Tag: murder Attempt

  • ಕಟ್ಟಡದ ಮೇಲಿಂದ 6 ತಿಂಗಳ ಹೆಣ್ಣು ಮಗುವನ್ನು ಎಸೆದ ನಿರ್ದಯಿ ತಂದೆ

    ಕಟ್ಟಡದ ಮೇಲಿಂದ 6 ತಿಂಗಳ ಹೆಣ್ಣು ಮಗುವನ್ನು ಎಸೆದ ನಿರ್ದಯಿ ತಂದೆ

    ಕೇಪ್ ಟೌನ್: ನಿರ್ದಯಿ ತಂದೆ ತನ್ನ 6 ತಿಂಗಳ ಹೆಣ್ಣು ಮಗುವನ್ನು ಕಟ್ಟಡದ ಮೇಲಿಂದ ಎಸೆದಿರುವ ಆಘಾತಕಾರಿ ಘಟನೆಯೊಂದು ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್ ನಗರದ ಬಳಿಯ ಕ್ವಾದ್ವೆಸಿ ಪಟ್ಟಣದಲ್ಲಿ ನಡೆದಿದೆ.

    ಕ್ವಾದ್ವೆಸಿ ಪಟ್ಟಣದಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿತ್ತು. ಈ ವೇಳೆ ಸ್ಥಳೀಯರ ನಮ್ಮ ಮನೆಗಳನ್ನು ನೆಲಸಮ ಮಾಡಬಾರದೆಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 38 ವರ್ಷದ ವ್ಯಕ್ತಿಯೊಬ್ಬ ತನ್ನ 6 ತಿಂಗಳ ಹೆಣ್ಣು ಮಗುವೊಂದಿಗೆ ದಿಢೀರ್ ಅಂತಾ ಮನೆಯ ಮೇಲ್ಗಡೆ ಹತ್ತಿ ಪ್ರತಿಭಟನೆ ಮುಂದಾಗಿದ್ದನು.

    ಒಂದು ವೇಳೆ ನಮ್ಮ ಮನೆಗಳನ್ನು ನಾಶ ಮಾಡಿದ್ರೆ ನನ್ನ ಮಗುವನ್ನು ಎಸೆಯುವುದಾಗಿ ಬೆದರಿಕೆ ಸಹ ಹಾಕಿದ್ದನು. ಪ್ರತಿಭಟನಾಕರೆಲ್ಲರೂ ಮಗುವನ್ನು ಎಸೆದು ಬಿಡು ಅಂತಾ ಆ ವ್ಯಕ್ತಿಗೆ ಪ್ರಚೋದನೆಯನ್ನು ಸಹ ನೀಡುತ್ತಿದ್ದರು. ಸ್ಥಳದಲ್ಲಿದ್ದ ಪೊಲೀಸರು ವ್ಯಕ್ತಿಯ ಮನವೊಲಿಸಲು ಮುಂದಾಗಿ, ಮುನ್ನೆಚ್ಚರಿಕೆಗಾಗಿ ಪೊಲೀಸರು ಕಟ್ಟಡದ ಸುತ್ತ ಧಾವಿಸಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಕಟ್ಟಡದ ಮೇಲೆ ಬಂದ ಪೊಲೀಸರನ್ನು ನೋಡುತ್ತಿದ್ದಂತೆ ಆ ವ್ಯಕ್ತಿ ಮಗುವನ್ನು ಎಸೆದಿದ್ದಾನೆ.

    ಇತ್ತ ಕಟ್ಟಡದ ಕೆಳಗಡೆ ಮತ್ತು ಪಕ್ಕದ ಮೇಲ್ಚಾವಣೆಗಳ ಮೇಲೆ ಪೊಲೀಸರು ನಿಂತಿದ್ದರು. ವ್ಯಕ್ತಿ ಮಗುವನ್ನು ಎಸೆಯುತ್ತಿದ್ದಂತೆ ಪಕ್ಕದ ಕಟ್ಟಡದ ಮೇಲಿದ್ದ ಪೊಲೀಸ್ ಮಗುವನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ. ನಂತರ ಸುರಕ್ಷಿತವಾಗಿ ಮಗುವನ್ನು ತಾಯಿಯ ವಶಕ್ಕೆ ನೀಡಲಾಗಿದೆ.

    ಘಟನೆಯಲ್ಲಿ ಮಗುವಿಗೆ ಯಾವುದೇ ಅಪಾಯಗಳಾಗಿಲ್ಲ. ಇನ್ನು ಮಗುವಿನ ಕೊಲೆಗೆ ಮುಂದಾಗಿದ್ದ ತಂದೆಯ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

  • ಸ್ನೇಹಿತನ ಮೇಲೆ ಕಾರ್ ಹರಿಸಿ ಕೊಲ್ಲಲೆತ್ನಿಸಿದ ಮೂವರು ವಿದ್ಯಾರ್ಥಿಗಳು ಅರೆಸ್ಟ್

    ಸ್ನೇಹಿತನ ಮೇಲೆ ಕಾರ್ ಹರಿಸಿ ಕೊಲ್ಲಲೆತ್ನಿಸಿದ ಮೂವರು ವಿದ್ಯಾರ್ಥಿಗಳು ಅರೆಸ್ಟ್

    ನವದೆಹಲಿ: ಸ್ನೇಹಿತನಿಗೆ ಮನಬಂದಂತೆ ಥಳಿಸಿ, ಆತನ ಮೇಲೆ ಕಾರ್ ಹರಿಸಿ ಕೊಲೆ ಮಾಡಲು ಯತ್ನಿಸಿದ ಮೂವರು ವಿದ್ಯಾರ್ಥಿಗಳನ್ನ ಗುರುವಾರದಂದು ಪೊಲೀಸರು ಬಂಧಿಸಿದ್ದಾರೆ.

    ದೆಹಲಿಯ ಮುಖರ್ಜಿನಗರದಲ್ಲಿ ಮಾರ್ಚ್ 13ರಂದು ಈ ಘಟನೆ ನಡೆದಿದೆ. ಮೂವರು ವಿದ್ಯಾರ್ಥಿಗಳಾದ ದೀಪಕ್, ರಾಕೇಶ್ ಹಾಗೂ ಸೋನು ಸ್ನೇಹಿತ ಅರವಿಂದ್ ಕುಮಾರ್ ಮೇಲೆ ಮೂರು ಬಾರಿ ಕಾರ್ ಹರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅರವಿಂದ್ ದಾರಿಹೋಕರೊಬ್ಬರ ಸಹಾಯ ಕೇಳಿದ್ದು, ಅವರು ಯಾವುದೇ ಸಹಾಯ ಮಾಡಿರಲಿಲ್ಲ. ಬಳಿಕ ಸುತ್ತಮುತ್ತ ಜನ ಸೇರಿದ್ದು, ಅವರಲ್ಲೊಬ್ಬರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದರು.

     

    ಸುಮಾರು ಅರ್ಧ ಗಂಟೆ ಕಾಲ ರಸ್ತೆಯಲ್ಲೇ ಬಿದ್ದಿದ್ದ ಅರವಿಂದ್‍ನನ್ನು ನಂತರ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅರವಿಂದ್‍ನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆಂದು ವರದಿಯಾಗಿದೆ.

    ನಡೆದಿದ್ದೇನು?: ಮಾರ್ಚ್ 13ರಂದು ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಅರವಿಂದ್ ಹಾಗೂ ಸ್ನೇಹಿತರಾದ ದೀಪಕ್, ರಾಕೇಶ್ ಮತ್ತು ಸೋನು ಜಗಳ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಒಬ್ಬ ಅರವಿಂದ್ ನಿಂದ ಹಣ ಪಡೆದಿದ್ದು, ಮಂಗಳವಾರದಂದು ಹಣ ವಾಪಸ್ ಕೊಡುವಂತೆ ಕೇಳಿದಾಗ ನಿರಾಕರಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದಿದ್ದು, ಆರೋಪಿಯೊಬ್ಬ ಅರವಿಂದ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದ. ಪರಿಣಾಮ ಅರವಿಂದ್ ಕುಸಿದು ಬಿದ್ದಿದ್ದ. ನಂತರ ಮೂವರು ಸೇರಿ ಅರವಿಂದ್‍ಗೆ ಥಳಿಸಿ ಆತನ ಮೇಲೆ ಕಾರ್ ಹರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಗಲಾಟೆ ಕೇಳಿ ಸಾರ್ವಜನಿಕರು ಸ್ಥಳಕ್ಕೆ ಬಂದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಅದ್ಯ ಅವರನ್ನ ಬಂಧಿಸಲಾಗಿದೆ. ಘಟನೆಯಿಂದ ಅರವಿಂದ್‍ಗೆ ಮೂಳೆಗಳು ಮುರಿದಿದ್ದು, ಐಸಿಯು ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮಂಗಳೂರಿನ ಸುರತ್ಕಲ್ ಬಳಿ ಹಿಂಜಾವೇ ಮುಖಂಡನ ಹತ್ಯೆಗೆ ಯತ್ನ

    ಮಂಗಳೂರಿನ ಸುರತ್ಕಲ್ ಬಳಿ ಹಿಂಜಾವೇ ಮುಖಂಡನ ಹತ್ಯೆಗೆ ಯತ್ನ

    ಮಂಗಳೂರು: ದೀಪಕ್ ರಾವ್ ಮತ್ತು ಬಶೀರ್ ಹತ್ಯೆಯ ಬಳಿಕ ಸೋಮವಾರ ರಾತ್ರಿ ಸುಮಾರು 8 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರ ಕೊಲೆಯ ಯತ್ನಿಸಲಾಗಿದೆ.

    ಹಿಂಜಾವೇ ಮುಖಂಡರಾಗಿರುವ ಭರತ್ ಅಗರಮೇಲು ಅವರ ಕೊಲೆಯ ಯತ್ನ ಮಾಡಲಾಗಿದೆ. ರಾತ್ರಿ ತಮ್ಮ ಮನೆಯತ್ತ ಭರತ್ ತೆರಳುತ್ತಿದ್ದರು, ಈ ವೇಳೆ ಮಾರ್ಗ ಮಧ್ಯೆ ದುಷ್ಕರ್ಮಿಗಳು ಬೈಕ್ ಹಿಡಿದುಕೊಂಡು ಬಂದಿದ್ದಾರೆ. ಬೈಕಿನ ಹೈಡ್ ಲೈಟ್ ಬೆಳಕಿನಿಂದ ದುಷ್ಕರ್ಮಿಗಳನ್ನು ಗಮನಿಸಿದ ಭರತ್ ಕೂಡಲೇ ಬೈಕ್ ಬಿಟ್ಟು ತಪ್ಪಿಸಿಕೊಂಡಿದ್ದಾರೆ.

    ನಾಲ್ವರು ದುಷ್ಕರ್ಮಿಗಳು ಎದುರಿಗೆ ಬರುತ್ತಿದ್ದಂತೆ ನಾನು ಬೈಕ್ ಬಿಟ್ಟು ತಪ್ಪಿಸಿಕೊಂಡೆ. ದುಷ್ಕರ್ಮಿಗಳ ಕೈಯಲ್ಲಿ ತಲ್ವಾರ್‍ಗಳಿದ್ದರಿಂದ ನಾನು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಅಂತಾ ಭರತ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ದೂರು ದಾಖಲಿಸಿಕೊಂಡ ಪೊಲೀಸರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

    ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ದೀಪಕ್ ರಾವ್ ಮತ್ತು ಬಶೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಲೂಕಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳಿದ್ದ ಸಿಎಂ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮೃತರ ಕುಟುಂಬಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ದೀಪಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಥಮ್

    ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಾಡಹಗಲೇ ದುಷ್ಕರ್ಮಿಗಳ ಮಾರಣಾಂತಿಕ ದಾಳಿಯಿಂದ ಮೃತಪಟ್ಟಿದ್ದ ದೀಪಕ್ ರಾವ್ ಮನೆಗೆ ಭೇಟಿಯಿತ್ತ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡುತ್ತೇವೆ ಎಂದು ಹೇಳಿದ್ರು. ದೀಪಕ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಇದನ್ನೂ ಓದಿ: ಬಿಜೆಪಿ ನಾಯಕ ಕೃಷ್ಣ ಪಾಲೇಮಾರ್ ವಿರುದ್ಧ ಬಶೀರ್ ಕುಟುಂಬಸ್ಥರ ಆಕ್ರೋಶ

    ದೀಪಕ್ ರಾವ್ ಮನೆಯಿಂದ ತೆರಳಿದ ಸಿದ್ದರಾಮಯ್ಯ, ಮಂಗಳೂರಿನ ಆಕಾಶಭವನದಲ್ಲಿರುವ ಬಶೀರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಈ ವೇಳೆ ಸಿಎಂ ಗೆ ಸಚಿವರಾದ ರಮನಾಥ್ ರೈ, ಯು.ಟಿ ಖಾದರ್, ಮೊಯ್ದೀನ್ ಬಾವ, ಮೇಯರ್ ಕವಿತಾ ಸನಿಲ್ ಸಾಥ್ ನೀಡಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ರು. ಇದನ್ನೂ ಒದಿ: ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

    ಜ.3ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು. ಸದ್ಯ ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಅಬ್ದುಲ್ ಬಶೀರ್ ಕೊಲೆ ಯತ್ನ- ನಾಲ್ವರು ಆರೋಪಿಗಳ ಬಂಧನ

    ಇತ್ತ ಅದೇ ದಿನ ರಾತ್ರಿ ನಗರದ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ಆಕಾಶಭವನ ನಿವಾಸಿ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಿಂದ ತಲೆ, ಎದೆ ಹಾಗೂ ಗಂಟಲು ಭಾಗಕ್ಕೆ ಗಂಭೀರ ಗಾಯವಾಗಿದ್ದ ಅವರನ್ನು ಕೂಡಲೇ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ಬಶೀರ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದರು.

     

     

  • ಪ್ರೀತಿಸಿ ಗರ್ಭಿಣಿ ಮಾಡ್ದ, ನ್ಯಾಯ ಕೇಳಲು ಹೋದ್ರೆ ತಾಯಿ ಎದುರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    ಪ್ರೀತಿಸಿ ಗರ್ಭಿಣಿ ಮಾಡ್ದ, ನ್ಯಾಯ ಕೇಳಲು ಹೋದ್ರೆ ತಾಯಿ ಎದುರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    ಗದಗ: ಪ್ರಿಯತಮನೇ ಪ್ರೇಯಸಿಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನ ಮಾಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ನಡೆದಿದೆ.

    ದಾಳಿಗೊಳಗಾದ ಮಹಿಳೆ ಶಾಂತವ್ವ ಮಾದರ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ಶುಕ್ರವಾರ ಸಾಯಂಕಾಲ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿಂಗಟಾಲೂರ ಗ್ರಾಮದ ಪ್ರಕಾಶ ಮುಂಡವಾಡ ಹಾಗೂ ಕುಟುಂಬಸ್ಥರು ಈ ಹೀನ ಕೃತ್ಯ ಮಾಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸುತ್ತಿದ್ದಾರೆ.

    ಪ್ರಕಾಶ ಹಾಗೂ ಶಾಂತವ್ವ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಮನೆಯವರಿಗೆ ತಿಳಿದ ಮೇಲೆ ಎರಡು ವರ್ಷಗಳ ಹಿಂದೆ ಶಾಂತವ್ವನಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾದ ಮೇಲೂ ಪ್ರಕಾಶ ನಿನ್ನ ಬಿಟ್ಟು ಇರುವುದಿಲ್ಲ ಎಂದು ಶಾಂತವ್ವಗೆ ಹೇಳಿದ್ದಾನೆ. ಹೀಗಾಗಿ ಸಂತ್ರಸ್ತೆ ಗಂಡನನ್ನ ಬಿಟ್ಟು ತವರಿಗೆ ಬಂದಿದ್ದಾರೆ.

    ಇವರಿಬ್ಬರು ಮತ್ತೆ ಪ್ರೀತಿ ಶುರು ಮಾಡಿ ಅನೈತಿಕ ಸಂಬಂಧ ಹೊಂದಿದ್ದರು. ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗುವಂತೆ ಪ್ರಕಾಶನನ್ನು ಕೇಳಿದ್ದರು. ಆದರೆ ಪ್ರಕಾಶ ಬೇರೆ ಬೇರೆ ಜಾತಿ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ. ಇದರಿಂದ ನೊಂದ ಸಂತ್ರಸ್ತೆ ನ್ಯಾಯ ಕೇಳಲು ಶುಕ್ರವಾರ ಸಂಜೆ ತಾಯಿಯ ಜೊತೆ ಪ್ರಕಾಶನ ಮನೆಗೆ ಹೋಗಿದ್ದರು. ನಾನು ಗಂಡನನ್ನು ಬಿಟ್ಟು ಬಂದೆ. ನನ್ನ ಜೀವನ ಹಾಳಾಗಿದೆ, ಮದುವೆಯಾಗು ಎಂದು ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಕಾಶ ಮತ್ತು ಕುಟುಂಬಸ್ಥರು ಸೇರಿ ಶಾಂತವ್ವ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

    ಸ್ಥಳದಲ್ಲಿದ್ದ ತಾಯಿ ಭಯಗೊಂಡು ಓಡಿ ಹೋಗಿ ತಮ್ಮ ಸಹೋದರರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅವರು ಬಂದು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಗದಗ ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಪ್ರಕಾಶ ಹಾಗೂ ಆತನ ಕುಟುಂಬದವರು ಊರು ಬಿಟ್ಟು ಪರಾರಿಯಾಗಿದ್ದಾರೆ. ಮೊಬೈಲ್ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ದನ ಕಾಯೋವಾಗ ಆಂಟಿ ಮೇಲೆ ಲವ್- ಮದ್ವೆ ಮಾಡಿಕೊಳ್ಳೋದಾಗಿ ನಂಬಿಸಿ ಯುವಕನಿಂದ ಅತ್ಯಾಚಾರ, ಕೊಲೆ ಯತ್ನ

    ದನ ಕಾಯೋವಾಗ ಆಂಟಿ ಮೇಲೆ ಲವ್- ಮದ್ವೆ ಮಾಡಿಕೊಳ್ಳೋದಾಗಿ ನಂಬಿಸಿ ಯುವಕನಿಂದ ಅತ್ಯಾಚಾರ, ಕೊಲೆ ಯತ್ನ

    ಯಾದಗಿರಿ: ಕಳೆದ ತಿಂಗಳು ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಯತ್ನ ನಡೆದಿದೆ.

    ಪ್ರೀತಿಸಿ ಮದುವೆಯಾಗುತ್ತೆನೆಂದು ನಂಬಿಸಿ ಅತ್ಯಾಚಾರಗೈದು ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಕಂಟೋನ್ಮೆಂಟ್ ಹತ್ತಿರುವಿರುವ ವಂಸತನಗರದಲ್ಲಿ ನಡೆದಿದ್ದು, ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದ ವಿವಾಹಿತ ಮಹಿಳೆ ತಿಮ್ಮವ್ವ (40) ನೊಂದ ಸಂತ್ರಸ್ತೆ.

    ದನ ಕಾಯಲು ಹೋದಾಗ ಸಂತ್ರಸ್ತೆ ಹಾಗೂ ಆರೋಪಿ ಕೋಯಿಲೂರ ಗ್ರಾಮದ ದೇವಪ್ಪ (35) ಇವರಿಬ್ಬರ ಮಧ್ಯೆ ಪರಸ್ಪರ ಪ್ರೀತಿ ಶುರುವಾಗಿತ್ತು. ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, 10 ವರ್ಷದ ಹಿಂದೆ ಗಂಡನಿಂದ ದೂರವಾಗಿದ್ದಾರೆ. 6 ತಿಂಗಳಿಂದ ತಿಮ್ಮವ್ವ ಹಾಗೂ ದೇವಪ್ಪನ ಪ್ರೀತಿ ಹುಟ್ಟಿ ಮದುವೆ ಆಗುವ ಹಂತ ತಲುಪಿತ್ತು. ಸಂತ್ರಸ್ತೆ ಹೇಗಿದ್ದರೂ ಗಂಡನಿಂದ ದೂರುವಿದ್ದೇನೆ ಎಂದು ಮದುವೆಗೆ ಒಪ್ಪಿಕೊಂಡಿದ್ದಾರೆ. ಆದರೆ ದೇವಪ್ಪನ ಮನೆಯಲ್ಲಿ ತಿಮ್ಮವ್ವರನ್ನು ಮದುವೆ ಮಾಡಿಕೊಳ್ಳಲು ನೀರಾಕರಿಸಿದ್ದಾರೆ.

    ತಿಮ್ಮವ್ವ ವಯಸ್ಸಿನಲ್ಲಿ ದೊಡ್ಡವರು ಎಂಬ ಕಾರಣಕ್ಕೆ ಮದುವೆ ಬೇಡ ಎಂದು ದೇವಪ್ಪನ ತಂದೆ ನಿರಾಕರಿಸಿದ್ದಾರೆ. ಮನೆಯವರ ನಿರಾಕರಣೆಯಿಂದ ಇವರಿಬ್ಬರು ಒಂದು ತಿಂಗಳ ಹಿಂದೆ ಮದುವೆ ಮಾಡಿಕೊಂಡು ಜೀವನಸಾಗಿಸಲು ಬೆಂಗಳೂರಿಗೆ ಹೋಗಿದ್ದಾರೆ. ಬೆಂಗಳೂರಿನ ಕಂಟೋನ್ಮಂಟ್ ನಲ್ಲಿ ಇಬ್ಬರು ವಾಸವಾಗಿದ್ದರು. ದೇವಪ್ಪ ಪೋಷಕರು ಕೂಡ ಬೆಂಗಳೂರಿನಲ್ಲಿ ವಾಸವಾಗಿದ್ದರು. ಜನವರಿ 1 ರಂದು ದೇವಪ್ಪ ಮಹಿಳೆಯನ್ನು ಗೃಹ ಬಂಧನಲ್ಲಿಟ್ಟಿದ್ದು, ಜನವರಿ 2 ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನು ದೇವಪ್ಪನ ಪೋಷಕರು ಹಾಗೂ ಸಂಬಂಧಿಕರು ಸೇರಿ ಮಹಿಳೆಯ ಗುಪ್ತಾಂಗ ಹಾಗೂ ತೊಡೆ ಭಾಗದಲ್ಲಿ ಬರೆ ಎಳೆದಿದ್ದು, ಆಕೆಯನ್ನು ಸುಟ್ಟು ಹಾಕಲು ಯತ್ನಿಸಿದ್ದಾರೆ.

    ಈ ಬಗ್ಗೆ ಮಹಿಳೆ ಸಂಬಂಧಿಕರಿಗೆ ಮಾಹಿತಿಯನ್ನು ನೀಡಿದ್ರು. ಕೂಡಲೇ ಸಂಬಂಧಿಕರು ತಿಮ್ಮವ್ವಯಿದ್ದ ಸ್ಥಳಕ್ಕೆ ಬಂದು ಆಕೆಯನ್ನು ಬೆಂಗಳೂರಿನಿಂದ ಯಾದಗಿರಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರೋ ಸಂತ್ರಸ್ತೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

  • ಮಂಗಳೂರಿನ ಕಲ್ಲಡ್ಕದಲ್ಲಿ ಯುವಕನ ಮೇಲೆ ತಲವಾರ್ ದಾಳಿ

    ಮಂಗಳೂರಿನ ಕಲ್ಲಡ್ಕದಲ್ಲಿ ಯುವಕನ ಮೇಲೆ ತಲವಾರ್ ದಾಳಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ಯುವಕನೊಬ್ಬನ ಮೇಲೆ ತಲವಾರು ದಾಳಿ ನಡೆದಿದೆ. ಬೈಕಿನಲ್ಲಿ ಬಂದ ಇಬ್ಬರು ಯುವಕನ ಮೇಲೆ ತಲವಾರ್ ದಾಳಿ ನಡೆಸಿದ್ದಾರೆ.

    ಕೇಶವ್ ಹಲ್ಲೆಗೊಳಗಾದ ಯುವಕ. ಕೆಲವು ತಿಂಗಳ ಹಿಂದೆ ನಡೆದಿದ್ದ ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದಲ್ಲಿ ಕೇಶವ್ ಆರೋಪಿಯಾಗಿದ್ದ. ಮಂಗಳವಾರ ರಾತ್ರಿ ಸುಮಾರು 7.30ರ ವೇಳೆಗೆ ಕೇಶವ್ ತನ್ನ ಸ್ಕೂಟಿಯಲ್ಲಿ ಕಲ್ಲಡ್ಕದಿಂದ ಮನೆಯತ್ತ ತೆರಳುತ್ತಿದ್ದಾಗ ದುಷ್ಕರ್ಮಿಗಳು ತಲವಾರ್ ದಾಳಿ ನಡೆಸಿದ್ದಾರೆ. ಇದರಿಂದ ಕೇಶವ್ ತಲೆಗೆ ಮತ್ತು ಕೈಗೆ ಗಂಭೀರ ಗಾಯಗಳಾಗಿದ್ದು, ಕಲ್ಲಡ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವಿಟ್ಲದ ಕರೋಪಾಡಿಯಲ್ಲಿ ಕಾಂಗ್ರೆಸ್ ಮುಖಂಡನ ಕಗ್ಗೊಲೆ

    ಘಟನೆ ಬಳಿಕ ಕಲ್ಲಡ್ಕ ಕೆಳಗಿನ ಪೇಟೆಯಲ್ಲಿ ಕೆಲ ಕಿಡಿಗೇಡಿಗಳು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದ ಪರಿಣಾಮ ಖಾಸಗಿ ಬಸ್‍ಗಳ ಗಾಜು ಪುಡಿಪುಡಿಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಲ್ಲಡ್ಕ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು, ಬಂದ್ ವಾತಾವರಣ ನೆಲೆಸಿತ್ತು. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣದ ಹಿನ್ನೆಲೆಯಲ್ಲಿ ಕಲ್ಲಡ್ಕದಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಸದ್ಯ ಕಲ್ಲಡ್ಕ ಸಹಜ ಪರಿಸ್ಥಿತಿಯತ್ತ ಮರಳಿದೆ.

    ಏಪ್ರಿಲ್ ತಿಂಗಳ 20ರಂದು ಪಂಚಾಯತ್ ಕಚೇರಿಯಲ್ಲೇ ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. 11 ಆರೋಪಿಗಳ ಪೈಕಿ ಕೇಶವ ಕೂಡ ಒಬ್ಬನಾಗಿದ್ದು ಪ್ರತೀಕಾರ ರೂಪದಲ್ಲಿ ಈ ಕೊಲೆ ಯತ್ನ ನಡೆದಿದೆ ಎನ್ನಲಾಗುತ್ತಿದೆ.

  • ಅಂಧ ಹುಡುಗಿಯ ಕತ್ತು ಸೀಳಿದ ದುಷ್ಕರ್ಮಿಗಳು

    ಅಂಧ ಹುಡುಗಿಯ ಕತ್ತು ಸೀಳಿದ ದುಷ್ಕರ್ಮಿಗಳು

    ಭುವನೇಶ್ವರ: ದುಷ್ಕರ್ಮಿಗಳು ಅಪ್ರಾಪ್ತ ಅಂಧ ಹುಡುಗಿಯ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಮಂಗಳವಾರದಂದು ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ವರದಿಯಾಗಿದೆ.

    ಇಲ್ಲಿನ ಅಂಧರ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿರುವ 16 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ ನಡೆದಿದೆ. ಸಂತ್ರಸ್ತೆ ಪುಹುಂಡಿ ಗ್ರಾಮದ ತನ್ನ ಮನೆಯ ಹಿಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಆಕೆಯ ತಾಯಿ ನೋಡಿದ್ದರು. ಕೂಡಲೇ ಆಕೆಯನ್ನು ಪತ್ರಾಪುರ್ ಕಮ್ಯೂನಿಟಿ ಹೆಲ್ತ್ ಸೆಂಟರ್‍ಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಮ್‍ಕೆಜಿಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಸಂತ್ರಸ್ತೆಯ ಸ್ಥಿತಿ ಗಂಭಿರವಾಗಿದ್ದು, ಕುತ್ತಿಗೆ ಸೀಳಿದ್ದರಿಂದ ಆಕೆ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಸಂತ್ರಸ್ತೆ ತನ್ನ ಸಹೋದರ ಹಾಗೂ ತಾಯಿಯೊಂದಿಗೆ ಮನೆಯಲ್ಲಿ ಮಲಗಿದ್ದರು. ಆದ್ರೆ ಬೆಳಗ್ಗೆ ವೇಳೆ ಆಕೆ ಕಾಣೆಯಾಗಿದ್ದರಿಂದ ತಾಯಿ ಹುಡುಕಾಟ ನಡೆಸಿದ್ದರು. ನಂತರ ಮನೆಯ ಹಿಂಬಾಗಿಲು ಲಾಕ್ ಆಗಿದ್ದು, ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ್ದರು. ಸಂತ್ರಸ್ತೆಯ ಮತ್ತೊಬ್ಬ ಸಹೋದರ ಹಾಗೂ ತಂದೆ ಹೊರರಾಜ್ಯದಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬರ್ಹಾಮ್‍ಪುರ್ ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತ್ರಿನಾಥ್ ಪಟೇಲ್, ವೈಜ್ಞಾನಿಕ ಪೊಲೀಸ್ ತಂಡ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ಅಂಧ ಹುಡುಗಿಯನ್ನ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ್ದರೂ, ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ ನಂತರವಷ್ಟೇ ಖಚಿತವಾಗಬೇಕಿದೆ ಎಂದು ಪಟೇಲ್ ತಿಳಿಸಿದ್ದಾರೆ.

  • ಉತ್ತರ ಕನ್ನಡದಲ್ಲಿ ಮತ್ತೆ ಶಾಂತಿ ಕದಡಲು ಯತ್ನ – ವಿದ್ಯಾರ್ಥಿನಿಗೆ ಚಾಕು ಇರಿತ

    ಉತ್ತರ ಕನ್ನಡದಲ್ಲಿ ಮತ್ತೆ ಶಾಂತಿ ಕದಡಲು ಯತ್ನ – ವಿದ್ಯಾರ್ಥಿನಿಗೆ ಚಾಕು ಇರಿತ

    ಕಾರವಾರ: ಉತ್ತರ ಕನ್ನಡದಲ್ಲಿ ಮತ್ತೆ ಶಾಂತಿ ಕದಡುವ ಯತ್ನ ನಡೆದಿದೆ. ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ವಿದ್ಯಾರ್ಥಿನಿ ಕೊಲೆ ಯತ್ನ ನಡೆದಿದೆ.

    ಶಾಲೆಗೆ ಹೋಗುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಗೆ ಚಾಕು ಇರಿಯಲಾಗಿದೆ. ಅನ್ಯಕೋಮಿನ ಇಬ್ಬರು ಯುವಕರು ಚಾಕು ಇರಿದಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿ ಕಾವ್ಯ ಶೇಖರ್ ಕೈಗಳಿಗೆ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಾಗೋಡಿನಲ್ಲಿ ಘಟನೆ ನಡೆದಿದ್ದು, ಕೂಡಲೇ ಗಾಯಾಳು ವಿದ್ಯಾರ್ಥಿನಿಯನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಿಚಾರದ ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಎಸ್.ಪಿ ವಿನಾಯಕ್ ಪಾಟೀಲ್ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಹೊನ್ನಾವರದಲ್ಲಿ ಶುಕ್ರವಾರ ಬೆಳಗ್ಗೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

  • ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ- ಸಾವು, ಬದುಕಿನ ಮಧ್ಯೆ ಮಹಿಳೆ ಹೋರಾಟ

    ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ- ಸಾವು, ಬದುಕಿನ ಮಧ್ಯೆ ಮಹಿಳೆ ಹೋರಾಟ

    ಬಾಗಲಕೋಟೆ: ಮಹಿಳೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಯಲ್ಲಮ್ಮನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

    ಸುವರ್ಣಾ ರಾಮಣ್ಣಾ ಅಮಾತಿಗೌಡರ್ (27) ಎಂಬ ಮಹಿಳೆ ಮೇಲೆ ವರದಕ್ಷಿಣೆ ಕಿರುಕುಳ ನೀಡಿ ಗಂಡ ರಾಮಣ್ಣ, ಮೈದುನ ಮತ್ತು ಅತ್ತೆ ಮಾವ ಸೇರಿ ಸುವಾರ್ಣಾಳಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಸುವರ್ಣಾರ ಸಹೋದರ ಆರೋಪಿಸಿದ್ದಾರೆ.

    ಸದ್ಯ ಗಾಯಗೊಂಡ ಮಹಿಳೆ ಸುವರ್ಣಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಈ ಕುರಿತು ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.