Tag: Murugesh nirani

  • ಕುಮಟಳ್ಳಿ ಪರ ಬ್ಯಾಟಿಂಗ್ ಮಾಡಿ ರೇಣುಕಾಚಾರ್ಯ ವಿರುದ್ಧ ನಿರಾಣಿ ಗರಂ

    ಕುಮಟಳ್ಳಿ ಪರ ಬ್ಯಾಟಿಂಗ್ ಮಾಡಿ ರೇಣುಕಾಚಾರ್ಯ ವಿರುದ್ಧ ನಿರಾಣಿ ಗರಂ

    ಬೆಂಗಳೂರು: ಮಹೇಶ್ ಕುಮಟಳ್ಳಿ ಪರ ಮಾಜಿ ಸಚಿವ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಬ್ಯಾಟಿಂಗ್ ನಡೆಸಿ ರೇಣುಕಾಚಾರ್ಯ ವಿರುದ್ಧ ಗರಂ ಆಗಿದ್ದಾರೆ.

    ಕುಮಟಳ್ಳಿಗೆ ಸಚಿವ ಸ್ಥಾನ ನೀಡಬೇಕು. 11 ಜನ ನೂತನ ಶಾಸಕರಲ್ಲಿ ಅವರೊಬ್ಬರನ್ನು ಕೈ ಬಿಟ್ಟರೆ ತಪ್ಪಾಗುತ್ತದೆ. ಗೆದ್ದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಕೈ ಬಿಡುವುದು ಒಳ್ಳೆಯದಲ್ಲ. ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು ಎಂದಿದ್ದಾರೆ.

    ಶಾಸಕರ ಭವನದಲ್ಲಿ ಮಾತನಾಡಿದ ನಿರಾಣಿ, ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈ ಬಿಡುವುದು ಸರಿಯಲ್ಲ. ಸಿಎಂಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ ಶಾಸಕನಾಗಿ ಹೀಗೆ ಮಾಡಿ ಎಂದು ಹೇಳಬಹುದಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿಎಂಗೆ 50 ವರ್ಷಕ್ಕೂ ಹೆಚ್ಚು ರಾಜಕೀಯ ಅನುಭವ ಇದೆ. ಎಲ್ಲವನ್ನೂ ಬಗೆಹರಿಸಿ ಸಿಎಂ ಸಚಿವರನ್ನಾಗಿ ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದ ಅವರು ನಾನು ಸಚಿವ ಸ್ಥಾನದ ಆಕಾಂಕ್ಷಿ ಅಂತ ಬಹಿರಂಗವಾಗಿ ಹೇಳಿದರು. ಇದನ್ನೂ ಓದಿ:ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್

    ಸಚಿವ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪನವರಿಗೆ ಬಿಟ್ಟ ನಿರ್ಧಾರ. ಸಚಿವ ಸ್ಥಾನ ನೀಡಿದರೆ ಸಚಿವನಾಗಿ ಕೆಲಸ ಮಾಡುತ್ತೇನೆ. ಕೊಡದೇ ಇದ್ದರೆ ಶಾಸಕನಾಗಿ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಮಾಡಬೇಕು ಅಂತ ಜನತೆ ಒತ್ತಾಯ, ಶ್ರೀಗಳ ಒತ್ತಾಯ, ಸಮುದಾಯ ಒತ್ತಾಯವಿದೆ. ಆದರೆ ಸಿಎಂ ಅಂತಿಮ ನಿರ್ಧಾರ ಮಾಡಬೇಕು. ಸಿಎಂ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದು ತಿಳಿಸಿದರು.

    117 ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ಇರೋದು 16 ಮಂತ್ರಿಗಳ ಸ್ಥಾನ ಮಾತ್ರ. ಹೀಗಾಗಿ ಯಾರಿಗೆ ಕೊಡಬೇಕು ಅಂತ ಸಿಎಂ ನಿರ್ಧಾರವೇ ಅಂತಿಮ. ಎಲ್ಲರಿಗೂ ಸ್ಥಾನ ನೀಡುವುದು ಕಷ್ಟ. ನನಗೆ ಒಂದು ವೇಳೆ ಸಿಗಲಿಲ್ಲದಿದ್ದರೂ ಯಾವುದೇ ಅಸಮಾಧಾನ ಇಲ್ಲ ಎಂದರು.

    ಒಂದು ಕಡೆ ಸಚಿವ ಸ್ಥಾನ ಸಿಗೋದು ಡೌಟ್ ಅಂತ ಗೊತ್ತಾಗಿದ್ದೆ ತಡ ನಿರಾಣಿ ತಮ್ಮ ಅಸಮಾಧಾನವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೇಲೆ ತೀರಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಹೋದ ಬಂದ ಕಡೆ ಮಾತಾಡುತ್ತಿದ್ದಾರೆ. ಯಾರಿಗೆ ಸಚಿವ ಸ್ಥಾನ ಬೇಡ ಎಂದು ಹೇಳುತ್ತಿದ್ದಾರೆ. ಇದನ್ನು ಅರಿತಿರುವ ನಿರಾಣಿ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಮಾತನಾಡುತ್ತಾರೆ ಅವರನ್ನು ಕೇಳಿ ಅಂತ ಲೇವಡಿ ಮಾಡಿ ಆಕ್ರೋಶ ಹೊರ ಹಾಕಿದರು.

  • ಹರ ಸಮಾವೇಶದ ಜಟಾಪಟಿ ನಂತ್ರ ಸಿಎಂ ಭೇಟಿ ಮಾಡಿದ ಮುರುಗೇಶ್ ನಿರಾಣಿ

    ಹರ ಸಮಾವೇಶದ ಜಟಾಪಟಿ ನಂತ್ರ ಸಿಎಂ ಭೇಟಿ ಮಾಡಿದ ಮುರುಗೇಶ್ ನಿರಾಣಿ

    ಬೆಂಗಳೂರು: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಶಾಸಕ ಮುರುಗೇಶ್ ನಿರಾಣಿ ಇಂದು ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದರು.

    ಕಳೆದ ಮಂಗಳವಾರ ದಾವಣಗೆರೆಯಲ್ಲಿ ನಡೆದ ಹರ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ, ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನಕ್ಕೆ ಆಗ್ರಹಿಸಿದ್ದಕ್ಕೆ ಸಿಎಂ ಯಡಿಯೂರಪ್ಪ ಸಿಟ್ಟು ಮಾಡಿಕೊಂಡಿದ್ದರು. ಆ ಘಟನೆ ನಂತರ ಮೊದಲ ಬಾರಿಗೆ ಇಂದು ಮುರುಗೇಶ್ ನಿರಾಣಿ ಅವರು ಸಿಎಂ ಬಿಎಸ್‍ವೈಯನ್ನು ಭೇಟಿ ಮಾಡಿದರು. ಹರ ಸಮಾವೇಶದಲ್ಲಿ ಮುರುಗೇಶ್ ನಿರಾಣಿ ಮೇಲೂ ಸಿಎಂ ಸಿಟ್ಟಾಗಿದ್ದರು. ಇದೀಗ ಸಿಎಂ ಸಿಟ್ಟು ತಗ್ಗಿದ ಮೇಲೆ ನಿರಾಣಿ ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಎಸ್‍ವೈ – ವೇದಿಕೆ ಮೇಲೆಯೇ ಸ್ವಾಮೀಜಿ ವಿರುದ್ಧ ಕೆಂಡಾಮಂಡಲ

    ಅದಾಗಲೇ ದಾವಣಗೆರೆ ಹರ ಸಮಾವೇಶದಲ್ಲಿ ನಡೆದ ಘಟನೆ ಬಗ್ಗೆ ಸ್ಪಷ್ಟೀಕರಣ ಕೊಟ್ಟು ಕ್ಷಮೆ ಕೇಳಿದ್ದರಿಂದ ಸಿಎಂ ಅವರ ಸಿಟ್ಟು ತಗ್ಗಿತ್ತು. ಹೀಗಾಗಿ ಮುರುಗೇಶ್ ನಿರಾಣಿಯವರ ಜೊತೆ ಸಿಎಂ ಎಂದಿನಂತೆ ಸಹಜವಾಗಿ ಮಾತಾಡಿದರು. ಇದೇವೇಳೆ, ದಾವಣಗೆರೆ ಹರ ಸಮಾವೇಶದಲ್ಲಿ ನಡೆದ ಘಟನೆಗೆ ಮುರುಗೇಶ್ ನಿರಾಣಿ, ಸಿಎಂ ಬಳಿ ಕ್ಷಮೆ ಕೇಳಿದರು ಎನ್ನಲಾಗಿದೆ. ಇದನ್ನೂ ಓದಿ: ವಚನಾನಂದ ಶ್ರೀಗಳ ಬೆಂಬಲಕ್ಕೆ ನಿಂತ ಡಿಕೆಶಿ- ಬಿಎಸ್‍ವೈಗೆ ತಿರುಗೇಟು

    ಬಳಿಕ ಸಚಿವ ಸ್ಥಾನ ಕೊಡಬೇಕು ಎಂದು ಈ ಸಂದರ್ಭದಲ್ಲಿ ಮುರುಗೇಶ್ ನಿರಾಣಿ ನಯವಾಗಿಯೇ ಸಿಎಂ ಎದುರು ಬೇಡಿಕೆ ಇಟ್ಟರು. ಆದರೆ ಮುಖ್ಯಮಂತ್ರಿಗಳು ನಿರಾಣಿಯವರಿಗೆ ಯಾವುದೇ ಭರವಸೆ ಕೊಡದೆ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸುತ್ತೇನೆ ನೋಡೋಣ ಏನಾಗುತ್ತೆ ಅಂತ ಹೇಳಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ‘ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’- ಪ್ರಮಾದಕ್ಕೆ ಕ್ಷಮೆ ಕೇಳಿದ ವಚನಾನಂದಸ್ವಾಮೀಜಿ

  • ಚಿಲ್ಲರೆ ವ್ಯಕ್ತಿ, ಬೀದಿ ನಾಯಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ- ನಿರಾಣಿಗೆ ಯತ್ನಾಳ್ ತಿರುಗೇಟು

    ಚಿಲ್ಲರೆ ವ್ಯಕ್ತಿ, ಬೀದಿ ನಾಯಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ- ನಿರಾಣಿಗೆ ಯತ್ನಾಳ್ ತಿರುಗೇಟು

    – ಬಾಯಿ ಹರಿಬಿಟ್ಟರೆ ಜಾತಕ ಬಿಚ್ಚಿಡುತ್ತೇನೆ
    – ಮೋದಿ ಕಾಲು ಹಿಡಿಯದಂತೆ ಮೊದಲೇ ಹೇಳಿದ್ದಾರೆ

    ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಮನೆ ಬೆಕ್ಕು, ನಾಯಿಯ ಕಾಲು ಹಿಡಿದಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಸೋದರ ಸಂಗಮೇಶ್ ನಿರಾಣಿ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಚಿಲ್ಲರೆ ವ್ಯಕ್ತಿ, ಬೀದಿ ನಾಯಿಗಳ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಅವರು, ನಾನು ರೋಡ್ ಚಾಪ್ (ಬೀದಿ ಬದಿ ಹೋಗುವವರು) ಗಳಿಗೆ ಉತ್ತರ ಕೊಡುವುದಿಲ್ಲ. ಅವರಿವರ ಆಹ್ವಾನ ಸ್ವೀಕರಿಸಲು ನಾನೇನು ರೋಡ್ ಚಾಪ್ ಲೀಡರ್ ಅಲ್ಲ. ಅಲ್ಲದೇ ನಾನು ಬೀದಿ ನಾಯಿಗಳಿಗೆಲ್ಲ ಉತ್ತರ ಕೊಡುವುದಿಲ್ಲ ಎಂದು ಹಿಂದೆಯು ಹೇಳಿದ್ದೆ. ರೋಡ್ ಚಾಪ್‍ಗಳಿಗೆಲ್ಲ ಯತ್ನಾಳ್ ಉತ್ತರ ಕೊಡುತ್ತಾ ಹೋಗಬೇಕಾ? ರೋಡ್ ಚಾಪ್, ಬೀದಿ ನಾಯಿಗಳಿಗೆ ಉತ್ತರ ಕೊಡದಂತೆ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ ಎಂದರು.

    ರಾಜಕಾರಣದಲ್ಲಿ ನನ್ನ ವಿರುದ್ಧ ಬಾಯಿ ಹರಿಬಿಟ್ಟರೇ ನನ್ನ ಬಳಿ ಜಾತಕವಿದ್ದು, ಅವರ ಬಹುದೊಡ್ಡ ಜಾತಕ ಹರಿಬಿಡುತ್ತೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಸರಿ ಎಂದು ಎಚ್ಚರಿಕೆ ನೀಡುತ್ತಿದ್ದು, ಇಂತಹ ಮಾತುಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಣಾಮ ನೆಟ್ಟರಿಗರಲ್ಲ ಎಂದರು.

    ಇದೇ ವೇಳೆ ವಚನಾನಂದ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮೀಜಿಗಳ ಅಸಹಾಯಕತೆ ದುರುಪಯೋಗವಾಗುತ್ತಿದೆ. ಸ್ವಾಮೀಜಿಗಳು ಮತ್ತಷ್ಟು ಸುಧಾರಣೆ ಆಗಬೇಕಿದೆ. ಯೋಗದಿಂದ ಚಿತ್ತವನ್ನು ನಿಯಂತ್ರಣ ಮಾಡಬಹುದು ಎಂಬ ಮಾತಿದೆ. ಯೋಗ ಮಾಡುವವರ ಬಳಿ ಒಂದು ತೇಜಸ್ಸು, ಗಾಂಭೀರ್ಯತೆ ಇರುತ್ತೆ. ಮುಂಜಾನೆ ಒಂದು, ಮಧ್ಯಾಹ್ನ ಒಂದು ಮಾತನಾಡೋರಿಗೆ ಇರಲ್ಲ. ಸರಿಯಾಗಿ ಯೋಗ ಮಾಡಿದರೇ ಮಾತು ಒಂದೇ ಆಗಿರುತ್ತೆ. ಆದರೆ ಶ್ರೀಗಳ ಮೇಲೆ ಯಾರು ಒತ್ತಡ ಹಾಕಲು ಆಗುವುದಿಲ್ಲ ಎಂದರು.

    ಮೋದಿ ಹೇಳಿದ್ದಾರೆ: ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದ್ದು, ಆ ಬಳಿಕ ಎಲ್ಲವೂ ಗೊತ್ತಾಗಲಿದೆ. ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕಿದ ಮೇಲೆ ಏನಾಗುತ್ತದೆ ಗೊತ್ತಾಗಲಿದೆ. ಸಚಿವ ಸಂಪುಟ ವಿಸ್ತರಣೆ ಪ್ರತಿಕ್ರಿಯೆ ಮುಗಿದ ಮೇಲೆ ನಾನು ಈ ಬಗ್ಗೆ ಮಾತನಾಡುತ್ತೇನೆ. ಜೀವನದಲ್ಲಿ ನಾನು ಯಾರ ಕಾಲು ಹಿಡಿದಿಲ್ಲ. ನಮ್ಮ ತಂದೆ-ತಾಯಿ, ಮಠಾಧೀಶರು, ವಾಜಪೇಯಿ ಹಾಗೂ ಅಡ್ವಾನಿ ಅವರನ್ನು ಬಿಟ್ಟು ಬೇರೆಯವರ ಕಾಲು ಹಿಡಿದಿಲ್ಲ. ಪ್ರಧಾನಿ ಮೋದಿ ಅವರು ಮೊದಲೇ ಕಾಲ ಮೇಲೆ ಬೀಳಬೇಡಿ ಎಂದು ಹೇಳಿದ್ದಾರೆ. ನಾನು ಕಾಲು ಹಿಡಿದು ರಾಜಕಾರಣ ಮಾಡಿದ್ದರೆ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ತಿಳಿಸಿದರು. ಇದನ್ನು ಓದಿ: ನಮ್ಮ ಮನೆ ಬೆಕ್ಕು, ನಾಯಿ ಕಾಲು ಹಿಡಿದಿದ್ದ ಯತ್ನಾಳ್: ಸಂಗಮೇಶ್ ನಿರಾಣಿ

    ಸಿಎಂ ಬಿಎಸ್‍ವೈ ಅವರಿಗೆ 50 ವರ್ಷಗಳ ರಾಜಕೀಯ ಅನುಭವವಿದೆ. ಅವರು ಯಾರ ಒತ್ತಡ, ಬ್ಲಾಕ್ ಮೇಲ್‍ಗೂ ಮಣಿಯುವುದಿಲ್ಲ. ಆದರೆ ಕೆಲವರು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆಯಲು ಮುಂದಾಗಿದ್ದಾರೆ. ಈ ಒತ್ತಡ ಆಟ ನಡೆಯುವುದಿಲ್ಲ. ನಾನು ಮತ್ತು ಸಿಎಂ ಬಿಎಸ್ ವೈ ಹೆಚ್ಚು ಜಗಳ ಮಾಡಿದ್ದೇವೆ. ಆದರೆ ನಮ್ಮ ನಡುವೆ ಮಾತುಕತೆ ನಡೆದು ಒಪ್ಪಂದವಾದ ಬಳಿಕ ಎಲ್ಲವೂ ಸರಿಯಾಗಿದೆ. ಅವರಿಗೆ ಯಾರನ್ನು ಮಣ್ಣಲ್ಲಿ ಇಡಬೇಕು, ಯಾರನ್ನು ಮಣ್ಣಿನಿಂದ ಮೇಲಕ್ಕೆ ಎತ್ತಬೇಕೆಂದು ತಿಳಿದಿದೆ. 16 ಖಾತೆಗಳು ಸಿಎಂ ಬಳಿ ಇವೆ, ಎಲ್ಲವನ್ನು ಅವರೊಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಇನ್ನೊಂದು ವಾರದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಅಥವಾ 2-3 ದಿನಗಳಲ್ಲಿಯೂ ಸಂಪುಟ ವಿಸ್ತರಣೆಯಾದರೂ ಅಚ್ಚರಿ ಇಲ್ಲ ಎಂದರು.

  • ನಮ್ಮ ಮನೆ ಬೆಕ್ಕು, ನಾಯಿ ಕಾಲು ಹಿಡಿದಿದ್ದ ಯತ್ನಾಳ್: ಸಂಗಮೇಶ್ ನಿರಾಣಿ

    ನಮ್ಮ ಮನೆ ಬೆಕ್ಕು, ನಾಯಿ ಕಾಲು ಹಿಡಿದಿದ್ದ ಯತ್ನಾಳ್: ಸಂಗಮೇಶ್ ನಿರಾಣಿ

    -ನಮ್ಮ ತಂಟೆಗೆ ಬಂದ್ರೆ ಹುಷಾರ್ ಎಂದ ಸಂಗಮೇಶ್

    ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಮನೆ ಬೆಕ್ಕು, ನಾಯಿಯ ಕಾಲು ಹಿಡಿದಿದ್ದ ಎಂದು ಏಕವಚನದಲ್ಲಿಯೇ ಮಾಜಿ ಸಚಿವ ಮುರುಗೇಶ್ ನಿರಾಣಿ ಸೋದರ ಸಂಗಮೇಶ್ ನಿರಾಣಿ ಗುಡುಗಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಗಮೇಶ್ ನಿರಾಣಿ, ಯತ್ನಾಳ ಒಬ್ಬ ಹರಕುಬಾಯಿ ಮನುಷ್ಯ. ಅಧಿಕಾರ ಇಲ್ಲದಿದ್ದಾಗ ನಮ್ಮ ಮನೆಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಲ್ಲದೆ ನಮ್ಮ ಮನೆಯ ನಾಯಿ, ಬೆಕ್ಕಿನ ಕಾಲು ಹಿಡಿದಿದ್ದ. ಏಕವಚನದಲ್ಲಿ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದಲ್ಲದೆ ಯತ್ನಾಳ ಒಬ್ಬ ಭಸ್ಮಾಸುರ ಎನ್ನುವ ಪದ ಪ್ರಯೋಗ ಮಾಡಿದರು.

    ಅಧಿಕಾರ ಇಲ್ಲದಿದ್ದಾಗ ಅವನಿಗೆ ನಮ್ಮ ಕುಟುಂಬ ಸಹಾಯ ಮಾಡಿದೆ. ಮುರುಗೇಶ್ ನಿರಾಣಿ ಅವರು ಯತ್ನಾಳಗೆ ರಾಜಕೀಯ ಪುನರ್ ಜನ್ಮ ನೀಡಿದ್ದಾರೆ. ಈ ಹಿಂದೆ ಅವನು ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧವೂ ನಾಲಿಗೆ ಹರಿಬಿಟ್ಟಿದ್ದ. ಇದೀಗ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಕ್ಕೆ ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ನಮ್ಮ ತಂಟೆಗೆ ಬಂದರೆ ಹುಷಾರ್ ಎನ್ನುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

    ಯತ್ನಾಳ್ ಎಲ್ಲ ಪಕ್ಷಗಳಲ್ಲೂ ತಿರುಗಾಡಿ ಬಂದಿದ್ದಾರೆ. ಬಿಜೆಪಿ ಮುಖಂಡರ ಬಗ್ಗೆ ನಾಲಿಗೆ ಹರಿಬಿಟ್ಟು, ದೇವೇಗೌಡರಿಗೆ ಜೀ ಹುಜುರ್ ಅಂತಿದ್ರು. ಈಗ ನಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರಿಗೆ ರಾಜಕೀಯ ನೈತಿಕತೆ, ಬದ್ಧತೆ ಯಾವುದು ಇಲ್ಲ ಎಂದು ಸಂಗಮೇಶ್ ನಿರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶಾಸಕ ಮುರುಗೇಶ ನಿರಾಣಿ ಒಡೆತನದ ಕಾರ್ಖನೆಯ ಸಕ್ಕರೆ ಜಪ್ತಿ

    ಶಾಸಕ ಮುರುಗೇಶ ನಿರಾಣಿ ಒಡೆತನದ ಕಾರ್ಖನೆಯ ಸಕ್ಕರೆ ಜಪ್ತಿ

    ಬಾಗಲಕೋಟೆ: ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಬೀಳಗಿ ಶಾಸಕ ಮುರುಗೇಶ್ ನಿರಾಣಿ ಒಡೆತನದ ‘ನಿರಾಣಿ ಶುಗರ್ಸ್’ನ ಸಕ್ಕರೆಯನ್ನು ಜಪ್ತಿ ಮಾಡಲಾಗಿದೆ.

    ಬಾಗಲಕೋಟೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಆದೇಶದಂತೆ ಮುಧೋಳ ತಹಶೀಲ್ದಾರ್, ಎಸ್.ಬಿ ಇಂಗಳೆ ನೇತೃತ್ವದ ಅಧಿಕಾರಿಗಳ ತಂಡ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೊರವಲಯದಲ್ಲಿರುವ ನಿರಾಣಿ ಸಕ್ಕರೆ ಕಾರ್ಖಾನೆಗೆ ತೆರಳಿ ರೈತರಿಗೆ ನೀಡುವ ಬಾಕಿ ಹಣದ ಮೌಲ್ಯದಷ್ಟು ಕಾರ್ಖಾನೆಯ ಗೋದಾಮಿನಲ್ಲಿದ್ದ ಸಕ್ಕರೆ ವಶಕ್ಕೆ ಪಡೆದುಕೊಂಡಿದ್ದಾರೆ. 61 ಕೋಟಿ ರೂ. ಮೌಲ್ಯದ 1,56,575 ಕ್ವಿಂಟಲ್ ಸಕ್ಕರೆಯನ್ನು ಜಪ್ತಿ ಮಾಡಿದ್ದಾರೆ.

    2018-19ನೇ ಸಾಲಿನಲ್ಲಿ 61 ಕೋಟಿ ರೂ. ಬಾಕಿ ಹಣ ಉಳಿಸಿಕೊಂಡಿದ್ದು, ಕಾಲಾವಕಾಶ ನೀಡಿದ್ದರೂ ರೈತರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆ ಕಾರ್ಖಾನೆಯ ಗೋದಾಮಿನಲ್ಲಿದ್ದ ಸಕ್ಕರೆ ಜಪ್ತಿ ಮಾಡಿ, ಗೋದಾಮಿಗೆ ಬೀಗಮುದ್ರೆ ಒತ್ತಲಾಗಿದೆ. ಸಾವರಿನ್ ಶುಗರ್ಸ್, ಜೆಮ್ ಶುಗರ್ಸ್, ನಿರಾಣಿ ಶುಗರ್ಸ್ ಕಾರ್ಖಾನೆಯ ಸಕ್ಕರೆ ಜಪ್ತಿ ಮಾಡುತ್ತಿದ್ದಂತೆ ಎಚ್ಚೆತ್ತ ರಬಕವಿಬನಹಟ್ಟಿ ತಾಲೂಕಿನ ಸಮೀರವಾಡಿ ಗ್ರಾಮದ ಬಳಿಯ ಗೋದಾವರಿ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಉಳಿಸಿಕೊಂಡಿದ್ದ 27.95 ಕೋಟಿ ರೂ. ಹಣವನ್ನು ಪಾವತಿಸಿ ಬಚಾವಾಗಿದ್ದಾರೆ.

    ಇತ್ತೀಚೆಗಷ್ಟೆ ಸಿಎಂ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಲ್ಲಿರುವ ಸಕ್ಕರೆಯನ್ನು ಹರಾಜು ಹಾಕಿಯಾದರೂ ರೈತ ಬಾಕಿ ಹಣವನ್ನು ನೀಡಿ ಎಂದು ಆದೇಶ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಸಕ್ಕರೆ ಜಪ್ತಿ ಮಾಡಿ ಕಾರ್ಖಾನೆಗೆ ಬೀಗ ಮುದ್ರೆ ಜಡಿಯುತ್ತಿದ್ದಾರೆ. ಇದರಿಂದ ಎಚ್ಚತ್ತ ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಕಿ ಹಣವನ್ನು ನೀಡಲು ಮುಂದಾಗಿದ್ದಾರೆ.

  • ‘ಲೋಕಾ’ ಫಲಿತಾಂಶ ಬಂದ 24 ಗಂಟೆಯೊಳಗೆ ಮೈತ್ರಿ ಸರ್ಕಾರ ಪತನ: ನಿರಾಣಿ ಭವಿಷ್ಯ

    ‘ಲೋಕಾ’ ಫಲಿತಾಂಶ ಬಂದ 24 ಗಂಟೆಯೊಳಗೆ ಮೈತ್ರಿ ಸರ್ಕಾರ ಪತನ: ನಿರಾಣಿ ಭವಿಷ್ಯ

    ದಾವಣಗೆರೆ: ಮೇ 23 ರಂದು ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗುತ್ತಾರೆ. ಲೋಕಸಭಾ ಫಲಿತಾಂಶ ಬಂದ 24 ಗಂಟೆಯ ಒಳಗಡೆ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಪಕ್ಷ ಜೆಡಿಎಸ್ ಅವರಿಗೆ ಕೈ ಕೊಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಲೋಕ ಫಲಿತಾಂಶದ ಬಳಿಕ ಮೈತ್ರಿ ಮುರಿಯಲಿದೆ ಎಂದು ಭವಿಷ್ಯ ನುಡಿದರು.

    ಕೆಲವು ಮೈತ್ರಿ ಶಾಸಕರು ಬಿಜೆಪಿ ಸೇರಲಿದ್ದಾರೆ. ಹೀಗಾಗಿ ಆಪರೇಷನ್ ಕಮಲ ಅಗತ್ಯವಿಲ್ಲ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆ. ಬಿಜೆಪಿ ಸರ್ಕಾರ ರಚನೆ ಆಗೋದು ಗ್ಯಾರಂಟಿ, ಎಲ್ಲವನ್ನು ಕಾದು ನೋಡಿ ಎಂದು ಹೇಳಿದರು.