Tag: Muralidhar Rao

  • ಬ್ರಾಹ್ಮಣರು, ಬನಿಯಾಗಳು ನನ್ನ ಜೇಬಿನಲ್ಲಿದ್ದಾರೆ: ಮುರಳೀಧರ್ ರಾವ್

    ಬ್ರಾಹ್ಮಣರು, ಬನಿಯಾಗಳು ನನ್ನ ಜೇಬಿನಲ್ಲಿದ್ದಾರೆ: ಮುರಳೀಧರ್ ರಾವ್

    ಭೋಪಾಲ್: ಜಾತಿಗಳ ಹೆಸರಿನಲ್ಲಿ ಮತ ಕೇಳಲು ಕಾರಣವೇನೆಂಬ ಪ್ರಶ್ನೆಗೆ ಸೋಮವಾರ ಮಧ್ಯಪ್ರದೇಶದ ಬಿಜೆಪಿ ಉಸ್ತುವಾರಿ ಪಿ ಮುರಳೀಧರ್ ರಾವ್ ಅವರು ವಿವಾದಾದ್ಮಕ ಉತ್ತರ ನೀಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಟಿ, ಎಸ್‍ಸಿ ಮತ್ತು ಒಬಿಸಿ ಜನಸಂಖ್ಯೆಯನ್ನು ಕೇಂದ್ರೀಕರಿಸುವ ಬಿಜೆಪಿಯ ಭವಿಷ್ಯದ ಕಾರ್ಯತಂತ್ರದ ಕುರಿತು ರಾವ್ ಮಾತನಾಡಿದರು. ಇಲ್ಲಿಯವರೆಗೆ ಬ್ರಾಹ್ಮಣರು ಮತ್ತು ಬನಿಯಾಗಳ (ಮೇಲ್ವರ್ಗದ ವರ್ತಕ ಸಮುದಾಯ) ಪಕ್ಷ ಎಂದು ಕರೆಯಲಾಗುತ್ತಿದ್ದ ಬಿಜೆಪಿ ಈಗ ಎಸ್‍ಸಿ, ಎಸ್‍ಟಿ, ಒಬಿಸಿ ಪಕ್ಷವಾಗಲಿದೆಯೇ ಎಂಬ ಪ್ರಶ್ನೆಗೆ, ರಾವ್ ಅವರು ಹಿಂದಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಕುರ್ತಾದ ಎರಡು ಪಾಕೆಟ್‍ಗಳನ್ನು ತೋರಿಸುತ್ತಾ ‘ಬ್ರಾಹ್ಮಣರು’ ಮತ್ತು ‘ಬನಿಯಾಗಳು’ ನನ್ನ ಎರಡು ಜೇಬಿನಲ್ಲಿದ್ದಾರೆಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

    ಈ ಹೇಳಿಕೆ ವಿರುದ್ಧ ವಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. ಮುರಳೀಧರ್ ವಿರುದ್ಧ ವಾಗ್ದಾಳಿ ನಡೆಸಿದ ಕಮಲ್ ನಾಥ್, ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆಯನ್ನು ನೀಡುವ ಬಿಜೆಪಿಯ ಮಧ್ಯಪ್ರದೇಶದ ಉಸ್ತುವಾರಿ, ಈಗ ನಾವು ಒಂದು ಜೇಬಿನಲ್ಲಿ ಬ್ರಾಹ್ಮಣರು ಮತ್ತು ಒಂದು ಕಿಸೆಯಲ್ಲಿ ಬನಿಯಾ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ

    ಈ ಸಮುದಾಯಗಳಿಗೆ ಮಾಡಿದ ದೊಡ್ಡ ಅವಮಾನ. ಮತದಾರರು ಪಕ್ಷದ ಆಸ್ತಿಯಾಗಬೇಕು. ಆದರೆ ಬಿಜೆಪಿ ಜೇಬಿನಲ್ಲಿದ್ದಾರೆ ಎಂದು ಹೇಳುತ್ತದೆ. ಬಿಜೆಪಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮುದಾಯಗಳಿಗೆ ಯಾವ ರೀತಿಯ ಗೌರವವಾಗಿದೆ. ಬಿಜೆಪಿ ನಾಯಕರು ಅಧಿಕಾರ ಮತ್ತು ಅಹಂಕಾರದ ಅಮಲಿನಲ್ಲಿದ್ದಾರೆ. ಇದು ಇಡೀ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು, ಬಿಜೆಪಿ ನಾಯಕತ್ವವು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

    ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ ಘೋಷಣೆಯನ್ನು ನೀಡುವ ಬಿಜೆಪಿ ಜನರನ್ನು ಈಗ ನಿರ್ದಿಷ್ಟ ಗುಂಪುಗಳನ್ನು ಕೇಂದ್ರೀಕರಿಸುವ ಮತ್ತು ಎರಡು ಸಮುದಾಯಗಳನ್ನು ಅವಮಾನಿಸುವ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ ಮನಸ್ಥಿತಿ. ಅಧಿಕಾರದ ಹಸಿವಿನಲ್ಲಿ ಬಿಜೆಪಿ ಯಾವ ಹಂತಕ್ಕೂ ಹೋಗಬಹುದು. ಅದರ ನೀತಿಗಳು, ವರ್ತನೆ ಮತ್ತು ತತ್ವಶಾಸ್ತ್ರವು ಅಧಿಕಾರಕ್ಕೆ ಸೀಮಿತವಾಗಿದೆ” ಎಂದು ಕಮಲ್ ನಾಥ್ ಆರೋಪಿಸಿದ್ದಾರೆ.

  • ಮಹೇಶ್ ಜೊತೆಗಿನ ಭೇಟಿಗೆ ವಿಶೇಷ ಅರ್ಥ ಬೇಡ- ಬಿಎಸ್‍ವೈ

    ಮಹೇಶ್ ಜೊತೆಗಿನ ಭೇಟಿಗೆ ವಿಶೇಷ ಅರ್ಥ ಬೇಡ- ಬಿಎಸ್‍ವೈ

    ಬೆಂಗಳೂರು: ಸಚಿವ ಸಾ.ರಾ ಮಹೇಶ್ ಹಾಗೂ ಬಿಜೆಪಿ ಮುಖಂಡರ ಭೇಟಿಗೆ ಹೊಸ ಅರ್ಥ ಬೇಡ. ಅವರ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ಸಾ.ರಾ ಮಹೇಶ್ ಹಾಗೂ ಬಿಜೆಪಿ ಮುಖಂಡ ಭೇಟಿಗೆ ಹೊಸ ಅರ್ಥ ನೀಡುವುದು ಬೇಡ. ಜೆಡಿಎಸ್ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಿಂದೆ ನೂರು ಬಾರಿ ನಾವು ಜೆಡಿಎಸ್ ಜೊತೆ ಸರ್ಕಾರ ಮಾಡಿ ಸೋತು ಹೋಗಿದ್ದೇವೆ ಎಂದು ಹೇಳಿದ್ದೇವೆ. ಇನ್ನು ಸಾಧ್ಯವಿಲ್ಲ. ಅವರಿಬ್ಬರ ಭೇಟಿ ಆಕಸ್ಮಿಕ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಮ್ಮ ಗಮನ ಇದೆ. ಸೋಮವಾರದಿಂದ ಸದನದಲ್ಲಿ ಏನು ಮಾಡಬೇಕು ಎನ್ನುವುದನ್ನು ನಾವು ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.

    ಭೇಟಿ ಕುರಿತು ಜೆಡಿಎಸ್ ಕೂಡ ಸ್ಪಷ್ಟನೆ ನೀಡಿದ್ದು, ಕುಮಾರಕೃಪ ಗೆಸ್ಟ್ ಹೌಸ್‍ಗೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇದೇ ಸಂದರ್ಭದಲ್ಲಿ ಸಾ.ರಾ ಮಹೇಶ್ ಅವರು ಆಕಸ್ಮಿಕವಾಗಿ ಕೆ.ಎಸ್ ಈಶ್ವರಪ್ಪ, ಮುರಳೀಧರ್ ರಾವ್ ಅವರನ್ನು ದಾರಿ ಮಧ್ಯೆ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸದೃಢವಾಗಿದ್ದು, ಸಮರ್ಥ ಆಡಳಿತ ಮುಂದುವರಿಸಲಿದೆ ಎಂದು ಟ್ವೀಟ್ ಮಾಡಿದೆ.

  • ಆಪರೇಷನ್ ಕಮಲ ಸುಳಿವು ಕೊಟ್ಟ ಮುರಳಿಧರ್ ರಾವ್

    ಆಪರೇಷನ್ ಕಮಲ ಸುಳಿವು ಕೊಟ್ಟ ಮುರಳಿಧರ್ ರಾವ್

    ಬೆಂಗಳೂರು: ಸಂಸತ್ ಅಧಿವೇಶನ ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಾ ಎಂಬುದರ ಕುರಿತು ರಾಜಕೀಯ ಅಂಗಳದಲ್ಲಿ ಚರ್ಚೆಗಳು ನಡೆದಿವೆ. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ನೀಡಿರುವ ಹೇಳಿಕೆ ಇಂತಹ ಅನುಮಾನಕ್ಕೆ ಕಾರಣವಾಗಿದೆ.

    ನಗರದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತ ಈಗ ಬಿಜೆಪಿ ರಾಡಾರ್ ವ್ಯಾಪ್ತಿಯಲ್ಲಿದೆ. ಕರ್ನಾಟಕದಲ್ಲಿ ಅಪೂರ್ಣವಾಗಿರುವ ಕೆಲಸ ಪೂರ್ಣಗೊಳಿಸಬೇಕಾಗಿದೆ. ಆದಷ್ಟು ಬೇಗ ಸರ್ಕಾರ ಕಿತ್ತೊಗೆಯಬೇಕಿದೆ ಎಂದು ಹೇಳಿದ್ದಾರೆ.

    ಈ ಮಧ್ಯೆ ಮಗ ಗ್ರಾಮ ವಾಸ್ತವ್ಯಕ್ಕೆ ಹೋದರೆ, ಅಪ್ಪ ಮಧ್ಯಂತರ ಚುನಾವಣೆಗೆ ಹೋಗೋಣ ಎನ್ನುತ್ತಿದ್ದಾರೆ. ಯೋಗ್ಯತೆ ಇಲ್ಲ ಅಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಅಂತಾ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಮಧ್ಯಂತರ ಚುನಾವಣೆಗೆ ಅವಕಾಶ ಕೊಡಲ್ಲ ಎಂದು ಮುರಳಿಧರ್ ರಾವ್ ಕೂಡ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಆರ್.ಅಶೋಕ್ ಅವರು, ರಾಜ್ಯಗಳಲ್ಲೂ ಕಾಂಗ್ರೆಸ್ ಜಗಳವಾಡುತ್ತಿದೆ. ಚುನಾವಣೆ ಸೋಲಿನ ವಿಚಾರವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸುವ ಪ್ರಯತ್ನ ಮಾಡಲ್ಲ. ತಾನಾಗಿಯೇ ಮೈತ್ರಿ ಸರ್ಕಾರ ಪತನವಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನನಗೆ ಇನ್ನು ರಾಜಕೀಯ ಬೇಡ: ತೇಜಸ್ವಿನಿ ಅನಂತಕುಮಾರ್

    ನನಗೆ ಇನ್ನು ರಾಜಕೀಯ ಬೇಡ: ತೇಜಸ್ವಿನಿ ಅನಂತಕುಮಾರ್

    – ಟಿಕೆಟ್ ತಪ್ಪಿದ್ಯಾಕೆ ಅಂತ ಮೋದಿ, ಅಮಿತ್ ಶಾ ಮೊದಲು ಸ್ಪಷ್ಟಪಡಿಸಲಿ!
    – ಪ್ರಚಾರಕ್ಕೆ ಕರೆದವರಿಗೆ ತೇಜಸ್ವನಿ ಫುಲ್ ಕ್ಲಾಸ್

    ಬೆಂಗಳೂರು: ನನಗೆ ಇನ್ನು ರಾಜಕೀಯ ಬೇಡ. ಅದಮ್ಯ ಚೇತನದ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ತೇಜಸ್ವಿನಿ ಅನಂತ್‍ಕುಮಾರ್ ಅವರು ಬಿಜೆಪಿ ಕಾರ್ಯಕರ್ತರ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.

    ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬಿಜೆಪಿ ಮುಖಂಡ ಮುರಳೀಧರರಾವ್ ಮನವಿ ಮಾಡಿದರು. ಈ ವೇಳೆ ತೇಜಸ್ವಿನಿ ಅವರು, ತಮಗೆ ಬೆಂಗಳೂರು ದಕ್ಷಿಣ ಲೋಕಸಭಾ ಟಿಕೆಟ್ ತಪ್ಪಿದ್ಯಾಕೆ..? ಅಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೊದಲು ಸ್ಪಷ್ಟಪಡಿಸಲಿ. ಅವರ ಉತ್ತರ ಒಪ್ಪಿಗೆಯಾದರೆ ಮಾತ್ರ ನಾವು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಇಲ್ಲಿ ಯಾರೂ ದೊಡ್ಡವರಲ್ಲ. ಯಾರ ಕಾಲಿಗೂ ಬೀಳುವ ಅಗತ್ಯವಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಇದಕ್ಕೂ ಮುನ್ನ ವಿಧಾನ ಪರಿಷತ್ ಮಾಜಿ ಸದಸ್ಯ ಕೃಷ್ಣ ಭಟ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತೇಜಸ್ವಿನಿ ಅನಂತ್‍ಕುಮಾರ್ ಮನೆಗೆ ಭೇಟಿ ನೀಡಿ, ಮನವೊಲಿಕೆಗೆ ಯತ್ನಿಸಿದರು.

    ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿ ತೇಜಸ್ವಿನಿ ಅವರ ನಿವಾಸದಲ್ಲಿ ಮುರಳೀಧರರಾವ್ ಕಾರನ್ನು ತಡೆದು ಅನಂತ್‍ಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವರು ಕಾರಿಗೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಸ್ಥಳಕ್ಕೆ ಬಂದ ಅನಂತಕುಮಾರ್ ಸಹೋದರ ನಂದಕುಮಾರ್ ಅವರು, ಕಾರ್ಯಕರ್ತರನ್ನ ಸಮಾಧಾನಪಡಿಸಿ ಮುರಳೀಧರರಾವ್ ಅವರನ್ನು ನಿವಾಸಕ್ಕೆ ಕರೆಕೊಂಡು ಹೋದರು.

  • ಹೀರೋ ಯಾರೆಂದು ಗೊತ್ತಿಲ್ಲದ ಸಿನಿಮಾದಲ್ಲಿ ಬಿಎಸ್‍ವೈ ವಿಲನ್: ಮುರಳೀಧರ್ ರಾವ್

    ಹೀರೋ ಯಾರೆಂದು ಗೊತ್ತಿಲ್ಲದ ಸಿನಿಮಾದಲ್ಲಿ ಬಿಎಸ್‍ವೈ ವಿಲನ್: ಮುರಳೀಧರ್ ರಾವ್

    ಹುಬ್ಬಳ್ಳಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಜನರಿಗೆ ಸಿನಿಮಾ ತೋರಿಸುತ್ತಿದ್ದು, ಆ ಸಿನಿಮಾದಲ್ಲಿ ಯಾರು ಹೀರೋ ಎಂಬುದು ಅವರಿಗೆ ಗೊತ್ತಿಲ್ಲ. ಆದರೆ ಸಿನಿಮಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರನ್ನು ವಿಲನ್ ಆಗಿ ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ವರಿಷ್ಠ ಮುರಳೀಧರ್ ರಾವ್ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶ ಉದ್ದೇಶಿಸಿದ ಮಾತನಾಡಿದ ಅವರು, ರಾಜ್ಯದಲ್ಲಿ ಮಾಡಿಕೊಂಡಿರುವ ಬಂಧನ್ ಹೆಚ್ಚು ಕಾಲ ಉಳಿಯುವುದಿಲ್ಲ. ಇನ್ನು ದೇಶದಲ್ಲಿ ನಿರ್ಮಾಣ ಆಗಿರುವ ಘಟಬಂಧನ್ ಉಳಿಯುತ್ತಾ? 2014ರ ಪಕ್ಷ ಗೆದ್ದಿರುವ ಒಂದು ಸ್ಥಾನವೂ ಕಡಿಮೆ ಆಗದೆ, ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಅಲ್ಲದೇ ದೇಶದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆದರೆ ರಾಹುಲ್ ಇದಕ್ಕೆಲ್ಲಾ ಅಡ್ಡಗಾಲು ಹಾಕುತ್ತಿದ್ದಾರೆ. ದೇಶದ ಅಲ್ಪ ಸಂಖ್ಯಾತರ ಅಭಿವೃದ್ಧಿ ಆಗುವುದು ಕಾಂಗ್ರೆಸ್‍ಗೆ ಬೇಡವಾಗಿದ್ದು, ಮತಗಳು ಮಾತ್ರ ಬೇಕು. ರಾಜ್ಯದಲ್ಲಿ ಜನರ ಆಶೀರ್ವಾದ ಇಲ್ಲದೇ ಇದ್ದರೂ ಕೂಡ ಅಧಿಕಾರಕ್ಕಾಗಿ ಮೈತ್ರಿ ನಡೆಸಿದ್ದಾರೆ. ಆದರೆ ಬಿಜೆಪಿ ದೂರ ಇಡಲು ಮೈತ್ರಿ ಮಾಡಿಕೊಂಡಿದ್ದಾಗಿ ಸುಳ್ಳು ಹೇಳುತ್ತಾರೆ ಟೀಕೆ ಮಾಡಿದರು.

    ಇದೇ ವೇಳೆ ರಾಜ್ಯ ಸರ್ಕಾರ ಜನರಿಗೆ ದಿನಕ್ಕೊಂದು ಜಗಳ ನಡೆಸುವ ಮೂಲಕ ದಿನಕ್ಕೊಂದು ಸಿನಿಮಾ ತೋರಿಸುತ್ತಿದೆ. ಆದರೆ ಇದಕ್ಕೆಲ್ಲಾ ಕಾರಣ ಬಿಎಸ್‍ವೈ ಕಾರಣ ಎಂದೇ ಹೇಳುತ್ತಿದ್ದಾರೆ. ಹೋಟೆಲ್ ನಲ್ಲಿ ಶಾಸಕರು ಬಡಿದಾಡಿಕೊಂಡರು ಕೂಡ ಅವರೇ ಕಾರಣ ಎನ್ನುತ್ತಾರೆ. ಭ್ರಷ್ಟಚಾರದಲ್ಲಿ ತೊಡಗಿರುವ ಸರ್ಕಾರ ಬಿಎಸ್‍ವೈ ಅವರ ಮೇಲೆ ಏಕೆ ಆರೋಪ ಮಾಡುತ್ತಾರೆ ಎಂದು ಆರ್ಥ ಆಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೇ ದೇಶದಲ್ಲಿ ಮೋದಿ ಅವರ ಕಾರ್ಯಗಳು ಜನರಿಗೆ ಇಷ್ಟವಾಗಿದ್ದು, ಇದಕ್ಕೆ ಇಲ್ಲಿ ಹಾಜರಾಗಿರುವ ಲಕ್ಷ ಲಕ್ಷ ಜನರೇ ಕಾರಣ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ, ಹಿಂದಿ ಹಾಗೂ ಕನ್ನಡಿಗರ ನಡುವೆ ಜಗಳ ತಂದಿಡ್ತಿದ್ದಾರೆ: ಮುರುಳೀಧರ್ ರಾವ್

    ಸಿಎಂ, ಹಿಂದಿ ಹಾಗೂ ಕನ್ನಡಿಗರ ನಡುವೆ ಜಗಳ ತಂದಿಡ್ತಿದ್ದಾರೆ: ಮುರುಳೀಧರ್ ರಾವ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಜೊತೆ ತಮಿಳು, ತೆಲುಗು ಭಾಷಿಕರು ಹೆಚ್ಚಿದ್ದಾರೆ. ಅದೇ ರೀತಿ ಹಿಂದಿ ಭಾಷಿಕರು ಮತ್ತು ಪೂರ್ವಾಂಚಲ ರಾಜ್ಯದ ಜನರು ಹಚ್ಚಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಹಿಂದಿ ಭಾಷಿಕರು ಹಾಗೂ ಕನ್ನಡಿಗರ ನಡುವೆ ಜಗಳ ತಂದು ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಮುರುಳೀಧರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ.

    ನಗರದ ಮ್ಯನ್ಫೋ ಕನ್ವೇಷನ್ ಸೆಂಟರ್ ನಲ್ಲಿ ಇಂದು ಬಿಜೆಪಿ ಯಿಂದ ಆಯೋಜಿಸಿದ್ದ ಪೂರ್ವಾಂಚಲ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಿಂದಿ ಭಾಷಿಕರು ಯಾವುದೇ ಗಲಾಟೆ ಮಾಡಿಕೊಂಡಿಲ್ಲ. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಸಿಎಂ ಅವರಿಗೆ ಜನರಲ್ಲಿ ಜಗಳ ನಿರ್ಮಾಣ ಮಾಡದಿದ್ದಾರೆ ನಿದ್ದೆ ಬರುವುದಿಲ್ಲ. ಈಗಾಗಲೇ ಅವರು ಹಿಂದೂ, ಮುಸ್ಲಿಮರ ಜೊತೆ ಜಗಳ ತಂದಿಟ್ಟಿದ್ದಾರೆ. ಟಿಪ್ಪು ಸುಲ್ತಾನ್ ಜಪ ಮಾಡಿ ರಾಜ್ಯದ ಶಾಂತಿ ಕದಡಿದ್ದಾರೆ. ಹಿಂದೂ ಧರ್ಮದಲ್ಲಿ ಒಡಕು ಮೂಡಿಸುವ ಉದ್ದೇಶದಿಂದ ಲಿಂಗಾಯತ ಧರ್ಮವನ್ನು ಎರಡು ಭಾಗ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ನಾನು ಒಮ್ಮೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದೆ. ಸಿದ್ದರಾಮಯ್ಯ ಅಂದು ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದರು. ರಾಷ್ಟ್ರೀಯ ಪಕ್ಷದ ನಾಯಕರಾಗಿ ಹೇಗೆ ಈ ರೀತಿ ಹೇಳಿದ್ದಾರೆ? ಕರ್ನಾಟಕದ ಮುಖ್ಯಮಂತ್ರಿಗೆ ಹಿಂದಿಯಲ್ಲಿ ಮಾತನಾಡಲು, ಬರೆಯಲು ಕಷ್ಟವಾಗುತ್ತೆ. ಆದರೆ ಇಂಗ್ಲೀಷ್ ನಲ್ಲಿ ಮಾತನಾಡಲು ಬರೆಯಲು ಬರುತ್ತೆ ಎಂದರು.

    ಭಾಷಣದ ಮಧ್ಯೆ, ರಾಜಧಾನಿಯಲ್ಲಿ ಹಿಂದಿ ಭಾಷಿಕರಿಂದ ಯಾವುದಾದರೂ ಸಮಸ್ಯೆ ಆಗಿದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಕಾರ್ಯಕ್ರಮದಲ್ಲಿದ್ದ ಎಲ್ಲರು ಇಲ್ಲ ಎಂದರು ಉತ್ತರಿಸಿದರು.

    ಈ ವೇಳೆ ಮಾತನಾಡಿದ ಸಂಸದ ಪಿಸಿ ಮೋಹನ್, ಬೆಂಗಳೂರು ದೇಶದಲ್ಲೇ ದೊಡ್ಡ ಹೆಸರು ಮಾಡಿದೆ. ವಿವಿಧ ರಾಜ್ಯದಿಂದ ಬಂದಿರುವವರು ಬಹಳಷ್ಟು ಜನ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಪೂರ್ವಾಂಚಲ ಭಾಗದವರು ಕೂಡ ಹೆಚ್ಚಾಗಿದ್ದಾರೆ. ಮೇ 12 ರಂದು ಮತದಾನ ನಡೆಯುತ್ತದೆ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

    ಕೇವಲ ಶ್ರೀಮಂತರ ಬಳಿ ಮಾತ್ರ ಡೆಬಿಟ್ ಕ್ರೆಡಿಟ್ ಕಾರ್ಡ್ ಇರಬೇಕು ಎನ್ನದೆ ಪ್ರಧಾನಿ ಮೋದಿ ಅವರ ಆಶಯದಂತೆ ಬಡವರ ಬಳಿಯೂ ಡೆಬಿಟ್ ಕಾರ್ಡ್ ಇರುವ ಹಾಗೇ ಮಾಡಲು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕವನ್ನು ದೇಶದಲ್ಲಿ ಭ್ರಷ್ಟ ರಾಜ್ಯವಾಗಿ ಮಾಡಿದ್ದಾರೆ. ಯಾವುದೇ ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಆತ್ಮಹತ್ಯೆ ಮಾಡುಕೊಂಡಿಲ್ಲ, ಇದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿರುವ ರಾಜ್ಯದಲ್ಲಿ ಮಾತ್ರ ನಡೆದಿದೆ ಎಂದು ಮೋಹನ್ ಆರೋಪಿಸಿದರು.

     

  • ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಮಾತಾಡಿ, ಹಿಂದಿ ಅರ್ಥವಾಗಲ್ಲ ಸರ್-  ಮುರಳೀಧರ್ ರಾವ್ ಗೆ  ಸಿಎಂ ಟಾಂಗ್

    ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಮಾತಾಡಿ, ಹಿಂದಿ ಅರ್ಥವಾಗಲ್ಲ ಸರ್- ಮುರಳೀಧರ್ ರಾವ್ ಗೆ ಸಿಎಂ ಟಾಂಗ್

    ಬೆಂಗಳೂರು: ಕನ್ನಡದ ಅಸ್ಮಿತೆಯನ್ನೇ ಪ್ರಮುಖ ಚುನಾವಣಾ ವಿಷ್ಯವಾಗಿಸಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್‍ಗೆ ಸಖತ್ ಟಾಂಗ್ ಕೊಟ್ಟು ಟ್ವಿಟ್ಟರ್‍ನಲ್ಲಿ ಟ್ರೆಂಡ್ ಸೃಷ್ಟಿಸಿದ್ರು.

    ಸಿದ್ದರಾಮಯ್ಯ ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಲ್ಲೂ ಸ್ಪರ್ಧೆ ಮಾಡ್ತಿರೋ ಬಗ್ಗೆ ವ್ಯಂಗ್ಯವಾಡಿ ರಾವ್, ಹಿಂದಿಯಲ್ಲಿ ಟ್ವೀಟಿಸಿದ್ರು. ತಮ್ಮ ಮೇಲೆಯೇ ಹಿಂದಿ ಹೇರಿಕೆಗೆ ತಿರುಗೇಟು ಕೊಟ್ಟ ಮುಖ್ಯಮಂತ್ರಿ, ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಟ್ವೀಟ್ ಮಾಡಿ ಸರ್, ಹಿಂದಿ ಅರ್ಥವಾಗಲ್ಲ ಅಂತ ಮರು ಟ್ವೀಟಿಸಿದ್ರು.

    ಈ ಟ್ವೀಟ್ ಬೆನ್ನಲ್ಲೇ ಮೈಕ್ರೋಬ್ಲಾಗ್‍ನಲ್ಲಿ ರಾವ್ ವಿರುದ್ಧ ಟೀಕೆಗಳು ಕೇಳಿ ಬಂದವು. ಇದರಿಂದ ಅನಿವಾರ್ಯವಾಗಿ ರಾವ್, ಏನ್ ಸಿದ್ದರಾಮಯನವ್ರೇ ಹೆದರಿಬಿಟ್ರಾ..? ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಆರಿಸಿಕೊಂಡ್ರಿ. ಈಗ ಭಯದಿಂದ ಎರಡು ದೋಣಿಯಲ್ಲಿ ಕಾಲಿಡಲು ಹೊರಟಿದ್ದೀರಿ, ಚಿಂತೆ ಬೇಡ. ನೀವೆಲ್ಲಿ ಸ್ಪರ್ಧಿಸಿದ್ರೂ ಪೂರ್ತಿ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡ್ತೀವಿ ಅಂತ ತಮ್ಮ ಹಿಂದಿ ಟ್ವೀಟನ್ನು ಕನ್ನಡಕ್ಕೆ ಅನುವಾದಿಸಿದ್ರು.

    ಇದಕ್ಕೆ ಇಂಗ್ಲೀಷ್‍ನಲ್ಲಿ ಉತ್ತರ ಕೊಟ್ಟ ಸಿದ್ದರಾಮಯ್ಯ, ಎರಡೂ ಕ್ಷೇತ್ರಗಳಲ್ಲಿ ಜನ ನನ್ನ ಹಣೆಬರಹ ನಿರ್ಧಾರ ಮಾಡ್ತಾರೆ. ಅದರ ಚಿಂತೆ ನಿಮಗೆ ಬೇಡ. ಆದ್ರೆ ನಿಮ್ಗೆ ಕನ್ನಡದಲ್ಲಿ ಟ್ವೀಟ್ ಮಾಡೋದನ್ನು ಕಲ್ಸಿದ್ನಲ್ಲ ಅದಕ್ಕೆ ಖುಷಿ ಆಗ್ತಿದೆ ಅಂತ ತಿರುಗೇಟು ನೀಡಿದ್ರು.

    ಇತ್ತ ಕೃಷ್ಣಬೈರೇಗೌಡ ಉರ್ದು ಭಾಷೆಯಲ್ಲಿ ನೀಡಿದ್ದ ಜಾಹೀರಾತು ಉಲ್ಲೇಖಿಸಿದ ಬಿಜೆಪಿ, ನೀವು ನಿಮ್ಮವರು ಹಿಂದಿ ಭಾಷೆಯಲ್ಲಿ ಜಾಹೀರಾತು ಕೊಟ್ಟಾಗ ನಮಗೂ ಅರ್ಥ ಆಗ್ಲಿಲ್ಲ ಸರ್ ಅಂತ ವ್ಯಂಗ್ಯವಾಡಿದೆ.

  • ರಾಹುಲ್ ಗಾಂಧಿ ಕರ್ನಾಟಕ ಗೆಲ್ಲೋದು ಬಿಗ್ ಜೋಕ್- ಮುರಳೀಧರ್ ರಾವ್

    ರಾಹುಲ್ ಗಾಂಧಿ ಕರ್ನಾಟಕ ಗೆಲ್ಲೋದು ಬಿಗ್ ಜೋಕ್- ಮುರಳೀಧರ್ ರಾವ್

    ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆ ಸೇರಿ ಕರ್ನಾಟಕ ಗೆಲ್ತಾರಂತೆ. ರಾಹುಲ್ ಯುಗದಲ್ಲಿ ಅಮೇಥಿ ಗೆಲ್ಲೋದೂ ಕಷ್ಟ ಇದೆ. ಅಮೇಥಿಯಲ್ಲೇ ಜೀರೋ ಆದವರು ಈಗ ಕರ್ನಾಟಕ ಗೆಲ್ತಾರಂತೆ. ಇದೊಂದು ಬಿಗ್ ಜೋಕ್ ಅಂತ ಬಿಜೆಪಿ ವರಿಷ್ಠ ಮುರಳೀಧರ್ ರಾವ್ ವ್ಯಂಗ್ಯವಾಡಿದ್ದಾರೆ.

    ಜನ ಸುರಕ್ಷಾ ಯಾತ್ರೆ ಸಂದರ್ಭದಲ್ಲಿ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ಮಾತನಾಡಿದ ಅವರು, ರಾಹುಲ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಶೀಘ್ರ ಪಾತಾಳಕ್ಕೆ ಹೋಗ್ತದೆ. ಕಾಂಗ್ರೆಸ್ ಪಿಎಫ್ ಐ, ಎಸ್‍ಡಿಪಿಐ ಜೊತೆ ಕೈ ಜೋಡಿಸಿದ್ರೂ ಚುನಾವಣೆ ಗೆಲ್ಲೋಕಾಗಲ್ಲ ಅಂದ್ರು. ಇದನ್ನೂ ಓದಿ: ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆ

    ಸಿಎಂ ಅವರ ನಂ.1 ಜಾಹೀರಾತು ನೋಡಿದ್ರೆ ನಗು ಬರುತ್ತದೆ. ನನಗೆ ತೆಲುಗು ಸಿನಿಮಾ ನೆನಪಾಗುತ್ತದೆ. ಖೈದಿ ನಂ.1, ರೌಡಿ ನಂ.1, ಕೇಡಿ ನಂ.1, ಗೂಂಡಾ ನಂ.1 ನೋಡಿದ ಹಾಗಾಗುತ್ತದೆ. ಇದು ಮಾಫಿಯಾ ಸರ್ಕಾರ. ಇವರಿಂದ ಅಭಿವೃದ್ದಿ ಅಸಾಧ್ಯ. ಕಾಂಗ್ರೆಸ್ ಲೆಕ್ಕಾಚಾರ ಮುಗಿದಿದೆ. ಇದು ಭೃಷ್ಟಾಚಾರಿಗಳ ಪಾರ್ಟಿ. ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನವೂ ದೂರವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ- ಈಶ್ವರಪ್ಪ

    40 ಲಕ್ಷದ ವಾಚ್ ಕಟ್ಟಿ ನಾಚಿಕೆ ಬಿಟ್ಟು ವೇದಿಕೆಯಲ್ಲಿ ಕೂರ್ತಾರೆ. ನಾನು ಭೃಷ್ಟ ಅಲ್ಲ ಅಂತಾರೆ. ಸಿದ್ದರಾಮಯ್ಯ ಡಾನ್ ಮಾತ್ರವಲ್ಲ ಭ್ರಷ್ಟಾಚಾರಿನೂ ಹೌದು ಎಂದು ಟೀಕಿಸಿದ ಅವರು, ಕಾಂಗ್ರೆಸ್ ಫೇಲ್, ಸಿದ್ದರಾಮಯ್ಯ ಫೇಲ್ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪ

    ಸಿಎಂ ಗೆ ಪಿಎಫ್‍ಐ ಜೊತೆ ಪಾರ್ಟ್‍ನರ್ ಶಿಪ್ ಇದೆ. ಜನಸಂಘ ಅಂದ್ರೆ ಜೋಕ್ ಅಂದವರು ಈಗ ದೇಶದಲ್ಲಿ ಬಿಜೆಪಿ ಬೆಳವಣಿಗೆ ನೋಡಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 21 ರಾಜ್ಯಗಳಲ್ಲಿ ಬಿಜೆಪಿ ಇದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

  • ಗುಜರಾತ್ ಚುನಾವಣೆ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಆಪರೇಷನ್!

    ಗುಜರಾತ್ ಚುನಾವಣೆ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಆಪರೇಷನ್!

    ಬೆಂಗಳೂರು: ಗುಜರಾತ್ ಚುನಾವಣೆ ಗೆದ್ದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಮಿಷನ್ 150 ಸಾಧಿಸಲು ಹೊಸ ಕಾರ್ಯತಂತ್ರ ರೂಪಿಸಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯಲು ಹೊಸ ಕಾರ್ಯತಂತ್ರ ರಚನೆ ಮಾಡಿದ್ದಾರೆ ಎನ್ನಲಾಗಿದ್ದು, ಹೊಸ ಕಾರ್ಯತಂತ್ರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಮುರಳೀಧರ್ ರಾವ್ ಬದಲಾವಣೆ ಮಾಡುವ ಸಾಧ್ಯತೆ ಇದೆ.

    ಮುರಳೀಧರ್ ರಾವ್ ಅವರನ್ನು ಬದಲಾವಣೆ ಮಾಡಿ ಗುಜರಾತ್ ರಾಜ್ಯದ ಬಿಜೆಪಿ ಉಸ್ತುವಾರಿ ಕಾರ್ಯ ನಿರ್ವಹಿಸುತ್ತಿದ್ದ ಭೂಪೇಂದ್ರ ಯಾದವ್ ಅವರನ್ನು ನೇಮಿಸಲು ಅಮಿತ್‍ಶಾ ಮುಂದಾಗಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಇವರು ಚುನಾವಣೆ ಚಾಣಕ್ಯ ಎಂದೇ ಬಿಜೆಪಿ ವಲಯದಲ್ಲಿ ಹೆಸರು ಪಡೆದಿದ್ದಾರೆ. ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿರುವ ಭೂಪೇಂದ್ರ ಯಾದವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಮೋದಿ ಮೇಲೆ ನಂಬಿಕೆ ಇಟ್ಟಿದ್ದಾರೆ, ಕಾಂಗ್ರೆಸ್ ಮುಕ್ತ ಭಾರತ ಮುಂದುವರೆಯಲಿದೆ: ಮುರಳೀಧರ್ ರಾವ್

    ಮೋದಿ ಮೇಲೆ ನಂಬಿಕೆ ಇಟ್ಟಿದ್ದಾರೆ, ಕಾಂಗ್ರೆಸ್ ಮುಕ್ತ ಭಾರತ ಮುಂದುವರೆಯಲಿದೆ: ಮುರಳೀಧರ್ ರಾವ್

    ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಜನರು ಇನ್ನೂ ನಂಬಿಕೆ ಇಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮುಂದುವರಿಯಲಿದೆ ಎಂದು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಮುರಳೀಧರ್ ರಾವ್ ಪ್ರತಿಕ್ರಿಯೆ ನೀಡಿ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನೀರಿಕ್ಷಿತ ಮಟ್ಟ ತಲುಪುತ್ತಿದ್ದೇವೆ. ಎರಡು ರಾಜ್ಯದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. 22 ವರ್ಷಗಳ ಆಡಳಿತ ಜೊತೆಗೆ ಮತ್ತೆ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರ ಬರುತ್ತೆ ಎಂದು ಸಂತಸದಿಂದ ಹೇಳಿದರು.

    ಪ್ರಧಾನಿ ಮೋದಿ ಮೇಲೆ ಜನರು ಇನ್ನೂ ನಂಬಿಕೆ ಇಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮುಂದುವರಿಯಲಿದೆ. ಮೋದಿ ಪ್ರತಿಬಾರಿ ಎಲ್ಲಾ ಕಡೆ ಪ್ರಚಾರ ಮಾಡುವಂತೆ ಮಾಡಿದ್ದಾರೆ. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು. ಅಷ್ಟೇ ಅಲ್ಲದೇ ಅಮಿತ್ ಷಾ ರಾಜ್ಯ ಸಭಾ ಸದಸ್ಯರಾಗಿದ್ದರು. ಆದ್ದರಿಂದ ಅವರು ಪ್ರಚಾರ ಮಾಡುವುದರಲ್ಲಿ ತಪ್ಪಿಲ್ಲ ಎಂದರು.

    ನಮ್ಮ ನಿರೀಕ್ಷೆ 150 ಸೀಟುಗಳಾಗಿತ್ತು. ಆದರೆ ನಮ್ಮ ನಿರೀಕ್ಷೆಗಿಂತ ಕಡಿಮೆ ಬರುವ ಸಾಧ್ಯತೆ ಇದೆ. ಮೊದಲು ಪೂರ್ಣ ಫಲಿತಾಂಶ ಬಂದ ಮೇಲೆ ಸ್ಥಾನ ಕಡಿಮೆ ಆಗಲು ಏನು ಕಾರಣ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.