Tag: Murugesh nirani

  • ಮಾಜಿ ಸಚಿವ ಮುರುಗೇಶ್‌ ನಿರಾಣಿ ಪುತ್ರನ ವಿರುದ್ಧ ತನಿಖೆಗೆ ಸುಪ್ರೀಂ ಸೂಚನೆ

    ಮಾಜಿ ಸಚಿವ ಮುರುಗೇಶ್‌ ನಿರಾಣಿ ಪುತ್ರನ ವಿರುದ್ಧ ತನಿಖೆಗೆ ಸುಪ್ರೀಂ ಸೂಚನೆ

    ನವದೆಹಲಿ: ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ಹಾಗೂ ಉದ್ಯಮಿ ವಿಜಯ್ ನಿರಾಣಿ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

    ಕಾನೂನು ಪ್ರಕಾರ ತನಿಖೆ ನಡೆಸುವಂತೆ ಸುಪ್ರೀಂ ಸೂಚಿಸಿದೆ. ತ್ಯಾಜ್ಯ ಘಟಕವೊಂದರಲ್ಲಿ ಸಂಭವಿಸಿದ ಅಪಘಾತದಲ್ಲಿ ಅರು ಮಂದಿ ಮೃತಪಟ್ಟಿದ್ದರು. ಇದೇ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ನಡೆಸದಂತೆ ಕರ್ನಾಟಕ ಹೈಕೋರ್ಟ್ ಎರಡು ವರ್ಷಗಳ ಹಿಂದೆ ಆದೇಶಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದೆ. ನ್ಯಾ. ಸಂಜಯ್ ಕರೋಲ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠದಿಂದ ಆದೇಶ ಹೊರಬಂದಿದೆ.

    ನಿರಾಣಿ ಶುಗರ್ಸ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿದ್ದಾರೆ ವಿಜಯ್ ನಿರಾಣಿ. ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್‌‌ನ ಡಿಸ್ಟಿಲರಿ ಫ್ಯಾಕ್ಟರಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕವೊಂದನ್ನು ಸ್ಥಾಪಿಸಿದ್ದರು. ಆ ಘಟಕಕ್ಕೆ ಅನುಮತಿ ಪಡೆದಿರಲಿಲ್ಲ. ಘಟಕದಲ್ಲಿ 2018ರ ಡಿ. 16ರಂದು ಬಾಯ್ಲರ್ ಸ್ಫೋಟಗೊಂಡಿತ್ತು. ದುರ್ಘಟನೆಯಲ್ಲಿ ಆರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಇಬ್ಬರು ಗಾಯಗೊಂಡಿದ್ದರು.

    ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ವಿಜಯ್ ನಿರಾಣಿಯವರ ವಿರುದ್ಧ 2019ರಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು. ರಾಜ್ಯ ಸರ್ಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿತ್ತು.

  • ಸರ್ಕಾರದ ಷರತ್ತು ಮುರಿದ ನಿರಾಣಿ ಕಂಪನಿ; ಏಕಾಏಕಿ 45 ಕೆಲಸಗಾರರನ್ನು ತೆಗೆದ ಆಡಳಿತ ಮಂಡಳಿ

    ಸರ್ಕಾರದ ಷರತ್ತು ಮುರಿದ ನಿರಾಣಿ ಕಂಪನಿ; ಏಕಾಏಕಿ 45 ಕೆಲಸಗಾರರನ್ನು ತೆಗೆದ ಆಡಳಿತ ಮಂಡಳಿ

    ಮಂಡ್ಯ: ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿ ಪಿಎಸ್‌ಎಸ್‌ಕೆ ಕಂಪನಿ (PSSK Sugar Factory) 45 ನೌಕರರನ್ನು ಏಕಾಏಕಿ ತೆಗೆದು ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಯಲ್ಲಿ ಪಾಂಡವಪುರ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯೂ ಒಂದು‌. ಆದರೆ, ಈ ಕಾರ್ಖಾನೆ ನಷ್ಟದಲ್ಲಿ ಸಿಲುಕಿದೆ ಎಂಬ ಕಾರಣಕ್ಕೆ ಕಳೆದ ಐದು ವರ್ಷಗಳ ಹಿಂದೆ ಮಾಜಿ ಸಚಿವ ಮುರುಗೇಶ್ ನಿರಾಣಿಯವರ ನಿರಾಣಿ ಶುಗರ್ಸ್ ಕಂಪನಿಗೆ 40 ವರ್ಷಗಳ ಗುತ್ತಿಗೆ ನೀಡಲಾಗಿತ್ತು. ಆ ವೇಳೆ ಒಂದಷ್ಟು ಷರತ್ತು ವಿಧಿಸಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಪಿಎಸ್‌ಎಸ್‌ಕೆ ಕಂಪನಿ ನೌಕರರನ್ನ ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದೆಂದು ಒಪ್ಪಂದ ಆಗಿತ್ತು. ಆದರೆ ಈಗ ಸ್ಥಳೀಯ 45 ಮಂದಿ ಕಂಪನಿ ನೌಕರರನ್ನ ಏಕಾಏಕಿ ಕೆಲಸದಿಂದ ತೆಗೆದು ಹಾಕಿ ದಬ್ಬಾಳಿಕೆ ನಡೆಸಿದೆ. ಇದರಿಂದ ಕೆಲಸ ಕಳೆದುಕೊಂಡ ನೌಕರರು ಜೀವನ ಹೇಗಪ್ಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

    45 ಮಂದಿ ನೌಕರರನ್ನ ಕೆಲಸದಿಂದ ತೆಗೆದು ಹಾಕಿರುವುದರಿಂದ ಆ ನೌಕರರ ಕುಟುಂಬವೂ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ವರ್ಷದ ಹಿಂದೆಯೇ ಇದೇ ರೀತಿ ಈ ನೌಕರರನ್ನ ಕೆಲಸದಿಂದ ವಜಾ ಮಾಡಲಾಗಿತ್ತು. ಆಗ ಹೈಕೋರ್ಟ್‌ನ ಮೆಟ್ಟಿಲು ಸಹ ಏರಿದ್ದರು. ಎಲ್ಲ ವಿಚಾರಣೆ ನಡೆಸಿ, ಒಪ್ಪಂದ ಪರಿಶೀಲಿಸಿದ ನ್ಯಾಯಾಲಯ ಕೆಲಸದಿಂದ ತೆಗೆಯದಂತೆ ಸೂಚನೆ ಕೊಟ್ಟಿತ್ತು. ಆದರೆ, ನ್ಯಾಯಾಲಯದ ಆದೇಶವನ್ನೂ ಪರಿಗಣಿಸದೇ ಮುರುಗೇಶ್ ನಿರಾಣಿ ಮಾಲೀಕತ್ವದ ಕಂಪನಿ ಮತ್ತೆ ತನ್ನ ಉದ್ದಟತನ ಪ್ರದರ್ಶಿಸಿದೆ ಎಂದು ಆರೋಪ ಕೇಳಿಬಂದಿದೆ.

    15, 20 ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿದ ನೌಕರರನ್ನ ಏಕಾಏಕಿ ಕೆಲಸದಿಂದ ವಜಾ ಮಾಡಿ ಇದೀಗ ಬೀದಿಗೆ ತಂದು ನಿಲ್ಲಿಸಿದೆ. ಕಾರ್ಖಾನೆಯ ಶೇ.90 ರಷ್ಟು ಸಿಬ್ಬಂದಿ ಹೊರ ರಾಜ್ಯದವರನ್ನೇ ನೇಮಕ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ.

    ಕೆಲಸದಿಂದ ಸ್ಥಳೀಯ ಕಂಪನಿ ನೌಕರರ ವಜಾ ವಿಚಾರ ತಿಳಿಯುತ್ತಿದ್ದಂತೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾರ್ಖಾನೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಒಪ್ಪಂದ ಪತ್ರ, ಕೋರ್ಟ್ ಆದೇಶವನ್ನ ನಿರಾಣಿ ಶುಗರ್ಸ್ ಕಂಪನಿ ವ್ಯವಸ್ಥಾಪಕರಿಗೆ ನೀಡಿ ನೌಕರರನ್ನ ವಾಪಸ್‌ ಕೆಲಸ ಸೇರಿಸಿಕೊಳ್ಳುವಂತೆ ತಾಕೀತು ಮಾಡಿದರು‌. ಆದರೆ, ಕಾರ್ಖಾನೆ ವ್ಯವಸ್ಥಾಪಕರು ಅದಕ್ಕೆ ಮನ್ನಣೆ ನೀಡಿಲ್ಲ ಎನ್ನಲಾಗಿದೆ.

  • ಎಂ.ಬಿ ಪಾಟೀಲ್ ದಾವೋಸ್ ಸಮ್ಮೇಳನಕ್ಕೆ ಹೋಗಬೇಕು: ಮುರುಗೇಶ್ ನಿರಾಣಿ

    ಎಂ.ಬಿ ಪಾಟೀಲ್ ದಾವೋಸ್ ಸಮ್ಮೇಳನಕ್ಕೆ ಹೋಗಬೇಕು: ಮುರುಗೇಶ್ ನಿರಾಣಿ

    ಬೆಂಗಳೂರು: ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ (M.B Patil) ದಾವೋಸ್ ಸಮ್ಮೇಳನಕ್ಕೆ (Davos World Economic Forum 2025) ಹೋಗಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಸಲಹೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಎಂ.ಬಿ ಪಾಟೀಲ್ ಅವರು ದಾವೋಸ್ ಸಮ್ಮೇಳನಕ್ಕೆ ಹೋಗಬೇಕು. ಅವರು ಹೋಗದೇ ಇರೋದು ಸರಿಯಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ನಷ್ಟ ಆಗುತ್ತದೆ. ಕೈಗಾರಿಕೆ ಬಾರದೇ ಹೋದರೆ ಉದ್ಯೋಗ ಸೃಷ್ಟಿ ಆಗೋದಿಲ್ಲ. ಇದರಿಂದ ರಾಜ್ಯಕ್ಕೆ ಬಹಳ ನಷ್ಟ ಆಗಲಿದೆ ಎಂದು ಬೇಸರ ವ್ಯಕ್ತಪಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ, ಆದಷ್ಟು ಬೇಗ ಬಿಜೆಪಿ ಕಿತ್ತಾಟಕ್ಕೆ ಅಂತ್ಯ: ಮುರುಗೇಶ್ ನಿರಾಣಿ

    ಜಗತ್ತಿನ ದೊಡ್ಡ ದೊಡ್ಡ ಕೈಗಾರಿಕೆಗಳು ಅಲ್ಲಿಗೆ ಬಂದಿರುತ್ತವೆ. ಜಗತ್ತಿನಲ್ಲಿ ಯಾವುದೇ ಸಮ್ಮೇಳನ ನಡೆದರೂ ಹೋಗಿ ಕರ್ನಾಟಕದ ಬಗ್ಗೆ ಅಲ್ಲಿ ಮಾಹಿತಿ ಕೊಡಬೇಕು. ನಮ್ಮ ಸರ್ಕಾರ ಇದ್ದಾಗ ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಟಾಪ್ 3ನೇ ಸ್ಥಾನದಲ್ಲಿ ಇತ್ತು. ಇವತ್ತು ರಾಜ್ಯ ಡಬಲ್ ಡಿಜಿಟ್‌ಗೆ ತಲುಪಿದೆ. ಇದಕ್ಕೆ ಕಾಂಗ್ರೆಸ್ ಕಾರಣ. ಸಚಿವರು ಕಾರಣ ಎಂದು ಕಾಂಗ್ರೆಸ್ (Conress) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

  • ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ, ಆದಷ್ಟು ಬೇಗ ಬಿಜೆಪಿ ಕಿತ್ತಾಟಕ್ಕೆ ಅಂತ್ಯ: ಮುರುಗೇಶ್ ನಿರಾಣಿ

    ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ, ಆದಷ್ಟು ಬೇಗ ಬಿಜೆಪಿ ಕಿತ್ತಾಟಕ್ಕೆ ಅಂತ್ಯ: ಮುರುಗೇಶ್ ನಿರಾಣಿ

    ಬೆಂಗಳೂರು: ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಗಲಾಟೆ ಸೇರಿದಂತೆ ಬಿಜೆಪಿಯಲ್ಲಿ ಆಂತರಿಕ ಗೊಂದಲಗಳಿಗೆ 8-10 ದಿನಗಳಲ್ಲಿ ಪರಿಹಾರ ಸಿಗಲಿದೆ ಎಂದು ಮಾಜಿ ಸಚಿವ ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

    ಶ್ರೀರಾಮುಲು-ಜನಾರ್ದನ ರೆಡ್ಡಿ ಮತ್ತು ಯತ್ನಾಳ್-ವಿಜಯೇಂದ್ರ ಕಿತ್ತಾಟ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಗೊಂದಲ, ಅಸಮಾಧಾನ ಆಗ್ತಿರೋದು ಸತ್ಯ. ಬೆಂಕಿ ಇಲ್ಲದೆ ಹೊಗೆ ಆಡೊಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇವೆ. ಎಲ್ಲವನ್ನು ಹೈಕಮಾಂಡ್ ಸರಿ ಮಾಡುತ್ತಾರೆ. ಶ್ರೀರಾಮುಲು ಮಾತಾಡಿರೋದು ನೋಡಿದ್ದೇನೆ. ಅವರನ್ನ ಹೈಕಮಾಂಡ್ ಕರೆದಿದೆ. ಅವರ ಜೊತೆ ‌ಮಾತಾಡ್ತಾರೆ. ರಾಮುಲು ಪಕ್ಷ ಬಿಟ್ಟು ಹೋಗೊಲ್ಲ. ರಾಮುಲು ವಾಲ್ಮೀಕಿ ಸಮುದಾಯದ ನಾಯಕ. ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ರಾಮುಲು ಪಕ್ಷ ಬಿಟ್ಟು ಹೋಗೊಲ್ಲ. 8-10 ದಿನಗಳಲ್ಲಿ ಎಲ್ಲಾ ಗೊಂದಲ ನಿವಾರಣೆ ಆಗುತ್ತದೆ ಎಂದು ಹೇಳಿದರು.

    ಯತ್ನಾಳ್ ಟೀಂ ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೂ ಕೂಡಾ ಉಚ್ಚಾಟನೆ ಆಗಬಾರದು. ಮನುಷ್ಯ ಎಂದ ಮೇಲೆ ತಪ್ಪು ಆಗೋದು ಸಹಜ. ಯತ್ನಾಳ್ ಕೂಡಾ ಮಂತ್ರಿ ಆಗಿದ್ದವರು. ಅನೇಕ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರು. ವಿಜಯೇಂದ್ರ ಕಿರು ವಯಸ್ಸಿನಲ್ಲಿ ಅಧ್ಯಕ್ಷ ಆಗಿರೋದಕ್ಕೆ ವಿರೋಧ ಇರಬಹುದು. ಹೈಕಮಾಂಡ್ ಎಲ್ಲವನ್ನು ಅಳೆದು ತೂಗಿ ಅಧ್ಯಕ್ಷ ಮಾಡಿದ್ದಾರೆ. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಪರಿಹಾರ ಮಾಡುತ್ತದೆ ಎಂದರು.

    ನಮ್ಮ ಬಿಜೆಪಿಯಲ್ಲಿ ಒಂದು ಸಾರಿ ಅಧ್ಯಕ್ಷ ಆದರೆ 3 ವರ್ಷ ಇರುತ್ತದೆ‌. ಅದು ಬದಲಾವಣೆ ಆಗೋದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಹೈಕಮಾಂಡ್ ಬಹಳ ಸ್ಟ್ರಾಂಗ್ ಇದೆ. ರಮೇಶ್ ಜಾರಕಿಹೊಳಿ ಒಳ್ಳೆ ನಾಯಕ. ಅವರನ್ನು ಹೈಕಮಾಂಡ್ ನಾಯಕರು ಕರೆದು ಮಾತಾಡ್ತಾರೆ. ಯತ್ನಾಳ್ ಎತ್ತಿ ಕಟ್ಟಿರೋದು ಸಂತೋಷ್ ಜೀ ಅನ್ನೋದು ಸುಳ್ಳು. ಇದರಲ್ಲಿ ಸಂಘ ಪರಿವಾರ ಬರೋದಿಲ್ಲ. ಯತ್ನಾಳ್‌ಗೆ ನಾನು ಸಲಹೆ ಕೊಡುವಷ್ಟು ದೊಡ್ಡವನು ಅಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಬಿಜೆಪಿಯಲ್ಲಿನ ಗೊಂದಲವನ್ನು ಹೈಕಮಾಂಡ್ ನಿವಾರಣೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • 3 ವರ್ಷದ ನಿರಾಣಿ ಮೊಮ್ಮಗನಿಂದ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌!

    3 ವರ್ಷದ ನಿರಾಣಿ ಮೊಮ್ಮಗನಿಂದ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌!

    ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ಮೊಮ್ಮಗ ಸಮರ್ಥ ವಿಜಯ್ ನಿರಾಣಿ (Samarth Vijay Nirani) 3 ವರ್ಷ 1 ತಿಂಗಳಲ್ಲಿ ಗಾಲ್ಪ್ ಕಾರ್ಟ್ ಓಡಿಸಿ‌ ಇಂಡಿಯಾ ಬುಕ್ ಆಫ್‌ ರೆಕಾರ್ಡ್ (India Book Of Record), ಏಷ್ಯಾ ಬುಕ್ ಆಫ್‌ ರೆಕಾರ್ಡ್ (Asia book Of Record) ಬರೆದಿದ್ದಾನೆ‌.

    ಸಮರ್ಥ ಚಿಕ್ಕಂದಿನಿಂದಲೂ ಎಲೆಕ್ಟ್ರಿಕ್ ಕಾರುಗಳನ್ನು (Electric Car) ಓಡಿಸುತ್ತಿದ್ದ. ಒಂದು ದಿನ ಕಾರ್ಖಾನೆ ವೀಕ್ಷಣೆ ಮಾಡುವುದಕ್ಕೆ ಈಗ ಇರುವ ಗಾಲ್ಪ್ ಕಾರ್ಟ್ (Golf Cart) ಓಡಿಸುತ್ತೇನೆ ಎಂದು ಹಠ ಮಾಡಿದಾಗ ಈತನಿಗೆ ಒಮ್ಮೆ ಕಾರ್ಟ್ ಓಡಿಸುವ ಬಗ್ಗೆ ಮನೆಯವರು ಮಾಹಿತಿ ನೀಡಿದ್ದರು.

    ಒಂದು ಸಾರಿ ನೋಡಿ ತಿಳಿದುಕೊಂಡ ಸಮರ್ಥ ಮೂರು ವರ್ಷ ಹತ್ತು ತಿಂಗಳಲ್ಲೇ ಗಾಲ್ಪ್ ಕಾರ್ಟ್ ವಾಹನ ಓಡಿಸಿ ಮನೆಯವರಿಗೆ ಅಚ್ಚರಿ ಮೂಡಿಸಿದ್ದ. ತಾನೊಬ್ಬನೇ ಅಲ್ಲದೇ ತಂದೆ ವಿಜಯ್, ತಾಯಿ ಸುಶ್ಮಿತಾ, ಅಜ್ಜಿ ಕಮಲಾ ನಿರಾಣಿ ಸೇರಿದಂತೆ ಎಲ್ಲಾ ಕುಟುಂಬಸ್ಥರನ್ನು ಕೂರಿಸಿಕೊಂಡು ಗಾಲ್ಪ್ ಕಾರ್ಟ್ ಓಡಿಸಿದ್ದ.  ಇದನ್ನೂ ಓದಿ: ಹಾಸನಾಂಬೆ ಹುಂಡಿ ಎಣಿಕೆ – 9 ದಿನದಲ್ಲಿ 12.63 ಕೋಟಿ ಹಣ ಸಂಗ್ರಹ

    ಸಮರ್ಥನ ಪ್ರತಿಭೆಯನ್ನು ನೋಡಿ ಮುರುಗೇಶ್ ನಿರಾಣಿ, ಅವರ ಮಗ ವಿಜಯ್ ಹಾಗೂ ಪತ್ನಿ ಸುಶ್ಮಿತಾ ಅವರು ಇಂಡಿಯಾ ಬುಕ್ ಆಫ್‌ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್‌ ರೆಕಾರ್ಡ್ ಸಂಸ್ಥೆಗೆ ವಿಡಿಯೋ ಮಾಡಿ‌ ಕಳುಹಿಸಿದ್ದರು.

    ವಿಡಿಯೋ ಗಮನಿಸಿ ಮುಧೋಳ‌ ನಗರಕ್ಕೆ ಬಂದ ಇಂಡಿಯಾ, ಏಷಿಯಾ ಬುಕ್ ಆಫ್‌ ರೆಕಾರ್ಡ್ ಜಡ್ಜ್‌ಗಳು ಸ್ಥಳದಲ್ಲಿ ಪರೀಕ್ಷೆ ‌ಮಾಡಿದ್ದಾರೆ. ಬಾಲಕ ಸಮರ್ಥನ ಚಾಲನೆ ಕಂಡು ಇಂಡಿಯಾ ಬುಕ್ ಆಫ್‌ ರೆಕಾರ್ಡ್, ಏಷ್ಯಾ ಬುಕ್ ಆಫ್‌ ರೆಕಾರ್ಡ್ ಪ್ರಶಸ್ತಿ ಪದ‌ಕ‌ ನೀಡಿ ಗೌರವಿಸಿದ್ದಾರೆ.

    ಸಮರ್ಥ ಕೇವಲ ಎರಡು ವರ್ಷದವನಿದ್ದಾಗಲೂ 22 ಸಂಸ್ಕೃತ ಶ್ಲೋಕ ಹೇಳಿ ಸುದ್ದಿಯಾಗಿದ್ದ. ಲಿಮ್ಕಾ ಹಾಗೂ ಗಿನ್ನಿಸ್ ದಾಖಲೆಗೂ ಅರ್ಜಿ ಸಲ್ಲಿಸಿದ್ದು ಅಲ್ಲೂ ಕೂಡ ದಾಖಲೆ ಬರೆಯುತ್ತಾನೆ ಎಂಬ ವಿಶ್ವಾಸದಲ್ಲಿ ಸಮರ್ಥನ ಪೋಷಕರಿದ್ದಾರೆ.

  • ಮುಸ್ಲಿಮರಿಗಾಗಿಯೇ ಜಾರಿಗೆ ತಂದ 1974ರ ಕಾಯ್ದೆ ರದ್ದಾಗಬೇಕು: ನಿರಾಣಿ

    ಮುಸ್ಲಿಮರಿಗಾಗಿಯೇ ಜಾರಿಗೆ ತಂದ 1974ರ ಕಾಯ್ದೆ ರದ್ದಾಗಬೇಕು: ನಿರಾಣಿ

    ಬೆಳಗಾವಿ: 1974 ರಲ್ಲಿ ಜಾರಿಗೆ ತಂದಿರುವ ವಕ್ಫ್ ಕಾನೂನು (Waqf Law) ಮುಸ್ಲಿಮರಿಗೆ (Muslims) ಹೇಳಿ ಮಾಡಿಸಿದ ಕಾಯ್ದೆಯಾಗಿದೆ. ಇದನ್ನು ತಕ್ಷಣವೇ ರದ್ದು ಮಾಡಬೇಕೆಂದು ಬೆಳಗಾವಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ (Murugesh Nirani) ಆಗ್ರಹಿಸಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕಾನೂನು ಜಾರಿಯಾದ 50 ವರ್ಷದ ನಂತರ ರೈತರ ಭೂಮಿಯನ್ನು ಕಬಳಿಕೆ ಮಾಡಲಾಗುತ್ತಿದೆ. ವಕ್ಫ್ ಬೋರ್ಡ್ (Waqf Board) ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿದೆ. ಪಹಣಿ ಪತ್ರದ 9 ಹಾಗೂ 11 ನೇ ಕಾಲಂ ತಕ್ಷಣವೇ ರದ್ದು ಮಾಡಬೇಕು ಎಂದರು. ಇದನ್ನೂ ಓದಿ: Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ ‘ವಕ್ಫ್’ ಆಸ್ತಿ

     

    ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದು ಆಗಿದೆ‌. ಪಹಣಿ ಪತ್ರದಲ್ಲಿ ಬೇರೆಯವರ ಹೆಸರು ಬರದಂತೆ ರೈತರು ನೋಡಿಕೊಳ್ಳಬೇಕು ಮಾಡಬೇಕು.ಇಡೀ ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವಕ್ಫ್ ಬೋರ್ಡ್‌ನವರು ಮುಂದೆ ವಿಧಾನಸೌಧ, ಪಾರ್ಲಿಮೆಂಟ್, ಮಠಗಳು ನಮ್ಮದೇ ಎನ್ನುತ್ತಾರೆ ಎಂದರು.

    ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಸಚಿವ ಜಮೀರ್ ಅಹ್ಮದ್ ಭೂಕಬಳಿಕೆ ಮಾಡ್ತಿದ್ದಾರೆ. ಸಿಎಂ ಆದೇಶದ ಮೇರೆಗೆ ಈ ರೀತಿ ಮಾಡಲಾಗ್ತಿದೆ ಎಂದು ಸ್ವತಃ ಜಮೀರ್ ಹೇಳಿದ್ದಾರೆ. ವಕ್ಫ್ ಬೋರ್ಡ್‌ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹಿಂದೂಗಳ ಆಸ್ತಿ ಉಳಿಸಲು ಕೇಂದ್ರ ಕ್ರಮ ‌ವಹಿಸಿದೆ ಎಂದು ನಿರಾಣಿ ಹೇಳಿದರು‌.

     

  • ಶೀಘ್ರವೇ ಗೃಹಲಕ್ಷ್ಮಿ ಹಣ, ಯೋಜನೆ ನಿಲ್ಲುವ ಮಾತೇ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌

    ಶೀಘ್ರವೇ ಗೃಹಲಕ್ಷ್ಮಿ ಹಣ, ಯೋಜನೆ ನಿಲ್ಲುವ ಮಾತೇ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌

    ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme)ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ನಿರಂತರ ಪ್ರಕ್ರಿಯೆ ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು (Guarantee Scheme) ನಿಲ್ಲಿಸುವ ಮಾತೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.  ಇದನ್ನೂ ಓದಿ: ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿ: ಎಜಿಗೆ ಟಿ ಜೆ ಅಬ್ರಹಾಂ ದೂರು

    ಪಂಚಮಸಾಲಿ ಸಮುದಾಯಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ಕೊಡುಗೆ ಏನು ಎಂದು ಸಚಿವರು ಪ್ರಶ್ನಿಸಿದ ಹೆಬ್ಬಾಳ್ಕರ್‌ ನಾನು ಎಂದಿಗೂ ಪಂಚಮಸಾಲಿ ಮೀಸಲಾತಿ ಪರವಾಗಿದ್ದೇನೆ. 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.

    ಮುರುಗೇಶ್ ನಿರಾಣಿ ಅವರು ಅಧಿಕಾರದಲ್ಲಿದ್ದಾಗ ಸಮುದಾಯದ ಬಗ್ಗೆ ಯೋಚಿಸಲಿಲ್ಲ. ಈಗ ಸುಖಾಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಸಮಾಜಕ್ಕೆ ಯಾವುದೇ ತೊಂದರೆಯಾಗದಂತೆ ಮೀಸಲಾತಿ ನೀಡಲಿ ಎಂಬುದೇ ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.

    ಬೆಳಗಾವಿ ಜಿಲ್ಲೆಯನ್ನು ಮೂರು ವಿಭಾಗಗಳನ್ನಾಗಿ ಮಾಡಬಹುದು. ಜಿಲ್ಲೆ ವಿಭಜನೆಗೊಂಡರೆ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬಹುದು. ದಸರಾ ಹಬ್ಬ ಮುಕ್ತಾಯಗೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದರು.

     

  • ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಮಾತೃ ವಿಯೋಗ

    ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಮಾತೃ ವಿಯೋಗ

    ಬಾಗಲಕೋಟೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ತಾಯಿ ವಿಧಿವಶರಾಗಿದ್ದಾರೆ.

    ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸುಶಿಲಾಬಾಯಿ (78)ಯವರು (Sushila Bai) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

    ಸುಶಿಲಾಬಾಯಿ ಅವರು ಕಳೆದ 10 ದಿನಗಳಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದರು. ಇದೀಗ ಇವರು ಪತಿ‌ ರುದ್ರಪ್ಪ ನಿರಾಣಿ, ಐವರು ಗಂಡುಮಕ್ಕಳು, ಇಬ್ಬರು ಹೆಣ್ಣು‌ಮಕ್ಕಳು, ಐವರು ಸೊಸೆಯಂದಿರು ಹಾಗೂ 14 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹೋದರಿ ನಿಧನ

    ಸುಶಿಲಾಬಾಯಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಸವಹಂಚಿನಾಳ ಗ್ರಾಮದಲ್ಲಿ‌ ‌ನೆಲೆಸಿದ್ದರು. ಮಂಗಳವಾರ ಮದ್ಯಾಹ್ನ 1 ಗಂಟೆಗೆ ಸ್ವಗ್ರಾಮ ಬಸವಹಂಚಿನಾಳ‌ದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೃಷಿಪ್ರಧಾನ ಕುಟುಂಬದ ನಿರಾಣಿ ಪರಿವಾರದ ಮನೆಯೊಡತಿಯಾಗಿದ್ದ ಸುಶಿಲಾಬಾಯಿ ಅವರ ಅಗಲಿಕೆಯಿಂದ ನಿರಾಣಿ ಅವರ ಅಪಾರ ಬಂಧು ಬಳಗ ದುಃಖದಲ್ಲಿ‌ ಮುಳುಗಿದೆ.

  • ಬಿಜೆಪಿ ರಾಜ್ಯ ಘಟಕಕ್ಕೆ 10 ಉಪಾಧ್ಯಕ್ಷರು; ಪದಾಧಿಕಾರಿಗಳ ತಂಡ ಪುನಾರಚನೆ – ಯಾರಿಗೆ ಯಾವ ಸ್ಥಾನ?

    ಬಿಜೆಪಿ ರಾಜ್ಯ ಘಟಕಕ್ಕೆ 10 ಉಪಾಧ್ಯಕ್ಷರು; ಪದಾಧಿಕಾರಿಗಳ ತಂಡ ಪುನಾರಚನೆ – ಯಾರಿಗೆ ಯಾವ ಸ್ಥಾನ?

    – ಬಿ.ಎಲ್‌.ಸಂತೋಷ್‌ ಬಣಕ್ಕೆ ಕೊಕ್‌; ವಿಜಯೇಂದ್ರ ಪಟ್ಟಿಗೆ ಗ್ರೀನ್‌ ಸಿಗ್ನಲ್‌
    – ವಿ.ಸೋಮಣ್ಣಗೆ ಇಲ್ಲ ಯಾವುದೇ ಸ್ಥಾನ

    ಬೆಂಗಳೂರು: ಬಿಜೆಪಿ (BJP) ರಾಜ್ಯ ಘಟಕದ ಪದಾಧಿಕಾರಿಗಳ ತಂಡ ಪುನಾರಚನೆ ಮಾಡಲಾಗಿದೆ. ಹೊಸದಾಗಿ 10 ಮಂದಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯ ಬಿಜೆಪಿ ಪದಾಧಿಕಾರಿಗಳ ಘಟಕ ಪುನಾರಚಿಸಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ಆದೇಶ ಹೊರಡಿಸಿದ್ದಾರೆ.

    ಹೊಸದಾಗಿ 10 ಜನ ರಾಜ್ಯ ಉಪಾಧ್ಯಕ್ಷರು, 4 ಮಂದಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಜನ ರಾಜ್ಯ ಕಾರ್ಯದರ್ಶಿಗಳು, ಒಬ್ಬರು ಖಜಾಂಚಿ ನೇಮಕಗೊಂಡಿದ್ದಾರೆ. 7 ಮೋರ್ಚಾಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ಹಾಗಾದ್ರೆ, ಯಾವ ಸ್ಥಾನಕ್ಕೆ ಯಾರ‍್ಯಾರು ಎಂಬ ವಿವರ ಇಲ್ಲಿದೆ. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಸರ್ಕಾರದ ಆದೇಶ 2, 3 ದಿನದಲ್ಲಿ ಹೊರಬೀಳುತ್ತೆ: ಹೆಚ್.ಕೆ. ಪಾಟೀಲ್

    ರಾಜ್ಯ ಬಿಜೆಪಿ ಉಪಾಧ್ಯಕ್ಷರು
    ಮುರುಗೇಶ್ ನಿರಾಣಿ
    ಬೈರತಿ ಬಸವರಾಜು
    ರಾಜೂಗೌಡ ನಾಯಕ್
    ಎನ್.ಮಹೇಶ್
    ಅನಿಲ್ ಬೆನಕೆ
    ಹರತಾಳು ಹಾಲಪ್ಪ
    ರೂಪಾಲಿ ನಾಯಕ್
    ಬಸವರಾಜ ಕೇಲಗಾರ
    ಮಾಳವಿಕಾ ಅವಿನಾಶ್
    ಎಂ.ರಾಜೇಂದ್ರ

    ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು
    ಸುನೀಲ್ ಕುಮಾರ್
    ಪಿ.ರಾಜೀವ್
    ನಂದೀಶ್ ರೆಡ್ಡಿ ಪ್ರೀತಂ ಗೌಡ

    ರಾಜ್ಯ ಬಿಜೆಪಿ ಕಾರ್ಯದರ್ಶಿಗಳು
    ಶೈಲೇಂದ್ರ ಬೆಲ್ದಾಳೆ
    ಡಿ.ಎಸ್.ಅರುಣ್
    ಬಸವರಾಜ ಮತ್ತಿಮಾಡ್
    ಸಿ.ಮುನಿರಾಜು
    ವಿನಯ್ ಬಿದರೆ
    ಕ್ಯಾಪ್ಟನ್ ಬ್ರಿಜೇಶ್ ಚೌಟ
    ಶರಣು ತಳ್ಳಿಕೇರಿ
    ಲಲಿತಾ ಅನಾಪುರ
    ಲಕ್ಷ್ಮಿ ಅನಾಪುರ
    ಅಂಬಿಕಾ ಹುಲಿನಾಯ್ಕರ್

    ರಾಜ್ಯ ಬಿಜೆಪಿ ಖಜಾಂಚಿ
    ಸುಬ್ಬ ನರಸಿಂಹ

    ಮೋರ್ಚಾಗಳಿಗೆ ಅಧ್ಯಕ್ಷರ ನೇಮಕ
    ಮಹಿಳಾ ಮೋರ್ಚಾ – ಸಿ ಮಂಜುಳಾ
    ಎಸ್‌ಸಿ ಮೋರ್ಚಾ – ಶಾಸಕ ಸಿಮೆಂಟ್ ಮಂಜು
    ಹಿಂದುಳಿದ ವರ್ಗಗಳ ಮೋರ್ಚಾ – ರಘು ಕೌಟಿಲ್ಯ
    ರೈತ ಮೋರ್ಚಾ – ಎ.ಎಸ್.ಪಾಟೀಲ್ ನಡಹಳ್ಳಿ
    ಎಸ್‌ಟಿ ಮೋರ್ಚಾ – ಬಂಗಾರು ಹನುಮಂತು
    ಯುವ ಮೋರ್ಚಾ – ಶಾಸಕ ಧೀರಜ್ ಮುನಿರಾಜು
    ಅಲ್ಪಸಂಖ್ಯಾತರ ಮೋರ್ಚಾ – ಅನಿಲ್ ಥಾಮಸ್

    ಪದಾಧಿಕಾರಿಗಳ ಪಟ್ಟಿಯಲ್ಲಿ ಬಿ.ಎಲ್.ಸಂತೋಷ್ ಬಣಕ್ಕೆ ಹೈಕಮಾಂಡ್‌ ಗೇಟ್‌ಪಾಸ್‌ ಕೊಟ್ಟಿದೆ. ಬಹುತೇಕ ವಿಜಯೇಂದ್ರ ತೆಗೆದುಕೊಂಡು ಹೋಗಿದ್ದ ಪದಾಧಿಕಾರಿಗಳ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಪುತ್ರ ಅರುಣ್ ಸೋಮಣ್ಣಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಸೋಮಣ್ಣ ಮಾಡಿಕೊಂಡಿದ್ದ ಮನವಿಗೆ ಹೈಕಮಾಂಡ್ ಹೈಕಮಾಂಡ್‌ ಸೊಪ್ಪು ಹಾಕಿಲ್ಲ. ಅರುಣ್ ಸೋಮಣ್ಣ ಸದ್ಯ ತುಮಕೂರು ಜಿಲ್ಲಾ ಉಪಾಧ್ಯಕ್ಷ ಆಗಿದ್ದಾರೆ. ಜಿಲ್ಲಾ ಬಿಜೆಪಿ ಘಟಕಗಳ ಪುನಾರಚನೆ ವೇಳೆ ಅರುಣ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಕುಮಾರಸ್ವಾಮಿ ಪಕ್ಷ ಉಳಿಸಿಕೊಳ್ಳಲು ಹೇಳಿಕೆ ನೀಡುತ್ತಿದ್ದಾರೆ ಡಿ.ಕೆ.ಸುರೇಶ್

  • ಕೆಲವು ಹಂದಿ, ನಾಯಿಗಳನ್ನು ವಿಜಯೇಂದ್ರ ಬಿಟ್ಟಿದ್ದಾನೆ: ಯತ್ನಾಳ್‌ ಆರೋಪ

    ಕೆಲವು ಹಂದಿ, ನಾಯಿಗಳನ್ನು ವಿಜಯೇಂದ್ರ ಬಿಟ್ಟಿದ್ದಾನೆ: ಯತ್ನಾಳ್‌ ಆರೋಪ

    ವಿಜಯಪುರ: ನನ್ನ ವಿರುದ್ಧ ಮಾತನಾಡಲೆಂದೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಕೆಲವು ಹಂದಿ ಹಾಗೂ ಬೀದಿನಾಯಿಗಳನ್ನು ಬಿಟ್ಟಿದ್ದಾನೆ ಎಂದು ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್ (Basanagouda Patil Yatnal)  ಗಂಭೀರ ಆರೋಪ ಮಾಡಿದ್ದಾರೆ.

    ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಕೆಲವು ಹಂದಿ, ಬೀದಿನಾಯಿಗಳು ಬೊಗಳುತ್ತಿರುತ್ತವೆ. ಈ ಹಂದಿ, ಬೀದಿ ನಾಯಿಗಳ ಬಗ್ಗೆ ಕೇಳಬೇಡಿ. ಅದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್​ ನಿರಾಣಿಗೆ (Murugesh Nirani) ಛಾಟಿ ಬೀಸಿದ್ದಾರೆ.

    ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಮೈಸೂರು ಮಹಾರಾಜರ ಹೆಸರು ಇಡಬೇಕು. ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಮೈಸೂರು ಅಭಿವೃದ್ಧಿಯಾಗಿದೆ. ಏಷ್ಯಾದಲ್ಲಿ ಮೊದಲು ವಿದ್ಯುತ್ ಆಗಿದ್ದು ಜಯಚಾಮರಾಜೇಂದ್ರ ಒಡೆಯರ್ ಸಮಯದಲ್ಲಿ ಎಂದು ಹೇಳಿದರು.

    ಉತ್ತರ ಕರ್ನಾಟಕ ಯಾಕೆ ಅಭಿವೃದ್ಧಿ ಆಗಲಿಲ್ಲ ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಆದಿಲ್‍ಶಾಹಿ, ನಿಜಾಮ್ ಶಾಹಿಗಳಿಂದ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದರು. ಇದನ್ನೂ ಓದಿ: ಮೈಸೂರು ವಿಮಾನ ನಿಲ್ದಾಣಕ್ಕೆ ಮಹಾರಾಜರ ಹೆಸರಿಡಬೇಕು: ಯತ್ನಾಳ್