Tag: Munirathna

  • ಮುನಿರತ್ನ ಧ್ವನಿ ಮಾದರಿಯನ್ನ FSLಗೆ ಕಳಿಸಿದ್ದೀವಿ, ಮ್ಯಾಚ್‌ ಆದ್ರೆ ಗ್ಯಾರಂಟಿ ಕ್ರಮ – ಸಚಿವ ಪರಮೇಶ್ವರ್‌ ಎಚ್ಚರಿಕೆ

    ಮುನಿರತ್ನ ಧ್ವನಿ ಮಾದರಿಯನ್ನ FSLಗೆ ಕಳಿಸಿದ್ದೀವಿ, ಮ್ಯಾಚ್‌ ಆದ್ರೆ ಗ್ಯಾರಂಟಿ ಕ್ರಮ – ಸಚಿವ ಪರಮೇಶ್ವರ್‌ ಎಚ್ಚರಿಕೆ

    ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ (Munirathna) ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳಿಸಿದ್ದೀವಿ. ಅವರ ಧ್ವನಿ ಮ್ಯಾಚ್ ಆದರೆ ಕ್ರಮ ತಗೋತೀವಿ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (G Parameshwara) ಎಚ್ಚರಿಸಿದ್ದಾರೆ.

    ಬೆಂಗಳೂರಿನಲ್ಲಿಂದು (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಮುನಿರತ್ನ ಅವರ ಧ್ವನಿ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ (FSL) ಕಳಿಸಿದ್ದೀವಿ. ಅವರ ಧ್ವನಿ ಮ್ಯಾಚ್ ಆದರೆ ಕ್ರಮ ತಗೋತೀವಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ – ಯುಕೆ, ಯುಎಸ್‌, ಉಕ್ರೇನ್‌ ಸೇರಿ 27 ದೇಶಗಳಿಗೆ XEC ಆತಂಕ

    ಇನ್ನೂ ಮುನಿರತ್ನ ಅವರ ಏಕಾಏಕಿ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುನಿರತ್ನ ಅವರನ್ನ ಏಕಾಏಕಿ ಬಂಧನ ಮಾಡಿಲ್ಲ. ದೂರು ದಾಖಲಾದ ಹಿನ್ನೆಲೆ ಬಂಧನ ಮಾಡಲಾಗಿದೆ. ವಾಯ್ಸ್ ರೆಕಾರ್ಡ್ ಕೂಡ ಪಡೆದಿದ್ದಾರೆ. ಮುನಿರತ್ನ ವಾಯ್ಸ್ ಸ್ಯಾಂಪಲ್ ಕೂಡ ಪಡೆದು ತನಿಖೆ ಆಗ್ತಿದೆ. ಪ್ರೂವ್ ಆದ್ರೆ ಶಿಕ್ಷೆ ಆಗುತ್ತೆ. ಅಲ್ಲದೇ ಶಾಸಕ ಚೆನ್ನಾರೆಡ್ಡಿ ಮೇಲೆ ಆರೋಪ ಕೇಳಿಬಂದಿದ್ದು, ಅವರ ಮೇಲೂ ಕ್ರಮ ಆಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದವರೇ ಪ್ಯಾಲೆಸ್ತೀನ್‌ಗೆ ಬೆಂಬಲ ಇದೆ ಅಂತಾರೆ, ಧ್ವಜ ತೋರಿಸೋದ್ರಲ್ಲಿ ತಪ್ಪೇನಿದೆ ಅಂತ ವಾದ ಮಾಡ್ತಾರೆ: ಪರಮೇಶ್ವರ್‌

    ಇದೇ ವೇಳೆ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶಿಸಿದ ಪ್ರಕರಣದ ಕುರಿತು ಮಾತನಾಡಿದ ಅವರು, ಮೂರು ಜಿಲ್ಲೆಗಳಲ್ಲಿ ನಮಗೆ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಘಟನೆಗಳು ಕಂಡುಬಂದಿವೆ. ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದವರನ್ನೆಲ್ಲ ಬಂಧನ ಮಾಡಲಾಗಿದೆ. ಆದ್ರೆ ಕೇಂದ್ರ ಸರ್ಕಾರದವರೇ ಪ್ಯಾಲೆಸ್ತೀನ್‌ಗೆ ನಮ್ಮ ಬೆಂಬಲ ಇದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಹೀಗಿರುವಾಗ ಧ್ವಜ ತೋರಿಸುವುದರಲ್ಲಿ ತಪ್ಪೇನಿದೆ ಅಂತ ಅವ್ರು ವಾದ ಮಾಡ್ತಾರೆ. ಆದರೂ ಕೂಡ ನಾವು ಅವರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

    ಪ್ಯಾಲೆಸ್ತೀನ್‌ ಧ್ವಜ ಹಾರಿಸಲು ಯಾರು ಪ್ರಚೋದನೆ ಕೊಟ್ರು ಅಂತ ತನಿಖೆ ಮಾಡ್ತಿದ್ದೇವೆ. ಎಲ್ಲ ಚಿಕ್ಕ ಚಿಕ್ಕ ಹುಡುಗರಿಗೆ 17, 18 ವರ್ಷದ ಹುಡುಗರಿಗೆ ಪ್ರಚೋದನೆ ಕೊಟ್ಟಿದ್ದಾರೆ ಅಂತ ಮಾಹಿತಿ ಬಂಧ ಮೇಲೆ ಬಂಧಿಸಿದ್ದೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಚಿತ್ರದಲ್ಲಿ ವಿಲನ್ ರೋಲ್ ಮಾಡ್ತಿಲ್ಲ: ಪಾತ್ರದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ

    ನಾಗಮಂಗಲ ಗಲಭೆ ಬಗ್ಗೆ ಡಿಸೈನ್‌ ಮಾಡ್ಕೊಂಡಿದ್ದಾರೆ:
    ಇನ್ನೂ ನಾಗಮಂಗಲ ಗಲಭೆ ವಿಚಾರ ಕುರಿತು ಮಾತನಾಡಿದ ಪರಮೇಶ್ವರ್‌, ನಾಗಮಂಗಲ ಪ್ರಕರಣವನ್ನೇ ದೊಡ್ಡ ವಿಷಯ ಮಾಡಲು ಬಿಜೆಪಿಯವ್ರು ಮಾತಾಡಿಕೊಂಡಿದ್ದಾರೆ. ನಾವು ಕಾನೂನು ಪ್ರಕಾರ ಮುಲಾಜಿಲ್ಲದೇ ಕ್ರಮ ತಗೋತಿದ್ದೀವಿ. ಆದ್ರೆ ಬಿಜೆಪಿಯವ್ರು ದಿನಕ್ಕೊಂದು ಹೇಳಿಕೆ ಕೊಡ್ತಿದ್ದಾರೆ. ಆರೀತಿ ದಿನಕ್ಕೊಬ್ಬರು ಒಂದೊಂದು ಹೇಳಿಕೆ ಕೊಡಬೇಕು ಅಂತ ಅವರು ಡಿಸೈನ್ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

  • ನನ್ನ ಆಡಿಯೋ ಅಲ್ಲ, ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್‌ ಮಾಡಲು ಅರೆಸ್ಟ್‌: ಮುನಿರತ್ನ

    ನನ್ನ ಆಡಿಯೋ ಅಲ್ಲ, ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್‌ ಮಾಡಲು ಅರೆಸ್ಟ್‌: ಮುನಿರತ್ನ

    ಬೆಂಗಳೂರು: ಗುತ್ತಿಗೆದಾರರಿಗೆ ಜೀವಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧನಕ್ಕೊಳಪಟ್ಟಿರುವ ಶಾಸಕ ಮುನಿರತ್ನ (Munirathna) ಪೊಲೀಸ್ ಕಸ್ಟಡಿ (Police Custody) ಅಂತ್ಯವಾಗಲಿದ್ದು ಮಂಗಳವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

    ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಖುದ್ದು ವಿಚಾರಣೆಯ ನೇತೃತ್ವ ವಹಿಸಿದ್ದಾರೆ. ವಿಚಾರಣೆಯಲ್ಲಿ ಇದು ನನ್ನ ಆಡಿಯೋ ಅಲ್ಲ ಅಂತ ಮುನಿರತ್ನ ಪುನರುಚ್ಛರಿಸಿದ್ದಾರೆ.

     

    ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್‌ ಮಾಡಲು ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂಬುದಾಗಿ ದೂರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುನಿರತ್ನ ಬೈದಿದ್ದು ಇನ್ನೂ ಸಾಬೀತಾಗಿಲ್ಲ, ಇದು ಸಿಡಿ ಶಿವು ಕೆಲಸ: ರಮೇಶ್ ಜಾರಕಿಹೊಳಿ

    ಇಂದು ಸಂಜೆ ಹೊತ್ತಿಗೆ ಮುನಿರತ್ನ ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಯಿತು.

     

  • ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

    ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

    – ನಾಗಮಂಗಲ ಗಲಭೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ಆಗ್ರಹ

    ಬೆಂಗಳೂರು: ಶಾಸಕ ಮುನಿರತ್ನ (Munirathna) ಬಂಧನವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನ ಪಾಲನೆ ಆಗಿಲ್ಲ ಅಂತಾ ಕಿಡಿಕಾರಿದ್ದಾರೆ ಅಶ್ವಥ್‌ ನಾರಾಯಣ್‌ (Ashwath Narayan), ರವಿಕುಮಾರ್, ಸಿ.ಟಿ ರವಿ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿಂದು (Bengaluru) ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್, ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಯಾರೇ ತಪ್ಪು ಮಾಡಿದ್ರು ಕ್ರಮ ಆಗಬೇಕು. ಆದರೆ ಈ ಸರ್ಕಾರದಲ್ಲಿ ಏನು ಕಾನೂನು ಪಾಲನೆ ಆಗಿದೆ? ಇವರು ಕಾನೂನಿಗೆ ಬೆಲೆ ಕೊಡ್ತಿದ್ದಾರಾ? ಅಂತಾ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: Democracy Day | ಅತೀ ಉದ್ದದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ 

    ಕಲಬುರಗಿಯಲ್ಲಿ ಪಿಎಸ್‌ಐ ಪರಶುರಾಮ (PSI Parashuram) ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿನ ಶಾಸಕ, ಶಾಸಕನ ಮಗನ ಬಂಧನ ಆಗಿದೆಯಾ? ವಿಜಯಪುರದಲ್ಲೂ ಕೃಷಿ ಸಚಿವರ ಮೇಲೆ ಆಪಾದನೆ ಮಾಡಿ ಆತ್ಮಹತ್ಯೆ ಆಗಿದೆ ಇದರ ಕ್ರಮ ಆಗಿದೆಯಾ? ಶಿವಮೊಗ್ಗದಲ್ಲಿ ಆತ್ಮಹತ್ಯೆ ಹತ್ಯೆ ಆಗಿದೆ, ಕ್ರಮ ಆಗಿದೆಯಾ? ಸರಣಿ ಪ್ರಶ್ನೆಗಳನ್ನ ಸರ್ಕಾರದ ಮುಂದಿಟ್ಟರು. ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

    ಇನ್ನೂ ಎಂಎಲ್‌ಸಿ ರವಿಕುಮಾರ್ (Ravikumar) ಮಾತನಾಡಿ, ಮುನಿರತ್ನ ಬಂಧನ ಪ್ರಕರಣದಲ್ಲಿ ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಚರ್ಚೆ ಮಾಡುತ್ತಾರೆ. ನೋಟಿಸ್‌ ಅಂತೂ ಬಿಜೆಪಿ ಜಾರಿ ಮಾಡಿದೆ. ಆಡಿಯೋ ಅವರದ್ದೇನಾ? ಕಟ್ ಅಂಡ್ ಪೇಸ್ಟ್ ಆಗಿದ್ಯಾ? ಅಥವಾ ಕಾಂಗ್ರೆಸ್‌ನವರೇ ಸೃಷ್ಟಿ ಮಾಡಿದ್ರಾ? ಅಂತಾ ಗೊತ್ತಾಗಬೇಕು. ಬಿಜೆಪಿ ಶಾಸಕರನ್ನು ಅರೆಸ್ಟ್ ಮಾಡ್ತೀರಿ, ಕಾಂಗ್ರೆಸ್ ಶಾಸಕರನ್ನು ಮೆರೆಯಲು ಬಿಡುತ್ತೀರಾ? ಎಂದು ಪ್ರಶ್ನಿಸಿದ ಅವರು, ನಾಗಮಂಗಲ ಗಲಭೆ ಪ್ರಕರಣ, ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ‌, ಮುನಿರತ್ನ ಬಂಧನ ವಿಚಾರಗಳಲ್ಲಿ ವಿಪಕ್ಷವನ್ನು ಸರ್ಕಾರ ಮಾತುಕತೆಗೆ ಕರೆಯಬೇಕು ಎಂದು ಒತ್ತಾಯಿಸಿದರು.

    ನಾಗಮಂಗಲ ಗಲಭೆ ಕೇಸ್‌ ತನಿಖೆಯನ್ನು ಎನ್‌ಐಎಗೆ ವಹಿಸಿ:
    ಇದೇ ವೇಳೆ ನಾಗಮಂಗಲ ಗಲಭೆ ಪ್ರಕರಣದ ತನಿಖೆಯನ್ನ ಎನ್‌ಐಎಗೆ ವಹಿಸಬೇಕು ಅಂತ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅವರು ಆಗ್ರಹಿಸಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    ರಾಜ್ಯ ಸರ್ಕಾರದ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಕಾನೂನು ನಿರ್ವಹಣೆ ಮಾಡೋದ್ರಲ್ಲಿ ವಿಫಲವಾಗಿದೆ. ನಾಗಮಂಗಲ ವಿಚಾರವಾಗಿ ನನ್ನ ನೇತೃತ್ವದಲ್ಲಿ ಸತ್ಯ ಸಂಶೋಧನೆಗಾಗಿ ಒಂದು ಕಮಿಟಿ ಮಾಡಲಾಗಿದೆ. ಸತ್ಯ ಶೋಧನೆ ಮಾಡಲು ಅಲ್ಲಿಗೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆಯುತ್ತೇವೆ. ಆದ್ರೆ ಆಡಳಿತದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ. ಗಣೇಶ ಹಬ್ಬ ಆಚರಣೆ ಮಾಡೋದು ನಮ್ಮ ಸಂಸ್ಕೃತಿ. ಇದಕ್ಕೆ ಎಲ್ಲರೂ ಸಪೋರ್ಟ್ ಮಾಡಬೇಕು. ಈದ್ ಮಿಲಾದ್ ಇದೆ ಎಂದು ಗಣೇಶ ಇಡಲು ಕೆಲವು ಕಡೆ ಬಿಟ್ಟಿಲ್ಲ ಅಂತಾ ಆರೋಪಿಸಿದರು.

  • ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

    ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

    ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ (Munirathna) ಅವರ ಬಂಧನ ವಿಚಾರವಾಗಿ ಮಾಜಿ ಸಂಸದ ಡಿ.ಕೆ ಸುರೇಶ್‌ (DK Suresh) ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯ ಮಾಡುವುದು ಬೇಡ. ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ. ಬಿಜೆಪಿ ಇದಕ್ಕೆ ಬೆಂಬಲ ಕೊಡುತ್ತಾ ಅನ್ನೋದನ್ನ ಸ್ಪಷ್ಟವಾಗಿ ಹೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ.

    ಶಾಸಕ ಮುನಿರತ್ನ ಅವರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖೆಗೆ ಪೊಲೀಸರು ಬಂಧನ ಮಾಡಿದ್ದಾರೆ. ಮಿಕ್ಕ ವಿಚಾರಗಳು ಕಾನೂನಿಗೆ ಸಂಬಂಧಪಟ್ಟಿದ್ದು. ಹಾಗಾಗಿ ನಾನು ಇದರ ಬಗ್ಗೆ ಹೆಚ್ಚು ಏನು ಹೇಳಲು ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಜಾತಿ ನಿಂದನೆ ಆರೋಪ ಪ್ರಕರಣ – ಶಾಸಕ ಮುನಿರತ್ನ 2 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ

    ಯಾರೇ ತಪ್ಪು ಮಾಡಿದರೂ ತಪ್ಪೇ. ಈ ರೀತಿ ಜಾತಿ – ಜಾತಿಗಳ ಮಧ್ಯೆ ದ್ವೇಷ ಉಂಟುಮಾಡುವಂತಹದ್ದು ಸರಿಯಾ? ಜೊತೆಗೆ ಜಾತಿ ಧರ್ಮವನ್ನು ಬಹಳ ಕೀಳಾಗಿ ನೋಡುವಂತಹದ್ದು, ಮಹಿಳೆಯರಿಗೆ ಮಾಡತಕ್ಕಂತಹ ಅಗೌರವ ಯಾರು ಕೂಡ ಸಹಿಸಲು ಸಾಧ್ಯವಾಗುವುದಿಲ್ಲ. ಕೆಲವರು ಇದಕ್ಕೆ ರಾಜಕೀಯ ಬಣ್ಣವನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ನಾಯಕರಿಗೆ ವಿರೋಧ ಪಕ್ಷದವರಿಗೆ ಹೇಳುವುದು ಇಷ್ಟೇ. ನಾವ್ಯಾರು ಅವರನ್ನ ಬೈಯಿರಿ ಅಂತ ಹೇಳಲಿಲ್ಲ. ನಾವ್ಯಾರು ಅವರಿಗೆ ಕಮಿಷನ್ ಇಸ್ಕೊಳ್ಳಿ ಅಂತ ಹೇಳಿಲ್ಲ. ಎಲ್ಲವೂ ಕೂಡ ತೆರೆದ ಪುಸ್ತಕದಂತೆ ಬ್ಲಾಕ್ ಅಂಡ್ ವೈಟ್ ನಲ್ಲಿ ಇದೆ. ಅದಕ್ಕೆ ರಾಜಕೀಯ ಸಮರ್ಥನೆ ಮಾಡಿಕೊಳ್ಳುವುದು ಸರಿನಾ? ನಿಮ್ಮ ಜಾತಿಯನ್ನ ಜಾತಿಯ ಹೆಣ್ಣು ಮಕ್ಕಳನ್ನು ನಿಂದನೆ ಮಾಡಿದಂತವರನ್ನ ನೀವು ಯಾವ ರೀತಿಯಾಗಿ ನೋಡ್ತಿರಿ? ಅದೇ ಕಾಂಗ್ರೆಸ್ ಪಕ್ಷದವರು ಏನಾದರೂ ಮಾಡಿದರೆ ಬಿಜೆಪಿಯವರು ಸುಮ್ಮನೆ ಇರುತ್ತಿದ್ರಾ? ಸ್ವಲ್ಪ ಚಿಂತನೆಯನ್ನು ಮಾಡಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.

    ಈ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯ ಮಾಡುವುದು ಬೇಡ. ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ. ಬಿಜೆಪಿ ನಾಯಕರು ಅದನ್ನು ಅರ್ಥ ಮಾಡಿಕೊಂಡು ನಿಮ್ಮ ಪಕ್ಷ ಇದಕ್ಕೆ ಬೆಂಬಲ ಕೊಡುತ್ತಾ ಅನ್ನೋದನ್ನ ಸ್ಪಷ್ಟವಾಗಿ ಹೇಳಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಬೆಂಬಲಿಸುವ ಆಫರ್‌ ಬಂದಿತ್ತು, ನಾನೇ ತಿರಸ್ಕರಿಸಿದೆ: ನಿತಿನ್‌ ಗಡ್ಕರಿ

    ದ್ವೇಷ ರಾಜಕಾರಣ ಎಂಬ ಮುನಿರತ್ನ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್‌, ದ್ವೇಷಕ್ಕೂ ರಾಜಕಾರಣಕ್ಕೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನಾವ್ಯಾರು ಆ ಮಾತು ಹೇಳು ಎಂದು ಹೇಳಲೇ ಇಲ್ಲ. ಅವರಿಬ್ಬರ ನಡುವೆ ನಡೆದ ಘಟನೆ. ನಮಗಂತೂ ಗೊತ್ತಿಲ್ಲ. ದೂರು ಕೊಟ್ಟ ಮೇಲೆ ಈ ವಿಚಾರಗಳೆಲ್ಲ ಹೊರಗಡೆ ಬಂದಿದೆ. ಪೊಲೀಸರ ತನಿಖೆಯಿಂದ ಎಲ್ಲ ವಿಚಾರಗಳು ಸಾರ್ವಜನಿಕ ಚರ್ಚೆಯಾಗುತ್ತದೆ. ಚುನಾವಣೆ ಸೋತ ಮೇಲೆ ನಾನು ಯಾವ ವಿಚಾರಕ್ಕೂ ಬಾಯಿ ಹಾಕುತ್ತಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ
    ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕಾರ ಮಾಡಿದ್ದೇನೆ ಎಂದಿದ್ದಾರೆ.

    ಜನರಿಗೆ ನನ್ನ ಕೈಯಲ್ಲಿ ಆದಂತಹ ಸಹಾಯ ನಾನು ಮಾಡ್ತಾ ಇದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಹೊರತು ಈ ರಾಜಕೀಯದ ನಾಯಕರಿಂದ ಎಲ್ಲದರಿಂದಲೂ ನಾನು ದೂರವೇ ಇದ್ದೀನಿ. ನನಗೆ ಅಂತಹ ಅವಶ್ಯಕತೆ ಇಲ್ಲ. ಕುಂತರೆ ನಿಂತ್ರೆ ದಿನಬೆಳಗಾದ್ರೆ ರಾಜಕಾರಣ ಮಾಡುವುದಲ್ಲ. ಸಿನಿಮಾ ಪ್ರೊಡ್ಯೂಸ್ ಮಾಡಕ್ಕೂ ಹೋಗುವುದಿಲ್ಲ. ಡೈರೆಕ್ಟ್ ಮಾಡ್ಕೋ ಹೋಗೋದಿಲ್ಲ. ಅದೆಲ್ಲವನ್ನು ಬಿಜೆಪಿ-ಜೆಡಿಎಸ್ ಇಬ್ಬರಿಗೆ ಬಿಟ್ಟಿದ್ದೇನೆ. ಪ್ರೊಡ್ಯೂಸರ್, ಆಕ್ಟರ್ ಆಕ್ಷನ್ ಕಟ್ ಎಲ್ಲವೂ ಅವರಿಗೆ ಬಿಟ್ಟಿದ್ದೇವೆ. ನಮ್ಮನ್ನ ನೆನೆಸಿಕೊಳ್ಳದಿದ್ದರೇ ರಾಜಕಾರಣದಲ್ಲಿ ಅವರಿಗೆ ರಕ್ಷಣೆ ಸಿಗೋದಿಲ್ಲ. ರಾಜಕಾರಣದಲ್ಲಿ ಮೇಲೆ ಬರೋದಿಕ್ಕೆ ಆಗೋದಿಲ್ಲ. ʻಡಿಕೆ ಬ್ರದರ್ಸ್ʼರನ್ನ ಟಾರ್ಗೆಟ್ ಮಾಡಬೇಕು ಎಂಬ ಹುನ್ನಾರ ಅಜೆಂಡಾ ಎಲ್ಲರೂ ಇಟ್ಟುಕೊಂಡಿದ್ದಾರೆ. ಅದು ಸರಿನಾ ತಪ್ಪಾ ಅದು ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

  • ಜಾತಿ ನಿಂದನೆ ಆರೋಪ ಪ್ರಕರಣ – ಶಾಸಕ ಮುನಿರತ್ನ 2 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ

    ಜಾತಿ ನಿಂದನೆ ಆರೋಪ ಪ್ರಕರಣ – ಶಾಸಕ ಮುನಿರತ್ನ 2 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ

    ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ (Munirathna) ಅವರನ್ನು ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.

    ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದಾಗ ಕೋಲಾರದ (Kolar) ಮುಳಬಾಗಿಲು ತಾಲೂಕಿನ ನಂಗಲಿ ಬಳಿ ಶನಿವಾರ ಸಂಜೆ ಶಾಸಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧಿಸಿ ಶನಿವಾರ ಸಂಜೆ ವೇಳೆಗೆ ಬೆಂಗಳೂರಿಗೆ ಕರೆತಂದಿದ್ದರು. ಅಶೋಕ ನಗರ ಠಾಣೆಗೆ ಕರೆತಂದಿದ್ದ ಇಲ್ಲಿನ ಪೊಲೀಸರು ಬಳಿಕ ಯಲಹಂಕದ ಕೋಗಿಲೆ ಕ್ರಾಸ್ ಬಳಿ ಇರುವ ನ್ಯಾಯಾಧೀಶರ ನಿವಾಸಕ್ಕೆ ಕರೆತಂದಿದ್ದರು. ಎಸಿಪಿ ಪ್ರಕಾಶ್ ನೇತೃತ್ವದ ತಂಡ ಶಾಸಕರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿತ್ತು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ವಾಪಸ್

    ಈ ವೇಳೆ ಪೊಲೀಸರು ಒಂದು ವಾರ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆದ್ರೆ ವಿಚಾರಣೆ ನಡೆಸಿದ ಬಳಿಕ, 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದರು. ಇದನ್ನೂ ಓದಿ: ಭಾರೀ ಮಳೆ; ತಾಜ್‌ಮಹಲ್‌ನ ಮುಖ್ಯ ಗುಂಬಜ್‌ನಲ್ಲಿ ಸೋರಿಕೆ – ವೀಡಿಯೋ ವೈರಲ್‌

    ಶಾಸರನ್ನು ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದ ವೇಳೆ ಬೆಂಬಲಿಗರೂ ಅಲ್ಲಿ ಜಮಾಯಿಸಿದ್ದರು. ಬಂಧನ ಖಂಡಿಸಿ ಸ್ಥಳದಲ್ಲೇ ಧಿಕ್ಕಾರ ಕೂಗಿದರು. ಇದನ್ನೂ ಓದಿ: ನಿಗಿ ನಿಗಿ ಕೆಂಡವಾಗಿದ್ದ ನಾಗಮಂಗಲ ಶಾಂತ – ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ಸಕ್ಸಸ್

  • ದಲಿತ ಹೆಣ್ಣುಮಕ್ಕಳನ್ನ ಮುಸ್ಲಿಂಗೆ ಮತಾಂತರ ಮಾಡುವ ಕೆಲಸ ಆಗುತ್ತಿದೆ: ಮುನಿರತ್ನ ಆರೋಪ

    ದಲಿತ ಹೆಣ್ಣುಮಕ್ಕಳನ್ನ ಮುಸ್ಲಿಂಗೆ ಮತಾಂತರ ಮಾಡುವ ಕೆಲಸ ಆಗುತ್ತಿದೆ: ಮುನಿರತ್ನ ಆರೋಪ

    ಬೆಂಗಳೂರು: ದಲಿತ ಹೆಣ್ಣುಮಕ್ಕಳನ್ನ (Dalit Woman) ಮುಸ್ಲಿಂಗೆ (Muslim) ಮತಾಂತರ (Conversion) ಮಾಡುವ ಕೆಲಸ ಆಗುತ್ತಿದೆ. ಇತ್ತೀಚಿಗೆ ಬಾಲಕಿಯೊಬ್ಬಳನ್ನು ಮತಾಂತರ ಮಾಡಿ ಮುಮ್ತಾಜ್ ಎಂಬ ಹೆಸರಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ (Munirathna) ಆರೋಪಿಸಿದ್ದಾರೆ.

    ವೈಯ್ಯಾಲಿಕಾವಲ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಲಿ ಆಟವಾಡಿ ಮನೆಗೆ ಬರುವಾಗ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಮುಸ್ಲಿಂ ಯುವಕನಿಂದ ಕೃತ್ಯ ನಡೆದಿದೆ. ಮೋಹನ್ ನಗರದಲ್ಲಿ ಘಟನೆ ನಡೆದಿದೆ. ಆ ವಿಡಿಯೋ ನಂದಿನಿ ಲೇಔಟ್ ಪೊಲೀಸರಿಗೆ ಕಳುಹಿಸಿದ ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿದ್ದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಮತದಾನ ವೇಳೆ ಗುಂಡಿನ ದಾಳಿ, ಇವಿಎಂ ಧ್ವಂಸ – ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ

    ಈ ಪ್ರಕರಣವನ್ನು ವಾಪಸ್ ಪಡೆಯದೆ ಹೋದರೆ ಜೈಲಿನಿಂದ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಬಾಲಕಿ ಎಂಟನೇ ತರಗತಿ ಫಸ್ಟ್ ಕ್ಲಾಸ್ ಬಂದಿದೆ. ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ. ರೇಪ್ ಮಾಡಿದವನಿಗೆ ಮೂರು ಮದುವೆ ಆಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ನಮ್ಮ ಕ್ಷೇತ್ರದಲ್ಲಿ ವೀಲ್ಹಿಂಗ್, ರೇಪ್, ದಬ್ಬಾಳಿಕೆ ನಡೆಯುತ್ತಿದೆ. 50 ರೂ. ಪಡೆಯೋ ಜಾಗಕ್ಕೆ 500 ರೂ. ಪಡೆಯಲಾಗಿದೆ. ಮೂರು ವಾರ್ಡ್‌ನಲ್ಲಿ ದಿನನಿತ್ಯ ಒಂದಲ್ಲ ಒಂದು ಘಟನೆಗಳು ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಮಂಡ್ಯದಿಂದ ಸುಮಲತಾ ದೂರ; ಹೆಚ್‌ಡಿಕೆ ಪರ ಪ್ರಚಾರಕ್ಕಿಳಿಯದ ಸಂಸದೆ – ಬರ್ತಾರೆ ನೋಡೋಣ ಎಂದ ಮಾಜಿ ಸಿಎಂ

    ಯುವತಿ ಕೇಸ್ ವಾಪಸ್ ಪಡೆಯೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ನಂದಿನಿ ಲೇಔಟ್ ಇನ್ಸ್ಪೆಕ್ಟರ್ ವರ್ಗಾವಣೆಗೆ ಹಲವು ಬಾರಿ ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ಏ.4ರಂದು ಘಟನೆ ನಡೆದಿದೆ. 11 ಗಂಟೆ 34 ನಿಮಿಷಕ್ಕೆ ಡಿಸಿಪಿಗೆ ವೀಡಿಯೋ ಕಳುಹಿಸಿಕೊಟ್ಟೆ. ನಾನು ವೀಡಿಯೋ ಕಳುಹಿಸಿದ ಮೂರ್ನಾಲ್ಕು ದಿನದ ಹಿಂದೆ ಘಟನೆ ನಡೆದಿದೆ. ವೀಡಿಯೋ ಕಳುಹಿಸಿದ ಬಳಿಕ ಎಫ್‌ಐಆರ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಕೇಸ್ ವಾಪಸ್ ಪಡೆಯುವಂತೆ ಒತ್ತಾಯ ಮಾಡಲಾಗುತ್ತಿದೆ. ಆರೋಪಿಗಳನ್ನು ಕಾಂಗ್ರೆಸ್‌ನವರು ರಕ್ಷಣೆ ಮಾಡುತ್ತಿದ್ದಾರೆ. ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಎಂದು ಆರೋಪ ಮಾಡಿದರು. ಇದನ್ನೂ ಓದಿ: ಇಂದು ಹುಬ್ಬಳ್ಳಿಗೆ ಜೆಪಿ ನಡ್ಡಾ – ನೇಹಾ ಕುಟುಂಬಸ್ಥರ ಭೇಟಿ ಸಾಧ್ಯತೆ

    ಲೆಕ್ಕ ಇಲ್ಲದಷ್ಟು ಮಂದಿ ಮುಸ್ಲಿಂಗೆ ಮತಾಂತರ ಆಗುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಹೆಚ್ಚು ಮತಾಂತರ ಮಾಡಲಾಗಿದೆ. ಇದೇ ರೀತಿ ಇನ್ನೊಂದು ಕೇಸ್ ಇದೆ. ಆ ಕುಟುಂಬ ಹೊರಗಡೆ ಬರೋದಕ್ಕೆ ಭಯ ಪಡುತ್ತಿದ್ದಾರೆ. ರಂಜಾನ್ ಹಬ್ಬದ ದಿನ ಘಟನೆ ನಡೆದಿದೆ. ಅದನ್ನು ಬೆಳಕಿಗೆ ತರುತ್ತೇವೆ. ಹುಬ್ಬಳಿಯಲ್ಲಿ ಆಗಿರೋ ನೇಹಾ ಮರ್ಡರ್‌ನಿಂದ ಜನರು ಭಯಪಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಹೋಗಿ ಮತ್ತೆ ಡಿಸಿಎಂ ಕಾಲು ಹಿಡಿದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿಶ್ವಾಸ

  • ಧರ್ಮಸ್ಥಳದ ಮಂಜುನಾಥನಂತೆ ಡಾ.ಮಂಜುನಾಥ್ – ಗುಣಗಾನ ಮಾಡಿದ ಮುನಿರತ್ನ

    ಧರ್ಮಸ್ಥಳದ ಮಂಜುನಾಥನಂತೆ ಡಾ.ಮಂಜುನಾಥ್ – ಗುಣಗಾನ ಮಾಡಿದ ಮುನಿರತ್ನ

    – ವೋಟ್‌ ಹಾಕಿ ಋಣ ತೀರಿಸಿಕೊಳ್ಳಿ ಎಂದ ಮಾಜಿ ಸಚಿವ

    ರಾಮನಗರ: ಧರ್ಮಸ್ಥಳದ ಮಂಜುನಾಥ ನಂತೆ ನಮ್ಮ ಡಾ. ಸಿಎನ್‌ ಮಂಜುನಾಥ್ (CN Manjunat) ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮಾಡಿದ ತಪ್ಪಿಗೆ ಈ ಬಾರಿ ಮಂಜುನಾಥ್‌ ಅವರಿಗೆ ವೋಟ್‌ ಹಾಕಿ ಋಣ ತೀರಿಸಿಕೊಳ್ಳಿ ಎಂದು ಮುನಿರತ್ನ (Munirathna) ಹೇಳಿದ್ದಾರೆ.

    ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ಮೈತ್ರಿ ಅಭ್ಯರ್ಥಿ ಪರ ಬೃಹತ್ ಸಮಾವೇಶದಲ್ಲಿ ಶಾಸಕ ಮುನಿರತ್ನ ಅಬ್ಬರದ ಭಾಷಣ ಮಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಗ್ದ ಯುವಕನನ್ನ 5 ಸಾವಿರದ ಗಿಫ್ಟ್ ಕಾರ್ಡ್ ಕೊಟ್ಟು ಸೋಲಿಸಿದರು. ಆ ದೇವರು ನಿಮ್ಮನ್ನ ಕ್ಷಮಿಸಲ್ಲ. ಆ ಪಾಪಕ್ಕೆ ಪ್ರಾಯಶ್ಚಿತ್ತ ಆಗಬೇಕು ಅಂದ್ರೆ ಮಂಜುನಾಥ್‌ ಅವರನ್ನ ಗೆಲ್ಲಿಸಬೇಕು ಅಂತಾ ಜನತೆಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ನಾನೇನು ತಪ್ಪು ಮಾಡಿಲ್ಲ, 10 ತಿಂಗ್ಳು ಅಜ್ಞಾತವಾಸ ಅನುಭವಿಸಿದ್ದೇನೆ: ಸುಧಾಕರ್ ಕಣ್ಣೀರು

    ಡಾ.ಮಂಜುನಾಥ್ ಅವರು 75 ಲಕ್ಷ ಆಪರೇಷನ್ ಮಾಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಸ್ಪರ್ಧೆಯಿಂದ ಇಲ್ಲಿ ಅಣ್ಣತಮ್ಮಂದಿರ ಹೃದಯ ಬಡಿತ ಜಾಸ್ತಿ ಆಗಿದೆ. ಹೆಂಗೋ ಕುಕ್ಕರು, ತವ ಕೊಟ್ಟು ಗೆಲ್ತಿದ್ವಿ, ಈಗ ಡಾಕ್ಟರ್‌ ವಕ್ಕರಿಸಕೊಂಡ್ರು ಅಂತ ಟೆನ್ಷನ್ ಮಾಡಿಕೊಂಡಿದ್ದಾರೆ. ಧರ್ಮಸ್ಥಳದ ಮಂಜುನಾಥ ನಂತೆ ನಮ್ಮ ಡಾ.ಮಂಜುನಾಥ್. 91 ವರ್ಷ ವಯಸ್ಸಿನ ದೇವೆಗೌಡರ ಮಾತುಕೇಳಿದ್ರೆ ಮೈ ರೋಮಾಂಚನ ಆಗುತ್ತೆ. ಸಿದ್ದರಾಮಯ್ಯಗೆ (Siddaramaiah) ಜನತಾದಳ ಇರೋದನ್ನ ತೋರಿಸುತ್ತೇನೆ ಅಂತಾ ಎಚ್ಚರಿಸುತ್ತಾರೆ. ಅದಕ್ಕೆ ಕಾರಣ ರಾಮನಗರದ ಜನ. ಮಂಜುನಾಥ್‌ರಿಗೆ ವೋಟ್‌ ಮಾಡಿದ್ರೆ ದೇವಾನು ದೇವತೆಗಳು ತಥಾಸ್ತು ಅಂತಾರೆ. ಅವರಿಗೆ ವೋಟ್‌ ಹಾಕದಿದ್ದರೆ ಯಮ ನರಕಕ್ಕೆ ಕಳುಹಿಸ್ತಾನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

    ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಏಕೈಕ ಅಭ್ಯರ್ಥಿ ಡಾ. ಮಂಜುನಾಥ್‌, ಅವರ ಮೇಲೆ ಒಂದೇ ಒಂದು ಆರೋಪ ಇಲ್ಲ. ಅವರೂ ಸಹ ಒಂದು ದಿನ ದೇವೆಗೌಡರು, ಕುಮಾರಸ್ವಾಮಿ ಹೆಸರು ಹೇಳಿಲ್ಲ. ದೇವರು ಇಲ್ಲಿ ಪ್ರತ್ಯಕ್ಷ ಆಗಿ ನನಗೆ ವರ ನೀಡಿದ್ರೆ ನನ್ನ ಆಯಸ್ಸನ್ನೂ ಮಂಜುನಾಥ್‌ರಿಗೆ ಕೊಡು ಅಂತೀನಿ. ಕೆಲಸ ಮಾಡಿ ಇಲ್ಲಿ ಕೂಲಿ ಕೊಡಿ ಅಂತಾರೆ. ಆದ್ರೆ ಇಲ್ಲಿ ಕುಕ್ಕರ್, ಸೀರೆ ಕೊಟ್ಟು ಕೂಲಿ ಕೇಳ್ತಿದ್ದಾರೆ. 10 ವರ್ಷದ ಕೊಡುಗೆಗಳ ಪಟ್ಟಿ ಬಿಡುಗಡೆ ಮಾಡಲಿ. ಕೊವೀಡ್ ಟೈಂ ನಲ್ಲಿ ಹೋಗಿ ನಾನೇ ಹೆಣ ಮಣ್ಣು ಮಾಡಿದೆ ಅಂತಾರೆ, ಮಾಡಿದ್ರೆ ತೆಗಿಸಿ ನೋಡೋಣ. ಕೊವೀಡ್ ಸಮಯದಲ್ಲಿ ಏನಾದ್ರು ಕೊಟ್ಟಿದ್ರೆ ದಾಖಲೆ ಕೊಡಲಿ. ಈ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಮಂಜುನಾಥ್ ಗೆದ್ದಾಗಿದೆ ಚುನಾವಣಾ ಅಷ್ಟೆ ಬಾಕಿ ಇರೋದು ಎಂದು ಬೀಗಿದ್ದಾರೆ.

    ಮೋದಿ, ‌ಅಮಿತ್ ಶಾ ಅವರ ಮೆದಳು ಸ್ಯಾಟಲೈಟ್‌ ತರ, ಅದು ನಿಂತರೂ ಅವರ ಮೆದುಳು ನಿಲ್ಲಲ್ಲ. ಡಾ.ಮಂಜುನಾಥ್ ರನ್ನ ಗುರುತಿಸಿದ್ದು ಮೋದಿ, ಅಮಿತ್ ಶಾ. ನಾವ್ಯಾರು ಅಲ್ಲ. ಅವರ ಸೇವೆ ಮೆಚ್ಚಿ, ದೇಶಕ್ಕೆ ಅಗತ್ಯ ಅಂತ ಕರೆದಿದ್ದು. ನಿಖಿಲ್ ಅವರಿಗೆ ಮಾಡಿದ ತಪ್ಪಿಗೆ ಮಂಜುನಾಥ್‌ಗೆ ವೋಟ್ ಹಾಕಿ ಋಣ ತೀರಿಸಿಕೊಳ್ಳಿ ಎಂದು ಮುನಿರತ್ನ ಕರೆ ನೀಡಿದ್ದಾರೆ. ಇದನ್ನೂ ಓದಿ: ಗಿಫ್ಟ್ ಕಾರ್ಡ್ ಹಂಚಿ ನನಗೆ ಅನ್ಯಾಯ ಮಾಡಿದ್ರು: ಸೋಲಿನ ಬಗ್ಗೆ ನಿಖಿಲ್ ಭಾವುಕ

  • ನೀವು ಸ್ವರ್ಗಕ್ಕೆ ಹೋಗಬೇಕು ಅಂತ ಆಸೆ ಇದ್ರೆ ಮಂಜುನಾಥ್‌ಗೆ ಮತ ನೀಡಿ: ಮುನಿರತ್ನ

    ನೀವು ಸ್ವರ್ಗಕ್ಕೆ ಹೋಗಬೇಕು ಅಂತ ಆಸೆ ಇದ್ರೆ ಮಂಜುನಾಥ್‌ಗೆ ಮತ ನೀಡಿ: ಮುನಿರತ್ನ

    – ಒಂದು ತಪ್ಪು ಮತ ಹಾಕಿದ್ರೆ ನಿಮಗೆ ಯಮ ಕಾಣಿಸ್ತಾನೆ ಎಂದ ಶಾಸಕ

    ರಾಮನಗರ: ನೀವು ಸ್ವರ್ಗಕ್ಕೆ ಹೋಗಬೇಕು ಅಂತ ಆಸೆ ಇದ್ರೆ ಡಾ.ಮಂಜುನಾಥ್‌ಗೆ (Dr Manjunath) ನಿಮ್ಮ ಮತ ನೀಡಿ. ಒಂದು ತಪ್ಪು ಮತ ಹಾಕಿದ್ರೂ ನಿಮಗೆ ಯಮ ಕಾಣಿಸ್ತಾನೆ. ನರಕದಲ್ಲಿ ಬಿಸಿ ಎಣ್ಣೆಗೆ ಅಜ್ಜುತ್ತಾನೆ ಎಂದು ಕನಕಪುರದಲ್ಲಿ (Kanakapura) ಶಾಸಕ ಮುನಿರತ್ನ (Munirathna) ಹೇಳಿದ್ದಾರೆ.

    ಕನಕಪುರದ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕೆ ಬಂದರೆ ಜನಸೇವೆ ಮಾಡಬೇಕು. ಡಾ.ಮಂಜುನಾಥ್ ಬಂದಿರೋದು ಸ್ವಾರ್ಥಕ್ಕಲ್ಲ, ಜನಸೇವೆಗೆ. ಬೇರೆಯವರಿಗೆ ಮತ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗುತ್ತೆ. ಡಾ.ಮಂಜುನಾಥ್ ಅವರ ಸೇವೆ 140 ಕೋಟಿ ಜನತೆಗೆ ಬೇಕು. ಇದನ್ನು ಬರೆದಿಟ್ಟುಕೊಳ್ಳಿ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಅಷ್ಟೇ ಸತ್ಯ. ಡಾ.ಮಂಜುನಾಥ್ ಅವರು ಮೋದಿ ಸಂಪುಟದಲ್ಲಿ ಸಚಿವರಾಗೋದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯ ನಾಯಕರು ನನಗೆ ಟಿಕೆಟ್ ಭರವಸೆ ಕೊಡಬಾರದಿತ್ತು – ಬಿಜೆಪಿ ಟಿಕೆಟ್ ವಂಚಿತ ಬಿವಿ ನಾಯಕ್ ಅಸಮಾಧಾನ

    ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಶಿ, ಮೇನಕೆ ನೋಡಬಹುದು. ನರಕ್ಕೆ ಯಾಕೆ ಹೋಗುತ್ತೀರಾ. ನಾನೇ ಕಠಾರಿವೀರ ಅಂತ ಒಂದು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಸ್ವರ್ಗ, ನರಕ ಹೇಗಿರುತ್ತೆ ಅಂತ ನೋಡಿ. ಈ ಚುನಾವಣೆ ರಾಮ-ರಾವಣರ ಯುದ್ಧ. ನಿಮಗೆ ರಾಮಬೇಕಾ? ರಾವಣ ಬೇಕಾ? ನಾವು ಈ ರಾಮನನ್ನು ಪಾರ್ಲಿಮೆಂಟ್‌ಗೆ ಕಳುಹಿಸಬೇಕು. ಬಿಜೆಪಿ ಹೃದಯದಲ್ಲಿ ಜೆಡಿಎಸ್ ಇದೆ. ಮತ ಹಾಕುವಾಗ ಜೆಡಿಎಸ್ ಇಲ್ಲ ಎಂದು ಗೊಂದಲಕ್ಕೀಡಾಗಬೇಡಿ. ಮಂಜುನಾಥ್ ಹೃದಯದಲ್ಲಿ ಜೆಡಿಎಸ್ ಇದೆ. ಹಾಗಾಗಿ ಬಿಜೆಪಿ ಚಿಹ್ನೆಗೆ ಮತ ಹಾಕಿ ಎಂದರು. ಇದನ್ನೂ ಓದಿ: ರೆಡ್ಡಿ ಮರಳಿದ್ದು ಬಿಜೆಪಿಗೆ ದೊಡ್ಡ ಶಕ್ತಿ – ಮೈತ್ರಿಗೆ ಗೆಲುವು ಖಚಿತ: ವಿಜಯೇಂದ್ರ

  • ಚುನಾವಣೆಗೆ ಹಂಚೋದಕ್ಕೆ 8 ಲಕ್ಷ ಕುಕ್ಕರ್ ಇಟ್ಟಿದ್ದಾರೆ, ದುಡ್ಡು ಕೊಡ್ತಿದ್ದಾರೆ: ಮುನಿರತ್ನ ಗಂಭೀರ ಆರೋಪ

    ಚುನಾವಣೆಗೆ ಹಂಚೋದಕ್ಕೆ 8 ಲಕ್ಷ ಕುಕ್ಕರ್ ಇಟ್ಟಿದ್ದಾರೆ, ದುಡ್ಡು ಕೊಡ್ತಿದ್ದಾರೆ: ಮುನಿರತ್ನ ಗಂಭೀರ ಆರೋಪ

    – ಬಿಜೆಪಿ ಕಾರ್ಯಕರ್ತರಿಗೆ 20 ರಿಂದ 30 ಲಕ್ಷ ರೂ. ಆಮಿಷ ಒಡ್ಡುತ್ತಿದ್ದಾರೆ
    – ಡಿಕೆ ಸುರೇಶ್ ವಿರುದ್ಧ ಮುನಿರತ್ನ ಪರೋಕ್ಷ ವಾಗ್ದಾಳಿ

    ಬೆಂಗಳೂರು: ಗ್ರಾಮಾಂತರ ಕ್ಷೇತ್ರದಲ್ಲಿ ಸಾಕಷ್ಟು ಚುನಾವಣಾ ಅವ್ಯವಹಾರ ನಡೆಯುತ್ತಿದೆ. ಚುನಾವಣೆಗೆ ಹಂಚೋದಕ್ಕಾಗಿ ಕಾಂಗ್ರೆಸ್‌ನವರು 8 ಲಕ್ಷ ಕುಕ್ಕರ್‌ ಸಂಗ್ರಹಿಸಿದ್ದಾರೆ. ಮನೆ-ಮನೆಗಳಿಗೆ ಹೋಗಿ ದುಡ್ಡು ಕೊಡ್ತಿದ್ದಾರೆ. ಈ ಅಕ್ರಮಗಳನ್ನು ತಡೆಯಲು ಪ್ಯಾರಾ ಮಿಲಿಟರಿ ಫೋರ್ಸ್ ಬರಬೇಕು ಎಂದು ಆರ್‌ಆರ್ ನಗರ ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ.

    ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ ಸುರೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆಗೆ ಹಂಚಲು ಕಾಂಗ್ರೆಸ್‌ನವರು ಕುಕ್ಕರ್, ಸೀರೆ ಸಂಗ್ರಹ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಳ್ತಿಲ್ಲ. ದಾಳಿ ಮಾಡಿದ್ರೆ ತೊಂದರೆ ಆಗುತ್ತೆ ಅಂತಾ ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಬಿಜೆಪಿ ಕಾರ್ಯಕರ್ತರಿಗೆ ಲಕ್ಷ ಲಕ್ಷ ಆಮಿಷ:
    ಡಾ.ಸಿ.ಎನ್ ಮಂಜುನಾಥ್ ಅವರು ಪ್ರಾಮಾಣಿಕ ವ್ಯಕ್ತಿ, ಅಂತಹ ವ್ಯಕ್ತಿ ನಮ್ಮ ಗ್ರಾಮಾಂತರಕ್ಕೆ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ಒಳ್ಳೆಯ ರೀತಿಯ ಚುನಾವಣೆ ಮಾಡೋದನ್ನು ಬಿಟ್ಟು, ಇಂತಹ ಕೆಲಸ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯವರು ಕಂಡರೆ ಹೊಡೆಯಿರಿ ಅಂತ ಕರೆ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ಹೋಗಿ 10-20-25 ಲಕ್ಷ ರೂ. ಕೊಟ್ಟು ಬಲವಂತವಾಗಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ ಎಂದು ದೂರಿದ್ದಾರೆ.

    ನಮ್ಮ ಕ್ಷೇತ್ರದಲ್ಲಿ ಕುಕ್ಕರ್, ಸೀರೆಗಳು, ದುಡ್ಡನ್ನು ಶೇಖರಣೆ ಮಾಡಿ ಇಡ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ, ಅಧಿಕಾರಿಗಳನ್ನ ಕೇಳಿದ್ರೆ ಅವರು ಭಯದಲ್ಲೇ ಮಾತನಾಡ್ತಿದ್ದಾರೆ. ಇಂತಹ ಅಧಿಕಾರಿಗಳು ಬೇಡ ಅಂತ ಆಯೋಗಕ್ಕೆ ಪತ್ರ ಬರೆದರೂ ಅವರನ್ನು ವರ್ಗಾವಣೆ ಮಾಡುತ್ತಿಲ್ಲ. ಈ ಚುನಾವಣೆ ಪಾರದರ್ಶಕವಾಗಿ ನಡೆಯಬೇಕಿದ್ದರೆ, ಕೇಂದ್ರ ಸರ್ಕಾರವೇ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಗೋಮಾಂಸ ವ್ಯಾಪಾರಿಗಳೇ ರಸ್ತೆ ತೆರವು ಮಾಡಿಸಿದ್ದಾರೆ:
    ಯಶವಂತಪುರ ರೈಲು ನಿಲ್ದಾಣಕ್ಕೆ ಎಲ್ಲ ಭಾಗಗಳಿಂದಲೂ ರೈಲುಗಳು ಬರುತ್ತವೆ. ನಮ್ಮ ಸರ್ಕಾರ ಇದ್ದಾಗ ಜನರು ಓಡಾಡಲು ಅಲ್ಲಿ ಅಲ್ಲಿ ಒಂದು ರಸ್ತೆ ಮಾಡಲಾಗಿತ್ತು. ಪಕ್ಕದಲ್ಲೇ ಹೆರಿಗೆ ಆಸ್ಪತ್ರೆ, ಕೋವಿಡ್ ಆಸ್ಪತ್ರೆ ಇದೆ. ಜನರು ಸಹ ಈ ರಸ್ತೆಯನ್ನು ಹೆಚ್ಚಾಗಿಯೇ ಸದ್ಬಳಕೆ ಮಾಡಿಕೊಳ್ಳುತ್ತಿದ್ದರು. ಆದ್ರೆ ಅಲ್ಲಿರುವ ಗೋಮಾಂಸ ವ್ಯಾಪಾರಿಗಳು ಈ ರಸ್ತೆಯಿಂದ ತೊಂದರೆ ಆಗ್ತಿದೆ. ತೆರವು ಮಾಡಿಸಿಕೊಡಿ ಅಂತಾ ಮನವಿ ಮಾಡಿದ್ರು. ಅವರ ಮನವಿಗೆ ಒಪ್ಪಿ ಸಂಸದರು ರಸ್ತೆಯ ಪರಿಶೀಲನೆ ಮಾಡಿದ್ರು. ಈಗ ಜನರಿಗೆ ಅನುಕೂಲ ಆಗುವ ಈ ರಸ್ತೆಯನ್ನೇ ತೆರವು ಮಾಡಲು ಹೊರಟಿದ್ದಾರೆ. ಗೋಮಾಂಸ ವ್ಯಾಪಾರಿಗಳಿಗೆ ಅನುಕೂಲವಾಗಲು ರಸ್ತೆ ತೆರವು ಮಾಡುವಂತೆ ಅಧಿಕಾರಿಗಳಿಗೆ ಸಂಸದರು ಮೌಖಿಕ ಆದೇಶ ಮಾಡ್ತಾರೆ. ಅಧಿಕಾರಿಗಳು ಈ ರಸ್ತೆ ತೆರವು ಮಾಡಕ್ಕಾಗಲ್ಲ ಅಂತ ಹೇಳಿದ್ದಾರೆ. ಈ ಮಧ್ಯೆ ದನದ ಮಾಂಸ ವ್ಯಾಪಾರಿಗಳೇ ಜೆಸಿಬಿ ತಂದು ರಸ್ತೆ ತೆರವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  • ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

    ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

    ತುಮಕೂರು: ಕಾಂಗ್ರೆಸ್ (Congress) ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ  (Munirathna) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ತುಮಕೂರಿನಲ್ಲಿ (Tumakuru) ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ಚುನಾವಣೆಗೋಸ್ಕರ ನಾಟಕ ಮಾಡುತ್ತಿದ್ದಾರೆ. ಗ್ಯಾರಂಟಿಗಳ ರೂಪದಲ್ಲಿ 52,000 ಕೋಟಿ ರೂ. ಸಾರ್ವಜನಿಕ ತೆರಿಗೆ ಹಣವನ್ನು ಕೊಟ್ಟು ಪೋಲು ಮಾಡಿದ್ದಾರೆ. ಈಗ ಪದೇ ಪದೇ ಹಣ ಕೇಳಿಕೊಂಡು ಇವರು ಕೇಂದ್ರಕ್ಕೆ ಹೋಗ್ತಾರೆ. ತೆರಿಗೆ ಹಣವನ್ನು ದಾನ ಮಾಡೋ ಮುಂಚೆ ಯೋಚನೆ ಮಾಡಬೇಕಿತ್ತು. ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿರುವ ದೂರು ಎಫ್‌ಐಆರ್, ಹೇಳಿಕೆ ದಾಖಲಿಸಿಲ್ಲ

    ಗ್ಯಾರಂಟಿ ಯೋಜನೆ ಘೋಷಣೆ ಮಾಡೋ ಮುಂಚೆ ಯೋಚನೆ ಮಾಡಬೇಕಿತ್ತು. ಯಾವುದೇ ಯೋಚನೆ ಮಾಡದೆ ಅಧಿಕಾರದ ದಾಹಕ್ಕಾಗಿ ಐದು ಗ್ಯಾರಂಟಿ, ಆರು ಗ್ಯಾರಂಟಿ ಘೋಷಣೆ ಮಾಡಿದರು. ಇಲ್ಲಿ ದಾನ ಕೊಟ್ಟು ಅಲ್ಲಿ ಭಿಕ್ಷೆ ಬೇಡಲು ಹೋಗುತ್ತಾರೆ. ಇವರು ಕೇಂದ್ರದಿಂದ ಹಣ ಕೇಳೋದು ರಾಜ್ಯದ ಅಭಿವೃದ್ಧಿಗಲ್ಲ. ಹಣತಂದು ಲೋಕಸಭಾ ಚುನಾವಣೆಗೆ ಇನ್ನಷ್ಟು ಗ್ಯಾರಂಟಿ ಕೊಡಲು ಎಂದಿದ್ದಾರೆ. ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನವರು ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

    ಪ್ರತ್ಯೇಕ ರಾಷ್ಟ್ರದ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಬಹುಶಃ ಪ್ರತ್ಯೇಕ ದೇಶ ಮಾಡೋದಕ್ಕೆ ಉತ್ತಮವಾದ ಆಲೋಚನೆ ಬಂದಿರಬೇಕು. 1947ರಲ್ಲಿ ಜಿನ್ನಾನಿಂದ ದೇಶ ವಿಭಜನೆ ಆಯಿತು. ಈಗ ಇವರೇನಾದರು ಪಾಕಿಸ್ತಾನದಂತೆ ಬೇರೆ ಒಂದು ಸ್ಥಾನ ಮಾಡೋಕೆ ಹೊರಟಿದ್ದಾರೆ. ದೇಶದ ಅಖಂಡತೆಯ ಕುರಿತಂತೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅದನ್ನು ಬಿಟ್ಟು ಇವರು ದೇಶವನ್ನ ಪ್ರತ್ಯೇಕ ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದಿದಿದ್ದಾರೆ. ಇದನ್ನೂ ಓದಿ: ನಿಗೂಢ ಕೆಲಸಕ್ಕೆ 42 ಅಕ್ರಮ ಸಿಮ್‌ಗಳೊಂದಿಗೆ ಬೆಂಗಳೂರಿಗೆ ಹೊರಟಿದ್ದ ಯುವಕರು ಅರೆಸ್ಟ್‌

    ಶಿವಕುಮಾರ ಶ್ರೀಗಳಿಗೆ ‘ಭಾರತ ರತ್ನ’ ಕೊಡುವುದರ ಬಗ್ಗೆ ಪ್ರತಿಕ್ರಿಯಿಸಿ, ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ. ಅಂತಹ ಮಹನೀಯರು ಮತ್ತೇ ಇಲ್ಲಿ ಹುಟ್ಟಬೇಕು. ಅವರಿಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಇರ್ತೀವಿ. ಅಡ್ವಾಣಿ ಅವರಿಗೆ ಭಾರತ ರತ್ನ ಲಭಿಸಿರೋದು ಬಹಳ ಸಂತೋಷ. ಅವರ ಹೋರಾಟ ಇವತ್ತಿನದಲ್ಲ. ಬಹಳಷ್ಟು ಶ್ರಮಪಟ್ಟು ದೇಶದಲ್ಲಿ ಹಿಂದೂ ಧರ್ಮ ಕಟ್ಟಿದವರು. ಮಾಜಿ ಪ್ರಧಾನಿ ವಾಜಪೇಯಿಯವರ ಜೊತೆಯಲ್ಲಿ ಕೆಲಸ ಮಾಡಿದವರು. ಅವರಿಗೆ ಭಾರತ ರತ್ನ ಕೊಟ್ಟಿರೋದು ಸೂಕ್ತ. ಸರಿಯಾದ ಸಮಯದಲ್ಲಿ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಯಿ ವಿಚಾರಕ್ಕೆ ಠಾಣೆ ಮೆಟ್ಟಿಲೇರಿದ ಮಹಿಳೆಯರು