Tag: murdered

  • ಒಂಟಿ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಕತ್ತು ಕೊಯ್ದ ಕಿರಾತಕರು – ಕೊಲೆಯ ಹಿಂದೆ ಅನುಮಾನದ ಹುತ್ತ

    ಒಂಟಿ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಕತ್ತು ಕೊಯ್ದ ಕಿರಾತಕರು – ಕೊಲೆಯ ಹಿಂದೆ ಅನುಮಾನದ ಹುತ್ತ

    ಚಿಕ್ಕಬಳ್ಳಾಪುರ: ಅಂಗವಾಡಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದ ಒಂಟಿ ಮಹಿಳೆ ಮನೆಗೆ ನುಗ್ಗಿ ಕಿರಾತಕರು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವೆಂಕಟಲಕ್ಷ್ಮಮ್ಮ(50) ಕೊಲೆಯಾದ ದುರ್ದೈವಿ. ಗಂಡನಿಂದ ದೂರವಾಗಿ ಕಳೆದ ಕೆಲವು ವರ್ಷಗಳಿಂದ ವೆಂಕಟಲಕ್ಷ್ಮಮ್ಮ ಒಬ್ಬಂಟಿ ಜೀವನ ಸಾಗಿಸ್ತಿದ್ದರು. ಮನೆಯ ಕೆಲಸಗಳನ್ನು ಮುಗಿಸಿ ಅಂಗನವಾಡಿಗೆ ಹೋಗಬೇಕು ಎಂದು ಮನೆಯಿಂದ ಹೊರ ಹೋಗುವಷ್ಟರಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ವೆಂಕಟಲಕ್ಷ್ಮಮ್ಮನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಹೋಗಿದ್ದಾರೆ. ಕೊಲೆಯ ಹಿಂದೆ ಹಲವಾರು ಅನುಮಾನಗಳು ಮೂಡಿವೆ. ಇದನ್ನೂ ಓದಿ: ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ

    ಹಿನ್ನೆಲೆ ಏನು?
    ವೆಂಕಟಲಕ್ಷ್ಮಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದ ನಿವಾಸಿ. ಇವರಿಗೆ ಮದುವೆಯಾಗಿ ಮಗಳು ಇದ್ದಾಳೆ. ವೆಂಕಟಲಕ್ಷ್ಮಮ್ಮ ನಾಯನಹಳ್ಳಿ ಗ್ರಾಮದ ಪಕ್ಕದಲ್ಲೆ ಇರುವ ಚೊಕ್ಕನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದರು. ನಿನ್ನೆ ಅಂಗನವಾಡಿಗೆ ಹೋಗಲು ರೆಡಿಯಾಗಿ ಇನ್ನೇನು ಮನೆಯಿಂದ ಆಚೆ ಹೋಗಬೇಕಿತ್ತು, ಅಷ್ಟರಲ್ಲೆ ದುಷ್ಕರ್ಮಿಗಳ ಕೈಗೆ ಸಿಲುಕಿ ಕೊಲೆಯಾಗಿದ್ದಾರೆ.

    1991 ರಲ್ಲಿ ವೆಂಕಟಲಕ್ಷ್ಮಮ್ಮ ಅವರಿಗೆ ಪಕ್ಕದ ಗ್ರಾಮ ಕತ್ತರಿಗುಪ್ಪೆಯ ಟಿ.ಆಂಜಪ್ಪನ ಜೊತೆ ಮದುವೆಯಾಗಿ ಮಗಳಿದ್ದಳು. ಆಂಜಪ್ಪ 1998ರಲ್ಲಿ ಹೆಂಡತಿಯನ್ನು ಬಿಟ್ಟು, ಬೇರೆ ಮದುವೆಯಾಗಿ ಬೇರೆ ಗ್ರಾಮದಲ್ಲಿ ಇದ್ದಾನೆ. ಮೃತಳಿಗೆ ಓರ್ವ ಮಗಳಿದ್ದು ಆಕೆ ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿ ಗಂಡನ ಜೊತೆ ವಾಸವಿದ್ದಾಳೆ. ಕಳೆದ ಎರಡು ದಿನಗಳಿಂದ ವೆಂಕಟಲಕ್ಷ್ಮಮ್ಮ ಅವರಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಮಗಳು ಮತ್ತು ಅಳಿಯ ಆಸ್ಪತ್ರೆಗೆ ತೋರಿಸಿ ಮನೆಗೆ ಬಿಟ್ಟಿದ್ದಾರೆ. ಈ ವೇಳೆ ವೆಂಕಟಲಕ್ಷ್ಮಮ್ಮ ಔಷಧಿ ತೆಗೆದುಕೊಳ್ಳುವಂತೆ ನೆನಪಿಸಲು ಅವರಿಬ್ಬರು ಫೋನ್‌ ಮಾಡಿದ್ದಾರೆ.

    ಆದರೆ ವೆಂಕಟಲಕ್ಷ್ಮಮ್ಮ ಅವರು ಫೋನ್ ರಿಸೀವ್ ಮಾಡಿಲ್ಲ. ಇದ್ರಿಂದ ಅನುಮಾನಗೊಂಡ ಮಗಳು ಮತ್ತು ಅಳಿಯ ಮನೆಗೆ ಬಂದು ನೋಡಿದ್ದಾರೆ. ಆಗ ಮನೆಯ ಬಾಗಿಲು ಸ್ವಲ್ಪ ಓಪನ್ ಆಗಿತ್ತು. ಒಳ ಹೋಗಿ ನೋಡಿದ್ರೆ ಮಂಚದ ಮೇಲೆ ವೆಂಕಟಲಕ್ಷ್ಮಮ್ಮ ಅವರ ಶವ ಕಾಣಿಸಿದೆ. ಇದರಿಂದ ಗಾಬರಿಗೊಂಡ ಅವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

    ವೆಂಕಟಲಕ್ಷ್ಮಮ್ಮ ಅವರ ಮುಖ ಹಾಗೂ ಕತ್ತಿಗೆ ಮಾರಕಾಸ್ತ್ರಗಳಿಂದ ತಿವಿದು ಕೊಲೆ ಮಾಡಲಾಗಿದೆ. ಇದ್ರಿಂದ ಯಾರೊ ಪರಿಚಯಸ್ಥರು, ತನ್ನ ಪತ್ನಿಯ ಬಳಿ ಇದ್ದ ಚಿನ್ನಾಭರಣದ ದುರಾಸೆಗೆ ಕೊಲೆ ಮಾಡಿರಬಹುದು ಎಂದು ಮೃತನ ಪತಿ ಅಂಜಪ್ಪ ಹೇಳ್ತಿದ್ದಾರೆ. ಇದನ್ನೂ ಓದಿ: 1,231 ಮಂದಿಗೆ ಕೊರೊನಾ – ಸಿಲಿಕಾನ್ ಸಿಟಿಯಲ್ಲಿಯೇ 1,124 ಪ್ರಕರಣ 

    ವೆಂಕಟಲಕ್ಷ್ಮಮ್ಮ ಕೊಲೆ ಸುದ್ದಿ ತಿಳಿಯುತ್ತಿದ್ದಂತೆ, ಚಿಂತಾಮಣಿ ಗ್ರಾಮಾಂತರ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್‍ಪಿ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗ ಮಹಿಳೆಯ ಕೊಲೆಯ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ. ಪರಿಚಯಸ್ಥರೆ ವೆಂಕಟಲಕ್ಷ್ಮಮ್ಮ ಕೊಲೆ ಮಾಡಿರುವ ಬಗ್ಗೆ ಸಂಶಯ ಇರುವ ಹಿನ್ನೆಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಾಕಲೇಟ್ ಆಸೆ ತೋರಿಸಿ 7ರ ಬಾಲೆಯನ್ನು ರೇಪ್ ಮಾಡಿ, ಕೊಲೆಗೈದ 48ರ ಕಾಮುಕ

    ಚಾಕಲೇಟ್ ಆಸೆ ತೋರಿಸಿ 7ರ ಬಾಲೆಯನ್ನು ರೇಪ್ ಮಾಡಿ, ಕೊಲೆಗೈದ 48ರ ಕಾಮುಕ

    ಲಕ್ನೋ: 48 ವರ್ಷದ ವ್ಯಕ್ತಿಯೊಬ್ಬ 7 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಪಪ್ಪು ರೈ ಅತ್ಯಾಚಾರ ಎಸಗಿದ ಕಾಮುಕ. ಗೋರಖ್‍ಪುರ್ ಜಿಲ್ಲೆಯಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಆರೋಪಿಯನ್ನು ಸಿಕ್ರಿಗಂಜ್ ಪೊಲೀಸರು ಬಂಧಿಸಿದ್ದಾರೆ.

    ಪಪ್ಪು ಕೊಲೆಯಾದ ಬಾಲಕಿಯ ತಂದೆಗೆ ಪರಿಚಯವಿರುವ ವ್ಯಕ್ತಿ. ಶುಕ್ರವಾರ ಬಾಲಕಿಗೆ ಚಾಕಲೇಟ್ ಕೊಡಿಸುವ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಾಲಕಿ ಅಳಲು ಆರಂಭಿಸುತ್ತಿದ್ದಂತೆ ಆಕೆಯನ್ನು ಹೊಡೆದು ಕೊಲೆ ಮಾಡಿ, ಮೃತ ದೇಹವನ್ನು ಬೀಸಾಡಿ ಹೋಗಿದ್ದಾನೆ.

    ಇತ್ತ ಬಾಲಕಿ ನಾಪತ್ತೆಯಾದ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಪಪ್ಪುನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡು ಕೃತ್ಯ ಎಸಗಿದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದನು. ಆಗ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಆರೋಪಿ ಪಪ್ಪು ವಿರುದ್ಧ ಪೊಸ್ಕೊ ಸೇರಿದಂತೆ ಐಪಿಸಿ ಸೆಕ್ಷನ್ 364 (ಅಪಹರಣ), 376 (ಅತ್ಯಾಚಾರ) ಹಾಗೂ 302 (ಕೊಲೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಉತ್ತರ ಪ್ರದೇಶದ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

  • ಅನೈತಿಕ ಸಂಬಂಧ ಶಂಕೆ: ಆಟೋ ಚಾಲಕನ ಬರ್ಬರ ಕೊಲೆ!

    ಅನೈತಿಕ ಸಂಬಂಧ ಶಂಕೆ: ಆಟೋ ಚಾಲಕನ ಬರ್ಬರ ಕೊಲೆ!

    ಬಳ್ಳಾರಿ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದಲ್ಲಿ ಇಂದು ನಡೆದಿದೆ.

    ಬಸವನಕುಂಟೆ ನಿವಾಸಿ ಈಶ್ವರ್ (45) ಕೊಲೆಯಾದ ಆಟೋ ಚಾಲಕ. ನಗರದ ಕಂಟ್ಮೋನೆಂಟ್ ಪ್ರದೇಶದಲ್ಲಿ ಈಶ್ವರ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಈಶ್ವರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ವೇಳೆ ಈಶ್ವರ್ ಜೊತೆಗಿದ್ದ ದಾದು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ.

    ಈಶ್ವರ್‌ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಸುಮಾರು 20 ವರ್ಷಗಳಿಂದ ಆಟೋ ಚಾಲನೆ ಮಾಡುತ್ತ ಜೀವನ ಸಾಗಿಸುತ್ತಿದ್ದ. ಆದರೆ ತಮ್ಮ ಬಡಾವಣೆ ಸಮೀಪದ ದೇವಿನಗರದ ನಿವಾಸಿ ಹಸೀನಾ ಎಂಬ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಆಕೆಯ ಜೊತೆಗೆ ಸಂಬಂಧ ಬಿಡುವಂತೆ ಈ ಹಿಂದೆ ಹಲವು ಬಾರಿ ಗಲಾಟೆಯಾಗಿ, ರಾಜಿ ಮಾಡಿಕೊಳ್ಳಲಾಗಿತ್ತು. ಆದರೆ ಈಶ್ವರ್ ಹಾಗೂ ಹಸೀನಾ ಸಂಬಂಧ ಮುಂದುವರಿದಿತ್ತು. ಇದೇ ಕಾರಣಕ್ಕೆ ಹಸೀನಾ ಸಂಬಂಧಿಕರು ಈಶ್ವರ್‍ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶ್ವರ್ ಸಂಬಂಧಿ, ಕಂಟ್ಮೋನೆಂಟ್ ಪ್ರದೇಶದಲ್ಲಿ ಈಶ್ವರ್ ಹಾಗೂ ಓರ್ವ ಮಹಿಳೆ ಆಟೋದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕೆಲ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದರು. ಲಾಂಗು, ಮಚ್ಚಿನಿಂದ ಕೊಲೆ ಮಾಡಿದ್ದಾರೆ ಅಂತ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಬಂದಿರುವ ದಾದು ಹೇಳಿದ್ದಾರೆ. ಆಟೋದಲ್ಲಿದ್ದ ಮಹಿಳೆ ಕೂಡ ಕೊಲೆಯಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.

    ಈಶ್ವರ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಹಸೀನಾ ಪರಾರಿಯಾಗಿದ್ದಾಳೆ. ಇದರಿಂದಾಗಿ ಆಕೆಯೇ ಕೊಲೆ ಮಾಡಿದ್ದಾಳೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕೌಲಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಂದ ಪಾರಾದ ದಾದು ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿರುವ ಪೊಲೀಸರು ಮಹಿಳೆ ಹಾಗೂ ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ.

  • 13 ಬಾಲೆ ಮೇಲೆ ಅತ್ಯಾಚಾರ – ಕರೆಂಟ್ ಶಾಕ್ ನೀಡಿ ಕೊಲೆಗೈದ ಅಪ್ರಾಪ್ತ

    13 ಬಾಲೆ ಮೇಲೆ ಅತ್ಯಾಚಾರ – ಕರೆಂಟ್ ಶಾಕ್ ನೀಡಿ ಕೊಲೆಗೈದ ಅಪ್ರಾಪ್ತ

    ಚೆನ್ನೈ: ಅಪ್ರಾಪ್ತ ಬಾಲಕನೊಬ್ಬ ನೆರೆ ಮನೆಯ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಉತ್ತರ ಮದುರೈ ಪ್ರದೇಶದ ದಿಂಡಿಗಲ್ ಬಳಿ ನಡೆದಿದೆ.

    ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಇದೇ ಸಮಯ ನೋಡಿ ಆರೋಪಿ ಮನೆಗೆ ಪ್ರವೇಶ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ಪ್ರತಿರೋಧ ತೋರಿದ್ದು, ರಕ್ಷಣೆಗಾಗಿ ಕಿರುಚಾಡಲು ಆರಂಭಿಸಿದ್ದಾಳೆ. ಈ ವೇಳೆ ಬಾಲಕಿ ಮೇಲೆ ಹಲ್ಲೆ ನಡೆಸಿದ ಆರೋಪಿ ಅಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿಯ ಕೃತ್ಯದಿಂದ ಆಕೆ ಮನೆಯಲ್ಲಿ ಪ್ರಜ್ಞಾನಹೀಳಾಗಿ ಬಿದ್ದಿದ್ದು, ತನ್ನ ಕೃತ್ಯವನ್ನು ಎಲ್ಲಿ ಬಯಲಿಗೆ ತರುತ್ತಾಳೋ ಎಂಬ ಭಯದಿಂದ ಆರೋಪಿ ಮನೆಯಲ್ಲಿದ್ದ ವಿದ್ಯುತ್ ತಂತಿಯನ್ನು ಆಕೆಯ ಬಾಯಿಗೆ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

    ಕೆಲಸ ಮುಗಿಸಿ ಸಂಜೆ ವೇಳೆಗೆ ಪೋಷಕರು ಮನೆಗೆ ಹಿಂದಿರುಗಿದ್ದು, ಈ ವೇಳೆ ಬಾಲಕಿ ವಿದ್ಯುತ್ ಶಾಕ್ ನಿಂದ ಮೃತ ಪಟ್ಟಿದ್ದಾಳೆ ಎಂದು ತಿಳಿದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಬಾಲಕಿಯ ಮೂಗಿನಿಂದ ಹಾಗೂ ದೇಹದ ಮೇಲೆ ರಕ್ತದ ಕಲೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಖಚಿತವಾಗಿತ್ತು.

    ಬಾಲಕಿಯ ಪೋಷಕರು ಅಪ್ರಾಪ್ತ ಬಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

  • ಹಾಡಹಗಲೇ ಬಾರ್‌ನಲ್ಲಿ ರೌಡಿಶೀಟರ್ ಬರ್ಬರ ಕೊಲೆ

    ಹಾಡಹಗಲೇ ಬಾರ್‌ನಲ್ಲಿ ರೌಡಿಶೀಟರ್ ಬರ್ಬರ ಕೊಲೆ

    ಬೆಂಗಳೂರು: ಹಾಡಹಗಲೇ ಬಾರ್ ನಲ್ಲಿ ರೌಡಿಶೀಟರ್ ನನ್ನು ಬರ್ಬರವಾಗಿ ಕೊಲೆಗೈದ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರಿನ ಪಾರ್ವತಿಪುರದ ನಿವಾಸಿ ನಾಗರಾಜು ಅಲಿಯಾಸ್ ಪಿಟ್ಟ ನಾಗರಾಜು ಕೊಲೆಯಾದ ರೌಡಿಶೀಟರ್. ಆತನೊಂದಿಗೆ ಬಾರ್‍ಗೆ ಬಂದಿದ್ದ ಸಹಚರರೇ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಘಟನೆಯ ವಿವರ:
    ರೌಡಿಶೀಟರ್ ನಾಗರಾಜು ತನ್ನ ಸಹಚರರ ಜೊತೆಗೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಎಂ.ಕೆ.ಬಾರ್ ಗೆ ಕುಡಿಯಲು ಬಂದಿದ್ದ. ಈ ವೇಳೆ ಮದ್ಯದ ಮತ್ತಿನಲ್ಲಿ ನಾಗರಾಜು ತನ್ನ ಸಹಚರರ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಇದರಿಂದಾಗಿ ಕೋಪಗೊಂಡ ಅವರು ನಾಗರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಹತ್ಯೆ ಮಾಡುತ್ತಿದ್ದಂತೆ ಆರೋಪಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ನಾಗರಾಜು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫ್ಯಾಷನ್ ಡಿಸೈನರ್, ಸಹಾಯಕನ ಕೊಲೆ- ಮೂವರು ಅರೆಸ್ಟ್

    ಫ್ಯಾಷನ್ ಡಿಸೈನರ್, ಸಹಾಯಕನ ಕೊಲೆ- ಮೂವರು ಅರೆಸ್ಟ್

    ನವದೆಹಲಿ: ಫ್ಯಾಷನ್ ಡಿಸೈನರ್ ಹಾಗೂ ಸಹಾಯಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

    ಫ್ಯಾಷನ್ ಡಿಸೈನರ್ ಮಾಲಾ ಲಖನಿ (53) ಹಾಗೂ ಆಕೆಯ ಸೇವಕ ಬಹದ್ದೂರ್ (50) ಹತ್ಯೆಯಾದವರು. ಫ್ಯಾಷನ್ ಡಿಸೈನರ್ ಟೈಲರ್ ರಾಹುಲ್ ಅನ್ವರ್ ಸೇರಿದಂತೆ ಮೂವರು ಹತ್ಯೆ ಮಾಡಿದ ಆರೋಪಿಗಳು.

    ವಸಂತ್ ಕುಂಜಾ ಪ್ರದೇಶದ ಮಾಲಾ ಅವರ ಹಳೆಯ ನಿವಾಸದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಚಾಕುನಿಂದ ಇರಿದು ಕೊಲೆ ಮಾಡಿದ್ದಾರೆ. ಪ್ರಕರಣದ ಕುರಿತು ಇಂದು ಬೆಳಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಾಲಾ ಲಖನಿ ಹಾಗೂ ಬಹದ್ದೂರ್ ಮೃತದೇವು ರಕ್ತದ ಮಡವಿನಲ್ಲಿ ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರಾಹುಲ್ ಅನ್ವರ್ ಫ್ಯಾಷನ್ ಡಿಸೈನರ್ ವರ್ಕ್‍ಶಾಪ್ ನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ತನ್ನ ಇಬ್ಬರು ಸಂಬಂಧಿಕರ ಜೊತೆ ಸೇರಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಜಯ್ ಚೌಧರಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನಿಂದಲೇ ಕೊಲೆ?

    ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನಿಂದಲೇ ಕೊಲೆ?

    ಬಳ್ಳಾರಿ: ಕಳೆದ ಒಂದು ವಾರದ ಹಿಂದೆ ಬಳ್ಳಾರಿಯ ಹುಸೇನ್ ನಗರದ ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

    ಬಳ್ಳಾರಿ ಹುಸೇನ್ ನಗರದ ನಿವಾಸಿಯಾದ ಲೀಲಾವತಿ ಕಳೆದ ಒಂದು ವಾರದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಲೀಲಾವತಿ ಅವರ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಸಹೋದರಿಯನ್ನು ರಾಮು ಎಂಬ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

    ರಾಮು ಕಳೆದ ಮೂರು ವರ್ಷಗಳ ಹಿಂದೆ ಲೀಲಾವತಿ ಪತಿ ಬಸವರಾಜರನ್ನು ಕೊಲೆ ಮಾಡಿದ ಬಗ್ಗೆ 6 ತಿಂಗಳ ಶಿಕ್ಷೆ ಅನುಭವಿಸಿದ್ದ. ಲೀಲಾವತಿಗಾಗಿ ಆಕೆಯ ಗಂಡನನ್ನು ಕೊಲೆ ಮಾಡಿದ್ದ ರಾಮು, ಇದೀಗ ಇನ್ನೊಂದು ಮದುವೆಯಾಗಲು ಈಗ ಆಕೆಯನ್ನೇ ಕೊಲೆ ಮಾಡಿದ್ದಾನೆಂದು ಸಂಬಂಧಿಕರು ಆರೋಪಿಸಿದ್ದಾರೆ.

    ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಲೀಲಾವತಿ ಸಹೋದರಿ ವಸಂತಿ, ತಮ್ಮ ಸಹೋದರಿಯನ್ನು ಕೊಲೆ ಮಾಡಲಾಗಿದೆ ಎಂದು ರಾಮು ಎಂಬುವರ ವಿರುದ್ಧ ದೂರು ನೀಡಿದರೆ ಪೊಲೀಸರು ಸ್ವೀಕರಿಸುತ್ತಿಲ್ಲ. ಕೇವಲ ನಾಪತ್ತೆ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಲಾಗುತ್ತಿದೆ. ಹೀಗಾಗಿ ತಮಗೇ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.

    ಈ ಸಂಬಂಧ ಲೀಲಾವತಿ ಸಂಬಂಧಿಕರು ಇಂದು ಮಹಿಳಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.