Tag: Mumbai Rain

  • ʻಮಹಾʼ ಮಳೆಗೆ ಮೈದುಂಬಿದ ಕೃಷ್ಣೆ, ಭೀಮಾ, ಘಟಪ್ರಭಾ ನದಿಗಳು – ಮುಳುಗಿದ ಸೇತುವೆ

    ʻಮಹಾʼ ಮಳೆಗೆ ಮೈದುಂಬಿದ ಕೃಷ್ಣೆ, ಭೀಮಾ, ಘಟಪ್ರಭಾ ನದಿಗಳು – ಮುಳುಗಿದ ಸೇತುವೆ

    ಬೆಂಗಳೂರು: ಮಹಾರಾಷ್ಟ್ರದಲ್ಲಿ (Maharashtra) ಸುರಿಯುತ್ತಿರುವ ಭಾರೀ ಮಳೆಗೆ (Mumbai Rain) ಬಾಗಲಕೋಟೆ ಜಿಲ್ಲೆಯ ಕೃಷ್ಣಾ (Krishna River), ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದೆ.

    ಈ ಹಿನ್ನೆಲೆ ಜಮಖಂಡಿ ಭಾಗದ ಸುಮಾರು ಹತ್ತಾರು ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ. ಘಟಪ್ರಭಾ ನದಿಗೆ 53 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಿಲ್ಲೆಯ ಮುಧೋಳ, ರಬಕವಿ ಬನಹಟ್ಟಿ ತಾಲ್ಲೂಕುಗಳಲ್ಲಿ ಪ್ರವಾಹ (Flood) ಭೀತಿ ಶುರುವಾಗಿದೆ. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ರೂ. ಹೇಳಿಕೆ – ಶಾಸಕ ಯತ್ನಾಳ್‌ ವಿರುದ್ಧ FIR

    ಹಾಗೇ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ.. ಬಾದಾಮಿ ತಾಲೂಕಿನ ನದಿದಡದ ಗೋವುನಕೊಪ್ಪ ಗ್ರಾಮದ ಕಿರು ಸೇತುವೆ ಮುಳುಗಡೆಯಾಗಿದ್ದು, ಪಕ್ಕದ ಗದಗ ಜಿಲ್ಲೆಯ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನದಿದಡದ ಹೊಲಗದ್ದಗೆಗಳಿಗೆ ನುಗ್ಗಿದ ನೀರು, ಕಬ್ಬು, ಗೋವಿನಜೋಳ, ಜೋಳ, ಹೆಸರು ಬೆಳೆಗಳನ್ನ ಆಹುತಿ ಪಡೆದಿದೆ. ಇದನ್ನೂ ಓದಿ: ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

    ಗೋಕಾಕ್ ಗ್ರಾಮಗಳಲ್ಲಿ ಪ್ರವಾಹ ಭೀತಿ
    ಇನ್ನೂ ಘಟಪ್ರಭಾ ನದಿಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬಹುತೇಕ ಮನೆಗಳಿಗೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಇಲ್ಲಿನ ಜನರನ್ನು ಸ್ಥಳೀಯ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನದಿಯ ಪ್ರವಾಹಕ್ಕೆ ಬೇಸತ್ತಿರುವ ಗ್ರಾಮಗಳ ಜನರು ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

    ಇತ್ತ, ಘಟಪ್ರಭಾ ನದಿಯಿಂದ 2 ಕಿ.ಮೀ ದೂರದಲ್ಲಿರುವ. ಉದಗಟ್ಟಿ ಊದ್ದಮ್ಮ ದೇವಿ ದೇವಸ್ಥಾನವೂ ಜಲಾವೃತ್ತಗೊಂಡಿದೆ. ದೇವಸ್ಥಾನ ಮುಳುಗಡೆ ಭೀತಿ ಹಿನ್ನೆಲೆ ಬೆಲೆಬಾಳುವ ವಸ್ತುಗಳನ್ನ ಟ್ರಸ್ಟ್ ಕಮಿಟಿಯವರು ಸ್ಥಳಾಂತರ ಮಾಡಿದ್ದಾರೆ. ಇದನ್ನೂ ಓದಿ: ಮಳೆಯಿಂದ ನಷ್ಟ ಅನುಭವಿಸಿದ 2 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಎಂ.ಬಿ ಪಾಟೀಲ್

  • ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ

    ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ

    – ನಿರಂತರ ಮಳೆಯಿಂದ ರಸ್ತೆಗಳು ಜಲಾವೃತ

    ಮುಂಬೈ: ಕಳೆದ ರಾತ್ರಿಯಿಂದಲೂ ಮುಂಬೈನಲ್ಲಿ ನಿರಂತರ ಮಳೆ (Mumbai Rain) ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ವಿಖ್ರೋಲಿಯಲ್ಲಿ ಭೂಕುಸಿತದಿಂದ (Landslide) ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರೀ ಮಳೆಯ ನಡುವೆ ಇಂದು ಬೆಳಗ್ಗೆ ವಿಖ್ರೋಲಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಮೆನೆಯೊಂದು ಧ್ವಂಸವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಗಾಯಗೊಂಡಿದ್ದಾರೆ. ಕುಟುಂಬದ ನಾಲ್ವರು ಸದಸ್ಯರು ಮನೆಯಲ್ಲಿದ್ದಾಗಲೇ ದುರಂತ ನಡೆದಿದೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    ಬಲಿಯಾದ ಇಬ್ಬರನ್ನ ಶಾಲು ಮಿಶ್ರಾ ಮತ್ತು ಸುರೇಶ್‌ಚಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಆರತಿ ಮಿಶ್ರಾ ಮತ್ತು ರಿತುರಾಜ್ ಮಿಶ್ರಾ ಅವರನ್ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಭೂಕುಸಿತ ಸಂಭವಿಸಿದ ಮನೆಯ ಅವಶೇಷಗಳನ್ನ ತೆರವುಗೊಳಿಸಲಾಗಿದೆ. ಸಮೀಪದ ಮನೆಯಲ್ಲಿದ್ದ ನಿವಾಸಿಗಳನ್ನ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

    ಸಿಯಾನ್, ಕುರ್ಲಾ, ಚೆಂಬೂರ್ ಮತ್ತು ಅಂಧೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲೂ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆಯು (IMD) ಮುಂಬೈ ಮತ್ತು ನೆರೆಯ ರಾಯಗಢ ಜಿಲ್ಲೆಯಲ್ಲಿ ಇಂದೂ ಸಹ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: 3 ಮಕ್ಕಳ ತಂದೆ, 2 ಮಕ್ಕಳ ತಾಯಿ ಲವ್ವಿಡವ್ವಿ – ಪ್ರೇಯಸಿಯನ್ನ ಇರಿದು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

    ಮುಂಬೈ ಪೊಲೀಸರ ಎಚ್ಚರಿಕೆ
    ಇನ್ನೂ ನಿರಂತರ ಮಳೆಯ ನಡುವೆ ಮುಂಬೈ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದ್ದಾರೆ. ನಗರದಲ್ಲಿ ಅತಿಯಾದ ನೀರು ರಸ್ತೆಗಳಲ್ಲಿ ನಿಲ್ಲುತ್ತಿರುವುದರಿಂದ ಗೋಚರತೆ ಕಡಿಮೆಯಿದೆ. ಹೀಗಾಗಿ ಜನರು ಅನಗತ್ಯ ಪ್ರಯಾಣ ತಪ್ಪಿಸುವಂತೆ ಸಲಹೆ ನೀಡಿದ್ದಾರೆ.

  • ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

    ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

    – ಮುಂಗಾರು ಪ್ರವೇಶದ ಮೊದಲ ದಿನವೇ ಹಲವೆಡೆ ಮಳೆಯ ಆರ್ಭಟ

    ಮುಂಬೈ: ಮುಂಗಾರು (Monsoon) ಅಬ್ಬರ ತೀವ್ರಗೊಂಡಿದ್ದು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಭಾರೀ ಮಳೆಯಾಗಿದೆ (Mumbai Rains). ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ 107 ವರ್ಷಗಳಲ್ಲಿಯೇ ದಾಖಲೆಯೇ ದಾಖಲೆಯ ಪ್ರಮಾಣದ ಮಳೆಯಾಗಿದೆ.

    ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ಸಾಮಾನ್ಯ ಅವಧಿಗಿಂತ 16 ದಿನ ಮುಂಚಿತವಾಗಿಯೇ ನಗರಕ್ಕೆ ಮುಂಗಾರು ಎಂಟ್ರಿ ಕೊಟ್ಟಿದೆ. ಇದು ಕಳೆದ 75 ವರ್ಷಗಳಲ್ಲಿ ಅತ್ಯಂತ ವೇಗವಾಗಿ ನಗರಕ್ಕೆ ಎಂಟ್ರಿಕೊಟ್ಟ ಮುಂಗಾರು ಆಗಿದೆ. ಭಾರೀ ಮಳೆಯಾದ ಹಿನ್ನೆಲೆ ಅವಾಂತರಗಳು ಸೃಷ್ಟಿಯಾಗಿದೆ. ಮುಂಬೈನ ಕೆಇಎಂ ಆಸ್ಪತ್ರೆಗೆ ನೀರು ನುಗ್ಗಿ, ರಸ್ತೆಗಳೆಲ್ಲಾ ಜಲಾವೃತಗೊಂಡು ಜನರು ಸಂಕಷ್ಟಕ್ಕೀಡಾಗಿದ್ದಾರೆ.

    107 ವರ್ಷಗಳಲ್ಲೇ ದಾಖಲೆಯ ಮಳೆ
    ಮುಂಗಾರು ಪ್ರವೇಶದ ಮೊದಲ ದಿನವೇ ಮುಂಬೈ ನಗರಕ್ಕೆ 107 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ. ಇದಕ್ಕೂ ಮುನ್ನ 1918ರಲ್ಲಿ ಅತಿದೊಡ್ಡ ಮಳೆಯಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.

    ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ದಾಖಲೆಗಳ ಪ್ರಕಾರ, ದಕ್ಷಿಣ ಮುಂಬೈನ ಹಲವಾರು ಭಾಗಗಳಲ್ಲಿ ಭಾನುವಾರ ತಡರಾತ್ರಿಯಿಂದಲೇ ಮಳೆ ಶುರುವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ 200 ಮಿಮೀ ಮಳೆಯಾಗಿದೆ. ಕೊಲಾಬಾ ವೀಕ್ಷಣಾಲಯದಲ್ಲಿ, ಮುಂಬೈ ತನ್ನ ಅತಿ ಹೆಚ್ಚು 295 ಮಿಮೀ ಮಳೆ ದಾಖಲಿಸಿದೆ. 1918ರಲ್ಲಿ 279.4 ಮಿಮೀ ಮಳೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು. ಆದರಿಂದು 107 ವರ್ಷಗಳ ದಾಖಲೆಯನ್ನ ಮುರಿದಿದೆ.

    ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ?
    ಸೋಮವಾರ ಬೆಳಗ್ಗೆ 8:30 ರಿಂದ 11 ಗಂಟೆ ವರೆಗೆ ಕೊಲಾಬಾದಲ್ಲಿ 105.2 ಮಿಲಿಮೀಟರ್ ಮಳೆ, ಸಾಂತಾಕ್ರೂಜ್‌ನಲ್ಲಿ 55 ಮಿಮೀ, ಬಾಂದ್ರಾದಲ್ಲಿ 68.5 ಮಿಮೀ, ಜುಹು ವಿಮಾನ ನಿಲ್ದಾಣದಲ್ಲಿ 63.5 ಮಿಮೀ, ಚೆಂಬೂರ್‌ನಲ್ಲಿ 38.5 ಮಿಮೀ, ವಿಖ್ರೋಲಿನಲ್ಲಿ 37.5 ಮಿಮೀ, ಮಹಾಲಕ್ಷ್ಮಿಯಲ್ಲಿ 33.5 ಮಿಮೀ ಮತ್ತು ಸಿಯಾನ್‌ನಲ್ಲಿ 53.5 ಮಿಮೀ ಮಳೆಯಾಗಿದೆ.

    ಇನ್ನೂ ಮುಂಬೈನಲ್ಲಿ ಮುಂಜಾನೆಯಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಸಬ್ಅರ್ಬನ್ ರೈಲು ಸೇವೆಯಲ್ಲೂ ಕೂಡ ವ್ಯತ್ಯಯವಾಗಿದೆ. ಮುಂದಿನ ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಮುಂಬೈ ಹಾಗೂ ಇತರ ಕೆಲವು ಭಾಗಗಳಿಗೆ ತಲುಪುವ ನಿರೀಕ್ಷೆಯಿದೆ. ಮುಂದಿನ ಮೂರರಿಂದ ನಾಲ್ಕು ಗಂಟೆಗಳಲ್ಲಿ ಮುಂಬೈ ಸೇರಿದಂತೆ ಕೆಲವು ಸ್ಥಳಗಳಲ್ಲಿ ಗಾಳಿಯು ಗಂಟೆಗೆ 50 – 60 ಕಿ.ಮೀ ವೇಗದಲ್ಲಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಹೀಗಾಗಿ ಮುಂಬೈ, ಥಾಣೆ, ರಾಯಗಡ್ ಮತ್ತು ರತ್ನಗಿರಿ ಜಿಲ್ಲೆಗಳಿಗೆ ʻರೆಡ್‌ʼ ಅಲರ್ಟ್‌ ಘೋಷಿಸಿದೆ.

    75 ವರ್ಷಗಳಲ್ಲೇ ಮೊದಲ ಅವಧಿಪೂರ್ವ ಮುಂಗಾರು
    ಈ ಬಾರಿ ಮುಂಬೈ ನಗರಕ್ಕೆ ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೂಚಿಸಿದಂತೆ ಜೂನ್‌ 11ರಂದು ಮುಂಗಾರು ಅಪ್ಪಳಿಸಬೇಕಿತ್ತು. ಆದ್ರೆ 16 ದಿನ ಮುಂಚಿತವಾಗಿಯೇ ಮಳೆ ಆರ್ಭಟಿಸಿದೆ. ಇದು ಕಳೆದ 75 ವರ್ಷಗಳಲ್ಲೇ ಮೊದಲ ಅವಧಿಪೂರ್ವ ಮುಂಗಾರು ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ವಿಜ್ಞಾನಿ ಸುಷ್ಮಾ ನಾಯರ್ ತಿಳಿಸಿದ್ದಾರೆ.

  • ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹರಾಜ್‌ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!

    ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹರಾಜ್‌ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!

    ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿ ಕಳೆದ ವರ್ಷ ಪ್ರಧಾನಿ ಮೋದಿ (PM Modi) ಅವರು ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Shivaji Maharaj Statue) ಸೋಮವಾರ (ಆ.26) ಕುಸಿದು ಬಿದ್ದಿದೆ. 2023ರ ಡಿಸೆಂಬರ್‌ 4ರಂದು ಭಾರತೀಯ ನೌಕಾಪಡೆಯ ದಿನಾಚರಣೆ ವೇಳೆ ಪ್ರಧಾನಿ ಮೋದಿ ಈ ಭವ್ಯ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು.

    ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಾಠ ರಾಜನ 35 ಅಡಿ ಉದ್ದದ ಪ್ರತಿಮೆ ಕುಸಿದಿದುಬಿದ್ದಿದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

    ಈ ಬೆನ್ನಲ್ಲೇ ತಜ್ಞರು ಪ್ರತಿಮೆ ಕುಸಿತಕ್ಕೆ ನಿಖರ ಕಾರಣ ತಿಳಿಸಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ, ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಪ್ರತಿಮೆ ಧ್ವಂಸವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೇಶ್ಯೆ ಗೃಹಕ್ಕೆ ಹೋಗಿದ್ದ, ಗರ್ಲ್‌ಫ್ರೆಂಡ್‌ಗೆ ಬೆತ್ತಲೆ ಫೋಟೋ ಕಳಿಸುವಂತೆ ಕೇಳಿದ್ದ – ರೇಪ್‌ ಆರೋಪಿಯ ಕರಾಳ ಮುಖ ಬಯಲು

    ಕಳೆದ ವರ್ಷ ಪ್ರಧಾನಿ ಮೋದಿ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸ್ಥಳೀಯ ಆಡಳಿತಕ್ಕೆ ನಿರ್ವಹಣೆಯ ಹೊಣೆ ವಹಿಸಲಾಗಿತ್ತು. ಸದ್ಯ ಪ್ರತಿಮೆ ಕುಸಿತಕ್ಕೆ ಮಳೆ ಗಾಳಿಯೇ ಕಾರಣವಾ? ಅಥವಾ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಕಾರಣವಾಯ್ತಾ ಅನ್ನೋ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮೌಲ್ಯಮಾಪನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ವಿಪಕ್ಷಗಳಿಂದ ತರಾಟೆ:
    ಪ್ರತಿಮೆ ಧ್ವಂಸಗೊಂಡ ಬೆನ್ನಲ್ಲೇ‌ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಘಟನೆಯ ನಂತರ, ಎನ್‌ಸಿಪಿ (ಎಸ್‌ಪಿ) ಯ ಜಯಂತ್ ಪಾಟೀಲ್, ಶಿವಸೇನಾ (UBT) ಯ ಆದಿತ್ಯ ಠಾಕ್ರೆ ಮತ್ತು ಇತರರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ, ಇದು ಕಳಪೆ ಗುಣಮಟ್ಟದ ಕೆಲಸ ಎಂದು ಆರೋಪಿಸಿದ್ದಾರೆ.

    ನಮ್ಮ ಮಹಾರಾಷ್ಟ್ರದ ಆರಾಧ್ಯ ದೈವವಾದ ಛತ್ರಪತಿ ಶಿವಾಜಿ ಮಹಾರಾಜರಿಗೆ ಆದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಚುನಾವಣೆ ಗೆಲ್ಲಲು ಮೋದಿ ಅವರಿಗೆ ಶಿವಾಜಿ ಮಹಾರಾಜರ ಮುಖ ಬೇಕಿತ್ತು. ಅದಕ್ಕಾಗಿ ತರಾತುರಿಯಲ್ಲಿ ಪ್ರತಿಮೆ ಅನಾವರಣಗೊಳಿಸಿದ್ದರು. ಅವರ ದುರಹಂಕಾರದಿಂದಲೇ ಇಂದು ಪ್ರತಿಮೆ ಧ್ವಂಸವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: J&K Election | ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಒಪ್ಪಂದ ಸುಖಾಂತ್ಯ – ಎನ್‌ಸಿ 51, ಕಾಂಗ್ರೆಸ್‌ 32 ಸ್ಥಾನಗಳಲ್ಲಿ ಸ್ಪರ್ಧೆ

  • ಎಲ್ಲಿ ನೋಡಿದ್ರೂ ನೀರು- ಮಹಾಮಳೆಗೆ ತತ್ತರಿಸಿದ ಮುಂಬೈ

    ಎಲ್ಲಿ ನೋಡಿದ್ರೂ ನೀರು- ಮಹಾಮಳೆಗೆ ತತ್ತರಿಸಿದ ಮುಂಬೈ

    ಮುಂಬೈ: ರಾತ್ರಿಯಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಮಹಾನಗರಿ ಮುಂಬೈ ತತ್ತರಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ಆಗಸ್ಟ್ 4 ಮತ್ತು 5 ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

    ಮಹಾನಗರ ಪಾಲಿಕೆ, ಎನ್‍ಡಿಆರ್‍ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಲರ್ಟ್ ಆಗಿರುವಂತೆ ಸರ್ಕಾರ ಸೂಚಿಸಿದೆ. ಮಂಗಳವಾರ ಬೆಳಗಿನ ಜಾವ ಮೂರು ಗಂಟೆಗೆ ಮುಂಬೈ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಳೆ ಆರಂಭಗೊಂಡಿದೆ. ಮುಂಬೈನ ಕೆಲ ಪ್ರದೇಶಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

    ಗೋರೇಗಾಂವ್, ಕಿಂಗ್ ಸರ್ಕಲ್. ಹಿಂದ್‍ಮಾತಾ, ದಾದರ್, ಶಿವಾಜಿ ಚೌಕ, ಶೆಲ್ ಕಾಲೋನಿ, ಕುರ್ಲಾ ಎಸ್‍ಟಿ ಡಿಪೋ, ಬಾಂದ್ರಾ ಟಾಕೀಸ್ ಮತ್ತು ಸೈನ್ ರೋಡ್ ಪ್ರದೇಶಗಳು ಜಲಾವೃತಗೊಂಡಿವೆ. ಸಮುದ್ರದಲ್ಲಿ 4.5 ಮೀಟರ್ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಬೀಚ್ ಗೆ ಸಾರ್ವಜನಿರಕ ಪ್ರವೇಶ ನಿಷೇಧಿಸಲಾಗಿದೆ.

     

  • ಬೆಳಗ್ಗೆ ಸುರಿದ ಮಳೆಗೆ ತತ್ತರಿಸಿದ ಮುಂಬೈ

    ಬೆಳಗ್ಗೆ ಸುರಿದ ಮಳೆಗೆ ತತ್ತರಿಸಿದ ಮುಂಬೈ

    ಮುಂಬೈ: ಇಂದು ಬೆಳಗ್ಗೆ ಸುರಿದ ವರ್ಷಧಾರೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದ್ದು, ಎಲ್ಲಿ ನೋಡಿದಲ್ಲಿ ನೀರು ಕಾಣಿಸುತ್ತಿದೆ. ರಸ್ತೆಯಲ್ಲಿ ನೀರು ಹರಿಯುತ್ತಿರೋದರಿಂದ ವಾಹನ ಸವಾರರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವಂತಾಯ್ತು.

    ಹವಾಮಾನ ಇಲಾಖೆ ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ ಮೂರು ಮೀಟರ್ ಗಿಂತ ಎತ್ತರ ಅಲೆಗಳು ಸೃಷ್ಟಿಯಾಗಲಿವೆ. ಹಾಗಾಗಿ ಸಮುದ್ರ ತೀರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ನಗರದ ವಿಲೆ ಪಾರ್ಲೆ, ಸಂತಾಕ್ರೂಜ್, ಸಾಯನ್, ಕಿಂಗ್ಸ್ ಸರ್ಕಲ್, ಖಾರ್, ಹಿಂದಮಾತಾ ರಸ್ತೆಗಳಲ್ಲಿ ದೊಡ್ಡ ಟ್ರಾಫಿಕ್ ಉಂಟಾಗಿದೆ.

    ಮುಂಬೈ, ಥಾಣೆ ಸೇರಿದಂತೆ ಕೊಂಕಣ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ. ಈ ಭಾಗದ ಕೆಲ ಪ್ರದೇಶಗಳಲ್ಲಿ 200 ಮಿಲಿ ಮೀಟರ್ ಗಿಂತ ಅಧಿಕ ಮಳೆಯ ನಿರೀಕ್ಷೆ ಇದೆ. ಗುರುವಾರದ ಬಳಿಕ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕಳೆದ 24 ಗಂಟೆಯಲ್ಲಿ ಕೊಲಾಬಾ ಸೆಂಟರ್ ನಲ್ಲಿ 121.6 ಮಿಲಿ ಮೀಟರ್ ಮಳೆಯಾಗಿದೆ. ಸಂತಾಕ್ರೂಜ್ ನಲ್ಲಿ 96.6 ಮಿಲಿ ಮೀಟರ್, ರತ್ನಗಿರಿಯಲ್ಲಿ 101.3 ಮಿಲಿ ಮೀಟರ್ ಮತ್ತು ಅಲಿಭಾಗ್ 122.6 ಮಿಲಿ ಮೀಟರ್ ಮಳೆಯಾಗಿದೆ.