Tag: Mumtaz Ali

  • ಉದ್ಯಮಿ ಮುಮ್ತಾಜ್‌ ಅಲಿ ಸಾವು ಪ್ರಕರಣ – ಆರೋಪಿ ಮಹಿಳೆ ಬಂಧನ

    ಉದ್ಯಮಿ ಮುಮ್ತಾಜ್‌ ಅಲಿ ಸಾವು ಪ್ರಕರಣ – ಆರೋಪಿ ಮಹಿಳೆ ಬಂಧನ

    ಮಂಗಳೂರು: ಉದ್ಯಮಿ ಮುಮ್ತಾಜ್‌ ಅಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ A1 ಆರೋಪಿ ಆಯಿಷಾ ರೆಹಮತ್ ಬಂಧನ ಮಾಡಿದ್ದಾರೆ. ಈಕೆ ಕೇರಳಕ್ಕೆ ಪರಾರಿಯಾಗಿದ್ದರು.

    ಆಯಿಷಾ ಪತಿ ರೆಹಮತ್ ಹಾಗೂ ಪ್ರಕರಣ A5 ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಕಲ್ಲಡ್ಕ ಬಳಿ ರೆಹಮತ್‌ನನ್ನು ಬಂಧಿಸಲಾಯಿತು. ಪ್ರಕರಣ ಪ್ರಮುಖ ಮಾಸ್ಟರ್‌ಮೈಂಡ್ A2 ಆರೋಪಿ ಅಬ್ದುಲ್ ಸತ್ತಾರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಮುಮ್ತಾಜ್ ಆಲಿ ಅವರನ್ನು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದ ಆರೋಪ ಇವರ ಮೇಲಿದೆ. ಮುಮ್ತಾಜ್ ಅವರನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 6 ಜನರ ಮೇಲೆ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

  • 6 ಜನರ ಮೇಲೆ ಎಫ್‌ಐಆರ್ ದಾಖಲು – ಹನಿಟ್ರ್ಯಾಪ್‌ಗೆ ಮುಮ್ತಾಜ್ ಅಲಿ ಬಲಿ?

    6 ಜನರ ಮೇಲೆ ಎಫ್‌ಐಆರ್ ದಾಖಲು – ಹನಿಟ್ರ್ಯಾಪ್‌ಗೆ ಮುಮ್ತಾಜ್ ಅಲಿ ಬಲಿ?

    ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ತಮ್ಮ ಮುಮ್ತಾಜ್ ಅಲಿ (Mumtaz Ali) ಅವರ ಮೃತದೇಹ ಪತ್ತೆಯಾಗಿದ್ದು, ಆರು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೆ ಮುಮ್ತಾಜ್ ಅಲಿ ಅವರು ಹನಿಟ್ರ್ಯಾಪ್‌ಗೆ (Honeytrap) ಬಲಿಯಾಗಿದ್ರಾ ಎಂಬ ಪ್ರಶ್ನೆ ಎದ್ದಿದೆ.

    ಮಾಜಿ ಶಾಸಕ ಮೊಯಿದ್ದೀನ್ ಬಾವಾ ತಮ್ಮ ಮುಮ್ತಾಜ್ ಅಲಿ ಅವರು ಭಾನುವಾರ ಬೆಳಗ್ಗೆಯಿಂದ ಕಾಣೆಯಾಗಿದ್ದರು. ನಾಪತ್ತೆಯಾಗಿದ್ದ ಹಿನ್ನೆಲೆ ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆ ಪ್ರಚೋದಿಸಿರುವುದಾಗಿ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿತ್ತು?
    ಸಹೋದರ ಮುಮ್ತಾಜ್ ಆಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರ ಗೌರವ ಹಾಳು ಮಾಡಲು ಮಹಿಳೆಯ ಬಳಸಿಕೊಂಡು ಷಡ್ಯಂತ್ರ ಮಾಡಿದ್ದಾರೆ. ರೆಹಮತ್ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರದ ಬೆದರಿಕೆ ಹಾಕಿದ್ದಾರೆ. 2024ರ ಜುಲೈನಿಂದ ಈವರೆಗೆ 50 ಲಕ್ಷ ರೂ. ವಸೂಲಿ ಮಾಡಿದ್ದಾರೆ. 25 ಲಕ್ಷ ರೂ. ಹಣವನ್ನು ಚೆಕ್ ಮೂಲಕವೂ ಮಹಿಳೆ ಹಣ ಪಡೆದಿದ್ದಾಳೆ.ಇದನ್ನೂ ಓದಿ: ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿತ: ಪೊಲೀಸರಿಂದ ಮಹಿಳೆಯ ರಕ್ಷಣೆ

    ಸತ್ತಾರ್ ಎಂಬಾತ ಮುಮ್ತಾಜ್ ಆಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಜೀವ ಬೆದರಿಕೆ ಜೊತೆಗೆ ಮುಮ್ತಾಜ್ ಅಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ನಾನು ಅಲ್ಲಾಹುನ ಕಡೆಗೆ ಹೋಗುತ್ತಿದ್ದೇನೆ ಎಂದು ಆಡಿಯೋ ಮೆಸೇಜ್ ಹಾಕಿ ಸಹೋದರ ಮುಮ್ತಾಜ್ ಆಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

    ದೂರು ನೀಡಿದ ಬೆನ್ನಲ್ಲೆ ಮಹಿಳೆ ರೆಹಮತ್ ಜೊತೆ ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಎಫ್‌ಐಆರ್ ದಾಖಲಾಗಿದ್ದ ಆರು ಜನರ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ನಾಪತ್ತೆಯಾಗಿದ್ದು, ಕೇರಳದಲ್ಲಿ ಆಕೆಯ ಲೊಕೇಷನ್ ಪತ್ತೆಯಾಗಿದೆ. ಅಲ್ಲಿಗೆ ತೆರಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ. ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಆಕೆಯ ಕೈವಾಡ ಇದೆ ಎನ್ನುವುದು ತಿಳಿದುಬಂದಿದ್ದು, ತನಿಖೆ ನಡೆಯುತ್ತಿದೆ.

    ಏನಿದು ಪ್ರಕರಣ?
    ಮಾಜಿ ಶಾಸಕ ಮೊಯಿದ್ದೀನ್ ಬಾವಾ ತಮ್ಮ ಮುಮ್ತಾಜ್ ಅಲಿ ಅವರು ಭಾನುವಾರ ಬೆಳಗ್ಗೆಯಿಂದ ಕಾಣೆಯಾಗಿದ್ದರು. ಮಂಗಳೂರಿನ ಕೂಳೂರು ಫಲ್ಗುಣಿ ನದಿ ಸೇತುವೆ ಮೇಲೆ ಅವರ ಕಾರು ನಿನ್ನೆ ಪತ್ತೆಯಾಗಿತ್ತು. ಇದರಿಂದ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಶಂಕೆಯಿದ ಭಾನುವಾರ ಬೆಳಗ್ಗೆಯಿಂದ ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರಿಂದ ಶೋಧ ಕಾರ್ಯಚರಣೆ ನಡೆದಿತ್ತು.

    ಸೋಮವಾರ ಬೆಳಗ್ಗೆ ಸತತ 30 ಗಂಟೆಗಳ ಕಾರ್ಯಾಚರಣೆ ಬಳಿಕ ಸಿಕ್ಕ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. ವಿನೋದ್ ರಾಜ್, ಸಿರಾಜ್ ಕೂಳೂರು, ಲಾರೆನ್ಸ್ ಹಾಗೂ ಡೇವಿಡ್ ತಂಡ ನದಿಯ ಮಧ್ಯೆ ಶೋಧ ಕಾರ್ಯ ನಡೆಸುತ್ತಿರುವಾಗ ಶವ ಪತ್ತೆಯಾಗಿದೆ. ಕೂಳೂರು ಸೇತುವೆಯಿಂದ 200 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡ ಮಾಜಿ ಶಾಸಕ ಮೊಯಿದ್ದೀನ್ ಬಾವ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ತರದ್ದಕ್ಕೆ ಗೃಹಿಣಿಯ ಕತ್ತು ಹಿಸುಕಿ ಕೊಲೆ

  • ಮೊಯಿದ್ದೀನ್ ಬಾವ  ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ

    ಮೊಯಿದ್ದೀನ್ ಬಾವ ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ

    ಮಂಗಳೂರು: ಮಾಜಿ ಕಾಂಗ್ರೆಸ್‌ ಶಾಸಕ ಮೊಯಿದ್ದೀನ್ ಬಾವ (Moinuddin Bawa) ಅವರ ಸಹೋದರ ಮುಮ್ತಾಜ್ ಅಲಿ (Mumtaz Ali) ಅವರ ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

    ಕೂಳೂರಿನ ಸೇತುವೆಯ ಸಮೀಪವೇ ಇರುವ ಮತ್ತೊಂದು ಸೇತುವೆ ಬಳಿ ಇಂದು ನೀರಿನಲ್ಲಿ ವ್ಯಕ್ತಿಯೊಬ್ಬರ ತಲೆ ಕಾಣುತ್ತಿತ್ತು. ಸಮೀಪಕ್ಕೆ ತೆರಳಿದಾಗ ಇದು ಮುಮ್ತಾಜ್ ಅಲಿ ಅವರ ದೇಹ ಎನ್ನುವುದು ಖಚಿತವಾಗಿದೆ.

    ಫಲ್ಗುಣಿ ನದಿಯ ನೀರಿನಿಂದ ಶವವನ್ನು ಈಗ ಮೇಲಕ್ಕೆ ಎತ್ತಲಾಗಿದೆ. ಮುಮ್ತಾಜ್ ಅಲಿ ಅವರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಇದು ದೃಢಪಡಲಿದೆ.

     

    ಬಾವಾ ಅವರ ತಮ್ಮ 52 ವರ್ಷದ ಮುಮ್ತಾಜ್ ಅಲಿ ಭಾನುವಾರ ಬೆಳಗ್ಗೆ ದಿಢೀರ್ ನಾಪತ್ತೆಯಾಗಿದ್ದರು. ಕೂಳೂರಿನ ಸೇತುವೆ ಬಳಿ ಅಪಘಾತ ನಡೆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.

    ಮುಮ್ತಾಜ್ ಅಲಿ ಫಿಶ್‌ಮಿಲ್, ಕಾಲೇಜು ಸೇರಿದಂತೆ ಹಲವು ಉದ್ಯಮ ನಡೆಸಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಮುಮ್ತಾಜ್ ಅಲಿ ಶನಿವಾರ ರಾತ್ರಿ ಮನೆಯವರೊಂದಿಗೆ ಮುನಿಸಿಕೊಂಡು ಮಾತುಕತೆ ನಡೆಸಿದ್ದರು. ಭಾನುವಾರ ಬೆಳಗ್ಗಿನ ಜಾವ 3 ಗಂಟೆಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು (BMW Car) ಚಲಾಯಿಸಿಕೊಂಡು ಕದ್ರಿಯ ತನ್ನ ಮನೆಯಿಂದ ಪಣಂಬೂರು ಬಳಿ ಬಂದಿದ್ದರು. ಅಲ್ಲಿಂದ ವೇಗವಾಗಿ ಕೂಳೂರು ಹೈವೇಯಲ್ಲಿ ಬರುತ್ತಿದ್ದಾಗ ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದ್ದರು.

    ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ  ಫಲ್ಗುಣಿ ನದಿಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಸೇರಿದಂತೆ ಈಜುತಜ್ಞ ಈಶ್ವರ್ ಮಲ್ಪೆ ತಂಡ ಮುಮ್ತಾಜ್ ಅಲಿಗಾಗಿ ಶೋಧ ಕಾರ್ಯ ನಡೆಸಿತ್ತು.

     

  • ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮಿಸ್ಸಿಂಗ್; ನಾಪತ್ತೆ ಹಿಂದಿದ್ಯಾ ಮಹಿಳೆ ಕೈವಾಡ? ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ?

    ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮಿಸ್ಸಿಂಗ್; ನಾಪತ್ತೆ ಹಿಂದಿದ್ಯಾ ಮಹಿಳೆ ಕೈವಾಡ? ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ?

    ಮಂಗಳೂರು: ಇಲ್ಲಿನ ಉತ್ತರ ಕ್ಷೇತ್ರದ ಮಾಜಿ ಕಾಂಗ್ರೆಸ್ (Congress) ಶಾಸಕ ಮೊಯಿದ್ದೀನ್ ಬಾವ (Moideen Bava) ಅವರ ಸಹೋದರ ನಾಪತ್ತೆಯಾಗಿದ್ದಾರೆ. ಬಾವಾ ತಮ್ಮ 52 ವರ್ಷದ ಮುಮ್ತಾಜ್ ಅಲಿ ಭಾನುವಾರ (ಅ.6) ಬೆಳಗ್ಗೆ ದಿಢೀರ್ ನಾಪತ್ತೆಯಾಗಿದ್ದಾರೆ. ಕೂಳೂರಿನ ಸೇತುವೆ ಬಳಿ ಅಪಘಾತ ನಡೆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ. ಇದು ಹಲವು ಅನುಮಾಗಳನ್ನು ಹುಟ್ಟುಹಾಕಿದೆ.

    ಮುಮ್ತಾಜ್ ಅಲಿ ಫಿಶ್‌ಮಿಲ್ (Mumtaz Ali), ಕಾಲೇಜು ಸೇರಿದಂತೆ ಹಲವು ಉದ್ಯಮ ನಡೆಸಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಮುಮ್ತಾಜ್ ಅಲಿ ನಿನ್ನೆ ರಾತ್ರಿ ಮನೆಯವರೊಂದಿಗೆ ಮುನಿಸಿಕೊಂಡು ಮಾತುಕತೆ ನಡೆಸಿದ್ರು. ಭಾನುವಾರ ಬೆಳಗ್ಗಿನ ಜಾವ 3 ಗಂಟೆಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು (BMW Car) ಚಲಾಯಿಸಿಕೊಂಡು ಕದ್ರಿಯ ತನ್ನ ಮನೆಯಿಂದ ಪಣಂಬೂರು ಬಳಿ ಬಂದಿದ್ದಾರೆ. ಅಲ್ಲಿಂದ ವೇಗವಾಗಿ ಕೂಳೂರು ಹೈವೆಯಲ್ಲಿ ಬರುತ್ತಿದ್ದು ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದುಕೊಂಡು ಬಂದಿದ್ದಾರೆ.

    ಬಳಿಕ ಕೂಳೂರು ಸೇತುವೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಶಂಕಿಸಲಾಗಿದೆ.

    ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನಿಂದ ಶೋಧ:
    ಮುಮ್ತಾಜ್ ಅಲಿಗಾಗಿ ಫಲ್ಗುಣಿ ನದಿಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಸೇರಿದಂತೆ ಈಜುತಜ್ಞ ಈಶ್ವರ್ ಮಲ್ಪೆ ತಂಡ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ರು. ಮೊಯಿದ್ದೀನ್ ಬಾವ ನಾಪತ್ತೆಯಾದ ಸಹೋದರನ ನೆನದು ಕಣ್ಣೀರು ಹಾಕಿದರು.

    ನದಿಯ ಆಳ ಹೆಚ್ಚಾಗಿರೋದ್ರಿಂದ ನೀರಿನಡಿಲ್ಲಿ ಕತ್ತಲು ಆವರಿಸಿ ಕಾರ್ಯಾಚರಣೆಗೆ ತೊಡಕಾಗಿದೆ. ಇತ್ತ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನಾಪತ್ತೆ ಹಿಂದೆ ಮಹಿಳೆಯ ಕೈವಾಡ ಶಂಕೆ? ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ..?
    ಮುಮ್ತಾಜ್ ಅಲಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಮಹಿಳೆಯ ಕೈವಾಡ ಇದ್ಯಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ. ಮಹಿಳೆಯ ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಆ ಮಹಿಳೆಗೆ ಇನ್ನು ಕೆಲ ಪುರುಷರು ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರ್ಯಾದೆಗೆ ಅಂಜಿ ನಾಪತ್ತೆಯಾದ್ರಾ ಮುಮ್ತಾಜ್ ಅಲಿ ಅನ್ನೊ ಅನುಮಾನ ಮೂಡಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.