Tag: murder Attempt

  • ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಹೊಡೆದು ನೇಣಿಗೆ ಹಾಕಿರೋ ಶಂಕೆ

    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಹೊಡೆದು ನೇಣಿಗೆ ಹಾಕಿರೋ ಶಂಕೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮಹಿಳೆಯನ್ನು ಕತೀಜಾ ಕೂಬ್ರ (29) ಎಂದು ಗುರುತಿಸಲಾಗಿದೆ. ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕತೀಜಾ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

    ಪತಿ ಮಹೆಬೂಬ್ ಪರೀಷ್ ಪತ್ನಿಯನ್ನ ಹೊಡೆದು ನೇಣು ಹಾಕಿರೋ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಕತೀಜಾ ಗಂಡ, ಮಾವ ಮತ್ತು ನಾದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪನ್ನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಸದುಗುಂಟೆಪಾಳ್ಯ ಪೊಲೀಸರು (Sadduguntepalya Police) ತನಿಖೆ ನಡೆಸುತ್ತಿದ್ದಾರೆ.

    ಮೃತ ಮಹಿಳೆ ತಂದೆ ಜಾವೀದ್ ವುಲ್ಲಾ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಮದುವೆಯಾದಾಗಿನಿಂದ ಮಗಳ ಜೊತೆ ಯಾವಾಗ್ಲೂ ಜಗಳ ಅಗುತಿತ್ತು. ನನ್ನ ಅಳಿಯನಿಗೆ ಇನ್ನೋರ್ವ ಮಹಿಳೆಯ ಜೊತೆ ಸಂಬಂಧವಿತ್ತು. ಹಾಗಾಗಿ ನನ್ನ ಮಗಳನ್ನ ಅಳಿಯನೇ ಸಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬರ್ ಶಾರೀಕ್ ಹತ್ಯೆಗೆ ಸಂಚು ಶಂಕೆ- ಆಸ್ಪತ್ರೆ ಸುತ್ತ ಹೆಚ್ಚಿದ ಭದ್ರತೆ

    ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ. ಮದುವೆಯಾದಾಗಿನಿಂದ ಪ್ರತಿನಿತ್ಯ ಜಗಳ ಅಗುತಿತ್ತು. ಹಾಗಾಗಿ ಅವನೇ ಕೊಂದಿದ್ದಾನೆ. ನನ್ನ ಮಗಳಿಗೆ ಪ್ರತಿನಿತ್ಯ ಹೊಡೆಯೋದು ಮಾಡ್ತಿದ್ದ. ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

  • 3 ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ!

    3 ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಕ್ಷಸ ಪ್ರವೃತ್ತಿಯ ಗಂಡನೊಬ್ಬನು ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ಮಾರ್ಚ್ 9 ರಂದು ನಗರದ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು 37 ವರ್ಷದ ಆರೋಪಿ ಬಾಬುವನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಏಳು ವರ್ಷದ ಹಿಂದೆ ಮೀನಾ ವಿಜಯಕಾಂತ್ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ 3 ಜನ ಹೆಣ್ಣು ಮಕ್ಕಳಿದ್ದು ವಿಧಿವಶಾತ್ ಮೂರು ವರ್ಷದ ಹಿಂದೆಯೇ ಅವರ ಮೊದಲನೇಯ ಪತಿ ತೀರಿಹೋಗಿದ್ದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

    ನಂತರ ಮೀನಾಗೆ ಬಾಬು ಪರಿಚಯವಾಗುತ್ತದೆ. ಮೀನಾ ತನ್ನ ಬಾಳು ಬಂಗಾರವಾಗುತ್ತದೆ ಅಂತ ಬಾಬುನನ್ನು ಎರಡನೇ ಮದುವೆ ಆಗಿದ್ದರು. ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು. ನಂತರದಲ್ಲಿ ಇವರ ದಾಂಪತ್ಯ ಜೀವನವು ಚೆನ್ನಾಗಿಯೇ ಇತ್ತು. ಆದರೆ ಮೀನಾ ಕೂಲಿ ಮಾಡಿ ಕೂಡಿಟ್ಟ ಹಣವನ್ನೆಲ್ಲಾ ಅವನು ಕುಡಿದು ಹಾಳು ಮಾಡುತ್ತಿದ್ದನು.

    ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು. ಮಾರ್ಚ್ 9 ರಂದು ದಂಪತಿಯ ನಡುವೆ ಜೋರಾಗಿ ಜಗಳ ನಡೆದಿದ್ದು, ಪತ್ನಿಯು ಇನ್ನೂ ದುಡ್ಡು ಕೇಳಿದರೆ ನಾನು ಮೈ ಮೇಲೆ ಡೀಸೆಲ್ ಸುರಿದುಕೊಂಡು ಸತ್ತು ಹೋಗುತ್ತೆನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

    ಈ ವೇಳೆ ಸಾಯುತ್ತೇನೆ ಎಂದ ಪತ್ನಿಯನ್ನು ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆ ಬಾ ಅಂತ ಅಲ್ಲಿಯೇ ಸ್ಟೌ ನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಮೀನಾರ ಮೊದಲ ಪತಿಗೆ ಜನಿಸಿದ್ದ ಪುಟ್ಟ ಹೆಣ್ಣು ಮಗುವನ್ನು ಕೂಡಾ ಕಚ್ಚಿ ವಿಕೃತಿ ಮೆರೆದಿದ್ದಾನೆ. ಘಟನೆ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತ್ತೆಯನ್ನೇ ಕೊಲ್ಲಲು ಸೊಸೆ ಮಾಡಿದ್ಳು ಖತರ್ನಾಕ್ ಪ್ಲಾನ್!

    ಅತ್ತೆಯನ್ನೇ ಕೊಲ್ಲಲು ಸೊಸೆ ಮಾಡಿದ್ಳು ಖತರ್ನಾಕ್ ಪ್ಲಾನ್!

    ಬೆಂಗಳೂರು: ಅತ್ತೆಯನ್ನೇ ಕೊಲ್ಲಲು ಸೊಸೆಯೊಬ್ಬಳು ಖತರ್ನಾಕ್ ಪ್ಲಾನ್ ರೂಪಿಸಿ ವಿಫಲವಾಗಿರುವ ಘಟನೆ ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಊಟದಲ್ಲಿ ನಿದ್ರೆ ಮಾತ್ರೆ, ಜಿರಳೆ ಔಷಧಿ ಹಾಕಿ ಕೊಲ್ಲಲು ಸೊಸೆ ಯೋಜನೆ ಹಾಕಿದ್ದಳು. ಆದರೆ ಸೊಸೆ ಮಾಡಿದ್ದ ಅಡುಗೆ ತಿಂದು ಆಸೀಫ್ ಕುಟುಂಬ ಅಸ್ವಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಆಯಿಷಾ ವಿರುದ್ಧ ಪತಿ ಆಸೀಫ್ ಖಾನ್ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ

    ಆಯೀಷಾ ತನ್ನ ತಾಯಿ ಜೊತೆ ಮಾತಾಡಿರುವ ಆಡಿಯೋದಲ್ಲಿ ಸತ್ಯ ಬಯಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಆಯೀಷಾ, ಹುಸೇನ್ ಸಾಬ್, ಕಮರ್ ರಾಜ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು

    ಸೊಸೆ ಫ್ಲ್ಯಾನ್ ಆಡಿಯೋ:
    ಆಯೀಷಾ:- ಮೆಡಿಕಲ್ ಸ್ಟೋರ್‍ನಲ್ಲಿ ನಿದ್ರೆ ಮಾತ್ರೆಗಳನ್ನು ತನ್ನಿ
    ಆಯೀಷಾ ತಾಯಿ:- ಹಾ.. ಸರಿ
    ಆಯೀಷಾ:- ಅವರಿಗೆಲ್ಲಾ ನಿದ್ದೆ ಮಾತ್ರೆ ಹಾಕಿ.. ನನ್ನ ವಿರುದ್ಧ ಇರುವ ರಿಪೋರ್ಟ್‍ಗಳನ್ನು ಸುಟ್ಟು ಹಾಕ್ತೀನಿ
    ಆಯೀಷಾ ತಾಯಿ:- ಹಾ.. ಸರಿ ಹಾಗೇ ಮಾಡು
    ಆಯೀಷಾ:- ಈ ಕೆಲಸವನ್ನು ನಾವು ಮಾಡೋಣ.. ಸರೀನಾ…?
    ಆಯೀಷಾ ತಾಯಿ:- ಹಾ.. ಸರಿ..

  • ಎಸ್.ಆರ್ ವಿಶ್ವನಾಥ್ ನೀಡಿದ್ದ ಎಚ್ಚರಿಕೆಯೇ ಕೊಲೆ ಸಂಚಿಗೆ ಕಾರಣವಾಯ್ತಾ..?

    ಎಸ್.ಆರ್ ವಿಶ್ವನಾಥ್ ನೀಡಿದ್ದ ಎಚ್ಚರಿಕೆಯೇ ಕೊಲೆ ಸಂಚಿಗೆ ಕಾರಣವಾಯ್ತಾ..?

    ಬೆಂಗಳೂರು: ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸುಪಾರಿ ಪ್ರಕರಣ ಸಂಬಂಧ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿದೆ. ವಿಶ್ವನಾಥ್ ಮತ್ತು ಗೋಪಾಲಕೃಷ್ಣ ನಡುವಿನ ವೈಷಮ್ಯ ಇದೆಲ್ಲದಕ್ಕೂ ಕಾರಣ ಎನ್ನಲಾಗ್ತಿದೆ.

    ಯಲಹಂಕದಲ್ಲಿ ವೀರ ಸಾವರ್ಕರ್ ಮೇಲ್ಸೆತುವೆ ಉದ್ಘಾಟನೆ ದಿನದ ಹಿಂದಿನ ರಾತ್ರಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ರು. ಗೋಪಾಲಕೃಷ್ಣ ಸೂಚನೆಯಂತೆ ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟನೆಗೆ ಸಿದ್ಧರಾಗಿದ್ರು. ಆದರೆ ಶಾಸಕ ಎಸ್.ಆರ್ ವಿಶ್ವನಾಥ್, ಗೋಪಾಲಕೃಷ್ಣಗೆ ಕರೆ ಮಾಡಿ ಪ್ರತಿಭಟನೆ ಮಾಡಿದ್ರೆ ಹೌಸಿಂಗ್ ಬೋರ್ಡ್‍ಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟುತ್ತಿರುವ ಮನೆ ನೆಲಸಮ ಮಾಡೋದಾಗಿ ಎಚ್ಚರಿಕೆ ನೀಡಿದ್ರು.

    ಅದರಂತೆ ಬೆಳ್ಳಂಬೆಳಗ್ಗೆ ಗೋಪಾಲಕೃಷ್ಣ ಮನೆ ಮುಂದೆ ಎರಡು ಜೆಸಿಬಿಗಳು ನಿಂತಿದ್ದವು. ಇದರಿಂದ ಹೆದರಿದ ಗೋಪಾಲಕೃಷ್ಣ ಪ್ರತಿಭಟನೆಯಿಂದ ಹಿಂದೆ ಸರಿದಿದ್ರು. ಪರಿಣಾಮ ಕಾರ್ಯಕರ್ತರ ಆಕ್ರೋಶ, ಬಿಜೆಪಿ ಕಾರ್ಯಕರ್ತರ ಅಪಹಾಸ್ಯದಿಂದ ಮುಜುಗರಕ್ಕೊಳಗಾಗಿದ್ರು. ಇದೇ ಕಾರಣದಿಂದ ವೈಷಮ್ಯ ಹೆಮ್ಮರವಾಗಿತ್ತು ಎನ್ನಲಾಗ್ತಿದೆ. ಇದನ್ನೂ ಓದಿ: ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್

    ಇತ್ತ ಶಾಸಕರ ಕೊಲೆಗೆ ಸಂಚು ರೂಪಿಸಿರೋದನ್ನ ಖಂಡಿಸಿ ಇಂದು ಬಿಜೆಪಿ ಕಾರ್ಯಕರ್ತರು, ವಿಶ್ವನಾಥ್ ಬೆಂಬಲಿಗರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿರೋ ಹಿನ್ನೆಲೆಯಲ್ಲಿ ರಾಜಾನುಕುಂಟೆ ಪೊಲೀಸರು ಭದ್ರತೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

  • ಪ್ರೀತಿಗೆ ಅಡ್ಡ ಬಂದವನಿಗೆ ಗುಂಡು ಹಾರಿಸಿ ಕೊಲೆ ಮಾಡಲೆತ್ನಿಸಿದ ಕಿರಾತಕ ಅರೆಸ್ಟ್

    ಪ್ರೀತಿಗೆ ಅಡ್ಡ ಬಂದವನಿಗೆ ಗುಂಡು ಹಾರಿಸಿ ಕೊಲೆ ಮಾಡಲೆತ್ನಿಸಿದ ಕಿರಾತಕ ಅರೆಸ್ಟ್

    ಬೆಳಗಾವಿ: ತನ್ನ ಪ್ರೀತಿಗೆ ಅಡ್ಡ ಬಂದನೆಂದು ಆತನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ.

    ವಿನಾಯಕ ಸೋಮಶೇಖರ ಹೊರಕೇರಿ (26) ಬಂಧಿತ. ಈತ ಕಳೆದ ಡಿಸೆಂಬರ್ 16ರಂದು ಯಮಕನಮರಡಿಯಲ್ಲಿ ಭರಮಾ ದುಪದಾಳೆ ಮೇಲೆ ಗುಂಡಿನ ದಾಳಿ ಮಾಡಿದ್ದ.

    ಆರೋಪಿ ವಿನಾಯಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಈ ವಿಚಾರ ತಿಳಿದ ಯುವತಿಯ ದೂರದ ಸಂಬಂಧಿಯಾಗಿದ್ದ ಭರಮಾ ದುಪದಾಳೆ, ಯುವತಿಗೆ ಬೇರೆ ಮದುವೆ ನಿಶ್ಚಯ ಮಾಡಿದ್ದನು. ಇದರಿಂದ ಸಿಟ್ಟಿಗೆದ್ದ ವಿನಾಯಕ ತಾನು ಪ್ರೀತಿಸಿದ ಹುಡುಗಿಯನ್ನು ಸೇರಲು ಬಿಡದ ಭರಮಾ ಮೇಲೆ ಗುಂಡಿನ ದಾಳಿ ನಡೆಸಿದ್ದ. ಅದೃಷ್ಟವಶಾತ್ ಘಟನೆಯಲ್ಲಿ ಭರಮಾ ಪ್ರಾಣಾಪಾಯದಿಂದ ಪಾರಾಗಿದ್ದರು.

    ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಬೆಂಗಳೂರಲ್ಲಿ ವಿವಾಹಿತೆಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆಗೆ ಯತ್ನ!

    ಬೆಂಗಳೂರಲ್ಲಿ ವಿವಾಹಿತೆಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆಗೆ ಯತ್ನ!

    – ಪೊಲೀಸರ ಮೇಲೆ ಗಂಭೀರ ಆರೋಪ

    ಬೆಂಗಳೂರು: ಸಿಲಿಕಾನ್ ಸಿಟಿಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಮ್ಮನ ಪಾಳ್ಯದಲ್ಲಿ ವಿವಾಹಿತೆಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆ ಮಾಡಲು ಯತ್ನಿಸಿದ ಆರೋಪವೊಂದು ಕೇಳಿ ಬಂದಿದೆ.

    ಪಾವನ ಸಂತ್ರಸ್ತೆ. ಈಕೆಯನ್ನು ಪತಿ ಪ್ರದೀಪ್, ತಂದೆ- ತಾಯಿ ಹಾಗೂ ನಾದಿನಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಪಾವನಗೆ ಕಿರುಕುಳ ನೀಡಿದ್ದಾರೆ. ಗಂಡನ ಮನೆಯವರು ಹಲ್ಲೆ ಮಾಡಿ ವಿಷ ಕುಡಿಸಿದ್ದಾರೆ ಅಂತ ಪಾವನ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

    ಕಳೆದ ಆರು ತಿಂಗಳ ಹಿಂದೆ ಪಾವನ ಹಾಗೂ ಪ್ರದೀಪ್ ಎಂಬವರ ವಿವಾಹವಾಗಿತ್ತು. ಪಾವನ ಬೆಂಗಳೂರಿನ ಕೆಂಪೇಗೌಡ ಕಾಲೇಜಿನಲ್ಲಿ ನರ್ಸಿಂಗ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಪತಿ ಪ್ರದೀಪ್ ಫ್ಯಾಮಿಲಿ ಕೋರ್ಟ್ ನಲ್ಲಿ ಶಿರಸ್ತೆದಾರ್ ಆಗಿದ್ದಾನೆ. ಈ ಹಿಂದೆ ಹಲವು ಬಾರಿ ಗಂಡ-ಹೆಂಡತಿ ಮಧ್ಯೆ ಜಗಳವಾಗಿತ್ತು. ಹೀಗಾಗಿ ಪಾವನ ತವರು ಮನೆ ಸೇರಿದ್ದರು. ಆದರೆ 15 ದಿನಗಳ ಒಳಗಾಗಿ ಮನೆಗೆ ವಾಪಸ್ ಬರಬೇಕು ಅಂತ ಪತ್ನಿಗೆ ಪ್ರದೀಪ್ ನೋಟಿಸ್ ಕಳಿಸಿದ್ದ. ನಿನ್ನೆ ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾರೆ. ಪತಿಯ ಕರೆಯಂತೆ ನಿನ್ನೆ ಸಂಜೆ ಮರಿಯಮ್ಮನಪಾಳ್ಯದ ಪತಿ ಮನೆಗೆ ಪಾವನ ತೆರಳಿದ್ದರು. ಈ ವೇಳೆ ಪಾವನರಿಗೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿದ್ದಾರೆ ಅಂತ ಪಾವನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

    ಸದ್ಯ ಪಾವನರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಹಣ ಪಡೆದು ಪ್ರದೀಪ್ ನನ್ನು ಪೊಲೀಸರು ಬಿಟ್ಟು ಕಳಿಸಿರುವ ಆರೋಪ ಕೂಡ ಕೇಳಿ ಬಂದಿದೆ. ಸದ್ಯ ಆರೋಪಿ ಪ್ರದೀಪ್ ತಲೆಮರೆಸಿಕೊಂಡಿದ್ದಾನೆ.

  • ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆಯಿಂದ್ಲೇ ಮಗನ ಹತ್ಯೆಗೆ ಯತ್ನ

    ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆಯಿಂದ್ಲೇ ಮಗನ ಹತ್ಯೆಗೆ ಯತ್ನ

    ಮಂಡ್ಯ: ತಂದೆಯೇ ಮಗನನ್ನು ಹತ್ಯೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.

    ತಂದೆಯಿಂದ ಹಲ್ಲೆಗೊಳಗಾದವನನ್ನು ಪ್ರಸನ್ನ ಎಂದು ಗುರುತಿಸಲಾಗಿದೆ. ಕಿರಿಯ ಪತ್ನಿಯ ಮಗನೊಂದಿಗೆ ಸೇರಿ ಹಿರಿಹೆಂಡ್ತಿ ಮಗನ ಕೊಲೆಗೆ ಶಿವಲಿಂಗೇಗೌಡ ಯತ್ನಿಸಿದ್ದಾನೆ. ಶಿವಲಿಂಗೇ ಗೌಡನಿಗೆ ಪ್ರಸನ್ನ ಸಹೋದರ ರಾಮಕೃಷ್ಣ ಸಾಥ್ ನೀಡಿದ್ದಾನೆ.

    ಶಿವಲಿಂಗೇಗೌಡ ಮತ್ತು ರಾಮಕೃಷ್ಣ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ. ನಿನ್ನೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದಾರೆ. ತಮ್ಮ ಪ್ರಯತ್ನ ವಿಫಲವಾದಾಗ ಕೃತ್ಯ ಎಸಗಲು ತಾವು ಬಂದಿದ್ದ ಕಾರನ್ನೂ ಬಿಟ್ಟು ಪರಾರಿಯಾಗಿದ್ದಾರೆ.

    ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪ್ರಸನ್ನರನ್ನ ಸ್ಥಳೀಯರು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೌಟುಂಬಿಕ ಕಲಹದಿಂದ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ದುಷ್ಕರ್ಮಿಗಳ ಪತ್ತೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

    ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಜೈಲು ಅಧೀಕ್ಷಕನಿಂದ ಸಿಬ್ಬಂದಿ ಮುಖ, ಮೂಗಿಗೆ ಹಲ್ಲೆಗೈದು ಬೆದರಿಕೆ

    ಜೈಲು ಅಧೀಕ್ಷಕನಿಂದ ಸಿಬ್ಬಂದಿ ಮುಖ, ಮೂಗಿಗೆ ಹಲ್ಲೆಗೈದು ಬೆದರಿಕೆ

    ಹಾವೇರಿ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿರುವ ಆರೋಪವೊಂದು ಜೈಲು ಅಧೀಕ್ಷಕ ಮೇಲೆ ಕೇಳಿಬಂದಿದೆ.

    ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಪುಂಡಲೀಕ ಪವಾರ(26) ಎಂಬಾತನ ಮೇಲೆ ಜೈಲು ಅಧೀಕ್ಷಕ ಟಿ.ಬಿ.ಭಜಂತ್ರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಪುಂಡಲಿಕನನ್ನು ಭಜಂತ್ರಿ ತಮ್ಮ ಕಚೇರಿಗೆ ಕರೆಸಿಕೊಂಡು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ಜೈಲಿನಲ್ಲಿ ನಡೆಯೋ ವಿದ್ಯಮಾನಗಳನ್ನ ಮೇಲಾಧಿಕಾರಿಗಳಿಗೆ ಹೇಳುತ್ತೀಯಾ ಅಂತ ಕಚೇರಿಗೆ ಕರೆದು ಮುಖ ಮತ್ತು ಮೂಗಿಗೆ ಹಲ್ಲೆ ಮಾಡಲಾಗಿದೆ. ವಿಚಾರಣಾಧೀನ ಕೈದಿಯನ್ನು ಕರೆದು ಕೊಲೆ ಮಾಡು, ಬಂದಿದ್ದು ನೋಡಿಕೊಳ್ಳುತ್ತೇನೆ ಅಂತ ಬೆದರಿಕೆ ಹಾಕಿರೋ ಆರೋಪ ಕೇಳಿಬಂದಿದೆ.

    ಜೈಲು ಅಧೀಕ್ಷಕ ಭಜಂತ್ರಿ ಹಾಗೂ ಜೈಲಿನ ವಿಚಾರಣಾಧೀನ ಕೈದಿ ವಿನಾಯಕ ವಿರುದ್ಧ ಜೈಲು ವೀಕ್ಷಕ ಪವಾರ ಆರೋಪ ಮಾಡಿದ್ದು, ಈ ಬಗ್ಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

  • ಪತ್ನಿಯನ್ನು ಕಾಡಿಗೆ ಕರೆದೊಯ್ದು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಪತಿ ಅರೆಸ್ಟ್

    ಪತ್ನಿಯನ್ನು ಕಾಡಿಗೆ ಕರೆದೊಯ್ದು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಪತಿ ಅರೆಸ್ಟ್

    ಕಾರವಾರ: ಪತ್ನಿ ಮೇಲಿನ ಸಿಟ್ಟಿನಿಂದ ಆಕೆಯನ್ನು ಕಾಡಿಗೆ ಕರೆದೊಯ್ದು ಹತ್ಯೆ ಮಾಡಲು ಯತ್ನಿಸಿದ ಕಿರಾತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ರಮೇಶ್ ದೇಸಾಯಿ ಎಂದು ಗುರುತಿಸಲಾಗಿದ್ದು, ಈತ ಗೋಯರ ಗ್ರಾಮದ ನಿವಾಸಿ. ಘಟನೆಯಿಂದ ಪತ್ನಿ ರಸಿಕಾ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಡೆದಿದ್ದೇನು..?
    ಪತ್ನಿ ಶೀಲ ಶಂಕಿಸಿ ಇಬ್ಬರ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಇದೇ ಸಿಟ್ಟಿನಿಂದ ರಮೇಶ್ ಡಿಸೆಂಬರ್ 4ರಂದು ಪತ್ನಿಯನ್ನು ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲದೆ ಆಕೆಯ ಮೇಲೆ ಕೋವಿಯಿಂದ ಗುಂಡು ಹಾರಿಸಿದ್ದಾನೆ. ಪರಿಣಾಮ ರಸಿಕಾ ಭುಜ ಹಾಗೂ ಕಿಬ್ಬೊಟ್ಟೆಗೆ ಗಾಯಗಳಾಗಿವೆ.

    ಗಾಯಗೊಂಡ ಪತ್ನಿಯನ್ನು ಸ್ವತಃ ರಮೇಶನೇ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾನೆ. ಕಟ್ಟಿಗೆ ತೆರಲು ಕಡಿಗೆ ಹೋದಾಗ ಅಪರಿಚಿತ ಬೇಟೆಗಾರರು ಪತ್ನಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕಥೆ ಕಟ್ಟಿದ್ದನು. ಅಲ್ಲದೆ ಕದ್ರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಿಸಿದ್ದನು.

    ದೂರು ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಗಾಯಾಳು ರಸಿಕಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ತನ್ನ ಗಂಡನೇ ಕೃತ್ಯ ಎಸಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಸದ್ಯ ಪೊಲೀಸರನ್ನು ರಮೇಶ್ ನನ್ನು ಬಂಧಿಸಿದ್ದಾರೆ.

  • ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಪೊಲೀಸ್ – ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಪೊಲೀಸ್ – ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್

    ಕೊಪ್ಪಳ: ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯೊಬ್ಬ ದೂರು ದಾಖಲಾಗುತಿದ್ದಂತೆಯೇ ಪರಾರಿಯಾಗಿದ್ದನು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಕೊಪ್ಪಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಕೊಪ್ಪಳದ ಕಾರಟಗಿ ಪೊಲೀಸರು ಆರೋಪಿ ಶರಣಪ್ಪ ಕೊತ್ವಾಲ್ ನನ್ನು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕಾಗಿ ಪಿಎಸ್‍ಐ ಶರತ್ ಕುಮಾರ್ ನೇತೃತ್ವದಲ್ಲಿ ಬಲೆ ಬೀಸಲಾಗಿತ್ತು. ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಹುಡುಕಾಟ- ಪಕ್ಕದ ಗದಗದಲ್ಲಿ ಪೊಲೀಸರ ಜೊತೆ ಆರೋಪಿಯ ಪಾರ್ಟಿ

    ಕೊಪ್ಪಳದ ಕಾರಟಗಿ ತಾಲೂಕಿನ ಬುದೂಗೂಂಪ ನಿವಾಸಿಯಾದ ಶರಣಪ್ಪ ಕೊತ್ವಾಲ್ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಹತ್ತಿರದ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾಗುತಿದ್ದಂತೆಯೇ ಆರೋಪಿ ಶರಣಪ್ಪ ಕೊತ್ವಾಲ್ ತಲೆಮರೆಸಿಕೊಂಡಿದ್ದನು. ಈ ಕಡೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನೆಡಸಿದ್ದರು.

    ಇತ್ತೀಚೆಗೆ ಆರೋಪಿ ಶರಣಪ್ಪ ಕೊತ್ವಾಲ್ ಗದಗ ಜಿಲ್ಲೆಯ ಗಜೇಂದ್ರ ಗಡದ ಪಿ.ಎಸ್.ಐ ರಾಮಣ್ಣ ಅವರ ಜೋತೆ ಇರುವ ಫೋಟೋ ವೈರಲ್ ಆಗಿತ್ತು. ಫೋಟೊದಲ್ಲಿ ಆರೋಪಿ ಶರಣಪ್ಪ ಕೊತ್ವಾಲ್, ಬಾಗಲಕೋಟೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿ ಕೃಷ್ಣ ವೇಣಿ ಮತ್ತು ಕೊಪ್ಪಳದ ಮಹಿಳಾ ಆಯೋಗದ ಸದಸ್ಯೆ ಮಾಲತಿ ನಾಯಕ್ ಕಾಣಿಸಿಕೊಂಡಿದ್ದರು.

    ಮಾಲತಿ ನಾಯಕ್ ಅವರ ಬರ್ತ್ ಡೇ ಕಾರ್ಯಕ್ರಮದಲ್ಲಿ ಆರೋಪಿ ಭಾಗಿಯಾಗಿರುವ ಖಚಿತ ಮಾಹಿತಿ ಆಧರಿಸಿ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಕೊಪ್ಪಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಷ್ಟು ದಿನ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.