Tag: Munugode

  • ತೆಲಂಗಾಣ ಉಪಚುನಾವಣೆ – ಬಿಜೆಪಿ ವಿರುದ್ಧ ಗೆದ್ದು ಬೀಗಿದ ಕೆಸಿಆರ್‌

    ತೆಲಂಗಾಣ ಉಪಚುನಾವಣೆ – ಬಿಜೆಪಿ ವಿರುದ್ಧ ಗೆದ್ದು ಬೀಗಿದ ಕೆಸಿಆರ್‌

    ಹೈದರಾಬಾದ್‌: ದೇಶದ ಗಮನ ಸೆಳೆದಿದ್ದ ತೆಲಂಗಾಣದ ಮುನುಗೋಡೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಟಿಆರ್‌ಎಸ್‌(TRS) ಜಯ ಸಾಧಿಸಿದೆ. 10,040 ಮತಗಳ ಅಂತರದಿಂದ ಬಿಜೆಪಿ(BJP) ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಪ್ರತಿಷ್ಠೆಯ ಕದನದಲ್ಲಿ ಸಿಎಂ ಕೆಸಿಆರ್‌(K Chandrasekhar Rao)  ಗೆದ್ದು ಬೀಗಿದ್ದಾರೆ.

    ಟಿಆರ್‌ಎಸ್‌ ಅಭ್ಯರ್ಥಿ ಕೆ ಪ್ರಭಾಕರ ರೆಡ್ಡಿ(Prabhakar Reddy) 97,334 ಮತಗಳನ್ನು ಪಡೆದರೆ ಬಿಜೆಪಿಯ ರಾಜಗೋಪಾಲ ರೆಡ್ಡಿ(K Rajagopal Reddy) 86,275 ಮತಗಳನ್ನು ಪಡೆದಿದ್ದಾರೆ.  ಇದನ್ನೂ ಓದಿ: ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್‌ – ಭಾರತದ ಪರ ದಾಖಲೆ ಬರೆದ ಸೂರ್ಯ

    ಈ ಮೊದಲು ರಾಜಗೋಪಾಲ ರೆಡ್ಡಿ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.

    ಕೇಂದ್ರದಲ್ಲಿರುವ ಬಿಜೆಪಿ ನಾಯಕರು ನಮ್ಮ ಸರ್ಕಾರವನ್ನು ಕೆಡವಲು ಮುಂದಾಗಿದ್ದಾರೆ. ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಫರ್‌ ನೀಡಿದ್ದಾರೆ ಎಂದು ಆರೋಪಿಸಿ ಟಿಆರ್‌ಎಸ್‌ ವೀಡಿಯೋ ಬಿಡುಗಡೆ ಮಾಡಿತ್ತು. ದೇಶಾದ್ಯಂತ ಈ ವೀಡಿಯೋ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಉಪಚುನಾವಣೆಯ ಸಮಯದಲ್ಲೇ ಈ ವೀಡಿಯೋ ಬಿಡುಗಡೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಟಿಆರ್‌ಎಸ್‌ ನಾಯಕರ ಮಧ್ಯೆ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]