Tag: Muralidhar Rao

  • ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ಬೆಂಗಳೂರು: ನಗರದಲ್ಲಿ ನವ ಕರ್ನಾಟಕ ಪರಿವರ್ತನಾ ರ್ಯಾಲಿಗೆ ಸಿದ್ಧವಾಗುತ್ತಿರೋ ವೇದಿಕೆಗೆ ಇಂದು ಬಿಜೆಪಿ ನಾಯಕರು ಭೂಮಿ ಪೂಜೆ ನೆರವೇರಿಸಿದ್ದಾರೆ.

    ನವೆಂಬರ್ 2 ರಂದು ನೆಲಮಂಗಲದ ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನವ ಕರ್ನಾಟಕ ಪರಿವರ್ತನಾ ಜಾಥಾಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ಧವಾಗುತ್ತಿರುವ ವೇದಿಕೆಗೆ ಇಂದು ಭೂಮಿ ಪೂಜೆ ನೆರವೇರಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಂದು ಬೆಂಗಳೂರಿಗೆ ಆಗಮಿಸಲಿದ್ದು, ನವಕರ್ನಾಟಕ ಜಾಥಾಗೆ ಚಾಲನೆ ನೀಡಲಿದ್ದಾರೆ.

    ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮಾತನಾಡಿ, ನವ ಪರಿವರ್ತನಯಾತ್ರೆ ಕಾರ್ಯಕ್ರಮದ ಉದ್ಘಾಟನಾ ಸ್ಥಳದಲ್ಲಿ ಭೂಮಿ ಪೂಜೆ ಮಾಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಮಾಡುವ ಕಾರ್ಯಕ್ರಮ ಇದು. ಸಿದ್ದರಾಮಯ್ಯ ಸರ್ಕಾರ ಹಲವು ವಿಚಾರಗಳಲ್ಲಿ ವಿಫಲವಾಗಿದೆ. ಕಮಿಷನ್ ಪಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡಲು ಸಿಎಂ ಮುಂದಾಗಿದ್ದಾರೆ. ಹೊಸ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯ ಮಾಡಲಿದೆ. ನಾವು ಯಾವುದೇ ಒಂದು ವರ್ಗ, ಜಾತಿ ಪರ ಅಲ್ಲ ಅಂತ ತಿಳಿಸಿದ್ದಾರೆ.

    ಪರಿವರ್ತನೆ ಮಾಡುವುದು ಅಂದ್ರೆ ಪ್ಯಾಚ್ ವರ್ಕ್ ಮಾಡುವ ಕಾರ್ಯಕ್ರಮವಲ್ಲ. ಸಂಪೂರ್ಣ ಬದಲಾವಣೆಯೇ ಇದರ ಉದ್ದೇಶ. ಹೊಸದೊಂದು ರಾಜಕಾರಣದ ಪರ್ವ ನಿರ್ಮಿಸಲು ಮುಂದಾಗಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಲಿದ್ದಾರೆಂದು ಮುರಳೀಧರ್ ಹೇಳಿದರು.

    ಭೂಮಿ ಪೂಜೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಆರ್ ಅಶೋಕ್, ಪರಿಷತ್ ಸದಸ್ಯ ಸೋಮಣ್ಣ, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಮುರಳೀಧರ ರಾವ್ ನಮಗೆ ಬೇಡ- ಹೈಕಮಾಂಡ್‍ಗೆ ದೂರು ನೀಡಲು ರಾಜ್ಯ ನಾಯಕರು ಚಿಂತನೆ!

    ಮುರಳೀಧರ ರಾವ್ ನಮಗೆ ಬೇಡ- ಹೈಕಮಾಂಡ್‍ಗೆ ದೂರು ನೀಡಲು ರಾಜ್ಯ ನಾಯಕರು ಚಿಂತನೆ!

    – ಮೇ 20ಕ್ಕೆ ಮತ್ತೆ ಸಮಾವೇಶ ಕರೆದ ಈಶ್ವರಪ್ಪ!

    ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ದಿನೇ ದಿನೇ ಒಳಜಗಳದ ಕಾವು ಹೆಚ್ಚುತ್ತಿದೆ. ಇನ್ನು ರಾಜ್ಯದ ಕೆಲವು ಬಿಜೆಪಿ ನಾಯಕರು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವ್ರನ್ನೇ ವಜಾ ಮಾಡುವಂತೆ ಹೈಕಮಾಂಡ್‍ಗೆ ದೂರು ನೀಡಲು ನಿರ್ಧರಿಸಿದ್ದಾರೆ.

    ಯಡಿಯೂರಪ್ಪ ಮತ್ತು ಈಶ್ವರಪ್ಪ ಬಣದ ಇಬ್ಬರು ಮುಖಂಡರಿಗೆ ಬಿಸಿ ಮುಟ್ಟಿಸಿದ್ರೂ, ಈಶ್ವರಪ್ಪನವರು ಮಾತ್ರ ತಮ್ಮ ಸಿಟ್ಟನ್ನ ಬಿಟ್ಟಿಲ್ಲ. ಮೇ 6 ಮತ್ತು 7 ರಂದು ಮೈಸೂರಲ್ಲಿ ಬಿಜೆಪಿ ಸಮಾವೇಶ ನಡೆಯಲಿದೆ. ಆದರೆ ಮೇ 20ರಂದು ಮತ್ತೆ ಪಕ್ಷ ಉಳಿಸಿ ಸಮಾವೇಶ ನಡೆಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ.

    ಯಾವುದೇ ಕಾರಣಕ್ಕೂ ಬ್ರಿಗೇಡ್ ನಿಲ್ಲಿಸಲ್ಲ. ಮೇ 10ರೊಳಗೆ ಸಭೆ ಕರೆದು ಪಕ್ಷದೊಳಗಿನ ಗೊಂದಲ ನಿವಾರಿಸದಿದ್ರೆ ಸಮಾವೇಶ ನಡೆಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಅವರು ಮಾತ್ರ ಎಲ್ಲವೂ ಸರಿಹೋಗುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ.