Tag: Murder Threat

  • ಮುತಾಲಿಕ್‌, ಯಶ್‌ ಪಾಲ್‌ ತಲೆ ಕಡಿದರೆ 20 ಲಕ್ಷ – ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಬೆದರಿಕೆ!

    ಮುತಾಲಿಕ್‌, ಯಶ್‌ ಪಾಲ್‌ ತಲೆ ಕಡಿದರೆ 20 ಲಕ್ಷ – ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಬೆದರಿಕೆ!

    ಉಡುಪಿ: ಪ್ರಮೋದ್‌ ಮುತಾಲಿಕ್‌ ಹಾಗೂ ಯಶ್‌ ಪಾಲ್‌ ಸುವರ್ಣ ಇವರಿಬ್ಬರ ತಲೆ ಕಡಿದರೆ 20 ಲಕ್ಷ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಬೆದರಿಕೆ ಹಾಕಿರುವ ಪೋಸ್ಟ್‌ ವೈರಲ್‌ ಆಗಿದೆ.

    ʻಈ ಎರಡು ತಲೆ ಕಡಿದರೆ 20 ಲಕ್ಷ..! ಒಂದು ತಲೆಗೆ 10 ಲಕ್ಷ, ಇನ್ನೊಂದು ತಲೆಗೆ 10 ಲಕ್ಷ. ಕೂಡಲೇ ನಿಮ್ಮ ಖಾತೆಗೆ ಜಮಾ ಆಗುತ್ತದೆʼ ಹೀಗಂತ ಹಂದಿಗೆ ಹೋಲಿಕೆ ಮಾಡಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಬಂದಿದೆ. 100% ಈ ಎರಡು ತಲೆ ಉರುಳೋದು ಖಚಿತ ಎಂದು ಮಾರಿಗುಡಿ ಎಂಬ ಪೇಜ್‌ನಲ್ಲಿ ಧಮ್ಕಿ ಕೊಡಲಾಗಿದೆ. ಇದನ್ನೂ ಓದಿ: ಪತ್ನಿ ಆಸೆ ತೀರಿಸಲು ವೃದ್ಧನನ್ನೆ ಕೊಂದ ಪತಿ 

    ಉಡುಪಿಯಲ್ಲಿ ಹಿಜಬ್ ಸಂಘರ್ಷ ನಡೆದಾಗ ಯಶ್ ಪಾಲ್, ಸಿಎಫ್‌ಐ, ವಿದ್ಯಾರ್ಥಿಗಳನ್ನು ಟೆರರಿಸ್ಟ್‌ಗಳು ಎಂದಿದ್ದರು. ಕಾನೂನು ಹೋರಾಟದ ನೇತೃತ್ವ ವಹಿಸಿದ್ದರು. ರಾಜ್ಯದ ಧರ್ಮ ದಂಗಲ್‌ನಲ್ಲಿ ಪ್ರಮೋದ್ ಮುತಾಲಿಕ್ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಈ ಧಮ್ಕಿಗೆ ಕಾರಣ ಎನ್ನಲಾಗಿದೆ. ಈ ವಿಚಾರವನ್ನು ಕಾಪು ಬಿಜೆಪಿ ಯುವ ಮೋರ್ಚಾ ಲಿಖಿತ ರೂಪದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ ಗಮನಕ್ಕೆ ತಂದಿದೆ.

  • ಮಹಿಳೆಗೆ ಕೊಲೆ ಬೆದರಿಕೆ – ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲು

    ಮಹಿಳೆಗೆ ಕೊಲೆ ಬೆದರಿಕೆ – ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲು

    ಕೊಪ್ಪಳ: ಮಹಿಳೆಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಕೊಪ್ಪಳ ಜಿಲ್ಲೆಯ ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಮಲಾಕ್ಷಿ ಎಂಬವರು ದೂರು ನೀಡಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ – ಸಿಎಂ ಮಧ್ಯಪ್ರವೇಶಕ್ಕೆ ಸಾಹಿತಿಗಳ ಆಗ್ರಹ

    ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಮಲಾಕ್ಷಿಗೆ ಬಸಲಿಂಗಮ್ಮ ನೀನು ಯಾಕೆ ಇಲ್ಲಿ ಬಂದಿದ್ದೀಯ ಎಂದು ನಿಂದಿಸಿ, ಗಲಾಟೆ ಪ್ರಾರಂಭಿಸಿದ್ದಳು. ಸ್ವಾಮೀಜಿ ಬಳಿ ಪಿಸ್ತೂಲ್ ಇದೆ, ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬಸಲಿಂಗಮ್ಮ ಬೆದರಿಕೆ ಹಾಕಿರುವುದಾಗಿ ಕಮಲಾಕ್ಷಿ ದೂರಿನಲ್ಲಿ ನಮೂದಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    POLICE JEEP

    ಇದೇ ವೇಳೆ ಗೇಟ್ ಬಳಿ ಇದ್ದ ಕೊಟ್ಟೂರು ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಮಲಾಕ್ಷಿ ದೂರು ನೀಡಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಲಂ 323, 324, 504 ಹಾಗೂ 506 ಅಡಿಯಲ್ಲಿ ದೂರು ದಾಖಲಾಗಿದೆ.

  • ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ

    ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ

    ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಅವರಿಗೆ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

    ಕಾಗೋಡು ತಿಮ್ಮಪ್ಪ ಫೌಂಡೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಲವೆಡೆಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಈ ಆರೋಗ್ಯ ಶಿಬಿರವನ್ನು ಮಂಗಳವಾರ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ

    ಆರೋಗ್ಯ ಶಿಬಿರ ಮುಗಿಸಿ ಸಾಗರಕ್ಕೆ ವಾಪಸ್ ಆಗುವಾಗ ರಾಜನಂದಿನಿ ಅವರ ಕಾರನ್ನು ಮಂಜು ಎಂಬಾತ ರಸ್ತೆ ಮಧ್ಯೆದಲ್ಲಿ ಅಡ್ಡ ಹಾಕಿದ್ದಾನೆ. ಈ ವೇಳೆ ಕಾರಿನ ಚಾಲಕ ಪ್ರಕಾಶ್ ಕಾರನ್ನು ನಿಲ್ಲಿಸಿದ್ದಾನೆ. ಕಾರಿನಲ್ಲಿ ಪರಾರಿಯಾರಿದ್ದಾರೆ. ರಾಜನಂದಿನಿ ಅವರು ಇಲ್ವಾ, ಇತ್ತೀಚೆಗೆ ಅವರದ್ದು ಬಹಳ ಆಗಿದೆ. ಹೀಗೆ ಮುಂದುವರಿದರೆ ಅವರನ್ನು ಮುಗಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ. ಇದನ್ನೂ ಓದಿ: ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ಆದರೆ ಈ ವೇಳೆ ಕಾರಿನಲ್ಲಿ ರಾಜನಂದಿನಿ ಇರಲಿಲ್ಲ. ಅವರು ತಮ್ಮ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಆರೋಪಿ ಮಂಜು, ಚಾಲಕ ಪ್ರಕಾಶ್ ನ ಸಮ್ಮುಖದಲ್ಲಿ ಬೆದರಿಕೆ ಹಾಕಿದ್ದಾನೆ. ನಿಮ್ಮ ಮೇಡಂಗೆ ಈ ಬಗ್ಗೆ ಹೋಗಿ ಹೇಳು ಎಂದಿದ್ದಾನೆ. ಘಟನೆ ಸಂಬಂಧ ಚಾಲಕ ಪ್ರಕಾಶ್ ಆರು ಜನರ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್, ಗರ್ಭಪಾತ- ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಪಿಎಸ್‍ಐ ದೂರು!

    ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್, ಗರ್ಭಪಾತ- ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಪಿಎಸ್‍ಐ ದೂರು!

    ಮೈಸೂರು: ಮದುವೆಯಾಗುವುದಾಗಿ ಹೇಳಿ ವಂಚಿಸಿದ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ದೂರು ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐ ಆನಂದ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್‍ಐ ಅವರೇ ಆನಂದ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದಾರೆ.

    ಮೈಸೂರಿನ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐಗಳ ಮಧ್ಯೆ ಪರಿಚಯವಾಗಿದ್ದು, ಈ ಪರಿಚಯ ಪ್ರೇಮಕ್ಕೆ ತಿರುಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋಡಿ ಸುತ್ತಾಟ ನಡೆಸಿದೆ.

    ಇತ್ತ ಆನಂದ್ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಗರ್ಭಿಣಿಯಾಗಿದ್ದು, ಮುದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಈ ಮಧ್ಯೆ ಆನಂದ್ ಬೇರೊಂದು ಮದುವೆ ಆಗಿದ್ದಾನೆ. ಬಳಿಕ ಆತ ನನ್ನನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳಾ ಪಿಎಸ್ಐ ಗಂಭೀರ ಆರೋಪ ಮಾಡಿದ್ದಾರೆ.

    ಸದ್ಯ ನನಗೆ ಆನಂದ್ ನಿಂದ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಮಹಿಳಾ ಪಿಎಸ್‍ಐ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿನಂತೆ ಪಿಎಸ್‍ಐ ಆನಂದ್ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಸದ್ಯ ಪೊಲೀಸರ ಲವ್ವಿಡವ್ವಿ ಕೇಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ನಿನ್ನ ಕೌಂಟ್ ಡೌನ್ ಶುರುವಾಗಿದೆ- ಬಜರಂಗದಳ ಕಾಯಕರ್ತನಿಗೆ ಕೊಲೆ ಬೆದರಿಕೆ

    ನಿನ್ನ ಕೌಂಟ್ ಡೌನ್ ಶುರುವಾಗಿದೆ- ಬಜರಂಗದಳ ಕಾಯಕರ್ತನಿಗೆ ಕೊಲೆ ಬೆದರಿಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕಳೆದ ವರ್ಷ ಕೋಮು ಗಲಭೆಗೆ ಕಾರಣವಾಗಿದ್ದ ಎಸ್‍ಡಿಪಿಐ ಮುಖಂಡ ಅಶ್ರಫ್ ಕೊಲೆ ಪ್ರಕರಣದ ಆರೋಪಿಗೆ ಈಗ ಕೊಲೆ ಬೆದರಿಕೆ ಶುರುವಾಗಿದೆ.

    ಕಳೆದ 16 ತಿಂಗಳಿಂದ ಜಾಮೀನು ಸಿಗದೆ ಜೈಲಿನಲ್ಲಿದ್ದ ಆರೋಪಿ ಕೆಲ ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಬಜರಂಗದಳ ಕಾರ್ಯಕರ್ತ ಭರತ್ ಕುಮ್ಡೇಲು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಕೊಲೆ ಬೆದರಿಕೆ ಹಾಕಲಾಗಿದೆ. ಮಂಗಳೂರು ಮುಸ್ಲಿಮ್ಸ್ ಎನ್ನುವ ಫೇಸ್ಬುಕ್ ಪೇಜಿನಲ್ಲಿ ಈ ಕೊಲೆ ಬೆದರಿಕೆ ಹಾಕಲಾಗಿದ್ದು, ಸೋದರನ ಕೊಲೆಗೆ ಪ್ರತೀಕಾರ ತೀರಿಸುತ್ತೇವೆ. ನಿನ್ನ ಕೌಂಟ್ ಡೌನ್ ಶುರುವಾಗಿದೆ. ಶೀಘ್ರದಲ್ಲೇ ನಿನಗೆ ಚಟ್ಟ ಕಟ್ಟಲಾಗುತ್ತದೆ ಅಂತ ಬೆದರಿಕೆ ಹಾಕಲಾಗಿದೆ.

    2017 ಜೂನ್ 21ರಂದು ಬಂಟ್ವಾಳದ ಬೆಂಜನಪದವಿನಲ್ಲಿ ಅಶ್ರಫ್ ಹತ್ಯೆಯಾಗಿತ್ತು. ಬಳಿಕ ಪೊಲೀಸರು ಭರತ್ ಸೇರಿ 8 ಆರೋಪಿಗಳನ್ನು ಬಂಧಿಸಿದ್ದರು. 2 ದಿನಗಳ ಹಿಂದೆ ಭರತ್‍ಗೆ ಜಾಮೀನು ದೊರಕಿದ್ದು ವಿರೋಧಿಗಳು ಕಿಡಿಕಾರುವಂತಾಗಿದೆ. ಭಾರೀ ಕೋಮು ದ್ವೇಷಕ್ಕೆ ಕಾರಣವಾಗಿದ್ದ ಅಶ್ರಫ್ ಕೊಲೆ ಪ್ರಕರಣ ಬಳಿಕ ರಿವೇಂಜ್ ಆಗಿ ಆರ್‍ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳನ ಕೊಲೆಯೊಂದಿಗೆ ತೀವ್ರ ಸಂಘರ್ಷಕ್ಕೆ ಗುರಿಯಾಗಿತ್ತು. ಇದೀಗ ಮತ್ತೆ ದ್ವೇಷದ ಕಿಡಿ ಹತ್ತಿಕೊಳ್ಳುತ್ತಾ ಅನ್ನುವ ಶಂಕೆ ಮೂಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆಯಾಗ್ತೀನಿ ಅಂತ ಲಾಡ್ಜ್ ಗೆ ಕರೆದುಕೊಂಡು ಹೋಗಿ ತಾನು ಅತ್ಯಾಚಾರವೆಸಗಿ ಸಹೋದರ, ಸ್ನೇಹಿತನಿಂದ್ಲೂ ರೇಪ್ ಮಾಡಿಸ್ದ!

    ಮದ್ವೆಯಾಗ್ತೀನಿ ಅಂತ ಲಾಡ್ಜ್ ಗೆ ಕರೆದುಕೊಂಡು ಹೋಗಿ ತಾನು ಅತ್ಯಾಚಾರವೆಸಗಿ ಸಹೋದರ, ಸ್ನೇಹಿತನಿಂದ್ಲೂ ರೇಪ್ ಮಾಡಿಸ್ದ!

    ಚೆನ್ನೈ: 25 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ನಯೀನ್, ನಫಿಜ್ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ. ನಯೀನ್ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಹೇಳಿದ್ದನು.

    ನಡೆದಿದ್ದೇನು?: ಸಂತ್ರಸ್ತೆ ಧರ್ಮಪುರಿ ಅರೂರ್ ಮಂಡಲ ಮೊರಪ್ಪುರ್ ಗ್ರಾಮದವರಾಗಿದ್ದು, ತನ್ನ ವಿಧವೆ ತಾಯಿಯೊಂದಿಗೆ ವಾಸವಾಗಿದ್ದರು. ತನ್ನ ಅಜ್ಜ ಅನಾರೋಗ್ಯಕ್ಕೀಡಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗಾಗಿ ಸಂತ್ರಸ್ತೆ ತನ್ನ ಅಜ್ಜನನ್ನು ನೋಡಿಕೊಳ್ಳಲು ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದರು. ಆಗ ನಯೀಮ್ ನನ್ನು ಭೇಟಿ ಮಾಡುತ್ತಿದ್ದರು.

    ಪರಿಚಯ ಸ್ನೇಹವಾಗಿದ್ದು, ನಯೀಮ್ ಏಪ್ರಿಲ್ 29 ರಂದು ಮದುವೆಯ ಪ್ರಸ್ತಾಪವನ್ನು ಮಾಡಿದ್ದಾನೆ. ಇದಕ್ಕೆ ಸಂತ್ರಸ್ತೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಆರೋಪಿ ನಯೀನ್ ಸೇಲಂನಲ್ಲಿ ತಾನು ಇದ್ದ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ರೂಮಿನಲ್ಲಿ ಆಕೆಗೆ ಮದ್ಯ ಬೆರಸಿರುವ ಕೂಲ್ ಡ್ರಿಂಕ್ ನನ್ನ ಕುಡಿಯಲು ಕೊಟ್ಟಿದ್ದಾನೆ. ಅದನ್ನು ಕುಡಿದ ಸಂತ್ರಸ್ತೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾರೆ. ಬಳಿಕ ನಯೀಮ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆತ ತನ್ನ ಸಹೋದರ ನಫೀಜ್ ಮತ್ತು ಸ್ನೇಹಿತ ರಂಜಿತ್ ರನ್ನು ಲಾಡ್ಜ್ ಗೆ ಕರೆಸಿ ಅವರಿಂದಲೂ ಅತ್ಯಾಚಾರ ಮಾಡಿಸಿದ್ದಾನೆ.

    ಸಂತ್ರಸ್ತೆಗೆ ಪ್ರಜ್ಞೆ ಬಂದ ಮೇಲೆ ಆಕೆಯ ಬಳಿ ಇದ್ದ ಎಟಿಎಂ ಕಾರ್ಡ್ ಕಿತ್ತುಕೊಂಡು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಮೂವರು ಆರೋಪಿಗಳನ್ನು ಪೊಳೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾಚಣಾ ಕಣದಿಂದ ಹಿಂದೆ ಸರಿಯುವಂತೆ ಜಿಲ್ಲೆಯ ಬೈಂದೂರಿನ ಜೆಡಿಎಸ್ ಅಭ್ಯರ್ಥಿಗೆ ದುಬೈನಿಂದ ಕೊಲೆ ಬೆದರಿಕೆ ಕರೆ ಬಂದಿದೆ.

    ಬೈಂದೂರು ಅಭ್ಯರ್ಥಿ ರವಿ ಶೆಟ್ಟಿಗೆ ದುಬೈನಿಂದ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ರವಿ ಶೆಟ್ಟಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ರವಿ ಶೆಟ್ಟಿಗೆ ಗನ್ ಮ್ಯಾನ್ ನೀಡಿದ್ದಾರೆ.

    ಫೀಲ್ಡ್ ನಲ್ಲಿ ಸೈಲೆಂಟ್ ಆಗು. ಇಲ್ಲದಿದ್ದರೆ ಮನೆಗೆ ಹೋಗಲ್ಲ ಅಂತ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ. ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷನಾಗಿರುವ ರವಿ ಶೆಟ್ಟಿ ಕಳೆದ ಒಂದು ವರ್ಷದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

    ಎದುರಾಳಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಡುಕ ಹುಟ್ಟಿದ್ದು, ತಮ್ಮ ಮತಗಳ ವಿಭಜನೆಯಾಗಬಹುದೆಂದು ಈ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ರವಿ ಶೆಟ್ಟಿ ದೂರಿದ್ದಾರೆ. ಆದ್ರೆ ನಾನು ಯಾವುದೇ ಗೊಡ್ಡು ಬೆದರಿಕೆಗೆ ಬಗ್ಗಲ್ಲ, ಅಂತ ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ ಹೇಳಿದ್ದಾರೆ.

    ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ಬೈಂದೂರು ಜಿಲ್ಲೆಯ ಪೈಕಿ ಅತೀ ಹೆಚ್ಚು ಜೆಡಿಎಸ್ ಮತದಾರರು ಇರುವ ಕ್ಷೇತ್ರ. ನಮ್ಮ ಅಭ್ಯರ್ಥಿ ಪ್ರತೀ ಮನೆಗಳಿಗೂ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ. ನೈತಿಕ ಸ್ಥೈರ್ಯ ಕಸಿದುಕೊಳ್ಳಲು ಯತ್ನ ನಡೆಯುತ್ತಿದ್ದು, ಇದಕ್ಕೆಲ್ಲಾ ನಮ್ಮ ಪಕ್ಷ ಜಗ್ಗುವುದಿಲ್ಲ ಅಂತ ಹೇಳಿದ್ದಾರೆ. ಇನ್ನೂ ಉತ್ಸಾಹದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ.

  • ಯುವತಿಯ ಜೊತೆ ನಡುರಸ್ತೆಯಲ್ಲಿ ಅಸಭ್ಯ ವರ್ತನೆ – ಜೆಡಿಎಸ್ ನಾಯಕ, ಪುತ್ರ ಅರೆಸ್ಟ್

    ಯುವತಿಯ ಜೊತೆ ನಡುರಸ್ತೆಯಲ್ಲಿ ಅಸಭ್ಯ ವರ್ತನೆ – ಜೆಡಿಎಸ್ ನಾಯಕ, ಪುತ್ರ ಅರೆಸ್ಟ್

    ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ರಾಜಕೀಯ ನಾಯಕ ಹಾಗೂ ಅವರ ಮಕ್ಕಳ ದುಂಡಾವರ್ತನೆ ಹೆಚ್ಚಳವಾಗಿದ್ದು, ಯುವತಿಯ ಜೊತೆ ನಡುರಸ್ತೆಯಲ್ಲಿ ಅಸಭ್ಯ ವರ್ತನೆ ಮಾಡಿದ ಆರೋಪದಲ್ಲಿ ಜೆಡಿಎಸ್ ನಾಯಕ ಹಾಗೂ ಆತನ ಪುತ್ರನ ಬಂಧನವಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ರಾಜ್ಯ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದ ನಾರಾಯಣ್, ಆತನ ಪುತ್ರ ನವೀನ್ ಹಾಗೂ ಸಹಚರರನ್ನು ಯುವತಿಯ ಜೊತೆ ಅಸಭ್ಯ ವರ್ತನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಬಂಧಿಸಲಾಗಿದೆ. ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯ ನವೀನ್ ಹಾಗೂ ಸಹಚರರು ಕೃತ್ಯ ಎಸಗಿದ್ದಾರೆ.

    ಏನಿದು ಪ್ರಕರಣ?
    ಫೆಬ್ರವರಿ 16ರ ಸಂಜೆ 7,30ರ ವೇಳೆಗೆ ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದ ಯುವತಿಗೆ ನಾರಾಯಣ್ ಆತನ ಪುತ್ರ ನವೀನ್ ಹಾಗೂ ಸಹಚರು ಇನೋವಾ ಕಾರಿನಲ್ಲಿ ಬಂದು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಯುವತಿ ಫೆಬ್ರವರಿ 17 ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ನಾರಾಯಣ್ ಮತ್ತು ಪುತ್ರ ನವೀನ್ ನನ್ನು ಬಂಧಿಸಿದ್ದಾರೆ.