Tag: Murdeshwar

  • ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಸಾವು – ಮೂವರ ರಕ್ಷಣೆ

    ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಸಾವು – ಮೂವರ ರಕ್ಷಣೆ

    ಕಾರವಾರ: ಸಮುದ್ರದಲ್ಲಿ (Sea) ಈಜಲು ತೆರಳಿದ್ದ ಪ್ರವಾಸಿಗನೊಬ್ಬ ಮುಳುಗಿ ಸಾವಿಗೀಡಾದ ಘಟನೆ ಕುಮಟಾದ (Kumta) ಬಾಡದಲ್ಲಿ ನಡೆದಿದೆ. ಮತ್ತೊಂದು ಕಡೆ ಮುರ್ಡೇಶ್ವರದಲ್ಲಿ (Murdeshwar) ಸಮುದ್ರದಲ್ಲಿ ಮುಳುಗುತ್ತಿದ್ದ ಮೂರು ಜನ ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಮೃತನನ್ನು ಶಿವಮೊಗ್ಗ (Shivamogga) ಮೂಲದ ಪ್ರಶಾಂತ್ ಗುಪ್ತ ಎಂದು ಗುರುತಿಸಲಾಗಿದೆ. ಮೃತ ಪ್ರಶಾಂತ್ 11 ಜನರೊಂದಿಗೆ ಕುಮಟಾಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ಕುಮಟಾ ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಾಘ್ ಬಕ್ರಿ ಚಹಾ ಕಂಪನಿ ಮಾಲೀಕ ಮೆದುಳು ರಕ್ತಸ್ರಾವದಿಂದ ಸಾವು

    ಇನ್ನೊಂದೆಡೆ ಮುರ್ಡೇಶ್ವರದಲ್ಲಿ ಬಾಗಲಕೋಟೆಯಿಂದ ಬಂದಿದ್ದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಸವನಗೌಡ ಪಾಟೀಲ್ (22), ಶರಣು ಇಂಚಲ್ (21), ರವಿಚಂದ್ರನ್(22) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಶಶಿ, ಪಾಂಡು, ರಾಮಚಂದ್ರ ಅವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದ ಲೈಫ್ ಗಾರ್ಡ್ ಸಿಬ್ಬಂದಿಯಾಗಿದ್ದಾರೆ.

    ದಸರಾ ರಜೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಸಮುದ್ರಕ್ಕೆ ಇಳಿದು ತೊಂದರೆಗೆ ಸಿಲುಕುತ್ತಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಡೆಂಗ್ಯೂಗೆ ಇನ್ನೊಬ್ಬ ವ್ಯಕ್ತಿ ಬಲಿ- ಸಾವಿನ ಸಂಖ್ಯೆ 2ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

    ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

    ಕಾರವಾರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದಿರುವ  (Murder) ಘಟನೆ ಮುರುಡೇಶ್ವರದಲ್ಲಿ (Murdeshwar) ನಡೆದಿದೆ.

    ಹತ್ಯೆಯಾದ ಮಹಿಳೆಯನ್ನು ನಂದಿನಿ ನಾಯ್ಕ (30) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಲೋಕೇಶ್ ನಾಯ್ಕ (34) ಕೊಲೆ ಆರೋಪಿಯಾಗಿದ್ದಾನೆ. ಇಬ್ಬರ ನಡುವೆ ಗಲಾಟೆ ನಡೆದಿದೆ ಇದೇ ಕಾರಣಕ್ಕೆ ಆರೋಪಿ ಏಕಾಏಕಿ ಚಾಕುವಿನಿಂದ ಕತ್ತಿನ ಬಳಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಹೊರಗೆ ಓಡಿ ಬಂದಿದ್ದು, ಜನ ಸೇರುವಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಗ್ಯಾರಂಟಿ ಸ್ಕೀಂ ಸರ್ಕಾರದಲ್ಲಿ ಅರಮನೆ ವೀಕ್ಷಣೆ ದುಬಾರಿ – ಟಿಕೆಟ್ ದರ ಭಾರೀ ಏರಿಕೆ

    ಕೊಲೆ ಮಾಡಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆತನನ್ನು ಹೋಟೆಲ್ ಒಂದರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಲ್ಪಿ ಕೆಲಸ ಮಾಡುತ್ತಿದ್ದ ಲೋಕೆಶ್ ನಾಯ್ಕ ಕಳೆದ ಮೂರು ದಿನಗಳಿಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

    ಈ ಸಂಬಂಧ ಮುರುಡೇಶ್ವರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಮಳೆ ಮುನ್ಸೂಚನೆ – ಎಲ್ಲೆಲ್ಲಿ ಜಾಸ್ತಿ ಮಳೆಯಾಗಲಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಚ್ಚರಿಕೆಯ ನಡುವೆಯು ಪ್ರವಾಸಿಗರ ಹುಚ್ಚಾಟ – ಮುರುಡೇಶ್ವರದಲ್ಲಿ ಸಮುದ್ರದ ಪಾಲಾದ ಯುವಕ, ಇಬ್ಬರ ರಕ್ಷಣೆ

    ಎಚ್ಚರಿಕೆಯ ನಡುವೆಯು ಪ್ರವಾಸಿಗರ ಹುಚ್ಚಾಟ – ಮುರುಡೇಶ್ವರದಲ್ಲಿ ಸಮುದ್ರದ ಪಾಲಾದ ಯುವಕ, ಇಬ್ಬರ ರಕ್ಷಣೆ

    ಕಾರವಾರ: ಅಲೆಯ ಅಬ್ಬರಕ್ಕೆ (Sea Waves) ಯುವಕನೋರ್ವ ಸಮುದ್ರದಲ್ಲಿ ಕೊಚ್ಚಿ ಹೋದ ಘಟನೆ ಮುರುಡೇಶ್ವರದಲ್ಲಿ (Murdeshwar) ಸೋಮವಾರ ನಡೆದಿದೆ. ಈ ವೇಳೆ ಮುಳುಗುತ್ತಿದ್ದ ಇಬ್ಬರನ್ನು ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

    ಹುಬ್ಬಳ್ಳಿಯ ಸಂತೋಷ್ ಹುಲಿಗುಂಡ (19) ಸಮುದ್ರಪಾಲಾದ ಯುವಕನಾಗಿದ್ದು, ಹಸನ್ ಮಜಗೀಗೌಡ (20) ಹಾಗೂ ಸಂಜೀವ್ (20) ಎಂಬುವವರನ್ನು ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಅಲೆಗೆ ಕೊಚ್ಚಿಹೋದ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತುಂಬಿ ತುಳುಕುತ್ತಿದ್ದ ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು

    ಹುಬ್ಬಳ್ಳಿ ಹಾಗೂ ಕಲಕಟಗಿಯಿಂದ 22 ಜನ ಪ್ರವಾಸಕ್ಕೆ ಬಂದಿದ್ದು, ಸಿಗಂದೂರು (Sigandur), ಕೊಲ್ಲೂರು ಪ್ರವಾಸ ಮುಗಿಸಿ ಮುರುಡೇಶ್ವರಕ್ಕೆ ಬಂದಿದ್ದರು. ಈ ವೇಳೆ ಪ್ರವಾಸಿಗರಿಗೆ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೂ ಮೂರು ಜನ ಪ್ರವಾಸಿಗರು ಸಮುದ್ರಕ್ಕಿಳಿದಿದ್ದಾರೆ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಿಷೇಧದ ನಡುವೆಯೂ ಪ್ರವಾಸಿಗರ ಹುಚ್ಚಾಟ
    ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಪ್ರವಾಸಿಗರಿಗೆ ಕಡಲಲ್ಲಿ ಇಳಿಯದಂತೆ ನಿಷೇಧ ಹೇರಲಾಗಿದೆ. ಆದರೂ ಜಿಲ್ಲೆಯ ಮುರುಡೇಶ್ವರ ಹಾಗೂ ಗೋಕರ್ಣಕ್ಕೆ (Gokarna) ಬರುವ ಪ್ರವಾಸಿಗರು ಲೈಫ್‍ಗಾರ್ಡ್‍ಗಳ ಸೂಚನೆಯನ್ನು ಲೆಕ್ಕಿಸದೆ ಸಮುದ್ರಕ್ಕಿಳಿಯುತಿದ್ದಾರೆ. ಕಳೆದ ವರ್ಷ 11 ಜನ ಸಮುದ್ರದ ಪಾಲಾಗಿದ್ದರು. ಹೀಗಾಗಿ ಮಳೆಗಾಲ ಹಾಗೂ ಚಂಡಮಾರುತದ ಸಂದರ್ಭದಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರಲಾಗುತ್ತದೆ. ಬರುವ ಪ್ರವಾಸಿಗರು ಮೋಜು ಮಸ್ತಿಯಿಂದಾಗಿ ತಮ್ಮ ಜೀವಕ್ಕೆ ತಾವೇ ಆಪತ್ತು ತಂದುಕೊಳ್ಳುತಿದ್ದಾರೆ. ಇದನ್ನೂ ಓದಿ: ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ

  • ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ  ಪೊಲೀಸ್ ಭದ್ರತೆ ವ್ಯವಸ್ಥೆ

    ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ  ಪೊಲೀಸ್ ಭದ್ರತೆ ವ್ಯವಸ್ಥೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದ ಶಿವನ ಮೂರ್ತಿಯ ಚಿತ್ರವನ್ನು ವಿರೂಪಗೊಳಿಸಿ ಐಸಿಸ್‍ನ ಪತ್ರಿಕೆ ದಿ ವಾಯ್ಸ್ ಆಪ್ ಹಿಂದ್ ನಲ್ಲಿ ಪ್ರಕಟವಾಗುತಿದ್ದಂತೆ ಇತ್ತ ಜಿಲ್ಲೆಯ ಮುರುಡೇಶ್ವರ ದೇವಸ್ಥಾನಕ್ಕೆ ಗೃಹಸಚಿವರ ಸೂಚನೆಯಂತೆ ಭದ್ರತೆ ವದಗಿಸಲಾಗಿದೆ.

    ಇಂದಿನಿಂದ ಜಾರಿ ಬರುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಒಂದು ಪೊಲೀಸ್ ತುಕಡಿಯನ್ನು ನಿಯೋಜನೆ ಮಾಡಿದ್ದು, ದೇವಸ್ಥಾನದ ಒಳಭಾಗದಲ್ಲಿ ಎ.ಎಸ್.ಐ ಸೆರಿದಂತೆ ಹತ್ತು ಜನ ಪೊಲೀಸರನ್ನು ಭದ್ರತೆ ಹಾಗೂ ಬರುವ ಭಕ್ತರ ತಪಾಸಣೆಗೆ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ:  ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು

    ವಿವಿಧ ಸಂಘಟನೆಯಿಂದ ಖಂಡನೆ ವ್ಯಕ್ತವಾಗಿದೆ. ಶಿವನ ವಿಗ್ರಹ ವಿರೂಪಗೊಳಿಸಿ ಪ್ರಕಟಿಸಿದ್ದಕ್ಕೆ ಮುರುಡೇಶ್ವರದಲ್ಲಿ ಐಸಿಸ್ ಪ್ರತಿಕೃತಿ ದಹನ ಮಾಡಿ ಬಿಜೆಪಿ ಯುವಮೋರ್ಚಾದಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು. ತಪ್ಪಿತಸ್ಥರ  ವಿರುದ್ಧ ಶೀಘ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಭಟ್ಕಳ, ಕುಮಟಾ ಶಾಸಕರು ಸಹ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

    ಸಿದ್ದಾಪುರ ತಾಲೂಕಿನ ಕಲಗದ್ದೆ ಗ್ರಾಮಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದರು. ಮುರುಡೇಶ್ವರ ದೇವಸ್ಥಾನದ ವಿಗ್ರಹ ಧ್ವಂಸಗೊಳಿಸಿ ಐಸಿಸ್ ಧ್ವಜ ನೆಟ್ಟ ಚಿತ್ರ ಹರಿಬಿಟ್ಟವರ ಕುರಿತು ತನಿಖೆಗೆ ಸೂಚಿಸಲಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು. ದೇವಸ್ಥಾನಕ್ಕೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

  • ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು?

    ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು?

    – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

    ಕಾರವಾರ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ ಎಂಬ ಭಯಾನಕ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಫೋಟೋ ಹಾಕಿದ್ದು, ಅದರ ಮೇಲೆ Its time to Break False Gods’ ಎಂದು ಬರೆದಿರುವ ಫೋಟೋ ಪ್ರಕಟವಾಗಿದೆ ಎಂದು ಅಂಶುಲ್ ಸಕ್ಸೇನಾ ಎಂಬ ಹೆಸರಿನ ಫೇಸ್ ಬುಕ್ ಪೇಜಿನಿಂದ ಪೋಸ್ಟ್ ಮಾಡಲಾಗಿದೆ.

    ಫೋಟೋದಲ್ಲಿ ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ರೀತಿಯ ಧ್ವಜ ಹಾರಾಡುವಂತೆ ಚಿತ್ರಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅಂಶುಲ್ ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

    ಸದ್ಯ ಈ ಫೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಸಂಬಂಧಿಸಿದ ಇಲಾಖೆ ಕ್ರಮವಹಿಸಬೇಕು ಮತ್ತು ಇಂತಹ ದುಷ್ಕೃತ್ಯಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಮುರುಡೇಶ್ವರ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

    ಮುರುಡೇಶ್ವರ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

    ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ.

    ಅರ್ಜುನ್, ಉಮೇಶ್, ಸೂರ್ಯ ಅವರನ್ನು ರಕ್ಷಣೆ ಮಾಡಲಾಗಿದೆ. ಶಿವಮೊಗ್ಗದ ಶಿಕಾರಿಪುರದಿಂದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಸಮುದ್ರದಲ್ಲಿ ಈಜುವಾಗ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    ಪ್ರವಾಸಿಗರು ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಲೈಫ್‌ ಗಾರ್ಡ್‌ ಸಿಬ್ಬಂದಿ ಹಾಗೂ ಟೂರಿಸ್ಟ್‌ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

  • ಹಫ್ತಾ ವಸೂಲಿ ಆರೋಪ – ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕ ಬಂಧನ

    ಹಫ್ತಾ ವಸೂಲಿ ಆರೋಪ – ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕ ಬಂಧನ

    ಕಾರವಾರ: ಉದ್ಯಮಿಗಳಿಂದ ಹಫ್ತಾ ವಸೂಲಿ ಹಾಗೂ ಜೀವ ಬೆದರಿಕೆ ಆರೋಪದಡಿ ಮುರುಡೇಶ್ವರ ಮೂಲದ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ್‌ ನಾಯ್ಕನನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.

    ಜನವರಿ 2 ರಂದು ಮುರುಡೇಶ್ವರದ ಉದ್ಯಮಿ ಹಾಗೂ ನೇತ್ರಾಣಿ ಸ್ಕೂಬಾ ಡ್ರೈವಿಂಗ್ ಮಾಲೀಕ ಗಣೇಶ್ ಹರಿಕಾಂತ ಅವರು ನಡೆಸುತ್ತಿದ್ದ ನಡೆಸುತ್ತಿರುವ ಉದ್ಯಮಗಳಿಗೆ ಹಫ್ತಾ ನೀಡುವಂತೆ ಪೀಡಿಸುತ್ತಿದ್ದ. ಹಣ ನೀಡದಿದ್ದಾಗ ಮರುಡೇಶ್ವರದ ಅವರ ಕಚೇರಿಗೆ ಬಂದು ಜೀವ ಬೆದರಿಕೆ ಹಾಕಿದ್ದ.

    ಈ ಹಿನ್ನೆಲೆಯಲ್ಲಿ ಜಯಂತ್‌ ನಾಯ್ಕ್‌ ವಿರುದ್ಧ ಮುರುಡೇಶ್ವರ ಠಾಣೆಯಲ್ಲಿ ಗಣೇಶ್ ಹರಿಕಾಂತ್ ದೂರು ನೀಡಿದ್ದರು. ಮುರುಡೇಶ್ವರ ಪೊಲೀಸರು ಸಿಸಿ‌ಟಿವಿ ಕ್ಯಾಮೆರಾ ಹಾಗೂ ಪ್ರತ್ಯಕ್ಷ ಸಾಕ್ಷಿ ಆಧಾರದಲ್ಲಿ ಈತನ ಮೇಲೆ ಪ್ರಕರಣ ದಾಖಲಿಸಿದ್ದರು.

    ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಈತನನನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಜಯಂತ್ ನಾಯ್ಕ ಮುರುಡೇಶ್ವರದ ಕೆಲವು ವರ್ತಕರು, ಅಂಗಡಿ ಮಾಲೀಕರ ಬಳಿ ಹಫ್ತಾ  ವಸೂಲಿ ಮಾಡುತಿದ್ದ ಎಂದು ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಜೊತೆಗೆ ಕೋಮು ಪ್ರಚೋದನೆ, ಗೂಂಡಾಗಿರಿ ಮಾಡಿರುವ ಬಗ್ಗೆ ಸಹ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು.

     

  • ಕೊರೊನಾ ಭಯದಿಂದ ಚಿಕಿತ್ಸೆ ನೀಡದ ವೈದ್ಯರು- ಹೃದಯಾಘಾತದಿಂದ ವ್ಯಕ್ತಿ ಸಾವು

    ಕೊರೊನಾ ಭಯದಿಂದ ಚಿಕಿತ್ಸೆ ನೀಡದ ವೈದ್ಯರು- ಹೃದಯಾಘಾತದಿಂದ ವ್ಯಕ್ತಿ ಸಾವು

    ಕಾರವಾರ: ಹೃದಯಾಘಾತವಾದ ವ್ಯಕ್ತಿಗೆ ಕೊರೊನಾ ಭಯದಿಂದ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ ಹಿನ್ನೆಲೆ ರೋಗಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಮುರುಡೇಶ್ವರ ನಿವಾಸಿ ಹುಕ್ಮಾರಾಮ್ ಬೊರಾನ (65) ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ವ್ಯಕ್ತಿ. ಮೂಲತಃ ರಾಜಸ್ಥಾನದ ಹುಕ್ಮಾರಾಮ್ ಬೋರಾನ್ ಕಳೆದ 35 ವರ್ಷಗಳಿಂದ ಮುರುಡೇಶ್ವರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ ಎದೆನೋವಿನಿಂದ ಅಸ್ವಸ್ಥಗೊಂಡ ಖಾಸಗಿ ಕ್ಲಿನಿಕ್‍ಗೆ ತೆರಳಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮರಳುವಾಗ ಮೂರ್ಚೆ ಹೋಗಿದ್ದಾರೆ.

    ನಂತರ ಕೂಡಲೇ ಸಂಬಂಧಿಕರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ವೈದ್ಯ ಪ್ರಿಯಾ ಗೋನ್ಸಾಲಿಸ್ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಚಿಕಿತ್ಸೆ ಕೊಡಲು ನಿರಾಕರಿಸಿ ಇಲ್ಲಿಂದ ತೆಗೆದುಕೊಂಡು ಹೋಗಿ ಇಲ್ಲವಾದರೆ ಪೊಲೀಸ್ ಠಾಣೆಗೆ ದೂರು ನೀಡುವೆ ಎಂದು ಬೆದರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಅಲ್ಲಿಂದ ನೇರವಾಗಿ ಮುರುಡೇಶ್ವರದ ಆರ್.ಎನ್.ಎಸ್. ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಚಿಕಿತ್ಸೆ ದೊರಕದೆ ಸುಮಾರು ಎರಡು ಗಂಟೆ ಅಲೆದಾಡಿದ ನಂತರ ಸ್ಥಳೀಯ ಕ್ಲಿನಿಕ್ ವೈದ್ಯರು ಪರೀಶೀಲನೆ ನಡೆಸಿ, ರೋಗಿ ಉಸಿರಾಡುತ್ತಿದ್ದು ಕೂಡಲೆ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿ ರೋಗಿ ಮೃತಪಟ್ಟಿದ್ದಾರೆ.

    ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ತಮ್ಮ ತಂದೆಯನ್ನು ಕಳೆದುಕೊಳ್ಳುವಂತಾಯಿತು ಎಂದು ಮೃತ ವ್ಯಕ್ತಿಯ ಮಗ ರಿತೇಶ್ ದೂರಿದ್ದಾರೆ. ಇನ್ನು ವೈದ್ಯರ ನಿರ್ಲಕ್ಷ್ಯಕ್ಕೆ ಮುರಡೇಶ್ವರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  • ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ

    ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ

    – ಕಳ್ಳ ಸ್ವಾಮೀಜಿ ಮುರಡೇಶ್ವರದಲ್ಲಿ ಅರೆಸ್ಟ್

    ಕೋಲಾರ: 19 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಮಿಲ್ಕಿ ಬಾಯ್ ಲುಕ್‍ನಲ್ಲಿ ಪೋಸ್ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ. ಆದರೆ ಫೆಬ್ರವರಿ 24ರಂದು ಯುವತಿ ಶ್ಯಾಮಲ (19) ಜೊತೆ ಪರಾರಿಯಾಗಿದ್ದ. ಈ ಸಂಬಂಧ ಯುವತಿಯ ಪೋಷಕರು, ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ವಾಮೀಜಿ ಮುರುಡೇಶ್ವರದಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ ಜಿಲ್ಲೆಗೆ ಕರೆತರುತ್ತಿದ್ದಾರೆ.

    ಏನಿದು ಪ್ರಕರಣ?:
    ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸ್ವಾಮೀ ದೇವಾಲಯಕ್ಕೆ ಜನವರಿ 15ರಂದು ಬಂದಿದ್ದ ಸ್ವಾಮೀಜಿ, ನಾನು ಇಲ್ಲಿಯೆ ಇದ್ದು ದೇವಾಲಯದ ಅಭಿವೃದ್ಧಿಯ ಜೊತೆಗೆ ಸೇವಾಶ್ರಮ ಮಾಡಿ ಪೀಠಾಧಿಪತಿಯಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದ. ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಮೂಲದ ರಾಘವೇಂದ್ರ ಆಲಿಯಾಸ್ ದತ್ತಾತ್ರೇಯ ಅವಧೂತನನ್ನು ಭೀಮಲಿಂಗೇಶ್ವರ ಸೇವಾಶ್ರಮದ ಸ್ವಾಮೀಜಿಯಾಗಿ ನೇಮಕ ಮಾಡಲಾಗಿತ್ತು.

    ಗ್ರಾಮಸ್ಥರು ಸ್ವಾಮೀಜಿ ಜೊತೆಗೆ ಮಾತುಕತೆ ನಡೆಸಿ ದೇವಾಲಯ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಸಿಎಂ ಯಡಿಯೂರಪ್ಪ ಅವರು ಸೇರಿದಂತೆ ರಾಜ್ಯದ ಉಪ ಮುಖ್ಯಮಂತ್ರಿ, ಸಚಿವರು ಗಣ್ಯರಿಗೆ ಆಹ್ವಾನ ನೀಡಿ ಅದ್ದೂರಿಯಾಗಿ ಜಾತ್ರೆ ಮಾಡಿದ್ದರು. ಆದರೆ ಗ್ರಾಮಕ್ಕೆ ಬಂದ ಕೆಲವೇ ದಿನಗಳಲ್ಲಿ ದತ್ತಾತ್ರೇಯ ಅವಧೂತ ಸ್ವಾಮೀಜಿ ಅದೇ ಗ್ರಾಮದ 19 ವರ್ಷದ ಶ್ಯಾಮಲ ಎಂಬ ಯುವತಿಯ ಜೊತೆ ನಾಪತ್ತೆಯಾಗಿದ್ದ.

    ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದರು. ಯುವತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಕೋಲಾರ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಯುವತಿ ಹಾಗೂ ಸ್ವಾಮೀಜಿ ಮುರುಡೇಶ್ವರದ ಬೀಚ್ ಇರುವುದನ್ನು ಪತ್ತೆಹಚ್ಚಿದ್ದರು. ದತ್ತಾತ್ರೇಯ ಅವಧೂತ ಸ್ವಾಮೀಜಿ ವೇಷ ತೆಗೆದು ಸಖತ್ ಕ್ಯೂಟ್ ಮಿಲ್ಕಿ ಬಾಯ್ ವೇಷದಲ್ಲಿ ಮಿಂಚುತ್ತಿದ್ದ. ಪೊಲೀಸರ ತಂಡವೊಂದು ಮುರಡೇಶ್ವರಕ್ಕೆ ಹೋಗಿ ಸ್ವಾಮೀಜಿಯನ್ನು ಬಂಧಿಸಿ ಜಿಲ್ಲೆಗೆ ಕರೆತರುತ್ತಿದೆ ಎಂಬ ಮಾಹಿತಿ ಲಭಿಸಿದೆ.