೆ ಹೈಕಮಾಂಡ್ ಬೀಗ ಹಾಕುತ್ತೆ ಅನ್ನೋ ವಿರೋಧಿಗಳ ನಿರೀಕ್ಷೆ ಠುಸ್ ಆಗಿದೆ.

    ರೆಬೆಲ್ ಶಾಸಕ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ನಿಲುವು ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ಆಗ್ತಿದೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಹೀಗೇಕೆ ನಡೆದುಕೊಳ್ತಿದೆ ಅನ್ನೋದು ಹಲವರಿಗೆ ಒಗಟಾಗಿದೆ. ಯತ್ನಾಳ್ ಗೆ ಪಂಚಮಸಾಲಿ ಸಮುದಾಯ ಸಪೋರ್ಟ್ ಗೆ ರಿಸ್ಕ್ ಬೇಡ ಅಂತ ವರಿಷ್ಠರು ಸುಮ್ನಾದ್ರಾ ಅಂತ ಚರ್ಚೆ ಆಗ್ತಿದೆ. ಒಂದೊಮ್ಮೆ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದರೆ ಮೀಸಲಾತಿ ಹೋರಾಟ ಇನ್ನಷ್ಟು ತೀವ್ರವಾಗಬಹುದು. ಜೊತೆಗೆ ಪಂಚಮಸಾಲಿ ಸಮುದಾಯ, ಮಠಾಧೀಶರು ತಿರುಗಿ ಬೀಳಬಹುದು. ಹೀಗಾಗಿ ಮತ್ತೆ ಹೊಸ ತಲೆನೋವು ಬೇಡ ಅಂತ ಅಂದುಕೊಳ್ಳುತ್ತಾ ಹೈಕಮಾಂಡ್ ಅಂತ ಪಕ್ಷದೊಳಗೆ ಗುಸು ಗುಸು ಚರ್ಚೆ ಜೋರಾಗಿದೆ. ಇದನ್ನೂ ಓದಿ: ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು

    ಇತ್ತ ಹೈಕಮಾಂಡ್ ನಡೆಯಿಂದ ನಿರಾಣಿ ಬ್ರದರ್ಸ್ ವಲಯದಲ್ಲೂ ಭಾರೀ ಬೇಸರ ಮನೆ ಮಾಡಿದೆ ಎನ್ನಲಾಗಿದೆ. ಯತ್ನಾಳ್ ಗೆ ಹೈಕಮಾಂಡ್ ಸುಮ್ನೆ ಬಿಟ್ಟಿರಬಹುದು, ಆದರೆ ನಾವು ಸುಮ್ಮನಿರೋದು ಬೇಡ ಎಂಬ ನಿರ್ಧಾರಕ್ಕೆ ನಿರಾಣಿ ಬಣ ಬಂದಿದೆ ಎನ್ನಲಾಗಿದೆ. ಯತ್ನಾಳ್ ಗೆ ಖೆಡ್ಡಾ ತೋಡಲು ನಿರಾಣಿ ಟೀಮ್ ಸ್ಕೆಚ್ ಹಾಕಿದೆ ಎನ್ನಲಾಗಿದೆ. ವಿಜಯಪುರದಲ್ಲಿ ಯತ್ನಾಳ್ ರನ್ನು ರಾಜಕೀಯವಾಗಿ ಮುಳುಗಿಸಲು ಒಳಗೊಳಗೇ ಪ್ಲಾನ್ ರೂಪಿಸಲಾಗ್ತಿದೆಯಂತೆ. ಒಟ್ಟಿನಲ್ಲಿ ರೆಬೆಲ್ ಯತ್ನಾಳ್ ಗೆ ಸ್ವಪಕ್ಷೀಯರಿಂದಲೇ ಆಪತ್ತು ಕಟ್ಟಿಟ್ಟ ಬುತ್ತಿ. ಬಿಜೆಪಿಯಲ್ಲಿ ಯತ್ನಾಳ್ ವರ್ಸಸ್ ನಿರಾಣಿ ಸಂಘರ್ಷ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 3,455 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 18,567 ಜನರಿಗೆ ಉದ್ಯೋಗ ಸೃಷ್ಟಿ

    3,455 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 18,567 ಜನರಿಗೆ ಉದ್ಯೋಗ ಸೃಷ್ಟಿ

    ಬೆಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ರಾಜ್ಯದಲ್ಲಿ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

    ಮಂಗಳವಾರ ಬೆಂಗಳೂರಿನ (Bengaluru) ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ಆರ್. ನಿರಾಣಿ (Murugesh Nirani) ಅವರ ಅಧ್ಯಕ್ಷತೆಯಲ್ಲಿ ನಡೆದ 137ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಒಟ್ಟು 59 ಯೋಜನೆಗಳಿಂದ 3,455.39 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 18,567 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ಆರ್. ನಿರಾಣಿ ತಿಳಿಸಿದ್ದಾರೆ. ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಅಧಿಕ ಹೆಚ್ಚು ಬಂಡವಾಳ ಹೂಡಿಕೆಯ 11 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2186.70 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 10,559 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.

    15 ಕೋಟಿ ರೂ.ನಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1049.19 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 8,008 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 219.50 ಕೋಟಿ ರೂ. ಹೂಡಿಕೆಯಾಗಲಿದೆ.

    ಅನುಮೋದನೆ ನೀಡಿರುವ ಪ್ರಸ್ತಾವನೆಗಳು:
    * ಮೈಸೂರ್ ಸ್ಟೀಲ್ಸ್ ಲಿಮಿಟೆಡ್- ಮೇಟಗಾನಹಳ್ಳಿ. ಮೈಸೂರು -ಹೂಡಿಕೆ 405.43 ಕೋಟಿ ರೂ., ಉದ್ಯೋಗ 200

    * ಎನ್.ಐ.ಡಿ.ಸಿ ಇಂಡಸ್ಟ್ರೀಯಲ್ ಆಟೋಮೋಷನ್ ಇಂಡಿಯಾ ಲಿಮಿಟೆಡ್- ಕೋಟುರು ಬೇಲೂರು, ಇಎಂಸಿ ಕೈಗಾರಿಕಾ ಪ್ರದೇಶ- ಹೂಡಿಕೆ 350 ಕೋಟಿ ರೂ., ಉದ್ಯೋಗ 730

    * ಸಿಲಾನ್ ಬಿವೆರೇಜ್ ಲಿಮಿಟೆಡ್- ಎಫ್‌ಎಮ್‌ಸಿಜಿ, ಕ್ಲಸ್ಟರ್ ಧಾರವಾಡ- ಹೂಡಿಕೆ 256.3 ಕೋಟಿ ರೂ., ಉದ್ಯೋಗ 200

    * ಬಾಲಾಜಿ ವೇರರ್ಸ್ ಪ್ರೈ ಲಿಮಿಟೆಡ್ -ಕಣಗಲ್, ಕೈಗಾರಿಕಾ ಪ್ರದೇಶ ಬೆಳಗಾವಿ ಜಿಲ್ಲೆ – ಹೂಡಿಕೆ 251.25 ಕೋಟಿ ರೂ., ಉದ್ಯೋಗ 500

    * ಮಂಜುಶ್ರೀ ಟೆಕ್ನೋಪಾರ್ಕ್ ಲಿಮಿಟೆಡ್ – ಬಡಗುಪ್ಪೆ, ಕೆಲ್ಲಂಬಳ್ಳಿ, ಕೈಗಾರಿಕಾ ಪ್ರದೇಶ ಚಾಮರಾಜನಗರ – ಹೂಡಿಕೆ 253 ಕೋಟಿ ರೂ., ಉದ್ಯೋಗ 500

    * ಕ್ಸಿಸೋಡ ಇಂಡಿಯಾ ಪ್ರೈ ಲಿಮಿಟೆಡ್ – ಶಿರಾ ಕೈಗಾರಿಕಾ ಪ್ರದೇಶ ತುಮಕೂರು – ಹೂಡಿಕೆ 138 ಕೋಟಿ ರೂ., ಉದ್ಯೋಗ 160

    * ಮಹಾಮಾನವ್ ಇನ್‍ಸ್ಪಾಟ್ ಪ್ರೈ ಲಿಮಿಟೆಡ್ – ಬೆಳಗಲ್ ಗ್ರಾಮ, ಬಳ್ಳಾರಿ – ಹೂಡಿಕೆ 90 ಕೋಟಿ ರೂ., ಉದ್ಯೋಗ 90

    * ಎ.ಸಿ.ಆರ್ ಪ್ರಾಜೆಕ್ಟ್ – ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ, – ಹೂಡಿಕೆ 85 ಕೋಟಿ ರೂ., ಉದ್ಯೋಗ 350

    * ನಿಯೋಬಿ ಸಲ್ಯೂಷನ್ ಪ್ರೈ ಲಿಮಿಟೆಡ್- ಎಎಲ್‍ಜಿಸಿ ಕ್ಲಸ್ಟರ್, ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶ, ಧಾರವಾಡ, ಹೂಡಿಕೆ -50 ಕೋಟಿ ರೂ., ಉದ್ಯೋಗ 563

    * ಅಭಯ್ ಆಗ್ರೋ ಫುಡ್ ಪ್ರೈಲಿಮಿಟೆಡ್- ಗಬಾರ ಗ್ರಾಮ, ಕೊಪ್ಪಳ ಜಿಲ್ಲೆ- ಹೂಡಿಕೆ 32.65 ಕೋಟಿ ರೂ., ಉದ್ಯೋಗ -35

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k