Tag: Municipal Councilor

  • ಆನೇಕಲ್‌ನಲ್ಲಿ ತುಪಾಕಿ ಸದ್ದು – ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್‌ ಪುರಸಭಾ ಸದಸ್ಯ ಹಂತಕನ ಬಂಧನ

    ಆನೇಕಲ್‌ನಲ್ಲಿ ತುಪಾಕಿ ಸದ್ದು – ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್‌ ಪುರಸಭಾ ಸದಸ್ಯ ಹಂತಕನ ಬಂಧನ

    ಬೆಂಗಳೂರು: ಪುರಸಭೆಯ ಕಾಂಗ್ರೆಸ್‌ ಸದಸ್ಯ ರವಿ ಹಂತಕನ ಕಾಲಿಗೆ ಗುಂಡು ಹಾರಿಸಿ, ಸಿನಿಮೀಯ ಶೈಲಿಯಲ್ಲಿ ಆನೆಕಲ್‌ ಪೊಲೀಸರು ಹಂತಕನನ್ನು ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ (Anekal) ನಡೆದಿದೆ. ಹಂತಕನನ್ನು ಕಾರ್ತಿಕ್ ಅಲಿಯಾಸ್‌ ಜೆಕೆ ಎಂದು ಗುರುತಿಸಲಾಗಿದೆ.

    ಸಿನಿಮೀಯ ಸ್ಟೈಲ್‌ನಲ್ಲಿ ಅರೆಸ್ಟ್‌:
    ಇತ್ತೀಚೆಗಷ್ಟೇ ನಡುರಸ್ತೆಯಲ್ಲೇ ಪುರಸಭಾ ಸದಸ್ಯ ರವಿ ಅವರನ್ನ ಬರ್ಬರವಾಗಿ ಕೊಲೆ ಮಾಡಿದ್ದ ಘಟನೆ ಆನೇಕಲ್ ಪಟ್ಟಣದ ಬಹದ್ದೂರ್‌ಪುರದ ಬಳಿ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡ ಆನೇಕಲ್‌ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದನ್ನೂ ಓದಿ: Wayanad Landslides: ನಾಲ್ವರು ಕನ್ನಡಿಗರು ದುರ್ಮರಣ – ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಮರೆ!

    ಆರೋಪಿ ಕಳೆದ ಒಂದು ವಾರದಿಂದಲೂ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ. ಈತನ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನ ನಿಯೋಜಿಸಲಾಗಿತ್ತು. ಬುಧವಾರ (ಇಂದು) ಮುಂಜಾನೆ ಮೈಸೂರಮ್ಮನದೊಡ್ಡಿ ಬಳಿ ಆರೋಪಿ ಅಡಗಿರುವುದು ಗೊತ್ತಾಗಿ, ಆತನನ್ನ ಬಂಧಿಸಲು ಮುಂದಾಗಿದ್ದರು. ಇದನ್ನೂ ಓದಿ: ಕೆಆರ್‌ಎಸ್‌ನಿಂದ 1.50 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ – ಕಬಿನಿಯಿಂದ 80,000 ಕ್ಯುಸೆಕ್‌ ನೀರು ಹೊರಕ್ಕೆ

    ಪೊಲೀಸರು ಬಂಧಿಸಲು ಮುಂದಾದಾಗ ಪೇದೆ ಸುರೇಶ್‌ ಮೇಲೆಯೇ ಆರೋಪಿ ಕಾರ್ತಿಕ್‌ ಹಲ್ಲೆ ನಡೆಸಿದ್ದ. ಇದರಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಪೊಲೀಸರು ಶರಣಾಗುವಂತೆ ಸೂಚನೆ ಕೊಟ್ಟರು. ಆದರೂ ಮಾರಕಸ್ತ್ರ ಹಿಡಿದು ಮುನ್ನುಗುತ್ತಿದ್ದ ವೇಳೆ ಆನೇಕಲ್‌ ಇನ್ಸ್‌ಪೆಕ್ಟರ್‌ ತಿಪ್ಪೇಸ್ವಾಮಿ ಅವರು, ಆರೋಪಿ ಕಾರ್ತಿಕ್‌ ಕಾಲಿಗೆ ಗುಂಡು ಹಾರಿಸಿದರು. ಆರೋಪಿ ಬಲಗಾಲಿಗೆ ಗುಂಡು ತಾಗಿತು. ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಇದನ್ನೂ ಓದಿ: ಮೂಳೆ ಶಸ್ತ್ರಚಿಕಿತ್ಸೆಯಾಗಿದೆ ಮನೆ ಊಟ ಕೊಡಿ – ಮ್ಯಾಜಿಸ್ಟ್ರೇಟ್‌ಗೆ ಮೂರು ಪತ್ರ ಬರೆದ ದರ್ಶನ್‌!

  • ಆನೇಕಲ್‌: ಕಾಂಗ್ರೆಸ್‌ ಪುರಸಭಾ ಸದಸ್ಯನ ಬರ್ಬರ ಕೊಲೆ – ಹೊಂಚು ಹಾಕಿ ಹತ್ಯೆ

    ಆನೇಕಲ್‌: ಕಾಂಗ್ರೆಸ್‌ ಪುರಸಭಾ ಸದಸ್ಯನ ಬರ್ಬರ ಕೊಲೆ – ಹೊಂಚು ಹಾಕಿ ಹತ್ಯೆ

    ಬೆಂಗಳೂರು: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಪುರಸಭಾ ಸದಸ್ಯನನ್ನ (Congress Municipal Councilor) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ (Anekal) ಪಟ್ಟಣದ ಬಹದ್ದೂರ್‌ಪುರದ ಬಳಿ ನಡೆದಿದೆ.

    ಕಾಂಗ್ರೆಸ್‌ ಪಕ್ಷದ (Congress Party) ಪುರಸಭಾ ಸದಸ್ಯ ರವಿ ಕೊಲೆಯಾದ ವ್ಯಕ್ತಿ. ಹೊಂಚು ಹಾಕಿ ಹಂತಕರು ಕೊಲೆ ಮಾಡಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಹಂತಕರು ಎಸ್ಕೇಪ್‌ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಸರ್ ನರಕ ಅನುಭವಿಸ್ತಿದ್ದಾರೆ: ಜೈಲಿನಲ್ಲಿದ್ಧ ಖೈದಿ ಸಿದ್ಧಾರೂಢ

    ಏನಿದು ಭೀಕರ ಕೃತ್ಯ?
    ಕಳೆದ 15 ದಿನಗಳಿಂದಲೂ ಯುವಕರ ಗ್ಯಾಂಗ್‌ವೊಂದು ಲಾಂಗ್‌ ಹಿಡಿದು ಓಡಾಡುತ್ತಿತ್ತು. ಈ ಬಗ್ಗೆ ʻಪಬ್ಲಿಕ್‌ ಟಿವಿʼ ವರದಿ ಮಾಡಿ ಎಚ್ಚರಿಸಿತ್ತು. ಇದೀಗ ಲಾಂಗ್‌ ಹಿಡಿದು ಓಡಾಡುತ್ತಿದ್ದ ಅದೇ ಯುವಕರ ಗ್ಯಾಂಗ್‌ನಿಂದ ಬಹದ್ದೂರ್‌ಪುರದ ಬಳಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಿದ್ದಾರೆ.

    ಸದ್ಯ ಹಳೇ ವೈಷಮ್ಯಕ್ಕೆ ಹಂತಕರು ಸಿಕ್ಕ ಸಿಕ್ಕ ಕಡೆಗಳಲ್ಲಿ ಮಚ್ಚು ಬೀಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಣ್ಯ ಇಲಾಖೆ ಭರದ ಸಿದ್ಧತೆ – 18 ಆನೆಗಳು ಗುರುತು

  • ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ವಾರಿಯರ್ಸ್ ಆಗಿ ಸೇವೆ ಮಾಡುತ್ತಿರುವವರಿಗೆ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ಗಜೇಂದ್ರ ದಂಪತಿಗಳು ಇಂದು ಬಿರಿಯಾನಿ ಮಾಡಿ ವಿತರಿಸಿದ್ದಾರೆ.

    ಚಿಕ್ಕಬಳ್ಳಾಪುರದ ನಾಲ್ಕನೇ ವಾರ್ಡ್ ಸದಸ್ಯರಾಗಿರುವ ಗಜೇಂದ್ರರವರು ಕಳೆದೆರೆಡು ದಿನಗಳಿಂದ ಪೊಲೀಸರು, ಹೋಂ ಗಾಡ್ರ್ಸ್, ನಗರಸಭೆ ಹಾಗೂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವವರಿಗೆ ಉಚಿತವಾಗಿ ಊಟ, ತಿಂಡಿ ಕೊಡುವ ಕೆಲಸ ಮಾಡುತ್ತಿದ್ದಾರೆ.

    ಇಂದು ವಿಶೇಷವಾಗಿ ಚಿಕನ್ ಬಿರಿಯಾನಿ ವಿತರಿಸಿ ಸಂಕಷ್ಟದ ದಿನಗಳಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸುವ ವಾರಿಯರ್ಸ್‍ಗೆ ಜನ ಕೈಲಾದ ಸಹಾಯ ಮಾಡಬೇಕು. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಜನ ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರತಿ ದಿನ ತಮ್ಮ ಮನೆ ಬಳಿಯೇ ಅಡುಗೆ ತಯಾರಿ ಮಾಡಿ ಪ್ಯಾಕ್ ಮಾಡಿ ನಗರದಲ್ಲಿ ಸಂಚಾರ ಮಾಡಿ ಆಸ್ಪತ್ರೆ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಊಟ ವಿತರಣೆ ಮಾಡುತ್ತಿದ್ದಾರೆ.

  • ಕೊರೊನಾಗೆ ನಗರಸಭೆ ಸದಸ್ಯ ಬಲಿ – ಜನರಲ್ಲಿ ಆತಂಕ

    ಕೊರೊನಾಗೆ ನಗರಸಭೆ ಸದಸ್ಯ ಬಲಿ – ಜನರಲ್ಲಿ ಆತಂಕ

    ಚಿತ್ರದುರ್ಗ: ಕೋವಿಡ್ ಸೋಂಕಿನಿಂದಾಗಿ ನಗರಸಭೆ ಸದಸ್ಯರೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.

    ಮೃತ ವ್ಯಕ್ತಿಯು 40 ವರ್ಷದವರಾಗಿದ್ದು, ಹಿರಿಯೂರು ನಗರಸಭೆಯ ಕಾಂಗ್ರೆಸ್ ಸದಸ್ಯರಾಗಿದ್ದರು. ಮೃತ ಸದಸ್ಯ ಆಗಸ್ಟ್ 07 ರಂದು ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗದಿಂದ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

    ಮೃತರು ಕಳೆದ ಬಾರಿ ಪಕ್ಷೇತರರಾಗಿ ಗೆದ್ದು ಉತ್ತಮ ಸೇವೆ ಮಾಡಿದ್ದರು. ಈ ಬಾರಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಎರಡನೇ ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಸರಳದಿಂದ ಎಲ್ಲರ ಸ್ನೇಹಗಳಿಸಿ, ಸ್ನೇಹ ಜೀವಿ ಎನ್ನಿಸಿದ್ದ ಇವರು, ವಾರ್ಡಿನಲ್ಲಿ ಅಪಾರ ಸೇವೆ ಮಾಡಬೇಕೆಂದುಕೊಂಡಿದ್ದರು. ಆದರೆ  ಕೊರೊನಾಗೆ ಬಲಿಯಾಗಿದ್ದಾರೆ.