Tag: Muruga Shree

  • ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾಶ್ರೀಗೆ ಬಿಡುಗಡೆ ಭಾಗ್ಯ – ಬೆಂಬಲಿಗರಿಂದ ಸಂಭ್ರಮಾಚರಣೆ

    ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾಶ್ರೀಗೆ ಬಿಡುಗಡೆ ಭಾಗ್ಯ – ಬೆಂಬಲಿಗರಿಂದ ಸಂಭ್ರಮಾಚರಣೆ

    ಚಿತ್ರದುರ್ಗ: ಪೋಕ್ಸೊ ಕೇಸ್‌ನಲ್ಲಿ (POCSO Case) ನ್ಯಾಯಾಂಗ ಬಂಧನದಲ್ಲಿದ್ದ ಚಿತ್ರದುರ್ಗದ ಮುರುಘಾಶ್ರೀ (Muruga Shree) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆ ಜೈಲು ಆವರಣದಲ್ಲಿ ಮುರುಘಾಶ್ರೀ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ.

    ಜೈಲಿನಿಂದ ಬಿಡುಗಡೆಯಾದ ಮುರುಘಾಶ್ರೀ ಸ್ವಾಗತಿಸಲು ಮುರುಘಾ ಮಠದ ಉಸ್ತುವಾರಿಯಾಗಿದ್ದ ಬಸವ ಪ್ರಭು ಶ್ರೀ ಮತ್ತು ಉತ್ತರಾಧಿಕಾರಿ ಬಸವಾದಿತ್ಯ ಜೈಲಿಗೆ ಧಾವಿಸಿದ್ದರು. ಬಿಡುಗಡೆಯಾದ ಮುರುಘಾಶ್ರೀ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಅಲ್ಲದೇ ಅವರ ಬೆಂಬಲಿಗರು ಹೂವಿನಹಾರ ಹಾಕುವ ಮೂಲಕ ಜಯಘೋಷ ಕೂಗಿದರು. ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗುನಗುತ್ತಾ ಮುರುಘಾಶ್ರೀ ನಗುನಗುತ್ತಾ ತೆರಳಿದರು. ಮುರುಘಾ ಮಠದ ಮುಂದೆ ಸಾಗುತ್ತಾ ರಸ್ತೆ ಬದಿ ನಿಂತಿದ್ದ ಜನರತ್ತ ಮುರುಘಾಶ್ರೀ ಕೈ ಬೀಸಿದರು.ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಆತಂಕ ಬೇಡ – ಅನಾರೋಗ್ಯದ ಬಗ್ಗೆ ರತನ್ ಟಾಟಾ ಸ್ಪಷ್ಟನೆ

    ಈ ವೇಳೆ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮುರುಘಾಶ್ರೀ, ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ. ಶರಣಸಂಸ್ಕ್ರತಿ ಉತ್ಸವದ ಸಂಭ್ರಮಾಚರಣೆ ವೇಳೆ ಬಿಡುಗಡೆಯಾಗಿರುವ ಕುರಿತು ನಾವು ಯೋಚಿಸಿ ಹೆಜ್ಜೆಇಡುತ್ತೇವೆ. ಈಗ ಮಾತನಾಡಲು ಸಕಾಲವಲ್ಲ. ಮೌನವಹಿಸುವ ಕಾಲ ಎಂದಷ್ಟೇ ಹೇಳುತ್ತೇವೆ ಎಂದರು.

    ಏನಿದು ಪ್ರಕರಣ:
    ಚಿತ್ರದುರ್ಗದ (Chitradurga) ಮುರುಘಾಶ್ರೀ ವಿರುದ್ಧ 2022ರ ಆ.26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದ್ದು, ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಂದ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು.ಇದನ್ನೂ ಓದಿ: ಬಸ್‌ಗೆ ಬೈಕ್ ಅಡ್ಡಬಂದಿದ್ದಕ್ಕೆ ಡ್ರೈವರ್, ನಿರ್ವಾಹಕನ ಜೊತೆ ಬೈಕ್ ಸವಾರನ ಹೊಡೆದಾಟ

    ಅದೇ ವರ್ಷ ಆ.27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿದ್ದು, 2022ರ ಸೆ.01 ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ ಬಂಧನಕ್ಕೊಳಗಾಗಿದ್ದರು. ಬಳಿಕ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾಶ್ರೀ ವಿರುದ್ಧ 2022ರ ಅ.13 ರಂದು ಮಠದ ಅಡುಗೆ ಸಹಾಯಕಿಯಿಂದ ಮತ್ತೊಂದು ದೂರು ದಾಖಲಾಗಿತ್ತು. ಆ ಕೇಸಲ್ಲಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಎಂದು ಕೂಡ ಉಲ್ಲೇಖಿಸಿದ್ದರು

    ಈ ವೇಳೆ ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ದ ಕೇಸ್ ದಾಖಲಾಗಿದ್ದು, ಸಂಪೂರ್ಣ ತನಿಖೆ ನಡೆಸಿದ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಹಾಗೂ ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡವು 2022ರ ಅ.27 ರಂದು 694 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಅದರಲ್ಲಿ 347 ಪುಟಗಳ ಎ ಮತ್ತು ಬಿ ಎಂದು ಎರಡು ಸೆಟ್ ಚಾರ್ಜ್ ಶೀಟ್ ಸಲ್ಲಿಸಿದ್ದರು.

    ಇನ್ನೂ 2023ರ ಜ.10ಕ್ಕೆ ದಾಖಲಾದ 2ನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 761 ಪುಟಗಳ ಚಾರ್ಜ್‌ಶೀಟ್‌ನ್ನು ಸಲ್ಲಿಸಿದ್ದರು. ಇಷ್ಟೆಲ್ಲ ಸಾಕ್ಷ್ಯಾಧಾರ ಹಾಗೂ ಚಾರ್ಜ್‌ಶೀಟ್‌ ಮೇಲೆ ಚಿತ್ರದುರ್ಗ ನ್ಯಾಯಾಲಯ ವಿಚಾರಣೆ ನಡೆಸಿತ್ತು. ವಿಚಾರಣೆ ನಡಯುವಾಗಲೇ 2023ರ ನ.8 ರಂದು ಹೈಕೋರ್ಟ್ ನಿಂದ ಮುರುಘಾಶ್ರೀಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ನ.16ರಿಂದು ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದರು.ಇದನ್ನೂ ಓದಿ: ಫೇಕ್ ಷೇರು ಮಾರ್ಕೆಟ್ ವೆಬ್‌ಸೈಟ್‌ ಮಾಡಿ ಕೊಟ್ಯಂತರ ರೂ. ವಂಚನೆ – 8 ಸೈಬರ್ ವಂಚಕರು ಅರೆಸ್ಟ್‌

    2ನೇ ಪೋಕ್ಸೋ ಕೇಸಿನಲ್ಲಿ ಜಾಮೀನು ಪಡೆಯದ ಹಿನ್ನೆಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹಿನ್ನೆಲೆ ಪುನಃ ನ.20ರಂದು ಮಧ್ಯಾಹ್ನ ಮುರುಘಾಶ್ರೀ ಮತ್ತೆ ಬಂಧನಕ್ಕೊಳಗಾದರು. ಬಳಿಕ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆಗ ನ.20 ಸಂಜೆ ವೇಳೆಗೆ ಹೈಕೋರ್ಟ್ ಸೂಚನೆ ಮೇರೆಗೆ ಅಂದು ಬಿಡುಗಡೆ ಭಾಗ್ಯ ಸಿಕ್ಕಿತ್ತು.

    ಆಗ ಸಂತ್ರಸ್ತೆಯರು ಮುರುಘಾಶ್ರೀಗಳ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಮುಖ್ಯ ಸಾಕ್ಷ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾಶ್ರೀ ಬಂಧನದಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶ ಮಾಡಿತ್ತು. ಹೀಗಾಗಿ 2024ರ ಮೇ.27 ರಂದು ಕೋರ್ಟ್ ಎದುರು ಶರಣಾದ ಮುರುಘಾಶ್ರೀಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು.

    ಇಂದಿಗೆ ಸಂತ್ರಸ್ತೆಯರಿಬ್ಬರು ಸೇರಿದಂತೆ 13 ಜನರ ಸಾಕ್ಷ ವಿಚಾರಣೆ ಅಂತ್ಯವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾಶ್ರೀಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿದೆ. ಇನ್ನು ಕೋರ್ಟ್ ಆದೇಶದಂತೆ ಬಿಡುಗಡೆಯಾದ ಮುರುಘಾಶ್ರೀ ಹೈಕೋರ್ಟ್ ಷರತ್ತಿನ ಅನ್ವಯ ಚಿತ್ರದುರ್ಗ ನಗರದಲ್ಲಿ ನೆಲೆಸದೇ ದಾವಣಗೆರೆಯ (Davanagere) ಶಿವಯೋಗ ಮಂದಿರಕ್ಕೆ ತೆರಳಿದರು.

    ಇನ್ನು ಮುರುಘಾಶ್ರೀ ಪರ ಹೈಕೋರ್ಟ್ ವಕೀಲರಾದ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಇವರಿಗೆ ಚಿತ್ರದುರ್ಗದ ಮುರುಘಾ ಮಠದ ವಕೀಲರಾದ ಕೆನ್ ವಿಶ್ವನಾಥಯ್ಯ, ಉಮೇಶ್ ಹಾಗೂ ಪ್ರತಾಪ್ ಜೋಗಿ ಸಾಥ್ ನೀಡಿದ್ದರು. ಈ ವೇಳೆ ಮುರುಘಾಶ್ರೀ ಬೆಂಬಲಿಗರಾದ ಜಿತೇಂದ್ರ, ವಕೀಲ ಪ್ರತಾಪ್, ಶಿಷ್ಯರಾದ ಬಸವಪ್ರಭು ಶ್ರೀ ಸೇರಿದಂತೆ ಮುರುಘಾಶ್ರೀ ಬೆಂಬಲಿಗರು ಇದ್ದರು.ಇದನ್ನೂ ಓದಿ: ಮೈಕ್ರೋRNA ಆವಿಷ್ಕಾರ – ವಿಕ್ಟರ್‌, ಗ್ಯಾರಿಗೆ ನೊಬೆಲ್‌ ಪುರಸ್ಕಾರ

  • ಪೋಕ್ಸೋ ಕೇಸ್ – ಮುರುಘಾ ಶ್ರೀಗೆ ಜಾಮೀನು ಮಂಜೂರು

    ಪೋಕ್ಸೋ ಕೇಸ್ – ಮುರುಘಾ ಶ್ರೀಗೆ ಜಾಮೀನು ಮಂಜೂರು

    ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ (POCSO Case) ಬಂಧನಕ್ಕೆ ಒಳಗಾದ ಮುರುಘಾಶ್ರೀಗೆ (Muruga Shree) ಕೋರ್ಟ್ ಜಾಮೀನು ಮಂಜೂರು ಮಾಡಿದೆ

    2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ (Chitradurga) ಮುರುಘಾಶ್ರೀ ಅವರಿಗೆ ಕೋರ್ಟ್ ಜಾಮೀನು ನೀಡಿದೆ.ಇದನ್ನೂ ಓದಿ: ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮುರುಘಾಶ್ರೀಗೆ ಈ ಹಿಂದೆ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ಪ್ರಶ್ನಿಸಿ ಸುಪ್ರೀಂನಲ್ಲಿ ಪ್ರಶ್ನೆ ಮಾಡಲಾಗಿತ್ತು. ಆರೋಪಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ರದ್ದುಗೊಳಿಸಬೇಕೆಂದು ಮನವಿ ಮಾಡಲಾಗಿತ್ತು.

    ಈ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲದೇ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸುವವರೆಗೆ ಬಂಧನದಲ್ಲಿಡುವಂತೆ ಆದೇಶಿಸಿತ್ತು. ಇದೀಗ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೋರ್ಟ್ ಇಂದೇ ಬಿಡುಗಡೆಗೆ ಆದೇಶ ಹೊರಡಿಸಿದೆ.

    ಸಂತ್ರಸ್ತೆಯರಿಬ್ಬರು ಸೇರಿ 12 ಜನ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಕೋರ್ಟ್‌ನಿಂದ ಜಿಲ್ಲಾ ಕಾರಾಗೃಹಕ್ಕೆ ತೆರಳಿ ಬಳಿಕ ಮುರುಘಾಶ್ರೀ ಬಿಡುಗಡೆಯಾಗಿ ದಾವಣಗೆರೆಗೆ ತೆರಳುವ ಸಾಧ್ಯತೆಯಿದೆ.ಇದನ್ನೂ ಓದಿ: ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಅಂತಾ ಆಸೆ ಇರುತ್ತೆ: ಸತೀಶ್‌ ಜಾರಕಿಹೊಳಿ

  • ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರ ಮರಳಿ ಪಡೆದ ಮುರುಘಾಶ್ರೀ

    ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರ ಮರಳಿ ಪಡೆದ ಮುರುಘಾಶ್ರೀ

    ಚಿತ್ರದುರ್ಗ: ಪೋಕ್ಸೋ (POCSO) ಕೇಸಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾಶ್ರೀ (Muruga Shree) ತಮ್ಮ ಮಠದ (Muth) ಅಧಿಕಾರವನ್ನು ಮರಳಿ ಪಡೆದಿದ್ದಾರೆ.

    ಪೋಕ್ಸೋ ಕೇಸಲ್ಲಿ 2022, ಸೆಪ್ಟೆಂಬರ್ 1ರಂದು ಮುರುಘಾಶ್ರೀ ಬಂಧನವಾಗಿತ್ತು. ಸತತ 14 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಮುರುಘಾಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ಇದನ್ನೂ ಓದಿ: ಆರ್‌ಎಸ್‌ಎಸ್‌ನಲ್ಲಿ ಜಾತಿ ಕೇಳಿ ಒಳಬಿಡುವ ಪದ್ಧತಿಯಿಲ್ಲ: ರಾಜಕುಮಾರ್

    ಈ ನೇಮಕವನ್ನು ಪ್ರಶ್ನಿಸಿ ಮಠದ ಪರ ವಕೀಲರು ಹೈಕೋರ್ಟ್ ಮೊರೆಹೋಗಿದ್ದ ಹಿನ್ನೆಲೆ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆಗ ಮಠದ ಪೀಠಾಧಿಪತಿಯಾಗಿದ್ದ ಮುರುಘಾಶ್ರೀ ಜೈಲಲ್ಲಿದ್ದ ಕಾರಣ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಆಡಳಿತದ ಅಧಿಕಾರ ನೀಡಿತ್ತು. ಇದನ್ನೂ ಓದಿ: ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ತಿಂಗಳಲ್ಲಿ ಖಾತಾ: ಉದ್ಯಮಿಗಳ ನಿಯೋಗಕ್ಕೆ ಎಂ.ಬಿ.ಪಾಟೀಲ್‌ ಭರವಸೆ

    ಹೀಗಾಗಿ ಈವರೆಗೆ ಚಿತ್ರದುರ್ಗ (Chitradurga) ಪಿಡಿಜೆ ಅವರು ಮಠದ ಆಡಳಿತಾಧಿಕಾರಿ ಆಗಿದ್ದರು. ಆದರೆ ನವೆಂಬರ್ 16ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಅಧಿಕಾರ ಹಸ್ತಾಂತರಿಸುವಂತೆ ಚಿತ್ರದುರ್ಗದ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ಜಡ್ಜ್‌ಗೆ ಸೂಚಿಸಿದೆ. ಇದನ್ನೂ ಓದಿ: ಅಂಬಾರಿ ಆನೆ ಅರ್ಜುನನ ಸಮಾಧಿಗೆ ರಾಜವಂಶಸ್ಥ ಯದುವೀರ್‌ ಪೂಜೆ

    ಮುರುಘಾಶ್ರೀಗೆ ಮಠದ ಆಡಳಿತಾಧಿಕಾರವನ್ನು ನ್ಯಾಯಾಧೀಶರು ಮರಳಿ ಹಸ್ತಾಂತರಿಸಿದ್ದಾರೆ. ಈ ಕುರಿತ ಪತ್ರಿಕಾ ಹೇಳಿಕೆಯನ್ನು ಮುರುಘಾ ಮಠ ಇಂದು ಬಿಡುಗಡೆ ಮಾಡಿದೆ. ಅಲ್ಲದೇ ಮುರುಘಾಶ್ರೀಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಪ್ರವೇಶಿಸದೇ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮಠದ ಆಡಳಿತ ನಡೆಸಲಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮುರುಡೇಶ್ವರದ ರಂಗು ಹೆಚ್ಚಿಸಿದ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್

  • ಡಿಸಿ ವರದಿಯ ಬಳಿಕ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ತೀರ್ಮಾನ: ಬೊಮ್ಮಾಯಿ

    ಡಿಸಿ ವರದಿಯ ಬಳಿಕ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ತೀರ್ಮಾನ: ಬೊಮ್ಮಾಯಿ

    ಚಿತ್ರದುರ್ಗ:  ಮುರುಘಾ ಮಠಕ್ಕೆ(Muruga Math) ಆಡಳಿತಾಧಿಕಾರಿ ನೇಮಿಸಿ ಎಂದು ಮಠದ ಭಕ್ತರು ಸಲ್ಲಿಸಿದ್ದಾರೆ. ಆ ವಿಚಾರದಲ್ಲಿ ಕಂದಾಯ ಇಲಾಖೆಯಿಂದ(Revenue Department) ಡಿಸಿಯ ವರದಿ ಪಡೆದ ಬಳಿಕ ಅಗತ್ಯ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ತಿಳಿಸಿದರು.

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಪೂರ್ವದಲ್ಲಿ ಮಠದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದೇವೆ. ಆ ವರದಿ ಬಂದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಮಾಜಿ ಸಿಎಂ ಯಡಿಯೂರಪ್ಪ ಮುರುಘಾಶ್ರೀ ಪ್ರಕರಣದ ಬಗ್ಗೆ ಅಕ್ಷಮ್ಯ ಅಪರಾದವೆಂದಿದ್ದಾರೆಂದು ಸಿಎಂಗೆ ಪ್ರಶ್ನಿಸಿದಾಗ, ಮುರುಘಾ ಶ್ರೀ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಅದರ ಬಗ್ಗೆ ವ್ಯಾಖ್ಯಾನ ಮಾಡುವುದಿಲ್ಲ. ಆ‌ ವಿಚಾರದಲ್ಲಿ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೂದಲು ಉದುರುತ್ತಿದೆ ಎಂದು ಮನನೊಂದ ಯುವಕ ಡೆತ್‍ನೋಟ್ ಬರೆದು ಆತ್ಮಹತ್ಯೆ

    ಸತೀಶ್ ಜಾರಕಿಹೊಳಿ(Satish Jarkiholi) ಹೇಳಿಕೆಗೆ ಪ್ರತಿಕ್ರಿಯಿದ ಅವರು, ಶತಮಾನಗಳಿಂದ ನಂಬಿಕೆ, ವಿಶ್ವಾಸದ ಮೇಲೆ ಧರ್ಮ ನಡೆಯುತ್ತದೆ. ಸ್ಥಾಪಿತವಾಗಿರುವ ನಂಬಿಕೆಗಳಿಗೆ ಕೊಡಲಿ ಏಟು ಕೊಡುವ ಕೆಲಸ ಮಾಡಿದ್ದಾರೆ. ಅದರ ಮೇಲೆ ಚರ್ಚೆ ಮಾಡುವುದೇನಿದೆ? ತಾಂತ್ರಿಕವಾಗಿ ಅವರ ಶಾಲಾ, ಕಾಲೇಜುಗಳ ಪ್ರಮಾಣಪತ್ರದಲ್ಲಿ ಹಿಂದೂ ಎಂದೇ ನಮೂದಾಗಿದೆ. ನಂಬಿಕೆಗಳು ಶತಮಾನಗಳಿಂದ ಇದೆ. ಜನರ ನಂಬಿಕೆಯನ್ನು ಘಾಸಿ ಮಾಡುವಂಥ ಕೆಲಸ ಮಾಡಿ ಪುನ: ಚರ್ಚೆ ಮಾಡುವುದು ಏನೂ ಇಲ್ಲ. ಅವರ ಕ್ಷಮೆಯೂ ಬೇಕಾಗಿಲ್ಲ. ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.

    ಜನಸಂಕಲ್ಪ ಯಾತ್ರೆಯಲ್ಲಿ ಜನರೇ ಸೇರುತ್ತಿಲ್ಲ ಎಂದು ಹೇಳಿಕೆ‌ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನಾನು ಈ ಮೂಲಕ ಅವರಿಗೆ ಆಹ್ವಾನ ನೀಡುತ್ತೇನೆ. ಯಾತ್ರೆಗೆ ಬಂದು ನೋಡಲಿ.  ಎಲ್ಲಾ ಮಾಧ್ಯಮದಲ್ಲಿ ತೋರಿಸುವ ಜನಸಾಗರವೇ ಇದಕ್ಕೆ ಉತ್ತರವಾಗಿದ್ದು ಈ ಜನಸಂಕಲ್ಪ ಯಾತ್ರೆ ಮುಂದೆ ವಿಜಯಸಂಕಲ್ಪವಾಗಿ ಪರಿವರ್ತನೆಯಾಗಲಿದೆ ಎಂದು ತಿರುಗೇಟು ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಎಷ್ಟೇ ದೊಡ್ಡವರಾದರು ಕಾನೂನಿನ ಮುಂದೆ ಎಲ್ಲರೂ ಒಂದೇ : ಆರಗ ಜ್ಞಾನೇಂದ್ರ

    ಎಷ್ಟೇ ದೊಡ್ಡವರಾದರು ಕಾನೂನಿನ ಮುಂದೆ ಎಲ್ಲರೂ ಒಂದೇ : ಆರಗ ಜ್ಞಾನೇಂದ್ರ

    ಬೆಂಗಳೂರು: ಮುರುಘಾ ಶ್ರೀಗಳ(Muruga shree) ಮೇಲೆ ಮತ್ತೆ ಬಾಲಕಿಯರು ಕೊಟ್ಟಿರುವ ದೂರಿನ ಬಗ್ಗೆ ಪೊಲೀಸರು(Police )ತನಿಖೆ ಪ್ರಾರಂಭ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶ್ರೀಗಳ ಮೇಲೆ ಮತ್ತೆ ಬಾಲಕಿಯರ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲು ಮಾಡಿಕೊಂಡು ತನಿಖೆ ಶುರು ಮಾಡಿದ್ದಾರೆ.‌ ಪೊಲೀಸರು ಈ ಬಗ್ಗೆ ತನಿಖೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ತಪ್ಪು ಆಗಿದ್ದರೆ ಕಾನೂನು ಕ್ರಮ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮುರುಘಾ ಶ್ರೀಗೆ ಮತ್ತೆ ಸಂಕಷ್ಟ – ಮೈಸೂರಿನಲ್ಲಿ ಮತ್ತೊಂದು FIR ದಾಖಲು


    ಮುರುಘಾ ಶ್ರೀಗಳ ಕೇಸ್ ನಲ್ಲಿ ಯಾರ ಪ್ರಭಾವವೂ ಇಲ್ಲ. ಹಸ್ತಕ್ಷೇಪವೂ ಇಲ್ಲ. ಈವರೆಗೂ ಅವರು ಜೈಲಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಕಾನೂನು ಎಲ್ಲರಿಗೂ ಒಂದೇ. ಎಷ್ಟೇ ಪ್ರಭಾವಿ ಆಗಿದ್ದರೂ ಕಾನೂನು ಪ್ರಕಾರವೇ ಕ್ರಮ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಈಗ ಪೊಲೀಸರ ತನಿಖೆ ಆಗುತ್ತಿದೆ. ಪೊಲೀಸರು ಕಾನೂನಿನ ಅನ್ವಯವೇ ಕ್ರಮ ತೆಗೆದುಕೊಳ್ಳುತ್ತಾರೆ. ಯಾರ ರಕ್ಷಣೆಯನ್ನು ನಾವು ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಮುರುಘಾಮಠದ ಪೀಠಾಧಿಪತಿ ಬದಲಾವಣೆಗೆ ಹೆಚ್ಚಿದ ಒತ್ತಡ

    ಮುರುಘಾಮಠದ ಪೀಠಾಧಿಪತಿ ಬದಲಾವಣೆಗೆ ಹೆಚ್ಚಿದ ಒತ್ತಡ

    ಚಿತ್ರದುರ್ಗ: ಪೋಕ್ಸೋ ಪ್ರಕರಣದಡಿ (POCSO case) ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರುವುದರಿಂದ ಮುರುಘಾ ಮಠದ (Murugha Mutt) ದೈನಂದಿನ ಧಾರ್ಮಿಕ ಕಾರ್ಯಗಳನ್ನು ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ನೂತನ ಸ್ವಾಮೀಜಿ ನೇಮಕ ಮಾಡುವ ಅಗತ್ಯವಿದೆ ಎಂದು ಕೆಲ ಲಿಂಗಾಯತ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

    ಮುರುಘಾ ಶ್ರೀಗಳು (Shivamurthy Murugha Sharanaru) ಜೈಲಿನಲ್ಲಿರುವ ಹಿನ್ನೆಲೆ ವೀರಶೈವ ಲಿಂಗಾಯತ (Lingayat) ಸಮಾಜದ ಮುಖಂಡರು ಚಿತ್ರದುರ್ಗದಲ್ಲಿ ಸಭೆ ಸೇರಿ ಮಠಕ್ಕೆ ನೂತನ ಪೀಠಾಧಿಪತಿಯನ್ನು ನೇಮಿಸಬೇಕು. ಅಲ್ಲದೇ ಕಳಂಕಿತ ಸ್ವಾಮೀಜಿ ಬೆನ್ನಿಗೆ ನಿಂತಿರುವ ಪಟ್ಟಭದ್ರರನ್ನು ಮಠದಿಂದ ಹೊರಹಾಕಬೇಕು. ಇದಕ್ಕೆ ಅಗತ್ಯಬಿದ್ದರೇ ಕಾನೂನು ಹೋರಾಟ ಕೂಡ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದಕ್ಕೆ ಸ್ವಾಮೀಜಿ ಮತ್ತು ಎಸ್‍ಕೆ ಬಸವರಾಜನ್ ಬೆಂಬಲಿಗರು ತಗಾದೆ ತೆಗೆದು ಗದ್ದಲ ಎಬ್ಬಿಸಲು ನೋಡಿದ್ದಾರೆ. ಈ ವೇಳೆ ಜೋರು ವಾಗ್ವಾದಗಳು ನಡೆದವು. ಪರಿಸ್ಥಿತಿ ತಿಳಿಗೊಳಿಸಬೇಕಿದ್ದ ಪೊಲೀಸರು ಸುಮ್ನೆ ಎಲ್ಲವನ್ನು ನೋಡುತ್ತಾ ನಿಂತಿದ್ದರು. ಇದಕ್ಕೂ ಆಕ್ರೋಶ ವ್ಯಕ್ತವಾಯಿತು. ಇನ್ನು, ಈ ವಿಚಾರ ಬಿಎಸ್‍ವೈ ಮತ್ತು ಸರ್ಕಾರದ ಗಮನದಲ್ಲಿದೆ ಎಂದು ಎಂಎಲ್‍ಸಿ ನವೀನ್ ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಸ್ನಾನದ ವೀಡಿಯೋ ಮಾಡಿದ್ದಾರೆ – ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಠಾಣೆ ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ

    ಈ ಮಧ್ಯೆ, ಸೆಲ್ಫ್ ಚೆಕ್‍ಗಳಿಗೆ ಶ್ರೀಗಳ ಸಹಿ ಹಾಕಿಸಲು ಮಾಡಿದ ಮನವಿಗೆ ಹೈಕೋರ್ಟ್ ಗರಂ ಆಗಿದೆ. ಎಲ್ಲವೂ ಸೆಲ್ಫ್ ಚೆಕ್‍ಗಳೇ ಏಕೆ? ಸಂಸ್ಥೆ ಹೆಸರಿಗೆ ಏಕಿಲ್ಲ? ಮೆಮೋ ಬಗ್ಗೆ ನಮಗೆ ವಿಶ್ವಾಸ ಮೂಡುತ್ತಿಲ್ಲ ಎಂದಿದೆ. ಸಮರ್ಪಕ ಮಾಹಿತಿಯುಳ್ಳ ಮೆಮೋ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಇದನ್ನೂ ಓದಿ: ನೆಹರೂ-ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಶೂನ್ಯ: ದಿಗ್ವಿಜಯ ಸಿಂಗ್

    Live Tv
    [brid partner=56869869 player=32851 video=960834 autoplay=true]

  • ಎಲ್ಲಾ ನಾಶ ಮಾಡಿದ್ದಾರೆ, ಶ್ರೀಗಳು ಯಾವುದೇ ಸಾಕ್ಷ್ಯ ಉಳಿಸಿಲ್ಲ: ಹೆಚ್. ವಿಶ್ವನಾಥ್

    ಎಲ್ಲಾ ನಾಶ ಮಾಡಿದ್ದಾರೆ, ಶ್ರೀಗಳು ಯಾವುದೇ ಸಾಕ್ಷ್ಯ ಉಳಿಸಿಲ್ಲ: ಹೆಚ್. ವಿಶ್ವನಾಥ್

    ಮೈಸೂರು: ಮುರುಘಾ ಶ್ರೀಗಳು ಯಾವುದೇ ಸಾಕ್ಷ್ಯವನ್ನು ಉಳಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಅವರು, ಮುರುಘಾ ಶ್ರೀಗಳಿಂದ ಧರ್ಮ ಪೀಠಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಪೊಲೀಸರು ಇಡೀ ಕೇಸ್ ಅನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಆದರೆ ನ್ಯಾಯಾಲಯ ಪೊಲೀಸರಿಗೆ ಚಳಿ ಬಿಡಿಸಿದ ಮೇಲೆ ಉಳಿದ ಆರೋಪಿಗಳನ್ನು ಈಗ ಹುಡುಕುತ್ತಿದ್ದಾರೆ. ಸರ್ಕಾರವು ಪ್ರಕರಣವನ್ನು ಲಘುವಾಗಿ ಪರಿಗಣಿಸಿತು. ಆರೋಪಿಗಳನ್ನು ಮಠದ ಒಳಗೆ ಓಡಾಡಲು ಬಿಟ್ಟು ಸಾಕ್ಷ್ಯ ನಾಶಕ್ಕೆ ಅವಕಾಶ ಮಾಡಿಕೊಡಲಾಯಿತು. ಸ್ವಾಮೀಜಿಗಳು ಮಲಗುವ ಬೆಡ್, ಬೆಡ್ ಶೀಟ್‍ಗಳು ಎಲ್ಲವೂ ಬದಲಾಗಿ ಸಾಕ್ಷ್ಯ ನಾಶ ಮಾಡಲಾಗಿದೆ. ಈ ಪ್ರಕರಣದಲ್ಲಿ ಸತ್ಯನಾಶವಾಗಿದೆ ಎಂದು ಕಿಡಿಕಾರಿದರು.

    ಒಡನಾಡಿ ಸಂಸ್ಥೆಯ ಧೈರ್ಯ ಮೆಚ್ಚಬೇಕು ಎಂದ ಅವರು, ಇಡೀ ವ್ಯವಸ್ಥೆ ಹಾಳು ಮಾಡಿದ ಚಿತ್ರದುರ್ಗದ ಎಸ್ಪಿಯನ್ನು ಅಮಾನತ್ತು ಮಾಡಿ ಎಂದು ಒತ್ತಾಯಿಸಿದರು. ಪ್ರಕರಣದ ಆರೋಪಿಗಳು ಮಠದಲ್ಲೇ ಇದ್ದಾರೆ. ಕೆಲವು ಮಂತ್ರಿಗಳು, ಮಾಜಿ ಮಂತ್ರಿಗಳು ಸ್ವಾಮೀಜಿ ಪರವಾಗಿ ಮಾತನಾಡುತ್ತಾರೆ. ಲೈಂಗಿಕ ದೌರ್ಜನ್ಯ ಮಾಡಿದ ಸ್ವಾಮೀಜಿ ಪರವಾಗಿ ಮಾತನಾಡುವುದನ್ನು ನಿಲ್ಲಿಸಿ. ಸ್ವಾಮೀಜಿಯಿಂದ ನಾಡಿಗೆ ಕಳಂಕ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ

    ಇದೇ ವೇಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅವರು, ಸ್ವಾಮೀಜಿ ಅವರು ಇಡೀ ಮಠದ ಪರಂಪರೆಗೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬ್ರಹ್ಮಾಚಾರಿ ಅಂತಾ ಹೇಳಿಕೊಂಡು ಈ ರೀತಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗುತ್ತಾರೆ. ನಮ್ಮಲ್ಲಿ ಬಹಳಷ್ಟು ಮಠಾಧಿಪತಿಗಳಿದ್ದಾರೆ. ಆದರೆ ಎಲ್ಲರೂ ಬ್ರಹ್ಮಚಾರಿಗಳಾಗಿ ಉಳಿದಿಲ್ಲ. ಬ್ರಹ್ಮಚಾರಿಗಳು ಅಂತಾ ಹೇಳಿ ಮಠದಲ್ಲಿ ಕುಳಿತು ಸರ್ಕಾರದ ಕೋಟ್ಯಂತರ ರೂ. ಅನುದಾನ ಪಡೆದು ಮಜಾ ಮಾಡುತ್ತಾರೆ. ಇದಕ್ಕೆ ಲೆಕ್ಕ ಕೇಳುವವರು ಯಾರು? ಶ್ರೀಗಳ ವಿರುದ್ಧ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಮಾಡಿ ಕೊಟ್ಟಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    POLICE JEEP

    ಸಂತ್ರಸ್ತ ಮಗುವಿನ ಚಿಕ್ಕಪ್ಪನ ಹೇಳಿಕೆ ಇಲ್ಲಿ ಪ್ರಾಮುಖ್ಯತೆ ಪಡೆಯಲ್ಲ. ವಿಚಾರಣೆ ವೇಳೆ ಸ್ವಾಮೀಗಳು ಮಾತಾಡುತ್ತಿಲ್ಲ. ಬೇರೆ ಅಪರಾಧಿಗಳು ಮಾತಾಡದೇ ಇದ್ದಾಗ ಲಾಠಿ ಬೀಸುತ್ತಾರೆ. ಸ್ವಾಮೀಜಿಗೆ ಪೊಲೀಸರು ಏನೂ ಫಲಹಾರ ಬೇಕು ಕೇಳುತ್ತಿದ್ದಾರೆ. ಬ್ರಹ್ಮಚಾರಿಗಳ ವೇಷದಲ್ಲಿ ಬಹಳಷ್ಟು ಮಠಾಧೀಶರು ಇದ್ದಾರೆ. ಸಂಸಾರಿಗಳೇ ಸ್ವಾಮೀಜಿಗಳಾಗಲಿ. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳೇ ಮಾದರಿಯಾಗಲಿ. ಸ್ವಾಮಿ ಪರವಾಗಿ ಮಾತಾಡುತ್ತಿರುವ ಸ್ವಾಮಿಗಳನ್ನು ಈ ಪ್ರಕರಣದ ಒಳಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ತನಿಖೆಗೆ ಸಹಕರಿಸದೇ ಮುರುಘಾ ಶ್ರೀ ಮತ್ತೆ ಆಸ್ಪತ್ರೆ ಸುತ್ತಾಟ

    Live Tv
    [brid partner=56869869 player=32851 video=960834 autoplay=true]

  • ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ

    ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ

    ಚಿತ್ರದುರ್ಗ: ಪೊಕ್ಸೋ ಕೇಸ್‌ನಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶ್ರೀಗಳನ್ನು ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ.

    ಚಿತ್ರದುರ್ಗ ಜಿಲ್ಲೆಯ ಹೊಳೆಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಗ್ರಾಮದಲ್ಲಿರುವ ಅನಾಥ ಸೇವಾಶ್ರಮದಲ್ಲಿ ಮುರುಘಾ ಶ್ರೀಗಳು ಅಧ್ಯಕ್ಷರಾಗಿದ್ದರು.

    ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿಯು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವುದಾಗಿ ತಿಳಿಸಿದೆ. ಈ ಬಗ್ಗೆ ಗೌರವ ಕಾರ್ಯದರ್ಶಿ ಪ್ರೊ. ಕೆ. ಇ ರಾಧಾಕೃಷ್ಣ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಜೊತೆಗೆ ವಿಶ್ವಸ್ತ ಸಮಿತಿಯ ಸದಸ್ಯತ್ವದಿಂದಲೂ ಮುರುಘಾ ಶ್ರೀ ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ತನಿಖೆಗೆ ಸಹಕರಿಸದೇ ಮುರುಘಾ ಶ್ರೀ ಮತ್ತೆ ಆಸ್ಪತ್ರೆ ಸುತ್ತಾಟ

    ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಬಳಿಕ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಹಿನ್ನೆಲೆ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ಪೋಕ್ಸೋ ಕೇಸ್‌ – ಸಾಕ್ಷ್ಯ ನಾಶ ಮಾಡಿದ್ರಾ ಮುರುಘಾ ಶ್ರೀ?

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕ ಕಿರುಕುಳ ಪ್ರಕರಣ – ಮುರುಘಾ ಶ್ರೀಗೆ ಸೋಮವಾರದವರೆಗಿಲ್ಲ ಜಾಮೀನು

    ಲೈಂಗಿಕ ಕಿರುಕುಳ ಪ್ರಕರಣ – ಮುರುಘಾ ಶ್ರೀಗೆ ಸೋಮವಾರದವರೆಗಿಲ್ಲ ಜಾಮೀನು

    ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಸೋಮವಾರದವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಬೇಡಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನೇರವಾಗಿ ಹೇಳಿದೆ.

    Law

    ಲೈಂಗಿಕ ಕಿರುಕುಳ ಆರೋಪದ ಮೇಲೆ ಮುರುಘಾ ಮಠದ ಶ್ರೀಗಳು ಜೈಲುಪಾಲಾಗಿದ್ದು, ಮುರುಘಾ ಮಠದ ಆಪ್ತ ವಕೀಲ ಉಮೇಶ್ ಅವರು 11 ಗಂಟೆಗೆ ಶ್ರೀಗಳ ಪರವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸ್ ಕಸ್ಟಡಿ ಮುಗಿಯುವವರೆಗೆ ಬೇಲ್ ಅಪ್ಲಿಕೇಷನ್ ಹಾಕಬೇಡಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರು ಸೂಚಿಸಿದ್ದಾರೆ. ಇದನ್ನೂ ಓದಿ: 2 ದಿನಗಳಿಂದ ದೇವರ ದರ್ಶನ ಇಲ್ಲ – ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮಾತು

    ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಬಳಿಕ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಹಿನ್ನೆಲೆ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ನಂತರ ಶ್ರೀಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಲಾಗಿತ್ತು. ಆಗಲೂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀ ಕೇಸ್ – ಮಠಕ್ಕೆ ಅಪಚಾರವಾಗದೇ ಇರಲಿ, ಸತ್ಯ ಹೊರ ಬರಲಿ: ಸಿ.ಎಂ ಇಬ್ರಾಹಿಂ

    ಮುರುಘಾ ಶ್ರೀ ಕೇಸ್ – ಮಠಕ್ಕೆ ಅಪಚಾರವಾಗದೇ ಇರಲಿ, ಸತ್ಯ ಹೊರ ಬರಲಿ: ಸಿ.ಎಂ ಇಬ್ರಾಹಿಂ

    ಬೆಂಗಳೂರು: ಮುರುಘಾ ಶ್ರೀಗಳ ವಿಚಾರದಲ್ಲಿ ನ್ಯಾಯಯುತ ತನಿಖೆ ಆಗಿ ಸತ್ಯ ಹೊರಗೆ ಬರಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

    ಶ್ರೀಗಳ ಬಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುರುಘಾ ಶ್ರೀ ಬಂಧನ ಆಗಿದೆ. ಸತ್ಯಾಸತ್ಯತೆ ಹೊರಗಡೆ ಬರಲಿ. ವಿಚಾರ ಏನಿದೆ, ಮಕ್ಕಳು ಏನು ಹೇಳಿಕೆ ಕೊಟ್ಟಿದ್ದಾರೆ ವಿಚಾರಣೆ ಆಗಲಿ. ಬಸವರಾಜ್ ಮತ್ತು ಅವರ ಪತ್ನಿಯ ಪಾತ್ರ ಏನಿದೆ ಎಂಬುದರ ತನಿಖೆ ಆಗಲಿ. ಇದೆಲ್ಲದರ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಎಂದರು.

    ಬಾಲಕಿಯರ ಬಗ್ಗೆ ಮಾತನಾಡುವುದಕ್ಕೂ, ಮುರುಘಾ ಶ್ರೀಗಳ ಬಗ್ಗೆ ಮಾತನಾಡುವುದಕ್ಕೂ ವ್ಯತ್ಯಾಸ ಇದೆ. ಇವರು ಇಂದು ಪರಿವರ್ತನೆ ಮಾಡುತ್ತಾ, ಅಡ್ಡಪಲ್ಲಕಿ ಮಾಡಿಸಿಕೊಳ್ಳದೆ ಇರುವ ಸ್ವಾಮೀಜಿಯವರು. ದಲಿತರು, ಹಿಂದುಳಿದವರ ಸ್ವಾಮಿಗಳನ್ನಾಗಿ ಮಾಡಿದವರು. ಹೀಗಾಗಿ ಸತ್ಯಾಸತ್ಯತೆ ಹೊರಗಡೆ ಬರಬೇಕು. ತಪ್ಪು ಮಾಡಿದ್ದಾರೋ ಇಲ್ಲವೋ ಕೂಲಂಕುಶವಾಗಿ ತನಿಖೆ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: ಮುರುಘಾ ಶ್ರೀಗಳ ಬಂಧನ ಪ್ರಕರಣ – ಸರ್ಕಾರ ಕಾನೂನಾತ್ಮಕವಾಗಿ ತನಿಖೆ ಮಾಡಲಿ: ಕುಮಾರಸ್ವಾಮಿ

    ಸರ್ಕಾರ ವಿಚಾರಣೆ ಮಾಡಿದೆ. ಸತ್ಯಾಸತ್ಯತೆ ಜನರ ಮುಂದೆ ತರುವುದು ಅವಶ್ಯಕತೆ ಇದೆ. 3 ವರ್ಷಗಳಿಂದ ಹೀಗೆ ಆಗ್ತಾ ಇದೆ ಅಂತ ಮಾಹಿತಿ ಇದೆ. ತುಂಬಾ ಹಳೆ ಇತಿಹಾಸ ಇರುವ ಮಠ ಇದು. 3 ಸಾವಿರ ಶಾಖೆ ಮಠಗಳು ಇವೆ. ಈ ಮಠಕ್ಕೆ ಪರಂಪರೆಗೆ ಕಳಂಕ ಬರಬಾರದು. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದರು.

    ಲೆಹರ್ ಸಿಂಗ್ ಅವರು ಹೊರ ರಾಜ್ಯದವರಿಗೆ ತನಿಖೆ ನಡೆಸಲು ನೀಡಿ ಎಂದು ಹೇಳಿದ್ದಾರೆ. ನಿಮಗೆ ಅಷ್ಟು ಅನುಮಾನ ಇದ್ದರೆ ಸಿಬಿಐಗೆ ಕೊಡಿ. ಇಲ್ಲಿ ಯಾರನ್ನೂ ಉಳಿಸಬೇಕಿಲ್ಲ. ಸತ್ಯ ಗೊತ್ತಾಗಬೇಕು ಎಂದು ಆಗ್ರಹಿಸಿದರು.

    ಬಸವರಾಜ್ ಅಲ್ಲಿ ಇದ್ದು, ಪೀಠಾಧಿಪತಿ ಆಗಬೇಕಿದ್ದವರು. ಆದರೆ ಅವರು ಲವ್ ಮ್ಯಾರೇಜ್ ಆಗಿ ಹೋದರು. ಆಡಳಿತ ಅಧಿಕಾರಿ ಆದರು. ಅಲ್ಲಿ ಹೋಗಿ ಎಂಎಲ್‌ಎ ಆದರು. ಮತ್ತೆ ಪುನಃ ಮಠದಲ್ಲಿ ಸೇರಿಕೊಂಡರು. ಮೊನ್ನೆ ರಾಹುಲ್ ಗಾಂಧಿ ಹೋಗಿದ್ದು ನೋಡಿದ್ದೆ, ಬೇರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್

    ನಮಗೆ ಸ್ವಾಮಿಗಳಿಗಿಂತ ಪೀಠ ದೊಡ್ಡದು. ಆ ಪೀಠ ಭಾರೀ ದೊಡ್ಡದು. ಸುಮಾರು ವರ್ಷಗಳ ಇತಿಹಾಸ ಇರುವ ಪೀಠ. ಬಸವ ತತ್ವ ಸಾರಿರುವ ಪೀಠ. ಪೀಠಕ್ಕೆ ಕಳಂಕ ಬರಬಾರದು ಅಷ್ಟೆ ಅಂತ ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]