Tag: Munikrishna

  • ’ಸತ್ಯಮಂಗಳ’ನಾಗಿ ಬಂದ ಅಗ್ನಿಸಾಕ್ಷಿ ಖಳನಾಯಕ

    ’ಸತ್ಯಮಂಗಳ’ನಾಗಿ ಬಂದ ಅಗ್ನಿಸಾಕ್ಷಿ ಖಳನಾಯಕ

    ಹೀರೋ ಅಂದ್ರೆ ಹ್ಯಾಂಡ್ಸಮ್ ಆಗಿ ಇರಬೇಕು, ಜಿಮ್ ಮಾಡಿ ಫಿಟ್ ಆಗಿ ಇರಬೇಕು. ಈ ಗುಣಗಳಿದ್ದವನೂ ಮಾತ್ರ ಹೀರೋ ಆಗೋದಿಕ್ಕೆ ಸಾಧ್ಯ ಎಂಬ ಕಾಲವೆಲ್ಲಾ ಹೋಗಿ ಆಯ್ತು. ಈಗ ಯಾರ್ ಬೇಕಾದ್ರೂ ಹೀರೋ ಆಗಬಹುದು. ಆದ್ರೆ ನಟನಾ ಪ್ರತಿಭೆ ಇರಬೇಕು ಅಷ್ಟೇ. ಈಗ ಯಾಕೆ ಈ ಮಾತು ಅಂತೀರಾ? ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮುರುಗನಾಗಿ ಖಳನಾಯಕನ ಪಾತ್ರ ಮಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಮುನಿಕೃಷ್ಣ (Munikrishn) ಮತ್ತೊಮ್ಮೆ ನಿಮ್ಮ ಮುಂದೆ ಬರ್ತಿದ್ದಾರೆ. ಕೊಡೆಮುರುಗ ಎಂಬ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಅವರೀಗ ಸತ್ಯಮಂಗಳ ಸಿನಿಮಾದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಮುನಿಕೃಷ್ಣಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದನ್ನು ನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ಸೂಪರ್ ಸ್ಟಾರ್ ಅವರ ಮೊದಲ ಸಿನಿಮಾ ಬೆಂಬಲ ಕೊಟ್ಟಿದ್ದಕ್ಕೆ ಸ್ಟಾರ್ ಆಗಿರ್ತಾರೆ. ಅದೇ ರೀತಿ ಮುನಿಕೃಷ್ಣಅವರ ಸಿನಿಮಾ ಮೇಲಿನ ಪ್ರೀತಿ, ಡೆಡಿಕೇಷನ್ ದೊಡ್ಡದಿದೆ ಅನ್ನೋದು ನಿರ್ದೇಶಕರ ಮಾತು.

    ಸತ್ಯಮಂಗಳ (Satyamangala) ಸಿನಿಮಾದ ಟೈಟಲ್ (Title) ಬಿಡುಗಡೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಚಿಕ್ಕ ಹಳ್ಳಿಯೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಗಿಣಿ ವಿಶೇಷ ಅತಿಥಿಯಾಗಿ ಆಗಮಿಸಿ, ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಸತ್ಯಮಂಗಳ ಸಿನಿಮಾಗೆ ಆರ್ಯನ್ ಪ್ರತಾಪ್ ಸಾರಥಿ. ಕಾರಂಜಿ ಹಾಗೂ ಚೆಲುವೆಯೇ ನಿನ್ನ ನೋಡಲು ಚಿತ್ರಗಳಿಗೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರುವ, ಕನ್ನಡ 90/11, ತಮಿಳಿನ ಹೇರ್ ಕೆನಾರ್ ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರ ಏಳು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದೆ. ಮಣಿರತ್ನಂ ಸಾರಥ್ಯದ  ಅಲೈ ಪಾಯುತೇ, ರಾವಣ್ ಗೆ ಅಸಿಸ್ಟೆಂಟ್ ಡೈರೆಕ್ಷರ್ ಆಗಿ, ಹಾಲಿವುಡ್ ವಿಲ್ ಸ್ಮಿತ್ ಬಳಗದಲ್ಲಿಯೂ ದುಡಿದಿರುವ ಆರ್ಯನ್ ಪ್ರತಾಪ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯಮಂಗಳ ಸಿನಿಮಾಗೆ ಅವ್ರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್ ಫಿಲ್ಮಂ ಎವರ್ ಮೇಡ್ ಸ್ಕ್ರಿಪ್ಟ್ ಸೀನ್ ಸಾಹಸಕ್ಕೆ ಗಿನ್ನಿಸ್ ಬುಕ್ ರೆಕಾರ್ಡ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

    ಅಡ್ವೆಂಚರ್ಸ್ ಥ್ರಿಲ್ಲಿಂಗ್ ಕಹಾನಿಯ ಸತ್ಯಮಂಗಳ ಸಿನಿಮಾದಲ್ಲಿ ದಿ ಗ್ರೇಟ್ ಖಲಿ, ಬಾಲಿವುಡ್ ಅರ್ಬಾಜ್ ಖಾನ್, ಕನಕ್ ಪಾಂಡೆ, ಶರಣ್ಯ, ಸಂಜಯ್ ಕುಮಾರ್ ರವಿ ಕಹಳೆ, ವಿಜಯ್ ಚಿಂದೂರ್, ಮಂತೇಶ್ ಹಿರೇಮಠ್, ಜಿಜಿ ತಾರಾಬಳಗದಲ್ಲಿದ್ದಾರೆ. ಹೂವಿನ ಹಡಗಲಿ ಶಾಸಕರಾದ ಕೃಷ್ಣ ನಾಯಕ್ ಅರ್ಪಿಸ್ತಿರುವ ಈ ಚಿತ್ರವನ್ನು ASA ಪ್ರೊಡಕ್ಷನ್ ಮತ್ತು ಐರಾ ಪ್ರೊಡಕ್ಷನ್ ನಡಿ ಶಂಕರ್ ಬಿ ಹಾಗೂ ಮುನಿಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರಶೇಖರ್ ಕೆಎಸ್ ಕ್ಯಾಮೆರಾ, ವೀರ್ ಸಮರ್ಥ್ ಸಂಗೀತ, ಎಂಎನ್ ವಿಶ್ವ ಸಂಕಲನ, ಪೀಟರ್ ಹೈನ್ಸ್ ಸ್ಟಂಟ್, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

    ಸತ್ಯಮಂಗಳ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ದಾಂಡೇಲಿ, ಮಲೆ ಮಹಾದೇಶ್ವರ ಬೆಟ್ಟ, ಶ್ರೀಲಂಕಾ, ಕಟ್ಮುಂಡು, ಬ್ಯಾಂಕಕ್ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಚಿತ್ರತಂಡ 10 ದಿನಗಳ ಕಾಲ ಬ್ಯಾಂಕಕ್ ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದೆ. ವಿಶೇಷ ಅಂದರೆ ಸತ್ಯಮಂಗಳ ಸಿನಿಮಾದಲ್ಲಿ ಪಾಂಡಿಚೇರಿ ಮುಖ್ಯಮಂತ್ರಿ ಎನ್,. ರಂಗಸ್ವಾಮಿ ನಟಿಸಿದ್ದಾರೆ.  ಯಾವ ಪಾತ್ರ ಅನ್ನೋದನ್ನು ಚಿತ್ರತಂಡ ಗುಟ್ಟುಬಿಟ್ಟು ಕೊಟ್ಟಿಲ್ಲ.

  • ‘ಮುರುಗ ನಾನು ಮುರುಗಿ ನೀನು’ ಅಂತ ಇಂಪ್ರೆಸ್ ಮಾಡ್ತಿದೆ ‘ಕೊಡೆ ಮುರುಗ’ ಸಾಂಗ್!

    ‘ಮುರುಗ ನಾನು ಮುರುಗಿ ನೀನು’ ಅಂತ ಇಂಪ್ರೆಸ್ ಮಾಡ್ತಿದೆ ‘ಕೊಡೆ ಮುರುಗ’ ಸಾಂಗ್!

    ಕಿರುತೆರೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ಸಿನಿಮಾ ‘ಕೊಡೆ ಮುರುಗ’. ಈಗಾಗಲೇ ಪೋಸ್ಟರ್, ಟ್ರೇಲರ್, ಹಾಡಿನಿಂದ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ‘ಮುರುಗ ನಾನು ಮುರುಗಿ ನೀನು’ ಎಂಬ ಹಾಡಿಗೆ ಜೋಡಿಹಕ್ಕಿ, ಸೇವಂತಿ ಖ್ಯಾತಿ ಪಲ್ಲವಿ ಕುಣಿದಿದ್ದಾರೆ. ಜೊತೆಗೆ ಮುರುಗ, ಸುಬ್ರಮಣಿ ಸೇರಿದಂತೆ ಅನೇಕರು ಹಾಡಿ ಹೆಜ್ಜೆ ಹಾಕಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಈ ಹಾಡು ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಯೋಗರಾಜ್ ಭಟ್ ಬರೆದಿರುವ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಹಾಗೂ ಶಾಶ್ವತಿ ಹಾಡಿದ್ದಾರೆ.

    ಈ ಸಿನಿಮಾದಲ್ಲಿ ವಿಲನ್ ನನ್ನೇ ಒಂದು ರೀತಿಯಲ್ಲಿ ಹೀರೋ ಆಗಿ ಮಾಡಲು ಹೊರಟಿರುತ್ತಾರೆ. ಖಳನಾಯಕನ ಹೆಸರನ್ನೇ ಟೈಟಲ್ ಇಟ್ಟಿರುವುದು ಇದಕ್ಕೆ ಇಂಬು ನೀಡಿದೆ. ಹೀರೋ ಆಗಬೇಕು ಎಂದು ಕನಸು ಕಾಣುವ ಮುರುಗನ ನಾನಾ ಅವತಾರಗಳು ಈ ಹಾಡಿನಲ್ಲಿ ವ್ಯಕ್ತವಾಗುತ್ತಿವೆ. ಅವನ ಸುತ್ತಲಿನವರು ಬೈದರು ನಗುತ್ತಾ, ವಿನಮ್ರದಿಂದ ಬೈದಾಗ ಹೀರೋ ಗುಂಗಲ್ಲಿರುವ ಮುರುಗನಿಗೆ ಅರ್ಥವೇ ಆಗುವುದಿಲ್ಲ. ಇಡೀ ಹಾಡಲ್ಲಿ ಮನರಂಜನೆ ಇರುವುದು ಎದ್ದು ಕಾಣುತ್ತಿದೆ. ಸಿನಿಮಾದಲ್ಲೂ ಕೂಡ ಹಾಸ್ಯ ತುಂಬಿರುವುದು ಈಗಾಗಲೇ ಟ್ರೇಲರ್ ನಿಂದ ಗೊತ್ತಾಗಿತ್ತು. ಇದೀಗ ಹಾಸ್ಯಮಯ ಹಾಡೊಂದು ರಿಲೀಸ್ ಆಗಿದ್ದು, ಮುರುಗ ನಾನು ಮುರುಗಿ ನೀನು ಎಂಬ ಹಾಡಿಗೆ ಜನ ತಮ್ಮದೇ ವಾಕ್ಯ ಸೇರಿಸಿ ಹಾಡಲು ಶುರು ಮಾಡಿದ್ದಾರೆ. ಅಷ್ಟು ಸಖತ್ತಾಗಿದೆ ‘ಕೊಡೆ ಮುರುಗ’ ಸಿನಿಮಾದ ಈ ಹಾಡು.

    ಈ ಹಿಂದೆ ಮಮ್ಮಿ ಎಂಬ ಸೂಪರ್ ಸಿನಿಮಾ ನೀಡಿದ್ದ ಕೆ.ಆರ್.ಕೆ ಬ್ಯಾನರ್ ನಲ್ಲಿ ಕೆ ರವಿಕುಮಾರ್ ಅವರೇ ‘ಕೊಡೆ ಮುರುಗ’ ಸಿನಿಮಾವನ್ನು ನಿರ್ಮಿಸಿದ್ದಾರೆ. ರವಿಕುಮಾರ್ ಗೆ ಅಶೋಕ್ ಶಿರಾಲಿ ಸಾಥ್ ನೀಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ನಾಯಕರಾಗಿದ್ದು, ಕಥೆ ಬರೆದು ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮುರುಗ ಮತ್ತೊಬ್ಬ ನಟನಾಗಿ ಸಿನಿಮಾದಲ್ಲಿ ಮಿಂಚಿದ್ದಾರೆ. ಉಳಿದಂತೆ ಪಲ್ಲವಿ ಗೌಡ, ಸ್ವಾತಿ ಗುರುದತ್, ತುಮಕೂರು ಮೋಹನ್, ರಂಗಿತರಂಗ ಅರವಿಂದ್, ಕುರಿ ಪ್ರತಾಪ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

  • ಭರಪೂರ ಮನೋರಂಜನೆ ಜೊತೆಗೆ ಮೆಸೇಜ್ ನೀಡೋಕೆ ಬರ್ತಿದ್ದಾನೆ ‘ಕೊಡೆಮುರುಗ’!

    ಭರಪೂರ ಮನೋರಂಜನೆ ಜೊತೆಗೆ ಮೆಸೇಜ್ ನೀಡೋಕೆ ಬರ್ತಿದ್ದಾನೆ ‘ಕೊಡೆಮುರುಗ’!

    ಸ್ಯಾಂಡಲ್‍ವುಡ್‍ನಲ್ಲಿ ಭಿನ್ನ, ವಿಭಿನ್ನ ಪ್ರಯತ್ನಗಳು ನಡೆಯುತ್ತನೆ ಇರುತ್ತೆ. ಹಲವಾರು ಪ್ರತಿಭಾವಂತ ನಿರ್ದೇಶಕರು ಹೊಸತನದೊಂದಿಗೆ ಪ್ರಯೋಗಗಳನ್ನು ಮಾಡ್ತಾನೆ ಇರ್ತಾರೆ. ಆದ್ರೆ ಎಲ್ಲಾ ಪ್ರಯತ್ನಗಳನ್ನು ಪ್ರೇಕ್ಷಕ ಒಪ್ಪಿದ್ರೆ ಮಾತ್ರ ಗೆಲುವು ಸಿಗೋದು. ಆ ರೀತಿಯ ವಿಭಿನ್ನ ಪ್ರಯತ್ನದಲ್ಲಿ ಆರಂಭದಲ್ಲೇ ಗೆದ್ದ ಚಿತ್ರ ‘ಕೊಡೆಮುರುಗ’.

    ಸೋಶಿಯಲ್ ಮೀಡಿಯಾದಲ್ಲಿ ಈ ‘ಕೊಡೆಮುರುಗ’ನ ಹವಾ ಜೋರಾಗಿದೆ. ಈಗಾಗಲೇ ಕೈಲಾಶ್ ಖೇರ್ ಹಾಡಿರುವ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ಲಿರಿಕಲ್ ಸಾಂಗ್ ವಿಡಿಯೋ ಯುಟ್ಯೂಬ್‍ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು, ಟ್ರೈಲರ್ ಕೂಡ ಸೂಪರ್ ಹಿಟ್ ಆಗಿದೆ. ಈ ಚಿತ್ರದ ವೆರಿ ಇಂಟ್ರಸ್ಟಿಂಗ್ ಸಂಗತಿಯೊಂದಿದೆ. ಅದೇನಪ್ಪಾ ಅಂದ್ರೆ, ಎಲ್ರೂ ತಮ್ಮ ಸಿನಿಮಾ ನಾಯಕನ ಹೆಸ್ರನ್ನು ಟೈಟಲ್ ಆಗಿ ಇಟ್ರೆ ಈ ಚಿತ್ರತಂಡ ಮಾತ್ರ ಚಿತ್ರದ ಖಳನಟನ ಹೆಸ್ರನ್ನೆ ಟೈಟಲ್ ಆಗಿ ಇಟ್ಟಿರೋದು ಕೊಡೆಮುರುಗ ಚಿತ್ರದ ಸ್ಪೆಷಾಲಿಟಿ.

    ‘ಕೊಡೆಮುರುಗ’ ಚಿತ್ರಕ್ಕೆ ಸುಬ್ರಮಣ್ಯ ಪ್ರಸಾಧ್ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ಸಾಕಷ್ಟು ಅನುಭವ ಇರುವ ಇವ್ರಿಗೆ ಇದು ಮೊದಲನೇ ಸಿನಿಮಾ. ಮಾಮೂಲಾಗಿ ಸಿನಿಮಾ ಶೂಟಿಂಗ್ ಆದ್ಮೇಲೆ ಟ್ರೈಲರ್ ರಿಲೀಸ್ ಮಾಡೋ ನಿರ್ದೇಶಕರನ್ನ ನೋಡಿರ್ತೀವಿ ಆದ್ರೆ ಸುಬ್ರಮಣ್ಯ ಪ್ರಸಾಧ್ ಮಾತ್ರ ಮೊದ್ಲು ಟ್ರೈಲರ್ ರಿಲೀಸ್ ಮಾಡಿ ಆಮೇಲೆ ಚಿತ್ರ ನಿರ್ದೇಶನ ಮಾಡಿ ಅಚ್ಚರಿ ಮೂಡಿಸಿದ್ರು.

    ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಮುರುಗ ಅಲಿಯಾಸ್ ಮುನಿಕೃಷ್ಣ ಹಾಗೂ ಚಿತ್ರದ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮುನಿಕೃಷ್ಣ ಚಿತ್ರದಲ್ಲಿ ಖಳನಟನಾಗಿ ಸಮಾಜದ ಕೆಟ್ಟ ಮುಖಗಳನ್ನು ಪ್ರತಿನಿಧಿಸುವ ಕೊಡೆಮುರುಗ ಪಾತ್ರದಲ್ಲಿ ಬಣ್ಣಹಚ್ಚಿದ್ರೆ, ನಿರ್ದೇಶಕ ಸುಬ್ರಮಣ್ಯ ಪ್ರಸಾಧ್ ಸಮಾಜದಲ್ಲಿರುವ ಪಾಸಿಟಿವ್ ವ್ಯಕ್ತಿಗಳ ಪಾತ್ರವನ್ನು ಚಿತ್ರದಲ್ಲಿ ನಿಭಾಯಿಸಿದ್ದಾರೆ. ಇನ್ನು ನಾಯಕಿಯಾಗಿ ಪಲ್ಲವಿ ಗೌಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.

    ಹೀರೋ, ಹೀರೋಯಿಸಂ ಇದ್ಯಾವುದು ಇಲ್ಲದೆ ಕಥೆಯೇ ಹೀರೋ ಆಗಿರೋ ಕೊಡೆಮುರುಗ ಚಿತ್ರ ಕೆ.ಆರ್.ಕೆ ಬ್ಯಾನರ್ ನಡಿ ನಿರ್ಮಾಣವಾಗಿದೆ. ಮಮ್ಮಿ ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ಭರಪೂರ ಮನೋರಂಜನೆ ಜೊತೆ ಒಂದೊಳ್ಳೆ ಮೆಸೇಜ್ ಕೊಡೋಕೆ ಸಜ್ಜಾಗಿರೋ ಈ ಚಿತ್ರ ಮಾರ್ಚ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.