Tag: Muncipality

  • ಕಲುಷಿತ ನೀರು ಕುಡಿದು ಸಾವು ಪ್ರಕರಣ – ಮೃತರ ಕುಟುಂಬಕ್ಕೆ ನಗರಸಭೆಯಿಂದ ತಲಾ 10 ಲಕ್ಷ ರೂ. ಪರಿಹಾರ

    ಕಲುಷಿತ ನೀರು ಕುಡಿದು ಸಾವು ಪ್ರಕರಣ – ಮೃತರ ಕುಟುಂಬಕ್ಕೆ ನಗರಸಭೆಯಿಂದ ತಲಾ 10 ಲಕ್ಷ ರೂ. ಪರಿಹಾರ

    ರಾಯಚೂರು: ಎಲ್ಲಾ ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ರಾಯಚೂರು ನಗರಸಭೆ ಈಗ ಎಚ್ಚೆತ್ತಿದೆ. ನಗರದ ಟ್ಯಾಂಕ್‍ಗಳ ಶುದ್ಧೀಕರಣದ ಬಗ್ಗೆ ಈಗ ಅರಿವಿಗೆ ಬಂದಿದೆ. ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ ಬಳಿಕ ತುರ್ತು ಸಭೆ ಕರೆದು ಪರಿಹಾರ ಘೋಷಣೆ ಮಾಡಿದ್ದಾರೆ.

    ರಾಯಚೂರು ನಗರಸಭೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಕೊನೆಯೇ ಇಲ್ಲ ಎನ್ನುವುದಕ್ಕೆ ಇಂದು ನಡೆದ ನಗರಸಭೆ ಸದಸ್ಯರ ತುರ್ತು ಸಭೆ ಸಾಕ್ಷಿಯಾಗಿತ್ತು. ನಗರಸಭೆಯಿಂದ ಸರಬರಾಜಾದ ಕಲುಷಿತ ನೀರನ್ನು ಕುಡಿದು ಮೂರು ಜನ ಪ್ರಾಣ ಬಿಟ್ಟಿದ್ದರ ಹಿಂದೆ 25 ವರ್ಷಗಳ ನಿರ್ಲಕ್ಷ್ಯವಿದೆ. ನೀರು ಕುಡಿದ ನೂರಾರು ಜನ ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವುದರ ಹಿಂದೆ ಭ್ರಷ್ಟಾಚಾರ, ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಕೊನೆಗೂ ಎಚ್ಚೆತ್ತಂತೆ ತುರ್ತು ಸಭೆ ಕರೆದ ಆಡಳಿತ ಮಂಡಳಿ ನಗರಸಭೆ ನೀರು ಕುಡಿದು ಸಾವನ್ನಪ್ಪಿದ ಮೂವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 20 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್

    ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಆಡಳಿತ ಮಂಡಳಿ ವೈಫಲ್ಯದ ಬಗ್ಗೆ ಕಿಡಿಕಾರಿದರು. ಶುದ್ಧೀಕರಣ ಘಟಕ ನಿರ್ವಹಣೆಯಲ್ಲಿನ ಲೋಪವನ್ನು ಇನ್ನು ಮುಂದಾದರೂ ಸರಿಪಡಿಸುವಂತೆ ಒತ್ತಾಯಿಸಿದರು. ನಗರದಲ್ಲಿನ 35 ಕ್ಕೂ ಹೆಚ್ಚು ನೀರಿನ ಟ್ಯಾಂಕ್‍ಗಳನ್ನು 25 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸದಸ್ಯರು ಒತ್ತಾಯಿಸಿದರು.  ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

    4.75 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನೀರು ಶುದ್ಧೀಕರಣ ಘಟಕ ಆರಂಭಿಸಲಾಗಿದೆ. ನೀರು ಸರಬರಾಜು ಮಂಡಳಿ ಮೂರು ತಿಂಗಳು ನೀರು ಪೂರೈಕೆ ಕೂಡ ಮಾಡಿತ್ತು. ನಂತರ ಹಸ್ತಾಂತರಕ್ಕೆ ಮುಂದಾದರೆ ನಗರಸಭೆ ನಿರ್ಲಕ್ಷ್ಯ ಮಾಡಲಾಗಿತ್ತು. ಈಗ ಘಟಕ ಉಪಯೋಗವಿಲ್ಲದಂತಾಗಿ 58 ಲಕ್ಷ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಬೇಕಾಗಿದೆ ಅಂತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಲುಷಿತ ನೀರಿನಿಂದ ಮೂವರು ಸಾವನ್ನಪ್ಪಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖಾ ಸಮಿತಿಯನ್ನ ರಚಿಸಿದೆ. ಮೂರು ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಅದೇನೇ ಇದ್ದರೂ ಒಟ್ಟಿನಲ್ಲಿ ನಗರಸಭೆಯ ದೀರ್ಘಕಾಲದ ನಿರ್ಲಕ್ಷ್ಯಕ್ಕೆ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ.

  • ಪುರಸಭೆಗೆ ಆಗಮಿಸಿ ಅಧಿಕಾರಿಗೆ ಚಾಕು ತೋರಿಸಿ ಬೆದರಿಕೆ ಹಾಕ್ದ!

    ಪುರಸಭೆಗೆ ಆಗಮಿಸಿ ಅಧಿಕಾರಿಗೆ ಚಾಕು ತೋರಿಸಿ ಬೆದರಿಕೆ ಹಾಕ್ದ!

    ಚಿಕ್ಕಬಳ್ಳಾಪುರ: ಮದ್ಯ ಕುಡಿದ ಅಮಲಿನಲ್ಲಿ ಜಿಲ್ಲೆಯ ಬಾಗೇಪಲ್ಲಿ ಪುರಸಭೆ ಕಚೇರಿಗೆ ಆಗಮಿಸಿ, ಪುರಸಭೆ ಮುಖ್ಯಾಧಿಕಾರಿ ಮಧುಕರ್ ಅವರಿಗೆ ಖಾತೆ ಮಾಡಿಕೊಡುವಂತೆ ಚಾಕು ತೋರಿಸಿ ಪ್ರಾಣಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

    ಖಾತೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ ಜೊತೆ ಗೋವಿಂದ್ ವಾಗ್ವಾದ ನಡೆಸಿದ್ದನು. ಈ ವೇಳೆ ಆತ ಚಾಕು ತೋರಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ ಅಂತ ಪುರಸಭೆ ಮುಖ್ಯಾಧಿಕಾರಿ ಪೊಲೀಸರಿಗೆ ಕರೆ ಮಾಡಿ ಮೌಖಿಕ ದೂರು ನೀಡಿದ್ದಾರೆ. ಇದನ್ನೂ ಓದಿ: ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್ 

    ಈ ವೇಳೆ ಘಟನಾ ಸ್ಥಳಕ್ಕೆ ಬಂದ ಎಎಸ್‍ಐ ಅಮರೇಶ್ ಬಾಬು, ಎಷ್ಟೇ ಹೇಳಿದರೂ ಕಚೇರಿಯಿಂದ ಹೊರ ಹೋಗದೇ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಗೋವಿಂದ್‍ಗೆ ಹಿಗ್ಗಾ ಮುಗ್ಗ ಥಳಿಸಿ ಕಪಾಳ ಮೋಕ್ಷ ಮಾಡಿ ಎಎಸ್‍ಐ ಕಚೇರಿಯಿಂದ ಹೊರದಬ್ಬಿದ್ದಾರೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

    ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ದೂರಿನ ಮೇರೆಗೆ ಗೋವಿಂದನನ್ನು ಪೊಲೀಸರು ಬಂಧಿಸಿದ್ದಾರೆ.

  • ಚುನಾವಣೆ ನಡೆದ್ರೂ ಫಲಿತಾಂಶ ಪ್ರಕಟವಾಗಲ್ಲ: ಶಾಸಕ ಶಿವಲಿಂಗೇಗೌಡ

    ಚುನಾವಣೆ ನಡೆದ್ರೂ ಫಲಿತಾಂಶ ಪ್ರಕಟವಾಗಲ್ಲ: ಶಾಸಕ ಶಿವಲಿಂಗೇಗೌಡ

    – ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

    ಹಾಸನ: ಹಾಸನ ಮತ್ತು ಅರಸೀಕೆರೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದರೂ ಕೂಡ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು ಶಾಸಕ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.

    ಹಾಸನ, ಅರಸೀಕೆರೆ ನಗರಸಭೆ ಎರಡರ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿತ್ತು. ಎಸ್‍ಟಿ ಅಭ್ಯರ್ಥಿಗಳು ಬಿಜೆಪಿಯಿಂದ ಮಾತ್ರ ಜಯಗಳಿಸಿದ್ದರು. ಹೀಗಾಗಿ ಜೆಡಿಎಸ್ ಹೆಚ್ಚಿನ ಸ್ಥಾನ ಗೆದ್ದಿದ್ದರೂ, ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲೋಗೋದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಕಾನೂನು ಬಾಹಿರ ಎಂದು ಜೆಡಿಎಸ್ ಮುಖಂಡರು ಈ ಹಿಂದೆಯೇ ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು.

    ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಪರಿಣಾಮ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಪರಿಣಾಮ ಜೆಡಿಎಸ್ ಮುಖಂಡರು ಈ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇಂದು ಸುಪ್ರೀಂಕೋರ್ಟ್ ನಿಂದ ಮರು ವಿಚಾರಣೆಗೆ ಆದೇಶ ನೀಡಲಾಗಿದೆ. ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಸಬಹುದು. ಆದರೆ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎಂದು ಫಲಿತಾಂಶ ಪ್ರಕಟಿಸುವಂತಿಲ್ಲ. ಚುನಾವಣೆ ನಡೆಸಿದ ಬಳಿಕ ಇಡೀ ಕಡತವನ್ನ ಹೈಕೋರ್ಟ್ ಗೆ ಸಲ್ಲಿಸಬೇಕು. ನಂತರ ಮತ್ತೆ ಹೈಕೋರ್ಟ್ ನಲ್ಲಿ ಮರು ವಿಚಾರಣೆ ನಡೆಸಿ ಆದೇಶ ಪ್ರಕಟಿಸುವಂತೆ ತಿಳಿಸಿದೆ.

  • ನಟಿ ರಾಗಿಣಿಗಾಗಿ ಸಭೆಯಲ್ಲಿ ಕಿತ್ತಾಡಿಕೊಂಡ ಪಾಲಿಕೆ ಸದಸ್ಯರು

    ನಟಿ ರಾಗಿಣಿಗಾಗಿ ಸಭೆಯಲ್ಲಿ ಕಿತ್ತಾಡಿಕೊಂಡ ಪಾಲಿಕೆ ಸದಸ್ಯರು

    ಹುಬ್ಬಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಗದ್ದಲವೋ ಗದ್ದಲ. ನಟಿ ರಾಗಿಣಿಗಾಗಿ ಪಾಲಿಕೆ ಸದಸ್ಯರು ಕಿತ್ತಾಡಿಕೊಂಡು ಸಭೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿಗಾಗಿ ಸಭೆ ರಣಾಂಗಣವಾಗಿತ್ತು.

    ಮಂಗಳವಾರ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು. ಪಾಲಿಕೆ ಸಭೆ ಆರಂಭವಾದಾಗಿನಿಂದ ಶುರುವಾದ ಗದ್ದಲ, ಸಭೆ ಮುಗಿಯುವವರೆಗು ಗದ್ದಲವೋ ಗದ್ದಲ. ಅವಳಿ ನಗರದ ಅಭಿವೃದ್ಧಿ ವಿಚಾರವಾಗಿ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಪಾಲಿಕೆ ಸದಸ್ಯರು ಚಿತ್ರನಟಿ ರಾಗಿಣಿ ವಿಷಯಕ್ಕೆ ಕಿತ್ತಾಡಿಕೊಂಡಿದ್ದಾರೆ.

    ಅಕ್ಟೋಬರ್ ತಿಂಗಳಿನಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು, ನಟಿ ರಾಗಿಣಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಯಭಾರಿಯಾಗಿ ಆಗಮಿಸಿದ್ದರು. ಇದರ ವೆಚ್ಚ 1 ಲಕ್ಷ 80 ಸಾವಿರ ಹಣವನ್ನು ಪಾಲಿಕೆ ಭರಿಸಬೇಕೆಂದು ಸದಸ್ಯ ಶಿವಾನಂದ್ ಮುತ್ತಣ್ಣ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ ಉಳಿದ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಗಿಣಿ ಬಂದಾಗಿನ ವೆಚ್ಚವನ್ನು ಪಾಲಿಕೆ ಭರಿಸಬಾರದೆಂದು ಕೆಲ ಸದಸ್ಯರು ಹೇಳುತ್ತಿದ್ದಂತೆ ಸಭೆಯಲ್ಲಿ ಗದ್ದಲ ಶುರುವಾಗಿದೆ. ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯನ್ನೆ ಮೊಟಕುಗೊಳಿಸಲಾಯಿತು.

    ಮುಂಜಾನೆ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ರೊಚ್ಚಿಗೆದ್ದಿದ್ದ ಪಾಲಿಕೆ ಸದಸ್ಯರು ಕುಡಿಯುವ ನೀರಿನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ಗಲಾಟೆ ಮಾಡಿದ್ದಾರೆ. ನವನಗರ ಹಾಗೂ ಧಾರವಾಡ ಭಾಗದಲ್ಲಿ 10 ರಿಂದ 15 ದಿನವಾದರು ಸರಿಯಾಗಿ ನೀರು ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಸಮಸ್ಯೆ ಬಗ್ಗೆ ಹೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಜಲಮಂಡಳಿ ಅಧಿಕಾರಿಗಳನ್ನು ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಯ ಬಾವಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಸದಸ್ಯರ ಗಲಾಟೆಯಿಂದಾಗಿ ಸಭೆ ಅಕ್ಷರಶಃ ರಣರಂಗಣವಾಗಿತ್ತು. ಕುಡಿಯುವ ನೀರನ್ನು ಕೊಡಲಾಗದ ಅಧಿಕಾರಿಗಳನ್ನು ಕಿತ್ತೊಗೆಯಿರಿ ಎಂದು ಗಲಾಟೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯನ್ನ ಮಂಚಕ್ಕೆ ಕರೆದ ಆರೋಪ- ಶಾಸಕ ಇಕ್ಬಾಲ್ ಅನ್ಸಾರಿ ಬಂಟನ ವಿರುದ್ಧ ದೂರು ದಾಖಲು

    ಮಹಿಳೆಯನ್ನ ಮಂಚಕ್ಕೆ ಕರೆದ ಆರೋಪ- ಶಾಸಕ ಇಕ್ಬಾಲ್ ಅನ್ಸಾರಿ ಬಂಟನ ವಿರುದ್ಧ ದೂರು ದಾಖಲು

    ಕೊಪ್ಪಳ: ಶಾಸಕ ಇಕ್ಬಾಲ್ ಅನ್ಸಾರಿಯ ಬಂಟ ಮತ್ತು ಗಂಗಾವತಿ ನಗರಸಭೆಯ ಮಾಜಿ ಅಧ್ಯಕ್ಷ ಶ್ಯಾಮೀದ್ ಮನಿಯಾರ್‍ನಿಂದ ವಂಚನೆಗೆ ಒಳಗಾಗಿದ್ದ 4ನೇ ಪತ್ನಿ ಫರ್ವೀನ್ ಕೊಪ್ಪಳ ಎಸ್ಪಿಗೆ ದೂರು ನೀಡಿದ್ದಾರೆ. ಅಲ್ಲದೇ ಶ್ಯಾಮೀದ್ ತನ್ನನ್ನು ಮಂಚಕ್ಕೆ ಕರೆದಿದ್ದಾನೆ ಅಂತ ಮೊತ್ತೊಬ್ಬ ನೊಂದ ಮಹಿಳೆ ಫಾತಿಮಾ ದೂರು ನೀಡಿದ್ದಾರೆ.

    ತಮಗೆ ನ್ಯಾಯ ಸಿಗದಿದ್ರೆ ಬೆಳಗಾವಿ ಅಧಿವೇಶನದ ಸ್ಥಳಕ್ಕೆ ಹೋಗಿ ಧರಣಿ ನಡೆದಸೋದಾಗಿ ಇಬ್ಬರು ಮಹಿಳೆಯರು ಎಚ್ಚರಿಸಿದ್ದಾರೆ. ಮಹಿಳಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ.

    ಇದನ್ನೂ ಓದಿ: 4 ಮದುವೆಯಾಗಿ ಮತ್ತೊಂದು ಮದುವೆಗೆ ಸಿದ್ಧವಾಗಿರೋ ಶಾಸಕರ ಬಂಟ

    ಶಾಸಕ ಅನ್ಸಾರಿ ಬಲಗೈ ಬಂಟ ಶ್ಯಾಮೀದ್ ಮನಿಯಾರ್ ಗೋವಾ ಮೂಲದ ಫರ್ವಿನ್ ಅಂದ ನೋಡಿ 2013ರಲ್ಲಿ 4ನೇ ಮದುವೆಯಾಗಿದ್ದನು. ಆ ಬಳಿಕ ನಿತ್ಯ ಕಿರುಕುಳ ಕೊಟ್ಟು ದೂರ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ರೆ 5ನೇ ಮದುವೆಯಾಗ್ತೀನಿ. ಲಕ್ಷ ಕೊಟ್ರೆ ಸಿನಿಮಾ ನಟಿಯರು ನನ್ನ ಜೊತೆ ಮಂಚಕ್ಕೆ ಬರ್ತಾರೆ. 5ನೇ ಕನ್ಯೆ ಮಾಡಿಕೊಟ್ರೆ ಅವ್ರಿಗೆ ಕಮಿಷನ್ ಕೊಡ್ತೀನಿ ಅಂತ ಹೇಳಿಕೊಂಡಿದ್ದ ಎನ್ನಲಾಗಿದೆ.

     

     

  • ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

    ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

    ಥಾಣೆ: ಪತ್ನಿಗೆ ಪತ್ರ ಬರೆದಿಟ್ಟು 36 ವರ್ಷದ ವ್ಯಕ್ತಿಯೊಬ್ಬರು ತನ್ನ ಕಾರೊಳಗೆಯೇ ಶೂಟೌಟ್ ಮಾಡ್ಕೊಂಡ ಆಘಾತಕಾರಿ ಘಟನೆಯೊಂದು ಥಾಣೆಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಸಂಜೆ ನಡೆದಿದೆ. ಶೂಟೌಟ್ ಮಾಡ್ಕೊಂಡ ವ್ಯಕ್ತಿಯನ್ನು ಸಂಕೇತ್ ಹನುಮಂತ್ ಜಾಧವ್ ಎಂದು ಗುರುತಿಸಲಾಗಿದ್ದು, ಇವರು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು. ಲೈಸನ್ಸ್ ಹೊಂದಿರುವ ಗನ್ ನಿಂದಲೇ ಜಾಧವ್ ಈ ಕೃತ್ಯ ಎಸಗಿಕೊಂಡಿದ್ದಾರೆ.

    ಏನಿದು ಪ್ರಕರಣ?: ಭಾನುವಾರ ಮಧ್ಯಾಹ್ನದ ಬಳಿಕ ಜಾಧವ್ ಕೆಲಸವಿದೆ ಅಂತ ತನ್ನ ಕಾರು ತೆಗೆದುಕೊಂಡು ಮನೆಯಿಂದ ಹೊರಟಿದ್ದರು. ಅಂತೆಯೇ ಮೀರಾ ರಸ್ತೆಯಿಂದ ನಂಗ್ಲಾ ಚೌಕಿ ಮಧ್ಯೆ ರಸ್ತೆ ಪಕ್ಕ ಜಾಧವ್ ಒಳಗಡೆಯಿಂದ ಲಾಕ್ ಮಾಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ತನ್ನ ಬಳಿಯಿದ್ದ ಗನ್ ನಿಂದ ಎದೆಗೆ ಗುರಿಯಿಟ್ಟುಕೊಂಡಿದ್ದಾರೆ.

    ರಸ್ತೆ ಬದಿಯಲ್ಲಿ ತುಂಬಾ ಹೊತ್ತು ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಕಾರಿನ ಹಿಂದಿನ ಗ್ಲಾಸನ್ನು ಒಡೆದಿದ್ದಾರೆ. ಈ ವೇಳೆ ಕಾರಿನ ಒಳಗೆ ಡ್ರೈವರ್ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಅಲ್ಲದೇ ವ್ಯಕ್ತಿಯ ಕೈಯಲ್ಲಿ ಗನ್ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ವ್ಯಕ್ತಿ ತನ್ನ ಕೈಯಿಂದ್ಲೇ ಶೂಟ್ ಮಾಡ್ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಕಂಟ್ರಿವಡಾವಿಲ್ಲ ಠಾಣೆಯ ಪೊಲೀಸರು ಶಂಕಿಸಿದ್ದಾರೆ.

    ಪತ್ರದಲ್ಲೇನಿದೆ?: ಮೃತ ವ್ಯಕ್ತಿ ಕುಳಿತಿದ್ದ ಪಕ್ಕದಲ್ಲಿಯೇ ಡೆತ್ ನೋಟ್ ಬಿದ್ದಿದ್ದು ಅದರಲ್ಲಿ, `ಪ್ರತಿ ದಿನದ ಕೆಲಸದಿಂದ ಬಳಲಿದ್ದೇನೆ.. ಕೆಲಸದ ಒತ್ತಡದಿಂದ ನನ್ನ ಖಾಸಗಿ ಜೀವನಕ್ಕೆ ಸಮಯ ಸಿಗುತ್ತಿಲ್ಲ.. ನಿನ್ನೊಂದಿಗೆ ಕಾಲ ಕಳೆಯಲು ನನಗೂ ಸಮಯವಿಲ್ಲ. ಹೀಗಾಗಿ ತುಂಬಾ ನೊಂದಿದ್ದೇನೆ.. ಅಪಾರ್ಥ ಮಾಡಿಕೊಳ್ಳಬೇಡ.. ಕ್ಷಮಿಸಿಬಿಡು ನನ್ನ ಜೀವನವನ್ನು ಕೊನೆಯಾಗಿಸುತ್ತಿದ್ದೇನೆ’ ಅಂತ ಬರೆದಿದ್ದರು.

    ಥಾಣೆ ಪುರಸಭಾ ಕಾರ್ಪೋರೇಷನ್ ನಲ್ಲಿ ಗುತ್ತಿಗೆದಾರನಾಗಿ ಜಾಧವ್ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು. 8 ವರ್ಷದ ಹಿಂದೆ ಮದುವೆಯಾಗಿರೋ ಜಾಧವ್ ಅವರಿಗೆ 5ವರ್ಷದ ಮಗನಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

  • ಪುರಸಭೆ ಅಧ್ಯಕ್ಷ ಗಾದಿಗಾಗಿ ಬಿಜೆಪಿ ಮುಖಂಡ ವಾಸು ಕೊಲೆ?

    ಪುರಸಭೆ ಅಧ್ಯಕ್ಷ ಗಾದಿಗಾಗಿ ಬಿಜೆಪಿ ಮುಖಂಡ ವಾಸು ಕೊಲೆ?

    ಬೆಂಗಳೂರು: ಎರಡು ದಿನಗಳ ಹಿಂದೆ ನಡೆದಿದ್ದ ಬೊಮ್ಮಸಂದ್ರ ಪುರಸಭೆ ಸದಸ್ಯ ಮತ್ತು ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ವಾಸು ಹತ್ಯೆಗೆ ಹೊಸ ತಿರುವು ಸಿಕ್ಕಿದೆ.

    ತನ್ನ ತಾಯಿ ಪುರಸಭೆ ಅಧ್ಯಕ್ಷರಾಗೋದಕ್ಕೆ ಶ್ರೀನಿವಾಸ್ ಪ್ರಸಾದ್ ಅಡ್ಡಿಯಾಗಿದ್ದಾರೆ ಅಂತಾ ಭಾವಿಸಿ ಬಾಡಿ ಬಿಲ್ಡರ್ ಮಂಜುನಾಥ್ ಅಲಿಯಾಸ್ ಬನಹಳ್ಳಿ ಮಂಜ ಕೊಲೆ ಮಾಡಿಸಿದ್ದಾನೆ ಅಂತಾ ಮೂಲಗಳು ತಿಳಿಸಿವೆ.

    ಅಧ್ಯಕ್ಷಗಾದಿಗಾಗಿ ಶ್ರೀನಿವಾಸ್ ಮತ್ತು ಮಂಜನ ತಾಯಿ ಸರೋಜಮ್ಮ ನಡುವೆ ತೀವ್ರ ಪೈಪೋಟಿಯಿತ್ತು. ವಾಸು ಅವರನ್ನ ಹತ್ಯೆಗೈದ್ರೆ ತನ್ನ ತಾಯಿಗೆ ಅಧಿಕಾರ ಸಲೀಸಾಗಿ ದಕ್ಕಲಿದೆ ಅಂತಾ ಭಾವಿಸಿ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಪುರಸಭೆ ಸದಸ್ಯೆ ಸರೋಜಮ್ಮ, ಮಧು, ನಾರಾಯಣಸ್ವಾಮಿ, ಮುರಳಿ, ಮಂಜುನಾಥ ಅನ್ನೋರನ್ನು ಅರೆಸ್ಟ್ ಮಾಡಲಾಗಿದೆ. ಬಾಡಿ ಬಿಲ್ಡರ್ ಮಂಜ ಸೇರಿದಂತೆ ಉಳಿದವರಿಗಾಗಿ ಹುಡುಕಾಟ ನಡೆದಿದೆ. ಕೊಲೆಯ ಹಿಂದೆ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ಕೈವಾಡವಿದೆ ಅಂತಾ ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

    ಮುಖಂಡನ ಹತ್ಯೆ ಖಂಡಿಸಿ ಬಿಜೆಪಿ ಇವತ್ತು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಬಿಜೆಪಿ ಆರೋಪಿಸಿದೆ.

    ಮಾರ್ಚ್ 14ರಂದು ನಗರದ ಬಿಟಿಎಲ್ ಕಾಲೇಜು ಮುಂಭಾಗದಲ್ಲಿ ಬಿಜೆಪಿ ಮುಖಂಡ ವಾಸು ಅವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.