– ಕೋಲಾರದ ವಿದ್ಯಾರ್ಥಿನಿಯರ ಸಾವಿನಿಂದ ಪ್ರವಾಸಿಗರ ಭೇಟಿಗೆ ಹಾಕಿದ್ದ ನಿರ್ಬಂಧ ತೆರವು
ಕಾರವಾರ: ಕಳೆದ 21 ದಿನದಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ (Murudeshwar Beach) ಕಡಲತೀರಕ್ಕೆ ನಿರ್ಬಂಧ ತೆರವು ಮಾಡಲಾಗಿದೆ.
ಕಡಲ ತೀರದಲ್ಲಿ ಕೋಲಾರ ಮೂಲದ ಶಾಲಾ ವಿದ್ಯಾರ್ಥಿನಿಯರ ಸಾವಾದ ನಂತರ ಜಿಲ್ಲಾಡಳಿತ ಕಡಲ ತೀರಕ್ಕೆ ನಿರ್ಬಂಧ ವಿಧಿಸಿತ್ತು. ಇದೀಗ ಕಡಲ ತೀರದಲ್ಲಿ ಪ್ರವಾಸಿಗರ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದ್ದು, ಸಮುದ್ರಕ್ಕೆ ಇಳಿಯುವರಿಗೆ ಸ್ವಿಮಿಂಗ್ ಜೋನ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮುರುಡೇಶ್ವರ ಕಡಲ ತೀರದಲ್ಲಿ ಕಾರ್ಯಾಚರಣೆ – ಅಕ್ರಮ ವಾಣಿಜ್ಯ ಮಳಿಗೆ ತೆರವು

ಹೆಚ್ಚುವರಿಯಾಗಿ 6 ಲೈಫ್ ಗಾರ್ಡ್‌ಗಳ ನೇಮಕ ನೇಮಕ ಮಾಡಲಾಗಿದ್ದು ಲೈಫ್ ಗಾರ್ಡ್ಗಳಿಗೆ ವಿಶೇಷ ಜೀವ ರಕ್ಷಕ ಸಾಧನ ಪೂರೈಕೆ ಮಾಡಲಾಗಿದೆ. ಇದರ ಜೊತೆಗೆ ಕಡಲ ತೀರದಲ್ಲಿ 70 ಕ್ಕೂ ಹೆಚ್ಚು ಅನಧಿಕೃತ ಗೂಡಂಗಡಿ ತೆರವು ಮಾಡಿದ್ದು, ಕಾರು ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸುರಕ್ಷತೆಗಾಗಿ ವಾಚ್ ಟವರ್, ಸೈರನ್ ಹಾಗೂ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ. 21 ದಿನಗಳ ಬಳಿಕ ನಿರ್ಬಂಧ ತೆರವು ಮಾಡಿದ ಒಂದೇ ಗಂಟೆಯಲ್ಲಿ ಬೀಚ್‌ಗೆ ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಉ.ಕನ್ನಡ ಜಿಲ್ಲಾಡಳಿತ – ಪ್ರವಾಸಿಗರ ಸುರಕ್ಷತೆಗೆ ಕಡಲ ತೀರಕ್ಕೆ ವಿಶೇಷ ನಿಯಮ
















