Tag: Munawar Faruqui

  • ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

    ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

    ನವದೆಹಲಿ: ಬೆಂಗಳೂರಿನಲ್ಲಿ (Bengaluru) ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಮುನಾವರ್ ಫಾರೂಕಿ (Munawar Faruqui) ಹತ್ಯೆಗೆ ಯತ್ನ ನಡೆಸಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಸದ್ಯ ವಿದೇಶದಲ್ಲಿರುವ ಗ್ಯಾಂಗ್‌ಸ್ಟಾರ್‌ಗಳಾದ​​ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ (Rohit Godara, Goldy Brar) ಸೂಚನೆಯ ಮೇರೆಗೆ ಮುನಾವರ್ ಫಾರೂಕಿಯನ್ನು ಹತ್ಯೆ ಮಾಡಲು ಹಂತಕರು ಸಂಚು ರೂಪಿಸಿದ್ದ ವಿಚಾರ ದೆಹಲಿ ಪೊಲೀಸರ ತನಿಖೆಯಿಂದ ಹೊರ ಬಿದ್ದಿದೆ.

    ಡಿಸೆಂಬರ್‌ 2024 ರಲ್ಲಿ ಹರಿಯಾಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳಾದ ಶೂಟರ್ ರಾಹುಲ್ ಮತ್ತು ಸಾಹಿಲ್ ದೆಹಲಿಯಲ್ಲಿರುವ ಬಗ್ಗೆ ಖಚಿತ ಮಾಹಿತಿ ದೆಹಲಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇಲೆ ಇಬ್ಬರನ್ನು ಹಿಡಿಯಲು ಪೊಲೀಸರು ತೆರಳಿದ್ದರು.

     
    ಗುರುವಾರ ಬೆಳಗ್ಗೆ 3 ಗಂಟೆಗೆ ದೆಹಲಿಯ ಐತ್ಪುರ್-ಕಾಳಿಂದಿ ಕುಂಜ್ ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಇಬ್ಬರನ್ನು ನಿಲ್ಲಿಸುವಂತೆ ಕೇಳಿದಾಗ ಇವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಇವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ವಿಚಾರಣೆಯ ಸಂದರ್ಭದಲ್ಲಿ ಹಿಂದೂ (Hindu) ಧರ್ಮ ಮತ್ತು ದೇವರನ್ನು ಅವಹೇಳನ ಮಾಡುತ್ತಿರುವ ಮುನಾವರ್ ಫಾರೂಕಿ ಹತ್ಯೆ ನಡೆಸುವಂತೆ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಕಡೆಯಿಂದ ನಮಗೆ ಸೂಚನೆ ಬಂದಿತ್ತು. ದೆಹಲಿಯಲ್ಲಿ ಮುನಾವರ್ ಫಾರೂಕಿ ಇರುವ ವಿಚಾರ ತಿಳಿದು ಹತ್ಯೆ ಮಾಡಲು ನಾವು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗಾಯಕ ಜುಬೀನ್ ಗಾರ್ಗ್ ಸಾವು ಕೇಸ್ – ಮ್ಯಾನೇಜರ್, ಸಿಂಗಾಪುರದ ಕಾರ್ಯಕ್ರಮ ಆಯೋಜಕ ಅರೆಸ್ಟ್

    ದೆಹಲಿಗೆ ಬರುವ ಮೊದಲು ಮುಂಬೈ ಮತ್ತು ಬೆಂಗಳೂರಿನಲ್ಲಿ ಫಾರೂಕಿ ಹತ್ಯೆಗೆ ಪ್ಲ್ಯಾನ್‌ ಮಾಡಿದ್ದರು. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದ ಜಾಗದ ಹೊರ ಭಾಗದಲ್ಲಿ ಫಾರೂಕಿ ಹತ್ಯೆಗೆ ಸಂಚು ರೂಪಿಸಿ ಕಾಯುತ್ತಿದ್ದರು. ಆದರೆ ಫಾರೂಕಿ ಬೇರೆ ಕಾರಿನಲ್ಲಿ ಹೊರಟುಹೋಗಿದ್ದರಿಂದ ಕೊನೆ ಕ್ಷಣದಲ್ಲಿ ಈ ಪ್ಲ್ಯಾನ್‌ ವಿಫಲವಾಗಿತ್ತು ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    2021 ರಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕೆ ಫಾರೂಕಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. 1 ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಜಾಮೀನು ಮಂಜೂರು ಮಾಡಿತ್ತು. ಕಳೆದ ವರ್ಷ ಮುಂಬೈ ಪೊಲೀಸರು ಅಕ್ರಮ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿದ ಬಳಿಕ ಮತ್ತೆ ಫಾರೂಕಿಯ ಬಂಧನವಾಗಿತ್ತು.  ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

    ಫಾರೂಕಿ 2024 ರ ಹಿಂದಿ  ಬಿಗ್ ಬಾಸ್ ಗೆದ್ದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 1.4 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.

  • ಬಿಗ್ ಬಾಸ್ ವಿನ್ನರ್ ರೋಡ್ ಶೋ: ಲಕ್ಷಾಂತರ ಅಭಿಮಾನಿಗಳಿಂದ ರಸ್ತೆ ಬಂದ್

    ಬಿಗ್ ಬಾಸ್ ವಿನ್ನರ್ ರೋಡ್ ಶೋ: ಲಕ್ಷಾಂತರ ಅಭಿಮಾನಿಗಳಿಂದ ರಸ್ತೆ ಬಂದ್

    ಕಿರುತೆರೆ ಇತಿಹಾಸದಲ್ಲೇ ಅತೀ ದೊಡ್ಡ ಶೋ ಬಿಗ್ ಬಾಸ್ ಕನ್ನಡ ಮತ್ತು ಹಿಂದಿಯಲ್ಲಿ (Bigg Boss Hindi) ಏಕಕಾಲದಲ್ಲಿ ಮುಕ್ತಾಯವಾಗಿದೆ. ಕನ್ನಡದಲ್ಲಿ ಕಾರ್ತಿಕ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಕ್ಕಿದ್ದರೆ, ಹಿಂದಿಯಲ್ಲಿ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ (Munawar Faruqui) ಟ್ರೋಫಿ ಎತ್ತಿ (Winner) ಹಿಡಿದಿದ್ದಾರೆ. ಬಿಗ್ ಬಾಸ್ ನಿಂದ ಬಂದ ನಂತರ ಮುನಾವರ್ ಫಾರೂಕಿ ರೋಡ್ ಶೋ ಮಾಡಿದ್ದು, ಲಕ್ಷಾಂತರ ಅಭಿಮಾನಿಗಳು ಅದಕ್ಕೆ ಸಾಕ್ಷಿಯಾಗಿದ್ದಾರೆ.

    ಮುನಾವರ್ ಅವರನ್ನು ಸ್ವಾಗತಿಸೋದಕ್ಕಾಗಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಸಿಡಿಸಲಾಗಿದೆ. ಗಂಟೆಗಟ್ಟಲ್ಲೇ ರಸ್ತೆಯಲ್ಲಿ ಬ್ಲಾಕ್ ಮಾಡಲಾಗಿದೆ. ಕಿಕ್ಕಿರಿದು ತುಂಬಿದ ರಸ್ತೆಯನ್ನು ಕ್ಲಿಯರ್ ಮಾಡೋದಕ್ಕಾಗಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮುನಾವರ್ ಅಭಿಮಾನಿಗಳಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

    ‘ಬಿಗ್ ಬಾಸ್’ ವಿನ್ನರ್ ಮುನಾವರ್ ಫಾರೂಕಿಗೆ ಬಿಗ್ ಬಾಸ್ ಟೀಮ್ 50 ಲಕ್ಷ ಮೊತ್ತ, ಮತ್ತು ಕಾರನ್ನು ಬಹುಮಾನವಾಗಿ ನೀಡಲಾಗಿದೆ. ಈ ಹಿಂದೆ ಕಂಗನಾ ನಡೆಸಿಕೊಂಡು ಬಂದಿದ್ದ ಲಾಕಪ್ ರಿಯಾಲಿಟಿ ಶೋನ ಟ್ರೋಫಿ ಮುನಾವರ್ ಗೆದ್ದುಕೊಂಡಿದ್ದರು.

    ಹಿಂದಿ ಬಿಗ್ ಬಾಸ್‌ನಲ್ಲಿ ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್, ನಟಿ ಅಂಕಿತಾ ಲೋಖಂಡೆ 2ನೇ ರನ್ನರ್ ಅಪ್, ಅರುಣ್ ಮಾಶೆಟ್ಟಿ ಅವರು 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

     

    ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನಪ್ರಿಯತೆ ಗಳಿಸಿರುವ ಮುನಾವರ್, ತಮ್ಮ ಹಾಸ್ಯದಿಂದಲೇ ಹಲವು ಸಮಸ್ಯೆಗಳನ್ನು ಎದುರಿಸಿದ್ದರು.

  • ಹಿಂದಿ ‘ಬಿಗ್ ಬಾಸ್ 17’ರ ವಿನ್ನರ್ ಆದ ಮುನಾವರ್ ಫಾರೂಕಿ

    ಹಿಂದಿ ‘ಬಿಗ್ ಬಾಸ್ 17’ರ ವಿನ್ನರ್ ಆದ ಮುನಾವರ್ ಫಾರೂಕಿ

    ಕಿರುತೆರೆಯ ಕನ್ನಡದ ‘ಬಿಗ್ ಬಾಸ್ ಕನ್ನಡ 10’ರಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಗೆದ್ದಿದ್ದಾರೆ. ಅದರಂತೆ ಹಿಂದಿ ‘ಬಿಗ್ ಬಾಸ್ 17’ರಲ್ಲಿ ಮುನಾವರ್ ಫಾರೂಕಿ (Munawar Faruqui) ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ವಿನ್ನರ್ ಹೆಸರನ್ನು ಅನೌನ್ಸ್ ಮಾಡಿದ್ದಾರೆ.

    ‘ಬಿಗ್ ಬಾಸ್’ ವಿನ್ನರ್ ಮುನಾವರ್ ಫಾರೂಕಿಗೆ 50 ಲಕ್ಷ ಮೊತ್ತ, ಮತ್ತು ಕಾರನ್ನು ಬಹುಮಾನವಾಗಿ ನೀಡಲಾಗಿದೆ. ಈ ಹಿಂದೆ ಕಂಗನಾ ನಡೆಸಿಕೊಂಡು ಬಂದಿದ್ದ ಲಾಕಪ್ ರಿಯಾಲಿಟಿ ಶೋನ ಟ್ರೋಫಿ ಮುನಾವರ್ ಗೆದ್ದುಕೊಂಡಿದ್ದರು. ಇದನ್ನೂ ಓದಿ:ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್- ‘S/o ಮುತ್ತಣ್ಣ’ ಫಸ್ಟ್ ಲುಕ್ ಔಟ್‌

    ಹಿಂದಿ ಬಿಗ್ ಬಾಸ್‌ನಲ್ಲಿ ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್, ನಟಿ ಅಂಕಿತಾ ಲೋಖಂಡೆ 2ನೇ ರನ್ನರ್ ಅಪ್, ಅರುಣ್ ಮಾಶೆಟ್ಟಿ ಅವರು 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

    ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನಪ್ರಿಯತೆ ಗಳಿಸಿರುವ ಮುನಾವರ್, ತಮ್ಮ ಹಾಸ್ಯದಿಂದಲೇ ಹಲವು ಸಮಸ್ಯೆಗಳನ್ನು ಎದುರಿಸಿದ್ದರು.

  • ಆಯೆಷಾ ಖಾನ್ ಗೆ ವೈಲ್ಡ್ ಕಾರ್ಡ್ ಎಂಟ್ರಿ: ಕಾಮಿಡಿಯನ್ ಎದೆಯಲ್ಲಿ ಧಗಧಗ

    ಆಯೆಷಾ ಖಾನ್ ಗೆ ವೈಲ್ಡ್ ಕಾರ್ಡ್ ಎಂಟ್ರಿ: ಕಾಮಿಡಿಯನ್ ಎದೆಯಲ್ಲಿ ಧಗಧಗ

    ಭಾರತೀಯ ಕಿರುತೆರೆಯಲ್ಲಿ ಸದ್ಯ ಬಿಗ್ ಬಾಸ್ (Bigg Boss) ನದ್ದೇ ಸದ್ದು. ಕನ್ನಡ, ತೆಲುಗು, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಶೋ ಟೆಕಾಸ್ಟ್ ಆಗುತ್ತಿದೆ. ಒಂದೊಂದು ಭಾಷೆಯಲ್ಲೂ ಒಂದೊಂದು ರೀತಿಯ ಕಂಟೆಸ್ಟೆಂಟ್ ಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಹಿಂದಿ ಬಿಗ್ ಬಾಸ್ ನಲ್ಲಿ ಅನಾಹುತ ಕಂಟೆಸ್ಟೆಂಟ್ ಗಳೇ ಇರುವುದು ವಿಶೇಷ.

    ಹಿಂದಿ ಬಿಗ್ ಬಾಸ್ ಶೋನಲ್ಲಿ ವಿಕ್ಕಿ ಜೈನ್, ಖಾನ್ಜಾದಿ, ನೀಲ್ ಭಟ್, ಅಭಿಷೇಕ್ ಕುಮಾರ್, ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಜಿಗ್ನಾ ವೋರಾ ಹೀಗೆ ಮುಂತಾದ ಕಂಟೆಸ್ಟೆಂಟ್ ಇದ್ದಾರೆ. ಅದರಲ್ಲೂ ಗಂಡ ಹೆಂಡತಿ ಜೋಡಿಯೂ ಮನೆಯೊಳಗೆ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಮಿಡಿಯನ್ ಮುನಾವರ್ ಫರುಕಿ (Munawar Faruqui)ಕೂಡ ಇದ್ದಾರೆ. ಅವರ ಗರ್ಲ್ ಫ‍್ರೆಂಡ್ ಎಂದು ಹೇಳಿಕೊಂಡ ಹುಡುಗಿಯೊಬ್ಬಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ದೊಡ್ಮನೆ ಪ್ರವೇಶ ಮಾಡುತ್ತಿದ್ದಾರೆ.

    ಹೆಸರಾಂತ ಸ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಮುನಾವರ್ ಫಾರುಕಿ ವಿರುದ್ಧ ಈಗಾಗಲೇ ಸಾಕಷ್ಟು ಆರೋಪ ಮಾಡಿರುವ ಆಯಶಾ ಖಾನ್ (Ayesha Khan), ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೆ ವಾಹಿನಿಯು ಪ್ರೊಮೊವನ್ನು ಹಂಚಿಕೊಂಡಿದ್ದು, ಅಲ್ಲಿಯೂ ಆಯಶಾ ರಿವೇಂಜ್ ತೀರಿಸಿಕೊಳ್ಳುವಂತಹ ಮಾತುಗಳನ್ನು ಆಡಿದ್ದಾರೆ.

    ತಾನು ಫಾರುಕಿ ಅವರ ಮಾಜಿ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡಿರುವ ಆಯಶಾ ಖಾನ್, ಮುನಾವರ್ ಅವರ ಮುಖವಾಡ ಕಳಚುತ್ತೇನೆ ಎಂದು ಗದರಿದ್ದಾರೆ. ಆತ ನನ್ನೊಂದಿಗೆ ಮಾಡಿರೋ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಆ ಕಾರಣಕ್ಕಾಗಿ ತಾವು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಾಗಿ ಆಯಶಾ ಪ್ರೊಮೋದಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಆಯಶಾಗೆ ಫಾರುಕ್ ಐ ಲವ್ ಯೂ ಎಂದು ಹೇಳಿದ್ದರಂತೆ. ನಿಮ್ಮಂತಹ ಹುಡುಗಿ ಜೊತೆನೇ ಮದುವೆ ಆಗಬೇಕು ಎಂದು ಮಾತನಾಡಿದ್ದರಂತೆ. ಅದೆಲ್ಲವನ್ನೂ ಅವರ ಬಾಯಿಂದಾನೇ ಹೇಳಿಸ್ತೇನೆ ಅಂದಿದ್ದಾರೆ ಆಯೆಶಾ.

     

    ಬಿಗ್ ಬಾಸ್ ಮನೆಗೆ ಬೆಂಕಿ ಬಿರುಗಾಳಿ ಒಟ್ಟೊಟ್ಟಿಗೆ ದಾಳಿ ಇಡುತ್ತವೆ. ಆಯೆಶಾ ಖಾನ್ ನಿಂದಾಗಿ ಮುನಾವರ್ ಫಾರುಕಿಗೆ ಏನಾದರೂ ತೊಂದರೆ ಆಗತ್ತಾ? ಅಥವಾ ಆಯೆಶಾರ ಮಾತಿಗೆ ಮುನಾವರ್ ಒಪ್ಪಿಕೊಳ್ಳುತ್ತಾರಾ? ಕಾದು ನೋಡಬೇಕು.