Tag: Municipal Election

  • ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್

    ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್

    (ಸಾಂದರ್ಭಿಕ ಚಿತ್ರ)

    ಲಕ್ನೋ: ಮುನ್ಸಿಪಾಲ್ ಚುನಾವಣೆಯಲ್ಲಿ (Municipal Election) ಮತದಾನ ಕರ್ತವ್ಯದಿಂದ ವಿನಾಯಿತಿ ಪಡೆಯುವ ಸಲುವಾಗಿ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ನಕಲಿ ಕೋವಿಡ್-19 ಪಾಸಿಟಿವ್ ರಿಪೋರ್ಟ್ ನೀಡಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಪಿಲಿಭಿತ್‌ನ (Pilibhit) ಪುರನ್‌ಪುರ ಪ್ರದೇಶದಲ್ಲಿ ನಡೆದಿದೆ.

    ಮೇ 11ರಂದು ನಡೆಯಲಿರುವ ಪುರಸಭಾ ಚುನಾವಣೆಗೆ ಆಯೋಜಿಸಿದ್ದ ಪಿಂಕ್ ಮತಗಟ್ಟೆಯ ಮತಗಟ್ಟೆ ಸಂಖ್ಯೆ 3ರಲ್ಲಿ ರಿತು ತೋಮರ್ ಅವರನ್ನು ಮತಗಟ್ಟೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಿಕ್ಷಕಿ ಕೋವಿಡ್ ಪಾಸಿಟಿವ್ (Covid Positive) ಎಂಬ ನಕಲಿ ದಾಖಲೆಯನ್ನು ತೋರಿಸಿ, ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ದಾಖಲೆಯನ್ನು ಪರಿಶೀಲಿಸಿದಾಗ ಅದು ಇನ್ನೊಬ್ಬ ವ್ಯಕ್ತಿಯ ದಾಖಲೆಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ನಕಲಿ ದಾಖಲೆ ನೀಡಿದ ಶಿಕ್ಷಕಿ ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಇವರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಮೂಲ ಶಿಕ್ಷಾ ಅಧಿಕಾರಿ (BSA) ಅಮಿತ್ ಕುಮಾರ್ ಸಿಂಗ್ ಅವರಿಗೆ ಮಂಗಳವಾರ ಆದೇಶ ನೀಡಿದ್ದಾರೆ. ಇದನ್ನೂ ಓದಿ: 105ರ ಇಳಿವಯಸ್ಸಿನಲ್ಲೂ ಹುರುಪಿನಿಂದ ಮತ ಚಲಾಯಿಸಿದ ಶತಾಯುಷಿ

  • ಮೂರು ಬಾರಿ ಗೆದ್ದಿರೋ ನಂಗೆ ರೂಲ್ಸ್ ಹೇಳ್ತೀಯಾ: ಕಾಂಗ್ರೆಸ್ ಅಭ್ಯರ್ಥಿಯಿಂದ ಪೊಲೀಸರಿಗೆ ಧಮ್ಕಿ

    ಮೂರು ಬಾರಿ ಗೆದ್ದಿರೋ ನಂಗೆ ರೂಲ್ಸ್ ಹೇಳ್ತೀಯಾ: ಕಾಂಗ್ರೆಸ್ ಅಭ್ಯರ್ಥಿಯಿಂದ ಪೊಲೀಸರಿಗೆ ಧಮ್ಕಿ

    ಚಿತ್ರದುರ್ಗ: ನಗರಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    22ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಬಾಬು ಪೋಲಿಸರಿಗೆ ಧಮ್ಕಿ ಹಾಕಿದ್ದಾರೆ. ಇಂದು ನಗರಸಭೆಯ 35 ವಾರ್ಡ್ ಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬಾಲವಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಬಾಬು ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಅಭ್ಯರ್ಥಿ ಜೊತೆಗೆ ಕೇವಲ ನಾಲ್ವರಿಗೆ ಮಾತ್ರ ಅವಕಾಶ ನೀಡಬೇಕು ಎಂಬ ನಿಯಮವಿತ್ತು. ಆದರೆ ಅಭ್ಯರ್ಥಿ ಬಿಟ್ಟು ಅವರ ಹೆಸರು ಹೇಳಿಕೊಂಡು ನಾಲ್ವರು ಒಳಹೋಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗು ಹಿರಿಯ ಮಾಜಿ ನಗರಸಭಾ ಸದಸ್ಯ ರವಿಶಂಕರ್ ಬಾಬು ಅವರ ಪ್ರವೇಶಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಹೀಗಾಗಿ ಆಕ್ರೋಶಗೊಂಡ ರವಿ ಶಂಕರ್ ಬಾಬು, ಬಡಾವಣೆ ಠಾಣೆ ಪಿಎಸೈ ರಘುನಾಥ್ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಮೂರು ಬಾರಿ ಸ್ಪರ್ಧೆ ಮಾಡಿ ಗೆದ್ದು, ನಗರಸಭಾ ಸದಸ್ಯನಾಗಿರುವ ನನಗೆ ರೂಲ್ಸ್ ಹೇಳಿಕೊಡುತ್ತೀಯಾ ಅಂತ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗನೊಬ್ಬ ನಾಮಪತ್ರ ಸಲ್ಲಿಕೆ ಕೊಠಡಿಯಿಂದ ಹೊರಬಂದು, ಪೊಲೀಸ್ ಮತ್ತು ರವಿಶಂಕರ್ ಮಧ್ಯೆ ನಡೆಯುತ್ತಿದ್ದ ವಾದವನ್ನು ನಿಲ್ಲಿಸಿ ಅಭ್ಯರ್ಥಿಯನ್ನು ಒಳಗೆ ಕಳುಹಿಸಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv