Tag: murder Attempt

  • ತನ್ನನ್ನು ಕೊಲ್ಲಲೆತ್ನಿಸಿದನೆಂದು ಪತಿಯ ಅಂಗಡಿಗೆ ಬೀಗ ಜಡಿದು ಪತ್ನಿ ಆಕ್ರೋಶ

    ತನ್ನನ್ನು ಕೊಲ್ಲಲೆತ್ನಿಸಿದನೆಂದು ಪತಿಯ ಅಂಗಡಿಗೆ ಬೀಗ ಜಡಿದು ಪತ್ನಿ ಆಕ್ರೋಶ

    ಹಾಸನ: ತನ್ನನ್ನು ಕೊಲಲ್ಲು ಪತಿ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು ಪತಿಯ ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ರಾಘವೇಂದ್ರ ಹಾರ್ಡ್‍ವೇರ್ ಮಾಲಿಕ ಲೋಕೇಶ್ ಮತ್ತು ಪತ್ನಿ ದುರ್ಗಾಲಕ್ಷ್ಮಿ ಜಗಳ ಈಗ ಬೀದಿಗೆ ಬಿದ್ದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಲೋಕೇಶ್ ನನಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಕೊಲೆಗೆ ಸಹ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ದುರ್ಗಾಲಕ್ಷ್ಮಿ ದುರ್ಗೆಯ ಅವತಾರವನ್ನೇ ತಾಳಿದ್ದಾರೆ.

    ಲೋಕೇಶ್ ಮತ್ತು ದುರ್ಗಾಲಕ್ಷ್ಮಿ ಮದುವೆ ಆಗಿ ಮೂರು ವರ್ಷವಾಗಿದೆ. ಆರು ತಿಂಗಳು ಚೆನ್ನಾಗಿದ್ದ ಲೋಕೇಶ್ ಬೇರೊಬ್ಬಳೊಂದಿಗೆ ಅಕ್ರಮ ಸಂಭಂದ ಇಟ್ಟುಕೊಂಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈಗಾಗಲೆ ಡೈವೋರ್ಸ್ ನೋಟಿಸ್ ನೀಡಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ದುರ್ಗಾ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿ ನಂತರ ಹಾರ್ಡ್‍ವೇರ್ ಅಂಗಡಿಗೂ ಸಹ ಹಣವನ್ನು ನೀಡಿದ್ದರು ಎನ್ನಲಾಗಿದೆ.

    ಈಗ ಒಬ್ಬಳೇ ಮಗಳ ಸ್ಥಿತಿಗೆ ಪರದಾಡುವಂತಾಗಿದೆ. ಹಲವು ಬಾರಿ ರಾಜಿ ಪಂಚಾಯಿತಿ ಮಾಡಿಸಿದರೂ ಸಹ ಸರಿಯಾಗದ ಲೋಕೇಶ್ ಈಗ ಪತ್ನಿಯೇ ಬೇಡ ಎಂದು ಹೇಳುತ್ತಾನೆ. ನನಗೆ ನ್ಯಾಯ ಬೇಕು ಎಂದು ನೊಂದ ಪತ್ನಿ ತನ್ನ ಅಳಲು ತೋಡಿಕೊಂಡಿದ್ದಾರೆ.

  • ಆ್ಯಕ್ಸಿಡೆಂಟ್ ಮಾಡಿ ಕೊಲೆಗೆ ಯತ್ನ – ಮಾಜಿ ಸಚಿವ ಬೆಳಮಗಿ ಡ್ರೈವರ್ ಮೇಲೆ ಅನುಮಾನ!

    ಆ್ಯಕ್ಸಿಡೆಂಟ್ ಮಾಡಿ ಕೊಲೆಗೆ ಯತ್ನ – ಮಾಜಿ ಸಚಿವ ಬೆಳಮಗಿ ಡ್ರೈವರ್ ಮೇಲೆ ಅನುಮಾನ!

    ಕಲಬುರಗಿ: ಮೇ 20 ರಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರ ಕಾರು ಚಿಂಚನಸೂರ ಬಳಿ ಅಪಘಾತವಾಗಿತ್ತು. ಆದರೆ ತನಿಖೆ ನಡೆಸಿದ ನರೋಣ ಪೊಲೀಸರಿಗೆ ಇದು ಮೇಲ್ನೋಟಕ್ಕೆ ಅಪಘಾತವಲ್ಲ. ಇದರ ಹಿಂದೆ ಬೆಳಮಗಿ ಅವರ ಕೊಲೆ ಸಂಚು ಇದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

    ಈ ಸಂಬಂಧ ಪೊಲೀಸರು ಕಾರು ಚಾಲಕ ಮೀನೇಶ್ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳೇ ಡ್ರೈವರ್ ಮೂಲಕ ಕೊಲೆ ಮಾಡಿಸುವ ಸಂಚು ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೂ ತರಲಾಗಿದೆ.

    ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಬಳಿ ಮಾಜಿ ಸಚಿವರ ಕಾರು ಅಪಘಾತಕ್ಕೆ ಒಳಗಾಗಿತ್ತು. ಕಲಬುರಗಿಯಿಂದ ಬೆಳಮಗಿ ಬರುವ ವೇಳೆಯಲ್ಲಿ ರಸ್ತೆಯಲ್ಲಿ ನವಿಲು ಬಂದಿದೆ. ನವಿಲನ್ನು ತಪ್ಪಿಸಲು ಹೋದ ಚಾಲಕ ಪಕ್ಕದ ಸೇತುವೆಗೆ ಕಾರನ್ನು ಡಿಕ್ಕಿ ಹೊಡೆಸಲಾಗಿದೆ ಎಂದು ಹೇಳಲಾಗಿತ್ತು.

     

    ಬೆಳಮಗಿ ಅವರ ತಲೆ ಮತ್ತು ಬೆನ್ನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದವು. ಕೂಡಲೇ ಬೆಳಮಗಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

  • ಅತ್ತೆ, ಮಾವನಿಗೆ ಸಟ್ಟುಗ ಬಿಸಿಮಾಡಿ ಬರೆ ಹಾಕಿ ಚಿತ್ರಹಿಂಸೆ ಕೊಟ್ಟಿದ್ದ ಸೊಸೆ ಅರೆಸ್ಟ್

    ಅತ್ತೆ, ಮಾವನಿಗೆ ಸಟ್ಟುಗ ಬಿಸಿಮಾಡಿ ಬರೆ ಹಾಕಿ ಚಿತ್ರಹಿಂಸೆ ಕೊಟ್ಟಿದ್ದ ಸೊಸೆ ಅರೆಸ್ಟ್

    ಉಡುಪಿ: ಅತ್ತೆ ಮಾವನನ್ನು ಚಿತ್ರಹಿಂಸೆ ಕೊಲೆಯತ್ನ ನಡೆಸಿದ್ದ ಸೊಸೆಯನ್ನ ಮಲ್ಪೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು, ಹಲ್ಲೆಗೊಳಗಾದವರ ಮಕ್ಕಳಿಂದ ಅಶ್ವಿನಿ ಪೈ ವಿರುದ್ಧ ಕೇಸ್ ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಮಲ್ಪೆಯ ನಿವಾಸದಲ್ಲಿದ್ದ ಅಶ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನು ಇದು ಪ್ರಕರಣ?
    ಉಡುಪಿಯ ತೆಂಕ ನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟುವಿನಲ್ಲಿ ಮಾವ ವೆಂಕಟೇಶ ಪೈ, ಅತ್ತೆ ವೀಣಾ ಪೈ ಅವರಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಳು. ಸಟ್ಟುಗ ಬಿಸಿ ಮಾಡಿ ಮೈಮೇಲೆಲ್ಲಾ ಬರೆ ಎಳೆದಿದ್ದಳು. ನೆಲಕ್ಕುರುಳಿಸಿ ಕಾಲಿಂದ ಒದ್ದು, ಮನ ಬಂದಂತೆ ಹಲ್ಲೆ ಮಾಡಿದ್ದಳು.

    ಸೊಸೆಯ ಅಟ್ಟಹಾಸದಿಂದ ಭಯಗೊಂಡು ಮಗ ಲಕ್ಷ್ಮಣ ಪೈ ಮನೆಯಿಂದ ಇನ್ನೊಬ್ಬ ಮಗ ರಮಾನಾಥ ಪೈ ಮನೆಗೆ ಶಿಫ್ಟ್ ಆಗಿದ್ದರು. ಈ ಸಂಬಂಧವಾಗಿ ಅವಾಚ್ಯ ಶಬ್ಧಗಳಿಂದ ನಿಂದನೆ ಮತ್ತು ಕೊಲೆಯತ್ನ ದೂರು ಮಲ್ಪೆ ಠಾಣೆಯಲ್ಲಿ ದಾಖಲಾಗಿತ್ತು.

  • ಡೈವೋರ್ಸ್ ಕೇಳಿದ್ದಕ್ಕೆ ಹೆಂಡ್ತಿ ಮೇಲೆ ಮಚ್ಚಿನಿಂದ ಹಲ್ಲೆಗೈದ ಪತಿ

    ಡೈವೋರ್ಸ್ ಕೇಳಿದ್ದಕ್ಕೆ ಹೆಂಡ್ತಿ ಮೇಲೆ ಮಚ್ಚಿನಿಂದ ಹಲ್ಲೆಗೈದ ಪತಿ

    ಚಿಕ್ಕಬಳ್ಳಾಪುರ: ವಿಚ್ಛೇದನ ಕೇಳಿದ ಪತ್ನಿ ಜೊತೆ ಜಗಳ ತೆಗೆದ ಗಂಡ ಆಕೆ ಮೇಲೆ ಮಚ್ಚಿನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಶಾಂತಾನಾಯಕ್ ಎಂಬಾತನೇ ತನ್ನ ಪತ್ನಿಯ ಮೇಲೆ ಹಲ್ಲೆಗೈದ ಪತಿ. ಶಾಂತಾನಾಯಕ್ 6 ವರ್ಷಗಳ ಹಿಂದೆ ರೋಜಿಬಾಯ್ ಎಂಬವರನ್ನು ಮದುವೆಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರೋಜಿಬಾಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

    ಪತ್ನಿ ವಿಚ್ಛೇದನ ಅರ್ಜಿ ಸಲ್ಲಿಸಿದ ವಿಷಯ ತಿಳಿದ ಶಾಂತಾನಾಯಕ್ ಕೊಲೆಗೆ ಯತ್ನಿಸಿದ್ದಾನೆ. ಮಹಿಳೆಯ ಚೀರಾಟ ಕೇಳಿದ ಅಕ್ಕಪಕ್ಕದ ಜನ ಶಾಂತಕುಮಾರ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರೋಜಿಬಾಯ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದರ್ಗಾಕ್ಕೆ ಬಂದ ಗೃಹಿಣಿಯನ್ನ ಅತ್ಯಾಚಾರಗೈದ ಕಾಮುಕರು

    ದರ್ಗಾಕ್ಕೆ ಬಂದ ಗೃಹಿಣಿಯನ್ನ ಅತ್ಯಾಚಾರಗೈದ ಕಾಮುಕರು

    ಬಳ್ಳಾರಿ: ಉರುಸಿನ ವೇಳೆ ದರ್ಗಾಕ್ಕೆ ದೇವರ ದರ್ಶನಕ್ಕಾಗಿ ಆಗಮಿಸಿದ ಗೃಹಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಳ್ಳಾರಿ ತಾಲೂಕಿನ ರೂಪನಗುಡಿ ಸಮೀಪದ ದರ್ಗಾ ಬಳಿ ನಡೆದಿದೆ.

    ರಾಯಚೂರು ಮೂಲದ ಮಹಿಳೆಯೊಬ್ಬರು ದರ್ಗಾ ಉರುಸಿನ ಪ್ರಯುಕ್ತ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಮಹಿಳೆ ಬರ್ಹಿದೆಸೆಗೆ ತೆರಳಿದ್ದಾಗ ನಾಲ್ವರು ಕಾಮುಕರು ಆಕೆಯನ್ನು ಕಿಡ್ನ್ಯಾಪ್ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೂ ಯತ್ನಿಸಿದ್ದಾರೆ. ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾರೆ.

    ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯನ್ನು ಸ್ಥಳೀಯರು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

    ಘಟನೆಯನ್ನು ಖಂಡಿಸಿ ಸ್ಥಳೀಯರು ಬಳ್ಳಾರಿ ರೂಪನಗುಡಿ ರಸ್ತೆಯನ್ನು ತಡೆದು ರಾತ್ರಿ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

     

  • ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ಕಲಬುರಗಿ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಕೊಲೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದ ಇನಾಮದಾರ್ ಶಾಲೆ ಹಿಂಭಾಗದಲ್ಲಿ ನಡೆದಿದೆ.

    ಶೇಕ್ ನೂರುದ್ದೀನ್(22) ಹತ್ಯೆಗೆ ಯತ್ನಿಸಲಾದ ಯುವಕ. ಮನೆಯಿಂದ ಕೆಲಸಕ್ಕೆ ತೆರಳುವ ವೇಳೆ ಈ ಕೃತ್ಯ ನಡೆದಿದೆ.

    ಶೇಕ್ ನೂರುದ್ದೀನ್ ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಸಾಮಿಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು. ಶೇಕ್ ನೂರುದ್ದೀನ್ ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೊರಟಿದ್ದರು. ಅಂತೆಯೇ ಜಬ್ಬಾರ್ ಪನಶೆನ್ ಹಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೂರುದ್ದೀನ್ ಅವರನ್ನು ತಮ್ಮ ಬೈಕಿನಲ್ಲಿ ಅಪಹರಿಸಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ನರಳಾಡುತ್ತಿದ್ದ ನೂರುದ್ದೀನ್ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇಕ್ ನೂರುದ್ದೀನ್, ಮೈತುಂಬಾ ಸುಟ್ಟಗಾಯಗಳಿಂದ ನರಳಾಡುತ್ತಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    ಕಲಬುರಗಿ: ಪ್ರಿಯಕರನೊಬ್ಬ ಎರಡು ವರ್ಷಗಳ ಕಾಲ ಪ್ರೀತಿಸಿದ್ದ ಯುವತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಕುರಿಕೋಟಾ ಬ್ರಿಡ್ಜ್ ಬಳಿ ನಡೆದಿದೆ.

    ಶರಣು ಮತ್ತು ರೇಣುಕಾ ಎಂಬವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು ತಡಗಂಚಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೇಮದ ಬಲೆಗೆ ಬಿದ್ದಿದ್ರು. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಇಬ್ಬರ ಪೋಷಕರು ಜೂನ್ 5ರಂದು ಮದುವೆಯನ್ನ ಸಹ ಫಿಕ್ಸ್ ಮಾಡಿದ್ದರು. ಆದರೆ ಅಷ್ಟರೊಳಗೆ ಶರಣು ಮೇ 26ರಂದು ರೇಣುಕಾಳ ಅಪ್ರಾಪ್ತ ಸಹೋದರಿಯನ್ನು ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ.

    ಸಹಜವಾಗಿಯೇ ಕೋಪಗೊಂಡ ರೇಣುಕಾ, ಪ್ರಿಯಕರ ಶರಣು ಜೊತೆ ಜಗಳ ಆರಂಭಿಸಿದ್ದಾರೆ. ರವಿವಾರ ಶರಣು ತನ್ನ ಸ್ನೇಹಿತರೊಂದಿಗೆ ಸೇರಿ ರೇಣುಕಾ ಅವರನ್ನು ಬ್ರಿಡ್ಜ್ ಬಳಿ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. ನದಿಯಲ್ಲಿ ರೇಣುಕಾ ಮುಳುಗುತ್ತಿದ್ದುದನ್ನು ಗಮಿನಿಸಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳೀಯರು ರಕ್ಷಣೆಗೆ ಮುಂದಾಗುತ್ತಿದ್ದಂತೆ ಶರಣು ಸಹ ನದಿಗೆ ಧುಮುಕಿ ರೇಣುಕಾರನ್ನು ಕಾಪಾಡುವಂತೆ ನಾಟಕ ಮಾಡಿದ್ದಾನೆ. ಇದೀಗ ರೇಣುಕಾ ಅವರಿಗೆ ಪ್ರಜ್ಞೆ ಬಂದಿದ್ದು, ಗೆಳಯ ಶರಣು ನಿಜರೂಪ ಬಯಲಾಗಿದೆ.

    ನನಗೂ ಇದಕ್ಕೂ ಸಂಬಂಧವಿಲ್ಲ. ಅವನಿಗೂ ಮತ್ತು ನನ್ನ ಸಂಬಂಧಿಯಾದ ರೇಣುಕಾಳಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಶರಣು ನನ್ನ ಹೆದರಿಸಿ ನನಗೆ ತಾಳಿ ಕಟ್ಟಿ ಫೋಟೋ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಾಯಿದ್ದಾನೆ ಎಂದು ಶರಣುನಿಂದ ತಾಳಿ ಕಟ್ಟಿಸಿಕೊಂಡಿರುವ ಅಪ್ರಾಪ್ತೆ ಹೇಳಿದ್ದಾಳೆ.

    ಸದ್ಯ ಶರಣು ಪೋಲಿಸರ ವಶದಲ್ಲಿದ್ದಾನೆ. ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮದುವೆಯಾಗಲು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನಪ್ರೇಮಿ

    ಮದುವೆಯಾಗಲು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನಪ್ರೇಮಿ

    ಕೊಪ್ಪಳ: ಮದುವೆಯಾಗಲು ನಿರಾಕರಿಸಿದ ಯುವತಿ ಮೇಲೆ ಭಗ್ನ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.

    ಮುದೇನೂರು ಗ್ರಾಮದ ಯುವತಿ ಶಹನಾಜ್ ತಾವರಗೇರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಗಂಗಾವತಿ ತಾಲೂಕು ಮರ್ಲಾನಹಳ್ಳಿ ಗ್ರಾಮದ ಅಮರೇಗೌಡ ಈ ಕೃತ್ಯವೆಸಗಿದ್ದಾನೆ.

    ಯಲಬುರ್ಗಾ ತಾಲೂಕು ಚೌಡಾಪುರ ಗ್ರಾಮದ ನಿವಾಸಿಯಾದ 23 ವರ್ಷದ ಶಹನಾಜ್, ಕಿರಿಯ ಆರೋಗ್ಯ ಸಹಾಯಕಿಯಾಗಿ ಮುದೇನೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕುಷ್ಟಗಿಯಲ್ಲಿ ನಡೆಯುತ್ತಿರುವ ತರಬೇತಿಗೆ ಹಾಜರಾಗಲು ಶಹನಾಜ್ ತಾಯಿಯೊಂದಿಗೆ ಮುದೇನೂರು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಡ್ರಾಪ್ ಮಾಡುವುದಾಗಿ ಬೈಕ್‍ನಲ್ಲಿ ಕರೆತಂದ ಅಮರೇಶ, ಕುಷ್ಟಗಿ ಸಮೀಪ ಬೈಕ್ ನಿಲ್ಲಿಸಿ ಶಹನಾಜ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಗಳ ಸಹಾಯಕ್ಕೆ ಮುಂದಾದ ಶಹನಾಜ್ ತಾಯಿಗೂ ಎದೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಇಬ್ಬರೂ ಸದ್ಯ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಹನಾಜ್‍ಗೆ ಇತ್ತೀಚೆಗೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ. ಕೊಲೆಗೆ ಯತ್ನಿಸಿದ ಅಮರೇಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.

     

     

  • ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದ ಗ್ರಾಜುಯೇಟ್ಸ್

    ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದ ಗ್ರಾಜುಯೇಟ್ಸ್

    – ಬಾಡಿಗೆ ಮನೆ ಕೇಳೋ ನೆಪದಲ್ಲಿ ದರೋಡೆಗೆ ಪ್ಲಾನ್, ಕೊಲೆಗೆ ಯತ್ನ

    ಬೆಂಗಳೂರು: ದಿನ ನಿತ್ಯದ ಕರ್ಚಿಗೆ ಹಣವಿಲ್ಲವೆಂದು ಇಬ್ಬರು ಗ್ರಾಜುಯೇಟ್ ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಹೊಸೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮನೆ ಬಾಡಿಗೆ ಕೇಳುವ ನೆಪದಲ್ಲಿ ಎಂಜಿನಿಯರ್ ಸುವೇತ ಮತ್ತು ಯತೀಶ್ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರು 2012 ರಲ್ಲಿ ಬೆಂಗಳೂರಲ್ಲಿ ಒಟ್ಟಿಗೆ ಓದಿದ್ದ ಸ್ನೇಹಿತರಾಗಿದ್ದು, ಮಾರ್ಚ್ 7 ರಂದು ಹೊಸೂರಿನ ಮುನೇಶ್ವರ ನಗರದಲ್ಲಿ ಟು-ಲೆಟ್ ಬೋರ್ಡ್ ನೋಡಿ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದರು. ಮನೆ ನೋಡಿ 2 ಸಾವಿರ ಅಡ್ವಾನ್ಸ್ ನೀಡಿ ಅನಂತರ ನೀರು ಕೇಳುವ ನೆಪದಲ್ಲಿ ಅಡುಗೆ ಮನೆಗೆ ಹೋಗಿ ಕಳ್ಳತನಕ್ಕೆ ಯತ್ನಿಸಿ, ಕೊಲೆಗೆ ಸಂಚು ರೂಪಿಸಿದ್ದರು.

    ಹೊಸೂರಿನ ಲಕ್ಷಿ ಮತ್ತು ಸುರೇಶ್ ದಂಪತಿ ಮನೆಯಲ್ಲಿ ಈ ಘಟನೆ ನಡೆದಿದ್ದು ಲಕ್ಷೀಯನ್ನ ಬಟ್ಟೆಯಿಂದ ಬಾಯಿ ಮುಚ್ಚಿ ಕಳ್ಳತನಕ್ಕೆ ಯತ್ನಿಸಿದ್ದರು. ನಂತರ ಸಿಕ್ಕಿಬಿದ್ದಾಗ ತನಿಖೆ ವೇಳೆ ಸತ್ಯ ಬಾಯಿ ಬಿಟ್ಟಿದ್ದಾರೆ.

    ಹೇಗಿರುತ್ತೆ ಇವರ ಪ್ಲಾನ್?: ನೋಡೋಕೆ ವಿದ್ಯಾವಂತರಂತೆ, ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಳ್ಳೋ ಚಂದದ ಹುಡುಗ -ಹುಡುಗಿ ತಾವು ಹೊಸದಾಗಿ ಮದುವೆಯಾದ ದಂಪತಿ ಅಂತಾ ಹೇಳಿಕೊಂಡು ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆ ಹೊಕ್ಕುತ್ತಾರೆ. ಫಾರ್ ರೆಂಟ್ ಅನ್ನುವ ಕೊಂಚ ಹೈ-ಫೈ ಆಗಿ ಕಾಣೋ ಮನೆಗೆ ಎಂಟ್ರಿ ಕೊಡ್ತಾರೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅಂತಾ ಸೂಕ್ಷ್ಮವಾಗಿ ಅವಲೋಕನ ಮಾಡ್ತಾರೆ. ಬಾಡಿಗೆ, ಮನೆ ಬಗ್ಗೆ ವಿಚಾರಿಸಿಕೊಳ್ತಾರೆ. ಒಂಟಿ ಹೆಂಗಸು ಇದ್ದರು ಅಂದ್ರೆ ಮುಗೀತು. ಆಗ ಹುಡುಗಿ ಕೈಯಲ್ಲಿರುವ ಬ್ಯಾಗ್ ಓಪನ್ ಆಗುತ್ತೆ. ಅದರೊಳಗೆ ಸುತ್ತಿಗೆ, ಚಾಕು, ವೈಯರ್ ಇರುತ್ತೆ. ಕೂಡಲೇ ಆ ಸುತ್ತಿಗೆ ಎತ್ತಿ ಮನೆ ಮಾಲೀಕರ ತಲೆಗೆ ಹೊಡೆದೇ ಬಿಡ್ತಾರೆ, ಚಾಕುವಿನಿಂದ ಚುಚ್ತಾರೆ ಅಥವಾ ವೈರ್ ಕತ್ತಿಗೆ ಹಾಕಿ ಹಿಡಿದು ಎಳೆಯುತ್ತಾರೆ. ನಂತರ ಮನೆಯೊಳಗೆ ನಗದು, ಆಭರಣ ದೋಚಿ ಪರಾರಿಯಾಗ್ತಾರೆ.

    ಸಿಕ್ಕಿಬಿದ್ರು ಖದೀಮರು: ಆದ್ರೇ ಮೊನ್ನೆ ಈ ಜೋಡಿಯ ಅದೃಷ್ಟ ಕೆಟ್ಟಿತ್ತು ಅನಿಸುತ್ತೆ. ಈ ಇಬ್ಬರೂ ಹೊಸೂರು ರಸ್ತೆಯ ಮನೆಯೊಳಗೆ ಬಾಡಿಗೆ ಕೇಳಿಕೊಂಡು ಹೋಗಿದ್ರು. ಒಂಟಿ ಮಹಿಳೆ ಇರೋದನ್ನು ನೋಡಿ ಇನ್ನೇನು ಆಕೆಯ ಕೈಯನ್ನು ಹಿಡಿದು ಸುತ್ತಿಗೆ ಹಿಡಿದು ತಲೆಗೆ ಹೊಡೆಯಬೇಕೆನ್ನುವಷ್ಟರಲ್ಲಿ ಆಕೆ ಕಿರುಚಿಕೊಂಡಿದ್ರು. ಆಗ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದು, ಈ ಜೋಡಿ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದ್ರೆ ಅಷ್ಟರಲ್ಲಿ ರಸ್ತೆಯ ಜನ ಓಡಿ ಬಂದು ಇವರಿಬ್ಬರನ್ನು ಹಿಡಿದುಕೊಂಡಿದ್ದಾರೆ. ಬ್ಯಾಗ್ ಓಪನ್ ಮಾಡಿದಾಗ ಚಾಕು, ವೈರ್, ಸುತ್ತಿಗೆ ಇರೋದು ಗೊತ್ತಾಗಿದೆ. ಕೂಡಲೇ ಜನರು ಹೊಸೂರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನೂ ಸ್ಟೇಷನ್ ಗೆ ಎಳೆದೊಯ್ದಿದ್ದಾರೆ.

  • ಮಂಗಳೂರಿನಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಹತ್ಯೆಗೆ ಸಂಚು?

    ಮಂಗಳೂರಿನಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಹತ್ಯೆಗೆ ಸಂಚು?

    ಮಂಗಳೂರು: ಬುಧವಾರ ನಗರದಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಕೊಲೆಗೆ ಯತ್ನ ನಡೆದಿದೆ.

    ಬೆಳಗ್ಗೆ 6 ಗಂಟೆಯ ವೇಳೆ ಲೇಡಿಹಿಲ್ ಬಳಿ ಕಾರಿನಲ್ಲಿ ನರೇಂದ್ರನಾಯಕ್ ತೆರಳುತ್ತಿದ್ದ ಸಂದರ್ಭ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಿಮ್ಮ ಕಾರಿನ ಟಯರ್ ಪಂಚರ್ ಆಗಿದೆ ಕಾರು ನಿಲ್ಲಿಸಿ ಎಂದಿದ್ದರು. ಆದರೆ ತಕ್ಷಣಕ್ಕೆ ಎಚ್ಚೆತ್ತುಕೊಂಡ ನರೇಂದ್ರ ನಾಯಕ್ ಕಾರಿನ ವೇಗವನ್ನು ಜಾಸ್ತಿ ಮಾಡಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದಾರೆ.

    ನರೇಶ್ ಶೆಣೈ ಮೇಲೆ ಆರೋಪ: ಮಂಗಳೂರಿನಲ್ಲಿ ಕೊಡಿಯಾಲ್‍ಬೈಲ್‍ನಲ್ಲಿ ಕಳೆದ ಮಾರ್ಚ್ 21 ರಂದು ಆರ್‍ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗರನ್ನು ಬರ್ಬರವಾಗಿ ಕಡಿದು ಹತ್ಯೆ ನಡೆಸಲಾಗಿತ್ತು. ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಈ ಹತ್ಯೆಯನ್ನು ಮಾಡಿಸಿದ್ದು ಆರೋಪಿಸಿ ಬಾಳಿಗ ಕುಟುಂಬದ ಪರವಾಗಿ ಪ್ರೊ.ನರೇಂದ್ರ ನಾಯಕ್ ಹೋರಾಟಗಳನ್ನು ನಡೆಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿ ಈಗ ಜಾಮೀನಿನ ಮೇಲೆ ಹೊರ ಬಂದಿರುವ ನರೇಶ್ ಶೆಣೈ ತನ್ನ ಸಹಚರ ಶಿವ ಎಂಬಾತನಿಂದ ತನ್ನ ಹತ್ಯೆಗೆ ಸಂಚು ರೂಪಿಸಿದ್ದಾನೆಂದು ನರೇಂದ್ರ ನಾಯಕ್ ಈಗ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕೊಲೆ ಬೆದರಿಕೆಯ ಪೊಲೀಸ್ ಇಲಾಖೆಯಿಂದ ಗನ್‍ಮ್ಯಾನ್ ಇದೆಯಾದರೂ ನಿನ್ನೆ ಗನ್‍ಮ್ಯಾನ್ ಇಲ್ಲದೇ ನಾನೊಬ್ಬನೇ ಕಾರಿನಲ್ಲಿ ಸಂಚರಿಸುತ್ತಿದ್ದೆ.ಇದನ್ನೇ ಗುರಿಯಾಗಿಸಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ನರೇಂದ್ರ ನಾಯಕ್ ಆರೋಪಿಸಿದ್ದಾರೆ.

    ಮಾರ್ಚ್ 21ಕ್ಕೆ ವಿನಾಯಕ್ ಬಾಳಿಗಾ ಹತ್ಯೆಯಾಗಿ ಒಂದು ವರ್ಷವಾಗಲಿದ್ದು ನಾವು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೇವೆ. ಈ ಸಂಬಂಧ ಬಾಳಿಗಾ ಹತ್ಯೆಯಾಗಿ ಒಂದು ವರ್ಷದ ಒಳಗಡೆ ನನ್ನನ್ನು ಹತ್ಯೆ ನಡೆಸಲು ದುಷ್ಕರ್ಮಿಗಳು ಮುಂದಾಗಿದ್ದರು ಎಂದು ಅವರು ಆರೋಪಿಸಿದ್ದಾರೆ. ಪ್ರಕರಣ ಈಗ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿದೆ.