Tag: Municipal Council

  • ಮಡಿಕೇರಿಯಲ್ಲಿ 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ

    ಮಡಿಕೇರಿಯಲ್ಲಿ 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ

    ಮಡಿಕೇರಿ: ಮಂಜಿನ ನಗರಿಯ ಪ್ರವಾಸಿ ತಾಣಗಳಲ್ಲಿ‌ ಸ್ವಚ್ಛತೆ ಕಾಪಾಡುವ‌ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ 2 ಲೀಟರ್‌ಗಿಂತಲೂ ಕಡಿಮೆ ಪ್ರಮಾಣದ ತಾತ್ಕಾಲಿಕ (ಮರುಬಳಕೆ ಮಾಡದ) ಪ್ಲಾಸ್ಟಿಕ್‌ ಬಾಟಲಿಗಳ (Plastic Bottle) ಬಳಿಕೆಯನ್ನು ಸಂಪೂರ್ಣ ನಿಷೇಧಿಸಿ ನಗರಸಭೆ ಆದೇಶ ಹೊರಡಿಸಿದೆ.

    ಹೌದು. ಮಡಿಕೇರಿ (Madikeri) ಪ್ರವಾಸಿಗರ ಪಾಲಿನ ಹಾಟ್‌ಸ್ಪಾಟ್‌ ಆಗಿದೆ. ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ದಾಂಗುಡಿ ಇಡುವವರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ಬರುವವರು ನೀರು ಕುಡಿದ ಬಳಿಕ ತಾವು ತರುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ನಗರದಲ್ಲಿ ಸಾವಿರಕ್ಕೂ ಅಧಿಕ ಕೆಜಿಯಷ್ಟು ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ. ಇದರಿಂದ ನಗರದ ಸ್ವಚ್ಛತೆಯೂ ಹಾಳಾಗುತ್ತಿದೆ. ಅಲ್ಲದೇ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರಕ್ಕೂ ಮಾರಕವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಮಡಿಕೇರಿ ನಗರಸಭೆ 2 ಲೀ.ಗಿಂತಲೂ ಕಡಿಮೆ ಪ್ರಮಾಣದ ತಾತ್ಕಾಲಿಕ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಪೂರ್ಣ ನಿಷೇಧಿಸಿದೆ.

    ಈಗಾಗಲೇ ನಗರದ ವರ್ತಕರಿಗೆ ಪ್ರಕಟಣೆ ಮೂಲಕ ನೋಟಿಸ್‌ ಕೊಡಲಾಗಿದೆ. ಜೊತೆಗೆ ಪ್ರತಿ ಅಂಗಡಿ ಮುಂಗಟ್ಟುಗಳಿಗೆ ಭಿತ್ತಿಪತ್ರ ಅಂಟಿಸಿ, ಪ್ಲಾಸ್ಟಿಕ್‌ ಬಾಟಲಿಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಖರೀದಿ ಮಾಡಿರುವ ಬಾಟಲಿಗಳ ಮಾರಾಟಕ್ಕೆ ಅವಕಾಶವಿದ್ದು, ಹೊಸದಾಗಿ ತರಿಸದಂತೆ ನಗರಸಭೆ ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ 50 ಕೋಟಿಗೂ ಅಧಿಕ ಮೌಲ್ಯದ ವಿವಾದಿತ ಜಾಗ ಕಬ್ಜಾ: ಬಿಜೆಪಿ ಆರೋಪ

    ಅಲ್ಲದೇ ನಗರಕ್ಕೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ ತರದಂತೆ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಮುಂದಿನ ಎರಡು ತಿಂಗಳವರೆಗೆ ಅರಿವು ಮೂಡಿಸಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಮಡಿಕೇರಿ‌ ನಗರಸಭೆಯ ನಿರ್ಧಾರವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಕೊಡಗು ಜಿಲ್ಲೆ ಪ್ರವಾಸಿಗರಿಂದ ಕಸದ ತೊಟ್ಟಿಯಾಗುವುದು ಬೇಡ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಲಗಾರರ ಕಿರುಕುಳಕ್ಕೆ ಎದೆಗುಂದಿ ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ: ಉ.ಕನ್ನಡ ಎಸ್‌ಪಿ ಸಲಹೆ

  • ಉಡುಪಿಯಲ್ಲಿ ಮಹಿಳಾ ಮೀನು ವ್ಯಾಪಾರಿಗಳ ಶೆಡ್ ಧ್ವಂಸ – ಸ್ಥಳೀಯರ ಆಕ್ರೋಶ

    ಉಡುಪಿಯಲ್ಲಿ ಮಹಿಳಾ ಮೀನು ವ್ಯಾಪಾರಿಗಳ ಶೆಡ್ ಧ್ವಂಸ – ಸ್ಥಳೀಯರ ಆಕ್ರೋಶ

    ಉಡುಪಿ: ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡಲು ನಿರ್ಮಿಸಿದ್ದ ಶೆಡ್ ಅನ್ನು ನಗರಸಭೆ ಕೆಡವಿದೆ. ಮುನಿಸಿಪಾಲಿಟಿ ಸದಸ್ಯರು ಸ್ವಂತ ಖರ್ಚಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸವನ್ನು ಅಧಿಕಾರಿಗಳು ಕೆಡವಿದ್ದಕ್ಕೆ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ.

    ಉಡುಪಿಯ ಕಿನ್ನಿಮುಲ್ಕಿ ಗೋಪುರ ಬಳಿ ಕಳೆದ 30 ವರ್ಷದಿಂದ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಬಿಸಿಲು ಮಳೆಯನ್ನು ಲೆಕ್ಕಿಸದೇ ಜೀವನವನ್ನು ಮಾಡುತ್ತಿದ್ದಾರೆ. ಸ್ಥಳೀಯ ನಗರಸಭಾ ಸದಸ್ಯೆ ತನ್ನ ಗೌರವ ಧನ 2 ಲಕ್ಷ ರೂ. ಬಳಸಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ 2-3 ದಿನಗಳಿಂದ ಕೆಲಸ ಆಗುತ್ತಿತ್ತು. ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಉಡುಪಿ ನಗರಸಭೆ ಅಧಿಕಾರಿಗಳು ಶೀಟ್ ಶೆಡ್ ಅನ್ನು ಬುಲ್ಡೋಜರ್ ತಂದು ಕೆಡವಿ ಹಾಕಿದ್ದಾರೆ. ಇದನ್ನೂ ಓದಿ: ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ

    ಈ ಬೆಳವಣಿಗೆ ವಿರುದ್ಧ ಸ್ಥಳೀಯ ಆಟೋ ಸ್ಟ್ಯಾಂಡ್ ನಗರಸಭಾ ಸದಸ್ಯೆ, ನೂರಾರು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿ ಸ್ಥಳದಿಂದ ತೆರಳದಂತೆ ದಿಗ್ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು – ಪವಾಡದ ರೀತಿ ಪಾರು

    ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ. ಹೀಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾದ ಪ್ರತಿವಾದ ನಡೆಯಿತು. ನಂತರ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಗರಸಭೆ ಆಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳು ದಿಢೀರ್ ರಾಜೀನಾಮೆ

    ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳು ದಿಢೀರ್ ರಾಜೀನಾಮೆ

    ಜೈಪುರ: ಶಾಲಾ ಶಿಕ್ಷಕರಿಂದ ಥಳಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆಯಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಉನ್ನತ ಸ್ಥಾನದಲ್ಲಿರುವವರೇ ರಾಜೀನಾಮೆ ನೀಡುತ್ತಿದ್ದಾರೆ.

    ನಿನ್ನೆ ಸಂಜೆ ಜೈಪುರದ ಬರನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕ ಮನನೊಂದು ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಪಕ್ಷದ ಶಾಸಕ ಪಾನ್‌ಚಂದ್ ಮೇಘವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಇಂದು ಬರನ್‌ನ 25 ಕಾಂಗ್ರೆಸ್ ಕೌನ್ಸಿಲರ್‌ಗಳ ಪೈಕಿ 12 ಮಂದಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಇದನ್ನೂ ಓದಿ: ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

    ಏನಿದು ಪ್ರಕರಣ?
    ಮಡಿಕೆಯಲ್ಲಿದ್ದ ನೀರು ಕುಡಿದಿದ್ದಕ್ಕಾಗಿ ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್‌ನನ್ನು ಹೊಡೆದಿದ್ದರು. ಇದರಿಂದ ಬಾಲಕ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದ. ಜುಲೈ 20ರಂದು ಬಾಲಕನ ಮೇಲೆ ಹಲ್ಲೆ ನಡೆದಿತ್ತು. ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಇದನ್ನೂ ಓದಿ: ಸೂರ್ಯನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿಯಲ್ಲಿ ಏನಿದೆ?

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಶಾಸಕರೊಬ್ಬರು ರಾಜೀನಾಮೆ ಸಲ್ಲಿಸಿದ್ದರು. ಅವರ ನಿರ್ಧಾರವನ್ನು ಬೆಂಬಲಿಸಿ ಕೌನ್ಸಿಲರ್‌ಗಳಾದ ಯೋಗೇಂದ್ರ ಮೆಹ್ತಾ, ರೋಹಿತಾಶ್ವ ಸಕ್ಸೇನಾ, ರಾಜಾರಾಮ್ ಮೀನಾ, ರೇಖಾ ಮೀನಾ, ಲೀಲಾಧರ್ ನಗರ್, ಹರಿರಾಜ್ ಎರ್ವಾಲ್, ಪಿಯೂಷ್ ಸೋನಿ, ಊರ್ವಶಿ ಮೇಘವಾಲ್, ಯಶವಂತ್ ಯಾದವ್, ಅನ್ವರ್ ಅಲಿ, ಜ್ಯೋತಿ ಜಾತವ್ ಮತ್ತು ಮಯಾಂಕ್ ಮಾಥೋಡಿಯಾ ರಾಜೀನಾಮೆ ನೀಡಿದ್ದಾರೆ. ರಾಜಸ್ಥಾನದಲ್ಲಿ ದಲಿತರು ಹಾಗೂ ಶೋಷಿತ ವರ್ಗಗಳ ಮೇಲಿನ ದೌರ್ಜನ್ಯ ಕಂಡು ಮನನೊಂದು ರಾಜೀನಾಮೆ ನೀಡಲಾಗಿದೆ. ನಾವು ಬುಧವಾರ ಕೋಟಾ ವಿಭಾಗೀಯ ಕೌನ್ಸಿಲರ್‌ಗೆ ನಮ್ಮ ರಾಜೀನಾಮೆ ಪ್ರತಿಗಳನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಯಚೂರು ನಗರಸಭೆಯಿಂದ 25 ಟ್ಯಾಂಕ್ ಸ್ವಚ್ಛತಾ ಕಾರ್ಯ – ನುರಿತ ಸಿಬ್ಬಂದಿ ನಿಯೋಜನೆ

    ರಾಯಚೂರು ನಗರಸಭೆಯಿಂದ 25 ಟ್ಯಾಂಕ್ ಸ್ವಚ್ಛತಾ ಕಾರ್ಯ – ನುರಿತ ಸಿಬ್ಬಂದಿ ನಿಯೋಜನೆ

    ರಾಯಚೂರು: ನಗರಸಭೆ ಕೊನೆಗೂ ಎಚ್ಚೆತ್ತಿದ್ದು ನಗರದ ಕೆಲವು ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ವ್ಯವಸ್ಥೆ ಮಾಡಿದೆ.

    ಕಲುಷಿತ ನೀರಿನಿಂದ ಈಗಾಗಲೇ ಆರು ಜನ ಸಾವನ್ನಪ್ಪಿದ್ದಾರೆ. ಈಗ ನಗರದಲ್ಲಿರುವ 16 ಜಿಎಸ್‍ಎಲ್‍ಆರ್ ಟ್ಯಾಂಕ್ ಹಾಗೂ 36 ಓವರ್ ಹೆಡ್ ಟ್ಯಾಂಕ್‍ಗಳಲ್ಲಿ 25 ಟ್ಯಾಂಕ್‍ಗಳ ಸ್ವಚ್ಚತಾ ಕಾರ್ಯ ನಡೆಸಿದ್ದಾರೆ. ಬೆಳಗಾವಿ, ಮಂಗಳೂರು ಸೇರಿ ವಿವಿಧೆಡೆಯಿಂದ ಕರೆಯಿಸಲಾಗಿರುವ ತಜ್ಞ ತಂಡದಿಂದ ಟ್ಯಾಂಕ್‍ಗಳ ಸ್ವಚ್ಚತಾ ಕಾರ್ಯ ನಡೆಸಲಾಗಿದೆ. ಇದನ್ನೂ ಓದಿ:   ರಾಯಚೂರಿಗೆ ಕೊನೆಗೂ ಭೇಟಿ ನೀಡಿದ ಉಸ್ತುವಾರಿ ಸಚಿವ: ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ

    ರಾಂಪೂರ ಜಲಶುದ್ಧೀಕರಣ ಘಟಕ, ಶುದ್ಧವಾದ ಟ್ಯಾಂಕ್ ಹಾಗೂ ಮನೆಗಳಿಗೆ ಸರಬರಾಜು ಮಾಡಲಾಗುತ್ತಿರುವ ಮಾದರಿಗಳನ್ನ ನಿತ್ಯ ಪರಿಶೀಲನೆ ಮಾಡಿ ಜನರಿಗೆ ಶುದ್ಧ ನೀರು ಕೊಡುವ ಪ್ರಯತ್ನಕ್ಕೆ ನಗರಸಭೆ ಮುಂದಾಗಿದೆ. ಅಪಾಯದ ಮುನ್ಸೂಚನೆ ಸಿಕ್ಕಾಗಲೇ ನಗರಸಭೆ ಎಚ್ಚೆತ್ತಿದ್ದರೆ ಇಷ್ಟೊಂದು ಅವಾಂತರಗಳು ಸಂಭವಿಸುತ್ತಿರಲಿಲ್ಲ.

    ವಾಂತಿ-ಭೇದಿಯಿಂದ ದಾಖಲಾದವರಲ್ಲಿ ನೂರಾರು ಜನ ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಸ್ಯೆ ಈಗ ಬಗೆಹರಿದಿದ್ದು, ಮುಂದೆ ಶುದ್ಧ ನೀರು ಪ್ರತಿ ಮನೆಗೂ ಸರಬರಾಜು ಮಾಡುತ್ತೇವೆ ಎಂದು ನಗರಸಭೆ ಆಡಳಿತ ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

    Live Tv

  • ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

    ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

    ರಾಯಚೂರು: ನಗರಸಭೆ ಕಲುಷಿತ ನೀರಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜೀವಜಲ ವಿಷವಾಗಿರುವುಕ್ಕೆ ಒಂದೊಂದೇ ಹೊಸ ಕಾರಣಗಳು ಬೆಳಕಿಗೆ ಬರುತ್ತಿವೆ. ಶುದ್ಧೀಕರಣ ಘಟಕವಾಯ್ತು, ಚರಂಡಿ ನೀರು ಮಿಕ್ಸ್ ಆಯ್ತು, ಈಗ 25 ವರ್ಷಗಳಾದರೂ ನಗರದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದಿರುವುದರಿಂದ ನೀರು ಮಲಿನವಾಗಿರುವುದು ಬೆಳಕಿಗೆ ಬಂದಿದೆ. ಟ್ಯಾಂಕ್‌ನಲ್ಲಿ ನಾಯಿ, ಕೋತಿಗಳು ಬಿದ್ದು ಸತ್ತರೂ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ರಾಯಚೂರು ನಗರದ ಜನರ ದೌರ್ಭಾಗ್ಯ ಎನ್ನಬೇಕೋ, ಅಧಿಕಾರಿ ವರ್ಗ ಜನಪ್ರತಿನಿಧಿಗಳ ಬೇಜವಾಬ್ದಾರಿ ಎನ್ನಬೇಕೋ ಗೊತ್ತಿಲ್ಲ. ನಗರಸಭೆ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು 5 ಸಾವಾದ ಮೇಲೆ ಒಂದೊಂದೇ ಯಡವಟ್ಟು, ಅವ್ಯವಹಾರಗಳು ಬಯಲಿಗೆ ಬರುತ್ತಿವೆ.

    ನಗರದಲ್ಲಿನ 35 ಓವರ್ ಹೆಡ್ ವಾಟರ್ ಟ್ಯಾಂಕ್‌ಗಳು, 7 ಗ್ರೌಂಡ್ ಲೆವೆಲ್ ಸ್ಟೋರೇಜ್ ರಿಸವೈಯರ್(ಜಿಎಲ್‌ಎಸ್‌ಆರ್)ಗಳನ್ನು ಇಲ್ಲಿನ ಅಧಿಕಾರಿಗಳು ಕಳೆದ 25 ವರ್ಷಗಳಿಂದ ಒಂದು ಬಾರಿಯೂ ಸ್ವಚ್ಛಗೊಳಿಸಿಲ್ಲ. ಟ್ಯಾಂಕ್‌ಗಳ ನಿರ್ಮಾಣವಾಗಿ ನೀರಿನ ಸಂಗ್ರಹ ಆರಂಭವಾದಾಗಿನಿಂದ ಒಂದು ಬಾರಿಯೂ ಸ್ವಚ್ಛತೆಗೆ ಮುಂದಾಗಿಲ್ಲ. ಇಲ್ಲಿನ ಬಹುತೇಕ ಟ್ಯಾಂಕ್‌ಗಳಿಗೆ ಮೇಲೆ ಏರಲು ಏಣಿಯೂ ಇಲ್ಲ. ಜಿಎಲ್‌ಎಸ್‌ಆರ್‌ಗಳ ಮೇಲೆ ಸ್ಲ್ಯಾಬ್‌ಗಳನ್ನು ಮುಚ್ಚದೇ ತೆರೆದು ಹಾಗೇ ಬಿಟ್ಟಿರುವುದರಿಂದ ಆಗಾಗ ನಾಯಿ, ಕೋತಿಗಳು ಬಿದ್ದು ಸತ್ತಿರುವ ಘಟನೆಗಳು ನಡೆದಿವೆ. ಆದರೂ ಸ್ವಚ್ಛತಾ ಕಾರ್ಯವನ್ನು ಮಾಡಿಲ್ಲ. ಟ್ಯಾಂಕ್ ಸುತ್ತಮುತ್ತಲಿನ ಮನೆಗಳ ನಿವಾಸಿಗಳಂತೂ ಟ್ಯಾಂಕ್ ಸ್ವಚ್ಛತೆ ಎನ್ನುವುದನ್ನೇ ನಾವು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

    ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಇದುವರೆಗೂ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ನಗರಸಭೆ ಸರಬರಾಜು ಮಾಡುವ ನೀರನ್ನೇ ಜನ ಈಗಲೂ ಕುಡಿಯುತ್ತಿದ್ದಾರೆ. ಕಲುಷಿತ ನೀರಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಜಲಸಂಗ್ರಹಗಾರಗಳ ಮೇಲೆ ಸ್ಲ್ಯಾಬ್ ಮುಚ್ಚಿಸುವ ಕೆಲಸವನ್ನು ಸ್ವತಃ ಜಿಲ್ಲಾಧಿಕಾರಿ ಮಾಡಬೇಕಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಇದ್ದಿದ್ದರೆ…: ಭುಗಿಲೆದ್ದ ಪ್ರತಿಭಟನೆಗೆ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ

    ಕನಿಷ್ಠ ನಗರದಲ್ಲಿನ ಖಾಸಗಿ ಆರ್‌ಓ ಪ್ಲಾಂಟ್‌ಗಳ ಮುಖಾಂತರವಾದರೂ ಶುದ್ಧ ಕುಡಿಯುವ ನೀರನ್ನು ಬಾಧಿತ ಪ್ರದೇಶಗಳ ಜನರಿಗೆ ತಲುಪಿಸಬೇಕಿದೆ. ಆದರೆ ಎಲ್ಲವೂ ಸರಿಮಾಡದೆ ಜಲಶುದ್ಧೀಕರಣ ಘಟಕದಲ್ಲಿ ಕೇವಲ ಕ್ಲೋರಿನೇಷನ್ ಮಾಡಿ ಸರಬರಾಜು ಮಾಡಲಾಗುತ್ತಿದೆ. ಚರಂಡಿಯಲ್ಲಿರುವ ಪೈಪ್ ಲೈನ್ ದುರಸ್ತಿ, ಟ್ಯಾಂಕ್ ಸ್ವಚ್ಛತೆ ಮುಗಿಯುವವರೆಗೆ ರಾಯಚೂರು ಜನರಿಗೆ ನೆಮ್ಮದಿ ಸಿಗುವ ಹಾಗೆ ಕಾಣುತ್ತಿಲ್ಲ.

  • ಒಡಿಶಾ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ

    ಒಡಿಶಾ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ

    ಭುವನೇಶ್ವರ್: ಒಡಿಶಾ ನಗರಸಭೆಗೆ ಮೊದಲ ಮುಸ್ಲಿಂ ಮಹಿಳಾ ಅಧ್ಯಕ್ಷರಾಗಿ ಗುಲ್ಮಕಿ ದಲ್ವಾಜಿ ಹಬೀಬ್ ಅವರು ಚುನಾಯಿತರಾಗಿ ಇತಿಹಾಸ ನಿರ್ಮಿಸಿದ್ದಾರೆ.

    ಭದ್ರಕ್ ನಗರಸಭೆಯ 108 ವಾರ್ಡ್‍ಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಇದೀಗ ಮುಸ್ಲಿಂ ಸಮುದಾಯದವರಾದ ಗುಲ್ಮಕಿ ದಲ್ವಾಜಿ ಹಬೀಬ್ ಅವರು ಮೊದಲ ಅಧ್ಯಕ್ಷರಾಗಿ ಆಗಿ ಆಯ್ಕೆಯಾಗಿದ್ದಾರೆ.

    ಗುಲ್ಮಕಿ ಅವರು ವ್ಯಾಪಾರ ಆಡಳಿತ ಪಧವೀಧರರಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುಲ್ಮಕಿ ಅವರು ಬಿಜೆಡಿಯ ಸಸ್ಮಿತಾ ಮಿಶ್ರಾ ಅವರನ್ನು 3,256 ಮತಗಳಿಂದ ಸೋಲಿಸಿದ್ದರು. ಪತಿ ಬಿಜೆಡಿ ನಾಯಕರಾಗಿದ್ದರೂ ರಾಜಕೀಯಕ್ಕೆ ಹೊಸಬರಾದ ಗುಲ್ಮಕಿ ಅವರು ಸ್ಥಳೀಯ ಜನರ ಪ್ರೋತ್ಸಾಹದ ನಂತರ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆರಂಭದಲ್ಲಿ ನಾನು ಹೆದರುತ್ತಿದ್ದೆ. ಆದರೆ ಕ್ರಮೇಣ ಎಲ್ಲಾ ಸಮುದಾಯಗಳ ಜನರು ನನ್ನಂತಹ ವಿದ್ಯಾವಂತ ಮಹಿಳೆಯ ಮೇಲೆ ನಂಬಿಕೆ ಇಟ್ಟು ನನ್ನನ್ನು ಬೆಂಬಲಿಸಲು ಮುಂದೆ ಬಂದರು ಎಂದು ಹೇಳಿದರು.

    ಒಡಿಶಾ ಕರಾವಳಿಯಲ್ಲಿರುವ ಭದ್ರಕ್ ಪಟ್ಟಣವು ಎಲ್ಲಾ ಸಮುದಾಯಗಳ ಜನರನ್ನು ಹೊಂದಿದೆ. ಹಿಂದೂಗಳು ಶೇ.59.72, ಮುಸ್ಲಿಮರು ಶೇ.39.56, ಕ್ರೈಸ್ತರು ಶೇ.0.12, ಸಿಖ್ಖರು, ಬೌದ್ಧರು ಮತ್ತು ಜೈನರು ಶೇ 0.02 ಜನಸಂಖ್ಯೆಯಿದೆ. ಇದನ್ನೂ ಓದಿ: ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ

    ನಗರಸಭೆ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ನಾನು ಉತ್ತಮ ರಾಜಕಾರಣಿಯಾಗಬಹುದು ಅಂತ ನಾನು ಭಾವಿಸುತ್ತೇನೆ. ನನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಕುಟುಂಬದ ಇತರರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನನ್ನ ತಾಯಿಯ ಚಿಕ್ಕಪ್ಪ ಕೌನ್ಸಿಲರ್ ಆಗಿದ್ದರು. ನನ್ನ ತಾಯಿಯ ಚಿಕ್ಕಮ್ಮ ಅನೇಕ ವರ್ಷಗಳ ಹಿಂದೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

  • ರಾಯಚೂರು ನಗರಸಭೆ ಅಧ್ಯಕ್ಷ ಚುನಾವಣೆ: ಜೋರಾದ ಕುದುರೆ ವ್ಯಾಪಾರ, ಮುಖಂಡರ ಹೊಡೆದಾಟ

    ರಾಯಚೂರು ನಗರಸಭೆ ಅಧ್ಯಕ್ಷ ಚುನಾವಣೆ: ಜೋರಾದ ಕುದುರೆ ವ್ಯಾಪಾರ, ಮುಖಂಡರ ಹೊಡೆದಾಟ

    ರಾಯಚೂರು: ಸ್ಥಳೀಯ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಗಲಾಟೆ ಜೋರಾಗಿದೆ. ಒಂದೆಡೆ ಕುದುರೆ ವ್ಯಾಪಾರ, ಪ್ರವಾಸಗಳು ನಡೆದಿದ್ದರೆ, ಇನ್ನೊಂದೆಡೆ ಹೊಡೆದಾಟಗಳು ನಡೆದಿವೆ.

    ನಗರಸಭೆ ಅಧ್ಯಕ್ಷರ ಚುನಾವಣೆ ಹಿನ್ನೆಲೆ ಪಕ್ಷೇತರ ಸದಸ್ಯನನ್ನ ಹೈಜಾಕ್ ಮಾಡಿ ಬಿಜೆಪಿ ಮುಖಂಡರು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ನಗರದ ವಾರ್ಡ್ ನಂ.29ರ ಪಕ್ಷೇತರ ಸದಸ್ಯ ಸುನೀಲ್ ಕುಮಾರ್ ಸೇರಿ ಕೆಲ ಪಕ್ಷೇತರ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಇದನ್ನು ತಿಳಿದು ಸದಸ್ಯನನ್ನು ಕರೆದೊಯ್ಯಲು ಕಾಂಗ್ರೆಸ್ ಮುಖಂಡರು ಬಂದಾಗ ಆಂಧ್ರಪ್ರದೇಶ ವಿಜಯವಾಡದಲ್ಲಿ ಗಲಾಟೆಯಾಗಿದೆ. ಈ ಸದಸ್ಯ ಎರಡು ಕಡೆ ಗೇಮ್ ಆಡಿದ್ದಾನೆ ಎಂದು ಗೂಸಾ ಕೂಡ ಬಿದ್ದಿದ್ದು, ಸ್ಥಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಮಾರಾಮಾರಿ ನಡೆದಿದೆ. ಇದನ್ನೂ ಓದಿ: ತರಗತಿಯಲ್ಲಿ ಹಿಜಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿ – ವಿವಾದಕ್ಕೆ ಎಡೆಮಾಡಿಕೊಟ್ಟ ವೀಡಿಯೋ

    ಇಬ್ಬರು ಪಕ್ಷೇತರರನ್ನು ಸೆಳೆದು ಬಿಜೆಪಿ ಮುಖಂಡರು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಮಹಿಳಾ ಸದಸ್ಯರ ಕುಟುಂಬದವರನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಗಲಾಟೆ ಬಳಿಕ ವಾರ್ಡ್ ನಂ.1ರ ಬಿಜೆಪಿ ಸದಸ್ಯೆ ಲಕ್ಷ್ಮೀ ಎಂಬುವವರ ಪುತ್ರ ಸನ್ನಿ ರೊನಾಲ್ಡ್, ತಾಕತ್ತಿದ್ದರೆ ಸದಸ್ಯರನ್ನು ನಿಮ್ಮ ಕಡೆ ಕರೆದುಕೊಂಡು ಹೋಗಿ ಎಂದು ಅವಾಜ್ ಹಾಕಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಈ ಹಿಂದಿನ ಅಧ್ಯಕ್ಷ ಕಾಂಗ್ರೆಸ್‍ನ ಇ. ವಿನಯಕುಮಾರ್ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಅವಿಶ್ವಾಸ ಮಂಡನೆ ಹಿನ್ನೆಲೆ ಅಧ್ಯಕ್ಷ ಸ್ಥಾನ ತೆರವಾಗಿದೆ. ಮಾರ್ಚ್ 30 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕುದುರೆ ವ್ಯಾಪಾರ, ಪ್ರವಾಸ, ಹೊಡೆದಾಟ ಪಾಲಿಟಿಕ್ಸ್ ನಡೆದಿದೆ. ಒಟ್ಟು 35 ಸದಸ್ಯರಿರುವ ನಗರಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 12, , ಜೆಡಿಎಸ್ 3, ಪಕ್ಷೇತರ 9 ಸ್ಥಾನ ಪಡೆದಿವೆ. ಕಾಂಗ್ರೆಸ್‍ನಿಂದ ಸಾಜಿದ್ ಸಮೀರ್, ಬಿಜೆಪಿಯಿಂದ ಲಲಿತಾ ಕಡಗೋಲರಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಿದೆ. ಇದನ್ನೂ ಓದಿ: ಗ್ರಾಮಕ್ಕೆ ಬಸ್‌ ಬಿಡಿ: ಸಿಎಂ ಕಾರು ತಡೆದು ಮನವಿ ಪತ್ರ ಕೊಟ್ಟ ವಿದ್ಯಾರ್ಥಿನಿಯರು

    ಬೇಸಿಗೆ ಹಿನ್ನೆಲೆ ರಾಯಚೂರು ನಗರದಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ ಸೇರಿ ನಾನಾ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಆದರೆ ನಗರಸಭೆ ಸದಸ್ಯರು ಮಾತ್ರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಪರಸ್ಪರ ಹೊಡೆದಾಡಿಕೊಂಡು, ಹೊರರಾಜ್ಯ ಪ್ರವಾಸದಲ್ಲಿದ್ದಾರೆ.

  • ಮಡಿಕೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಸರ್ಕಾರದ ಗ್ರೀನ್ ಸಿಗ್ನಲ್

    ಮಡಿಕೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಸರ್ಕಾರದ ಗ್ರೀನ್ ಸಿಗ್ನಲ್

    – ಪಬ್ಲಿಕ್ ಟಿವಿ ಡಿಜಿಟಲ್ ವರದಿ ಫಲಶೃತಿ

    ಮಡಿಕೇರಿ: ಕಳೆದ 4 ತಿಂಗಳಿನಿಂದ ನಡೆಯದ ಮಡಿಕೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಇದೀಗ ಗ್ರೀನ್ ಸಿಗ್ನಲ್ ನೀಡಿದೆ.

    ಮೇ ತಿಂಗಳಿನಿಂದಲೇ ಮಡಿಕೇರಿ ನಗರಸಭೆಗೆ ಸದಸ್ಯರ ಆಯ್ಕೆ ಚುನಾವಣೆ ಮೂಲಕ ನಡೆದಿತ್ತಾದರೂ ಕೋವಿಡ್ ಹಿನ್ನಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಅಂಗೀಕಾರ ನೀಡಿರಲಿಲ್ಲ.

    ಈ ಹಿನ್ನೆಲೆಯಲ್ಲಿ ನಿಮ್ಮ ಪಬ್ಲಿಕ್ ಟಿವಿ ಇಂದು ವರದಿ ಮಾಡಿತ್ತು. ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ನೋಡಿದ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಗಮನ ಸೆಳೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅವಕಾಶ ನೀಡುವಂತೆ ಸೂಚಿಸಿದ್ದರು. ಇದನ್ನೂ ಓದಿ: ನಾನು ಒಬ್ಬ ಜನಪ್ರತಿನಿಧಿ – ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು

    ಅಂತಿಮವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಡಿಕೇರಿ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅನುಮತಿ ನೀಡಲಾಗಿದೆ. 2-3 ದಿನಗಳಲ್ಲಿ ಈ ಸಂಬಂಧಿತ ಸೂಚನೆ ಜಿಲ್ಲಾಧಿಕಾರಿಗಳಿಗೆ ತಲುಪಲಿದೆ. ಇದನ್ನೂ ಓದಿ: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮುಂದಾದ ಸರ್ಕಾರ – ಮಸೂದೆಯಲ್ಲಿ ಏನಿದೆ?

    ಜಿಲ್ಲಾಧಿಕಾರಿಗಳು ಏಳು ದಿನಗಳೊಳಗಾಗಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳುವಂತೆ ಅಧಿಸೂಚನೆ ಹೊರಡಿಸಲಿದ್ದಾರೆ. ಕಳೆದ 30 ತಿಂಗಳಿನಿಂದ ಮಡಿಕೇರಿ ನಗರಸಭೆಗೆ ಇರದಿದ್ದ ಅಧ್ಯಕ್ಷ, ಉಪಾಧ್ಯಕ್ಷರು ಅಕ್ಟೋಬರ್ ಮೊದಲ ವಾರದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಂತೆಯೇ ನಗರಸಭೆಯ 23 ಸದಸ್ಯರೂ ಅಂದಿನಿಂದ ತಮ್ಮ ಅಧಿಕಾರದ ಹಕ್ಕು ಪಡೆಯಲಿದ್ದಾರೆ.

  • 11 ವರ್ಷದ ಬಳಿಕ ಚಾಮರಾಜನಗರ ನಗರಸಭೆಯಲ್ಲಿ ಅರಳಿತು ಕಮಲ: ಪುಟ್ಟರಂಗಶೆಟ್ಟಿಗೆ ಮುಖಭಂಗ

    11 ವರ್ಷದ ಬಳಿಕ ಚಾಮರಾಜನಗರ ನಗರಸಭೆಯಲ್ಲಿ ಅರಳಿತು ಕಮಲ: ಪುಟ್ಟರಂಗಶೆಟ್ಟಿಗೆ ಮುಖಭಂಗ

    ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿದ್ದ ಚಾಮರಾಜನಗರ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, ಈ ಮೂಲಕ 11 ವರ್ಷಗಳ ಬಳಿಕ ಕಮಲ ಅರಳಿದಂತಾಗಿದೆ. ಆಶಾ ನಟರಾಜು ಅಧ್ಯಕ್ಷೆಯಾಗಿ, ಸುಧಾ ಉಪಾಧ್ಯಕ್ಷೆಯಾಗಿ ಗದ್ದುಗೆ ಏರಿದ್ದಾರೆ.

    ಬಿಜೆಪಿಯ ಮಮತಾ ಬಾಲಸುಬ್ರಹ್ಮಣ್ಯ ಹಾಗೂ ಸುಧಾ ನಡುವೆ ಅಧ್ಯಕ್ಷ ಪದವಿಗಾಗಿ ತೀವ್ರ ಪೈಪೋಟಿ ನಡೆದು ಹಲವು ಸಭೆಗಳ ಬಳಿಕ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆಶಾ ನಟರಾಜು ಹೆಸರು ಅಂತಿಮವಾಗಿ ನಾಮಪತ್ರ ಸಲ್ಲಿಸಿದರು.

    ಬಿಎಸ್‍ಪಿ, ಸಂಸದರ ಮತದಿಂದ ಗೆಲವು
    ಸಂಸದ, ಶಾಸಕರಿಗೂ ಮತದಾನ ಹಕ್ಕಿರುವುದರಿಂದ ವಿ.ಶ್ರೀನಿವಾಸಪ್ರಸಾದ್ ಮತ್ತು ಬಿಎಸ್‍ಪಿಯಿಂದ ಆಯ್ಕೆಯಾಗಿರುವ ಶಾಸಕ ಮಹೇಶ್ ಬೆಂಬಲಿಗರಾದ ಪ್ರಕಾಶ್ ಬಿಜೆಪಿಗೆ ಮತ ನೀಡುವ ಮೂಲಕ ಕಮಲ ಜಯಭೇರಿ ಬಾರಿಸಲು ಸಹಾಯ ಮಾಡಿದರು.

    ಫಲಿಸದ ಕೈ ತಂತ್ರ
    ಕಾಂಗ್ರೆಸ್ ನಿಂದ ಅಧ್ಯಕ್ಷ ಅಭ್ಯರ್ಥಿಯಾಗಿ ಶಾಂತಿ, ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ಚಂದ್ರಕಲಾ ನಾಮಪತ್ರ ಸಲ್ಲಿಸಿದ್ದರು. ಎಸ್‍ಡಿಪಿಐ, ಪಕ್ಷೇತರ ಹಾಗೂ ಬಿಎಸ್‍ಪಿ ಸದಸ್ಯರೆಲ್ಲರ ಮತ ಪಡೆದು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆದಿತ್ತು. ಆದರೆ ಬಿಎಸ್‍ಪಿ ಸದಸ್ಯ ಕಮಲಕ್ಕೆ ಜೈ ಎನ್ನುವ ಮೂಲಕ ಕೈ ರಣತಂತ್ರ ವಿಫಲಗೊಳಿಸಿದರು. ಇದರೊಟ್ಟಿಗೆ ಶಾಸಕ ಪುಟ್ಟರಂಗಶೆಟ್ಟಿ ಅಧಿಕಾರ ಉಳಿಸಿಕೊಳ್ಳಲಾಗದೆ ಮುಖಭಂಗ ಅನುಭವಿಸಿದರು. ಶಾಸಕ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ಮತ ಚಲಾಯಿಸಲು ಬಾರದಿದ್ದರಿಂದ ಕಾಂಗ್ರೆಸ್ 14 ಹಾಗೂ ಬಿಜೆಪಿ 17 ಮತಗಳನ್ನು ಪಡೆಯಿತು.

    2009ರಲ್ಲಿ ಮಹಾದೇವ ನಾಯ್ಕ ಅವರು ಅಧ್ಯಕ್ಷರಾಗುವ ಮೂಲಕ ಮೊದಲ ಬಾರಿ ಚಾಮರಾಜನಗರದಲ್ಲಿ ಕಮಲ ಅರಳಿಸಿದ್ದರು. ಇದಾದ ಬಳಿಕ ಈಗ ನಗರಸಭೆ ಮತ್ತೆ ಬಿಜೆಪಿ ತೆಕ್ಕೆಗೆ ಬಂದಿದೆ.

  • ಬಿಜೆಪಿ, ಜೆಡಿಎಸ್ ರಾಜಕೀಯ ಗುದ್ದಾಟ – ಅರಸೀಕೆರೆ ನಗರಸಭೆ ಅಧ್ಯಕ್ಷ ಚುನಾವಣೆ ಮುಂದೂಡಿಕೆ

    ಬಿಜೆಪಿ, ಜೆಡಿಎಸ್ ರಾಜಕೀಯ ಗುದ್ದಾಟ – ಅರಸೀಕೆರೆ ನಗರಸಭೆ ಅಧ್ಯಕ್ಷ ಚುನಾವಣೆ ಮುಂದೂಡಿಕೆ

    ಹಾಸನ: ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದು, ಇಂದು ನಿಗದಿಯಾಗಿದ್ದ ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಗಿದೆ.

    ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಮಾತ್ರ ಎಸ್‍ಟಿ ಅಭ್ಯರ್ಥಿ ಜಯಗಳಿಸಿದ್ದಾರೆ. ಹೀಗಾಗಿ ಜೆಡಿಎಸ್ ಹೆಚ್ಚು ಸ್ಥಾನ ಗೆದ್ದಿದ್ದರೂ ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ. ಹೀಗಾಗಿ ಮೀಸಲಾತಿ ಕಾನೂನು ಬಾಹಿರ ಎಂದು ಜೆಡಿಎಸ್ ನ್ಯಾಯಾಲಯದ ಮೆಟ್ಟಿಲೇರಿದ್ದು ಚುನಾವಣೆ ನಡೆದರೂ ಮುಂದಿನ ಆದೇಶ ಬರುವವರೆಗೂ ಫಲಿತಾಂಶ ಪ್ರಕಟಿಸದಂತೆ ಕೋರ್ಟ್ ಆದೇಶ ನೀಡಿದೆ.

    ಈ ನಡುವೆ ನಿನ್ನೆ ಹಾಸನ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಆದರೆ ಉಪಾಧ್ಯಕ್ಷ ಚುನಾವಣೆ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ನಾವು ನಾಮಪತ್ರ ಸಲ್ಲಿಸಿಲ್ಲ. ಬೇರೆ ದಿನ ಮತ್ತೆ ಉಪಾಧ್ಯಕ್ಷ ಚುನಾವಣೆ ನಡೆಸಬೇಕು ಎಂದು ಜೆಡಿಎಸ್ ಪಟ್ಟು ಹಿಡಿದು ಇಂದು ಹಾಸನ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆದರೆ ಒಮ್ಮೆ ನಿಗದಿಯಾದ ಚುನಾವಣೆಯನ್ನು ಮತ್ತೊಮ್ಮೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾಗಿದೆ.

    ಇತ್ತ ಇಂದು ನಡೆಯಬೇಕಿದ್ದ ಅರಸೀಕೆರೆ ನಗರಸಭೆ ಚುನಾವಣೆಯಲ್ಲೂ ಹೈಡ್ರಾಮಾ ನಡೆದಿದ್ದು, ಕೋರಂ ಕೊರತೆಯಿಂದ ಚುನಾವಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಪಡೆದಿದೆ. ಆದರೆ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವುದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಇಂದು ಅರಸೀಕೆರೆ ನಗರಸಭೆ ಚುನಾವಣೆಗೆ ಸಾಮೂಹಿಕ ಗೈರಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.