Tag: Muniratna Kurukshetra

  • ಚಕ್ರವ್ಯೂಹ ಬೇಧಿಸುವ ಅಭಿಮನ್ಯುವಿನ ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಜಗಮಗ

    ಚಕ್ರವ್ಯೂಹ ಬೇಧಿಸುವ ಅಭಿಮನ್ಯುವಿನ ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಜಗಮಗ

    ಬೆಂಗಳೂರು: ಸ್ಯಾಂಡಲ್‍ವುಡ್ ನ ದೊಡ್ಡ ಬಜೆಟ್‍ನ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’. ಸಿನಿಮಾ ಸೆಟ್ಟೇರಿದಾಗಿನಿಂದಲೂ ಪ್ರತಿದಿನ ಒಂದಿಲ್ಲ ಒಂದು ಸುದ್ದಿಗಳಿಂದ ಕುರುಕ್ಷೇತ್ರ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದೆ. ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸುಪುತ್ರ ನಿಖಿಲ್ ಅಭಿನಯಿಸಿದ ಅಭಿಮನ್ಯು ಪಾತ್ರದ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಟೀಸರ್ ಅದ್ಧೂರಿತನದಿಂದ ಕೂಡಿದ್ದು, ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಅರ್ಜುನ್ ಮತ್ತು ಸುಭದ್ರೆಯ ಮಗನಾದ ಅಭಿಮನ್ಯು ಯುದ್ಧಕ್ಕೆ ತೆರಳುವ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಯುದ್ಧದ ಸನ್ನಿವೇಶ ಮತ್ತು ಚಕ್ರವ್ಯೂಹದ ರೂಪುರೇಷಗಳ ಒಂದು ಝಲಕ್ ತೋರಿಸಲಾಗಿದೆ. ಅಭಿಮನ್ಯು ಮಹಾಭಾರತದಲ್ಲಿ ಶೌರ್ಯದ ಪ್ರತೀಕವಾಗಿ ನಿಲ್ಲುತ್ತಾನೆ. ಅಂತಹ ಗಾಂಭೀರ ಪಾತ್ರದಲ್ಲಿ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಅಮೋಘವಾಗಿ ನಟಿಸುವ ಮೂಲಕ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿರೋದು ಟೀಸರ್ ನಲ್ಲಿ ಕಾಣಬಹುದು.

    ಚಕ್ರವ್ಯೂಹ ಬೇಧಿಸುವ ನಿಖಿಲ್(ಅಭಿಮನ್ಯು) ಯುದ್ಧದ ರಣತಂತ್ರಗಳ ಬಗ್ಗೆ ಟೀಸರ್ ಹೇಳುತ್ತಿದೆ. ಆದರೆ Zಅಭಿಮನ್ಯು ಹಿಂದಿರುಗಿ ಬರುವ ರಣತಂತ್ರಗಳು ತಿಳಿಯದೇ ಏಕಾಂಗಿಯಾಗಿ ಹೋರಾಡಿ ವೀರಮರಣ ಹೊಂದುತ್ತಾನೆ.

    ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್-ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಮೇಘನಾ ರಾಜ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಕಾಣಿಸಲಿದ್ದಾರೆ.

    ಮುನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿಬರಲಿದೆ.

    https://youtu.be/gWVZRqgAwDo

     

     

  • ಮುಂದಿನ ವರ್ಷ ಈ ತಿಂಗಳಲ್ಲಿ ರಿಲೀಸ್ ಆಗಲಿದೆ ಮುನಿರತ್ನ ಕುರುಕ್ಷೇತ್ರ

    ಮುಂದಿನ ವರ್ಷ ಈ ತಿಂಗಳಲ್ಲಿ ರಿಲೀಸ್ ಆಗಲಿದೆ ಮುನಿರತ್ನ ಕುರುಕ್ಷೇತ್ರ

    ಬೆಂಗಳೂರು: ಅಲ್ಲಲ್ಲಿ ಒಂದೊಂದು ಫೋಟೋ ರಿಲೀಸ್ ಆಗಿದ್ದು ಬಿಟ್ಟರೆ `ಕುರುಕ್ಷೇತ್ರ’ ಚಿತ್ರದ ಬಗ್ಗೆ ಅದ್ಯಾರೂ ಮಾತನಾಡಿಯೇ ಇರಲಿಲ್ಲ. ಈ ಚಿತ್ರದ ಬಗ್ಗೆ ಅಂತೆ ಕಂತೆಗಳೇ ಸುದ್ದಿಯಾಗುತ್ತಿದ್ದವು. ದರ್ಶನ್ ಅಭಿನಯಿಸಿರುವ ಈ ಚಿತ್ರ ಹಾಗಂತೆ, ಹೀಗಂತೆ ಎನ್ನುವ ವಿಷಯ ಬಿಟ್ಟು ಅಸಲಿ ಸತ್ಯ ಏನು ಎನ್ನುವುದನ್ನು ಬಿಚ್ಚಿಡಲಿದ್ದೇವೆ.

    ಹೈದರಾಬಾದ್ ನಲ್ಲಿ ಕುರುಕ್ಷೇತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರತಂಡ ಇದುವರೆಗೂ ಮಾಧ್ಯಮದ ಜೊತೆ ಒಂದೇ ಒಂದು ಸುಳಿವು ಬಿಟ್ಟುಕೊಟ್ಟಿಲ್ಲ. ಒಂದು ಸಾಮಾನ್ಯ ಸಿನಿಮಾ ತಯಾರಾಗಬೇಕು ಎಂದಾದರೆ ಒಂದು ವರ್ಷ ಬೇಕಾಗುತ್ತೆ. ಹೀಗಿರುವಾಗ ಅದ್ಧೂರಿ ಗ್ರಾಫಿಕ್ಸ್ ಕಮ್ ಬಿಗ್ ಬಜೆಟ್ ಸಿನಿಮಾ ಮಾಡಬೇಕಾದರೆ ಸಿಕ್ಕಾಪಟ್ಟೆ ಟೈಮ್ ಬೇಕು. ಹೀಗಿದ್ದರೂ ಜನವರಿಯ ಸಂಕ್ರಾಂತಿ ಹಬ್ಬಕ್ಕೆ ಇದು ತೆರೆಗೆ ಬರುತ್ತೆ ಎನ್ನಲಾಗುತ್ತಿತ್ತು. ಆದರೆ ಈಗ ಕುರುಕ್ಷೇತ್ರ ತೆರೆ ಕಾಣೋದು ಜನವರಿಯಲ್ಲಿ ಅಲ್ಲ ಬದಲಿಗೆ ಫೆಬ್ರವರಿ ಕೊನೇ ವಾರದಲ್ಲಿ ಅಂತ ಗೊತ್ತಾಗಿದೆ.

    ಮಹಾಭಾರತದ ವೀರಾಧಿವೀರ ಯೋಧರಲ್ಲಿ ಅಭಿಮನ್ಯು ಕೂಡ ಒಬ್ಬ. ಚಿಕ್ಕ ವಯಸ್ಸಿನಲ್ಲಿಯೇ ಅಭಿಮನ್ಯು ಕೌರವರಿಗೆ ಬೆವರಿಳಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಅಂಥ ಶೂರನ ಪಾತ್ರ ಮಾಡುತ್ತಿರೋದು ಜಾಗ್ವಾರ್ ಹುಡುಗ ಹೆಚ್‍ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್.

    ಕುರುಕ್ಷೇತ್ರದ ಕಥೆ ಬಿಡಿ ಗೊತ್ತಿರೋ ವಿಚಾರ ಅಂದುಕೊಂಡರೆ ಅದು ತಪ್ಪು. ದಿಗ್ಗಜರೆಲ್ಲಾ ಒಟ್ಟಿಗೆ ಸೇರಿ ಅಭಿನಯಿಸುತ್ತಿರುವ ಇದರಲ್ಲಿ ಪ್ರತಿ ಕ್ಷಣವೂ ಕುತೂಹಲ ಫಿಕ್ಸ್. ಅದಕ್ಕೆ ಒಂದು ಚಿಕ್ಕ ಉದಾಹರಣೆ ಮೊದಲಾರ್ಧದಲ್ಲಿ ಅಭಿಮನ್ಯು ಪಾತ್ರಧಾರಿ ನಿಖಿಲ್ ಮಾಡಿರುವ ಚಕ್ರವ್ಯೂಹದ ಮಹಾ ಯುದ್ಧ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ಪಾತ್ರದಲ್ಲಿ ಅಟ್ಟಹಾಸ ಮೊದಲಾರ್ಧದಲ್ಲಿ ವಾರೇ ವ್ಹಾ ಎಂದೆನ್ನಿಸಿದ್ದರೆ ದ್ವೀತಿಯಾರ್ಧದಲ್ಲಿ ಭಾರತೀಯ ಚಿತ್ರರಂಗವೇ ಒಮ್ಮೆ ಸ್ಯಾಂಡಲ್‍ವುಡ್ ಕಡೆ ತಿರುಗಿ ನೋಡುವಂಥ ಯುದ್ಧದ ಸನ್ನಿವೇಶ ನೋಡಬಹುದು. ಬಾಹುಬಲಿ ಚಿತ್ರದ ಫೈಟ್ ಮಾಸ್ಟರ್ ಸೋಲೋಮನ್ ಗರಡಿಯಲ್ಲಿ ಯುದ್ಧದ ಸನ್ನಿವೇಶಗಳು ಮೂಡಿಬಂದಿವೆ. ಅದೊಂದು ದೃಶ್ಯದಲ್ಲಿ ನಾಲ್ಕು ಕುದುರೆಗಳ ಮೇಲೇರಿ ಧಗಧಗಿಸುತ್ತಾ ಬರುವ ಅಭಿಮನ್ಯುವನ್ನು ನೋಡೋಕೆ ಎರಡು ಕಣ್ಣು ಸಾಲುವುದಿಲ್ಲವಂತೆ.

    ಅಭಿಮನ್ಯು ಪಾತ್ರದ ಸುತ್ತ ಹೆಣೆದ ಟೀಸರ್ ಡಿಸೆಂಬರ್ 16, ಹೆಚ್‍ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದಂದು ಹೊರಬೀಳಲಿದೆ. ಶೂಟಿಂಗ್ ಕೊಂಚ ಬಾಕಿ ಇದೆ. ಹೀಗಾಗಿಯೇ ಫೆಬ್ರವರಿ ಕೊನೆಯ ವಾರದಲ್ಲಿ ಕುರುಕ್ಷೇತ್ರ ತೆರೆ ಮೇಲೆ ಬರಲಿದೆ ಅಂತ ಹೇಳಲಾಗಿದೆ.

  • ಕುರುಕ್ಷೇತ್ರದಲ್ಲಿ ನಿಖಿಲ್ ಶೂಟಿಂಗ್: ಅದ್ಧೂರಿ ಹಾಡಿನ ಸೆಟ್ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಗೊತ್ತೆ?

    ಕುರುಕ್ಷೇತ್ರದಲ್ಲಿ ನಿಖಿಲ್ ಶೂಟಿಂಗ್: ಅದ್ಧೂರಿ ಹಾಡಿನ ಸೆಟ್ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಗೊತ್ತೆ?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಈ ಚಿತ್ರದ ಒಂದು ಹಾಡಿಗೆ ನಿರ್ಮಾಪಕ ಮುನಿರತ್ನ ನಾಲ್ಕು ಬೇರೆ ಬೇರೆ ಸೆಟ್ ಹಾಕಿ ಬರೋಬ್ಬರಿ ಒಂದು ಕೋಟಿ ರೂ. ಸುರಿದಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮತ್ತು ಉತ್ತರೆ ನಡುವೆ ನಡೆಯುವ ಈ ಹಾಡಿಗೆ ಒಂದು ಕೋಟಿ ಖರ್ಚು ಮಾಡಿ ಅದ್ಧೂರಿ ಸೆಟ್ ಹಾಕಲು ಚಿತ್ರತಂಡ ಮುಂದಾಗಿದೆ. ಈ ಹಾಡಿನಲ್ಲಿ ಜಾಗ್ವಾರ್ ಚಿತ್ರದ ನಾಯಕ ನಿಖಿಲ್ ಕುಮಾರ್ ಕಾಣಿಸಿಕೊಂಡು ಅವರ ಜೊತೆಯಾಗಿ ನಟಿ ಅದಿತಿ ಆರ್ಯ ಕಾಣಿಸಿಕೊಳ್ಳಲಿದ್ದಾರೆ.

    ಈ ಹಾಡಿಗೆ ನಾಲ್ಕು ಬೇರೆ ಬೇರೆ ರೀತಿಯ ಅದ್ಧೂರಿ ಸೆಟ್ ಹಾಕಿ, ಆರು ಕ್ಯಾಮೆರಾಗಳಲ್ಲಿ ಈ ಹಾಡನ್ನು ಚಿತ್ರಿಕರಣ ಮಾಡಲಿದ್ದಾರೆ. ಟಾಲಿವುಡ್ ನ ಡ್ಯಾನ್ಸ್ ಮಾಸ್ಟರ್ ಶೇಖರ್ ಈ ಹಾಡಿಗೆ ನೃತ್ಯ ಹೇಳಿಕೊಡುತ್ತಿದ್ದು, 2 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ಮುನ್ನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ’ ಬರೋಬ್ಬರಿ 50 ರಿಂದ 60ಕೋಟಿ ವೆಚ್ಚದಲ್ಲಿ ವೃಷಭಾದ್ರಿ ಪ್ರೋಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಲಿದೆ.

    ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ನೀರ್ ದೋಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

     

  • ಮುನಿರತ್ನ ‘ಕುರುಕ್ಷೇತ್ರ’ದಲ್ಲಿ ದೀಪಾವಳಿ ಸಂಭ್ರಮಾಚರಣೆ

    ಮುನಿರತ್ನ ‘ಕುರುಕ್ಷೇತ್ರ’ದಲ್ಲಿ ದೀಪಾವಳಿ ಸಂಭ್ರಮಾಚರಣೆ

    ಬೆಂಗಳೂರು: ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿರೋ ಮುನಿರತ್ನ ಕುರುಕ್ಷೇತ್ರ ಚಿತ್ರತಂಡ ಹೈದರಾಬಾದ್‍ನಲ್ಲಿ ದೀಪಾವಳಿ ಆಚರಿಸಿಕೊಂಡಿದೆ. ಅಭಿಮನ್ಯು ಪಾತ್ರಧಾರಿ ನಿಖಿಲ್ ಗೌಡ, ಕುರುಕ್ಷೇತ್ರದ ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ ಸೇರಿದಂತೆ ಹಲವು ಸಹ ಕಲಾವಿದರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ರು.

    ಪಟಾಕಿ ಸಿಡಿಸಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿಕೊಂಡ ಚಿತ್ರತಂಡ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ಮಲ್ಟಿಸ್ಟಾರ್ ಕುರುಕ್ಷೇತ್ರ ಮುಂದಿನ ಸಂಕ್ರಾಂತಿಗೆ ತೆರೆಕಾಣುವ ಸಾಧ್ಯತೆಯಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸ್ಯಾಂಡಲ್ ವುಡ್ ಖ್ಯಾತ ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಎಂಬ ಖ್ಯಾತಿಯೂ ಮುನಿರತ್ನ ಕುರುಕ್ಷೇತ್ರಕ್ಕಿದೆ.

  • ಭೀಷ್ಮನ ಲುಕ್ ರಿವೀಲ್ ಮಾಡಿದ್ರು ಅಂಬಿ- ರೆಡಿಯಾಗೋದಕ್ಕೆ ಬೇಕಂತೆ ಇಷ್ಟು ಟೈಮ್

    ಭೀಷ್ಮನ ಲುಕ್ ರಿವೀಲ್ ಮಾಡಿದ್ರು ಅಂಬಿ- ರೆಡಿಯಾಗೋದಕ್ಕೆ ಬೇಕಂತೆ ಇಷ್ಟು ಟೈಮ್

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಕುರುಕ್ಷೇತ್ರ ಸಿನಿಮಾದಲ್ಲಿ ಭೀಷ್ಮಾಚಾರ್ಯರ ಲುಕ್‍ನಲ್ಲಿ ಕಾಣಿಸಿಕೊಳ್ತಾರೆ ಅಂತ ವಿಷಯ ಎಲ್ಲರಿಗೂ ಗೊತ್ತಿದೆ. ಕಲಾವಿದ ಕಮ್ ರಾಜಕಾರಣಿ ಆಗಿರುವ ಅಂಬರೀಶ್ ಅವರ ಸ್ಟೈಲ್ ಒಂಥರ ಡಿಫರೆಂಟ್. ಸಮಯಕ್ಕೆ ತಕ್ಕಂತೆ ಮ್ಯಾಚ್ ಆಗುವಂತೆ ಕಾಮಿಡಿ ಮಾಡಿ ಎಲ್ಲರನ್ನು ನಗಿಸಿ ಖುಷಿ ಖುಷಿಯಾಗಿ ಜೊತೆಯಲ್ಲಿ ಕರ್ಕೊಂಡು ಹೋಗುತ್ತಾರೆ.

    ಕುರುಕ್ಷೇತ್ರದಲ್ಲಿ ಅಂಬಿ ಅವರ ಲುಕ್ ಹೇಗಿದೆ ಮತ್ತು ಭೀಷ್ಮರ ಅವತಾರದಲ್ಲಿ ರೆಡಿಯಾಗಲು ಅಂಬಿಗೆ ಬೇಕಾದ ಟೈಮ್ ಎಷ್ಟು ಎಂಬದರ ಬಗ್ಗೆ ಪ್ರಶ್ನೆ ಮಾಡಿದಾಗ ಜೇಬಿನಿಂದ ಮೊಬೈಲ್ ತೆಗೆದ ಅಂಬರೀಶ್ ಇಲ್ಲಿ ನೊಡ್ರಿ ನನ್ನ ಲುಕ್ ಹೀಗಿದೆ ಅಂತಾ ಹೇಳಿದ್ರು.

    ಮೊದಲ ಬಾರಿಗೆ ಅಂಬರೀಶ್ ಅವರ ಹೊಸ ವರಸೆ ನೋಡಿ ಎಲ್ಲರಿಗೂ ವಾಹ್, ಸೂಪರ್ ಆಗಿದೆ ಅನ್ನೊ ಭಾವನೆ ಬಂದಿದೆ. ಅಂಬಿಯವರ ಲುಕ್ ನೋಡಿದ್ರೆ ಅಬ್ಬಬ್ಬಾ ಈ ಗೆಟಪ್‍ನಲ್ಲಿ ರೆಡಿಯಾಗಲು ಖಂಡಿತಾ 2 ರಿಂದ 3 ಗಂಟೆ ಬೇಕು ಅಂತ ಅನಿಸುತ್ತದೆ. ಆದರೆ ರೆಬೆಲ್ ರಿವಿಲ್ ಮಾಡಿದ ಸಿಕ್ರೆಟ್ಟೇ ಬೇರೆ. 10 ರಿಂದ 15 ನಿಮಿಷದಲ್ಲಿ ಭೀಷ್ಮನ ಅವತಾರದಲ್ಲಿ ರೆಡಿ ಆಗ್ತೇನೆ ಎಂದು ಅಂಬರೀಶ್ ಹೇಳುತ್ತಾರೆ.

    ದಿನಕ್ಕೊಂದು ಬ್ರೇಕಿಂಗ್ ನ್ಯೂಸ್, ವಾರಕ್ಕೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಕೊಡ್ತಿರೋ ಮುನಿರತ್ನ ಕುರುಕ್ಷೇತ್ರ ಟೀಮ್‍ನಿಂದ ಮತ್ತೊಂದು ಹೊಸ ಸುದ್ದಿಯನ್ನು ಅಂಬರೀಶ್ ರಿವಿಲ್ ಮಾಡಿದ್ದಾರೆ. ದರ್ಶನ್‍ರಿಂದ ಹಿಡಿದು ಭಾರತೀಯ ಚಿತ್ರರಂಗದ ಘಟಾನುಘಟಿ ಕಲಾವಿದರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿನಿಮಾ ಮುಂದಿನ ಮಕರ ಸಂಕ್ರಾಂತಿ ಹಬ್ಬಕ್ಕೆ ತೆರೆ ಕಾಣಲಿದೆ ಎಂದು ಚಿತ್ರತಂಡ ಹೇಳಿದೆ.