Tag: murderd

  • ವರದಕ್ಷಿಣೆ ಕಿರುಕುಳ – ಗಂಡನಿಂದಲೇ ಹೆಂಡತಿಯ ಕೊಲೆ

    ವರದಕ್ಷಿಣೆ ಕಿರುಕುಳ – ಗಂಡನಿಂದಲೇ ಹೆಂಡತಿಯ ಕೊಲೆ

    ಮೈಸೂರು: ಪತಿಯೊಬ್ಬ ವರದಕ್ಷಿಣೆಗಾಗಿ ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ನಗರದ ಜೆ.ಪಿ ನಗರದಲ್ಲಿ ನಡೆದಿದೆ.

    ನಂದಿನಿ (25) ಮೃತ ಪತ್ನಿ. ಪತಿ ವಿಜಯ್ (30) ಕೊಲೆ ಆರೋಪಿ. ದಂಪತಿ 2 ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ವರದಕ್ಷಿಣೆಗಾಗಿ ವಿಜಯ್ ಹಾಗೂ ಕುಟುಂಬಸ್ಥರು ನಂದಿನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ

    ಆರೋಪಿಯು ನಿನ್ನೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದ ಸಂಘ ಪರಿವಾರದವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್

    ಆರೋಪಿಯು 11 ತಿಂಗಳ ಮಗು ಕೊಲೆಗೂ ಯತ್ನಿಸಿದ್ದಾನೆ ಎಂದು ನಂದಿನಿ ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊನೆಗೂ ಬಲಿಯಾಯ್ತು 14 ಮಂದಿಯನ್ನು ತಿಂದು ಹಾಕಿದ್ದ ಅವನಿ!

    ಕೊನೆಗೂ ಬಲಿಯಾಯ್ತು 14 ಮಂದಿಯನ್ನು ತಿಂದು ಹಾಕಿದ್ದ ಅವನಿ!

    ನವದೆಹಲಿ: ಕಳೆದ ಎರಡು ವರ್ಷಗಳಿಂದ 14 ಮಂದಿಯನ್ನು ತಿಂದು ಹಾಕಿದ್ದ ಹೆಣ್ಣು ಹುಲಿ ಅವನಿಯನ್ನು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ಹತ್ಯೆ ಮಾಡಲಾಗಿದೆ.

    ಸೆಪ್ಟಂಬರ್ ತಿಂಗಳಲ್ಲಿ ಸುಪ್ರಿಂಕೋರ್ಟ್ ಅವನಿ ಹೆಣ್ಣು ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸುವಂತೆ ಅನುಮತಿ ನೀಡಿತ್ತು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅವನಿಯ ಜೊತೆಗಿದ್ದ ಎರಡು ಹುಲಿ ಮರಿಗಳನ್ನು ರಕ್ಷಿಸಲಾಗಿದೆ.

    ಮೂರು ತಿಂಗಳಿಂದ ತಂತ್ರಜ್ಞಾನದ ಸಾಧನಗಳೊಂದಿಗೆ 150 ಸಿಬ್ಬಂದಿ, ಆನೆಗಳು ಮತ್ತು ಪರಿಣಿತ ಟ್ರ್ಯಾಕರ್‍ಗಳು ಮತ್ತು ಶೂಟರ್‍ಗಳನ್ನು ಅವನಿಯನ್ನು ಹುಡುಕಲು ಸಜ್ಜು ಮಾಡಲಾಗಿತ್ತು. ಅಷ್ಟೇ ಅಲ್ಲದೇ ಟೈಗರ್ ಅಭಯಾರಣ್ಯದ ಸುತ್ತಮುತ್ತಲಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಟ್ರ್ಯಾಪ್ ಕ್ಯಾಮೆರಾಗಳು, ಡ್ರೋನ್, ತರಬೇತಿ ಪಡೆದ ಸ್ನಿಫರ್ ನಾಯಿಗಳ ಪ್ಯಾಕ್ ಮತ್ತು ಹ್ಯಾಂಗ್-ಗ್ಲೈಡರ್‍ಗಳ ಸಹಾಯದಿಂದ ಹುಲಿಯ ಹುಡುಕಾಟವು ನಡೆದಿತ್ತು.

    2012 ರಲ್ಲಿ ಯವತ್ಮಾಲ್ ಕಾಡಿನಲ್ಲಿ ಅವನಿ ಹೆಣ್ಣು ಹುಲಿ ಮೊದಲಿಗೆ ಕಾಣಿಸಿಕೊಂಡಿತ್ತು. 14 ಮಂದಿಯನ್ನು ಕೊಂದಿದ್ದ ದೇಹಗಳು ಕೂಡ ಕಾಡಿನಲ್ಲಿ ಪತ್ತೆಯಾಗಿತ್ತು. ಅದರಲ್ಲಿ 5 ಮಂದಿಯ ಸಾವಿಗೆ ಈ ಹುಲಿಯೇ ಕಾರಣ ಎಂಬುದು ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಸಮೀಕ್ಷೆಗಳ ಪ್ರಕಾರ ಕೆಲ ವರ್ಷಗಳಿಂದ ಆ ಅರಣ್ಯ ಪ್ರದೇಶದಲ್ಲಿ ಅವನಿ ಬಿಟ್ಟರೆ ಗಂಡು ಹುಲಿಯೊಂದು ವಾಸವಾಗಿರುವುದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಒಬ್ಬರ ದೇಹದಲ್ಲಿ ಮಾತ್ರ ಆ ಹುಲಿಯ ಡಿಎನ್‍ಎ ಪತ್ತೆಯಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv