Tag: Munirathna

  • ಸಿದ್ದರಾಮಯ್ಯ ಜೊತೆ ಮುನಿರತ್ನ ಆಪ್ತ ಮಾತು – ಭಾಷಣದ ಆರಂಭದಲ್ಲೇ ನೆಚ್ಚಿನ ಸಿಎಂ ಎಂದ ಶಾಸಕ

    ಸಿದ್ದರಾಮಯ್ಯ ಜೊತೆ ಮುನಿರತ್ನ ಆಪ್ತ ಮಾತು – ಭಾಷಣದ ಆರಂಭದಲ್ಲೇ ನೆಚ್ಚಿನ ಸಿಎಂ ಎಂದ ಶಾಸಕ

    – ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮುನಿರತ್ನ; ವೇದಿಕೆಯಲ್ಲೇ ಕಿಚಾಯಿಸಿದ ಸಿದ್ರಾಮಯ್ಯ
    – ಗನ್‌ಮ್ಯಾನ್‌ ಕೊಡುವಂತೆ ಶಾಸಕರ ಬೇಡಿಕೆ

    ಬೆಂಗಳೂರು: ಇಲ್ಲಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ʻಕನಕ ಕಾವ್ಯ ದೀವಿಗೆ ಕನ್ನಡ ನಾಡ ನುಡಿ ಉತ್ಸವʼ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಸಂತೋಷದಿಂದಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ, ಸಿಎಂ ಜೊತೆಗೆ ಆಪ್ತ ಮಾತುಕತೆ ನಡೆಸಿದರು. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸಿದಾಗ ಮುನಿರತ್ನ ಅವರು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

    ಬಳಿಕ ವೇದಿಕೆಯಲ್ಲಿ ಮಾತನಾಡಿದ ಶಾಸಕರು, ಭಾಷಣದ ಆರಂಭದಲ್ಲಿ ನೆಚ್ಚಿನ ಸಿಎಂ ಸಿದ್ದರಾಮಯ್ಯ ಎಂದು ಸಂಬೋಧನೆ ಮಾಡಿದರು. ಅಣ್ಣನ ನೋಡಬೇಕು ಎಂದು 5 ಗಂಟೆಗೆ ಬಂದಿದ್ದೆ ಎಂದು ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಮಾತನಾಡಿದ್ರು.

    ಗನ್‌ ಮ್ಯಾನ್‌ಗೆ ಬೇಡಿಕೆ
    ಮುಂದುವರಿದು… ಜ್ಯೋತಿ ಹೊರತಾಗಿ ಬೆಂಕಿಯ ಜೊತೆ ಬದುಕೊಕಾಗಲ್ಲ. ಇವತ್ತು ಜ್ಯೋತಿಗೆ ನಾವು ಎಣ್ಣೆ ಹಾಕ್ತೇವೆ. ಆದ್ರೆ ಬೆಂಕಿಗೆ ಫೈರ್ ಇಂಜಿನ್ ತರ್ತೇವೆ. ಸಿದ್ದರಾಮಯ್ಯನವಬರೇ ನೀವು ಜ್ಯೋತಿ ಇದ್ದಂತೆ ಯಾವಾಗಲೂ ಬೆಳಗುತ್ತಿರಬೇಕು, ಒಳ್ಳೆಯ ಕೆಲಸ ಮಾಡ್ತಿದ್ದೀರಿ. ನನಗೆ ಸಂತಾಪ ಸೂಚಿಸಿದಾಗ ಸಿದ್ದರಾಮಯ್ಯ ಜೊತೆ ಇದ್ರು ಎಂದು ಹೇಳ್ತಾರಲ್ಲ. ಅಂತಹ ಒಳ್ಳೆಯ ನಾಯಕರೊಂದಿಗೆ ಇದ್ದಿದ್ದಕ್ಕೆ ನನಗೆ ಸಂತೋಷ ಇದೆ. ಅಣ್ಣ ನಮ್ಮ ಕ್ಷೇತ್ರದಲ್ಲಿ ಹಲವು ಕೆಲಸ ನಿಂತೋಗಿದೆ. ನನ್ನ ಕ್ಷೇತ್ರದ ಕೆಲವು ಕೆಲಸ ನಿಂತು ಹೋಗಿದೆ. ನನ್ನ ಕ್ಷೇತ್ರಕ್ಕೆ ಸಹಾಯ ಮಾಡಿ, ನನ್ನ ಕ್ಷೇತ್ರಕ್ಕೆ ಅನುದಾನ ಕೊಡಿ. ಗನ್ ಮ್ಯಾನ್ ಕೊಟ್ಟಿಲ್ಲ ನನಗೆ, ನಾನು ಓಡಾಡಬಾರದು ಎಂದು ಗನ್ ಮ್ಯಾನ್ ಕೊಟ್ಟಿಲ್ಲ. ಮನೆಲಿ ಇರಲಿ, ಹೊರಗೆ ಬಂದ್ರೆ ಮೊಟ್ಟೆಯಲ್ಲಿ ಹೊಡಿಬಹುದು ಎಂದು ಹೀಗೆ ಮಾಡಿದ್ದಾರೆ. ಪ್ರಜಾಪ್ರಭುತ್ವ ರಾಜ್ಯ ಇದು ನನಗೆ ಗನ್ ಮ್ಯಾನ್ ಕೊಡಿ ಎಂದು ಬೇಡಿಕೆಯಿಟ್ಟರು.

    ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಏಯ್ ಮುನಿರತ್ನ, ವೃಷಭಾವತಿ ಪ್ರೊಡಕ್ಷನ್, ಮುನಿರತ್ನ 2013-18ರ ತನಕ ಒಳ್ಳೆಯವನಾಗಿದ್ದ ಎನ್ನುತ್ತಿದ್ದಂತೆ ಬೆಂಬಲಿಗರೂ ಈಗಲೂ ಒಳ್ಳೆಯವರೇ ಎಂದರು. ಅದಕ್ಕೆ ಸಿಎಂ ನಗುತ್ತಲೇ ಓಹೋ ಈಗಲೂ ಒಳ್ಳೆಯವನಾ..? ಆಯ್ತು. ಆಗ ನಾನು ಸಹಾಯ ಮಾಡಿದ್ದೆ.. ನೀನು ಅದನ್ನ ಹೇಳೋದೇ ಇಲ್ಲ. ನಮ್ಮನ್ನ ಬಿಟ್ಟು ಅಲ್ಲಿಗೆ ಹೋಗ್ಬಿಟ್ಟ ಎಂದು ಕಿಚಾಯಿಸಿದರು.

  • ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

    ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

    – ಆರ್‌ಎಸ್‌ಎಸ್‌ನಲ್ಲಿ ಲೈಂಗಿಕ ಕಿರುಕುಳ ಕೊಡ್ತಾರೆ ಅಂತ ಪುಸ್ತಕ ಬರೆದಿದ್ದಾರೆ
    – ಶಾಲೆಗಳಲ್ಲಿ ಆರ್‌ಎಸ್‌ಎಸ್‌ನಿಂದಾಗುತ್ತಿರುವ ಬ್ರೇನ್ ವಾಷಿಂಗ್ ನಿಲ್ಲಲೆಂದು ಆಕ್ರೋಶ

    ಬೆಂಗಳೂರು: ಆರ್‌ಎಸ್‌ಎಸ್ ಬ್ಯಾನ್ (RSS Ban) ಮಾಡಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ಬೇಡ ಎಂದು ಹೇಳಿದ್ದೇನೆ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? ಅಂತ ಪ್ರಶ್ನೆ ಮಾಡಿದ್ದಾರೆ. ಸಂಘ ರಿಜಿಸ್ಟರ್ ಆಗಿದ್ದರೆ ಕಾಪಿ ಕೊಡಲಿ ಅವರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು 55 ವರ್ಷ ಬೇಕಾಯಿತು ಎಂದರಲ್ಲೇ ಮುನಿರತ್ನ ಗಣವೇಶ ಹಾಕಿಕೊಂಡು, ಗಾಂಧಿಜಿ ಫೋಟೋ ಹಿಡಿದುಕೊಂಡು ಪ್ರತಿಭಟಿಸಿದ್ದು ಹಸ್ಯಾಸ್ಪದ ಅವರಿಗೆ ಆರ್‌ಎಸ್‌ಎಸ್ ಇತಿಹಾಸ ಗೊತ್ತಿಲ್ಲ ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ | ಆರ್‌ಎಸ್‌ಎಸ್‌ ಕಚೇರಿಗೆ ಪೊಲೀಸರಿಂದ ಬಿಗಿ ಭದ್ರತೆ

    ಮುಖದ ಮೇಲೆ ಉಗಿದಿದ್ದಾರೆ ಖರ್ಗೆ
    ಇನ್ನೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಗೃಹ ಸಚಿವರಾಗಿದ್ದಾಗ ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದಾರೆ ಅಂತ ಫೋಟೋ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೃಹ ಸಚಿವರಾಗಿ ಅವರು ಅಲ್ಲಿ ಹೋಗಿ ತಾಕೀತು ಮಾಡಿದ್ದರು. ಶಿವಾಜಿನಗರ ಸೆನ್ಸಿಟಿವ್ ಏರಿಯಾ ಇಲ್ಲಿ ಬಾಲ ಬಿಚ್ಚಿದ್ರೆ ಹುಷಾರ್ ಅಂತ ಮುಖದ ಮೇಲೆ ಉಗಿದಿದ್ದಾರೆ. ಅದನ್ನ ಹೇಳಲ್ಲ ಇವರು ಅಂದಿನ ಪೊಲೀಸ್ ಅಧಿಕಾರಿಗಳ ಜೊತೆಗೆ ಹೋಗಿದ್ದರು, ಶಾಖೆಗೆ ಹೋಗಿದ್ದಲ್ಲ ತಾಕೀತು ಮಾಡೋಕೆ ಹೋಗಿದ್ದು ಅಂತ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: RSS ಚಟುವಟಿಕೆ ಬ್ಯಾನ್‌ಗೆ ಸಚಿವ ಪ್ರಿಯಾಂಕ್ ಪತ್ರ – ಇತ್ತ ಕಾಂಗ್ರೆಸ್‌ ಶಾಸಕರ ಶಾಲೆಯಲ್ಲೇ ಪಥಸಂಚಲನ

    ಆರ್‌ಎಸ್‌ಎಸ್‌ಗೆ ಗಾಂಧಿ ಕೊಂದ ಇತಿಹಾಸ ಇದೆ
    ಆರ್‌ಎಸ್‌ಎಸ್‌ಗೆ (RSS) ಇತಿಹಾಸ ಇದೆ ಎಂಬ ಡಿಕೆಶಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ಅದರದ್ದೇ ಇತಿಹಾಸ ಇದೆ, ಅದು ಸುಳ್ಳಿನ ಇತಿಹಾಸ. ಅದನ್ನ ಆರ್‌ಎಸ್‌ಎಸ್‌ನವರು ಪಾಸಿಟಿವ್ ಆಗಿ ತಗೊಂಡಿದಾರೆ ಅಷ್ಟೇ. ಸುಳ್ಳಿನ ಇತಿಹಾಸ, ಗಾಂಧಿ ಕೊಂದ ಇತಿಹಾಸ ಇದೆ. ದೇಶದಲ್ಲಿ ಕೋಮು ವಿಷ ಬೀಜ ಬಿತ್ತಿದ ಇತಿಹಾಸ ಇದೆ. ಅವರಿಗೆ ಇತಿಹಾಸ ಗೊತ್ತಿಲ್ಲದಿದ್ರೆ ನಾನು ಇತಿಹಾಸದ ಪಾಠ ಮಾಡುತ್ತೇನೆ ಎಂದು ಕುಟುಕಿದ್ದಾರೆ.

    ಕೇರಳ ಹುಡುಗನ ಇನ್‌ಸ್ಟಾ ಗ್ರಾಮ್ ನೋಡಲಿ
    ಆರ್‌ಎಸ್‌ಎಸ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಉತ್ತರಿಸಿ, ಕೇರಳದ ಹುಡುಗ ಮಾಡಿದ್ದ ಅವನ ಇನ್ ಸ್ಟ್ರಾಗ್ರಾಮ್ ನೋಡಿದ್ರೆ ಗೊತ್ತಾಗುತ್ತೆ. ರಾಜ್ಯದಲ್ಲೂ ಒಬ್ಬರು ಪುಸ್ತಕ ಬರೆದಿದ್ದರು, ಹನುಮೇ ಗೌಡ ಅಂತ ಆರ್‌ಎಸ್‌ಎಸ್‌ನಲ್ಲಿ ಲೈಂಗಿಕ ಕಿರುಕುಳ ಕೊಡ್ತಾರೆ ಅಂತ ಬರೆದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ನಿಷೇಧಕ್ಕೆ ಪ್ರಿಯಾಂಕ್‌ ಖರ್ಗೆ ಪತ್ರ – ಸರ್ಕಾರದ ನಡೆಯ ಮೇಲೆ ನಿಗಾ ಇಡಲು ಬಿಜೆಪಿ ಸಮಿತಿ ರಚನೆ

  • ʻಏಯ್ ಕರಿ ಟೋಪಿ ಎಂಎಲ್‌ಎ ಬಾರಪ್ಪʼ – ಡಿಕೆಶಿ Vs ವರ್ಸಸ್ ಮುನಿರತ್ನ ನಡ್ವೆ ʻಕರಿ ಟೋಪಿʼ ಕದನ!

    ʻಏಯ್ ಕರಿ ಟೋಪಿ ಎಂಎಲ್‌ಎ ಬಾರಪ್ಪʼ – ಡಿಕೆಶಿ Vs ವರ್ಸಸ್ ಮುನಿರತ್ನ ನಡ್ವೆ ʻಕರಿ ಟೋಪಿʼ ಕದನ!

    ಬೆಂಗಳೂರು: ಡಿಸಿಎಂ ಡಿಕೆಶಿ ವರ್ಸಸ್ ಮುನಿರತ್ನ (DK Shivakumar Vs Munirathna) ನಡುವೆ ಮತ್ತೆ ಮಾತಿನ ಡಿಶುಂ ಡಿಶುಂ ಜೋರಾಗಿದೆ. ರಾಜಕೀಯ ಹಾದಿ ರಂಪ ಬೀದಿ ರಂಪ ಮಾಡಿಕೊಂಡಿದ್ದಾರೆ. ಕರಿ ಟೋಪಿ ಕಲಹ..! ಜಗಳ..ಜಟಾಪಟಿ ಜಿದ್ದಿಗೆ ಜೆ.ಪಿ.ಪಾರ್ಕ್ ಸಾಕ್ಷಿ ಆಯ್ತು. ಎಲ್ಲರೆದುರೇ ಹಗೆತನ ಪ್ರದರ್ಶನ ಆಗಿದ್ದು, ಡಿಕೆಶಿಗೆ ಸ್ಥಳದಲ್ಲೇ ಕೌಂಟರ್ ಕೊಟ್ಟಿದ್ದಾರೆ. ಹಾಗಾದ್ರೆ ಕಾಲು ಕೆರೆದು ಜಗಳ ತೆಗೆದ್ರಾ ಡಿಕೆಶಿ? ಏಯ್ ಕರಿ ಟೋಪಿ ಎಂಎಲ್‌ಎ ಎಂದು ಕರೆದಿದ್ದು ಏಕೆ? ಹಳೇ ದುಷ್ಮನಿಗಳ ನಯಾ ವಾರ್ ಸೀನ್ ಟು ಸೀನ್ ರೋಚಕ ಸ್ಟೋರಿ ಇಲ್ಲಿದೆ ನೋಡಿ.

    ಗೇಲಿ.. ಅಪಹಾಸ್ಯ.. ಲೇವಡಿ.. ಕುಚೋದ್ಯ.. ಕಿಚಾಯಿಸಿದ ಡಿಕೆ.. ಕೋಪಗೊಂಡ ಮುನಿರತ್ನ.. ಬಹಿರಂಗ ವೇದಿಕೆಯಲ್ಲೇ ಡಿಕೆಶಿ ವರ್ಸಸ್ ಮುನಿ ಡೈಲಾಗ್ ವಾರ್. ಕುಂದು-ಕೊರತೆ ಆಲಿಸುವ ಸಭೆಯಲ್ಲಿ ಅತಿರಂಜನೆಯ ಪ್ರಹಸನ. ಇವತ್ತು ಬೆಂಗಳೂರಿನ ಜೆಪಿ ಪಾರ್ಕ್ ನಲ್ಲಿ (Bengaluru JP Park) ದೊಡ್ಡ ಹೈಡ್ರಾಮಾವೇ ನಡೆಯಿತು.

    ಹಳೆ ದುಷ್ಮನಿ. ಹೊಸ ದಂಗಲ್ ಜೋರಾಗಿತ್ತು. ಬೇಕಂತಲೇ ಕೆಣಕಿದ ಡಿಕೆ. ಸೆಟೆದು ನಿಂತ ಮುನಿರತ್ನ. ಗಣವೇಷದಲ್ಲೇ ಕಾರ್ಯಕ್ರಮಕ್ಕೆ ಬಂದಿದ್ದ ಮುನಿರತ್ನರನ್ನ `ಕರಿಟೋಪಿ ಎಂಎಲ್‌ಎ’ (Kari Topi MLA) ಬಾ ಎಂದು ಡಿಕೆಶಿ ಅಣಕಿಸಿದ್ರು. ಈ ವೇಳೆ ಕೋಪಗೊಂಡು ಮುನಿರತ್ನ ವೇದಿಕೆಗೆ ನುಗ್ಗಿದ್ರು. ಆಗ ಗಲಾಟೆ ಜೋರಾಯ್ತು.

    ಯೆಸ್, ಜೆ.ಪಿ ಪಾರ್ಕ್‌ನಲ್ಲಿ ಇವತ್ತು ಡಿಕೆಶಿ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ರು. ಆದ್ರೆ ಸ್ಥಳೀಯ ಶಾಸಕ, ಸಂಸದರಿಗೆ ಆಹ್ವಾನ ಇಲ್ಲ ಎಂದು ಮುನಿರತ್ನ ಆಕ್ರೋಶ ಹೊರಹಾಕಿದ್ರು. ನಡಿಗೆ ಮುಗಿಸಿ ವೇದಿಕೆ ಕಾರ್ಯಕ್ರಮಕ್ಕೆ ಡಿಕೆಶಿ ಅಗಮಿಸಿದಾಗ ಮುನಿರತ್ನ ಪ್ರೋಟೋಕಾಲ್ ಪ್ರಶ್ನಿಸಿದ್ದಾರೆ. ಆಗ ಮೈಕ್ ಕಿತ್ತುಕೊಂಡು ಮುನಿರತ್ನ ಆಕ್ರೋಶ ಹೊರಹಾಕ್ತಾರೆ. ಆದ್ರೆ ಡಿಕೆಶಿ ಅಮೇಲೆ ಮಾತಾಡೋಣ ಎಂದಷ್ಟೇ ಹೇಳ್ತಾರೆ. ಅಲ್ಲಿ ನಡೆದಿದ್ದೇನು..?

    ಮುನಿರತ್ನ: ಒಂದೇ ಒಂದು ನಿಮಿಷ ಮೈಕ್ ಕೊಡಿ
    ಡಿಕೆಶಿ: ಕೂತುಕೊಳ್ಳಿ, ಅಮೇಲೆ ಮಾತಾಡೋಣ
    ಮುನಿರತ್ನ: ನೀವ್ ಮೈಕ್ ಕೊಡಿ ನಾನ್ ಮಾತಾಡ್ತೀನಿ
    ಮುನಿರತ್ನ: ಎಲ್ಲ ಮತದಾರ ದೇವರುಗಳಿಗೆ ನಮಸ್ಕಾರ, ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇಲ್ಲ, ಆದರೂ ಬೆಂಗಳೂರಿನ ಓರ್ವ ಪ್ರಜೆಯಾಗಿ ಬಂದಿದ್ದೇನೆ, ನಿಮ್ಮ ಜೊತೆ ನಾನು ಕೂತುಕೊಳ್ತೇನೆ.
    ಮುನಿರತ್ನ: ಇದು ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯಕ್ರಮ.. ಒಬ್ಬ ಶಾಸಕನಿಗೆ ಏನು ಗೌರವ ಕೊಡಬೇಕೋ ಕೊಟ್ಟಿದ್ದಾರೆ. ಅವರು ಆಹ್ವಾನ ಮಾಡಿದ್ದಾರೆ ಅದಕ್ಕೆ ಸಂತೋಷ.  ಒಬ್ಬ ಸಂಸದರು ಇಲ್ಲಿ ಇಲ್ಲ. ಶಾಸಕರು ಇಲ್ಲ. ಇದು ಸಾರ್ವಜನಿಕರ ಕುಂದುಕೊರತೆ ಸಭೆನಾ ಅಂತಾ ನನಗೆ ಗೊತ್ತಿಲ್ಲ. ನೀವು ನನಗೆ ಅವಮಾನ ಮಾಡ್ತಿರೋದು ಮೊದಲನೇ ತಪ್ಪು. ಇದು ಸರ್ಕಾರದ ಕಾರ್ಯಕ್ರಮ. ಮುಖ್ಯ ಆಯುಕ್ತರೇ ಈವರೆಗೂ ನನಗೆ ಆಹ್ವಾನ ಕೊಟ್ಟಿಲ್ಲ. ನಿಮಗೆ ಗೊತ್ತಿರಲಿ. ರಾಜಕೀಯನ ಆಮೇಲೆ ಮಾತಾಡ್ರಿ.
    ಡಿಕೆಶಿ: ನಾವು ಆಮೇಲೆ ಮಾತಾಡೋಣ..

    ಮುನಿರತ್ನ: ರೀ ಒಬ್ಬ ಎಂಪಿ ಫೋಟೋ ಇಲ್ಲ. ಒಬ್ಬ ಎಂಎಲ್‌ಎ ಫೋಟೋ ಇಲ್ಲದೆ ಇದು ಒಂದು ಪಬ್ಲಿಕ್ ಕಾರ್ಯಕ್ರಮನಾ… ಇದು ಸಾರ್ವಜನಿಕರ ಕುಂದುಕೊರತೆ ಕಾರ್ಯಕ್ರಮನಾ… ಅಥವಾ ಇದು ಕಾಂಗ್ರೆಸ್ ಕಾರ್ಯಕ್ರಮನಾ.. ಇದು ಹೆಂಗೇ ಸಾರ್ವಜನಿಕರ ಕಾರ್ಯಕ್ರಮ ಆಗುತ್ತೆ?

    ಹೀಗೆ ಮುನಿರತ್ನ ವೇದಿಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಡಿಕೆಶಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ರು. ಆಗ ಮುನಿರತ್ನ ಅಲ್ಲೇ ಕುಳಿತು ಪ್ರತಿಭಟನೆ ನಡೆಸಲು ಮುಂದಾದ್ರು. ಆಗ ಡಿಕೆಶಿ ಬೆಂಬಲಿಗರು ನುಗ್ಗಲು ಯತ್ನಿಸಿದ್ರು. ತಕ್ಷಣ ಪೊಲೀಸರು ಮುನಿರತ್ನರನ್ನ ಹಿಡಿದುಕೊಂಡು ಕಾರ್ಯಕ್ರಮ ಸ್ಥಳದಿಂದ ಹೊರಗೆ ಬರಲು ಯತ್ನಿಸಿದ್ರು. ಆಗ ಒಂದ್ಕಡೆ ಡಿಕೆ ಡಿಕೆ ಘೋಷಣೆ ಮೊಳಗಿದ್ರೆ, ಇನ್ನೊಂದು ಕಡೆ ಆರ್‌ಎಸ್‌ಎಸ್ ವಿರೋಧಿ ಡಿಕೆ ಅಂತಾ ಘೋಷಣೆ ಕೂಗಿದ್ರು. ಆಗ ಪರಿಸ್ಥಿತಿ ಬಿಗಾಡಾಯಿಸಿತು.

    ಒಟ್ನಲ್ಲಿ ಡಿಸಿಎಂ, ಎಂಎಲ್‌ಎ ನಡುವಿನ ವೈಯುಕ್ತಿಕ ವಾರ್ ಕರಿಟೋಪಿ ಕೂಗಿನತ್ತ ತಿರುಗಿದ್ದು, ಡಿಸಿಎಂ, ಮುನಿರತ್ನ ಗಲಾಟೆ ಟ್ವಿಸ್ಟ್ ಪಡೆದುಕೊಂಡಿದ್ದು ಸದ್ಯಕ್ಕೆ ಎಂಡ್ ಆಗುವ ಲಕ್ಷಣ ಇಲ್ಲ ಅನ್ಸುತ್ತೆ.

  • ಕರಿಟೋಪಿ ಮಾತಿನ ಕಲಹ – ಮುನಿರತ್ನ ಬೆಂಬಲಕ್ಕೆ ನಿಂತ ಬಿಜೆಪಿ ನಾಯಕರು, ಡಿಕೆಶಿ ವಿರುದ್ಧ ಕಿಡಿ

    ಕರಿಟೋಪಿ ಮಾತಿನ ಕಲಹ – ಮುನಿರತ್ನ ಬೆಂಬಲಕ್ಕೆ ನಿಂತ ಬಿಜೆಪಿ ನಾಯಕರು, ಡಿಕೆಶಿ ವಿರುದ್ಧ ಕಿಡಿ

    ಬೆಂಗಳೂರು: ಡಿಕೆಶಿ- ಮುನಿರತ್ನ ನಡುವೆ ಮುಗಿಯದ ರಾಜಕೀಯ ಕದನ. ಜೆ.ಪಿ.ಪಾರ್ಕ್‌ನಲ್ಲಿ (JP Park) ನಡೆದ ಕರಿಟೋಪಿ ಕಲಹಕ್ಕೆ ಬಿಜೆಪಿ ನಾಯಕರು ಕೆಂಡಕಾರಿದ್ದಾರೆ. ಡಿಕೆಶಿ ವಿರುದ್ಧ ಮುನಿರತ್ನ (Munirathna) ಆಕ್ರೋಶ ಹೊರಹಾಕಿದ್ರೆ, ಗಲಾಟೆ ಮಾಡಲು ಬಂದಿದ್ದಾರೆ ಎಂದು ಡಿಕೆಶಿ (DK Shivakumar) ಟಾಂಗ್ ಕೊಟ್ಟಿದ್ದಾರೆ.

    ಜೆ.ಪಿ.ಪಾರ್ಕ್‌ನಲ್ಲಿ ನಡೆದ ಕರಿಟೋಪಿ ಕಲಹ ಘಟನೆಗೆ ಡಿಕೆಶಿ ಟಕ್ಕರ್ ಕೊಟ್ಟಿದ್ದಾರೆ. ವೇದಿಕೆಯಲ್ಲಿ ಡಿಕೆಶಿ ಕೈಯಿಂದಲೇ ಮೈಕ್ ಕಿತ್ತುಕೊಂಡು ಆಕ್ರೋಶ ಹೊರಹಾಕಿದ ಮುನಿರತ್ನ ವಿರುದ್ಧ ಡಿಕೆಶಿ ಮಾತನಾಡಿದ್ದಾರೆ. ಸ್ಥಳೀಯ ಎಂಎಲ್‌ಎಗೆ ತಾಳ್ಮೆ ಕಡಿಮೆ. ಈ ಕಾರ್ಯಕ್ರಮ ಹಾಳು ಮಾಡೋಕೆ ಬಂದಿದ್ದಾರೆ. ಇಂಥವರನ್ನ ಗೆಲ್ಲಿಸಿದ್ದೀರಲ್ಲ ನಿಮ್ಮ ತಪ್ಪು. ಮುಂದೆ ಹೀಗೆ ಮಾಡಬೇಡಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    ಇದೇ ವೇಳೆ ರಾಜರಾಜೇಶ್ವರಿನಗರದ ಪರಾಜಿತ ಅಭ್ಯರ್ಥಿ ಕುಸುಮಾ ಮಾತನಾಡಿ, ಕಾರ್ಯಕ್ರಮಕ್ಕೆ ಶಾಸಕರು ಗಲಾಟೆ ಮಾಡಲೆಂದೇ ಬಂದಿದ್ದಾರೆ. ಗಲಾಟೆ ಅನ್ನೋದು ಶಾಸಕರಿಗೆ ಅಭ್ಯಾಸ ಆಗಿದೆ. ಅವಮಾನ ಮಾಡೋ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. ರಾಯಚೂರಿನಲ್ಲಿ ಮಾತನಾಡಿದ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಡಿಕೆಶಿ ಪರ ಬ್ಯಾಟಿಂಗ್ ನಡೆಸಿದ್ದು, ಕರಿಟೋಪಿ ಎಂದು ಕರೆದಿರೋದು ಸಲಿಗೆ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ಇದೆಲ್ಲದರ ನಡುವೆ ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿ, ನನ್ನ ಕರಿ ಟೋಪಿಯನ್ನ ಕಿತ್ತುಕೊಂಡಿದ್ದಾರೆ, ಹಲ್ಲೆ ಮಾಡಿದ್ದಾರೆ. ಚನ್ನಪಟ್ಟಣ, ಕನಕಪುರದಿಂದ ರೌಡಿಶೀಟರ್‌ಗಳನ್ನು ಕರೆಸಿದ್ದಾರೆ ಎಂದು ಮುನಿರತ್ನ ಗಂಭೀರವಾಗಿ ಆರೋಪಿಸಿದರು. ಇದು ಕಾಂಗ್ರೆಸ್ ಫಂಕ್ಷನ್. ಏಯ್ ಟೋಪಿ ಬಾರೋ ಇಲ್ಲಿ ಅಂತಾ ಅವಮಾನ ಮಾಡಿದ್ದಾರೆ. ನಾನು ಇವತ್ತು ಬದುಕಿದ್ದೀನಿ ಅಂದ್ರೆ ಪೊಲೀಸರೇ ಕಾರಣ ಎಂದರು. ಡಿಕೆಶಿ ಹೊರಡುವ ತನಕ ಜೆ.ಪಿ.ಪಾರ್ಕ್‌ನಲ್ಲೇ ಇದ್ದ ಮುನಿರತ್ನ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರೌಡಿಗಳನ್ನು ಕರೆಸಿ ಹಲ್ಲೆ, ಪೊಲೀಸರಿಂದ ನಾನು ಬದುಕಿದ್ದೇನೆ: ಡಿಕೆಶಿ ವಿರುದ್ಧ ಮುನಿರತ್ನ ಆಕ್ರೋಶ

    ದೇ ವೇಳೆ ಮುನಿರತ್ನ ಬೆಂಬಲಕ್ಕೆ ಬಿಜೆಪಿ ನಾಯಕರು ನಿಂತಿದ್ದು, ಕರಿಟೋಪಿ ಕೂಗಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. ಮುಸ್ಲಿಂ ಟೋಪಿಗೆ ಜಾಲರಿ ಟೋಪಿ ಅಂತಾ ಕರೀರಿ ಅಂತಾ ಜೋಷಿ ಟಕ್ಕರ್ ಕೊಟ್ರೆ, ಡಿಕೆಶಿಗೆ ಮದ ಅಂತಾ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ

    ಒಟ್ನಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಪೊಲಿಟಿಕಲ್ ವಾರ್‌ಗೆ ಸಾರ್ವಜನಿಕ ಸಭೆ ವೇದಿಕೆಯಾಗಿದ್ದು, ವಿಪರ್ಯಾಸವೇ ಆಗಿದ್ದು, ಕರೆದು ಕೆಣಕಿದ್ರಾ ಡಿಕೆಶಿ? ಆರ್‌ಆರ್‌ನಗರ ವಾರ್ ಎಲೆಕ್ಷನ್‌ಗಷ್ಟೇ ಸೀಮಿತವಾಗದೇ ಆಗಾಗ್ಗೆ ಬೆಂಕಿ ಹೊತ್ತಿಕೊಳ್ಳುವ ರಾಜಕಾರಣ ಏಕೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ. ಇದನ್ನೂ ಓದಿ: ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಬಂದ್ರೆ 100% ಆರ್‌ಎಸ್‌ಎಸ್‌ ಬ್ಯಾನ್‌: ಎಂ. ಲಕ್ಷ್ಮಣ್‌

  • ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ಬೆಂಗಳೂರು: ಸ್ಥಳೀಯ ಶಾಸಕರಿಗೆ ತಾಳ್ಮೆ ಇಲ್ಲ. ಕಾರ್ಯಕ್ರಮ ಹಾಳು ಮಾಡಲೆಂದೇ ಆಗಮಿಸಿದ್ದರು. ಇಂತವರನ್ನು ಗೆಲ್ಲಿಸಿದ್ದು ನಿಮ್ಮ ತಪ್ಪು. ಮುಂದೆಯಾದರೂ ಸರಿಪಡಿಸಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮುನಿರತ್ನ (Munirathna) ಅವರಿಗೆ ಟಾಂಗ್‌ ನೀಡಿದ್ದಾರೆ.

    ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ (JP Park) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೇನು ಸರ್ಕಾರದ ಶಿಲಾನ್ಯಾಸ ಮಾಡುವ ಕಾರ್ಯಕ್ರಮ ಅಲ್ಲ. ಇದು ಜನರ ಸಮಸ್ಯೆ ಆಲಿಸುವ ಕಾರ್ಯಕ್ರಮ. ಎಲ್ಲರಿಗೆ ಏನು ಗೌರವ ಕೊಡಬೇಕು ಅದು ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:  ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ

    ಆರ್‌ಎಸ್‌ಎಸ್‌ (RSS) ಸಂಸ್ಥೆಗೆ ಅಗೌರವ ತರುವ ಕೆಲಸ ಮುನಿರತ್ನ ಮಾಡಿದ್ದಾರೆ. ಆರ್‌ಎಸ್‌ಎಸ್‌ಗೆ ಒಂದು ಇತಿಹಾಸ ಇದೆ ಅವರೇನು ಮಾಡಬೇಕು ಮಾಡುತ್ತಿದ್ದಾರೆ. ಅವರ ಹೆಸರನ್ನು ಕೆಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಜಿಬಿಎ ಸಭೆಗೆ ಬಂದಿಲ್ಲ. ಅಲ್ಲಿ ಬಂದು ಸಮಸ್ಯೆ ಹೇಳಿಲ್ಲ. ಇಲ್ಲಿ ಬಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಬೆಂಗಳೂರು ನಾಗರೀಕರ ಜೊತೆ ನಡೆಯಬೇಕು ಎಂದು ಎಲ್ಲರಿಗೂ ಆಹ್ವಾನ ಕೊಟ್ಟಿದ್ದೇನೆ. ಬೆಳಗ್ಗೆಯಿಂದ ಎರಡು ತಾಸು ನಡೆದು ಸಮಸ್ಯೆ ಕೇಳಿದ್ದೇನೆ. ಎಲ್ಲರ ಮಾಹಿತಿ, ಫೋನ್ ನಂಬರ್ ತಗೊಂಡಿದ್ದೇನೆ ಅವರ ಸಮಸ್ಯೆ ಬಗೆಹರಿಸುತ್ತೇನೆ. ಅವರನ್ನು ಸಂಪರ್ಕ ಮಾಡುವ ಕೆಲಸ ಮಾಡುತ್ತೇನೆ. ಉಳಿದ ಜನರು 1533ಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಬಹುದು ಎಂದರು. ಇದನ್ನೂ ಓದಿ:  ರೌಡಿಗಳನ್ನು ಕರೆಸಿ ಹಲ್ಲೆ, ಪೊಲೀಸರಿಂದ ನಾನು ಬದುಕಿದ್ದೇನೆ: ಡಿಕೆಶಿ ವಿರುದ್ಧ ಮುನಿರತ್ನ ಆಕ್ರೋಶ

    ಗುತ್ತಿಗೆದಾರರ ಬಿಲ್ ಬಾಕಿ ಕ್ಲೀಯರ್‌ ಮಾಡಲು ಕಮಿಷನ್ ಕೇಳುತ್ತಿದ್ದಾರೆ ಎಂಬುದನ್ನು ಕೇಳಲ್ಪಟ್ಟೆ. ಜೆಪಿ ಪಾರ್ಕ್‌ನಲ್ಲೂ ಕೂಡ ಸಾಕಷ್ಟು ಕೆಲಸ ನಿಂತು ಹೋಗಿದೆ. ಶೌಚಾಲಯ, ಸ್ವಿಮ್ಮಿಂಗ್ ಪೂಲ್, ಟ್ರ‍್ಯಾಕ್ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ. ಮಳೆ ನೀರು, ರಸ್ತೆ ಎಲ್ಲಾ ಸಮಸ್ಯೆಯನ್ನು ಬಗೆ ಹರಿಸುತ್ತೇನೆ. ಸಾರ್ವಜನಿಕರ ಧ್ವನಿ ಸರ್ಕಾರಕ್ಕೆ ಮುಟ್ಟಬೇಕು. ಅದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.

  • ರೌಡಿಗಳನ್ನು ಕರೆಸಿ ಹಲ್ಲೆ, ಪೊಲೀಸರಿಂದ ನಾನು ಬದುಕಿದ್ದೇನೆ: ಡಿಕೆಶಿ ವಿರುದ್ಧ ಮುನಿರತ್ನ ಆಕ್ರೋಶ

    ರೌಡಿಗಳನ್ನು ಕರೆಸಿ ಹಲ್ಲೆ, ಪೊಲೀಸರಿಂದ ನಾನು ಬದುಕಿದ್ದೇನೆ: ಡಿಕೆಶಿ ವಿರುದ್ಧ ಮುನಿರತ್ನ ಆಕ್ರೋಶ

    ಬೆಂಗಳೂರು: ಚನ್ನಪಟ್ಟಣ ಕನಕಪುರದಿಂದ ರೌಡಿಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಇವತ್ತು ಬದುಕಿದ್ದೇನೆ ಅಂದರೆ ಪೊಲೀಸರೇ ಕಾರಣ ಎಂದು ಹೇಳಿ ಡಿಸಿಎಂ ಡಿಕೆಶಿವಕುಮಾರ್‌ (DK Shivakumar) ವಿರುದ್ಧ ಆರ್‌ಆರ್‌ ನಗರದ ಬಿಜೆಪಿ ಶಾಸಕ ಮುನಿರತ್ನ (Munirathna) ಆಕ್ರೋಶ ಹೊರಹಾಕಿದ್ದಾರೆ.

    ಮತ್ತಿಕೆರೆ ಜೆಪಿ ಪಾರ್ಕ್‌ನಲ್ಲಿ (JP Park) ಡಿಕೆಶಿ ಭಾಗವಹಿಸಿದ್ದ ಬೆಂಗಳೂರು ನಡಿಗೆ ಕಾರ್ಯಕ್ರಮದಿಂದ ಹೊರಬಂದು ಮಾತನಾಡಿದ ಅವರು, ರೌಡಿಶೀಟರ್‌ಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದಾರೆ. ಅವರ ತಮ್ಮ ಸೋತಾಗಿನಿಂದ ನಾನು ಟಾರ್ಗೆಟ್‌ ಆಗಿದ್ದೇನೆ. ರೌಡಿಶೀಟರ್‌ಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.

    ನನಗೆ ಆಹ್ವಾನ ಬಂದಿಲ್ಲ ಎಂದು ಮೂರು ದಿನ ಹಿಂದೆ ನಾನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಸುದ್ದಿಗೋಷ್ಠಿ ಬಳಿಕವಾದರೂ ಸಂಸದರಿಗೆ, ಶಾಸಕರಿಗೆ ಆಹ್ವಾನ ಮಾಡಬೇಕಿತ್ತು. ಆಹ್ವಾನ ನೀಡದ್ದಕ್ಕೆ ನಾನು ಪ್ರಶ್ನೆ ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮ ಆಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರ ಫೋಟೋ ಹಾಕಬೇಕು. ಆದರೆ ಎಲ್ಲಿಯೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್‌ ಕಾರ್ಯಕ್ರಮವೇ ಅಥವಾ ಸರ್ಕಾರಿ ಕಾರ್ಯಕ್ರಮವೇ? ಇದನ್ನು ಪ್ರಶ್ನೆ ಮಾಡಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದರು. ಇದನ್ನೂ ಓದಿ:  ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ

    ನನ್ನ ಮೇಲೆ ಮತ್ತಷ್ಟು ಕೇಸ್ ಹಾಕಲಿಕ್ಕೆ ತಯಾರಿ ಮಾಡುತ್ತಿದ್ದಾರೆ. ರೇಪ್ ಕೇಸ್ ಆಯ್ತು ದಲಿತನಿಂದನೆ ಆಯ್ತು ಈಗ ಪೋಕ್ಸೋ ಕೇಸ್‌ ಹಾಕಲಿಕ್ಕೆ ರೆಡಿ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಕೊಡಿಸುವುದು ಅವರ ಉದ್ದೇಶ. ಬೆಳಗ್ಗೆಯಿಂದ ಅವರ ಪಕ್ಕ ಇರುವವರನ್ನು ಶಾಸಕರನ್ನಾಗಿ ಮಾಡಲು ಅವರು ಬಹಳ ಪ್ರಯತ್ನ ನಡೆಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವುದಿಲ್ಲ. ನಾನು ಸತ್ತರೂ ಇಲ್ಲೇ ಸಾಯುತ್ತೇನೆ. ರಾಜೀನಾಮೆ ನೀಡುವ ಮಾತೇ ಇಲ್ಲ ಎಂದು ಸಿಟ್ಟು ಹೊರಹಾಕಿದರು.

     

    ಇವತ್ತು ಆರ್‌ಎಸ್‌ಎಸ್‌ (RSS) ಸ್ಥಾಪನೆಯಾಗಿ ನೂರು ವರ್ಷ ಆಗಿದ್ದಕ್ಕೆ ನಾನು ಪಥಸಂಚಲನದಲ್ಲಿ ಭಾಗಿಯಾಗಿ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದೆ. ಈ ಕ್ಷೇತ್ರದ ಪ್ರಜೆಯಾಗಿ ಜನರ ಮಧ್ಯೆ ಕುಳಿತಿದ್ದರೆ, ಏಯ್‌ ಕರಿ ಟೋಪಿ ಎಂಎಲ್‌ಎ ಇಲ್ಲಿ ಬಾರಪ್ಪ ಎಂದು ಕರೆದು ಆರ್‌ಎಸ್‌ಎಸ್‌ ಬಟ್ಟೆಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹಾಕಿದರು.

    ಇತಂಹ ರಾಜಕೀಯ ವ್ಯಕ್ತಿ ಮತ್ತೆ ಬರುವುದು ಬೇಡ ಎಂದು ದೇವರಲ್ಲಿ ಬೇಡಕೋಬೇಕು. ಎಷ್ಟೋ ಜನರ ಮನೆಗಳನ್ನು ಇವರು ಹಾಳು ಮಾಡಿದ್ದಾರೆ ಎಂದು ಡಿಕೆಶಿ ವಿರುದ್ಧ ಆರೋಪ ಮಾಡಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಬಳಿಕ ಮುನಿರತ್ನ ಅವರು ಜೆಪಿ ಪಾರ್ಕ್ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

  • ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ

    ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ

    ಬೆಂಗಳೂರು: ಮತ್ತಿಕರೆಯ ಜೆಪಿ ಪಾರ್ಕ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ʼಬೆಂಗಳೂರು ನಡಿಗೆʼ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ (Munirathna) ಅವರು ವೇದಿಕೆ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

    ಡಿಕೆಶಿವಕುಮಾರ್‌ ಅವರು ಇಂದು ವಾಕ್‌ ಮಾಡುತ್ತಾ ಜೆಪಿ ಪಾರ್ಕ್‌ಗೆ (JP Park) ಆಗಮಿಸಿದರು. ಆರ್‌ಎಸ್‌ಎಸ್‌ ಪಥಸಂಚಲನ ಮುಗಿಸಿದ್ದ ಶಾಸಕ ಮುನಿರತ್ನ ಸಮವಸ್ತ್ರದಲ್ಲೇ ಜನರ ಮಧ್ಯೆ ಕುಳಿತಿದ್ದರು. ಇದನ್ನೂ ಓದಿ:  ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ – ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆ ಎಂಟ್ರಿ

     

    ಮುನಿರತ್ನ ಅವರು ಕಾರ್ಯಕ್ರಮದಲ್ಲಿ ಕುಳಿತಿರುವುದನ್ನು ನೋಡಿದ ಡಿಕೆಶಿ ಅವರು ಕರಿ ಟೋಪಿ ಎಂಎಎಲ್ ಬಾರಪ್ಪ ಎಂದು ವೇದಿಕೆಗೆ ಆಹ್ವಾನಿಸಿದರು. ಆಹ್ವಾನಿಸಿದ ಹಿನ್ನೆಲೆಯಲ್ಲಿ ಮುನಿರತ್ನ ವೇದಿಕೆಗೆ ಹೋಗಿ ಡಿಕೆಶಿ ಬಳಿ ಮೈಕ್‌ ಕೇಳಿದರು. ಆದರೆ ಡಿಕೆಶಿ ಮೈಕ್‌ ನೀಡದೇ ಇಲ್ಲಿ ಕುಳಿತುಕೊಳ್ಳಿ ಎಂದರು. ಇದಕ್ಕೆ ಒಪ್ಪದ ಮುನಿರತ್ನ ಮೈಕ್‌ ನೀಡುವಂತೆ ಕೇಳಿದರು. ಕೊನೆಗೆ ಮುನಿರತ್ನ ಅವರು ಮೈಕ್‌ ಪಡೆದು, ಆರ್‌ಎಸ್‌ಎಸ್‌ ಪಥಸಂಚಲನ ಮುಗಿಸಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ನನಗೆ ಈ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಇಲ್ಲ. ಆದರೆ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರಣ ನಾನೊಬ್ಬ ಪ್ರಜೆಯಾಗಿ ಭಾಗವಹಿಸಿದ್ದೇನೆ ಎಂದು ಹೇಳಿ ವೇದಿಕೆಯಿಂದ ಇಳಿದು ಮತ್ತೆ ಜನರ ಮಧ್ಯೆ ಕುಳಿತರು.

    ಸಭಾ ಕಾರ್ಯಕ್ರಮದಲ್ಲಿ ನಿರೂಪಕರು ಮುನಿರತ್ನ ಅವರನ್ನು ಸ್ವಾಗಿಸಿ ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ವೇದಿಕೆ ಏರಿದ ಮುನಿರತ್ನ, ನಾನೊಬ್ಬ ಜನಪ್ರತಿನಿಧಿಯಾಗಿದ್ದೇನೆ ನನಗೆ ಆಹ್ವಾನ ಇಲ್ಲ. ಈ ಕ್ಷೇತ್ರದ ಸಂಸದರಿಗೂ ಆಹ್ವಾನ ಇಲ್ಲ. ಇದು ಸರ್ಕಾರಿ ಕಾರ್ಯಕ್ರಮವೇ ಅಥವಾ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಅಸಮಾಧಾನ ಹೊರಹಾಕಿದರು. ಮುನಿರತ್ನ ಆಕ್ರೋಶ ಹೊರ ಹಾಕುತ್ತಿದ್ದಂತೆ ಅಧಿಕಾರಿಗಳು ಮತ್ತು ಪೊಲೀಸರು ಮುನಿರತ್ನ ಅವರನ್ನು ಸುತ್ತುವರೆದು ಮೈಕ್‌ ಪಡೆದುಕೊಂಡರು.

    ಮುನಿರತ್ನ ಮಾತನಾಡುತ್ತಿದ್ದಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದರು.

  • ಮಹಿಳೆ ಮೇಲೆ ಅತ್ಯಾಚಾರ ಆರೋಪ ಕೇಸ್ – ಶಾಸಕ ಮುನಿರತ್ನಗೆ ಬಿಗ್ ರಿಲೀಫ್

    ಮಹಿಳೆ ಮೇಲೆ ಅತ್ಯಾಚಾರ ಆರೋಪ ಕೇಸ್ – ಶಾಸಕ ಮುನಿರತ್ನಗೆ ಬಿಗ್ ರಿಲೀಫ್

    ಬೆಂಗಳೂರು: ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ (Rape Case) ಶಾಸಕ ಮುನಿರತ್ನಗೆ (Munirathna) ಬಿಗ್ ರಿಲೀಫ್ ಸಿಕ್ಕಿದೆ.

    ಸಾಕ್ಷ್ಯಧಾರ ಕೊರತೆ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ(SIT) ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ (B Report) ಸಲ್ಲಿಕೆ ಮಾಡಿದ್ದಾರೆ.

    ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ರು. ಅಲ್ಲದೇ ವಿಡಿಯೋದಲ್ಲಿ ನಿದ್ರೆ ಮಾತ್ರೆ ಸೇವಿಸಿ, ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆ ವಿಡಿಯೋ ಮಾಡಿದ್ದರು. ತನಿಖೆ ನಡೆಸಿದ್ದ ಎಸ್‌ಐಟಿ ಪೊಲೀಸರು ಇದೀಗ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.

    ಮಹಿಳೆ ನಿದ್ರೆ ಮಾತ್ರೆ ಸೇವಿಸುವಂತೆ ವಿಡಿಯೋ ಮಾಡಲು 8 ಬಾರಿ ರಿಹರ್ಸಲ್ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ವೈದ್ಯಕೀಯ ತಪಾಸಣೆ ವೇಳೆ ನಿದ್ರೆ ಮಾತ್ರೆ ಸೇವಿಸಿರೋದೋಕೆ ದೇಹದಲ್ಲಿ ಯಾವುದೇ ಅಂಶ ಇಲ್ಲ ಎಂದು ವರದಿ ಬಂದಿದೆ. ಮಹಿಳೆ ಮಾಡಿರೋ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಇದೇ ವೇಳೆ ಇಂದು ಶಾಸಕ ಮುನಿರತ್ನ ವಿರುದ್ಧದ ಸಾಮೂಹಿಕ ಅತ್ಯಾಚಾರ ಕೇಸ್ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೂಡ ನಡೆಯಿತು. ಇದನ್ನೂ ಓದಿ: ಶಿವಮೊಗ್ಗ | ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

    ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಶಾಸಕ ಮುನಿರತ್ನ ಪರ ವಕೀಲ, ಎಸ್‌ಐಟಿ ಪೊಲೀಸರು ಆರೋಪ ಸಾಬೀತಾಗಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ಹೇಳಿದರು. ಆದರೆ ಬಿ ರಿಪೋರ್ಟ್ ಅನ್ನು ಕೋರ್ಟ್ ಇನ್ನೂ ಅಂಗೀಕರಿಸಿಲ್ಲವೆಂದು ಎಸ್‌ಪಿಪಿ ಮಾಹಿತಿ ನೀಡಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಮುನಿರತ್ನ ಬಂಧಿಸದಂತೆ ನೀಡಿದ್ದ ಮಧ್ಯಂತರ ತಡೆ ವಿಸ್ತರಿಸಿದೆ.

  • ಅವರದ್ದೇ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದ ಶಾಸಕನ ಬಗ್ಗೆ ಬಿಜೆಪಿಯವರು ಮಾತಾಡಲಿ: ಡಿಕೆ ಸುರೇಶ್

    ಅವರದ್ದೇ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದ ಶಾಸಕನ ಬಗ್ಗೆ ಬಿಜೆಪಿಯವರು ಮಾತಾಡಲಿ: ಡಿಕೆ ಸುರೇಶ್

    ಬೆಂಗಳೂರು: ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಮಾಡ್ತಿರೋ ಅವರದ್ದೇ ಶಾಸಕ ಮುನಿರತ್ನ(Munirathna) ಬಗ್ಗೆ ಬಿಜೆಪಿ ನಾಯಕರೇ ಉತ್ತರ ಕೊಡಬೇಕು ಎಂದು ಮಾಜಿ ಸಂಸದ ಡಿಕೆ ಸುರೇಶ್(D K Suresh) ಹೇಳಿದರು.

    ಆರ್‌ಆರ್ ನಗರದ(RR Nagar) ಬಿಜೆಪಿ ಶಾಸಕ ಮುನಿರತ್ನ ಮೇಲೆ ಮತ್ತೊಂದು ಕೇಸ್ ದಾಖಲು ಆಗಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಆದ ಅವಮಾನ ಹಾಗೂ ಅವರ ಮೇಲಾಗಿರೋ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ. ಆತ್ಮಹತ್ಯೆಗೂ ಪ್ರಯತ್ನ ಪಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್‌

    ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಮಾನ್ಯ ಶಾಸಕರು ಕಿರುಕುಳ ಕೊಡ್ತಿದ್ದಾರೆ. ಶಾಸಕರ ಹೆಸರಿನಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಇದರ ಬಗ್ಗೆ ಬಿಜೆಪಿ(BJP) ನಾಯಕರು ಉತ್ತರ ಕೊಡಬೇಕು. ಮುನಿರತ್ನರನ್ನ ಎಲ್ಲಾ ಕಡೆ ಬಿಜೆಪಿ ನಾಯಕರು ಫ್ರಂಟ್ ಲೈನ್‌ನಲ್ಲಿ ಕರೆದುಕೊಂಡು ತಿರುಗಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಉತ್ತರ ಹೇಳಿದ್ರೆ ಒಳ್ಳೆಯದು ಎಂದರು. ಇದನ್ನೂ ಓದಿ: ಬೆಂಗ್ಳೂರು ರಸ್ತೆಗೆ ಟೈಟಾನಿಕ್ ಬೋಟ್ ಇಳಿಸಿದ ಊಬರ್!

  • ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದು ಡಿಕೆಶಿ – ಮುನಿರತ್ನ ಬಾಂಬ್

    ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದು ಡಿಕೆಶಿ – ಮುನಿರತ್ನ ಬಾಂಬ್

    – ನಾನು ರೇಪ್ ಮಾಡಿದ್ದರೇ ಸರ್ವನಾಶ ಆಗ್ತೀನಿ ಎಂದ ಶಾಸಕ

    ಬೆಂಗಳೂರು: ಸಿಬಿಐ ತನಿಖೆ ಮಾಡಿಸಿ ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದು ಡಿಕೆ ಶಿವಕುಮಾರ್ (DK Shivakumar) ಎಂದು ಶಾಸಕ ಮುನಿರತ್ನ (Munirathna) ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಮೀಷನರ್‌ಗೆ ಹೇಳಿ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದರು. ಅಟ್ರಾಸಿಟಿ ಕೇಸಲ್ಲಿ ಕೋರ್ಟ್‌ಗೆ ಹೋಗಿದ್ದಾಗ ರಾಜೀನಾಮೆ ಕೊಟ್ಟರೆ ರೇಪ್ ಕೇಸ್ ಹಾಕಲ್ಲ ಎಂದು ಡಿವೈಎಸ್‌ಪಿ ಧರ್ಮೇಂದ್ರ ನೇರವಾಗಿ ಈ ಮಾತನ್ನು ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಸೇರಿ ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದರು.ಇದನ್ನೂ ಓದಿ: ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲ ಇಲ್ಲ: ಡಿಕೆಶಿ

    ನಾನು ರೇಪ್ ಮಾಡಿದ್ರೆ ಸರ್ವನಾಶ ಆಗ್ತೀನಿ:
    ನನಗೆ ಮೊಟ್ಟೆ ಹೊಡೆಯಲು, ಮಸಿ ಬಳಿಯಲು ಹೀಗೆ ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ನಂತರ ಈ ರೀತಿ ಟಾರ್ಗೆಟ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ರೇವಣ್ಣ, ಸೂರಜ್ ರೇವಣ್ಣ ಎಲ್ಲಾ ಆಯ್ತು ಈಗ ರಾಜಣ್ಣ ಮೇಲೆ ಬಂದಿದೆ. ಡಿಕೆಶಿ ಮಹಾ ಪಾಪದ ಕೆಲಸ ಮಾಡಿದ್ದಾರೆ. ನೀವು ಮಾಡಿದ ಪಾಪ ನಿಮ್ಮನ್ನ ಬಿಡಲ್ಲ. ನಿಮ್ಮ ಕುಟುಂಬ ಬೆಳೆಯಬೇಕು, ನೀವು ಇನ್ನೂ ಮುಂದೆ ಇಂತಹ ನೀಚ ಕೆಲಸ ಮಾಡಬಾರದು. ನಾನು ರೇಪ್ ಮಾಡಿದ್ದರೆ ಸರ್ವನಾಶ ಆಗುತ್ತೇನೆ, ನಾನು ಹುಳ ಬಿದ್ದು ಸಾಯಬೇಕು. ಇಲ್ಲ ಅಂದರೆ ನೀವು ಹುಳ ಬಿದ್ದು ಸಾಯುತ್ತೀರಾ ಎಂದು ಕಿಡಿಕಾರಿದರು.

    ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲ ನನ್ನ ಕೊಲೆ ಮಾಡುತ್ತಾರೆ. ಡಿಕೆಶಿ ನಿಮ್ಮ ಬಳಿ 20ರೂ. ಇಲ್ಲದಾಗಲೂ ನಿಮ್ಮನ್ನು ನೋಡಿದವರು ರಾಜಣ್ಣ. ದೇವರು ನಿಮ್ಮನ್ನ ಈ ಮಟ್ಟಕ್ಕೆ ತಂದಿದ್ದಾನೆ. ಆದರೆ ನೀವು ಇಂತಹ ಕೀಳು ಮಟ್ಟಕ್ಕೆ ಹೋಗಬಾರದು. ಇದು ಡಿಕೆ ಶಿವಕುಮಾರ್ (DCM DK Shivakumar) ಹನಿಟ್ರ್ಯಾಪ್‌ ಟೀಂ, ರಾತ್ರಿ 2 ಗಂಟೆಗೆ ಹನಿಟ್ರ್ಯಾಪ್‌ ಟೀಂ ಜೊತೆ ಸಭೆ ಮಾಡ್ತಾರೆ ಎಂದು ಹೇಳಿದರು.ಇದನ್ನೂ ಓದಿ: ಛತ್ತೀಸ್‌ಗಢ – ಪ್ರತ್ಯೇಕ ಪ್ರಕರಣದಲ್ಲಿ 22 ನಕ್ಸಲರ ಎನ್‌ಕೌಂಟರ್