Tag: Munawar Farooqui

  • ಎರಡನೇ ಮದುವೆಯಾದ ಬಿಗ್ ಬಾಸ್ ವಿನ್ನರ್ ಫಾರೂಕಿ

    ಎರಡನೇ ಮದುವೆಯಾದ ಬಿಗ್ ಬಾಸ್ ವಿನ್ನರ್ ಫಾರೂಕಿ

    ಹಿಂದಿಯ ಬಿಗ್ ಬಾಸ್ (Bigg Boss) ಶೋನ ವಿನ್ನರ್ ಮತ್ತು ಸ್ಟ್ಯಾಂಡಪ್ ಕೆಮಿಡಿಯನ್ ಮುನಾವರ್ ಫಾರೂಕಿ (Munawar Farooqui) ಮತ್ತೊಂದು ಮದುವೆಯಾಗಿದ್ದಾರೆ (Marriage) ಎನ್ನುವ ಸುದ್ದಿ ಹಲವು ದಿನಗಳಿಂದ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇದೊಂದು ಗಾಸಿಪ್ ಎನ್ನುವ ಅರ್ಥದಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಈಗ ಫಾರೂಕಿ ಮದುವೆಯಾಗಿರುವುದು ನಿಜವಾಗಿದೆ.

    ಮೇಕಪ್ ಕಲಾವಿದೆ ಮೆಹಜಬೀನ್  ಕೋಟ್ವಾಲಾ (Mehjabeen Kotwala) ಅವರನ್ನು ಫಾರೂಕಿ ಮದುವೆಯಾಗಿರುವುದು ನಿಕ್ಕಿಯಾಗಿದೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಹಲವಾರು ಜನರು ಶೇರ್ ಮಾಡಿದ್ದಾರೆ. ಈ ದಂಪತಿಗೆ ವಿಶ್ ಕೂಡ ಮಾಡಿದ್ದಾರೆ. ಈಗಾಗಲೇ ಮೆಹಜಬೀನ್ ಅವರಿಗೆ ಮದುವೆ ಆಗಿರುವ ವಿಚಾರವನ್ನೂ ಹಲವರು ಹಂಚಿಕೊಂಡಿದ್ದಾರೆ. ಒಂದು ಮಗು ಕೂಡ ಅವರಿಗೆ ಇದೆಯಂತೆ.

    ಫಾರೂಕಿ ಕೂಡ ಈಗಾಗಲೇ ಮದುವೆಯಾಗಿದ್ದಾರೆ. ಅವರಿಗೊಂದು ಮಗು ಕೂಡ ಇದೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮುಂಬೈನ ಪ್ರತಿಷ್ಠಿತ ಹೋಟೆಲ್‍ ನಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಕೆಲವು ಸ್ನೇಹಿತರಿಗೆ ಮಾತ್ರ ಮದುವೆ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

  • ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಮೇಲೆ ಮೊಟ್ಟೆ ಎಸೆತ

    ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಮೇಲೆ ಮೊಟ್ಟೆ ಎಸೆತ

    ಬಿಗ್ ಬಾಸ್ ಸೀಸನ್ 17ರ ವಿನ್ನರ್ ಹಾಗೂ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಖಿ (Munawar Farooqui) ಮೇಲೆ ಮೊಟ್ಟೆ ಎಸೆದಿರುವ (Egg throwing) ಘಟನೆ ಮುಂಬೈನಲ್ಲಿ ನಡೆದಿದೆ. ಮೊಟ್ಟೆ ಎಸೆದಿರುವ ರೆಸ್ಟೊರೆಂಟ್ ಮಾಲೀಕನ ಮೇಲೆ ಕೇಸು ದಾಖಲಾಗಿದೆ. ಗಲಾಟೆಯಲ್ಲಿ ಮುನಾವರ್ ನನ್ನು ಸೆಕ್ಯೂರಿಟಿ ಸಿಬ್ಬಂದಿ ಪಾರು ಮಾಡಿದ್ದಾರೆ.

    ಮುಂಬೈನ (Mumbai) ಮೊಹಮ್ಮದ್ ಅಲಿ ರಸ್ತೆಯಲ್ಲಿರುವ ಮಿನಾರಾ ಮಸೀದಿ ಪ್ರದೇಶದಲ್ಲಿದ್ದ ರೆಸ್ಟೋರೆಂಟ್ ವೊಂದಕ್ಕೆ ಇಫ್ತಾರಿಗೆ ಆಹ್ವಾನಿಸಿದ್ದರು. ಆದರೆ, ಅವರು ನಂತರ ಬೇರೊಂದು ಹೋಟೆಲ್ ಅನ್ನು ಆಯ್ಕೆ ಮಾಡಿಕೊಂಡರಂತೆ. ಇದರಿಂದ ಕುಪಿತಗೊಂಡ ರೆಸ್ಟೋರೆಂಟ್ ಮಾಲೀಕ ಮುನಾವರ್ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

     

    ತನ್ನ ಮೇಲೆ ಮೊಟ್ಟೆ ಬಿದ್ದ ಮೇಲೆ ಮಾಲೀಕರ ಮೇಲೆ ಮುನಾವರ್ ಕೂಗಾಡಿರುವ ದೃಶ್ಯ ಅಲ್ಲಿದ್ದವರ ಮೊಬೈಲ್ ನಲ್ಲಿ ಸೆರೆಯಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಆರು ಮಂದಿ ವಿರುದ್ಧ ಪೈದೋನಿ ಪೊಲೀಸರು ಪ್ರಕರಣವನ್ನು (Complaint) ದಾಖಲಿಸಿದ್ದಾರೆ. ನಂತರ ಮುನಾವರ್ ಅಲ್ಲಿ ನೆರೆದಿದ್ದವರ ಜೊತೆ ಸೆಲ್ಫಿಗೆ ಪೋಸ್ ಕೂಡ ನೀಡಿದ್ದಾರೆ.

  • ಪೊಲೀಸ್ ವಶದಲ್ಲಿ ಹಾಸ್ಯನಟ ಮುನಾವರ್ ಫಾರೂಕಿ

    ಪೊಲೀಸ್ ವಶದಲ್ಲಿ ಹಾಸ್ಯನಟ ಮುನಾವರ್ ಫಾರೂಕಿ

    ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಹಾಗೂ ಹಾಸ್ಯನಟ ಮುನಾವರ್ ಫಾರೂಕಿ ಅವರನ್ನು ನಿನ್ನೆ ತಡರಾತ್ರಿ ಮುಂಬೈ ಪೊಲೀಸರು ವಶಕ್ಕೆ ಪಡೆದ್ದಾರೆ. ಹುಕ್ಕಾ ಪಾರ್ಲರ್ (Hukkabar) ಮೇಲೆ ದಾಳಿ ಮಾಡಿದ್ದ ಮುನಾವರ್ ಫಾರೂಕಿ (Munawar Farooqui) ಮತ್ತು ಇತರರನ್ನು ರಾತ್ರಿಯೇ ಪೊಲೀಸರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

    ಮುಂಬೈನ ಪ್ರತಿಷ್ಠಿತ ಹುಕ್ಕಾಬಾರ್ ನಲ್ಲಿ ಮುನಾವರ್ ಮತ್ತು ಸ್ನೇಹಿತರು ಪಾರ್ಟಿ ಮಾಡುತ್ತಿದ್ದರಂತೆ. ಈ ವೇಳೆಯಲ್ಲಿ ಹುಕ್ಕಾ ಬದಲು ತಂಬಾಕು ಸೇವನೆ ಮಾಡುತ್ತಿದ್ದರು ಎನ್ನುವ ಖಚಿತ ಮಾಹಿತಿಯ ಮೇರೆಗೆ ಮುಂಬೈ ಪೊಲೀಸರು ಹುಕ್ಕಾಬಾರ್ ಮೇಲೆ ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.

     

    ಒಂದಷ್ಟು ಹೊತ್ತು ಠಾಣೆಯಲ್ಲಿ ಇರಿಸಿಕೊಂಡು ಮುನಾವರ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಯಾವುದೇ ಪ್ರತಿಕ್ರಿಯೆನ್ನು ಕೊಡಲು ಮುನಾವರ್ ನಿರಾಕರಿಸಿದ್ದಾರೆ.