Tag: municipal

  • ಆಟವಾಡ್ತಿದ್ದ ಮಕ್ಕಳ ಮೇಲೆ 20ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ; ಮುಂದೇನಾಯ್ತು ನೋಡಿ…

    ಆಟವಾಡ್ತಿದ್ದ ಮಕ್ಕಳ ಮೇಲೆ 20ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ; ಮುಂದೇನಾಯ್ತು ನೋಡಿ…

    ಲಕ್ನೋ: ಲಕ್ನೋದ ಠಾಕೂರ್‌ಗಂಜ್‌ನ ಮುಸಾಹಿಬ್‌ಗಂಜ್‌ನಲ್ಲಿರುವ ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ 20ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

    ಈ ದಾಳಿಯಲ್ಲಿ 8 ವರ್ಷದ ಹುಡುಗ ಮೃತಪಟ್ಟಿದ್ದು, ಮೃತನ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಅಣ್ಣ-ತಂಗಿಯನ್ನು ಕೆಜಿಎಂಯುನ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಬಾಲಕ ಮೊಹಮ್ಮದ್ ಹೈದರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅವರ 5 ವರ್ಷದ ಸಹೋದರಿ ಜನ್ನತ್ ಸ್ಥಿತಿ ಗಂಭೀರವಾಗಿದ್ದು, ICUಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಮನೆಗೆ ಭೇಟಿ ಕೊಟ್ಟ ನವಜೋತ್ ಸಿಂಗ್ ಸಿಧು

    dogs

    ಮೃತ ಬಾಲಕನ ಪೋಷಕರು ಲಕ್ನೋದ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ಧ ಧ್ವನಿ ಎತ್ತಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯಲು ಆದೇಶ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಈ ಹಿಂದೆಯೇ ಮನವಿ ಮಾಡಿದ್ದರು. ಪದೇ – ಪದೇ ಸ್ಥಳಿಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ನೀಡಿ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ, ಲಕ್ನೋ ಮಹಾನಗರ ಪಾಲಿಕೆ (LMC) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

    ಸರ್ಕಾರೇತರ ಸಂಸ್ಥೆಗಳು (NGO) ನಾಯಿಗಳನ್ನು ಹಿಡಿಯಲು ವಿರೋಧ ವ್ಯಕ್ತಪಡಿಸಿರುವುದರಿಂದ ನಾಯಿಗಳನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಎಲ್‌ಎಂಸಿ ನಿರಾಕರಿಸಿತ್ತು. ಸಂತ್ರಸ್ತೆಯ ತಂದೆ ಮುನ್ಸಿಪಲ್ ಕಾರ್ಪೊರೇಷನ್ ವಲಯ 6ರ ಅಧಿಕಾರಿಗಳು ಮತ್ತು ಇತರರ ವಿರುದ್ಧ ಠಾಕೂರ್‌ಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.

  • ಕರ್ತವ್ಯದ ವೇಳೆ ಎಡವಿ ಬೀಳ್ತಿದ್ದ ಸಿಬ್ಬಂದಿ- ಚಪ್ಪಲಿಯನ್ನೇ ಬ್ಯಾನ್ ಮಾಡಿದ ಆಡಳಿತ ಮಂಡಳಿ

    ಕರ್ತವ್ಯದ ವೇಳೆ ಎಡವಿ ಬೀಳ್ತಿದ್ದ ಸಿಬ್ಬಂದಿ- ಚಪ್ಪಲಿಯನ್ನೇ ಬ್ಯಾನ್ ಮಾಡಿದ ಆಡಳಿತ ಮಂಡಳಿ

    ವಾಷಿಂಗ್ಟನ್: ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ಹಾಕುತ್ತಿದ್ದ ಮುನಿಸಿಪಲ್ ಸಿಬ್ಬಂದಿ ಎಡವಿ ಬೀಳುತ್ತಿದ್ದರು. ಹೀಗಾಗಿ ಈ ತರಹದ ಚಪ್ಪಲಿಗಳನ್ನು ಅಮೆರಿಕಾದ ಕನಿಕ್ಟಿಕುಟ್ ನಗರದಲ್ಲಿ ಸಿಬ್ಬಂದಿ ಹಾಕುವಂತಿಲ್ಲ ಎಂದು ಮುನಿಸಿಪಲ್ ನಿಷೇಧ ಹೇರಿದೆ.

    ಹೌದು, ವಿಚಿತ್ರ ಏನಿಸಿದರು ಇದು ಸತ್ಯ. ಪದೇ ಪದೇ ಕೆಲಸದ ವೇಳೆ ಸಿಬ್ಬಂದಿ ಎಡವಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಕನಿಕ್ಟಿಕುಟ್ ಮುನಿಸಿಪಲ್ ಆಡಳಿತ ಮಂಡಳಿ ಸಿಬ್ಬಂದಿಗಳ ಹಿತದೃಷ್ಟಿಯಿಂದ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ನಿಷೇಧಿಸಿದೆ. ಆದ್ದರಿಂದ ಜೂನ್‍ನಿಂದ ಈ ನಿಯಮ ಜಾರಿಗೆ ಬಂದಿದ್ದು, ಇನ್ನು ಮುಂದೆ ಸಿಬ್ಬಂದಿ ಈ ತರಹದ ಚಪ್ಪಲಿ ಹಾಕುವಂತಿಲ್ಲ ಎಂದು ಆದೇಶಿಸಿದೆ.

    ಆದರೆ ಈ ನಿಯಮದಲ್ಲೂ ಕೆಲ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದ್ದು, ಪ್ರಮುಖವಾಗಿ ಈಜುಕೊಳದಲ್ಲಿ ಅಥವಾ ಅದರ ಬಳಿ ಕೆಲಸ ಮಾಡುವ ಸಿಬ್ಬಂದಿ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ಧರಿಸಬಹುದಾಗಿದೆ. ಮುನಿಸಿಪಲ್‍ನ ಈ ಹೊಸ ನಿಯಮವನ್ನು ಅನೇಕ ಸಿಬ್ಬಂದಿ ಸ್ವಾಗತಿಸಿದ್ದಾರೆ. ನಮಗಾಗಿ ಆಡಳಿಯ ಮಂಡಳಿ ಯೋಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಜಪಾನ್‍ನ ಕಂಪನಿಯೊಂದರಲ್ಲಿ ಸಿಬ್ಬಂದಿ ಹೈ ಹೀಲ್ಸ್ ಧರಿಸುವಂತಿಲ್ಲ ಎಂದು ನಿಯಮ ತರಲಾಗಿತ್ತು. ಇದಕ್ಕೆ ಕುಟೂ ಅಭಿಯಾನ ಎಂದು ಹೆಸರಿಟ್ಟು ನಿಯಮವನ್ನು ಕಾರ್ಯರೂಪಕ್ಕೆ ತರಲಾಗಿತ್ತು.

  • ನಗರಸಭೆ ಸದಸ್ಯನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ವಶ

    ನಗರಸಭೆ ಸದಸ್ಯನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ವಶ

    ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಅಕ್ರಮವಾಗಿ ಪಡಿತರವನ್ನು ಸಂಗ್ರಹಿಸಿಟ್ಟಿದ್ದ ನಗರಸಭಾ ಸದಸ್ಯ ಸೇರಿ ನಾಲ್ವರನ್ನು ಅಪರಾಧ ಪತ್ತೆ ದಳದ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಜನರಿಗೆ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಬೇಕಿದ್ದ ಪಡಿತರ ಅಕ್ಕಿ ಮತ್ತು ತೊಗರಿಬೇಳೆ ಮೂಟೆಗಳನ್ನು ನಗರಸಭೆ ಸದಸ್ಯ ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿಗಳು, ಅಕ್ರಮವಾಗಿ ಬನ್ನೂರಿನ ಮುಸ್ಲಿಂ ಬ್ಲಾಕ್ ನ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 150 ಮೂಟೆ ಅಕ್ಕಿ ಹಾಗೂ ಅಪಾರ ಪ್ರಮಾಣದ ತೊಗರಿಬೇಳೆ ಮೂಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಡಿತರ ದಾಸ್ತಾನನ್ನು ಅಕ್ರಮವಾಗಿ ಹೊಂದಿದ್ದ ಆರೋಪದ ಮೇಲೆ ಅಪರಾಧ ಪತ್ತೆ ದಳದ ಅಧಿಕಾರಿಗಳು ಬನ್ನೂರು ನಗರಸಭಾ ಸದಸ್ಯ ಸಯ್ಯದ್ ಸೇರಿದಂತೆ ಇತರೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಘಟನೆ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ರಾಯಚೂರು: ರಾಯಚೂರು ನಗರಸಭೆ ಸಭಾಂಗಣದಲ್ಲಿ ನಡೆದ ಮಹಾ ಸಾಮಾನ್ಯ ಸಭೆ ಸದಸ್ಯರ ಕೂಗಾಟ, ಹಾರಾಟಗಳಿಗೆ ಬಲಿಯಾಯಿತು. ಸಭೆ ಆರಂಭದಿಂದಲೂ ವೈಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡ ಸದಸ್ಯರು ಅಧಿಕಾರಿಗಳು ಮಾತು ಕೇಳ್ತಿಲ್ಲಾ ಎಂದು ಹರಿಹಾಯ್ದರು. ನಗರಸಭೆಯಲ್ಲಿ ಸದಸ್ಯರನ್ನು ಕೇಳುವವರಿಲ್ಲ ಅಂತ ತಮ್ಮ ಗೋಳು ತೋಡಿಕೊಂಡರು.

    ಸದಸ್ಯೆ ಸೀಮಾ ನದಾಫ್ ತಮ್ಮ ವಾರ್ಡಿನ ಕಬರಸ್ತಾನದಲ್ಲಿ ತಮಗೇ ತಿಳಿಯದಂತೆ ಶೌಚಾಲಯ ನಿರ್ಮಿಸಿದ್ದಾರೆ ಅಂತ ಕೂಗಾಡಿದರು. ಇತರೆ ಸದಸ್ಯರು ಬೆಂಬಲ ಕೊಡದಿದ್ದಕ್ಕೆ ಖುರ್ಚಿಯಿಂದ ಎದ್ದು ಅಧ್ಯಕ್ಷೆ, ಉಪಾಧ್ಯಕ್ಷ, ಪೌರಾಯುಕ್ತರ ವಿರುದ್ಧ ಆರೋಪಿಸಿ ಪ್ರತಿಭಟನೆ ನಡೆಸಿದರು. ಗೊತ್ತುವಳಿಗಳು ಚರ್ಚಿಸದೇ ಎಸ್ ಪಾಸ್ ಆಗುತ್ತಿವೆ ಅಂತ ಸದಸ್ಯ ನರಸಪ್ಪ ಟೇಬಲ್ ಹಾರಿ ಸಭಾಂಗಣದ ಬಾವಿಗೆ ಇಳಿದು ನಗರಸಭೆ ಉಪಾಧ್ಯಕ್ಷ ಜಯಣ್ಣ ವಿರುದ್ಧ ಕೂಗಾಡಿ ಗೊಂದಲ ಸೃಷ್ಟಿ ಮಾಡಿದರು.

    ಇನ್ನೂ ಸದಸ್ಯ ಮೆಹಬೂಬ್ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೀಪಾಲಂಕಾರಕ್ಕೆ ನಗರಸಭೆಯಿಂದ ನೀಡಲಾದ 3 ಲಕ್ಷ 90 ಸಾವಿರ ರೂಪಾಯಿ ಲೆಕ್ಕ ತೋರಿಸುವಂತೆ ಆಗ್ರಹಿಸಿ ಕಳ್ಳಲೆಕ್ಕಗಳಲ್ಲಿ ನಗರಸಭೆ ಮುಳುಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರೆಲ್ಲರೂ ಪಕ್ಷಭೇದ ಮರೆತು ನಗರಸಭೆ ಸದಸ್ಯರಿಗೆ ಬೆಲೆ ಸಿಗುತ್ತಿಲ್ಲ ಅಂತ ಕೂಗಾಡಿದರು. ಗದ್ದಲ, ಗಲಾಟೆಯಲ್ಲಿ 41 ಗೊತ್ತುವಳಿಗಳನ್ನು ಎಸ್ ಪಾಸ್ ಮೂಲಕ ಅಂಗೀಕರಿಸಲಾಯಿತು.

    ನಗರದಲ್ಲಿ ದಿನೇ ದಿನೇ ಗಂಭೀರವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಾಗಲಿ, ಅಸಮರ್ಪಕವಾಗಿ ಸಾಗಿರುವ ಒಳಚರಂಡಿ ಕಾಮಗಾರಿಯ ತೊಂದರೆ, ರಸ್ತೆ, ಶೌಚಾಲಯ, ವಿದ್ಯುತ್ ದೀಪದ ಬಗ್ಗೆ ಗಂಭೀರ ಚರ್ಚೆ ನಡೆಯದೇ ಬರೀ ಗಲಾಟೆಯಲ್ಲಿ ಸಭೆ ಮುಕ್ತಾಯಗೊಂಡಿತು.