Tag: Muniraju

  • ನಾನು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ – ಮಳವಳ್ಳಿ ಬಿಜೆಪಿ ಪರಾರ್ಜಿತ ಅಭ್ಯರ್ಥಿ

    ನಾನು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ – ಮಳವಳ್ಳಿ ಬಿಜೆಪಿ ಪರಾರ್ಜಿತ ಅಭ್ಯರ್ಥಿ

    ಮಂಡ್ಯ: ನಾನು ತಪ್ಪು ಅಥವಾ ಮೋಸ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ಅಂದ್ರೆ ತನ್ನ ವಿರುದ್ಧ ಅಪಪ್ರಚಾರ ಮಾಡಿದವರ ವಂಶ ನಿರ್ನಾಮವಾಗಲಿ ಎಂದು ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಕ್ಷೇತ್ರದ ಬಿಜೆಪಿ (BJP) ಪರಾಜಿತ ಅಭ್ಯರ್ಥಿ ಮುನಿರಾಜು (Muniraju) ದೇವಸ್ಥಾನದ ಎದುರು ಕರ್ಪೂರ ಹಚ್ಚಿ ತೆಂಗಿನಕಾಯಿ ಒಡೆದಿದ್ದಾರೆ.

    ಮಳವಳ್ಳಿಯ ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರಾಜು ಮತದಾನಕ್ಕೆ 3 ದಿನ ಇರುವಾಗ ಕೊನೆ ಕ್ಷಣದಲ್ಲಿ ಕ್ಷೇತ್ರದ ಜನರ ಕೈಗೆ ಸಿಗಲಿಲ್ಲ ಎಂದು ಕೆಲವರು ಸುದ್ದಿ ಹರಡಿಸಿದ್ದರು. ಅಲ್ಲದೇ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮುನಿರಾಜು ಮೇಲೆ ಆರೋಪಗಳು ಕೇಳಿಬಂದಿತ್ತು. ಹೀಗಾಗಿ ಮುನಿರಾಜು ಕೇವಲ 24 ಸಾವಿರ ಮತಗಳಷ್ಟೇ ಗಳಿಸಲು ಶಕ್ತರಾದರು ಎನ್ನಲಾಗಿದೆ.

    ಇದೀಗ ಅಪಪ್ರಚಾರದ ವಿರುದ್ಧ ಸಿಡಿದೆದ್ದಿರುವ ಮುನಿರಾಜು ದೇವರ ಮೊರೆ ಹೋಗಿದ್ದು, ಮಳವಳ್ಳಿಯ ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ಮುಂದೆ ಅಪಪ್ರಚಾರ ಗೈದವರಿಗೆ ಶಿಕ್ಷೆ ನೀಡುವಂತೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ತೆಂಗಿನ ಕಾಯಿಯ ಮೇಲೆ ಕರ್ಪೂರ ಹಚ್ಚಿ, ಈಡುಗಾಯಿ ಹೊಡೆದು ದೇವರೇ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ: ಸುಧಾಕರ್ ಬಾಂಬ್

    ನಾನು ಯಾವುದೇ ತಪ್ಪು, ಮೋಸ ಮಾಡಿಲ್ಲ. ಹಾಗೇನಾದ್ರು ತಪ್ಪು ಮಾಡಿದ್ದರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರೇ ಶಿಕ್ಷೆ ಕೊಡಲಿ ಎಂದು ಕಾಯಿ ಒಡೆದಿದ್ದಾರೆ. ಇದನ್ನೂ ಓದಿ: ಸಿಎಂ ರೇಸ್‌ ಫೈಟ್‌ – ಹೈಕಮಾಂಡ್‌ ನಾಯಕರಲ್ಲಿ ಯಾರು ಯಾರ ಪರ?

  • ಜ್ಞಾನದೀವಿಗೆಗೆ ಬಿಜೆಪಿ ಮಾಜಿ ಶಾಸಕ ಎಸ್.ಮುನಿರಾಜು ನೆರವು

    ಜ್ಞಾನದೀವಿಗೆಗೆ ಬಿಜೆಪಿ ಮಾಜಿ ಶಾಸಕ ಎಸ್.ಮುನಿರಾಜು ನೆರವು

    ಬೆಂಗಳೂರು: ಸರ್ಕಾರಿ ಶಾಲೆಯ ಬಡ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನೆರವಾಗಲು ರೋಟರಿ ಸಹಾಯೋಗದಿಂದಿಗೆ ನಡೆಸುತ್ತಿರುವ ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಬೆಂಗಳೂರಿನ ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ತಮ್ಮ ನೆರವಿನ ಹಸ್ತ ನೀಡಿದ್ದಾರೆ.

    ಇಬ್ಬರು ವಿದ್ಯಾರ್ಥಿಗಳಿಗೆ ಒಂದು ಟ್ಯಾಬ್‌ನೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಸ್ ಮುನಿರಾಜು ಅವರು 40 ವಿದ್ಯಾರ್ಥಿಗಳಿಗೆ ನೆರವಾಗುವಂತೆ 20 ಟ್ಯಾಬ್‌ಗಳನ್ನು ನೀಡಲು ಮುಂದಾಗಿದ್ದಾರೆ.

    ಪಠ್ಯವನ್ನು ಒಳಗೊಂಡ ಎಲೆಕ್ಟ್ರಾನಿಕ್ ಟ್ಯಾಬ್‌ ನೀಡುವುದು ಉತ್ತಮ ಕಾರ್ಯಕ್ರಮ. ಈ ಪ್ರಯೋಜನವನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳು ಮುಂದಾಗಿ, ಗ್ರಾಮ, ಶಾಲೆ, ಗುರುಗಳು, ತಂದೆತಾಯಿಗೆ ಉತ್ತಮ ಕೀರ್ತಿ ಹೆಸರು ಬರುವಂತೆ ಮುಂದಾಗಬೇಕು. ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದಿದ್ದೇನೆ. ಹೀಗಾಗಿ ನಾನು ಕಿರು ಸಹಾಯವನ್ನು ನೀಡುತ್ತಿರುವುದಾಗಿ ಮುನಿರಾಜು ತಿಳಿಸಿದರು.

  • ನನ್ನ ವಿರುದ್ಧ ಮುನಿರಾಜು, ಕೈ ಮಹಿಳಾ ಕಾರ್ಪೋರೇಟರ್ ಷಡ್ಯಂತ್ರ: ಮುನಿರತ್ನ

    ನನ್ನ ವಿರುದ್ಧ ಮುನಿರಾಜು, ಕೈ ಮಹಿಳಾ ಕಾರ್ಪೋರೇಟರ್ ಷಡ್ಯಂತ್ರ: ಮುನಿರತ್ನ

    ಬೆಂಗಳೂರು: ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಕೈ ಪಾಲಿಕೆ ಸದಸ್ಯೆ ಮತ್ತು ಬಿಜೆಪಿಯವರು ಷಡ್ಯಂತ್ರ ನಡೆಸಿದ್ದಾರೆ ಎಂದು ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಆರೋಪ ಮಾಡಿದ್ದಾರೆ.

    ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡಲು ಈ ರೀತಿಯ ದಾರಿ ಹಿಡಿಯಬಾರದು ಎಂದು ಹೇಳಿದರು.

    ಸುದ್ದಿಗೋಷ್ಠಿಯ ಆರಂಭದಲ್ಲಿ ಆರ್ ಆರ್ ನಗರ ಕಾಂಗ್ರೆಸ್ ಕಾರ್ಪೊರೇಟರ್ ಆಶಾ ಸುರೇಶ್ ಪಕ್ಷದ ವಿರುದ್ಧವೇ ಪ್ರಚಾರ ಮಾಡಿದ್ದಾರೆ ಎಂದು ಹೇಳಿ ಅವರು ಪ್ರಚಾರ ನಡೆಸಿದ ವಿಡಿಯೋವನ್ನು ಬಿಡುಗಡೆ ಮಾಡಿದರು.

    ನಾವು ಮೌನವಾಗಿದ್ದೇವೆ. ಆದರೆ ಇದು ಮಿತಿಮೀರಿದೆ. ಬಿಜೆಪಿ ತುಳಸಿ ಮುನಿರಾಜ್ ನಾವು ನೀವು ಅಂದುಕೊಂಡ ವ್ಯಕ್ತಿಯಲ್ಲ. ಲೋಕಸಭೆ ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಈ ಬಾರಿ ಹಠಕ್ಕೆ ಬಿದ್ದು ಗೆಲ್ಲಲು ಹೊರಟಿದ್ದಾರೆ. ಅವರು ಏನೇನು ಮಾಡಿದ್ದಾರೆ ಎನ್ನುವುದಕ್ಕೆ ಎಲ್ಲ ದಾಖಲೆ ಇದೆ. ಅವರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಇದೆ ಎನ್ನುವುದು ಗೊತ್ತು. ಅವರ ಹಿನ್ನೆಲೆ ನನಗೆ ಗೊತ್ತಿದೆ. ಬಳ್ಳಾರಿ ಗಣಿಯನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದು ಮುನಿರಾಜು ಅವರು ಎಂದು ಆರೋಪಿಸಿದರು.

    ವೋಟರ್ ಐಡಿಗಳನ್ನು ಕಾಂಗ್ರೆಸ್‍ನವರು ತಂದಿಟ್ಟಿದ್ದಾರೆ ಎಂದು ಯಾವ ಆಧಾರದಲ್ಲಿ ಆರೋಪ ಮಾಡುತ್ತಾರೆ? ವೋಟರ್ ಐಡಿ ಸ್ಲಂ ಜನರಿಗೆ ಸಂಬಂಧಿಸಿದ್ದು. ಅದು ಕಾಂಗ್ರೆಸ್ ಭದ್ರಕೋಟೆ ಸ್ಲಂ. 9 ಸಾವಿರ ವೋಟರ್ ಐಡಿಯಲ್ಲಿ ಸುಮಾರು ಐದು ಸಾವಿರ ಮುಸ್ಲಿಂ ಹಾಗೂ ಎರಡು ಸಾವಿರದಷ್ಟು ದಲಿತರು ಇದ್ದಾರೆ. ಎಸ್.ರಮೇಶ್ ಕಾಲದಿಂದಲೂ ಇವರು ನಮ್ಮ ಪರವಾಗಿಯೇ ಇದ್ದಾರೆ. ಹೀಗಿರುವಾಗ ನಾನು ಯಾಕೆ ವೋಟರ್ ಐಡಿಗಳನ್ನು ಸಂಗ್ರಹಿಸಲಿ ಎಂದು ಪ್ರಶ್ನಿಸಿದರು.

    ವೋಟರ್ ಐಡಿಯಿಂದ ಚುನಾವಣೆ ಮುಂದೂಡಿದರೆ ಇದೊಂದು ಐತಿಹಾಸಿಕ ವಾಗಲಿದೆ. ಮುಂದೆ ಯಾರಾದರೂ ಆಗದಿರುವವರ ಮನೆಗಳಲ್ಲಿ ವೋಟರ್ ಐಡಿ ಇಟ್ಟು ಚುನಾವಣೆ ಮುಂದೂಡಬಹುದು. 500 ಟೀಶರ್ಟ್ ನೀಡಲು ನಾನು ಅನುಮತಿ ಪಡೆದಿದ್ದೇನೆ. ಐದು ಸಾವಿರ ಟೀಶರ್ಟ್ ಗಳನ್ನು ಮುನಿರಾಜು ಕಡೆಯವರು ಸೀಜ್ ಮಾಡುತ್ತಾರೆ. ಆಮೇಲೆ ಪೊಲೀಸರು ಬರುತ್ತಾರೆ. ಪ್ರತಿ ಸಲನೂ ಅದ್ ಹೇಗೆ ಅವರ ಕೈಗೆ ಸಿಗುತ್ತೆ? ಎಫ್ ಬಿ ಲೈವ್ ಮಾಡ್ತಾರೆ. ಕೆಲವೊಮ್ಮೆ ಸದಾಶಿವನಗರದಲ್ಲಿ ಕೆಲವು ವಸ್ತುಗಳನ್ನು ಹಿಡಿದು ನನ್ನ ಹೆಸರನ್ನು ಹೇಳಿದ್ದಾರೆ. ಆ ಕ್ಷೇತ್ರದಲ್ಲಿ ನಾನು ಯಾಕೆ ಟೀ ಶರ್ಟ್ ಹಂಚಲಿ ಇದೆಲ್ಲವೂ ತುಳಸಿ ಮುನೀರಾಜ್ ಕೃತ್ಯ ಎಂದು ಆರೋಪಿಸಿದರು.

    ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರ ಬಗ್ಗೆ ನಾನು ಏನು ಮಾತಾನಾಡಲ್ಲ. ಅವರ ಹತ್ತಿರ ಗನ್ ಬೇರೆ ಇದೆ. ನನಗೆ ಯಾಕೆ ಅವರ ವಿಚಾರ ಎಂದು ಮುನಿರತ್ನ ವ್ಯಂಗ್ಯವಾಡಿದರು.

    ಮೇ 16 ರಂದು ನನ್ನ ವಿರುದ್ಧ ತೇಜೋವಧೆ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ಹಾಕುತ್ತೆನೆ. ನನ್ನ ಬಗ್ಗೆ ಕೆಟ್ಟ ಪದಗಳನ್ನು ಆಡಿದ ಆಶಾ ಸುರೇಶ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು.

    ನಾನು ಎಂಟು ವರ್ಷದಿಂದ ಮಕ್ಕಳ ಶಾಲೆ ಫೀಸ್ ಕಟ್ಟುತ್ತಿದ್ದೇನೆ. ಕುಕ್ಕರ್ ನೀಡುತ್ತೇನೆ. ವೈದ್ಯಕೀಯ ಸಹಾಯ ನೀಡುತ್ತೇನೆ. ಆದರೆ ನೀತಿ ಸಂಹಿತೆ ಜಾರಿಯಾದ ಮೇಲೆ ಅದನ್ನೆಲ್ಲ ಮಾಡಿಲ್ಲ. ಪಬ್ಲಿಕ್ ಸರ್ವೆಂಟ್ ಆಗಿ ಇದನ್ನೆಲ್ಲ ಮಾಡಲೇ ಬೇಕು. ಎಲ್ಲಾ ಕಡೆ ಮತದಾರರಿಗೆ ಉಡುಗೊರೆ ಕೊಡ್ತಾರೆ. ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕೂಡ ಹಂಚಿದ್ದಾರೆ ಎಂದು ಆರೋಪಿಸಿದರು.