Tag: murderer

  • ಚಾಕುವಿನಿಂದ ಇರಿದು ಕ್ರಿಕೆಟಿಗನ ಬರ್ಬರ ಹತ್ಯೆ

    ಚಾಕುವಿನಿಂದ ಇರಿದು ಕ್ರಿಕೆಟಿಗನ ಬರ್ಬರ ಹತ್ಯೆ

    ಮುಂಬೈ: ಮೂವರು ಅಪರಿಚಿತ ವ್ಯಕ್ತಿಗಳು ಸ್ಥಳೀಯ ಕ್ರಿಕೆಟಿಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ.

    ಗುರುವಾರ ತಡರಾತ್ರಿ ಸುಮಾರು 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಕ್ರಿಕೆಟಿಗನನ್ನು ರಾಕೇಶ್ ಪನ್ವಾರ್ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ರಾಕೇಶ್‍ಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ರಾಕೇಶ್‍ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿ ರಾಕೇಶ್ ಮೃತಪಟ್ಟಿದ್ದಾರೆ.

    ಮೃತ ರಾಕೇಶ್ ಕ್ರಿಕೆಟ್ ಕೋಚ್‍ನಲ್ಲಿ ಕೆಲಸ ಮಾಡುತ್ತಿದ್ದು, ಯುವತಿಯನ್ನು ಪ್ರೀತಿಸುತ್ತಿದ್ದನು. ಹೀಗಾಗಿ ಪ್ರೀತಿ ವಿಚಾರವಾಗಿಯೇ ಆತನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಸ್ನೇಹಿತ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಪತ್ನಿ, ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ರೈಲಿಗೆ ಜಿಗಿದ.!

    ಪತ್ನಿ, ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ರೈಲಿಗೆ ಜಿಗಿದ.!

    ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದು, ಬಳಿಕ ತಾನೂ ರೈಲಿಗೆ ಜಿಗಿದು ಮೃತಪಟ್ಟಿರುವ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ.

    ಬಲವಂತ್ ರಾಯ್ಪಾಸಿನ್ ಸಿಂಧಾಲ್ ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡಿ ಮೃತಪಟ್ಟಿದ್ದಾನೆ. ಈತ ಮೊದಲಿಗೆ ಪತ್ನಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಮಕ್ಕಳು ತಾಯಿಯ ರಕ್ಷಣೆಗೆ ಬಂದಿದ್ದಾರೆ. ಆಗ ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಮೂವರೂ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಪತ್ನಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರು ಮಕ್ಕಳನ್ನು ವಡೋದರದ ಸರ್ ಸಯ್ಯಾಜಿರಾವ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

    ನಮಗೆ ಆರೋಪಿ ಬಲವಂತ್ ನ ಶವ ಕರ್ಜನ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ. ಆರೋಪಿ ಬಲವಂತ್ ಸ್ಥಳೀಯ ರೈಲಿನ ಮುಂದೆ ಜಿಗಿದು ಮೃತಪಟ್ಟಿದ್ದಾನೆ. ಸ್ಥಳದಲ್ಲಿದ್ದ ಫೋನ್, ಸಿಮ್ ಕಾರ್ಡ್, ಟ್ಯಾಟೊ ಮತ್ತು ಬೈಸಿಕಲ್ ಪತ್ತೆಯಾಗಿದ್ದು, ಅವುಗಳ ಸಹಾಯದಿಂದ ಬಲವಂತ್ ಎಂದು ನಾವು ಗುರುತಿಸಿದ್ದೇವೆ ಅಂತ ಸಬ್ ಇನ್ಸ್ ಪೆಕ್ಟರ್ ಆರ್.ಜಿ ದೇಸಾಯಿ ಹೇಳಿದರು.

    ಈ ದಂಪತಿಗೆ ಮದುವೆಯಾಗಿ ಹದಿನೆಂಟು ವರ್ಷ ಕಳೆದಿದೆ. ಆದರೆ ಇವರಿಬ್ಬರ ಮಧ್ಯೆ ಪದೇ ಪದೆ ಜಗಳ ನಡೆಯುತಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಕೊಲ್ಲಲು ಗೂಗಲ್ ಸರ್ಚ್ ಮಾಡಿದ್ದ ಗೇ ಪತಿ

    ಪತ್ನಿ ಕೊಲ್ಲಲು ಗೂಗಲ್ ಸರ್ಚ್ ಮಾಡಿದ್ದ ಗೇ ಪತಿ

    ಲಂಡನ್: ತನ್ನ ಸಲಿಂಗಿ ಗೆಳೆಯನೊಂದಿಗೆ ಜೀವನ ನಡೆಸಲು ಪತ್ನಿಯನ್ನು ಕೊಲೆ ಮಾಡಿದ್ದ ಭಾರತದ ಮೂಲದ ಫಾರ್ಮಸಿಸ್ಟ್ ಗೆ ಇಂಗ್ಲೆಂಡ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಮಿತೇಶ್ ಪಟೇಲ್ (37) ಕೊಲೆಗೈದ ಪತಿಯಾಗಿದ್ದು, ಜೆಸ್ಸಿಕಾ (34) ಕೊಲೆಯಾದ ದುರ್ದೈವಿ. ಪತ್ನಿಯ ಹೆಸರಿನಲ್ಲಿದ್ದ 2 ಮಿಲಿಯನ್ ಪೌಂಡ್ (ಸುಮಾರು 17 ಕೋಟಿ ರೂ.) ವಿಮೆ ಹಣವನ್ನು ಪಡೆಯಲು ಸಂಚು ರೂಪಿಸಿದ್ದ ಮಿತೇಶ್ ಪಟೇಲ್ ಪತ್ನಿಯನ್ನೇ ಕೊಲೆ ಮಾಡಿದ್ದು, ಅದಕ್ಕೂ ಮುನ್ನ ಕೊಲೆ ಮಾಡಲು ಗೂಗಲ್‍ನಲ್ಲಿ ಸರ್ಚ್ ಮಾಡಿದ್ದ.

    ತನ್ನ ಪತ್ನಿಯನ್ನು ಕೊಲೆ ಮಾಡಿದ್ದ ಮಿತೇಶ್ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಸುಳ್ಳು ಹೇಳಿ ಪ್ರಕಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆದರೆ ಪ್ರಕರಣದ ತನಿಖೆಯ ವೇಳೆ ಪೊಲೀಸರಿಗೆ ಮಿತೇಶ್ ಸಂಚು ತಿಳಿದುಬಂದಿದೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಮಿತೇಶ್ ತನ್ನ ಪತ್ನಿಯನ್ನು ಕೊಲೆ ಮಾಡಲು ಗೂಗಲ್ ನಲ್ಲಿ ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿದ್ದ. ಅಲ್ಲದೇ ಪತ್ನಿ ಹಾಗೂ ಆತನ ಬಳಕೆ ಮಾಡುತ್ತಿದ್ದ ಐಫೋನ್ ಹೆಲ್ತ್ ಆ್ಯಪ್ ಅಂದು ನಡೆದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಇದನ್ನೇ ಪ್ರಕರಣದ ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಪೊಲೀಸರು ಮಿತೇಶ್‍ಗೆ ಶಿಕ್ಷೆ ಆಗುವಂತೆ ಮಾಡಲು ಯಶಸ್ವಿಯಾಗಿದ್ದಾರೆ.

    ಮೊಬೈಲ್ ನಲ್ಲಿ ಅಳವಡಿಸಿದ್ದ ಆ್ಯಪ್ ದಿನದಲ್ಲಿ ವ್ಯಕ್ತಿ ನಡೆದ ಪ್ರತಿ ಹೆಜ್ಜೆಯನ್ನು ಲೆಕ್ಕ ಮಾಡಿ ಸಂಗ್ರಹ ಮಾಡುತ್ತಿತ್ತು. ಅದರಂತೆ ಅಂದು ಪತ್ನಿಯನ್ನು ಕೊಲೆ ಮಾಡಿದ್ದ ಸಮಯದಲ್ಲಿನ ನಡೆದ ಉದ್ರಿಕ್ತ ಚಟುವಟಿಕೆಯ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿತ್ತು. ಮಿತೇಶ್ ಕೊಲೆಯನ್ನು ಕಳ್ಳ ಮಾಡಿದ್ದಂತೆ ಸಾಕ್ಷಿ ಸೃಷ್ಟಿ ಮಾಡಲು ಪ್ರಯತ್ನಿಸಿದ್ದ. ಇದರಂತೆ ಪತ್ನಿಯನ್ನು ಕೊಲೆ ಮಾಡಿ ಬಳಿಕ ಆಕೆಯ ಬಳಿ ಇದ್ದ ಮೊಬೈಲನ್ನು ಮನೆಯ ಹೊರ ಆವರಣದಲ್ಲಿ ಎಸೆದಿದ್ದ. ಕಳ್ಳ ಸ್ಥಳದಿಂದ ಪರಾರಿ ಆಗುವ ವೇಳೆ ಮೊಬೈಲ್ ಬಿದ್ದಿದೆ ಎಂದು ಪೊಲೀಸರನ್ನು ನಂಬಿಸುವುದು ಆತನ ಉದ್ದೇಶವಾಗಿತ್ತು.

    ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದ ಮಿತೇಶ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಸಲಿಂಗಿ ಸ್ನೇಹಿತನ ಜೊತೆ ಬಾಳಲು ಮುಂದಾಗಿದ್ದ. ಪತಿ ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆತ ಸಲಿಂಗಿ ಎನ್ನುವುದು ಜೆಸ್ಸಿಕಾಗೆ ತಿಳಿದಿತ್ತು. ಆದರೆ ಇದನ್ನು 6 ವರ್ಷಗಳಿಂದ ಹೊರ ಜಗತ್ತಿಗೆ ತಿಳಿಯದಂತೆ ಆಕೆ ಸಹಿಸಿಕೊಂಡು ಬಂದಿದ್ದಳು.

    ಕೊಲೆ ಮಾಡಿದ್ದು ಹೇಗೆ?
    ಗೂಗಲ್‍ನಲ್ಲಿ ಪತ್ನಿಯನ್ನು ಕೊಲೆ ಮಾಡುವುದು ಹೇಗೆ ಎಂದು ಮಾಹಿತಿ ಪಡೆದಿದ್ದ ಮಿತೇಶ್ ಪ್ಲಾಸ್ಟಿಕ್ ಬ್ಯಾಗ್ ಬಳಸಿ ತನ್ನ ಕೈಯಾರೆ ಪತ್ನಿಯನ್ನು ಉಸಿರುಗಟ್ಟಿಸಿ ಮೇ 14 ರಂದು ಕೊಲೆ ಮಾಡಿದ್ದ. ಜೆಸ್ಸಿಕಾ ಅಂದು ಮನೆಗೆ ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಬಂದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.

    ಐವಿಎಫ್ ಚಿಕಿತ್ಸೆ ಪಡೆದಿದ್ದ ದಂಪತಿ: ಪತಿ ಮಿತೇಶ್ ಸಲಿಂಗಿ ಎಂದು ಗೊತ್ತಾದ ಬಳಿಕ ಜೆಸ್ಸಿಕಾ ಮಕ್ಕಳನ್ನು ಪಡೆಯಲು ಮೂರು ಬಾರಿ ಐವಿಎಫ್ ಚಿಕಿತ್ಸೆ ಪಡೆದ್ದರು. ಶೇಖರಿಸಿಟ್ಟ ಅಂಡಾಣು ಹಾಗೂ ವೀರ್ಯಾಣುಗಳನ್ನು ಕೃತಕವಾಗಿ ಗರ್ಭಾಶಯಕ್ಕೆ ವರ್ಗಾಯಿಸುವ ಈ ಚಿಕಿತ್ಸೆ ಪ್ರಯೋಜನಕ್ಕೆ ಬಂದಿರಲಿಲ್ಲ. ನಾಲ್ಕನೇ ಬಾರಿಗೆ ಇಬ್ಬರ ವೀರ್ಯವನ್ನು ಶೇಖರಿಸಿ ಲ್ಯಾಬ್ ನಲ್ಲಿ ಇಡಲಾಗಿತ್ತು. ಬಳಿಕ ಮಿತೇಶ್ ಪತ್ನಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದ.

    ಪತಿ ಎಲ್ಲಾ ವರ್ತನೆಗಳು ಜೆಸ್ಸಿಕಾಗೆ ತಿಳಿಯುತ್ತಿತ್ತು. ಪತಿ ತನ್ನ ಸಲಿಂಗಿ ಸ್ನೇಹಿತನೊಂದಿಗೆ ಸೆಕ್ಸ್ ಮಾಡುವುದು ಬಗ್ಗೆ ಆತನ ಮೊಬೈಲ್ ನಲ್ಲಿದ್ದ ಸಂದೇಶಗಳ ಮೂಲಕ ತಿಳಿದಿದ್ದಳು. ಅಲ್ಲದೇ ಪತಿ ತನ್ನ ಗೆಳೆಯರನ್ನು ಮನೆಗೆ ಕರೆದುಕೊಂಡು ಬಂದು ಕಾಂಡೋಮ್ ಬಳಸಿ ಸೆಕ್ಸ್ ಮಾಡಿದ್ದ ಎನ್ನುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಇಂಗ್ಲೆಂಡ್‍ನ ಮಿಡಲ್ಸ್ ಬರೊ ಪಟ್ಟಣದಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಮಿತೇಶ್ ಹಿಂದೂ ಧರ್ಮದ ವ್ಯಕ್ತಿಯಾಗಿದ್ದರೂ ಸಂಪ್ರದಾಯಗಳಿಂದ ಸದಾ ದೂರ ಇರಲು ಬಯಸುತ್ತಿದ್ದ. ಆದರೆ ಪತ್ನಿಯ ಅಂತಿಮ ವಿಧಿ ವಿಧಾನಗಳನ್ನು ಹಿಂದೂ ಧರ್ಮದ ಪ್ರಕಾರ ನಡೆಸಲು ಗೂಗಲ್ ಮಾಡಿದ್ದ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲಬುರಗಿ ಮಹಿಳೆ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್

    ಕಲಬುರಗಿ ಮಹಿಳೆ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್

    – ತನ್ನದಲ್ಲದ ತಪ್ಪಿಗೆ ಕೊಲೆಯಾದ ನತದೃಷ್ಟೆ

    ಕಲಬುರಗಿ: ಕಲಬುರಗಿಯ ರಾಮನಗರದ ನಿವಾಸಿಯಾಗಿದ್ದ ಮಹಿಳೆ ಶರ್ಮಿಳಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನ್ನದಲ್ಲದ ತಪ್ಪಿಗೆ ಶರ್ಮಿಳಾ ಕೊಲೆಯಾಗಿದ್ದಾಳೆ ಎಂಬ ಅಂಶ ಬೆಳಕಿಗೆ ಬಂದಿದೆ.

    ನ. 15 ರಂದು ರಾಮನಗರದ ನಿವಾಸದಲ್ಲಿ ಶರ್ಮಿಳಾ ಅವರ ಕೊಲೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಹಂತದಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ಸದ್ಯ ಕೊಲೆ ಮಾಡಿದ್ದ ಆರೋಪಿ ಕೃಷ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೇ ಆರೋಪಿ ಕೃಷ್ಣ ಕೊಲೆಯಾದ ಶರ್ಮಿಳಾರ ಗಂಡ ಸಂಜಾಯ್‍ರ ಅಕ್ಕನ ಮಗನಾಗಿದ್ದಾನೆ.

    ಕಾರಣವೇನು?
    ಕೊಲೆಯಾದ ಶರ್ಮಿಳಾ ಪತಿ ಸಂಜಯ್ ಮದುವೆಗೂ ಮುನ್ನ ಆರೋಪಿ ಕೃಷ್ಣನ ತಂಗಿ ಪೂಜಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಮದುವೆಗೆ ಮುನ್ನ ಪೂಜಾಳನ್ನು ನಿರಾಕರಿಸಿ ಶರ್ಮಿಳಾರ ಕೈ ಹಿಡಿದಿದ್ದ. ಬಳಿಕ ಸಂಜಯ್, ಶರ್ಮಿಳಾ ಮದುವೆಯಾಗಿ ಸುಖಿ ಸಂಸಾರ ಆರಂಭಿಸಿದ್ದರು. ಅಲ್ಲದೇ ಈ ದಂಪತಿಗೆ ಒಂದು ಗಂಡು ಮಗು ಕೂಡ ಜನಿಸಿತ್ತು. ಮದುವೆಗೂ ಮುನ್ನ ನಡೆದ ಘಟನೆ ಬಗ್ಗೆ ಶರ್ಮಿಳಾ ಅವರಿಗೂ ತಿಳಿದಿತ್ತು. ಆದರೆ ದಂಪತಿಗೆ ಮಗುವಾದ ಬಳಿಕ ಕುಟುಂಬದೊಂದಿಗೆ ಹೊಂದಿಕೊಂಡು ನಡೆದಿದ್ದರು. ಇಬ್ಬರ ಸುಖಿ ಸಂಸಾರ ಕಂಡ ಕೃಷ್ಣ ಮಾತ್ರ ತನ್ನ ತಂಗಿಯ ಸಾವಿಗೆ ದ್ವೇಷ ಸಾಧಿಸುತ್ತಿದ್ದ.

    ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಮದುವೆ ನಿರಾಕರಿಸಿದಕ್ಕೆ ಆರೋಪಿ ಕೃಷ್ಣ ತಂಗಿ ತೀವ್ರವಾಗಿ ಅಘಾತಗೊಂಡಿದ್ದಳು. ಅಲ್ಲದೇ ಇದೇ ನೋವಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ತನ್ನ ತಂಗಿಯ ಸಾವಿಗೆ ಸಂಜಯ್ ಜೀವನದಲ್ಲಿ ಬಂದ ಶರ್ಮಿಳಾ ಕಾರಣ ಎಂದು ತಿಳಿದಿದ್ದ ಕೃಷ್ಣ ಮನಸ್ಸಿನಲ್ಲೇ ದ್ವೇಷ ಸಾಧಿಸಿದ್ದ. ಅಲ್ಲದೇ ಇಬ್ಬರ ಸಂಸಾರ ನೋಡುತ್ತಿದ್ದ ಕೃಷ್ಣ ತನ್ನ ತಂಗಿಯ ಸಾವಿಗೆ ಕಾರಣರಾದ ಬಗ್ಗೆ ದ್ವೇಷ ಸಾಧಿಸುತ್ತಿದ್ದ. ಆದರೂ ಸಂಜಯ್ ನೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದ ಕೃಷ್ಣ ಆಗಾಗ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಮಾತನಾಡಿಕೊಂಡು ಹೋಗುತ್ತಿದ್ದ. ಇದರಂತೆ ನ.15 ರಂದು ಶರ್ಮಿಳಾಗೆ ಫೋನ್ ಮಾಡಿದ್ದ ಕೃಷ್ಣ ಮನೆಯಲ್ಲಿ ಒಬ್ಬಳೆ ಇರುವ ಬಗ್ಗೆ ಮಾಹಿತಿ ಪಡೆದಿದ್ದ. ಬಳಿಕ ನೇರ ಸಂಜಯ್ ಮನೆಗೆ ಧಾವಿಸಿದ್ದ ಕೃಷ್ಣ ಶರ್ಮಿಳಾರನ್ನು ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಆರೋಪಿ ಕೃಷ್ಣ, ಶರ್ಮಿಳಾರನ್ನು ಕೊಲೆ ಮಾಡಲು ಚಾಕು ಬಳಸಿದ್ದ. ಕೊಲೆಯಾದ ಬಳಿಕ ಚಾಕುವಿಗೆ ಅಂಟಿಕೊಂಡಿದ್ದ ರಕ್ತವನ್ನು ಮನೆಯಲ್ಲಿ ತೊಳೆದು ಇಟ್ಟಿದ್ದ. ಆದರೆ ಈ ವೇಳೆ ತನ್ನ ಕೈನಲ್ಲಿದ್ದ ವಾಚ್ ಅಲ್ಲೇ ಬಿಚ್ಚಿಟ್ಟಿದ್ದ ಆರೋಪಿ ಅದನ್ನು ಅಲ್ಲೇ ಮರೆತು ತೆರಳಿದ್ದ. ಪ್ರಕರಣ ಕುರಿತು ತನಿಖೆ ಆರಂಭಿಸಿದ ಕಲಬುರಗಿ ಪೊಲೀಸರು ಕೊಲೆಯಾದ ಸ್ಥಳದಲ್ಲಿ ಸಿಕ್ಕ ವಾಚ್ ಜಾಡು ಹಿಡಿದು ಘಟನೆ ನಡೆದ ವೇಳೆ ಆ ಪ್ರದೇಶದಲ್ಲಿದ್ದ ಮೊಬೈಲ್ ನೆಟ್‍ವರ್ಕ್ ಬಗ್ಗೆ ಮಾಹಿತಿ ಪಡೆದಿದ್ದರು. ಅಲ್ಲದೇ ಕೊಲೆಯಾದ ಶರ್ಮಿಳಾ ಫೋನ್‍ಗೆ ಕೊನೆಯ ಬಾರಿ ಕೃಷ್ಣ ಫೋನ್ ಮಾಡಿದ್ದ ಸಂಗತಿಯೂ ಬೆಳಕಿಗೆ ಬಂದಿತ್ತು. ಶರ್ಮಿಳಾ ಅಂತ್ಯ ಸಂಸ್ಕಾರದಲ್ಲೂ ಆರೋಪಿ ಭಾಗವಹಿಸಿರಲಿಲ್ಲ.

    ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿ ಪಡೆದ ಪೊಲೀಸರು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಬಂಧನಕ್ಕಾಗಿ ಬಲೆ ಬೀಸಿದ್ದರು. ಇಂದು ಆರೋಪಿ ನಗರ ರೈಲ್ವೇ ಟ್ರ್ಯಾಕ್ ಬಳಿ ಇದ್ದ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಕೃಷ್ಣ ಪೊಲೀಸರ ಮುಂದೇ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ತನ್ನದಲ್ಲದ ತಪ್ಪಿಗೆ ಮಾತ್ರ ಶರ್ಮಿಳಾ ಕೊಲೆಯಾಗಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗುರುಗ್ರಾಮ ಶೂಟೌಟ್ ಕೇಸ್ – ನಾಲ್ಕು ದಿನಗಳಿಂದ ನಿದ್ದೆ ಇಲ್ಲದೇ ಜಡ್ಜ್ ಪತ್ನಿಯನ್ನು ಕೊಂದೇಬಿಟ್ಟ!

    ಗುರುಗ್ರಾಮ ಶೂಟೌಟ್ ಕೇಸ್ – ನಾಲ್ಕು ದಿನಗಳಿಂದ ನಿದ್ದೆ ಇಲ್ಲದೇ ಜಡ್ಜ್ ಪತ್ನಿಯನ್ನು ಕೊಂದೇಬಿಟ್ಟ!

    ಗುರುಗ್ರಾಮ: ನ್ಯಾಯಾಧೀಶರ ಪತ್ನಿಯನ್ನು ಗುಂಡಿಟ್ಟು ಕೊಲೆ ಮಾಡಿದ ಆರೋಪಿ ಹೆಡ್ ಕಾನ್ಸ್‌ಸ್ಟೇಬಲ್ ಮಹಿಪಾಲ್ ಕೌಟುಂಬಿಕ ಸಮಸ್ಯೆಯಿಂದ ನರಳುತ್ತಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಆರೋಪಿ ಮಹಿಪಾಲ್ ಹರ್ಯಾಣದ ಗಾಯಕಿ ಕವಯಿತ್ರಿಯೊಬ್ಬರನ್ನು ಮದುವೆಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ನಿದ್ರೆಯಿಲ್ಲದೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆರೋಪಿ ಗುರು ಮತ್ತು ಗುರುಮಾತೆ ಪ್ರಭಾವಕ್ಕೆ ಒಳಗಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    2016ರಿಂದ ಮಹಿಪಾಲ್ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದು, ಇದೂವರೆಗೂ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲದೇ ಮಹಿಪಾಲ್ ಜಡ್ಜ್ ಬಗ್ಗೆ ಯಾವುದೇ ದೂರು ನೀಡಿಲ್ಲ. ಹೀಗಾಗಿ ಮಹಿಪಾಲ್ ಈ ಕೃತ್ಯ ಎಸಗಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನು ಓದಿ:  ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

    ಆರೋಪಿಯನ್ನು ಕೆಲಸದಿಂದ ವಜಾಮಾಡಲಾಗಿದ್ದು ಪೊಲೀಸರು 4 ದಿನಗಳ ಕಾಲ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕಾಗಿ ವಿಶೇಷ ತನಿಖಾ ತಂಡವನ್ನು ಹರ್ಯಾಣ ಪೊಲೀಸ್ ರಚಿಸಿದೆ.

    ವಿಲಕ್ಷಣ ಪೋಸ್ಟ್ ಹಾಕಿದ್ದ:
    ಶೂಟ್ ನಡೆಸುವ ಮುನ್ನ ದಿನವಾದ ಶುಕ್ರವಾರ ಮಹಿಪಾಲ್ ಫೇಸ್‍ಬುಕ್ ನಲ್ಲಿ ವಿಲಕ್ಷಣ ಪೋಸ್ಟ್ ಒಂದನ್ನು ಪ್ರಕಟಿಸಿದ್ದ. ನೀಲಿ ಪೆನ್ನಿನಲ್ಲಿ ‘ಪ್ಯಾಸ್ಟರ್ ರಾಬಿನ್’ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದ. ಈಗ ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಮುಂದುವರಿಸಿದ್ದಾರೆ.

    ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದ ಮಹಿಪಾಲ್ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದಿದ್ದ. 2007ರಲ್ಲಿ ಪೊಲೀಸ್ ಉದ್ಯೋಗಕ್ಕೆ ಸೇರಿದ್ದ ಈತ 2008ರಲ್ಲಿ ಮೀನಾ ಅವರನ್ನು ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಮಹಿಪಾಲ್ ಗುರು ಇಂದ್ರಜೀತ್ ಸಿಂಗ್ ಎಂದು ಶಂಕೆ ವ್ಯಕ್ತವಾಗಿದ್ದು, 2015ರ ಆಗಸ್ಟ್ ನಲ್ಲಿ ಮತಾಂತರ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ ಇಂದ್ರಜೀತ್ ಸಿಂಗ್ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಮಹಿಪಾಲ್ ಸಿಂಗ್ ಮಧ್ಯಸ್ಥಿಕೆಯ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು ಎನ್ನುವ ವಿಚಾರ ತಿಳಿದುಬಂದಿದೆ.

    ಆರೋಗ್ಯ ಪರೀಕ್ಷೆಯ ವೇಳೆ ಆತನಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಫಲಿತಾಂಶ ಬಂದಿದ್ದು, ಯಾವುದೋ ಒತ್ತಡಕ್ಕೆ ಒಳಗಾಗಿ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆ ಈಗ ವ್ಯಕ್ತವಾಗಿದೆ.

    ಗುರುಗ್ರಾಮದಲ್ಲಿ ಶನಿವಾರ ಮಹಿಪಾಲ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೃಷ್ಣ ಕಾಂತ್ ಅವರ ಪತ್ನಿ ರಿತು ಮತ್ತು ಮಗ ಧ್ರುವ್ ಮೇಲೆ ಗುಂಡಿನ ದಾಳಿ ನಡೆಸಿದ್ದ. ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಈ ಕೃತ್ಯ ಎಸಗಿದ್ದ. ಕೃತ್ಯದ ಬಳಿಕ ನ್ಯಾಯಾಧೀಶರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದ. ರಿತು ಮತ್ತು ಧ್ರುವ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಿತು ಮೃತಪಟ್ಟಿದ್ದಾರೆ. ಧ್ರುವ್ ಪರಿಸ್ಥಿತಿ ಗಂಭೀರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 7 ತಿಂಗಳ ಕಂದಮ್ಮನನ್ನು ಕೊಂದ್ಳು ಪಾಪಿ ತಾಯಿ

    7 ತಿಂಗಳ ಕಂದಮ್ಮನನ್ನು ಕೊಂದ್ಳು ಪಾಪಿ ತಾಯಿ

    ನವದೆಹಲಿ: ಆರ್ಥಿಕ ಸಮಸ್ಯೆಗೆ ಹೆದರಿ ತನ್ನ ಏಳು ತಿಂಗಳ ಕಂದಮ್ಮನನ್ನು ಕೊಂದು ಸಹಜ ಸಾವು ಎಂದು ಸಾಬೀತು ಪಡಿಸಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಆದಿಬಾ ಎಂಬವಳೇ ಮಗುವನ್ನು ಕೊಂದ ಪಾಪಿ ತಾಯಿ. ಮಗುವಿನ ತಂದೆ ಇಸ್ರೇಲ್ ಖಾನ್ ಮತ್ತು ಆದಿಬಾ ಮಲ್ಚಾಂಡ್ ಆಸ್ಪತ್ರೆಗೆ ಮೃತಪಟ್ಟ ಮಗುವನ್ನು ಕರೆತರುತ್ತಾರೆ. ಆಗಸ್ಟ್ 20 ರಂದು ಹಳ್ರಾತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಮಗು ಮೃತಪಟ್ಟಿರುವುದು ತಿಳಿದು, ವಿಚಾರಿಸಿದಾಗ ಮಗು ಬಕೆಟ್ ನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಪೋಷಕರು ಹೇಳುತ್ತಾರೆ.

    ಮಗುವಿನ ಕುತ್ತಿಗೆಯ ಭಾಗದಲ್ಲಿ ಅನುಮಾನಸ್ಪದ ಗುರುತುಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಮರಣೋತ್ತರ ಪರೀಕ್ಷೆಗಾಗಿ ಮಗುವಿನ ದೇಹವನ್ನು ಆಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ (ಏಮ್ಸ್)ಗೆ ಕಳುಹಿಸಲಾಗಿತ್ತು.

    ಆಗಸ್ಟ್ 27 ರಂದು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಕತ್ತಿನ ಭಾಗಕ್ಕೆ ಮಾರಣಾಂತಿಕ ಒತ್ತಡ ಉಂಟಾಗಿದೆ. ಅಲ್ಲದೇ ಮೃತ ದೇಹದ ಆಂತರಿಕ ಭಾಗಗಳಲ್ಲಿ ಯಾವುದೇ ನೀರು ತುಂಬಿರಲಿಲ್ಲ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಪೊಲೀಸರು ಮನೆಯ ಸ್ನಾನದ ಕೋಣೆಯನ್ನು ಪರಿಶೀಲಿಸಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದ್ದ ಬಕೆಟ್ ವಶಪಡಿಸಿಕೊಂಡಿದ್ದರು. ಆದಿಬಾ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿತ್ತು ಎಂಬುವುದು ಬೆಳಕಿಗೆ ಬಂದಿತ್ತು.

    ಕೊಲೆ ಮಾಡಿದ್ದು ಯಾಕೆ..?
    ಅನುಮಾನದ ಆಧಾರದ ಮೇಲೆ ಆದಿಬಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮಗು ಹುಟ್ಟಿದಾಗಿನಿಂದಲೂ ಅನಾರೋಗ ಪೀಡಿತವಾಗಿತ್ತು. ಮಗುವಿನ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿತ್ತು. ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಮಗುವನ್ನೇ ಕೊಲೆ ಮಾಡಲು ನಿರ್ಧರಿದ್ದಾಳೆ. ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಲಗಿದ್ದ ಮಗುವನ್ನು ತನ್ನ ದುಪ್ಪಟದ ಸಹಾಯದಿಂದ ಮಗುವನ್ನು ಕೊಲೆ ಮಾಡಿದ್ದಾಳೆ. ಮೃತಪಟ್ಟ ಮಗುವಿನ ದೇಹವನ್ನು ಬಕೆಟ್ ನಲ್ಲಿ ಹಾಕಿ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಮೃತ ದೇಹವನ್ನು ತೆಗೆದು ಹಾಸಿಗೆ ಮೇಲೆ ಮಲಗಿಸಿ ಪತಿಗೆ ವಿಷಯವನ್ನು ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದರು.

    ಸದ್ಯಕ್ಕೆ ಪೊಲೀಸರು ಆರೋಪಿ ಆದಿಬಾಳನ್ನು ಬಂಧಿಸಿದ್ದು, ಕೊಲೆ ಮಾಡಲು ಬಳಸಿದ್ದ ದುಪ್ಪಟವನ್ನು ವಶಪಡಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನೈತಿಕ ಸಂಬಂಧದ ಶಂಕೆಗೆ ಮಹಿಳೆ ಬಲಿ!

    ಅನೈತಿಕ ಸಂಬಂಧದ ಶಂಕೆಗೆ ಮಹಿಳೆ ಬಲಿ!

    ಕಲಬುರಗಿ: ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದ್ದರಿಂದ ಬೆಂಕಿಗೆ ಬಲಿಯಾಗಿದ್ದ ಮಹಿಳೆಯೊಬ್ಬರು ಇಂದು ಜಿಲ್ಲಾಸ್ಪತ್ರೆಯಲ್ಲಿ ಮೃತಟ್ಟಿದ್ದಾರೆ.

    ಜಿಲ್ಲೆಯ ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದ ಶಾರದಾಬಾಯಿ (20) ಮೇಲೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಪತಿ ವೀರಣ್ಣ ಪೋಷಕರ ಜೊತೆ ಸೇರಿ ಪತ್ನಿ ಶಾರದಾಬಾಯಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ಘಟನೆ ನಂತರ ಶಾರದಾಬಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ವೀರಣ್ಣ ಪರಾರಿಯಾಗಿದ್ದನು. ಇದನ್ನು ಓದಿ: ಅನೈತಿಕ ಸಂಬಂಧ ಶಂಕೆ: ಪೋಷಕರೊಂದಿಗೆ ಸೇರಿ ಪತ್ನಿಗೆ ಬೆಂಕಿ ಇಟ್ಟ ಪತಿ!

    ಶಾರದಾಬಾಯಿಯ ದೇಹವು 80% ರಷ್ಟು ಸುಟ್ಟ ಗಾಯಗಳಾಗಿತ್ತು. ಹೀಗಾಗಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಶಾರದಾಬಾಯಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಪತಿ ವೀರಣ್ಣನನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದ ಆರೋಪಿಗಳಾದ ಅತ್ತೆ ನೀಲಮ್ಮಾ, ಮಾವ ಗುಂಡಪ್ಪನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

  • ಕರುಳ ಕುಡಿಯನ್ನೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದ ನಿವೃತ್ತ ನೌಕಾ ಅಧಿಕಾರಿ

    ಕರುಳ ಕುಡಿಯನ್ನೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದ ನಿವೃತ್ತ ನೌಕಾ ಅಧಿಕಾರಿ

    ಹುಬ್ಬಳ್ಳಿ: ತಂದೆಯೇ ತನ್ನ ಮಗಳನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಸಂತೋಷ ನಗರದಲ್ಲಿ ನಡೆದಿದೆ.

    ಆರೋಪಿ ತಂದೆಯಾದ ಯನಗಣ್ಣ ಮಗಳಾದ ನಿಖಿತಾ (16)ಳನ್ನು ಕೊಲೆ ಮಾಡಿದ್ದಾನೆ. ಇದೇ ವೇಳೆ ಪತ್ನಿ ಸುಜಾತಾ ಹಾಗೂ ಮಾವ ರಾಗಪ್ಪ ಎಂಬವರ ಮೇಲೆಯೂ ಮೋಹನ್ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಏನಿದು ಘಟನೆ: ಮೋಹನ್ ಯನಗಣ್ಣವರ ನಿವೃತ್ತ ನೌಕಾ ಸೇನೆ ಉದ್ಯೋಗಿಯಾಗಿದ್ದು, ಕೆಲ ವರ್ಷಗಳಿಂದ ಗಂಡ ಹೆಂಡತಿ ನಡುವೆ ಕೌಟುಂಬಿಕ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅದ್ದರಿಂದ ದಂಪತಿಗಳಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಸೋಮವಾರ ಏಕಾಏಕಿ ಬಂದು ಆಗಮಿಸಿದ ಮೋಹನ್ ಇಡೀ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾನೆ.

    ಘಟನೆಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಗಳು ನಿಖಿತಾಳನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಕೊಂಡ್ಯೊಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ. ಈ ವೇಳೆ ಗಾಯಗೊಂಡಿರುವ ಪತ್ನಿ ಸುಜಾತಾ ಹಾಗೂ ಮಾವ ರಾಗಪ್ಪ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಗಳ ಮತ್ತು ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಬಳಿಕ ವಿಷ ಕುಡಿದು ಆತ್ನಹತ್ಯೆಗೆ ಯತ್ನಿಸಿರುವ ಆಶೋಕ್ ಸಹ ಅಸ್ವಸ್ಥರಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಶೋಕ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

     

  • ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ಹೈದರಾಬಾದ್: ತೆಲಂಗಾಣದ ನಗರ್ ಕರ್ನೂಲ್ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದ ಸುಧಾಕರ್ ರೆಡ್ಡಿ ಎಂಬವರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಬೆಳಕಿಗೆ ಬರುತ್ತಿದೆ.

    ಮೃತ ಸುಧಾಕರ್ ರೆಡ್ಡಿಯವರು ನಗರ್ ಕರ್ನೂಲ್ ನ ಹೌಸಿಂಗ್ ಬೋರ್ಡ್ ಕಾಲೋನಿಯ ತಮ್ಮ ಮನೆಯಲ್ಲಿ ಶುಕ್ರವಾರ ಕೊಲೆಯಾಗಿದ್ದರು. ಸುಧಾಕರ್ ರೆಡ್ಡಿ ರನ್ನು ಆತನ ಪತ್ನಿ ಸ್ವಾತಿ ಹಾಗೂ ಪತ್ನಿಯ ಪ್ರಿಯಕರ ರಾಜೇಶ್ ಎಂಬುವರು ಸೇರಿ ಕೊಲೆ ಮಾಡಿದ್ದಾರೆ.

    ಕ್ರಷರ್ ವ್ಯಾಪಾರ ಮಾಡುತ್ತಿದ್ದ ಸುಧಾಕರ್ ರೆಡ್ಡಿ ವ್ಯಾಪಾರ ಕೆಲಸದ ಮೇಲೆ ಹೈದರಾಬಾದ್ ತೆರಳಿದ್ದರು. ಈ ಸಮಯದಲ್ಲಿ ಸ್ವಾತಿ ತನ್ನ ಗಂಡ ಮನೆಯಲ್ಲಿ ಇಲ್ಲ ಎಂಬುದನ್ನ ತಿಳಿಸಿ, ತನ್ನ ಪ್ರೀಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ಅಂದು ಮನೆಗೆ ವಾಪಸ್ ಆದ ಸುಧಾಕರ್ ರೆಡ್ಡಿ ಕೈಗೆ ಸ್ವಾತಿ ಹಾಗೂ ರಾಜೇಶ್ ಸಿಕ್ಕಿಬಿದ್ದಿದ್ದು, ಇಬ್ಬರ ನಡುವಿನ ಆಕ್ರಮ ಸಂಬಂಧ ಪತಿಗೆ ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸುಧಾಕರ್ ರೆಡ್ಡಿ ಮನೆಗೆ ವಂದ ವೇಳೆ ಸಿಕ್ಕಿಬಿದ್ದ ಸ್ವಾತಿ ಹಾಗೂ ರಾಜೇಶ್ ಸೇರಿ ಆತನನ್ನು ಕೊಲೆ ಮಾಡಿ, ದೇಹವನ್ನು ನವಾಬ್ ಪೇಟ್ ಪ್ರದೇಶ ಸಮೀಪವಿದ್ದ ಅರಣ್ಯ ಪ್ರದೇಶದಕ್ಕೆ ಕಾರಿನಲ್ಲಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ನಂತರ ಮನೆಗೆ ಬಂದ ಸ್ವಾತಿ ತನ್ನ ಗಂಡನ ಬಟ್ಟೆಗಳನ್ನು ರಾಜೇಶ್ ಗೆ ನೀಡಿ ಆತನ್ನು ತನ್ನ ಗಂಡನ ಹಾಗೇ ಸಿದ್ಧಪಡಿಸಿ, ಆತನನ್ನು ಯಾರು ಗುರುತು ಹಿಡಿಯದಂತೆ ಮಾಡಲು ಆತನ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ.

    ನಂತರ ಗುರುತು ಸಿಗದ ದುಷ್ಕರ್ಮಿಗಳು ಮನೆಗೆ ಬಂದು ತನ್ನ ಪತಿ ಸುಧಾಕರ್ ರೆಡ್ಡಿ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿ, ಗಾಯಗೊಂಡ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನನ್ನ ಹೈದರಾಬಾದಿನ ಡಿಆರ್ ಟಿಓ ಆಸ್ಪತ್ರೆಗೆ ದಾಖಲಿಸಿದ್ದಾಳೆ.

    ಘಟನೆ ಕುರಿತು ನ್ಯಾಯಾಧೀಶರ ಎದುರು ಹೇಳಿಕೆಯನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ರೆಡ್ಡಿಯನ್ನು ನೋಡಲು ಬಂದ ಕುಟುಂಬ ಸದಸ್ಯರು ಮುಖದ ಮೇಲೆ ತೀವ್ರ ಸುಟ್ಟ ಗಾಯವಾಗಿದ್ದರಿಂದ ಆತನ್ನು ಗುರುತಿಸಲು ವಿಫಲರಾಗುತ್ತಾರೆ. ಆದರೆ ಸುಧಾಕರ್ ರೆಡ್ಡಿ ತಾಯಿ ಮಗನ ವರ್ತನೆ ನೋಡಿ ಸಂಶಯಗೊಂಡಿದ್ದರೂ, ಆದರೆ ಮಗ ತೀವ್ರವಾಗಿ ಗಾಯಗೊಂಡಿರುವುದರಿಂದ ಹೀಗೆ ಮಾತನಾಡುತ್ತಿದ್ದಾನೆ ಎಂದು ತಿಳಿದ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದರು.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ: ಆಸ್ಪತ್ರೆ ಚಿಕಿತ್ಸೆ ಪಡೆದ ನಂತರ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನ ಕೈ ಬೆರಳುಗಳ ಹೆಬ್ಬೆಟ್ಟು ಗುರುತನ್ನು ಆಸ್ಪತ್ರೆಯ ಆಡಳಿತ ಮಂಡಳಿ ಪಡೆಯುತ್ತಾರೆ. ಆದರೆ ಆತನ ಕೈ ಬೆರಳುಗಳ ಗುರುತು ಸುಧಾಕರ್ ಅವರ ಕೈಬೆರಳಿನ ಗುರುತು ಹೊಂದಾಣಿಕೆ ಆಗದ ಕಾರಣ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

     

  • ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ 16 ವರ್ಷದ ಮಗನನ್ನೇ ಕೊಂದ ಪಾಪಿ ತಂದೆ!

    ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ 16 ವರ್ಷದ ಮಗನನ್ನೇ ಕೊಂದ ಪಾಪಿ ತಂದೆ!

    ಹುಬ್ಬಳ್ಳಿ: ತಂದೆಯೊಬ್ಬ ತನ್ನ 16 ವರ್ಷದ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಕೊನೆಗೆ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿ-ಗದಗ ರಸ್ತೆಯ ಒಂಟಿ ಹನುಮಂತ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ.

    16 ವರ್ಷದ ವಿನಯ್ ರೆಡ್ಡಿ ತಂದೆಯಿಂದಲೇ ಕೊಲೆಯಾದ ಮಗ. ರೈಲ್ವೆ ನೌಕರನಾಗಿರುವ 56 ವರ್ಷದ ವಿಠ್ಠಲ್ ರೆಡ್ಡಿ ಮಗನನ್ನೇ ಕೊಲೆಗೈದ ಪಾಪಿ ತಂದೆ. ವಿನಯ್ ಹತ್ತನೇ ತರಗತಿ ಓದುತ್ತಿದ್ದನು. ಇತ್ತೀಚಿಗೆ ಅಪ್ಪ-ಮಗನ ನಡುವೆ ಗಲಾಟೆಗಳು ನಡೆಯುತ್ತಿದ್ದವು.

    ಇದನ್ನೂ ಓದಿ: 16 ವರ್ಷದ ಮಗಳನ್ನು ಗುಂಡಿಟ್ಟು ಕೊಂದ ತಂದೆ-ಕಾರಣ ಕೇಳಿದ್ರೆ ಒಂದ್ ಕ್ಷಣ ಶಾಕ್ ಆಗ್ತೀರಾ…!!

    ಭಾನುವಾರ ಸಂಜೆ ಮಗನನ್ನು ಗದಗ ರಸ್ತೆಯ ಒಂಟಿ ಹನುಮಂತ ದೇವಸ್ಥಾನದ ಹಿಂದೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಗ ಸತ್ತ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ತೀವ್ರ ಅಸ್ವಸ್ಥಗೊಂಡಿದ್ದ ವಿಠ್ಠಲ್ ರೆಡ್ಡಿಯನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಸಂಬಂಧ ನಗರದ ಕೇಶವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.