Tag: Murali Vijay

  • ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಮುಂಬೈ: ಟೀಂ ಇಂಡಿಯಾದ (Team India) ಆಟಗಾರನಾಗಿದ್ದ ಮುರಳಿ ವಿಜಯ್ (Murali Vijay) ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ (International Cricket) ನಿವೃತ್ತಿ (Retirement) ಘೋಷಿಸಿದ್ದಾರೆ.

    ಟೀಂ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ್ದ ವಿಜಯ್ 2002 ರಿಂದ 2018ರ ವರೆಗೆ ತಂಡದಲ್ಲಿದ್ದರು. ಆ ಬಳಿಕ ಫಾರ್ಮ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ನಂತರ ತಂಡಕ್ಕೆ ಕಂಬ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಸಿಎಂ ಭೇಟಿಯಾದ ಸೂರ್ಯ – ಮಿಸ್ಟರ್ 360 ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಯೋಗಿ

    ಟೀಂ ಇಂಡಿಯಾ ಪರ ಒಟ್ಟು 61 ಟೆಸ್ಟ್, 17 ಏಕದಿನ, 9 ಟಿ20 ಸೇರಿ ಒಟ್ಟು 87 ಪಂದ್ಯದಿಂದ 4,490 ರನ್ ಸಿಡಿಸಿದ್ದಾರೆ. 61 ಟೆಸ್ಟ್ ಪಂದ್ಯದಿಂದ 3,982 ರನ್ ಹೊಡೆದು ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದರು. ಇದಲ್ಲದೆ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK), ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ಪರ ಆಡಿದ್ದರು. ಇದನ್ನೂ ಓದಿ: ಬೌಲರ್‌ಗಳ ಆಟದಲ್ಲಿ ತಿಣುಕಾಡಿ ಗೆದ್ದ ಭಾರತ

    ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯ್, ನನ್ನ 2002 ರಿಂದ 2018ರ ವರೆಗಿನ ಕ್ರಿಕೆಟ್ ಪಯಣಕ್ಕೆ ಅಂತ್ಯವಾಡುತ್ತಿದ್ದೇನೆ. ಈವರೆಗೆ ಕ್ರಿಕೆಟ್ ಆಡಲು ಅವಕಾಶ ನೀಡಿದ್ದ ಬಿಸಿಸಿಐ (BCCI), ತಮಿಳುನಾಡು ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್, ಚೆಂಪ್ಲಾಸ್ಟ್ ಸನ್ಮಾರ್‌ಗೆ ಧನ್ಯವಾದಗಳು. ನನ್ನ ಕನಸು ನನಸಾಗಲು ಸಹಕರಿಸಿದ ಕೋಚ್, ಮೆಂಟರ್, ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ. ಕ್ರೀಡಾ ಬದುಕಿನ ಉತ್ತುಂಗದ ಮಟ್ಟವಾಗಿ ದೇಶಕ್ಕಾಗಿ ಆಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ನೀನು ನನ್ನ ಪತ್ನಿಯಂತೆ’- ಮುರಳಿ ವಿಜಯ್ ಜೊತೆಗಿನ ಕೆಮಿಸ್ಟ್ರಿಗೆ ಧವನ್ ಪ್ರತಿಕ್ರಿಯೆ

    ‘ನೀನು ನನ್ನ ಪತ್ನಿಯಂತೆ’- ಮುರಳಿ ವಿಜಯ್ ಜೊತೆಗಿನ ಕೆಮಿಸ್ಟ್ರಿಗೆ ಧವನ್ ಪ್ರತಿಕ್ರಿಯೆ

    ನವದೆಹಲಿ: ಟೀಂ ಇಂಡಿಯಾ ಅನುಭವಿ ಆಟಗಾರ ಶಿಖರ್ ಧವರ್ ತಮ್ಮ ಹಾಸ್ಯ ಪ್ರವೃತ್ತಿ ಮೂಲಕವೇ ಇತರೇ ಆಟಗಾರರ ನೆಚ್ಚಿನ ಸ್ನೇಹಿತ ಎನಿಸಿಕೊಂಡಿದ್ದಾರೆ. ಡ್ರೆಸ್ಸಿಂಗ್ ರೂಮ್‍ನಲ್ಲೂ ಕೂಡ ಧವನ್ ತಮ್ಮ ಹಾಸ್ಯ ಪ್ರಜ್ಞೆಯೊಂದಿಗೆ ಆಟಗಾರರನ್ನು ಸದಾ ನಗಿಸುತ್ತಿರುತ್ತಾರೆ. ಇದೇ ರೀತಿ ಟೀಂ ಇಂಡಿಯಾ ಆಟಗಾರ ಮುರಳಿ ವಿಜಯ್‍ರೊಂದಿಗೆ ತಮಗಿರುವ ಸ್ನೇಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧವನ್,’ ನೀನು ನನ್ನ ಪತ್ನಿಯಂತೆ’ ಎಂದು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣ ಇನ್‍ಸ್ಟಾ ವೇದಿಕೆಯಾಗಿ ನಡೆದ ಸಂದರ್ಶನವೊಂದರಲ್ಲಿ ಆರ್.ಅಶ್ವಿನ್ ಬಳಿ ಶಿಖರ್ ಧವನ್ ಮಾತನಾಡುತ್ತಾ ಹಲವು ಸಂಗತಿಗಳ ಕುರಿತು ತಿಳಿಸಿದ್ದಾರೆ. ಇದೇ ವೇಳೆ ಮುರಳಿ ವಿಜಯ್‍ರೊಂದಿಗೆ ಇರುವ ಸ್ನೇಹದ ಬಗ್ಗೆಯೂ ಧವನ್ ಮಾತನಾಡಿದ್ದಾರೆ. 2013ರಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಮಾದರಿಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಧವನ್, ಮುರಳಿ ವಿಜಯ್‍ರೊಂದಿಗೆ ಪ್ರಾರಂಭಿಸಿದ್ದ ಇನ್ನಿಂಗ್ಸ್ ನಲ್ಲಿ 289 ರನ್ ಗಳಿಸಿದ್ದರು. ವಿಜಯ್‍ರೊಂದಿಗೆ ಇನ್ನಿಂಗ್ಸ್ ಆರಂಭಿಸುವುದು ಇಷ್ಟ. ಆತನೊಂದಿಗೆ ಮತ್ತೆ ಬ್ಯಾಟಿಂಗ್ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಧವನ್ ಹೇಳಿದ್ದಾರೆ. ಅಂದಹಾಗೇ ಧವನ್-ವಿಜಯ್ ಜೋಡಿ 24 ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕೆ ಇಳಿದಿದೆ.

    ಮುರಳಿ ವಿಜಯ್‍ರೊಂದಿಗೆ ನನಗೆ ಅತ್ಯುತ್ತಮ ಸ್ನೇಹ ಸಂಬಂಧವಿದೆ. ಆತ ತುಂಬಾ ಉತ್ತಮ ವ್ಯಕ್ತಿತ್ವ ಹೊಂದಿದ್ದು, ನನ್ನ ಪತ್ನಿಯಂತೆಯೇ ಅನ್ನಿಸುತ್ತದೆ. ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಿಕೆಟ್‍ಗಳ ನಡುವೆ ಓಡುವ ವಿಚಾರದಲ್ಲಿ ಜಗಳ ನಡೆಯುತ್ತದೆ. ಆದರೆ ಕೂಡಲೇ ನಾವು ಅದರಿಂದ ಹೊರ ಬರುತ್ತೇವೆ. ಸಹನೆ ಇದ್ದರೇ ಮಾತ್ರ ವಿಜಯ್‍ನನ್ನು ಆರ್ಥೈಸಿಕೊಳ್ಳಲು ಸಾಧ್ಯ ಎಂದು ಧವನ್ ವಿವರಿಸಿದ್ದಾರೆ.

    2018ರ ಆಸ್ಟ್ರೇಲಿಯಾ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಮುರಳಿ ವಿಜಯ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆ ಬಳಿಕ ದೇಶೀಯ ಕ್ರಿಕೆಟ್, ಐಪಿಎಲ್‍ನಲ್ಲೂ ಹೇಳುಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಇತ್ತ ಧವನ್ ಕೂಡ ಕಳೆದ ವರ್ಷದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟೆಸ್ಟ್ ಮಾದರಿಯ ಕ್ರಿಕೆಟ್‍ನಿಂದ ದೂರವಾಗಿದ್ದಾರೆ. ಇನ್ನು ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯಲು ಪೈಪೋಟಿ ನಡೆಯುತ್ತಿದ್ದು, ರೋಹಿತ್ ಶರ್ಮಾ ಯಶಸ್ವಿ ಆರಂಭಿಕ ಆಟಗಾರರಾಗಿ ಹೊರಹೊಮ್ಮುವುದರೊಂದಿಗೆ ಮಯಾಂಕ್, ಪೃಥ್ವಿ ಶಾ, ಶುಭ್‍ಮನ್ ಗಿಲ್‍ರಂತಹ ಯುವ ಆಟಗಾರರು ಧವನ್‍ರೊಂದಿಗೆ ಪೈಪೋಟಿ ನಡೆಸುತ್ತಿದ್ದಾರೆ.

  • ವಿಜಯ್ ಜೊತೆ ಡಿನ್ನರ್‌ಗೆ ‘ಓಕೆ’, ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಎಲ್ಲಿಸ್ ಪೆರ್ರಿ

    ವಿಜಯ್ ಜೊತೆ ಡಿನ್ನರ್‌ಗೆ ‘ಓಕೆ’, ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಎಲ್ಲಿಸ್ ಪೆರ್ರಿ

    ನವದೆಹಲಿ: ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಆಲ್‍ರೌಂಡರ್ ಎಲ್ಲಿಸ್ ಪೆರ್ರಿ ಅವರೊಂದಿಗೆ ಡಿನ್ನರ್ ಮಾಡಬೇಕು ಎಂದು ಟೀಂ ಇಂಡಿಯಾ ಆಟಗಾರ ಮುರಳಿ ವಿಜಯ್ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದರು. ಸದ್ಯ ಮುರಳಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಎಲ್ಲಿಸ್ ಪೆರ್ರಿ, ಡಿನ್ನರ್‌ಗೆ ಸಮ್ಮತಿ ಸೂಚಿಸಿದ್ದಾರೆ.

    ಖಾಸಗಿ ಮಾಧ್ಯಮವೊಂದಕ್ಕೆ ಎಲ್ಲಿಸ್ ಪೆರಿ ಸಂದರ್ಶನದಲ್ಲಿ ಮುರಳಿ ವಿಜಯ್ ಡಿನ್ನರ್ ಪ್ರಶ್ನೆ ಅವರಿಗೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿರುವ ಪೆರ್ರಿ, ವಿಜಯ್ ಜೊತೆ ಡಿನ್ನರ್ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಡಿನ್ನರ್ ಬಿಲ್ ಮಾತ್ರ ಅವರೇ ಕಟ್ಟಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಮಸ್ಯೆಯಿಂದ 60 ವರ್ಷಗಳ ಬಳಿಕ ವಿಶ್ವ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಇನ್‍ಸ್ಟಾ, ಫೇಸ್‍ಬುಕ್‍ಗಳಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಮುರಳಿ ವಿಜಯ್ ಕೂಡ ಸಾಮಾಜಿಕ ಜಾಲತಾನದಲ್ಲಿ ಲೈವ್ ಆಗಮಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಈ ವೇಳೆ ನೀವು ಯಾರಿಬ್ಬರ ಜೊತೆ ಡಿನ್ನರ್ ಹೋಗಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗೆ ಉತ್ತರಿಸಿ, ನಾನು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಮತ್ತು ಭಾರತದ ಆಟಗಾರ ಶಿಖರ್ ಧವನ್ ಅವರ ಜೊತೆ ಊಟಕ್ಕೆ ಹೋಗಲು ಬಯಸುತ್ತೇನೆ. ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ ಅವರ ಜೊತೆ ಡಿನ್ನರ್ ಗೆ ಹೋಗಲು ಬಯಸುತ್ತೇನೆ. ಧವನ್ ಅವರೊಂದಿಗೆ ಡಿನ್ನರ್ ಗೆ ಹೋಗುವುದು ಇಷ್ಟ. ಏಕೆಂದರೆ ನನಗೆ ಧವನ್ ಒಳ್ಳೆಯ ಸ್ನೇಹಿತ ಹಾಗೂ ಬಹಳ ತಮಾಷೆ ಮಾಡುತ್ತಾರೆ. ಈ ಕಾರಣಕ್ಕೆ ಈ ಇಬ್ಬರ ಜೊತೆ ಡಿನ್ನರ್ ಗೆ ಹೋಗಲು ಇಷ್ಟ ಪಡುವುದಾಗಿ ಹೇಳಿದ್ದರು.

    ಉಳಿದಂತೆ 2018 ಡಿಸೆಂಬರ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತದ ಪರ ಆಡಿದ್ದ ಮುರಳಿ ವಿಜಯ್, ಆ ಬಳಿಕ ತಂಡದ ರೆಗ್ಯುಲರ್ ಆಟಗಾರರಾಗಿ ಸ್ಥಾನ ಪಡೆದಿಲ್ಲ. ಟೆಸ್ಟ್ ಆರಂಭಿಕರಾಗಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಅವರೊಂದಿಗೆ ರೋಹಿತ್ ಶರ್ಮಾ ಕೂಡ ತಂಡಕ್ಕೆ ಲಭ್ಯವಿರುವುದರಿಂದ ಮುರಳಿ ವಿಜಯ್ ಆಯ್ಕೆಯ ಅವಕಾಶಗಳು ಇಲ್ಲ ಎನ್ನಬಹುದು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್, ನಾನು ಕ್ರಿಕೆಟ್ ಮೇಲಿರುವ ಫ್ಯಾಷನ್ ಕಾರಣದಿಂದ ಮಾತ್ರ ಆಡುತ್ತಿದ್ದು, ದೇಶದ ಪರ ಆಡಬೇಕೆಂದಿಲ್ಲ ಎಂದು ತಮ್ಮ ಮನಸ್ಸಿನ ಮಾತನ್ನು ಹೇಳಿದ್ದರು. ಐಪಿಎಲ್‍ನಲ್ಲಿ ಕಳೆದ ಎರಡು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಮುರಳಿ ವಿಜಯ್ ಆಡುತ್ತಿದ್ದಾರೆ.

  • ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಮುಂಬೈ: ಭಾರತದ ಕ್ರಿಕೆಟ್ ಆಟಗಾರ ಮುರಳಿ ವಿಜಯ್ ಅವರು ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ ಅವರ ಜೊತೆ ಡಿನ್ನರ್ ಗೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಕೊರೊನಾ ಭಯದಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಇನ್‍ಸ್ಟಾ, ಫೇಸ್‍ಬುಕ್‍ಗಳಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ.

    https://www.instagram.com/p/BqG-b4GBeQQ/

    ಸದ್ಯ ಮನೆಯಲ್ಲೇ ಇರುವ ಮುರಳಿ ವಿಜಯ್ ಕೂಡ ಲೈವ್ ಬಂದಿದ್ದು, ತಮ್ಮ ಅಭಿಮಾನಿಗಳ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನೀವು ಯಾರಿಬ್ಬರ ಜೊತೆ ಡಿನ್ನರ್ ಹೋಗಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಮತ್ತು ಭಾರತದ ಆಟಗಾರ ಶಿಖರ್ ಧವನ್ ಅವರ ಜೊತೆ ಊಟಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಈ ವೇಳೆ ಅಭಿಮಾನಿಯೋರ್ವ ಯಾಕೆ ಈ ಇಬ್ಬರರನ್ನು ಆಯ್ಕೆ ಮಾಡಿಕೊಂಡ್ರಿ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ವಿಜಯ್ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ. ಜೊತೆಗೆ ಅವರು ಎಂದರೆ ನನಗೆ ತುಂಬ ಇಷ್ಟ ಅದಕ್ಕೆ ಅವರ ಜೊತೆ ಹೋಗಬೇಕು ಎಂದು ಹೇಳಿದೆ. ಜೊತೆಗೆ ಶಿಖರ್ ಧವನ್ ಅವರು ನನಗೆ ಒಳ್ಳೆಯ ಸ್ನೇಹಿತ ಮತ್ತು ಬಹಳ ತಮಾಷೆ ಮಾಡುತ್ತಾರೆ ಈ ಕಾರಣಕ್ಕೆ ಈ ಇಬ್ಬರ ಜೊತೆ ಹೋಗಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

    https://www.instagram.com/p/Bmx4j84n1eC/

    ಈ ವೇಳೆ ತಾವು ಐಪಿಎಲ್ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡಿದ ಮುರುಳಿ ವಿಜಯ್, ಸಿಎಸ್‍ಕೆ ಒಂದು ಉತ್ತಮ ತಂಡ. ಈ ತಂಡದಲ್ಲಿ ಇರುವ ಕೆಲ ಆಟಗಾರರು ಮೊದಲಿನಿಂದಲೂ ಇದೇ ತಂಡಕ್ಕಾಗಿ ಆಡಿದ್ದಾರೆ. ಅವರೆಲ್ಲರು ಕ್ರಿಕೆಟಿನ ದಂತಕಥೆಗಳು. ಅವರು ಯುವ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‍ನಲ್ಲಿ ಹುರಿದುಂಬಿಸುತ್ತಾರೆ. ಅವರನ್ನು ನೋಡಿ ಕಲಿಯುವುದೇ ನಮಗೆ ಬೇಕಾದಷ್ಟು ಇದೆ ಎಂದು ಮುರಳಿ ವಿಜಯ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://www.instagram.com/p/BhqnWYlg2D_/

    ಒಂದು ಕಾಲದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ಆರಂಭಿಕ ಆಟಗಾರನಾಗಿದ್ದ ವಿಜಯ್, ಇದ್ದಕ್ಕಿದಂತೆ ಫಾರ್ಮ್ ಕಳೆದುಕೊಂಡ ಕಾರಣ ಟೀಂ ಇಂಡಿಯಾದಿಂದ ಹೊರಗೆ ಉಳಿದಿದ್ದಾರೆ. ಆದರೆ ಐಪಿಎಲ್ 13ನೇ ಅವೃತ್ತಿಯಲ್ಲಿ ಚೆನ್ನೈ ತಂಡದ ಪರ ಆಡಲು ಮುರಳಿ ವಿಜಯ್ ಅವರು ಸಕಲ ಸಿದ್ಧತೆಗಳನ್ನು ನಡೆಸಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಮುಂದೂಡಿಕೆಯಾಗಿದೆ.

  • 91 ಎಸೆತಗಳಿಗೆ ಅರ್ಧ ಶತಕ, 118 ಎಸೆತಗಳಿಗೆ ಶತಕ ಸಿಡಿಸಿದ ಮುರಳಿ ವಿಜಯ್

    91 ಎಸೆತಗಳಿಗೆ ಅರ್ಧ ಶತಕ, 118 ಎಸೆತಗಳಿಗೆ ಶತಕ ಸಿಡಿಸಿದ ಮುರಳಿ ವಿಜಯ್

    ಸಿಡ್ನಿ: ಕ್ರಿಕೆಟ್ ಆಸ್ಟೇಲಿಯಾ ಇಲೆವೆನ್ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಮುರಳಿ ವಿಜಯ್ ಶತಕ ಸಿಡಿಸಿ ಮಿಂಚಿದ್ದಾರೆ.

    ಮೊದಲ 50 ರನ್ ಗಳಿಸಲು 92 ಎಸೆತ ತೆಗೆದುಕೊಂಡ ವಿಜಯ್ ಬಳಿಕ 27 ಎಸೆತಗಳಲ್ಲೇ 50 ನ್ ಸಿಡಿಸಿ ಶತಕ ಹೊಡೆದಿದ್ದಾರೆ. ಪೃಥ್ವಿ ಶಾ ಗೈರಿನ ಹಿನ್ನೆಲೆಯಲ್ಲಿ ಮುರಳಿ ವಿಜಯ್ ಶತಕ ಸಿಡಿಸುವ ಮೂಲಕ ಆಯ್ಕೆಗಾರರ ಗಮನವನ್ನು ಈಗ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯ್, ಇಂದಿನ ಪಂದ್ಯದ ಬ್ಯಾಟಿಂಗ್ ಸಂತಸ ತಂದಿದೆ. ಡಿಸೆಂಬರ್ 6 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೂ ಮುನ್ನ ತಂಡಕ್ಕೆ ಕಾಣಿಕೆ ನೀಡಿದ್ದಾಗಿ ತಿಳಿಸಿದ್ದಾರೆ. ಯುವ ಆಟಗಾರ ಪೃಥ್ವಿ ಶಾ ಗಾಯಗೊಂಡ ಹಿನ್ನೆಲೆಯಲ್ಲಿ ಮುರಳಿ ವಿಜಯ್‍ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಇತ್ತ ಪಂದ್ಯದಲ್ಲಿ ಮುರಳಿ ವಿಜಯ್‍ಗೆ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ ಅರ್ಧ ಶತಕ (62 ರನ್, 8 ಬೌಂಡರಿ, 5 ಸಿಕ್ಸರ್) ಸಿಡಿಸಿದರು. ಇಬ್ಬರ ಜೋಡಿ ಮೊದಲ ವಿಕೆಟ್ ಗೆ 109 ರನ್ ಪೇರಿಸಿತ್ತು.

    ಪಂದ್ಯದಲ್ಲಿ ಒಟ್ಟಾರೆ 132 ಎಸೆತ ಎದುರಿಸಿದ ವಿಜಯ್ 16 ಬೌಂಡರಿ ಹಾಗೂ 5 ಸಿಕ್ಸರ್ ಗಳ ನೆರವಿನಿಂದ 129 ರನ್ ಗಳಿಸಿದರು. ಉಳಿದಂತೆ ಹನುಮ ವಿಹಾರಿ 15 ರನ್ ಗಳಿಸಿ ಅಜೇಯರಾಗುಳಿದರು. ದಿನದಾಟ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು. ಇದರೊಂದಿಗೆ ನಾಲ್ಕು ದಿನಗಳ ಅಭ್ಯಾಸ ಡ್ರಾದಲ್ಲಿ ಅಂತ್ಯಗೊಂಡಿತು.ಇದನ್ನು ಓದಿ ವಿಕೆಟ್ ಪಡೆದ ಕೊಹ್ಲಿ ಸಂಭ್ರಮಿಸಿದ್ದು ಹೀಗೆ – ವಿಡಿಯೋ

    ಸಂಕ್ಷಿಪ್ತ ಸ್ಕೋರ್:
    ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ – 358 ರನ್
    ಕ್ರಿಕೆಟ್ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 544 ರನ್
    ಭಾರತ ಎರಡನೇ ಇನ್ನಿಂಗ್ಸ್ – 211 ರನ್, 2 ವಿಕೆಟ್
    ಫಲಿತಾಂಶ: ಡ್ರಾ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟ್ವಿಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು ಮುರಳಿ ವಿಜಯ್ ಟೀಂ ಇಂಡಿಯಾಗೆ ವಿಶ್ ಮಾಡಿದ್ದ ಟ್ವೀಟ್

    ಟ್ವಿಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು ಮುರಳಿ ವಿಜಯ್ ಟೀಂ ಇಂಡಿಯಾಗೆ ವಿಶ್ ಮಾಡಿದ್ದ ಟ್ವೀಟ್

    ನವದೆಹಲಿ: ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಭಾರತ ನಿದಾಸ್ ಕಪ್ ನ್ನು ಗೆದ್ದುಕೊಂಡಿದೆ. ನಿದಾಸ್ ಕಪ್ ಗೆದ್ದ ಭಾರತ ತಂಡಕ್ಕೆ ಹಿರಿಯ ಕ್ರಿಕೆಟ್ ಆಟಗಾರರು ವಿಶ್ ಮಾಡಿದ್ದಾರೆ. ಆದ್ರೆ ಕ್ರಿಕೆಟಿಗ ಮುರಳಿ ವಿಜಯ್ ಮಾಡಿರುವ ಟ್ವೀಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ಭಾನುವಾರ ನಡೆದ ಪಂದ್ಯದಲ್ಲಿ ವಿಕೇಟ್ ಕೀಪರ್ ಹಾಗು ಬ್ಯಾಟ್ಸ್‍ಮ್ಯಾನ್ ಆಗಿರುವ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಜಯಸಾಧಿಸಲು ಪ್ರಮುಖ ಪಾತ್ರವಹಿಸಿದ್ರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಂ ಇಂಡಿಯಾಗೆ ವಿಶ್ ಮಾಡುವದರ ಜೊತೆಗೆ ದಿನೇಶ್ ಕಾರ್ತಿಕ್ ಆಟಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದರು. ಮುರಳಿ ವಿಜಯ್ ಮಾತ್ರ ಕೇವಲ ಟೀಂ ಇಂಡಿಯಾಗೆ ಮಾತ್ರ ಶುಭಕೋರಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಆಕ್ರೋಶಕ್ಕೆ ಕಾರಣವಾಗಿದೆ.

    ಟ್ವೀಟ್ ನಲ್ಲಿ ಏನಿತ್ತು?: ಎಲ್ಲರೂ ಮೆಚ್ಚುವಂತಹ ಗೆಲವು ನಿಮ್ಮದು ಬಾಯ್ಸ್. ನಿಮ್ಮ ಆಟದ ಶೈಲಿ ಕ್ರಿಕೆಟ್ ನಲ್ಲಿ ಬ್ರ್ಯಾಂಡ್ ಸೃಷ್ಟಿಸಲಿದೆ ಅಂತಾ ಬರೆಯಲಾಗಿದೆ. ಟ್ಯಾಗ್ ನಲ್ಲಿಯೂ ದಿನೇಶ್ ಕಾರ್ತಿಕ್ ಅವರ ಹೆಸರನ್ನು ಮುರಳಿ ವಿಜಯ್ ಬಳಸಿಲ್ಲ.

    ನಿಮ್ಮ ವೈಯಕ್ತಿಕ ದ್ವೇಷಗಳನ್ನು ಸೈಡಿಗೆ ಇಟ್ಟು, ಗೆಲುವಿಗೆ ಕಾರಣರಾದ ದಿನೇಶ್ ಕಾರ್ತಿಕ್ ಅವರಿಗೆ ವಿಶ್ ಮಾಡಿ ಅಂತಾ ಹಲವರು ಟ್ವೀಟ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್‍ರನ್ನು ಎಷ್ಟೇ ದ್ವೇಷಿಸಿದ್ರೂ, ನೀವು ಅವರ ಆಟಕ್ಕೆ ಸೆಲ್ಯೂಟ್ ಮಾಡ್ಲೇಬೇಕು. ನಿಮ್ಮ ವಿವಾದಗಳನ್ನು ಬದಿಗಿರಿಸಿ ಒಬ್ಬ ಭಾರತೀಯನಾಗಿ ಯೋಚಿಸಿ ದಿನೇಶ್ ಕಾರ್ತಿಕ್ ಹೆಸರನ್ನು ನಿಮ್ಮ ಟ್ವೀಟ್ ನಲ್ಲಿ ನೀವು ಬರೆಯಬಹುದಾಗಿತ್ತು ಅಂತಾ ಕೆಲವರು ಟ್ವೀಟ್ ಮೂಲಕ ಮುರಳಿ ವಿಜಯ್‍ಗೆ ಸಲಹೆಯನ್ನು ನೀಡಿದ್ದಾರೆ.

    ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೇ 28 ರನ್ ಗಳಿಸಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆ ಎಸೆತದಲ್ಲಿ ಸಿಕ್ಸರ್ ಸಿಡಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.

  • 31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು 31 ರನ್ ಗಳಿಸಿದರೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲಿದ್ದಾರೆ.

    ಇದೂವರೆಗೆ ವೀರೇಂದ್ರ ಸೆಹ್ವಾಗ್ 2004-05ರ ಅವಧಿಯಲ್ಲಿ 9 ಪಂದ್ಯಗಳಿಂದ 1105 ರನ್‍ಗಳಿಸಿದ್ದರು. ಈಗ ಕೊಹ್ಲಿ ಅಷ್ಟೇ ಪಂದ್ಯಗಳಿಂದ 1075 ರನ್‍ಗಳಿಸಿದ್ದಾರೆ.

    ಸೆಹ್ವಾಗ್ 4 ಶತಕ, ಮೂರು ಅರ್ಧ ಶತಕ ಹೊಡೆಯುವ ಮೂಲಕ ಈ ಸಾಧನೆ ಮಾಡಿದರೆ ಕೊಹ್ಲಿ 4 ಶತಕ 2 ಅರ್ಧಶತಕ ಹೊಡೆದಿದ್ದಾರೆ. 2016ರಲ್ಲಿ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳಿಂದ 309 ರನ್ ಬಾರಿಸಿದ್ದರೆ, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳಿಂದ 655 ರನ್ ಹೊಡೆದಿದ್ದರು.

    ಈಗ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಅಜೇಯ 111 ರನ್(141 ಎಸೆತ, 12ಬೌಂಡರಿ) ಗಳಿಸಿದ್ದಾರೆ.

    ಉತ್ತಮ ಸ್ಥಿತಿಯಲ್ಲಿ ಭಾರತ:
    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡರೂ ಮೊದಲ ದಿನದ ಅಂತ್ಯಕ್ಕೆ 90 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 356 ರನ್‍ಗಳಿಸಿದೆ.

    ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಎರಡನೇ ವಿಕೆಟಿಗೆ 178 ರನ್‍ಗಳ ಜೊತೆಯಾಟವಾಡಿದರು. ಪೂಜಾರ 83 ರನ್( 177 ಎಸೆತ, 9 ಬೌಂಡರಿ) ಬಾರಿಸಿದರೆ ಮುರಳಿ ವಿಜಯ್ 108 ರನ್(160 ಎಸೆತ 12 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.

    130 ಎಸೆತದಲ್ಲಿ 16ನೇ ಶತಕ ಹೊಡೆದ ಕೊಹಿಗ್ಲೆ ರಹಾನೆ 45 ರನ್( 60 ಎಸೆತ, 7 ಬೌಂಡರಿ) ಹೊಡೆದು ಸಾಥ್ ನೀಡಿದ್ದಾರೆ.